ಶಿಡ್ಲಘಟ್ಟ ತಾಲ್ಲೂಕಿನ ಹಿತ್ತಲಹಳ್ಳಿಯ ರೈತ ಸುರೇಶ್ ಅವರ ಚಾಕಿ ಕೇಂದ್ರಕ್ಕೆ ಬುಧವಾರ ಮೆಕ್ಸಿಕೊ, ಚಿಲಿ, ಸ್ಪೇನ್, ಜರ್ಮನಿ, ಚೀನಾ ಮತ್ತು ಅಮೆರಿಕಾ ದೇಶಗಳಿಂದ ವಿದೇಶಿ ಸಾಂಸ್ಕೃತಿಕ ವಿನಿಮಯದ ಕಾರ್ಯಕ್ರಮದಲ್ಲಿ ಆಗಮಿಸಿರುವ 25 ವಿದ್ಯಾರ್ಥಿಗಳು ಅಧಿಕಾರಿ ಜನಾರ್ಧಮೂರ್ತಿ ಅವರಿಂದ ರೇಷ್ಮೆಯ ವಿವಿಧ ಹಂತಗಳ ಬಗ್ಗೆ ತಿಳಿದುಕೊಂಡರು.
ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ
ಶಿಡ್ಲಘಟ್ಟದಲ್ಲಿ ನಡೆದ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷೆ ಉತ್ತನೂರು ರಾಜಮ್ಮ ಅವರನ್ನು ಗುರುವಾರ ಮೆರವಣಿಗೆಯಲ್ಲಿ ಕರೆತರಲಾಯಿತು. ಕಸಾಪ ಜಿಲ್ಲಾಧ್ಯಕ್ಷ ವೈ.ಎಲ್.ಹನುಮಂತರಾವ್ ಹಾಜರಿದ್ದರು.
ಅರಣ್ಯ ರಕ್ಷಕರ ಆರೈಕೆಯಲ್ಲಿರುವ ಕೃಷ್ಣಮೃಗ
ಶಿಡ್ಲಘಟ್ಟದ ವಲಯ ಅರಣ್ಯಾಧಿಕಾರಿಗಳ ಕಚೇರಿಯ ಬಳಿ ಅರಣ್ಯ ರಕ್ಷಕರ ಆರೈಕೆಯಲ್ಲಿರುವ ಕೃಷ್ಣಮೃಗ.
ತನ್ನ ತಂದೆ ತಾಯಿ ಕುಟುಂಬದಿಂದ ದೂರವಾದರೂ ಅರಣ್ಯ ರಕ್ಷಕರ ನೆರವಿನಿಂದ ಸ್ವತಂತ್ರ್ಯ ಬದುಕಿಗೆ ಅಣಿಯಾಗಿದೆ.
ಹದಿನಾಲ್ಕನೆಯ ಶಾಸಕರಾಗಿ ಎಂ.ರಾಜಣ್ಣ
ಶಿಡ್ಲಘಟ್ಟ ಕ್ಷೇತ್ರಕ್ಕೆ ಹದಿನಾಲ್ಕನೆಯ ಶಾಸಕರಾಗಿ ಆಯ್ಕೆಯಾದ ಜೆಡಿಎಸ್ ಪಕ್ಷದ ಎಂ.ರಾಜಣ್ಣ ಅವರನ್ನು ಬಸ್ನಿಲ್ದಾಣದ ಬಳಿ ಕಾರ್ಯಕರ್ತರು ಸ್ವಾಗತಿಸಿದರು.
ವರದನಾಯಕನಹಳ್ಳಿಯಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ಅಂಗನವಾಡಿ ಕೇಂದ್ರದ ಸಹಯೋಗದಲ್ಲಿ ಮಹಿಳಾ ದಿನಾಚರಣೆ
ಶಿಡ್ಲಘಟ್ಟ ತಾಲ್ಲೂಕಿನ ವರದನಾಯಕನಹಳ್ಳಿಯಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ಅಂಗನವಾಡಿ ಕೇಂದ್ರದ ಸಹಯೋಗದಲ್ಲಿ ಶುಕ್ರವಾರ ಆಯೋಜಿಸಿದ್ದ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ನಡೆಸಿದ ನೀರು ಬಿಂದಿಗೆ ಓಟದ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದ ಮಹಿಳೆಯರು.
ಬಸ್ ಡಿಪೋ ನಿರ್ಮಾಣ ಹಾಗೂ ಸಮರ್ಪಕವಾದ ಸಾರಿಗೆ ವ್ಯವಸ್ಥೆಗೆ ಒತ್ತಾಯಿಸಿ ಪ್ರತಿಭಟನೆ
ಶಿಡ್ಲಘಟ್ಟದಲ್ಲಿ ಬಸ್ ಡಿಪೋ ನಿರ್ಮಾಣ ಹಾಗೂ ಸಮರ್ಪಕವಾದ ಸಾರಿಗೆ ವ್ಯವಸ್ಥೆಗೆ ಒತ್ತಾಯಿಸಿ ಸೋಮವಾರ ಬಸ್ ನಿಲ್ದಾಣದ ಬಳಿ ಎಸ್.ಎಫ್.ಐ. ಸಂಘಟನೆಯ ಪದಾಧಿಕಾರಿಗಳು ಮಾನವ ಸರಪಳಿಯನ್ನು ನಿರ್ಮಸಿ ಪ್ರತಿಭಟನೆಯನ್ನು ನಡೆಸಿದರು.
ತೃತೀಯ ಕನ್ನಡ ಸಾಹಿತ್ಯ ಸಮ್ಮೇಳನ
ಶಿಡ್ಲಘಟ್ಟದ ವಾಸವಿ ಕಲ್ಯಾಣ ಮಂಟಪದ್ಲಲಿ ಸೋಮವಾರ ತೃತೀಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು ನಿವೃತ್ತ ಡಿ.ಜಿ.ಪಿ ಕುಚ್ಚಣ್ಣ ಶ್ರೀನಿವಾಸನ್ ವಹಿಸ್ದಿದರು.
ವಕೀಲರ ದಿನಾಚರಣೆ ಮತ್ತು ಸಂಚಾರಿ ಹಿರಿಯ ಸಿವಿಲ್ ಜಡ್ಜ್ ನ್ಯಾಯಾಲಯ ಉದ್ಘಾಟನೆ
ಶಿಡ್ಲಘಟ್ಟದ ನ್ಯಾಯಾಲಯದ ಆವರಣದ್ಲಲಿ ಶನಿವಾರ ೫೦ನೇ ವರ್ಷದ ವಕೀಲರ ದಿನಾಚರಣೆ ಮತ್ತು ಸಂಚಾರಿ ಹಿರಿಯ ಸಿವಿಲ್ ಜಡ್ಜ್ ನ್ಯಾಯಾಲಯವನ್ನು ಉಚ್ಛ ನ್ಯಾಯಾಲಯದ ನ್ಯಾಯಮೂರ್ತಿಗಳು ಹಾಗೂ ಜ್ಲಿಲಾ ಆಡಳಿತಾತ್ಮಕ ನ್ಯಾಯಮೂರ್ತಿಗಳಾದ ಎ.ಎಸ್.ಪಚ್ಚಾಪುರೆ ಉದ್ಘಾಟಿಸಿದರು. ರಾಜ್ಯ ವಕೀಲರ ಸಂಘದ ಅಧ್ಯಕ್ಷ ಕೆ.ಎನ್.ಸುಬ್ಬಾರೆಡ್ಡಿ, ಜ್ಲಿಲಾ ಸತ್ರ ನ್ಯಾಯಾಧೀಶರಾದ ಬಿ.ಜೆ.ಜಟ್ಟಣ್ಣನವರ್, ತ್ಲಾಲೂಕು ವಕೀಲರ ಸಂಘದ ಅಧ್ಯಕ್ಷ ಎಂ.ಪಾಪಿರೆಡ್ಡಿ ಹಾಜರ್ದಿದರು.
ಸಮರ್ಪಕ ಸಾರಿಗೆ ವ್ಯವಸ್ಥೆಗಾಗಿ ಒತ್ತಾಯಿಸಿ ಪ್ರತಿಭಟನೆ
ಶಿಡ್ಲಘಟ್ಟದ ಬಸ್ ನಿಲ್ದಾಣದ ಬಳಿ ಸಮರ್ಪಕ ಸಾರಿಗೆ ವ್ಯವಸ್ಥೆಗಾಗಿ ಒತ್ತಾಯಿಸಿ ಭಾರತ ವಿದ್ಯಾರ್ಥಿ ಫೆಡರೇಷನ್ ವತಿಯಿಂದ ವಿದ್ಯಾರ್ಥಿಗಳು ಸೋಮವಾರ ಮಾನವ ಸರಪಣಿಯನ್ನು ನಿರ್ಮಿಸಿ ಪ್ರತಿಭಟಿಸಿದರು.
ರೇಷ್ಮೆ ಬೆಳೆಗಾರರ ಸಂಕಷ್ಟಗಳ ನಿವಾರಣೆ ಆಗ್ರಹಿಸಿ ಪ್ರತಿಭಟನೆ
ಶಿಡ್ಲಘಟ್ಟದ ರೇಷ್ಮೆ ಗೂಡಿನ ಮಾರುಕಟ್ಟೆಯ್ಲಲಿ ರೇಷ್ಮೆ ಬೆಳೆಗಾರರ ಸಂಕಷ್ಟಗಳ ನಿವಾರಣೆ ಆಗ್ರಹಿಸಿ ರೈತರು ಸೋಮವಾರ ರಾತ್ರಿಯಿಡೀ ಭಜನೆ ಮಾಡುತ್ತಾ ಪ್ರತಿಭಟನೆಯನ್ನು ನಡೆಸಿದರು.




