ಜನವರಿ 4 ರ ಸೋಮವಾರದಿಂದ ಜನವರಿ 6 ರ ಬುಧವಾರದವರೆಗೂ ದಿಬ್ಬೂರಹಳ್ಳಿ ಉಪವಿದ್ಯುತ್ ಕೇಂದ್ರದ ಎಫ್ 9 ದ್ಯಾವರಹಳ್ಳಿ ವಿದ್ಯುತ್ ಮಾರ್ಗದ ಲಿಂಕ್ ಲೈನ್ ಕಾಮಗಾರಿಯನ್ನು ಕೈಗೆತ್ತಿಕೊಳ್ಳುತ್ತಿದೆ. ಈ ಮಾರ್ಗದಿಂದ ವಿದ್ಯುತ್ ಸರಬರಾಜಾಗುವ ದ್ಯಾವರಹಳ್ಳಿ, ಬಶೆಟ್ಟಹಳ್ಳಿ, ದ್ಯಾವಪ್ಪನಗುಡಿ, ಮದ್ದೇಗಾರಹಳ್ಳಿ, ವಂಟೂರು, ಸೀತಹಳ್ಳಿ, ಚಿಕ್ಕದಿಬ್ಬೂರಹಳ್ಳಿ ಹಾಗೂ ಸುತ್ತಮುತ್ತಲಿನ ಹಳ್ಳಿಗಳಿಗೆ ಜನವರಿ 4 ರ ಸೋಮವಾರದಿಂದ ಜನವರಿ 6 ರ ಬುಧವಾರದವರೆಗೂ ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ವ್ಯತ್ಯಯ ಆಗುತ್ತದೆಂದು ಗ್ರಾಮೀಣ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Sidlaghatta Cocoon Market-02/01/2021
ಶಿಡ್ಲಘಟ್ಟ ರೇಷ್ಮೆ ಗೂಡು ಮಾರುಕಟ್ಟೆ ಧಾರಣೆ
Date: 02/01/2021
CB Lots: 303
Qty: 16329 Kgs
Max: 500
Min: 240
Avg: 366
BV Lots: Nil
ಶಿಡ್ಲಘಟ್ಟ ಮಾರ್ಗದ ರೈಲು ಸಂಚಾರ ಪುನರಾರಂಭ – ವೇಳಾಪಟ್ಟಿ ಪ್ರಕಟ
ಬಂಗಾರಪೇಟೆ ಶಿಡ್ಲಘಟ್ಟ ಬೆಂಗಳೂರು ಮಾರ್ಗದ ರೈಲು ಮಾರ್ಗ ಜನವರಿ 4 2021 ಸೋಮವಾರದಿಂದ ಪುನರಾರಂಭಗೊಳ್ಳಲಿದ್ದು, ಹೊಸ ರೈಲು ವೇಳಾಪಟ್ಟಿಯನ್ನು ಇಲಾಖೆ ಪ್ರಕಟಗೊಳಿಸಿದೆ
ಅದರ ಅನುಸಾರವಾಗಿ ಭಾನುವಾರ ಹೊರತುಪಡಿಸಿ ವರದ ಮಿಕ್ಕ ದಿನಗಳು ಬಂಗಾರಪೇಟೆಯಿಂದ ಶಿಡ್ಲಘಟ್ಟ ಮಾರ್ಗವಾಗಿ ಬೆಂಗಳೂರಿಗೆ ಹೋಗುವ ಹಾಗೂ ಬೆಂಗಳೂರಿನಿಂದ ಬರುವ ರೈಲು ವೇಳಾಪಟ್ಟಿ
| ರೈಲು ಸಂಖ್ಯೆ : 06270 ಬಂಗಾರಪೇಟೆ – ಯಶವಂತಪುರ Demu | |||
| ಸ್ಥಳ | ಬಂಗಾರಪೇಟೆ | ಶಿಡ್ಲಘಟ್ಟ | ಯಶವಂತಪುರ |
| ಸಮಯ | 5:30 AM | 7:19 AM | 9:25 AM |
| ರೈಲು ಸಂಖ್ಯೆ : 06280 ಬಂಗಾರಪೇಟೆ – ಬೆಂಗಳೂರು Demu | |||
| ಸ್ಥಳ | ಬಂಗಾರಪೇಟೆ | ಶಿಡ್ಲಘಟ್ಟ | KSR ಬೆಂಗಳೂರು |
| ಸಮಯ | 4:00 PM | 5:48 PM | 8:20 PM |
| ರೈಲು ಸಂಖ್ಯೆ : 06279 ಯಶವಂತಪುರ – ಬಂಗಾರಪೇಟೆ Demu | |||
| ಸ್ಥಳ | ಯಶವಂತಪುರ | ಶಿಡ್ಲಘಟ್ಟ | ಬಂಗಾರಪೇಟೆ |
| ಸಮಯ | 8:30 AM | 10:12 AM | 12:30 PM |
| ರೈಲು ಸಂಖ್ಯೆ : 06269 ಬೆಂಗಳೂರು ಕಂಟೋನ್ಮೆಂಟ್ – ಬಂಗಾರಪೇಟೆ Demu | |||
| ಸ್ಥಳ | ಬೆಂಗಳೂರು ಕಂಟೋನ್ಮೆಂಟ್ | ಶಿಡ್ಲಘಟ್ಟ | ಬಂಗಾರಪೇಟೆ |
| ಸಮಯ | 5:55 PM | 7:48 PM | 9:45 PM |
Sidlaghatta Cocoon Market-01/01/2021
ಶಿಡ್ಲಘಟ್ಟ ರೇಷ್ಮೆ ಗೂಡು ಮಾರುಕಟ್ಟೆ ಧಾರಣೆ
Date: 01/01/2021
CB Lots: 294
Qty: 15522 Kgs
Max: 496
Min: 263
Avg: 370
BV Lots: 01
Qty: 57 Kgs
Max: 466
Min: 466
Avg: 466
ಜಿಲ್ಲಾ ಮಟ್ಟದ ಜಾನಪದ ನೃತ್ಯ ಸ್ಪರ್ಧೆಯಲ್ಲಿ ಬಹುಮಾನ
ಶಿಡ್ಲಘಟ್ಟದ ಕನಕನಗರದ ಶ್ರೀ ಗರುಡಾದ್ರಿ ಇಂಗ್ಲಿಷ್ ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳಾದ ಮೇಘನಾ, ಗಗನಿಕಾ, ಜಾಹ್ನವಿ, ಐಶ್ವರ್ಯ, ಅಂಜಲಿ, ಹರ್ಷಿತಾ, ನಂದಿನಿ ಜಿಲ್ಲಾ ಮಟ್ಟದ ಯುವಜನೋತ್ಸವ ಸ್ಪರ್ಧೆಯಲ್ಲಿ ಭಾಗವಹಿಸಿ ಜಾನಪದ ನೃತ್ಯ ಸ್ಪರ್ಧೆಯಲ್ಲಿ ತೃತೀಯ ಸ್ಥಾನ ಪಡೆದಿರುವರು. ನೃತ್ಯ ನಿರೂಪಕಿ ಧನ್ಯಶ್ರೀ, ದೈಹಿಕ ಶಿಕ್ಷಕ ಮುನಿಕೃಷ್ಣ, ಪ್ರಾಂಶುಪಾಲ ಪುರುಷೋತ್ತಮ ಬಹುಮಾನ ಪಡೆದ ಶಾಲೆಯ ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.
ಕ್ಷೇತ್ರದ ಅಭಿವೃದ್ಧಿಯೇ ನಮ್ಮ ಗುರಿ – ಬಿ.ಎನ್.ರವಿಕುಮಾರ್
ಶಿಡ್ಲಘಟ್ಟ ತಾಲ್ಲೂಕಿನ ಮೇಲೂರಿನಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಜೆಡಿಎಸ್ ಮುಖಂಡ ಮೇಲೂರು ಬಿ.ಎನ್.ರವಿಕುಮಾರ್ ಮಾತನಾಡಿದರು.
ಕಳೆದ ಹಲವಾರು ವರ್ಷಗಳ ಗ್ರಾಮ ಪಂಚಾಯಿತಿ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಅತಿ ಹೆಚ್ಚು ಮಂದಿ ಜೆಡಿಎಸ್ ಬೆಂಬಲಿತರನ್ನು ಶಿಡ್ಲಘಟ್ಟ ಕ್ಷೇತ್ರದ ಜನತೆ ಬೆಂಬಲಿಸಿದ್ದಾರೆ. ಕ್ಷೇತ್ರದ ಅಭಿವೃದ್ಧಿಯೇ ನಮ್ಮ ಗುರಿ ಎಂದು ಅವರು ತಿಳಿಸಿದರು.
ಶಿಡ್ಲಘಟ್ಟ ಕ್ಷೇತ್ರದ ಒಟ್ಟು 30 ಗ್ರಾಮ ಪಂಚಾಯಿತಿಗಳಲ್ಲಿ 460 ಮಂದಿ ಜೆಡಿಎಸ್ ಬೆಂಬಲಿತರು ಸ್ಪರ್ಧಿಸಿದ್ದರು. ಅವರಲ್ಲಿ 268 ಮಂದಿ ಜನರ ಆಶೀರ್ವಾದದೊಂದಿಗೆ ಜಯಶೀಲರಾಗಿದ್ದಾರೆ. 15 ಗ್ರಾಮ ಪಂಚಾಯಿತಿಗಳಲ್ಲಿ ನಮಗೆ ಬಹುಮತ ಸಿಕ್ಕಿದೆ. 4 ರಲ್ಲಿ ಸಮಬಲರಾಗಿದ್ದೇವೆ. ಮಾಜಿ ಸಚಿವ ಹಾಗೂ ಹಾಲಿ ಶಾಸಕರ ಸ್ವಗ್ರಾಮ ಹಂಡಿಗನಾಳ ಗ್ರಾಮ ಪಂಚಾಯಿತಿ ಜೆಡಿಎಸ್ ಪಾಲಾಗಿರುವುದು ಸಂತಸ ತಂದಿದೆ ಎಂದರು.
ಬ್ರಷ್ಟಾಚಾರ ಮತ್ತು ಕಾಂಗ್ರೆಸ್ ದುರಾಡಳಿತವನ್ನು ವಿರೋಧಿಸಿ 2003 ರಲ್ಲಿ ರಾಜಕಾರಣವನ್ನು ಪ್ರವೇಶಿಸಿದೆ. ಅಧಿಕಾರ ಅಥವಾ ಹಣ ಬಯಸಿ ರಾಜಕಾರಣಕ್ಕೆ ಬರಲಿಲ್ಲ. ಜನರ ನೋವನ್ನು ನಿವಾರಿಸುವುದು, ಕ್ಷೇತ್ರದ ಅಭಿವೃದ್ಧಿ ಮಾಡುವುದು ನನ್ನ ಧ್ಯೇಯ. ಗ್ರಾಮ ಪಂಚಾಯಿತಿಯಲ್ಲಿ ಗೆದ್ದವರು ಜನ ಸೇವೆ ಮಾಡಿ, ಮುಂಬರುವ ಚುನಾವಣೆಗಳಲ್ಲಿ ಜೆಡಿಎಸ್ ಪಕ್ಷವನ್ನು ಗೆಲ್ಲಲು ಸಹಕರಿಸಬೇಕೆಂದು ಹೇಳಿದರು.
ಮುಖಂಡ ತಾದೂರು ರಘು ಮಾತನಾಡಿ, ಈ ಬಾರಿಯ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷದವರು ಒಳಒಪ್ಪಂದ ಮಾಡಿಕೊಂಡು ಕೆಟ್ಟ ರಾಜಕಾರಣವನ್ನು ಮಾಡಿದ್ದರೆ. ಇವರ ವಿರುದ್ಧ ಸೈದ್ಧಾಂತಿಕವಾಗಿ ಜೆಡಿಎಸ್ ಬೆಂಬಲಿಗರು ಸ್ಪರ್ಧಿಸಿ ಜನಬೆಂಬಲದಿಂದ ಜಯವನ್ನು ಪಡೆದಿರುವರು ಎಂದರು.
ಜಿಲ್ಲಾ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಬಂಕ್ ಮುನಿಯಪ್ಪ ಮಾತನಾಡಿ, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೋತರೂ ಮುಖಂಡ ಬಿ.ಎನ್.ರವಿಕುಮಾರ್ ಜನರಲ್ಲಿ ಬೆರೆತು, ವಿಶ್ವಾಸ ಗಳಿಸಿರುವುದಕ್ಕೆ ಈ ಚುನಾವಣೆ ಫಲಿತಾಂಶವೇ ನಿದರ್ಶನ. ಮುಂದಿನ ದಿನಗಳಲ್ಲಿ ಶಿಡ್ಲಘಟ್ಟ ಕ್ಷೇತ್ರದ ಜನತೆ ಜೆಡಿಎಸ್ ಪಕ್ಷವನ್ನು ಸಂಪೂರ್ಣವಾಗಿ ಬೆಂಬಲಿಸುವರು ಎಂದರು.
ಮುಖಂಡ ನಂದನವನಂ ಶ್ರೀರಾಮರೆಡ್ಡಿ ಮಾತನಾಡಿ, ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಗೆದ್ದವರು ವಿನಯವಂತರಾಗಿ ಜನಸೇವೆ ಮಾಡಿ. ಆಗ ಮುಂಬರುವ ಚುನಾವಣೆಗಳಲ್ಲಿ ಜೆಡಿಎಸ್ ಪಕ್ಷವನ್ನು ಜನರೇ ಬೆಂಬಲಿಸುತ್ತಾರೆ. ಚಿಲಕಲನೇರ್ಪು ಹೋಬಳಿಯಲ್ಲಿನ 6 ಗ್ರಾಮ ಪಂಚಾಯಿತಿಗಳಲ್ಲಿ 5 ಜೆಡಿಎಸ್ ಪಾಲಾಗಿದೆ. ಜನರ ಋಣ ತೀರಿಸುವ ಕೆಲಸವನ್ನು ಕಾರ್ಯಕರ್ತರು ಮಾಡಬೇಕು ಎಂದರು.
ಪಿ.ಎಲ್.ಡಿ ಬ್ಯಾಂಕ್ ಅಧ್ಯಕ್ಷ ನಾರಾಯಣಸ್ವಾಮಿ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಎಂ.ಕೆ.ರಾಜಶೇಖರ್, ಡಾ.ಧನಂಜಯರೆಡ್ಡಿ, ಹುಜಗೂರು ರಾಮಣ್ಣ, ಗೋಪಾಲ್, ಮೇಲೂರು ಆರ್.ಎ.ಉಮೇಶ್, ಕೆ.ಎಸ್.ಮಂಜುನಾಥ್, ಮುಗಿಲಡಿಪಿ ನಂಜಪ್ಪ, ಶಶಿಕುಮಾರ್ ಹಾಜರಿದ್ದರು.
ಗ್ರಾಮ ಪಂಚಾಯಿತಿ ಚುನಾವಣೆ-2020 ವಿಜೇತರಾದ ಅಭ್ಯರ್ಥಿಗಳ ವಿವರ
ಬುಧವಾರ ಶಿಡ್ಲಘಟ್ಟ ಗ್ರಾಮ ಪಂಚಾಯಿತಿ ಚುನಾವಣೆ ಫಲಿತಾಂಶವು ಹೊರಬಿದ್ದಿದ್ದು ವಿಜೇತರಾದ ಅಭ್ಯರ್ಥಿಗಳ ವಿವರ:
























Sidlaghatta Cocoon Market-31/12/2020
ಶಿಡ್ಲಘಟ್ಟ ರೇಷ್ಮೆ ಗೂಡು ಮಾರುಕಟ್ಟೆ ಧಾರಣೆ
Date: 31/12/2020
CB lots: 309
Qty: 15591 Kgs
Max: 422
Min: 250
Avg: 361
BV Lots: 02
Qty: 161 Kgs
Max: 466
Min: 452
Avg: 460
ಶಿಡ್ಲಘಟ್ಟ ಗ್ರಾಮ ಪಂಚಾಯಿತಿ ಚುನಾವಣೆ ಫಲಿತಾಂಶ
ಗ್ರಾಮ ಪಂಚಾಯಿತಿ ಚುನಾವಣೆಗಳು ಮುಂಬರುವ ಚುನಾವಣೆಗಳ ದಿಕ್ಸೂಚಿಯೆಂದೇ ಭಾವಿಸಿರುವುದರಿಂದ ಕ್ಷೇತ್ರದ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿತ್ತು. ಬುಧವಾರ ಗ್ರಾಮ ಪಂಚಾಯಿತಿ ಚುನಾವಣೆ ಫಲಿತಾಂಶವು ಹೊರಬಿದ್ದಿದ್ದು ಹಲವು ಸ್ವಾರಸ್ಯಕರ ಘಟನೆಗಳಿಗೆ ಸಾಕ್ಷಿಯಾಗಿದೆ.
ನಗರದ ಸರ್ಕಾರಿ ಪ್ರೌಢಶಾಲೆಯ ಆವರಣದಲ್ಲಿ ಬುಧವಾರ ಬೆಳಿಗ್ಗೆ 8 ಗಂಟೆಯಿಂದ ಪ್ರಾರಂಭವಾದ ಮತ ಎಣಿಕೆ ಕಾರ್ಯದಲ್ಲಿ ತಾಲ್ಲೂಕಿನ 24 ಗ್ರಾಮ ಪಂಚಾಯಿತಿಗಳ ಪೈಕಿ ಅತಿ ಹೆಚ್ಚು ಸ್ಥಾನಗಳಲ್ಲಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳು ಜಯಗಳಿಸುವ ಮೂಲಕ ಕ್ಷೇತ್ರದಲ್ಲಿ ಆಡಳಿತದಲ್ಲಿರುವ ಕಾಂಗ್ರೆಸ್ ಪಕ್ಷಕ್ಕೆ ಮತದಾರರು ಕೈ ಕೊಟ್ಟಂತಿದೆ.
ಮಾಜಿ ಸಚಿವ ಹಾಗೂ ಹಾಲಿ ಶಾಸಕ ವಿ.ಮುನಿಯಪ್ಪ ಅವರ ಹುಟ್ಟೂರು ಹಂಡಿಗನಾಳ ಗ್ರಾಮ ಪಂಚಾಯಿತಿ ಈವರೆಗೂ ಕಾಂಗ್ರೆಸ್ ಪಕ್ಷದ ಭದ್ರ ಕೋಟೆಯಾಗಿತ್ತು. ಆದರೆ ಇದೇ ಮೊಟ್ಟ ಮೊದಲ ಬಾರಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 8 ಮಂದಿ ಜೆಡಿಎಸ್ ಬೆಂಬಲಿತರು ಜಯಶೀಲರಾಗುವ ಮೂಲಕ ದೋಸೆ ತಿರುವಿಹಾಕಿದಂತಾಗಿದೆ.
ಜೆಡಿಎಸ್ ಮುಖಂಡ ಬಿ.ಎನ್.ರವಿಕುಮಾರ್ ಸ್ವಗ್ರಾಮ ಮೇಲೂರು ಗ್ರಾಮ ಪಂಚಾಯಿತಿಯಲ್ಲಿ ಅತಿ ಹೆಚ್ಚು ಸಂಖ್ಯೆಯಲ್ಲಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳನ್ನು ಜಯಶೀಲರನ್ನಾಗಿ ಮಾಡುವ ಮೂಲಕ ಪಂಚಾಯಿತಿಯನ್ನು ಜೆಡಿಎಸ್ ವಶದಲ್ಲಿರುವಂತೆ ಭದ್ರಪಡಿಸಿಕೊಂಡಿದ್ದಾರೆ.
ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ಸುರೇಂದ್ರ ಗೌಡ ಅವರ ಪತ್ನಿ ಮಂಜುಳ ಸುರೇಂದ್ರ ಅವರು ಸ್ವಗ್ರಾಮ ಕಂಬದಹಳ್ಳಿಯಲ್ಲಿ ಸ್ಪರ್ಧಿಸಿದ್ದು, ಕೇವಲ 67 ಮತಗಳನ್ನು ಮಾತ್ರ ಪಡೆದಿದ್ದಾರೆ. ಅವರ ವಿರುದ್ಧ ಕಾಂಗ್ರೆಸ್ ಬೆಂಬಲಿತ ಗೀತಾಂಜಲಿ ಅವರು 433 ಮತಗಳನ್ನು ಪಡೆದು ಗೆಲುವನ್ನು ಪಡೆದಿದ್ದಾರೆ.
Sidlaghatta Cocoon Market-30/12/2020
ಶಿಡ್ಲಘಟ್ಟ ರೇಷ್ಮೆ ಗೂಡು ಮಾರುಕಟ್ಟೆ ಧಾರಣೆ
Date: 30/12/2020
CB Lots: 265
Qty: 13973 Kgs
Max: 450
Min: 126
Avg: 368
BV Lots: 02
Qty: 113 Kgs
Max: 471
Min: 411
Avg: 444
ತಾಲ್ಲೂಕು ಕಚೇರಿಯಲ್ಲಿ ಕುವೆಂಪು ಜನ್ಮ ದಿನಾಚರಣೆ
ನಗರದ ತಾಲ್ಲೂಕು ಕಚೇರಿಯಲ್ಲಿ ಮಂಗಳವಾರ ನಡೆದ ಕುವೆಂಪು ಜನ್ಮ ದಿನಾಚರಣೆಯ ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಅನಂತಾರಾಮ್ ಮಾತನಾಡಿದರು.
ವಿಶ್ವ ಕವಿ, ಜಗದ ಕವಿ ಮತ್ತು ಯುಗದ ಕವಿ ಕುವೆಂಪು ಅವರು ಜಗತ್ತಿಗೆ ವಿಶ್ವ ಮಾನವ ತತ್ವ ಸಾರುವ ಮೂಲಕ ಎಲ್ಲರಲ್ಲೂ ಸಂಘಿಕ ಪ್ರಜ್ಞೆ ಮೂಡಿಸಿದ್ದಾರೆ. ಇವರ ತತ್ವ ಆದರ್ಶವನ್ನು ಮೈಗೊಡಿಸಿಕೊಂಡರೆ ಸಮಾಜದಲ್ಲಿನ ಅಶಾಂತಿ ತೊಲಗುತ್ತದೆ ಎಂದು ಅವರು ತಿಳಿಸಿದರು.
ಸರ್ವಧರ್ಮ ಸಮನ್ವಯತೆ ಜಗಕ್ಕೆ ಸಾರಿದ ಮೇರು ಕವಿ ಕುವೆಂಪು. ಕನ್ನಡ ಸಾಹಿತ್ಯ ಲೋಕಕ್ಕೆ ಅಪಾರ ಕೊಡುಗೆ ನೀಡಿದ ಹಾಗೂ ಸಾಹಿತ್ಯದ ಮೂಲಕ ವೈಚಾರಿಕ ಕ್ರಾಂತಿಗೆ ಬೆಳಕು ಚೆಲ್ಲಿದ ರಾಷ್ಟ್ರಕವಿ ಕುವೆಂಪು ಅವರ ಕಥೆ, ಕಾದಂಬರಿ, ನಾಟಕ, ಕವಿತೆಗಳನ್ನು ಪ್ರತಿಯೊಬ್ಬರೂ ಅಧ್ಯಯನ ಮಾಡುವಂತಾಗಬೇಕು. ಕುವೆಂಪು ಅವರ ಕೃತಿಗಳನ್ನು ಓದುವ ಮೂಲಕ ಅವರಿಗೆ ಗೌರವ ಸಲ್ಲಿಸೋಣ ಎಂದರು.
ವಿಶ್ವ ಮಾನವ ಕುವೆಂಪು ಸಾಮಾಜಿಕ ವ್ಯವಸ್ಥೆಯಲ್ಲಿ ಆಡಂಬರವನ್ನು ವಿರೋಧಿಸಿದರು. ಮಂತ್ರ ಮಾಂಗಲ್ಯ ಮೂಲಕ ಸರಳ ವಿವಾಹಕ್ಕೆ ಒತ್ತು ನೀಡಿದರು. ವರ್ಣಾಶ್ರಮ ಹಾಗೂ ಮತ ಪದ್ಧತಿ ಹೋಗಲಾಡಿಸಲು ತಮ್ಮ ಕವಿತೆ ಕಾದಂಬರಿಗಳ ಮೂಲಕ ಸಂದೇಶ ಸಾರಿದರು. ಕರ್ನಾಟಕ ವೈಚಾರಿಕ ವಲಯದ ಸಾಕ್ಷಿ ಪ್ರಜ್ಞೆಯಂತ್ತಿದ್ದ ಕುವೆಂಪು ಅವರು ಕನ್ನಡ ನಾಡು-ನುಡಿ ಕಟ್ಟುವ ಕಾಯಕದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದರು.
ಕುವೆಂಪು ಅವರು ಕನ್ನಡ ನಾಡಿನ ಕವಿ, ಸಾಹಿತಿ, ಚಿಂತಕರಾಗಿ ಬೆಳೆದು ವಿಶ್ವ ಮಾನವರಾಗಿದ್ದಾರೆ, ಕುವೆಂಪು ಅವರ ವೈಚಾರಿಕತೆಯು ಸಾಮಾಜಿಕ ಕಾಳಜಿಗಳ ಫಲವಾಗಿ ಮೂಡಿ ಬಂದಿದೆ. ಓ ನನ್ನ ಚೇತನ, ನಾಡಗೀತೆ, ರೈತಗೀತೆ, ಮಲೆಗಳಲ್ಲಿ ಮದುಮಗಳು ಮತ್ತಿತರ ಕಾದಂಬರಿ, ಕವಿತೆಗಳನ್ನು ಕನ್ನಡ ಸಾಹಿತ್ಯ ಲೋಕಕ್ಕೆ ನೀಡಿದ್ದಾರೆ ಎಂದರು.
ಶಿರಸ್ತೆದಾರ್ ಮಂಜುನಾಥ್, ಸರ್ಕಾರಿ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಸುಬ್ಬರೆಡ್ಡಿ, ಒಕ್ಕಲಿಗ ಸಂಘದ ಜೆ.ಎಸ್.ವೆಂಕಟಸ್ವಾಮಿ, ಬಿ.ನಾರಾಯಣಸ್ವಾಮಿ ಹಾಜರಿದ್ದರು.
Sidlaghatta Cocoon Market-29/12/2020
ಶಿಡ್ಲಘಟ್ಟ ರೇಷ್ಮೆ ಗೂಡು ಮಾರುಕಟ್ಟೆ ಧಾರಣೆ
Date: 29/12/2020
CB Lots: 266
Qty: 13621 Kgs
Max: 499
Min: 300
Avg: 373
BV Lots: 02
Qty: 104 Kgs
Max: 431
Min: 422
Avg: 429
ಸೀತಾರಾಮಾಂಜನೇಯ ಮುತ್ತಿನ ಪಲ್ಲಕ್ಕಿ ಮೆರವಣಿಗೆ
ಶಿಡ್ಲಘಟ್ಟ ತಾಲ್ಲೂಕಿನ ಅಪ್ಪೇಗೌಡನಹಳ್ಳಿ ಗ್ರಾಮದಲ್ಲಿ ಸೀತಾರಾಮಾಂಜನೇಯ ದೇವಸ್ಥಾನದಲ್ಲಿ ವಿಶೇಷ ಪೂಜೆ, ತೀರ್ಥ ಪ್ರಸಾದ ವಿನಿಯೋಗದ ನಂತರ, ಪಟ್ಟಾಭಿರಾಮನ ವಿಗ್ರಹವನ್ನು ಮುತ್ತಿನ ಪಲ್ಲಕ್ಕಿಯಲ್ಲಿಟ್ಟುಕೊಂಡು, ಗಾರುಡಿ ಗೊಂಬೆಗಳು, ವಾದ್ಯವೃಂದದೊಂದಿಗೆ ಗ್ರಾಮದಲ್ಲಿ ಮೆರವಣಿಗೆ ಮಾಡಲಾಯಿತು.
ಬಶೆಟ್ಟಹಳ್ಳಿ ಹೋಬಳಿಯ ಜಿ.ಕುರುಬರಹಳ್ಳಿಯಲ್ಲಿ ರಾಗಿ ಬೆಳೆ ಕ್ಷೇತ್ರೋತ್ಸವ
ಕೃಷಿಯಲ್ಲಿ ನೂತನ ತಾಂತ್ರಿಕತೆ ಅಳವಡಿಸಿಕೊಂಡು ರಾಗಿ ಮತ್ತು ತೊಗರಿ ಬೆಳೆಯುವುದರಿಂದ ಹೆಚ್ಚಿನ ಉತ್ಪಾದನೆ ಹಾಗೂ ಆದಾಯ ಹೊಂದಬಹುದು ಎಂದು ಕೃಷಿ ಇಲಾಖೆಯ ಉಪನಿರ್ದೇಶಕಿ ಡಾ.ಅನುರೂಪ ಹೇಳಿದರು.
ತಾಲ್ಲೂಕಿನ ಬಶೆಟ್ಟಹಳ್ಳಿ ಹೋಬಳಿಯ ಜಿ.ಕುರುಬರಹಳ್ಳಿಯ ರೈತ ಭೈರಪ್ಪರ ತೋಟದಲ್ಲಿ ಸೋಮವಾರ ಕೃಷಿ ಇಲಾಖೆಯ ರಾಷ್ಟ್ರೀಯ ಆಹಾರ ಭದ್ರತಾ ಯೋಜನೆಯಡಿಯಲ್ಲಿ ಆಯೋಜಿಸಲಾಗಿದ್ದ ರಾಗಿ ಬೆಳೆ ಕ್ಷೇತ್ರೋತ್ವವ ಹಾಗೂ ರೈತರಿಗೆ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ರೈತರು ಕೃಷಿ ಇಲಾಖೆಯ ವತಿಯಿಂದ ದೊರೆಯುವ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಳ್ಳುವ ಜೊತೆಗೆ ಮಳೆಯಾಶ್ರಿತ ಜಮೀನಿನಲ್ಲಿ ಪರ್ಯಾಯ ಬೆಳೆಯಾಗಿ ತೊಗರಿಬೆಳೆ ಬೆಳೆಯುವುದರಿಂದ ಹೆಚ್ಚಿನ ಆದಾಯ ಪಡೆಯಬಹುದು ಎಂದರು.
ಚಿಂತಾಮಣಿಯ ಕೃಷಿ ವಿಜ್ಞಾನ ಕೇಂದ್ರದ ವಿಸ್ತರಣಾ ತಜ್ಞ ಡಾ.ತನ್ವೀರ್ ಅಹಮದ್ ಮಾತನಾಡಿ, ರಾಗಿ ಬೆಳೆಯ ತಳಿಗಳು ಸಮಗ್ರ ಪೋಷಕಾಂಶಗಳ ನಿರ್ವಾಹಣೆ ನೈಸರ್ಗಿಕವಾಗಿ ಸಿಗುವ ಜೈವಿಕ ಪರಿಕರಗಳನ್ನು ಬಳಸಿ ಕಡಿಮೆ ವೆಚ್ಚದಲ್ಲಿ ಗುಣಮಟ್ಟದ ಆಹಾರ ಬೆಳೆಯಲು ಸಾಧ್ಯ ಎಂದರು.
ಆತ್ಮ ಯೋಜನೆಯ ಉಪ ಯೋಜನಾ ನಿರ್ದೇಶಕ ಸತೀಶ್‌ಕುಮಾರ್ ಮಾತನಾಡಿ, ಬೆಳೆ ಸಮೀಕ್ಷೆಯ ಮಹತ್ವ ಮತ್ತು ಸಾವಯವ ಕೃಷಿಯ ಬಗ್ಗೆ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಸಹಾಯಕ ರೇಷ್ಮೆ ಕೃಷಿ ನಿರ್ದೇಶಕ ತಿಮ್ಮರಾಜು, ತಾಲ್ಲೂಕು ತಾಂತ್ರಿಕ ವ್ಯವಸ್ಥಾಪಕ ಎನ್.ಅಶ್ವತ್ಥನಾರಾಯಣ, ಕೃಷಿ ಇಲಾಖೆ ಅಧಿಕಾರಿ ಮೋಹನ್‌ಕುಮಾರ್ ಹಾಗೂ ಗ್ರಾಮಸ್ಥರು ಹಾಜರಿದ್ದರು.
Sidlaghatta Cocoon Market-28/12/2020
ಶಿಡ್ಲಘಟ್ಟ ರೇಷ್ಮೆ ಗೂಡು ಮಾರುಕಟ್ಟೆ ಧಾರಣೆ
Date: 28/12/2020
CB Lots: 273
Qty: 14368 Kgs
Max: 450
Min: 126
Avg: 374
BV Lots: 04
Qty: 153 Kgs
Max: 440
Min: 333
Avg: 397
ಸಿ.ಬಿ.ಪ್ರಕಾಶ್ ಅವರ ಸುಧೀರ್ಘ ಸೇವೆಗಾಗಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸೇವಾ ಪದಕ
ಶಿಡ್ಲಘಟ್ಟ ತಾಲ್ಲೂಕು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕಾರ್ಯದರ್ಶಿ ಮತ್ತು ಜಿಲ್ಲಾ ತರಬೇತಿ ಆಯುಕ್ತ ಸಿ.ಬಿ.ಪ್ರಕಾಶ್ ಅವರ ಸುಧೀರ್ಘ ಸೇವೆಯನ್ನು ಗುರುತಿಸಿ ರಾಜ್ಯ ಸಂಸ್ಥೆಯ ವತಿಯಿಂದ ನೀಡಲಾಗಿರುವ 20 ವರ್ಷಗಳ ಸೇವಾ ಪದಕ ಮತ್ತು ಪ್ರಮಾಣಪತ್ರವನ್ನು ಜಿಲ್ಲಾಧಿಕಾರಿ ಆರ್.ಲತಾ ವಿತರಿಸಿದರು. ಜಿಲ್ಲಾ ಮುಖ್ಯ ಆಯುಕ್ತ ಹಾಗೂ ಉಪನಿರ್ದೇಶಕ ಎಸ್.ಜಿ.ನಾಗೇಶ್ ಹಾಜರಿದ್ದರು
ಚೀಮಂಗಲದ ಗಣಿತ ಶಿಕ್ಷಕ ಶಿವಕುಮಾರ್ ಅವರಿಗೆ ಅಂತರರಾಷ್ಟ್ರೀಯ ಪ್ರಶಸ್ತಿ
ತಾಲ್ಲೂಕಿನ ಚೀಮಂಗಲ ಸರ್ಕಾರಿ ಪ್ರೌಢಶಾಲೆಯ ಗಣಿತ ಶಿಕ್ಷಕ ಶಿವಕುಮಾರ್ ಪುದುಚೆರಿಯ ಯುನಿವರ್ಸಲ್ ಟೀಚರ್ ಅಕಾಡೆಮಿ ಆಯೋಜಿಸಿದ್ದ ಎರಡು ಸ್ಪರ್ಧೆಗಳಲ್ಲಿ ವಿಜೇತರಾಗಿ ಪ್ರಶಸ್ತಿಯನ್ನು ಪಡೆದಿದ್ದಾರೆ
ಪುದುಚೆರಿಯ ಯುನಿವರ್ಸಲ್ ಟೀಚರ್ ಅಕಾಡೆಮಿಯವರು ಹಮ್ಮಿಕೊಂಡಿದ್ದ ಇಂಟರ್ ನ್ಯಾಷನಲ್ ಎಜುಕೇಶನಲ್ ಇ ಕಂಟೆಂಟ್ ಫೆಸ್ಟಿವಲ್-2020 ನಲ್ಲಿ ಶಿಕ್ಷಕರಿಗಾಗಿ 4 ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಶಿಕ್ಷಕ ಶಿವಕುಮಾರ್ ಅವರು ಬೆಸ್ಟ್ ಎಜುಕೇಷನಲ್ ವೀಡಿಯೊ ಗ್ಲೋಬಲ್ ಅವಾರ್ಡ್ ಮತ್ತು ಬೆಸ್ಟ್ ಎಜುಕೇಷನಲ್ ಪೋಸ್ಟರ್ ಗ್ಲೋಬಲ್ ಅವಾರ್ಡ್ ಸ್ಪರ್ಧೆಗಳಲ್ಲಿ ವಿಜೇತರಾಗಿದ್ದಾರೆ.
ಈ ಸ್ಪರ್ಧೆಯಲ್ಲಿ 958 ಜನರು ಭಾಗವಹಿಸಿದ್ದರು, ಪ್ರಶಸ್ತಿ ಪ್ರದಾನವನ್ನು ವರ್ಚುವಲ್ ಪ್ಲಾಟ್ ಫಾರಂ ಜೂಮ್ ನ ಮೂಲಕ ಭಾನುವಾರ ನಡೆಸಲಾಯಿತು.
ಅಂತರ ರಾಷ್ಟ್ರೀಯ ಸ್ಪರ್ಧೆಯಲ್ಲಿ ಗೆದ್ದು ಜಿಲ್ಲೆಗೆ ಕೀರ್ತಿಯನ್ನು ತಂದಿರುತ್ತಾರೆ ಎಂದು ಡಯಟ್ ನ ಪ್ರಾಂಶುಪಾಲ ರಘುನಾಥ ರೆಡ್ಡಿ, ಹಾಗೂ ಡಯಟ್ ನ ಉಪನ್ಯಾಸಕರುಗಳಾದ ಪ್ರವೀಣ್, ಕಾಮಾಕ್ಷಮ್ಮ, ಆನಂದ್ ರವರುಗಳು ಹಾಗೂ ಶಾಲೆಯ ಮುಖ್ಯ ಶಿಕ್ಷಕ ಎಸ್ ಶಿವಶಂಕರ್ ಅಭಿನಂದಿಸಿದ್ದಾರೆ.
Chikkaballapura Agriculture Market-27/12/2020
ಚಿಕ್ಕಬಳ್ಳಾಪುರ ಕೃಷಿ ಮಾರುಕಟ್ಟೆ ಧಾರಣೆ
Date: 27/12/2020
ಪ್ರಮಾಣ: ಕ್ವಿಂಟಲ್, ವರ್ಗ: ಸರಾಸರಿ
| ಉತ್ಪನ್ನಗಳು | ಆವಕ | ಕನಿಷ್ಠ | ಗರಿಷ್ಠ |
|---|---|---|---|
| ಟೊಮ್ಯಾಟೊ | 196 | 400 | 1400 |
ಶ್ರದ್ಧಾಭಕ್ತಿಯಿಂದ ಹನುಮ ಜಯಂತಿ ಆಚರಣೆ
ತಾಲ್ಲೂಕಿನ ಚೌಡಸಂದ್ರ ಗ್ರಾಮದ ಆಂಜನೇಯಸ್ವಾಮಿ ದೇವಾಲಯದಲ್ಲಿ ಹನುಮ ಜಯಂತಿಯನ್ನು ಶ್ರದ್ಧಾಭಕ್ತಿಯಿಂದ ವಿಶೇಷವಾಗಿ ಆಚರಿಸಲಾಯಿತು. ಸೀತಾರಾಮ ಲಕ್ಷ್ಮಣ ಸಮೇತ ಆಂಜನೇಯಸ್ವಾಮಿಯ ಉತ್ಸವ ಮೂರ್ತಿಯ ಕಲ್ಯಾಣೋತ್ಸವ ಹಾಗೂ 31ನೇ ವಾರ್ಷಿಕೋತ್ಸವದ ಪ್ರಯುಕ್ತ ದೇವಾಲಯದಲ್ಲಿ ವಿಶೇಷ ಅಲಂಕಾರ, ಪೂಜಾ ಮಹೋತ್ಸವದೊಂದಿಗೆ ಭಕ್ತಿಗೀತೆ, ಭಾವಗೀತೆ, ಭೋಜನ ವ್ಯವಸ್ಥೆ ಮಾಡಲಾಗಿತ್ತು.
ಶನಿವಾರ ರಾತ್ರಿ ಗ್ರಾಮದಲ್ಲಿ ಉತ್ಸವ ಮೂರ್ತಿಯ ಮೆರವಣಿಗೆ ಮಾಡಲಾಯಿತು. ಹೂವಿನ ಪಲ್ಲಕ್ಕಿಯ ಉತ್ಸವಕ್ಕೆ ನೂರಾರು ಮಂದಿ ಸಾಕ್ಷಿಯಾದರು. ದೇವಾಲಯ ಹಾಗೂ ಗ್ರಾಮದ ಪ್ರಮುಖ ರಸ್ತೆಗಳನ್ನೆಲ್ಲಾ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು.
ದೇವರನ್ನು ಮತ್ತು ದೇವಾಲಯವನ್ನು ವಿವಿಧ ಹೂಗಳಿಂದ ಅಲಂಕರಿಸಲಾಗಿತ್ತು. ಹನುಮಜಯಂತಿಯ ಪ್ರಯುಕ್ತ ಗ್ರಾಮದಲ್ಲಿ ಜಾತ್ರೆಯ ವಾತಾವರಣ ಮೂಡಿದ್ದು, ಭಕ್ತರು ವಿವಿಧ ತಾಲ್ಲೂಕು ಜಿಲ್ಲೆಗಳಿಂದ ಆಗಮಿಸಿ ದೇವರ ಪೂಜೆಯಲ್ಲಿ ಪಾಲ್ಗೊಂಡರು.
ತಾಲ್ಲೂಕಿನ ನಾಗಮಂಗಲ ಗ್ರಾಮದ ಅಭಯ ಹಸ್ತಾಂಜನೇಯಸ್ವಾಮಿ ದೇವಾಲಯದಲ್ಲಿ 15ನೇ ವರ್ಷದ ಹನುಮಜಯಂತಿಯನ್ನು ಆಚರಿಸಲಾಯಿತು. ಚೋಳರ ಕಾಲದ ಅಭಯ ಹಸ್ತಾಂಜನೇಯಸ್ವಾಮಿ ದೇವಾಲಯ ತಾಲ್ಲೂಕಿನ ಪುರಾತನ ದೇವಾಲಯಗಳಲ್ಲಿ ಒಂದಾಗಿದೆ. ಶಿಥಿಲಗೊಂಡಿದ್ದ ದೇವಾಲಯವನ್ನು ಗ್ರಾಮಸ್ಥರು ನವೀಕರಿಸಿದ ನಂತರ ಪ್ರತಿ ವರ್ಷವೂ ಹನುಮ ಜಯಂತಿ ವಿಶೇಷವಾಗಿ ಒಗ್ಗಟ್ಟಿನಿಂದ ಆಚರಿಸಿಕೊಂಡು ಬರಲಾಗುತ್ತಿದೆ.
ವಿವಿಧೆಡೆ ಹನುಮ ಜಯಂತಿ: ತಾಲ್ಲೂಕಿನ ಅಪ್ಪೇಗೌಡನಹಳ್ಳಿ ಗ್ರಾಮದ ಆಂಜನೇಯಸ್ವಾಮಿ ದೇವಾಲಯ, ಅಪ್ಪೇಗೌಡನಹಳ್ಳಿ ಗೇಟ್ ಬಯಲಾಂಜನೇಯಸ್ವಾಮಿ ದೇವಾಲಯ, ನಗರದ ಕೋಟೆ ಆಂಜನೇಯಸ್ವಾಮಿ ದೇವಾಲಯ, ಮಯೂರ ವೃತ್ತದ ಆಂಜನೇಯಸ್ವಾಮಿ, ಚಿಂತಾಮಣಿ ರಸ್ತೆಯಲ್ಲಿರುವ ವೀರಾಂಜನೇಯಸ್ವಾಮಿ ದೇಗುಲ, ಮುತ್ತೂರು ಗ್ರಾಮ, ಎಚ್.ಕ್ರಾಸ್, ಚೊಕ್ಕಂಡಹಳ್ಳಿ, ಎದ್ದಲತಿಪ್ಪೇನಹಳ್ಳಿ ಮುಂತಾದೆಡೆ ಶ್ರದ್ಧಾ ಭಕ್ತಿಯಿಂದ ಹನುಮ ಜಯಂತಿ ಆಚರಿಸಲಾಯಿತು.
Sidlaghatta Cocoon Market-27/12/2020
ಶಿಡ್ಲಘಟ್ಟ ರೇಷ್ಮೆ ಗೂಡು ಮಾರುಕಟ್ಟೆ ಧಾರಣೆ
Date: 27/12/2020
CB Lots: 189
Qty: 9544 Kgs
Max: 557
Min: 165
Avg: 367
BV Lots: 06
Qty: 319 Kgs
Max: 446
Min: 362
Avg: 407





















