ರಾಷ್ರೀಯ ಸೇವಾ ಯೋಜನೆ ವಿಶೇಷ ವಾರ್ಷಿಕ ಶಿಬಿರದ ಉದ್ಘಾಟನಾ ಕಾರ್ಯಕ್ರಮ

- Advertisement -
- Advertisement -

ಕೇಶವಾರ ಗ್ರಾಮದಲ್ಲಿ ಯಲಹಕಂದ ಶೇಷಾದ್ರಿಪುರಂ ಪ್ರಥಮ ದರ್ಜೆ ಕಾಲೇಜು ಮತ್ತು ಶ್ರೀನಿವಾಸ ಚಾರಿಟಬಲ್ ಟ್ರಸ್ಟ್ ನ ವತಿಯಿಂದ ರಾಷ್ರೀಯ ಸೇವಾ ಯೋಜನೆ ವಿಶೇಷ ವಾರ್ಷಿಕ ಶಿಬಿರದ ಉದ್ಘಾಟನಾ ಕಾರ್ಯಕ್ರಮದಲ್ಲಿ ಬೆಂಗಳೂರು ವಿಶ್ವ ವಿದ್ಯಾಲಯದ ಎನ್.ಎಸ್.ಎಸ್ ನ ಸಂಯೋಜನಾಧಿಕಾರಿ ಡಾ.ಆರ್.ಶ್ರೀನಿವಾಸ್‌ ಮಾತನಾಡಿದರು.
ಯುವಕರಿಂದ ಮಾತ್ರ ಉತ್ತಮ ಸಮಾಜ ನಿರ್ಮಾಣ ಸಾಧ್ಯ. ಸಾಂಘಿಕವಾಗಿ ಸಮಾಜದ ಒಳಿತಿಗಾಗಿ ಯುವಶಕ್ತಿಯ ಸದ್ಭಳಕೆಯಾಗಲಿ ಎಂದು ಅವರು ತಿಳಿಸಿದರು.
ಶ್ರೀನಿವಾಸ ಚಾರಿಟಬಲ್ ಟ್ರಸ್ಟ್ ನ ಸಹಯೋಗದಲ್ಲಿ ಗ್ರಾಮದ ದೇವಾಲಯದ ಆವರಣದಲ್ಲಿ ಶೌಚಾಲಯಗಳ ನಿಮಾರ್ಣಕ್ಕೆ ಗುದ್ದಲಿ ಪೊಜೆ ನಡೆಸುವ ಮೂಲಕ ಸಮಾಜಕ್ಕೆ ಉತ್ತಮ ಸಂದೇಶವನ್ನು ರವಾನಿಸಿದ್ದೀರಿ. ಸಮಾಜಮುಖಿ ಕಾರ್ಯಗಳ ಮೂಲಕ ಸತ್ಪ್ರಜೆಗಳಾಗಿ ಎಂದರು.
ಈ ಸಂದರ್ಭದಲ್ಲಿ ಶ್ರೀನಿವಾಸ ಚಾರಿಟಬಲ್ ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿ ಮತ್ತು ಎನ್.ಎಸ್.ಎಸ್ ನ ರಾಜ್ಯ ಪ್ರಶಸ್ತಿ ಪುರಸ್ಕತ ಕೇಶವಾರ ನವೀನ್‌ ಅವರ ನೇತೃತ್ವದಲ್ಲಿ ಗುರುವಂದನೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಬೆಂಗಳೂರು ವಿಶ್ವವಿದ್ಯಾಲಯ ಎನ್.ಎಸ್.ಎಸ್ ನ ಸಂಯೋಜನಾಧಿಕಾರಿ ಡಾ.ಆರ್.ಶ್ರೀನಿವಾಸ್‌, ಯಲಹಂಕದ ಶೇಷಾದ್ರಿಪುರಂ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಎಸ್.ಎನ್.ವೆಂಕಟೇಶ್‌ ಮತ್ತು ಶೇಷಾದ್ರಿಪುರಂ ಪ್ರಥಮ ದರ್ಜೆ ಕಾಲೇಜಿನ ಎನ್.ಎಸ್.ಎಸ್ ನ ಕಾರ್ಯಕ್ರಮಾಧಿಕಾರಿ ಎನ್.ಟಿ.ತಿಮ್ಮಪ್ಪ ಅವರನ್ನು ಗೌರವಿಸಲಾಯಿತು.
ಎನ್.ಎಸ್.ಎಸ್‌ ರಾಜ್ಯ ಪ್ರಶಸ್ತಿ ವಿಜೇತ ಡೊಳ್ಳು ಕುಣಿತ ಕಲಾವಿದ ಡಾ.ಎ.ಎಸ್.ಚಂದ್ರಕುಮಾರ್‌, ಸಂತೋಷ, ಕೇಶವಾರ ಗ್ರಾಮ ಪಂಚಾಯಿತಿ ಸದ್ಯಸ್ಯ ಕೆ.ಎಸ್. ಚಂದ್ರಶೇಖರ್, ಚೈತ್ರಾ ಮುರಳಿಧರ್, ಕೆ.ಟಿ.ಮಂಜುನಾಥ್, ನಾರಾಯಣಸ್ವಾಮಿ, ಭರತ್, ರಾಕೇಶ್‌, ಕೇಶವಾರ ಗ್ರಾಮಸ್ಥರು ಹಾಜರಿದ್ದರು.

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!