
Talakayalabetta, Sidlaghatta Taluk, Chikkaballapur District : ಪಾಪಾಗ್ನಿ ನದಿ ತಟದಲ್ಲಿ ನೆಲೆಸಿರುವ ಇತಿಹಾಸ ಪ್ರಸಿದ್ಧ ತಲಕಾಯಲಬೆಟ್ಟದ ಶ್ರೀ ವೆಂಕಟರಮಣಸ್ವಾಮಿ ದೇವಾಲಯ ಶಿಡ್ಲಘಟ್ಟ ತಾಲ್ಲೂಕಿನ ಪುಣ್ಯಕ್ಷೇತ್ರಗಳಲ್ಲಿ ಪ್ರಮುಖವಾದುದು. ಶ್ರೀದೇವಿ, ಭೂದೇವಿ ಸಮೇತ ನೆಲೆಸಿರುವ ಸ್ವಾಮಿಯ ಮಾಘ ಮಾಸದ ಹುಣ್ಣಿಮೆಯಂದು ನಡೆಯುವ ಬ್ರಹ್ಮರಥೋತ್ಸವಕ್ಕೆ ನಾಡಿನ ಮೂಲೆ ಮೂಲೆಯಿಂದ ಸಹಸ್ರಾರು ಭಕ್ತರು ಆಗಮಿಸುತ್ತಾರೆ.
ಬ್ರಹ್ಮರಥೋತ್ಸವ ಮತ್ತು ಜಾನುವಾರು ಜಾತ್ರೆ
ಬ್ರಹ್ಮರಥೋತ್ಸವದ ಸಂದರ್ಭದಲ್ಲಿ ಭಕ್ತರು ವಿಶೇಷ ಹೂವಿನ ಅಲಂಕಾರದ ರಥವನ್ನು ‘ಗೋವಿಂದಾ.. ಗೋವಿಂದಾ..’ ನಾಮಸ್ಮರಣೆಯೊಂದಿಗೆ ಎಳೆಯುತ್ತಾರೆ. ಇಷ್ಟಾರ್ಥ ಸಿದ್ಧಿಗಾಗಿ ರಥದ ಕಳಶಕ್ಕೆ ಬಾಳೆಹಣ್ಣು, ದವನ ಎಸೆಯುವುದು ಇಲ್ಲಿನ ವಿಶೇಷ ಆಚರಣೆ. ರಥೋತ್ಸವದ ಜೊತೆಗೆ ನೆರೆ ರಾಜ್ಯಗಳಿಂದಲೂ ರಾಸುಗಳು ಆಗಮಿಸುವ ದೊಡ್ಡ ಜಾನುವಾರು ಜಾತ್ರೆ ನಡೆಯುತ್ತದೆ; ಪಂಚಾಯಿತಿ ವತಿಯಿಂದ ರಾಸುಗಳಿಗೆ ನೆರಳು, ಮೇವು, ನೀರಿನ ವ್ಯವಸ್ಥೆ ಕಲ್ಪಿಸಲಾಗುತ್ತದೆ. ದೇವಾಲಯ ಸಮಿತಿ ಹಾಗೂ ದಾನಿಗಳಿಂದ ಎಲ್ಲ ಭಕ್ತರಿಗೂ ಸಾಮೂಹಿಕ ಅನ್ನ ಸಂತರ್ಪಣೆ ಇರುತ್ತದೆ.
ದಾರಿ ಹೇಗೆ ಸಾಗುವುದು?
ಗೂಗಲ್ ಮ್ಯಾಪ್‌ನಲ್ಲಿ ದಾರಿ ವೀಕ್ಷಿಸಿ / Get Directions on Google Maps
In English: Sri Venkataramanaswamy Temple at Talakayalabetta, on the bank of the Papagni river, is one of Sidlaghatta taluk’s most prominent pilgrimage sites. Its annual Brahmarathotsava on the Magha full-moon day draws thousands of devotees from across Karnataka, along with a large cattle fair and community feast.