ನಗರದ ಡಾಲ್ಫಿನ್ ವಿದ್ಯಾಸಂಸ್ಥೆಯಲ್ಲಿ ವರ್ಲ್ಡ್ ಟ್ರೆಡೀಷನಲ್ ಶೋಟೋರಿ ಕರಾಟೆ ಅಸೋಸಿಯೇಶನ್ ವತಿಯಿಂದ ಭಾನುವಾರ ನಡೆದ ಎರಡನೇ ಅಂತರಶಾಲಾ ಕರಾಟೆ ಚಾಂಪಿಯನ್ ಷಿಪ್ ಗೆ ಚಾಲನೆ ನೀಡಿ ಕರಾಟೆ ಶಿಕ್ಷಕ ಅಬ್ದುಲ್ ಸಲೀಮ್ ಮಾತನಾಡಿದರು.
ಕರಾಟೆ ಕ್ರೀಡೆಯಾಗಿ ಮಾತ್ರವಲ್ಲ, ಆತ್ಮರಕ್ಷಣೆಯ ಕಲೆಯಾಗಿಯೂ ದೇಶದಲ್ಲಿ ಜನಪ್ರಿಯತೆ ಪಡೆದುಕೊಂಡಿದೆ ಎಂದು ಅವರು ತಿಳಿಸಿದರು.
ಆತ್ಮರಕ್ಷಣೆಯ ಶೌರ್ಯ ಕಲೆಯಾದ ಕರಾಟೆಯನ್ನು ಹೆಣ್ಣು ಗಂಡು ಎಂಬ ಬೇಧ-ಭಾವವಿಲ್ಲದಂತೆ ಪ್ರತಿಯೊಬ್ಬರೂ ಕಡ್ಡಾಯವಾಗಿ ಕಲಿತು, ಆತ್ಮಸ್ಥೈರ್ಯವನ್ನು ಹೆಚ್ಚಿಸಿಕೊಂಡು, ಸದೃಢರಾಗಿ ಬದುಕಲು ಕಲಿಯಬೇಕು. ಮಕ್ಕಳಲ್ಲಿ ಬಾಲ್ಯದಿಂದಲೇ ಶಿಸ್ತು ಮತ್ತು ಸಂಯಮವನ್ನು ಮೂಡಿಸಿ ಆತ್ಮವಿಶ್ವಾಸವನ್ನು ಬೆಳೆಸಲು ಕರಾಟೆ ಕಲೆ ಹೇಳಿ ಮಾಡಿಸಿದಂತಹ ವಿದ್ಯೆ ಎಂದರು.
ಕೋಲಾರ ಮತ್ತು ಚಿಕ್ಕಬಳ್ಳಾಪುರ ಎರಡೂ ಜಿಲ್ಲೆಗಳ ಸುಮಾರು ಹನ್ನೆರಡು ಶಾಲೆಗಳ ವಿದ್ಯಾರ್ಥಿಗಳು ಕರಾಟೆ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ವಿಜೇತರಿಗೆ ಪಾರಿತೋಷಕಗಳನ್ನು ನೀಡಲಾಯಿತು.
ಡಾಲ್ಫಿನ್ ವಿದ್ಯಾಸಂಸ್ಥೆಯ ನಾಗರಾಜ್, ಚಂದನಾ ಅಶೋಕ್, ಥಾಮಸ್ ಫಿಲಿಪ್, ಅಬ್ದುಲ್ ಸುಭಾನ್ ಸಾಬ್, ವರ್ಮ, ನಾಗರಮಣ ಹಾಜರಿದ್ದರು.
- Advertisement -
- Advertisement -
For Daily Updates
WhatsApp 'HI' to 7406303366
- Advertisement -
- Advertisement -







