33.1 C
Sidlaghatta
Thursday, March 28, 2024
Home Blog

ಗೋಡಂಬಿ ತೋಟಕ್ಕೆ ಬೆಂಕಿ

0
Sidlaghatta Idludu Fire Burn Agriculture Crop Loss

Idludu, Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಇದ್ಲೂಡು ಗ್ರಾಮದ ವೇಣು ಅವರಿಗೆ ಸೇರಿರುವ ಗೋಡಂಬಿ ತೋಟಕ್ಕೆ ಸೋಮವಾರ ಬೆಂಕಿ ಮೂರು ಎಕರೆ ತೋಟದಲ್ಲಿ ಒಂದು ಎಕರೆಯಷ್ಟು ಸುಟ್ಟಿದ್ದು, ಲಕ್ಷಾಂತರ ರೂಪಾಯಿಗಳಷ್ಟು ನಷ್ಟವಾಗಿದೆ.

ಬೇಸಿಗೆಯ ಬಿಸಿ ಏರುತ್ತಿದ್ದು, ತಾಲ್ಲೂಕಿನ ಹಲವಾರು ಕಡೆ ಈ ರೀತಿಯ ಬೆಂಕಿ ಬೀಳುವ ಅವಘಡಗಳು ನಡೆಯುತ್ತಿವೆ. ತರಗೆಲೆಗಳು, ಒಣಗಿದ ಪೊದೆ ಕಡ್ಡಿಗಳು ತೋಟದಲ್ಲಿ ಬಿದ್ದಿರುತ್ತವೆ. ಸಣ್ಣ ಕಿಡಿ ತಾಕಿದರೂ ಸಾಕು ಬೆಂಕಿ ಹೊತ್ತು ಉರಿಯುತ್ತದೆ.

ಅಗ್ನಿಶಾಮಕ ದಳದ ಇಲಾಖೆಯ ಸಿಬ್ಬಂದಿಗೆ ಈಗ ಪ್ರತಿ ದಿನವೂ ಕೆಲಸವಿರುತ್ತದೆ. ಒಂದಲ್ಲ ಒಂದು ಕಡೆ ಬೆಂಕಿ ಬಿದ್ದ ಸುದ್ದಿ ಅವರಿಗೆ ತಲುಪಿ, ಬೆಂಕಿ ನಂದಿಸುವ ಕಾರ್ಯ ನಡೆಯುತ್ತಿರುತ್ತದೆ.

ಕಿಡಿಗೇಡಿಗಳ ಕೃತ್ಯವೋ ಅಥವಾ ಆಕಸ್ಮಿಕ ಘಟನೆಯೋ, ಒಟ್ಟಾರೆ ಬೆಂಕಿಯ ಅನಾಹುತದಿಂದ ತಾಲ್ಲೂಕಿನ ಹಲವಾರು ರೈತರು ಬೆಳೆದು ನಿಂತ ಫಸಲನ್ನು ಕಳೆದುಕೊಂಡು, ಅಪಾರ ನಷ್ಟವನ್ನು ಅನುಭವಿಸುತ್ತಿದ್ದಾರೆ.

For Daily Updates WhatsApp ‘HI’ to 7406303366

ಮೇಣದ ಬತ್ತಿಯನ್ನು ಬೆಳಗುವ ಮೂಲಕ ಮತದಾನ ಜಾಗೃತಿ

0
Sidlaghatta SVEEP Committee Election Awareness

Sidlaghatta : ಶಿಡ್ಲಘಟ್ಟ ನಗರದ ಕೋಟೆ ವೃತ್ತದಲ್ಲಿ ತಾಲ್ಲೂಕು ಸ್ವೀಪ್ ಸಮಿತಿ (SVEEP Committee) ವತಿಯಿಂದ ಬುಧವಾರ ಸಂಜೆ ಮೇಣದ ಬತ್ತಿಯನ್ನು ಬೆಳಗುವ ಮೂಲಕ ಮತದಾನದ ಕುರಿತು ಜನಜಾಗೃತಿ ಮೂಡಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಶಿಡ್ಲಘಟ್ಟ ತಾಲ್ಲೂಕು ಸ್ವೀಪ್ ಸಮಿತಿಯ ಅಧ್ಯಕ್ಷ ಹಾಗೂ ತಾ.ಪಂ ಇಒ ಜಿ.ಮುನಿರಾಜ ಅವರು, ಲೋಕಸಭಾ ಚುನಾವಣೆಯಲ್ಲಿ ಮತದಾನದ ಪ್ರಮಾಣವನ್ನು ಹೆಚ್ಚಳ ಮಾಡುವ ದೃಷ್ಟಿಯಿಂದ ವಿಭಿನ್ನ ರೀತಿಯ ಸ್ವೀಪ್ ಚಟುವಟಿಕೆಗಳನ್ನು ನಡೆಸುತ್ತಿದ್ದೇವೆ. ನಾಗರಿಕರು ಸಹ ಮತದಾನ ಮಾಡುವ ಮೂಲಕ ತಮ್ಮ ಹಕ್ಕು ಚಲಾಯಿಸಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಗಟ್ಟಿಗೊಳಿಸಿ ಉತ್ತಮ ಪ್ರತಿನಿಧಿಯನ್ನು ಆರಿಸಿಕೊಳ್ಳಬೇಕೆಂದು ಮನವಿ ಮಾಡಿದರು.

ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಸಂವಿಧಾನಾತ್ಮಕವಾಗಿ ಲಭಿಸಿರುವ ಮತದಾನದ ಹಕ್ಕನ್ನು ಚಾಚು ತಪ್ಪದೇ ಚಲಾಯಿಸಬೇಕು ಜೊತೆಗೆ ನೆರೆಹೊರೆಯವರು ಸಹ ಮತದಾನ ಮಾಡಲು ಪ್ರೇರೇಪಿಸಬೇಕು ಎಂದು ನುಡಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ನರೇಂದ್ರ ಕುಮಾರ್ ಮಾತನಾಡಿ, ಪ್ರಜಾಪ್ರಭುತ್ವದ ಹಬ್ಬ ಆಗಿರುವ ಚುನಾವಣೆಯಲ್ಲಿ ಭಾಗವಹಿಸಿ ಕಡ್ಡಾಯವಾಗಿ ಮತದಾನ ಮಾಡಬೇಕು. ಅದರ ಮೂಲಕ ತಮಗೆ ಇಷ್ಟ ಪಟ್ಟ ಪ್ರತಿನಿಧಿಗಳನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶವನ್ನು ಸದುಪಯೋಗ ಮಾಡಿಕೊಳ್ಳಬೇಕು ಎಂದು ಹೇಳಿದರು.

ಮತದಾನ ಮಾಡಲು ಯಾರೂ ಸಹ ತಾತ್ಸಾರ ಮಾಡಬಾರದು. ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡಿ ಪ್ರಜಾಪ್ರಭುತ್ವದ ಹಬ್ಬವನ್ನು ಸಂಭ್ರಮದಿಂದ ಆಚರಿಸಬೇಕೆಂದು ಮನವಿ ಮಾಡಿದರು.

ನಗರಸಭೆಯ ಪ್ರಭಾರ ಪೌರಾಯುಕ್ತ ರಘುನಾಥ್, ಶಿಕ್ಷಕರು, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು ಹಾಜರಿದ್ದರು

For Daily Updates WhatsApp ‘HI’ to 7406303366

Sidlaghatta Silk Cocoon Market-27/03/2024

0
Sidlaghatta Silk Cocoon Market Price Rate ಶಿಡ್ಲಘಟ್ಟ ರೇಷ್ಮೆ ಗೂಡು ಮಾರುಕಟ್ಟೆ ಧಾರಣೆ

Sidlaghatta Govt Silk Cocoon Market

ಶಿಡ್ಲಘಟ್ಟ ರೇಷ್ಮೆ ಗೂಡು ಮಾರುಕಟ್ಟೆ ಧಾರಣೆ

Date: 27/03/2024

Cross-Breed Silk Cocoon – ಮಿಶ್ರತಳಿ ರೇಷ್ಮೆ ಗೂಡು

Lots: 477
Qty: 26541 Kg
Mx : ₹ 486
Mn: ₹ 222
Avg: ₹ 413

Bi-Voltine Silk Cocoon – ದ್ವಿತಳಿ ರೇಷ್ಮೆ ಗೂಡು

Lots: 12
Qty: 590 Kg
Mx : ₹ 508
Mn: ₹ 385
Avg: ₹ 478

For Daily Updates WhatsApp ‘HI’ to 7406303366

ಆಶಾ ಕಾರ್ಯಕರ್ತೆಯರಿಂದ ಮತದಾನದ ಅರಿವು

0
Sidlaghatta Asha Workers Election Awareness

Sidlaghatta : ಸೈನಿಕರಷ್ಟೇ ದೇಶಸೇವೆ ಮಾಡುವ ಕಾಲ ಸನ್ನಿಹಿತವಾಗಿದೆ. ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಈಗ ಗುಲಾಬಿ ಮಹಿಳಾ ಸೈನಿಕರಂತೆ ಕಾರ್ಯಪ್ರವೃತ್ತರಾಗಬೇಕು. ತಮ್ಮ ವ್ಯಾಪ್ತಿಯ ಪ್ರತಿ ಮನೆಯಲ್ಲಿಯೂ ಪ್ರತಿಯೊಬ್ಬರೂ ಮತದಾನ ಮಾಡುವಂತೆ ಪ್ರೇರೇಪಿಸಬೇಕು, ಆ ಮೂಲಕ ಪ್ರಜಾಪ್ರಭುತ್ವದ ಜ್ಯೋತಿ ಬೆಳಗಬೇಕು ಎಂದು ತಾಲ್ಲೂಕು ಸ್ವೀಪ್ ಸಮಿತಿಯ ನೋಡೆಲ್ ಅಧಿಕಾರಿಯೂ ಆದ ಇಒ ಜಿ.ಮುನಿರಾಜ ತಿಳಿಸಿದರು.

ನಗರದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ತಾಲ್ಲೂಕಿನ 12 ಪ್ರಾಥಮಿಕ ಆರೋಗ್ಯ ಕೇಂದ್ರಗಳು ಹಾಗೂ ನಗರ ಆರೋಗ್ಯ ಕೇಂದ್ರದ ಆಶಾ ಕಾರ್ಯಕರ್ತೆಯರಿಂದ ಮತದಾನದ ಅರಿವು ಮತ್ತು ಜಾಗೃತಿಯನ್ನು ಮೂಡಿಸುವ ನಿಟ್ಟಿನಲ್ಲಿ ಆಯೋಜಿಸಿದ್ದ ರಂಗೋಲಿ ಸ್ಪರ್ಧೆಗೆ ಚಾಲನೆ ನೀಡಿ ಅವರು ಮಾತನಾಡಿದರು.

ಪ್ರತಿಯೊಬ್ಬ ಅರ್ಹ ಮತದಾರನೂ ಮತ ಚಲಾಯಿಸಿದಾಗ ಮಾತ್ರ ಪ್ರಜಾಪ್ರಭುತ್ವಕ್ಕೆ ನಿಜವಾದ ಯಶಸ್ಸು ಲಭಿಸುತ್ತದೆ. ಮತಗಟ್ಟೆಗಳಲ್ಲಿ ಪ್ರತಿಯೊಂದು ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿರುವ ಬಗ್ಗೆ ಹಾಗೂ ಮತದಾನ ಎಂಬುದು ದೇಶ ಕಟ್ಟುವ ಕ್ರಿಯೆ ಎಂದು ಜನರಲ್ಲಿ ಅರಿವು ಮತ್ತು ಜಾಗೃತಿಯನ್ನು ಮೂಡಿಸಬೇಕು. ಸಮಯ ಕಡಿಮೆಯಿದ್ದು, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಸಮರೋಪಾದಿಯಲ್ಲಿ ಕೆಲಸ ಮಾಡಬೇಕು ಎಂದರು.

ಯಾವುದೇ ಆಸೆ ಆಮಿಷಗಳಿಗೆ ಬಲಿಯಾಗದೆ, ನಿಷ್ಪಕ್ಷಪಾತವಾಗಿ ಪ್ರಜಾಪ್ರಭುತ್ವದ ಅಡಿಯಲ್ಲಿ ಮತದಾನ ಮಾಡುವಂತೆ ನೀವು ಜನರಲ್ಲಿ ಮನವೊಲಿಸಬೇಕು. ಈ ಪ್ರಜಾಪ್ರಭುತ್ವ ಹಬ್ಬದಲ್ಲಿ ಎಲ್ಲರೂ ನಮ್ಮ ಕರ್ತವ್ಯವನ್ನು ಪಾಲಿಸೋಣ ಎಂದರು.

ನಂತರ ಮತದಾನದ ಕುರಿತು ಅರಿವು ಮೂಡಿಸುವ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು.

ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವೆಂಕಟೇಶಮೂರ್ತಿ, ಡಾ.ಮನೋಹರ್, ಡಾ.ವಿಜಯಕುಮಾರ್, ತಾಲ್ಲೂಕು ಆರೋಗ್ಯ ನಿರೀಕ್ಷಣಾಧಿಕಾರಿ ದೇವರಾಜ್, ಮುನಿರತ್ನಮ್ಮ, ಗೀತಾ, ನಂದಿನಿ, ನಬೀಬುಲ್ಲ, ಕೀರ್ತಿ, ಮಂಜು, ನರಸಿಂಹಮೂರ್ತಿ, ಆಶಾ ಕಾರ್ಯಕರ್ತೆಯರು ಹಾಜರಿದ್ದರು.

For Daily Updates WhatsApp ‘HI’ to 7406303366

SSLC ಪರೀಕ್ಷೆ ಬರೆಯುತ್ತಿರುವ ತಾಯಿ-ಮಗಳು

0
Mother Daughter Duo Write SSLC Exam Muttur Sidlaghatta

Muttur, Sidlaghatta : ತಾಲ್ಲೂಕಿನ ಮಳ್ಳೂರಿನ ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆಯ ಪರೀಕ್ಷಾ ಕೇಂದ್ರದಲ್ಲಿ ಸೋಮವಾರ ತಾಯಿ ಮತ್ತು ಮಗಳು ಒಟ್ಟಿಗೆ SSLC ಪರೀಕ್ಷೆ ಬರೆದಿದ್ದಾರೆ.

ತಾಲ್ಲೂಕಿನ ಮುತ್ತೂರು ಗ್ರಾಮದ ನಿವಾಸಿಗಳಾದ ಛಾಯಮ್ಮ(36) ಹಾಗೂ ಶ್ರೀವಾಣಿ ಎಂಬ ತಾಯಿ – ಮಗಳು ಈ ಶೈಕ್ಷಣಿಕ ವರ್ಷದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಹಾಜರಾಗುತ್ತಿದ್ದಾರೆ. ಶ್ರೀವಾಣಿ ಮುತ್ತೂರು ಸರ್ಕಾರಿ ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದು, ಈ ಶೈಕ್ಷಣಿಕ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದರೆ ಅವರ ತಾಯಿಯಾದ ಛಾಯಮ್ಮ ಪುನರಾವರ್ತಿತ ವಿದ್ಯಾರ್ಥಿಯಾಗಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯುತ್ತಿದ್ದಾರೆ.

ಛಾಯಮ್ಮ ಅವರು ತನ್ನ ಮಗಳು ಓದುವ ಮುತ್ತೂರಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎಸ್‌.ಡಿ.ಎಂ.ಸಿ ಉಪಾಧ್ಯಕ್ಷರಾಗಿದ್ದಾರೆ.

“ನಮ್ಮ ತವರೂರು ಚಿಕ್ಕಬಳ್ಳಾಪುರ ತಾಲ್ಲೂಕಿನ ನಾಯನಹಳ್ಳಿ. ಚಿಕ್ಕಬಳ್ಳಾಪುರದ ಸರ್ಕಾರಿ ಜ್ಯೂನಿಯರ್ ಕಾಲೇಜಿನಲ್ಲಿ ಒಂಬತ್ತನೇ ತರಗತಿಯವರೆಗೂ ಓದಿದ್ದೆ. ಮದುವೆ ಆದ ನಂತರ ಮುತ್ತೂರಿಗೆ ಬಂದೆ. ನನಗೆ ಮೂವರು ಹೆಣ್ಣುಮಕ್ಕಳು. ಮೂವರೂ ಚೆನ್ನಾಗಿ ಓದುವರು. ಮೊದಲ ಮಗಳು ದ್ವಿತೀಯ ಪಿಯುಸಿ, ಎರಡನೆಯವಳು ಎಸ್ಸೆಸ್ಸೆಲ್ಸಿ ಮತ್ತು ಮೂರನೆಯವಳು ಏಳನೇ ತರಗತಿಯಲ್ಲಿ ಓದುತ್ತಿದ್ದಾರೆ. ಮನೆಯಲ್ಲಿ ಮಕ್ಕಳು, ಶಾಲೆಯ ಶಿಕ್ಷಕರು ನನಗೆ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯಲು ಪ್ರೋತ್ಸಾಹಿಸಿದರು. ಮಕ್ಕಳೊಂದಿಗೆ ನಾನೂ ಓದಲು ಪ್ರಾರಂಭಿಸಿದೆ. ನನ್ನ ಮಗಳ ಜೊತೆಯಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯುತ್ತಿರುವುದು ತುಂಬಾ ಸಂತಸದ ವಿಷಯ” ಎಂದು ಛಾಯಮ್ಮ ಸಂತೋಷವನ್ನು ವ್ಯಕ್ತಪಡಿಸಿದರು.

ಮಗಳು ಶ್ರೀ ವಾಣಿ ಮಾತನಾಡಿ, “ನನ್ನ ತಾಯಿಯ ಜೊತೆ ಪರೀಕ್ಷೆ ಬರೆಯುತ್ತಿರುವುದು ನನಗೆ ಸಂತೋಷ ಉಂಟು ಮಾಡಿದೆ. ಜೊತೆಗೆ ಈ ಶೈಕ್ಷಣಿಕ ವರ್ಷದಲ್ಲಿ ನಾನು ಮತ್ತು ನಮ್ಮ ತಾಯಿ ಇಬ್ಬರೂ ಉತ್ತಮ ಅಂಕದಲ್ಲಿ ಉತ್ತೀರ್ಣರಾಗುತ್ತೇವೆ” ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.

For Daily Updates WhatsApp ‘HI’ to 7406303366

Sidlaghatta Silk Cocoon Market-26/03/2024

0
Sidlaghatta Silk Cocoon Market Price Rate ಶಿಡ್ಲಘಟ್ಟ ರೇಷ್ಮೆ ಗೂಡು ಮಾರುಕಟ್ಟೆ ಧಾರಣೆ

Sidlaghatta Govt Silk Cocoon Market

ಶಿಡ್ಲಘಟ್ಟ ರೇಷ್ಮೆ ಗೂಡು ಮಾರುಕಟ್ಟೆ ಧಾರಣೆ

Date: 26/03/2024

Cross-Breed Silk Cocoon – ಮಿಶ್ರತಳಿ ರೇಷ್ಮೆ ಗೂಡು

Lots: 484
Qty: 26403 Kg
Mx : ₹ 490
Mn: ₹ 266
Avg: ₹ 415

Bi-Voltine Silk Cocoon – ದ್ವಿತಳಿ ರೇಷ್ಮೆ ಗೂಡು

Lots: 07
Qty: 451 Kg
Mx : ₹ 477
Mn: ₹ 452
Avg: ₹ 467

For Daily Updates WhatsApp ‘HI’ to 7406303366

ರೇಷ್ಮೆ ರೀಲರು, ರೈತರಿಗೆ ಮತದಾನದ ಪ್ರತಿಜ್ಞಾವಿಧಿ ಬೋಧನೆ

0
Sidlaghatta Silk Cocoon Market Election Awareness

Sidlaghatta : ಮತದಾರರು ನೇರವಾಗಿ ಮತ ಹಾಕುವಂತ ಎಲ್ಲ ಹಂತದ ಚುಣಾವಣೆಗಳಲ್ಲೂ ತಪ್ಪದೆ ಕಡ್ಡಾಯವಾಗಿ ಮತ ಚಲಾಯಿಸಬೇಕು, ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಇನ್ನಷ್ಟು ಗಟ್ಟಿಗೊಳಿಸಬೇಕು ಎಂದು ತಾಲ್ಲೂಕು ಸ್ವೀಪ್ ಸಮಿತಿಯ ನೋಡೆಲ್ ಅಧಿಕಾರಿಯೂ ಆದ ಇಒ ಜಿ.ಮುನಿರಾಜ ತಿಳಿಸಿದರು.

ನಗರದಲ್ಲಿನ ಸರ್ಕಾರಿ ರೇಷ್ಮೆಗೂಡು ಮಾರುಕಟ್ಟೆಯಲ್ಲಿ ರೇಷ್ಮೆ ನೂಲು ಬಿಚ್ಚಾಣಿಕೆದಾರರು ಹಾಗೂ ರೇಷ್ಮೆ ಬೆಳೆಗಾರರಿಗೆ ಮತದಾನದ ಮಹತ್ವದ ಬಗ್ಗೆ ಸೋಮವಾರ ಜಾಗೃತಿ ಮೂಡಿಸಿ ಮತದಾನದ ಪ್ರತಿಜ್ಞಾವಿಧಿಯನ್ನು ಬೋಧಿಸಿ ಅವರು ಮಾತನಾಡಿದರು.

ನಮ್ಮ ಒಂದು ಮತ ಹಾಕದಿದ್ದರೆ ಏನಂತೆ ಎಂದು ಕೆಲಸ ಕಾರ್ಯಗಳಲ್ಲಿ ತೊಡಗುವುದು ಬಹಳ ಅಪಾಯಕಾರಿ ಬೆಳವಣಿಗೆ. ಎಲ್ಲರೂ ತಪ್ಪದೆ ಮತ ಹಾಕಬೇಕು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ದೇಶದ ನಾಗರೀಕರಾದ ನಾವು ನಮ್ಮ ಕರ್ತವ್ಯವನ್ನು ಬಹಳ ಜವಾಬ್ದಾರಿಯಿಂದ ನಿರ್ವಹಿಸಬೇಕು ಎಂದರು.

ಇದೀಗ ನಡೆಯುವ ಸಂಸತ್ ಚುನಾವಣೆಯಲ್ಲಿ ಎಲ್ಲ ರೀಲರುಗಳು, ರೇಷ್ಮೆ ಬೆಳೆಗಾರರು ತಪ್ಪದೆ ಕಡ್ಡಾಯವಾಗಿ ಮತ ಹಾಕಿ ನಿಮ್ಮ ನೆಚ್ಚಿನ ಪಕ್ಷ, ವ್ಯಕ್ತಿಯನ್ನು ಆಯ್ಕೆ ಮಾಡಿಕೊಳ್ಳಿ. ಯಾವುದೆ ಒತ್ತಡ ಆಸೆ ಆಮಿಷಗಳಿಗೆ ಮಣಿದು ಮತ ಚಲಾಯಿಸಬೇಡಿ ಎಂದು ಮನವಿ ಮಾಡಿದರು.

ರೇಷ್ಮೆಗೂಡು ಮಾರುಕಟ್ಟೆಯ ಸಹಾಯಕ ನಿರ್ದೇಶಕ ಕೆ.ತಿಮ್ಮರಾಜು, ರೀಲರುಗಳು, ರೇಷ್ಮೆ ಬೆಳೆಗಾರರು ಹಾಜರಿದ್ದರು. ಎಲ್ಲರಿಗೂ ಮತದಾನದ ಪ್ರತಿಜ್ಞಾವಿಧಿಯನ್ನು ಬೋಧಿಸಲಾಯಿತು.

For Daily Updates WhatsApp ‘HI’ to 7406303366

ಶ್ರೀ ಪೂಜಮ್ಮದೇವಿ ಹೂವಿನ ಕರಗ ಮಹೋತ್ಸವ

0
Sidlaghatta Poojamma Devi Karaga Mahotsava

Sidlaghatta : ಅನಾದಿ ಕಾಲದಿಂದಲೂ ನೆರವೇರಿಸಿಕೊಂಡು ಬಂದಂತಹ ನಗರದ ಪೂಜಮ್ಮ ದೇವಿಯ ಕರಗಮಹೋತ್ಸವವನ್ನು ಭಾನುವಾರ ರಾತ್ರಿ ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು. ಸಂಪ್ರದಾಯ ಆಚಾರಗಳಂತೆ ದೇವಾಲಯದಲ್ಲಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿ ಮಹಾಮಂಗಳಾರತಿ ಮಾಡಿ ನಂತರ ಹೂವಿನ ಕರಗವನ್ನು ಹೊರಲಾಯಿತು.

ನಗರದ ಶ್ರೀ ಪೂಜಮ್ಮ ದೇವಿಯ ಕರಗವನ್ನು ಮುಳಬಾಗಿಲಿನ ವಿಜಯ್‌ಕುಮಾರ್ ರವರು ಹೊತ್ತಿದ್ದರು. ಶಿರದ ಮೇಲೆ ಕಳಶ ಹೊತ್ತು ಕುಣಿಯುವ ಕಲೆಯಾಗಿದ ಕರಗದಾಚರಣೆ ಎಂದರೆ ಆದಿಶಕ್ತಿಯ ಆಚರಣೆ ಎಂದು ನಂಬಲಾಗಿದೆ. ದೇವಸ್ಥಾನಕ್ಕೆ ಮೂರು ಸುತ್ತು ಪ್ರದರ್ಶನ ಮಾಡಿ ನಂತರ ಮಾರಮ್ಮ ವೃತ್ತದಲ್ಲಿ ಮತ್ತು ಕೋಟೆ ವೃತ್ತದಲ್ಲಿ ಆಯೋಜಿಸಲಾಗಿದ್ದ ವಾದ್ಯಗೋಷ್ಠಿಯ ವೇದಿಕೆಯಲ್ಲಿ ಕರಗ ಹೊತ್ತ ವಿಜಯ್‌ ಕುಮಾರ್ ತಮಟೆಯ ಶಬ್ದಕ್ಕೆ ಹೆಜ್ಜೆ ಹಾಕಿ ಕುಣಿದಾಡಿದರು. ಅಲ್ಲಿದ್ದ ಸಾರ್ವಜನಿಕರು ಕರಗವನ್ನು ನೋಡಿ ಮನಸೋತಿದ್ದಲ್ಲದೇ ವಾದ್ಯಗೋಷ್ಠಿಯ ತಂಡದವರ ಸಂಗೀತಕ್ಕೆ ತಕ್ಕಂತೆ ಕುಣಿದರು.

ದೇವಿಯ ಕರಗ ವೀಕ್ಷಿಸಲು ಬರೀ ನಗರವಲ್ಲದೇ ತಾಲ್ಲೂಕಿನಾದ್ಯಂತ ಜನರು ಆಗಮಿಸಿದ್ದರು. ವಾದ್ಯಗೋಷ್ಠಿಯಲ್ಲಿ ಹಿಂದಿ, ಕನ್ನಡ, ತೆಲುಗು, ತಮಿಳು ಹಾಡುಗಳನ್ನು ವಾದ್ಯಗೋಷ್ಠಿ ತಂಡದವರು ಹಾಡಿ ನೃತ್ಯಗಳನ್ನು ಮಾಡಿದ್ದನ್ನು ನೋಡಿ ಕಣ್ತುಂಬಿಸಿಕೊಂಡರು.

For Daily Updates WhatsApp ‘HI’ to 7406303366

ಬ್ಯಾಟರಾಯಸ್ವಾಮಿ ರಥೋತ್ಸವ

0
Sidlaghatta Chikkadasarahalli Byatarayaswamy Brahmarathotsava

Chikkadasarahalli, Sidlaghatta : ಸಾವಿರಾರು ಭಕ್ತರ ಸಮ್ಮುಖದಲ್ಲಿ ತಾಲ್ಲೂಕಿನ ಚಿಕ್ಕದಾಸರಹಳ್ಳಿಯ ಸಮೀಪದ ಬ್ಯಾಟರಾಯಸ್ವಾಮಿ ಬ್ರಹ್ಮರಥೋತ್ಸವ ಸೋಮವಾರ ಶ್ರದ್ಧಾಭಕ್ತಿಯಿಂದ ನಡೆಸಲಾಯಿತು. ಸುತ್ತಮುತ್ತಲ ಗ್ರಾಮಗಳಿಂದ ಹಾಗೂ ನಗರದಿಂದ ಆಗಮಿಸಿದ್ದ ಭಕ್ತರು ಪೂಜೆಯಲ್ಲಿ ಪಾಲ್ಗೊಂಡು ಭಕ್ತಿಭಾವ ಮೆರೆದರು.

ಬ್ರಹ್ಮರಥೋತ್ಸವದ ಅಂಗವಾಗಿ ಹೂವುಗಳಿಂದ ಅಲಂಕರಿಸಿದ್ದ ರಥದಲ್ಲಿ ದೇವರನ್ನು ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಿ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ವಿವಿಧ ಕಲಾ ತಂಡಗಳು ಮತ್ತು ವಿವಿಧ ಅಂಗಡಿಗಳ ಸಾಲು ಎಲ್ಲರ ಆಕರ್ಷಣೆಯಾಗಿತ್ತು. ವಿಶೇಷ ಹೂವಿನ ಅಲಂಕಾರ ಮಾಡಿದ್ದ ಬ್ರಹ್ಮರಥೋತ್ಸವದ ತೇರನ್ನು ದೇವಸ್ಥಾನದ ಸುತ್ತಲೂ ಎಳೆದ ಭಕ್ತರು ಬಾಳೆಹಣ್ಣು, ದವನವನ್ನು ತೇರಿನ ಕಳಶಕ್ಕೆ ಎಸೆದು ತಮ್ಮ ಇಷ್ಟಾರ್ಥಗಳನ್ನು ಈಡೇರಿಸುವಂತೆ ಭಗವಂತನನ್ನು ಕೋರಿಕೊಂಡರು.

ರಥೋತ್ಸವಕ್ಕೆ ತಹಶೀಲ್ದಾರ್ ಬಿ.ಎನ್.ಸ್ವಾಮಿ ಚಾಲನೆ ನೀಡಿದರು. ರಥೋತ್ಸವ ಅಂಗವಾಗಿ ದೇಗುಲದಲ್ಲಿ ವಿವಿಧ ಪೂಜಾ ಕಾರ್ಯಕ್ರಮಗಳು ನಡೆದವು. ಬತ್ತಾಸು, ಸಿಹಿ ಖಾರದ ತಿಂಡಿಗಳು, ವಿವಿಧ ಹಣ್ಣುಗಳು, ತಂಪು ಪಾನೀಯ, ಕರಿದ ತಿಂಡಿ ತಿನಿಸು, ಮಕ್ಕಳಿಗೆ ಆಟಿಕೆ, ಅಚ್ಚೆ ಹಾಕುವವರು, ಬಳೆಗಾರರು ಉತ್ಸವಕ್ಕೆ ರಂಗು ತುಂಬಿದರು. ವಿವಿಧ ಗ್ರಾಮಗಳಿಂದ ಆಗಮಿಸಿದ್ದ ಭಕ್ತರಿಗೆ ಪಾನಕ, ಮಜ್ಜಿಗೆ ಹಾಗೂ ಹೆಸರು ಬೇಳೆ ವಿತರಿಸಲಾಯಿತು. ವಿವಿಧ ಗ್ರಾಮಸ್ಥರು ಹೆಸರುಬೇಳೆ ಪಾನಕ ವಿತರಿಸಿದರು.

ಸುತ್ತಮುತ್ತಲಿನ ಗ್ರಾಮಗಳು ಹಾಗೂ ತಾಲ್ಲೂಕಿನ ವಿವಿಧ ಭಾಗಗಳಿಂದ ಸಾವಿರಾರು ಭಕ್ತರು ಆಗಮಿಸಿ ದೇವರ ಪೂಜೆಯಲ್ಲಿ ಪಾಲ್ಗೊಂಡರು.

For Daily Updates WhatsApp ‘HI’ to 7406303366

Sidlaghatta Silk Cocoon Market-25/03/2024

0
Sidlaghatta Silk Cocoon Market Price Rate ಶಿಡ್ಲಘಟ್ಟ ರೇಷ್ಮೆ ಗೂಡು ಮಾರುಕಟ್ಟೆ ಧಾರಣೆ

Sidlaghatta Govt Silk Cocoon Market

ಶಿಡ್ಲಘಟ್ಟ ರೇಷ್ಮೆ ಗೂಡು ಮಾರುಕಟ್ಟೆ ಧಾರಣೆ

Date: 25/03/2024

Cross-Breed Silk Cocoon – ಮಿಶ್ರತಳಿ ರೇಷ್ಮೆ ಗೂಡು

Lots: 414
Qty: 23679 Kg
Mx : ₹ 480
Mn: ₹ 230
Avg: ₹ 416

Bi-Voltine Silk Cocoon – ದ್ವಿತಳಿ ರೇಷ್ಮೆ ಗೂಡು

Lots: 10
Qty: 504 Kg
Mx : ₹ 475
Mn: ₹ 370
Avg: ₹ 445

For Daily Updates WhatsApp ‘HI’ to 7406303366

error: Content is protected !!