ನಗರದ ಶ್ರೀ ವೇಣುಗೋಪಾಲಸ್ವಾಮಿ ದೇವಾಲಯದ ಆವರಣದಲ್ಲಿ ಶನಿವಾರ ತಾಲ್ಲೂಕು ಬಲಿಜ ಸಂಘ ಹಾಗೂ ಯುವ ಬಲಿಜ ಸೇವಾ ಸಂಘದ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಸದಸ್ಯತ್ವ ನೋಂದಣಿ ಅಭಿಯಾನ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಕರ್ನಾಟಕ ಪ್ರದೇಶ ಬಲಿಜ ಸಂಘದ ಅಧ್ಯಕ್ಷ ಎಂ.ಪೆರಿಕಲ್‌ಸುಂದರ್ ಮಾತನಾಡಿದರು.
ಒಗ್ಗಟ್ಟು ಪ್ರದರ್ಶಿಸಿದಾಗ ಮಾತ್ರ ಯಾವುದೇ ಸಮುದಾಯಗಳ ಬಗ್ಗೆ ಸರ್ಕಾರ ಗಮನಹರಿಸುತ್ತದೆ. ಹಾಗಾಗಿ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯತ್ವ ಪಡೆದುಕೊಳ್ಳುವ ಮೂಲಕ ತಾಲ್ಲೂಕು, ಜಿಲ್ಲಾ ಹಾಗೂ ರಾಜ್ಯ ಸಂಘಗಳನ್ನು ಬಲಿಷ್ಠಗೊಳಿಸಬೇಕು ಎಂದು ಅವರು ತಿಳಿಸಿದರು.
ಹಿಂದೆ ನಮ್ಮ ಸಮುದಾಯದ ಆರು ಮಂದಿ ಶಾಸಕರು ಹಾಗೂ ಏಳು ಮಂದಿ ವಿಧಾನ ಪರಿಷತ್ ಸದಸ್ಯರು ಸರ್ಕಾರದಲ್ಲಿ ಇದ್ದರೂ ಸಹ ಸಮುದಾಯಕ್ಕಾಗಿ ಏನೂ ಮಾಡಲು ಸಾಧ್ಯವಾಗಲಿಲ್ಲ. ಹಾಗಾಗಿ ಕನಾಟಕ ಪ್ರದೇಶ ಸಂಘದ ಸದಸ್ಯತ್ವಕ್ಕಾಗಿ ರಾಜ್ಯಾದ್ಯಂತ ಅಭಿಯಾನ ಶುರುಮಾಡಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯತ್ವ ಪಡೆದುಕೊಳ್ಳುವ ಮೂಲಕ ಸಂಘದ ಹಾಗೂ ಸಮುದಾಯ ಒಗ್ಗಟ್ಟು ಪ್ರದರ್ಶಿಸಬೇಕು ಎಂದರು.
ರಾಜ್ಯ ಉಪಾಧ್ಯಕ್ಷ ಶ್ರೀನಿವಾಸಮೂರ್ತಿ ಮಾತನಾಡಿ, ಬಲಿಜ ಸಮುದಾಯಕ್ಕೆ ಪುರಾತನ ಕಾಲದಿಂದಲೂ ತಮ್ಮದೇ ಆದ ಇತಿಹಾಸವಿದೆ. ಸಮುದಾಯದಲ್ಲಿರುವ ಒಗ್ಗಟ್ಟಿನ ಕೊರತೆಯಿಂದ ನಾವುಗಳು ಹಿಂದುಳಿಯುವಂತಾಗಿದೆ. ಹಾಗಾಗಿ ಸಮುದಾಯದ ಯುವಜನತೆ ಎಲ್ಲರನ್ನೂ ಒಗ್ಗೂಡಿಸಿಕೊಂಡು ಸಮುದಾಯವನ್ನು ಬಲಿಷ್ಠಗೊಳಿಸುವ ಕೆಲಸಕ್ಕೆ ಮುಂದಾಗಬೇಕು ಎಂದರು.
ನಗರಸಭೆ ಸದಸ್ಯ ಎಸ್.ರಾಘವೇಂದ್ರ ಮಾತನಾಡಿ, ತಾಲ್ಲೂಕಿನಿಂದ ಅತಿ ಹೆಚ್ಚಿನ ಸಂಖ್ಯೆಯ ಸದಸ್ಯತ್ವ ನೀಡುವ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ರಾಜ್ಯ ಘಟಕದ ಪದಾಧಿಕಾರಿಗಳು ಸದಸ್ಯತ್ವ ನೋಂದಣಿ ಪುಸ್ತಕವನ್ನು ತಾಲ್ಲೂಕು ಸಮಿತಿಗೆ ನೀಡಿದರು. ಸಮುದಾಯದ ಹಿರಿಯ ಮುಖಂಡರನ್ನು ಸನ್ಮಾನಿಸಿ ಗೌರವಿಸಲಾಯಿತು.
ಬಲಿಜ ಸಂಘದ ರಾಜ್ಯ ಕಾರ್ಯದರ್ಶಿ ಜಗದೀಶ್, ಖಜಾಂಚಿ ಎಂ.ವಿ.ಗೋವಿಂದಸ್ವಾಮಿ, ನಿರ್ದೇಶಕರಾದ ಸತ್ಯನಾರಾಯಣ್, ನಾರಾಯಣಸ್ವಾಮಿ, ತಾಲ್ಲೂಕು ಮುಖಂಡರಾದ ಎಸ್.ಸೋಮಶೇಖರ್, ರಾಮಕೃಷ್ಣಪ್ಪ, ಕೆ.ವೇಣುಗೋಪಾಲ್, ಪಿ.ಕೆ.ಕಿಷನ್(ನಂದು), ಬಿ.ಪಿ.ರಾಘವೇಂದ್ರ ಹಾಜರಿದ್ದರು.
- Advertisement -
- Advertisement -
For Daily Updates
WhatsApp 'HI' to 7406303366
- Advertisement -
- Advertisement -







