ಮೇ 12 ರಂದು ನಡೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನ ವಿ.ಮುನಿಯಪ್ಪ 9,709 ಮತಗಳ ಅಂತರದಿಂದ ವಿಜೇತರಾಗಿ ಶಿಡ್ಲಘಟ್ಟ ಕ್ಷೇತ್ರದ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಈ ಗೆಲುವೂ ಸೇರಿದಂತೆ ವಿ.ಮುನಿಯಪ್ಪ ಆರು ಬಾರಿ ಕಾಂಗ್ರೆಸ್ ಪಕ್ಷವನ್ನು ಪ್ರತಿನಿಧಿಸಿ ಶಾಸಕರಾಗಿ ಆಯ್ಕೆಯಾಗಿದ್ದಾರೆ.
ಕಾಂಗ್ರೆಸ್‌ನ ವಿ.ಮುನಿಯಪ್ಪ (76,240), ಜೆಡಿಎಸ್‌ನ ಬಿ.ಎನ್.ರವಿಕುಮಾರ್ (66,531), ಪಕ್ಷೇತರ ಅಭ್ಯರ್ಥಿ ಆಂಜಿನಪ್ಪ ಪುಟ್ಟು (10,986), ಪಕ್ಷೇತರ ಅಭ್ಯರ್ಥಿ ಎಂ.ರಾಜಣ್ಣ (8,593), ಬಿಜೆಪಿಯ ಎಚ್.ಸುರೇಶ್ (3,596) ಮತಗಳನ್ನು ಪಡೆದಿದ್ದಾರೆ.
ಗೆಲುವಿನ ಸುದ್ದಿ ತಿಳಿಯುತ್ತಿದ್ದಂತೆಯೇ ಕಾಂಗ್ರೆಸ್ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚುವ ಮೂಲಕ ಸಂಭ್ರಮಿಸಿದರು. ಹಂಡಿಗನಾಳಕ್ಕೆ ತೆರಳಿ ವಿ.ಮುನಿಯಪ್ಪ ಅವರನ್ನು ಅಭಿನಂದಿಸಿದರು. ವಿಜೇತರಾದ ವಿ.ಮುನಿಯಪ್ಪ ಅವರನ್ನು ತೆರೆದ ಜೀಪಿನಲ್ಲಿ ಅವರ ಸ್ವಗ್ರಾಮ ಹಂಡಿಗನಾಳದಿಂದ ಮೆರವಣಿಗೆಯಲ್ಲಿ ಕಾರ್ಯಕರ್ತರು ಕರೆದುಕೊಂಡು ಬಂದರು.
- Advertisement -
- Advertisement -
For Daily Updates
WhatsApp 'HI' to 7406303366
- Advertisement -
- Advertisement -