ತಾಲ್ಲೂಕು ಕಾನೂನು ಸೇವಾ ಸಮಿತಿ ಹಾಗೂ ತಾಲ್ಲೂಕು ವಕೀಲರ ಸಂಘ ಸಂಯುಕ್ತಾಶ್ರಯದಲ್ಲಿ ನಗರದ ನ್ಯಾಯಾಲಯ ಆವರಣದಲ್ಲಿ ಸೋಮವಾರ ಆಯೋಜಿಸಲಾಗಿದ್ದ ಸಂವಿಧಾನ (ಕಾನೂನು) ದಿನಾಚರಣೆ ಕಾರ್ಯಕ್ರಮದಲ್ಲಿ ಜೆಎಂಎಫ್‌ಸಿ ಹಿರಿಯ ಸಿವಿಲ್ ನ್ಯಾಯಾಧೀಶರಾದ ಡಿ.ಆರ್.ಮಂಜುನಾಥ್ ಮಾತನಾಡಿದರು.
ಜ್ಯಾತ್ಯಾತೀಯ ನಮ್ಮ ರಾಷ್ಟ್ರದಲ್ಲಿ ಭಾರತೀಯ ಸಂವಿಧಾನ ಪರಮಶ್ರೇಷ್ಠ, ಇದರ ಅಡಿಯಲ್ಲಿ ಪ್ರಜಾಪ್ರಭುತ್ವದ ಆಡಳಿತಗಳು ನಡೆಯಬೇಕಾಗುತ್ತದೆ. ಜನಸಾಮಾನ್ಯರಿಗೆ ಸಂವಿಧಾನ ನೀಡಿರುವ ಹಕ್ಕು ಮತ್ತು ಕರ್ತವ್ಯಗಳು ವ್ಯವಸ್ಥಿತವಾಗಿ ಅನುಷ್ಠಾನಗೊಳ್ಳಬೇಕಾಗುತ್ತದೆ ಎಂದು ಅವರು ತಿಳಿಸಿದರು.
ದೇಶದ ಇಡೀ ವ್ಯವಸ್ಥೆ ಸಂವಿಧಾನದಡಿ ನಡೆಯುತ್ತಿದ್ದು ಸಂವಿಧಾನದ ಆಶಯದಂತೆ ಶಾಸಕಾಂಗ, ಕಾರ್ಯಾಂಗ ಹಾಗೂ ನ್ಯಾಯಾಂಗ ಕಾರ್ಯ ನಿರ್ವಹಿಸುತ್ತದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರಾಷ್ಟ್ರಪತಿ ಹಾಗೂ ರಾಜ್ಯಪಾಲರ ಸೂಚನೆಯ ಮೇರೆಗೆ ಸಂವಿಧಾನದನ್ವಯ ಇರುವ ಕಾನೂನುಗಳನ್ನು ಜಾರಿಗೆ ತರುತ್ತಾರೆ. ಕೆಲವೊಮ್ಮೆ ತುರ್ತು ಕಾನೂನು ರೂಪಿಸಲು ಸರ್ಕಾರಗಳಿಗೆ ಅವಕಾಶವಿದೆಯಾದರೂ ನಂತರ ರಾಷ್ಟ್ರಪತಿ ಹಾಗೂ ರಾಜ್ಯಪಾಲರ ಅನುಮತಿ ಪಡೆಯಬೇಕಾಗುತ್ತದೆ ಎಂದರು.
ಸಂವಿಧಾನದಲ್ಲಿರುವ ಹಕ್ಕುಗಳಷ್ಟೇ ಪ್ರಾಮುಖ್ಯತೆ ಕರ್ತವ್ಯಗಳಿಗೂ ಇದೆ ಹಾಗಾಗಿ ಹಕ್ಕುಗಳನ್ನು ಪಡೆಯುವ ನಿಟ್ಟಿನಲ್ಲಿ ಕರ್ತವ್ಯ ಮರೆಯಬಾರದು ಎಂದರು. ನಾಗರಿಕರ ಹಕ್ಕುಗಳಿಗೆ ಚ್ಯುತಿ ಬಂದಾಗ ನ್ಯಾಯಾಂಗದ ಮೊರೆ ಹೋಗಿ ಹಕ್ಕುಗಳನ್ನು ಪಡೆದುಕೊಳ್ಳಬಹುದು ಎಂದರು.
ತಾಲ್ಲೂಕು ವಕೀಲರ ಸಂಘದ ಕಾರ್ಯದರ್ಶಿ ಎಂ.ಬಿ.ಲೋಕೇಶ್ ಮಾತನಾಡಿ, ವ್ಯಕ್ತಿಗತ ಹಾಗೂ ರಾಷ್ಟ್ರೀಯ ದಿನಾಚರಣೆ ಸೇರಿದಂತೆ ಹಲವು ದಿನಾಚರಣೆಗಳಿವೆ. ಸಂವಿಧಾನ ಶಿಲ್ಪಿ ಡಾ.ಅಂಬೇಡ್ಕರ್ ಅವರು ರಚಿಸಿಕೊಟ್ಟಂತಹ ಸಂವಿಧಾನ ಮತ್ತು ಮೂಲಭೂತ ಹಕ್ಕುಗಳು ಅವುಗಳ ಕರ್ತವ್ಯ ಕುರಿತಂತೆ ತಿಳಿಸುವ ಇಂತಹ ದಿನಾಚರಣೆ ಸಾಮಾಜಿಕ ಸ್ವಾಸ್ಥ್ಯದ ವಿಷಯಲ್ಲಿ ಅತ್ಯವಶ್ಯ ಎಂದರು.
ಸಿವಿಲ್ ನ್ಯಾಯಾಧೀಶರಾದ ಟಿ.ಎಲ್.ಸಂದೀಶ್, ವಕೀಲರಾದ ಕೆ.ಮಂಜುನಾಥ್, ನಾಗೇಂದ್ರಬಾಬು ಹಾಜರಿದ್ದರು.
- Advertisement -
- Advertisement -
For Daily Updates
WhatsApp 'HI' to 7406303366
- Advertisement -
- Advertisement -







