ಮಧ್ಯ ಮಾರಾಟಕ್ಕೆ Green Signal, ಸಿದ್ದಗೊಳ್ಳುತ್ತಿದೆ MSIL ಮಳಿಗೆ

- Advertisement -
- Advertisement -

ನಿರ್ಭಂದಿತ ವಲಗಳನ್ನು ಹೊರತುಪಡಿಸಿದಂತೆ ಉಳಿದೆಲ್ಲಾ ಕಡೆಗಳಲ್ಲಿ ಸೋಮವಾರದಿಂದ ಮಧ್ಯ ಮಾರಾಟಕ್ಕೆ ರಾಜ್ಯ ಸರ್ಕಾರ ಅನುಮತಿ ನೀಡಿರುವ ಹಿನ್ನಲೆಯಲ್ಲಿ ಮದ್ಯ ಮಾರಾಟಕ್ಕೆ ಸೂಚಿಸಿರುವ ಎಲ್ಲಾ ಸೂಚನೆಗಳನ್ನು ಪಾಲಿಸುವ ಮೂಲಕ ತಾಲ್ಲೂಕಿನ ಚೌಡಸಂದ್ರದ ಬಳಿಯಿರುವ ಎಂ ಎಸ್ ಐ ಎಲ್ ಮಳಿಗೆ ಸಿದ್ದಗೊಳ್ಳುತ್ತಿದೆ.

ಕಳೆದ 42 ದಿಗಳ ನಂತರ ಮದ್ಯ ಮಾರಾಟಕ್ಕೆ ಅವಕಾಶ ನೀಡಿರುವ ರಾಜ್ಯ ಸರ್ಕಾರ ಮದ್ಯ ಮಾರಾಟ ಮಾಡುವವರಿಗೆ ಹಲವು ಸೂಚನೆಗಳನ್ನು ನೀಡಿದೆ. ಮದ್ಯ ಖರೀದಿಸುವ ಗ್ರಾಹಕರ ನಡುವೆ ಆರು ಅಡಿ ಅಂತರ ಕಾಪಾಡುವುದು ಸೇರಿದಂತೆ ಕಡ್ಡಾಯವಾಗಿ ಮಾಸ್ಕ್ ಧರಿಸಿದವರಿಗೆ ಮಾತ್ರ ಮದ್ಯ ಮಾರಾಟ ಮಾಡಬೇಕು, ಹಾಗೂ ಮಳಿಗೆಯಲ್ಲಿ ಕೆಲಸ ಮಾಡುವ ಎಲ್ಲರೂ ಕಡ್ಡಾಯವಾಗಿ ಮಾಸ್ಕ್ ಧರಿಸಿರಬೇಕು ಎಂಬಿತ್ಯಾದಿ ಸೂಚನೆಗಳನ್ನು ಪಾಲಿಸಲು ಮದ್ಯ ಮಾರಾಟ ಕೇಂದ್ರದವರು ಸನ್ನದ್ದರಾಗುತ್ತಿದ್ದಾರೆ.

ಕೆಲವೆಡೆ ಸಾಮಾಜಿಕ ಅಂತರ ಕಾಪಾಡಲು ಬಣ್ಣದಿಂದ ಬಾಕ್ಸ್ ಗಳನ್ನು ಬರೆಸಿದರೆ ಇನ್ನು ಕೆಲವೆಡೆ ಮದ್ಯ ಖರೀದಿಸುವವರ ಸಂಖ್ಯೆ ಜಾಸ್ತಿಯಾಗಿ ಗೊಂದಲವುಂಟಾಗಬಹುದು ಎಂಬ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಸಾಲಿನಲ್ಲಿ ಬರಲು ಅನುಕೂಲವಾಗುವಂತೆ ಮರಗಳಿಂದ ತಡೆಗೋಡೆಗಳನ್ನು ನಿರ್ಮಿಸುವ ಮೂಲಕ ಮದ್ಯ ಮಾರಾಟಕ್ಕೆ ಅಣಿಯಾಗುತ್ತಿದ್ದಾರೆ.

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!