ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಮರುಮೌಲ್ಯಮಾಪನದ ಫಲಿತಾಂಶ ಬಂದ ನಂತರ ಶಿಡ್ಲಘಟ್ಟ ತಾಲ್ಲೂಕಿನ ಮೇಲೂರು ಕ್ಲಸ್ಟರ್ ನಲ್ಲಿ ಅತಿ ಹೆಚ್ಚು ಅಂಕಗಳನ್ನು ಗಳಿಸಿರುವ ಎಚ್.ಅಂಕಿತ್ (96.16%) ರನ್ನು ಜೆಡಿಎಸ್ ಮುಖಂಡ ಬಿ.ಎನ್.ರವಿಕುಮಾರ್ ಗೌರವಿಸಿದರು. ಗ್ರಾಮಪಂಚಾಯಿತಿ ಮಾಜಿ ಅಧ್ಯಕ್ಷ ಆರ್.ಎ.ಉಮೇಶ್, ಹರೀಶ್ ಹಾಜರಿದ್ದರು.
SUBSCRIBE, LIKE & SHARE ನಮ್ಮ ಶಿಡ್ಲಘಟ್ಟ
ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗೆ ಗೌರವ
Facebook 👍🏻
Instagram 📷
Youtube ▶️
Website 🌐
📱 Join WhatsApp
ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಸೋಮವಾರ 23 ಕೊರೊನ ಪಾಸಿಟಿವ್ ಪ್ರಕರಣ ದಾಖಲು
ನಗರ ಸೇರಿದಂತೆ ತಾಲ್ಲೂಕಿನಲ್ಲಿ ಸೋಮವಾರ 23 ಮಂದಿಗೆ ಕೊರೊನಾ ಸೋಂಕು ತಗುಲಿದೆ.
- ನಗರದ 46 ವರ್ಷದ ಗಂಡಸು,
- ಕೋಟೆ ವೃತ್ತದ ಒಬ್ಬ ಗಂಡಸು,
- ಗಾಂಧಿನಗರದ 35 ವರ್ಷದ ಗಂಡಸು,
- ರಹಮತ್ ನಗರದ 45 ವರ್ಷದ ಗಂಡಸು,
- ಸಿದ್ಧಾರ್ಥನಗರದ 26 ವರ್ಷದ ಗಂಡಸು,
- ನಗರ್ತಪೇಟೆಯ 66 ವರ್ಷದ ಗಂಡಸು,
- ನಿಸಾರ್ ಪಾಳ್ಯದ 40 ವರ್ಷದ ಮಹಿಳೆ,
- ಮುಗಿಲಡಿಪಿಯ 55 ವರ್ಷದ ಗಂಡಸು,
- ಕನ್ನಪ್ಪನಹಳ್ಳಿಯ 32 ವರ್ಷದ ಮಹಿಳೆ, 20 ವರ್ಷದ ಗಂಡಸು,
- ಹೊಸಪೇಟೆಯ 10 ವರ್ಷದ ಹುಡುಗಿ,
- J ವೆಂಕಟಾಪುರದ 10 ವರ್ಷದ ಹುಡುಗ, 65 ವರ್ಷದ ಗಂಡಸು,
- ಬೀರಪ್ಪನಹಳ್ಳಿಯ 23 ವರ್ಷದ ಮಹಿಳೆ,
- ಹೊಸಪೇಟೆ-ಜಂಗಮಕೋಟೆಯ 14 ವರ್ಷದ ಯುವಕ,
- ಮುತ್ತೂರಿನ 58 ವರ್ಷದ ಗಂಡಸು, 23 ವರ್ಷದ ಮಹಿಳೆ,
- ತಾದೂರಿನ 55 ವರ್ಷದ ಗಂಡಸು,
- ಗಂಜಿಗುಂಟೆಯ 40 ವರ್ಷದ ಗಂಡಸು, 45 ವರ್ಷದ ಗಂಡಸು,
- ಚಕಪ್ಪನಹಳ್ಳಿಯ 35 ವರ್ಷದ ಮಹಿಳೆ,
- S ಗೊಲ್ಲಹಳ್ಳಿಯ 7 ವರ್ಷದ ಹುಡುಗ,
- ಸಾದಲಿಯ 36 ವರ್ಷದ ಮಹಿಳೆಗೆ ಸೋಂಕು ತಗುಲಿದೆ.
SUBSCRIBE, LIKE & SHARE ನಮ್ಮ ಶಿಡ್ಲಘಟ್ಟ
Facebook 👍🏻
http://www.facebook.com/sidlaghatta
Instagram 📷
http://www.instagram.com/sidlaghatta
Youtube ▶️
https://www.youtube.com/c/sidlaghatta
Website 🌐
http://www.sidlaghatta.com
📱 Join WhatsApp
https://wa.me/917406303366?text=Hi
Chintamani Agriculture Market Watch – 07/09/2020
ಚಿಂತಾಮಣಿ ಕೃಷಿ ಮಾರುಕಟ್ಟೆ ಧಾರಣೆ
Date: 07/09/2020
ಪ್ರಮಾಣ: ಕ್ವಿಂಟಲ್, ವರ್ಗ: ಸರಾಸರಿ
ಉತ್ಪನ್ನಗಳು | ಆವಕ | ಕನಿಷ್ಠ | ಗರಿಷ್ಠ |
| ಅಕ್ಕಿ (ಸೋನ) | 33 | 3800 | 5000 |
| ಜೋಳ | 15 | 1800 | 1950 |
| ರಾಗಿ | 455 | 1850 | 2100 |
| ಧನಿಯಾ | 17 | 5000 | 7500 |
| ಕ್ಯಾರಟ್ | 5 | 3000 | 4000 |
| ಬೆಂಡೆಕಾಯಿ | 8 | 2000 | 3000 |
| ಬದನೇಕಾಯಿ | 10 | 800 | 2500 |
| ನವಿಲುಕೋಸು | 6 | 2000 | 3000 |
| ಗೋರಿಕಾಯಿ | 6 | 1000 | 1800 |
| ಮೆಣಸಿನಕಾಯಿ | 8 | 2000 | 3000 |
| ಹುರಳಿಕಾಯಿ | 10 | 3000 | 4000 |
| ಬಜ್ಜಿ ಮೆಣಸಿನಕಾಯಿ | 4 | 4000 | 5000 |
| ದೊಣ್ಣೆ ಮೆಣಸಿನಕಾಯಿ | 4 | 4000 | 5000 |
| ಮೂಲಂಗಿ | 6 | 1500 | 2000 |
| ಎಲೆ ಕೋಸು | 6 | 1500 | 2000 |
| ಹೂ ಕೋಸು | 6 | 1500 | 2000 |
| ಬೀಟ್ರೂಟ್ | 4 | 1800 | 2000 |
| ತೊಂಡೆಕಾಯಿ | 3 | 1000 | 1500 |
| ಹಾಗಲಕಾಯಿ | 5 | 2000 | 3000 |
| ನುಗ್ಗೆಕಾಯಿ | 4 | 3000 | 4000 |
| ಸೌತೆಕಾಯಿ | 10 | 1500 | 2000 |
| ಆಲೂಗೆಡ್ಡೆ | 10 | 2500 | 3000 |
| ಈರುಳ್ಳಿ | 40 | 1200 | 2000 |
| ಬೆಳ್ಳುಳ್ಳಿ | 6 | 6000 | 9000 |
| ಶುಂಠಿ | 4 | 4000 | 5000 |
| ಸೀಬೆಹಣ್ಣು | 4 | 1000 | 1600 |
| ಟೊಮ್ಯಾಟೋ | 5175 | 800 | 4066 |
SUBSCRIBE, LIKE & SHARE ನಮ್ಮ ಶಿಡ್ಲಘಟ್ಟ
Facebook 👍🏻
http://www.facebook.com/sidlaghatta
Instagram 📷
http://www.instagram.com/sidlaghatta
Youtube ▶️
https://www.youtube.com/c/sidlaghatta
Website 🌐
http://www.sidlaghatta.com
📱 Join WhatsApp
https://wa.me/917406303366?text=Hi
Sidlaghatta Cocoon Market Watch – 07/09/2020
ಶಿಡ್ಲಘಟ್ಟ ರೇಷ್ಮೆ ಗೂಡು ಮಾರುಕಟ್ಟೆ ಧಾರಣೆ
Date: 07/09/2020
CB Lots: 724
Qty: 39021 Kgs
Max: 320
Min: 140
Avg: 231
BV Lots: 03
Qty: 224 Kgs
Max: 300
Min: 300
AVG: 300
ಶಿಡ್ಲಘಟ್ಟ ರೇಷ್ಮೆ ಗೂಡು ಮಾರುಕಟ್ಟೆ ಧಾರಣೆ (06/09/2020)
SUBSCRIBE, LIKE & SHARE ನಮ್ಮ ಶಿಡ್ಲಘಟ್ಟ
Facebook 👍🏻
http://www.facebook.com/sidlaghatta
Instagram 📷
http://www.instagram.com/sidlaghatta
Youtube ▶️
https://www.youtube.com/c/sidlaghatta
Website 🌐
http://www.sidlaghatta.com
📱 Join WhatsApp
https://wa.me/917406303366?text=Hi
ಕೊಲೆ ಪ್ರಕರಣದ ಭೇದಿಸಿದ ಶಿಡ್ಲಘಟ್ಟ ಪೊಲೀಸ್; ಆರೋಪಿ ಬಂಧನ
ಆಗಸ್ಟ್ 27 ರ ಸಂಜೆ ವೇಳೆ ಜಂಗಮಕೋಟೆ ಬಳಿ ಕೊಲೆ ಸೂಲಿಬೆಲೆ ರಸ್ತೆಯಲ್ಲಿ ವ್ಯಾಪಾರಿಯೊಬ್ಬರ ಕತ್ತು ಕೊಯ್ದು ಕೊಲೆ ಮಾಡಲಾಗಿತ್ತು. ಈ ಪ್ರಕರಣದ ಕೊಲೆ ಆರೋಪಿ ಹೊಸಕೋಟೆಯ ನವೀನ್ ಎಂಬುವನನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ನಿರಂಜನಮೂರ್ತಿ(52) ಕೊಲೆಗೀಡದ ವ್ಯಕ್ತಿಯಾಗಿದ್ದು, ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲ್ಲೂಕಿನ ಐಬಸಾಪುರದ ನಿವಾಸಿಯಾಗಿದ್ದ ಅವರು, ಜಂಗಮಕೋಟೆ ಕ್ರಾಸ್ ನಲ್ಲಿ ದಿನಸಿ ಅಂಗಡಿಯನ್ನಿಟ್ಟುಕೊಂಡಿದ್ದರು. ಅವರು ದಿನಸಿ ಅಂಗಡಿಯ ಜೊತೆಗೆ ವಾಹನಗಳನ್ನು ಕೊಂಡು ಮಾರುವ ವ್ಯವಹಾರದಲ್ಲಿ ತೊಡಗಿಸಿಕೊಂಡಿದ್ದರು.
“ಕಳೆದ ಆರು ತಿಂಗಳಿನಿಂದ ನವೀನ್ ಎಂಬ ವ್ಯಕ್ತಿ ಹಣಕಾಸಿನ ಮತ್ತು ವಾಹನ ವಿಚಾರದಲ್ಲಿ ನಿರಂಜನಮೂರ್ತಿಯವರೊಂದಿಗೆ ವ್ಯವಹಾರ ನಡೆಸುತ್ತಿದ್ದರು. ಮಾರುತಿ ಆಮ್ನಿ ವಾಹನವನ್ನು ನವೀನ್ ಕಳೆದ ಹತ್ತು ದಿನಗಳ ಹಿಂದೆ ನಿರಂಜನಮೂರ್ತಿ ಅವರಿಗೆ 2 ಲಕ್ಷ 85 ಸಾವಿರಕ್ಕೆ ಮಾರಾಟ ಮಾಡಿದ್ದರು. ನಿರಂಜನಮೂರ್ತಿ ಅವರು ನಾನು 2 ಲಕ್ಷ ರೂಗಳನ್ನು ಮಾತ್ರ ಕೊಡುತ್ತೇನೆಂದಿದ್ದಾರೆ. ಈ ವಿಚಾರವಾಗಿ ಮಾತುಕತೆ ನಡೆಸಲು ಕರೆದೊಯ್ದ ನವೀನ್, ಚಾಕುವಿನಿಂದ ಕುತ್ತಿಗೆ ಹಾಗೂ ಎದೆಗೆ ತಿವಿದು ಸಾಯಿಸಿದ್ದಾನೆ. ಕೊಲೆ ಮಾಡಿದ್ದ ಸ್ಥಳದ ಸ್ವಲ್ಪ ದೂರದಲ್ಲಿ ಮೃತ ದೇಹವನ್ನು ಬಿಸಾಡಿ, ಅಲ್ಲಿಂದ ಎಚ್.ಕ್ರಾಸ್ ಮೂಲಕ ಮೈಸೂರಿಗೆ ಹೋಗಿದ್ದಾನೆ. ತನಿಖೆ ನಡೆಸಿ ನಾವು ಆರೋಪಿಯನ್ನು ಬಂದಿಸಿದ್ದೇವೆ. ಆರೋಪಿ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ” ಎಂದು ಜಿಲ್ಲಾ ಪೊಲೀಸ್ ಎಸ್ಪಿ ಮಿಥುನ್ ಕುಮಾರ್ ತಿಳಿಸಿದರು.
SUBSCRIBE, LIKE & SHARE ನಮ್ಮ ಶಿಡ್ಲಘಟ್ಟ
Facebook 👍🏻
http://www.facebook.com/sidlaghatta
Instagram 📷
http://www.instagram.com/sidlaghatta
Youtube ▶️
https://www.youtube.com/c/sidlaghatta
Website 🌐
http://www.sidlaghatta.com
📱 Join WhatsApp
https://wa.me/917406303366?text=Hi
ಶೇ 100 ರಷ್ಟು ಫಲಿತಾಂಶ ದಾಖಲಿಸಿದ ತುಮ್ಮನಹಳ್ಳಿ ಸರ್ಕಾರಿ ಪ್ರೌಢಶಾಲೆ
SSLC ಮರುಮೌಲ್ಯಮಾಪನದ ನಂತರ ತುಮ್ಮನಹಳ್ಳಿ ಸರ್ಕಾರಿ ಪ್ರೌಢಶಾಲೆ ಶೇ 100 ರಷ್ಟು ಫಲಿತಾಂಶ ದಾಖಲಿಸಿದೆ.
2019-20 ನೇ ಸಾಲಿನ ತುಮ್ಮನಹಳ್ಳಿ ಸರ್ಕಾರಿ ಪ್ರೌಢಶಾಲೆಯ 50 ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನು ಬರೆದಿದ್ದರು. ಒಬ್ಬ ವಿದ್ಯಾರ್ಥಿನಿ ಇಂಗ್ಲಿಷ್ ವಿಷಯದಲ್ಲಿ ಅನುತ್ತೀರ್ಣರಾಗಿದ್ದರು. ನಂತರ ಮರುಮೌಲ್ಯಮಾಪನಕ್ಕೆ ಅರ್ಜಿಯನ್ನು ಹಾಕಿಕೊಂಡಿದ್ದರು. ಅದರ ಫಲಿತಾಂಶ ಬಂದಿದ್ದು, ಆ ವಿದ್ಯಾರ್ಥಿನಿಯೂ ಪಾಸಾಗಿದ್ದು, ಶಾಲೆ ಶೇ 100 ರಷ್ಟು ಫಲಿತಾಂಶ ದಾಖಲಿಸಿದೆ ಎಂದು ಮುಖ್ಯ ಶಿಕ್ಷಕ ಎಸ್.ಮಂಜುನಾಥ್ ತಿಳಿಸಿದ್ದಾರೆ.
ಮಕ್ಕಳು ಶಿಕ್ಷಕರನ್ನು ಅನುಕರಣೆ ಮಾಡುವುದರಿಂದ ಶಿಕ್ಷಕರ ಪ್ರತಿ ನಡೆಯೂ ಮಾದರಿಯಾಗಿರಬೇಕು
ತಾಲ್ಲೂಕಿನ ಸುಗಟೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ನೆಹರು ಯುವಕೇಂದ್ರ, ಬೆಂಗಳೂರು ಗಾಂಧೀಭವನದ ಕರ್ನಾಟಕ ಗಾಂಧಿ ಸ್ಮಾರಕ ನಿಧಿ, ರಾಷ್ಟ್ರೀಯ ಯುವಯೋಜನೆಗಳ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಶಿಕ್ಷಕರ ದಿನಾಚರಣೆ, ಸದೃಢ ಭಾರತಕ್ಕಾಗಿ ಫಿಟ್ ಇಂಡಿಯಾ ಸಪ್ತಾಹದ ಉದ್ಘಾಟನಾ ಕಾರ್ಯಕ್ರಮದಲ್ಲಿ ಸುಗಟೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಎಚ್.ಎಸ್.ರುದ್ರೇಶಮೂರ್ತಿ ಮಾತನಾಡಿದರು.
ಶಿಕ್ಷಕರು ನಿರಂತವಾಗಿ ಅಧ್ಯಯನಶೀಲರಾಗಿರಬೇಕು. ಮಕ್ಕಳು ಶಿಕ್ಷಕರನ್ನು ಅನುಕರಣೆ ಮಾಡುವುದರಿಂದ ಶಿಕ್ಷಕರ ಪ್ರತಿ ನಡೆಯೂ ಮಾದರಿಯಾಗಿರಬೇಕಾಗುತ್ತದೆ. ಶಿಕ್ಷಕರು ಮತ್ತಷ್ಟು ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸುವ ಮೂಲಕ ಭವಿಷ್ಯ ಭಾರತದ ಅಭಿವೃದ್ಧಿಯನ್ನು ಗುರಿಯನ್ನಾಗಿಸಿಕೊಂಡು ದುಡಿಯಬೇಕಿದೆ ಎಂದು ಅವರು ತಿಳಿಸಿದರು.
ಶಿಕ್ಷಕರಲ್ಲಿ ತಾಳ್ಮೆ, ಸದೃಢ ಮನಸ್ಸು ಅಗತ್ಯವಾಗಿ ಇರಬೇಕು. ಶಿಕ್ಷಕರ ಜವಾಬ್ದಾರಿಯು ಅತಿ ಪ್ರಮುಖವಾದುದಾಗಿದ್ದು ಉತ್ತಮ ಸಮಾಜದ ಅಭಿವೃದ್ಧಿಗೆ ಶಿಕ್ಷಕ ಪ್ರಯತ್ನಿಸಬೇಕು. ತಾವೂ ಆರೋಗ್ಯವಾಗಿದ್ದು ಮಕ್ಕಳ ಮಾನಸಿಕ, ಶೈಕ್ಷಣಿಕ ಮತ್ತು ದೈಹಿಕ ಸದೃಡತೆಗೆ ಮಾರ್ಗದರ್ಶನ ತೋರಬೇಕು ಎಂದರು.
ರಾಷ್ಟ್ರೀಯ ಯುವಯೋಜನೆ ರಾಜ್ಯ ಸಂಯೋಜಕ ವಿ.ಪ್ರಶಾಂತ್ ಮಾತನಾಡಿ, ದೇಶದ ಸಮಗ್ರ ಅಭಿವೃದ್ಧಿಯಲ್ಲಿ ಆರೋಗ್ಯವಂತ ಮಾನವಸಂಪನ್ಮೂಲದ ಅಗತ್ಯತೆಯಿದ್ದು ಎಲ್ಲರೂ ದೈಹಿಕ ಮತ್ತು ಮಾನಸಿಕ ಆರೋಗ್ಯದ ಕಡೆಗೆ ಒತ್ತು ನೀಡಬೇಕು. ನಿರಂತರ ಓಟ, ವಾಕಿಂಗ್, ಬೈಸಿಕಲ್ ತುಳಿಯುವುದು, ಯೋಗಮಾಡುವಂತಹ ಚಟುವಟಿಕೆಗಳನ್ನು ರೂಢಿಸಿಕೊಳ್ಳಬೇಕು ಎಂದರು.
ನೆಹರು ಯುವಕೇಂದ್ರದ ವತಿಯಿಂದ ಶಿಕ್ಷಕರನ್ನು ಸನ್ಮಾನಿಸಲಾಯಿತು.
ಎಸ್‌ಡಿಎಂಸಿ ಅಧ್ಯಕ್ಷ ಎಂ.ಶಂಕರಪ್ಪ, ಗ್ರಾಮಪಂಚಾಯಿತಿ ಮಾಜಿ ಸದಸ್ಯ ಎನ್.ಅಶ್ವತ್ಥಪ್ಪ, ಶಿವಶಂಕರಪ್ಪ, ದೇವರಾಜು, ಉದ್ಯಮಿ ಸತೀಶ್, ದೊಡ್ಡಮುನಿವೆಂಕಟಶೆಟ್ಟಿ, ಎಂಪಿಸಿಎಸ್ ಅಧ್ಯಕ್ಷ ಮಂಜುನಾಥ್‌ಗೌಡ, ಎ.ನಾಗೇಶ್‌ಗೌಡ, ಬಚ್ಚೇಗೌಡ ಹಾಜರಿದ್ದರು.
SUBSCRIBE, LIKE & SHARE ನಮ್ಮ ಶಿಡ್ಲಘಟ್ಟ
Facebook 👍🏻
http://www.facebook.com/sidlaghatta
Instagram 📷
http://www.instagram.com/sidlaghatta
Youtube ▶️
https://www.youtube.com/c/sidlaghatta
Website 🌐
http://www.sidlaghatta.com
📱 Join WhatsApp
https://wa.me/917406303366?text=Hi
ಸಮನ್ವಯ ಶಿಕ್ಷಣ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ
ತಾಲ್ಲೂಕಿನ ಜಂಗಮಕೋಟೆ ಸರ್ಕಾರಿ ಪ್ರೌಢಶಾಲೆಯ ಆವರಣದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರಸಮನ್ವಯಾಧಿಕಾರಿ, ಕ್ಷೇತ್ರಶಿಕ್ಷಣಾಧಿಕಾರಿಗಳ ಕಚೇರಿಯ ವತಿಯಿಂದ ಸಮನ್ವಯ ಶಿಕ್ಷಣ ಜಾಗೃತಿ ಕಾರ್ಯಕ್ರಮ, ಕ್ಲಸ್ಟರ್ ಮಟ್ಟದ ವಿಶೇಷಚೇತನ ಮಕ್ಕಳ ಪೋಷಕರ ಸಭೆಯಲ್ಲಿ ಜಿಲ್ಲಾ ಯೋಜನಾ ಉಪಸಮನ್ವಯಾಧಿಕಾರಿ ಡಿ.ಎನ್.ಸುಕನ್ಯಾ ಮಾತನಾಡಿದರು.
ಅಂಗವಿಕಲ ಮಕ್ಕಳ ಬಗ್ಗೆ ಅಸಹ್ಯ ನಿರ್ಲಕ್ಷ್ಯ ತೋರದೇ ಅಗತ್ಯ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು ಮುಖ್ಯವಾಹಿನಿಗೆ ತರಲು ಹೆಚ್ಚು ಕಾಳಜಿವಹಿಸಬೇಕು. ಪೌಷ್ಟಿಕಾಂಶಯುತ ಆಹಾರಕ್ರಮಗಳ ಅಳವಡಿಕೆ, ನಿಗದಿತ ವ್ಯಾಯಾಮ ಕ್ರಮಗಳನ್ನು ಅನುಸರಿಸಲು ಪೋಷಕರು ಒತ್ತುನೀಡಬೇಕು ಎಂದು ಅವರು ತಿಳಿಸಿದರು.
ಬಿಐಇಆರ್‌ಟಿ ಬಿ.ಎಂ.ಜಗದೀಶ್ ಮಾತನಾಡಿ, ತಾಲ್ಲೂಕಿನಲ್ಲಿರುವ ವಿಶೇಷಚೇತನ ಮಕ್ಕಳ ಎಲ್ಲಾ ಮಾಹಿತಿಗಳನ್ನು ಸಂಗ್ರಹಿಸಿ, ಸಾಮಾನ್ಯ ಅಥವಾ ಗೃಹಾಧಾರಿತ ಶಿಕ್ಷಣಕ್ಕೆ ಮಾರ್ಗದರ್ಶನ ಮಾಡಿ ಮೇಲ್ವಿಚಾರಣೆ ಮಾಡಲಾಗುತ್ತಿದೆ. ಸಮನ್ವಯ ಶಿಕ್ಷಣದಡಿ ಅನೇಕ ವಿಶೇಷಚೇತನ ಮಕ್ಕಳಿಗೆ ಆರ್ಥಿಕ ಸವಲತ್ತುಗಳನ್ನು ಕಲ್ಪಿಸಬೇಕಿದೆ. ಹೋಬಳಿಗೊಂದು ಫಿಸಿಯೋತೆರಪಿ, ಮಾರ್ಗದರ್ಶನ ಕೇಂದ್ರಗಳನ್ನು ತೆರೆದು ಸೂಕ್ತ ಮಾರ್ಗದರ್ಶನ ನೀಡಬೇಕಿದೆ ಎಂದರು.
ಬಿಆರ್‌ಸಿ ಸಮನ್ವಯಾಧಿಕಾರಿ ತ್ಯಾಗರಾಜು ಮಾತನಾಡಿ, 18 ವರ್ಷದೊಳಗಿನ ಎಲ್ಲಾ ಮಕ್ಕಳೂ ಶಾಲೆಯಿಂದ ಹೊರಗುಳಿಯದಂತೆ ನೋಡಿಕೊಳ್ಳಬೇಕು. ಶಾಲೆಯಿಂದ ದೊರೆಯಬಹುದಾದ ಶೈಕ್ಷಣಿಕ ಸೌಲಭ್ಯಗಳು, ಆಹಾರಧಾನ್ಯವನ್ನು ನಿಗದಿತವಾಗಿ ಪಡೆದು ವಿಶೇಷಚೇತನ ಮಕ್ಕಳ ಬಗ್ಗೆ ಪೋಷಕರು ಮತ್ತಷ್ಟು ಗಮನವಹಿಸಬೇಕು ಎಂದರು.
ಎಂಆರ್‌ಡಬ್ಲ್ಯೂ ಸಂಪನ್ಮೂಲವ್ಯಕ್ತಿ ರಾಮಚಂದ್ರಪ್ಪ ಮಾತನಾಡಿ, ವಿಶೇಷಚೇತನ ಮಕ್ಕಳಿಗೆ ಸಿಗುವ ಶೈಕ್ಷಣಿಕ ಸವಲತ್ತುಗಳು, ಸ್ವಯಂಉದ್ಯೋಗಕ್ಕೆ ಸಿಗುವ ಆರ್ಥಿಕ ಸೌಲಭ್ಯಗಳ ಬಗ್ಗೆ ವಿವರಿಸಿದರು.
ತಾಲ್ಲೂಕಿನ ಶಾಲೆಗಳಲ್ಲಿನ ವಿಶೇಷಚೇತನ ಮಕ್ಕಳ ಮಾನಸಿಕ ಮತ್ತು ದೈಹಿಕ ಸದೃಡತೆಯ ಹಾದಿ ವೀಡಿಯೋ ಪ್ರದರ್ಶನ ನಡೆಯಿತು. ಅತಿ ಹೆಚ್ಚು ಅಂಕಗಳಿಸಿದ ವಿಶೇಷಚೇತನ ಮಕ್ಕಳಿಗೆ ಬಹುಮಾನಗಳನ್ನು ವಿತರಿಸಲಾಯಿತು.
ಸರ್ಕಾರಿ ಪ್ರೌಢಶಾಲೆಯ ಶಿಕ್ಷಕ ಬೈರಾರೆಡ್ಡಿ, ಸಿಆರ್‌ಪಿ ಎಂ.ರಮೇಶ್‌ಕುಮಾರ್, ಮುಖ್ಯಶಿಕ್ಷಕ ವಿ.ವಿಶ್ವನಾಥ್, ಹುಸೇನ್, ಮುಖ್ಯಶಿಕ್ಷಕಿ ನೇತ್ರಾವತಿ, ಪಿ.ಗೀತಾ, ವಿರೂಪಾಕ್ಷ, ಬಿಐಆರ್‌ಟಿ ರಾಧಮ್ಮ, ವಿಆರ್‌ಡಬ್ಲ್ಯೂ ನಾಗೇಶ್ ಹಾಜರಿದ್ದರು.
Daily Panchangam – ಪಂಚಾಂಗ 7 September 2020
Daily Panchangam – ಪಂಚಾಂಗ (7 September 2020, ಸೋಮವಾರ)
ಪಂಚಾಂಗ | |
| ಸಂವತ್ಸರ | ಶಾರ್ವರಿ |
| ಮಾಸ | ಭಾದ್ರಪದ |
| ಪಕ್ಷ | ಕೃಷ್ಣಪಕ್ಷ |
| ತಿಥಿ | ಪಂಚಮಿ – 09:41:17 PM ವರೆಗೆ |
| ನಕ್ಷತ್ರ | ಭರಣಿ – ಪೂರ್ಣ ರಾತ್ರಿ ವರೆಗೆ |
| ಯೋಗ | ಧ್ರುವ – 04:35:50 PM ವರೆಗೆ |
| ಕರಣ | ಕೌಳವ – 08:25:23 AM ವರೆಗೆ |
| ಋತು | ಶರದ್ |
ಸೂರ್ಯ – ಚಂದ್ರೋದಯ | |
| ಸೂರ್ಯೋದಯ | 6:08:04 |
| ಸೂರ್ಯಾಸ್ತ | 18:25:42 |
| ಚಂದ್ರೋದಯ | 21:53:59 |
| ಚಂದ್ರಾಸ್ತ | 9:56:00 |
| ಚಂದ್ರ ರಾಶಿ | ಮೇಷ |
ಕಾಲ | |
| ರಾಹು ಕಾಲ | 07:40:17 AM ರಿಂದ 09:12:29 AM |
| ಯಮಗಂಡ | 10:44:41 AM ರಿಂದ 12:16:53 PM |
| ಗುಳಿಕ ಕಾಲ | 01:49:06 PM ರಿಂದ 03:21:18 PM |
SUBSCRIBE, LIKE & SHARE ನಮ್ಮ ಶಿಡ್ಲಘಟ್ಟ
Facebook 👍🏻
http://www.facebook.com/sidlaghatta
Instagram 📷
http://www.instagram.com/sidlaghatta
Youtube ▶️
https://www.youtube.com/c/sidlaghatta
Website 🌐
http://www.sidlaghatta.com
📱 Join WhatsApp
https://wa.me/917406303366?text=Hi
ರೇಷ್ಮೆ ಬೆಳೆಗಾರರು ಹೆಚ್ಚು ಲಾಭ ಪಡೆಯಲು ಊಜಿ ನಿರ್ವಹಣೆ ಅನಿವಾರ್ಯ
ತಾಲ್ಲೂಕಿನ ಬೋದಗೂರಿನಲ್ಲಿ ಕುರುಬೂರಿನ ರೇಷ್ಮೆ ಕೃಷಿ ವಿಜ್ಞಾನ ಕಾಲೇಜು, ಕೆ.ವಿ.ಕೆ, ರೇಷ್ಮೆ ಇಲಾಖೆ, ಶಿಡ್ಲಘಟ್ಟ ರೇಷ್ಮೆ ರೈತ ಉತ್ಪಾದಕ ಕಂಪನಿಗಳ ಸಂಯುಕ್ತಾಶ್ರಯದಲ್ಲಿ ನಾಗೇಶ್ ಕುಮಾರ್‌ರವರ ರೇಷ್ಮೆಹುಳು ಸಾಕಣೆ ಮನೆಯಲ್ಲಿ ನಡೆದ ರೇಷ್ಮೆ ಕೃಷಿ ಕ್ಷೇತ್ರೋತ್ಸವದಲ್ಲಿ ರೇಷ್ಮೆಕೃಷಿ ವಿಜ್ಞಾನಿ ಡಾ.ವಿನೋದಾ ಮಾತನಾಡಿದರು.
ರೇಷ್ಮೆಕೃಷಿಯು ಚಿಕ್ಕಬಳ್ಳಾಪುರ ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಯಾಗಿದ್ದು ಕಡಿಮೆ ನೀರಿರುವ ಪ್ರದೇಶದಲ್ಲಿ ಬೆಳೆಯಲೂ ಸಹ ಅನುಕೂಲಕರವಾಗಿದೆ. ಕೋವಿಡ್-19ರ ನಂತರದಲ್ಲಿ ಲಾಕ್‌ಡೌನ್ ತೆರವುಗೊಳಿಸಿದಾಗಿನಿಂದ ಏರುಗತಿಯಲ್ಲಿರುವ ಗೂಡಿನ ಬೆಲೆಯು ರೈತರ ಮುಖದಲ್ಲಿ ಮಂದಹಾಸವನ್ನು ತಂದಿದೆ. ರೇಷ್ಮೆಹುಳು ಸಾಕಾಣಿಕೆಯಲ್ಲಿ ಪ್ರಮುಖ ಪೀಡೆಯಾದ ಊಜಿ ನಿರ್ವಹಣೆ ಸಮರ್ಪಕವಾಗಿ ಮಾಡಿದಲ್ಲಿ ರೇಷ್ಮೆ ಬೆಳೆಗಾರರಿಗೆ ಹೆಚ್ಚು ಲಾಭ ಬರುತ್ತದೆ ಎಂದು ಅವರು ತಿಳಿಸಿದರು.
ಊಜಿನೊಣದ ಜೀವನಚಕ್ರ, ಊಜಿನಿರ್ವಹಣೆಯ ಕ್ರಮಗಳ ಬಗ್ಗೆ ವಿವರವಾಗಿ ತಿಳಿಸಿ, ನೈಲಾನ್ ಪರದೆಯ ಜೊತೆಗೆ ಇತರೆ ತಾಂತ್ರಿಕತೆಗಳಾದ ಊಜಿಟ್ರ್ಯಾಪ್ ದ್ರಾವಣ, ಊಜಿಪೌಡರ್, ಹಳದಿ ಅಂಟುಪಟ್ಟಿ, ಪರತಂತ್ರ ಜೀವಿಯಾದ ನಿಸೋಲಿಂಕ್ಸ್ ಥೈಮಸ್‌ನ ಬಳಕೆಯ ಜೊತೆಗೆ ಹೊಸ ತಂತ್ರಜ್ಞಾನವಾದ ಲಿಂಗಾಕರ್ಷಕ ಬಲೆಯನ್ನು ಅಳವಡಿಸಿಕೊಳ್ಳುವುದರಿಂದ ಊಜಿಯ ಪರಿಣಾಮಕಾರಿ ನಿರ್ವಹಣೆ ಸಾಧ್ಯವಾಗುತ್ತದೆ. ಇಂತಹ ಪರಿಸರ ಸ್ನೇಹಿ ತಂತ್ರಜ್ಞಾನಗಳ ಅಳವಡಿಕೆಯಿಂದ ರೈತನ ಲಾಭ ಮಾತ್ರವಲ್ಲ ಪರಿಸರ ಸಂರಕ್ಷಣೆಯೂ ಆಗುವುದೆಂದು ಹೇಳಿದರು.
ಹಿತ್ತಲಹಳ್ಳಿಯ ಪ್ರಗತಿಪರ ರೈತ ಎಚ್.ಕೆ.ಸುರೇಶ್ ಮಾತನಾಡಿ, ತಮ್ಮ ಹುಳುಮನೆಯಲ್ಲಿ ಈ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಸುಮಾರು ಶೇ 10 ರಷ್ಟು ಅಧಿಕ ಇಳುವರಿ ಪಡೆದುದ್ದಲ್ಲದೆ ಪ್ರತಿ ಕೆಜಿ ಗೂಡಿಗೆ ಸುಮಾರು 30 ರೂಗಳಷ್ಟು ಹೆಚ್ಚಿನ ದರ ದೊರೆತಿದ್ದಾಗಿ ಹೇಳಿದರು.
ರೇಷ್ಮೆ ಉಪನಿರ್ದೇಶಕ ಭೈರಪ್ಪ ಮಾತನಾಡೀ, ಶಿಡ್ಲಘಟ್ಟ ತಾಲ್ಲೂಕು ರೇಷ್ಮೆಕೃಷಿಯಲ್ಲಿ ಮಂಚೂಣಿಯಲ್ಲಿದ್ದರೂ ದ್ವಿತಳಿ ಬೆಳೆಯಲ್ಲಿ ಬಹಳ ಹಿಂದುಳಿದಿದೆ. ಎಲ್ಲಾ ರೈತಬಾಂಧವರೂ ಇತ್ತ ಗಮನ ಹರಿಸಬೇಕಾಗಿ ಸೂಚಿಸಿದರು.
ರೇಷ್ಮೆ ಸಹಾಯಕ ನಿರ್ದೇಶಕ ರಾಮಕೃಷ್ಣಪ್ಪ ಮಾತನಾಡಿ, ದ್ವಿತಳಿಯಲ್ಲಿ ಈಗಿರುವ ಡಬಲ್ ಹೈಬ್ರಿಡ್ ತಳಿಗಳು ನಮ್ಮ ಸಾಂಪ್ರದಾಯಕ ತಳಿಗಳಿಗಿಂತ ಕಡಿಮೆ ಖರ್ಚಿನಲ್ಲಿ ಹೆಚ್ಚಿನ ಶ್ರಮವಿಲ್ಲದೆ ಬೆಳೆಯಬಹುದು. ಪ್ರತಿ ನೂರು ಮೊಟ್ಟೆಗೆ ಸುಮಾರು 15 ಸಾವಿದಷ್ಟು ಅಧಿಕ ಲಾಭ ಗಳಿಸಬಹುದು ಮತ್ತು ಮೊದಲಿನಂತೆ ಬೆಳೆ ಕಳೆದುಕೊಳ್ಳುತ್ತೇವೆಂದು ಭಯ ಪಡಬೇಕಾದ ಅಗತ್ಯವಿಲ್ಲ. ದ್ವಿತಳಿ ಬೆಳೆಗಾರರಿಗೆ ಸರ್ಕಾರದಿಂದ ಚಾಕಿಗೆ ಸಬ್ಸಿಡಿಯಂತಹ ಸಾಕಷ್ಟು ಕಾರ್ಯಕ್ರಮಗಳಿದ್ದು ಇದರ ಪ್ರಯೋಜನ ಪಡೆದುಕೊಳ್ಳಬೇಕಾಗಿ ತಿಳಿಹೇಳಿದರು.
ಕೃಷಿಯಲ್ಲಿ ಮಣ್ಣು ಪರೀಕ್ಷೆಯ ಮಹತ್ವವನ್ನು ರೇಷ್ಮೆಕೃಷಿ ಕಾಲೇಜಿನ ಸಹಾಯಕ ಪ್ರಾದ್ಯಾಪಕಿ ಡಾ. ನಳಿನ ತಿಳಿಸಿದರೆ, ಹಿಪ್ಪುನೇರಳೆ ತೋಟದಲ್ಲಿ ಹಸಿರೆಲೆ ಗೊಬ್ಬರವನ್ನು ಬೆಳೆದು ರಾಸಾಯನಿಕಗಳ ಶೇ 50 ರಷ್ಟು ಬಳಕೆಯನ್ನು ಕಡಿಮೆ ಮಾಡಿಕೊಳ್ಳಬಹುದೆಂದು ಬೇಸಾಯ ಶಾಸ್ತ್ರಜ್ಞೆ ಅಮೃತ ತಿಳಿಸಿದರು.
ಶಿಡ್ಲಘಟ್ಟ ರೇಷ್ಮೆ ರೈತ ಉತ್ಪಾದಕ ಕಂಪನಿ ಅಧ್ಯಕ್ಷ ವೆಂಕಟಸ್ವಾಮಿರೆಡ್ಡಿ, ಸಿಇಒ ಜನಾರ್ಧನಮೂರ್ತಿ, ಬೋದಗೂರು, ಹಿತ್ತಲಹಳ್ಳಿ, ಮಳಮಾಚನಹಳ್ಳಿ, ಗಿಡ್ನಹಳ್ಳಿ ಮೊದಲಾದ ಗ್ರಾಮಗಳ ಸುಮಾರು 50 ಜನ ರೈತರು ಕ್ಷೇತ್ರೋತ್ಸವದಲ್ಲಿ ಭಾಗವಹಿಸಿದ್ದರು.
ಸೇವಾ ಮನೋಭಾವ ಬೆಳೆಸಲು “ಮುಷ್ಠಿ ತುಂಬ ರಾಗಿ” ಯೋಜನೆ
ತಾಲ್ಲೂಕಿನ ಭಕ್ತರಹಳ್ಳಿಯ ಬಿ.ಎಂ.ವಿ ವಿದ್ಯಾಸಂಸ್ಥೆಯಲ್ಲಿ ಶನಿವಾರ “ಮುಷ್ಠಿ ತುಂಬ ಅಕ್ಕಿ ಮತ್ತು ರಾಗಿ” ಯೋಜನೆಯಲ್ಲಿ ವಿದ್ಯಾರ್ಥಿಗಳು ಸಂಗ್ರಹಿಸಿದ್ದ ಐದು ಕ್ವಿಂಟಾಲ್ ರಾಗಿ ಮತ್ತು ಒಂದು ಕ್ವಿಂಟಾಲ್ ಅಕ್ಕಿಯನ್ನು ಮಹಿಳಾ ಹಕ್ಕುಗಳಿಗೆ ಹೋರಾಡುವ ವಿಮೋಚನಾ ಸಂಸ್ಥೆಯವರಿಗೆ ನೀಡುವ ಕಾರ್ಯಕ್ರಮದಲ್ಲಿ ಬಿ.ಎಂ.ವಿ ವಿದ್ಯಾಸಂಸ್ಥೆ ಕಾರ್ಯದರ್ಶಿ ಎಲ್.ಕಾಳಪ್ಪ ಮಾತನಾಡಿದರು.
ಸ್ವಂತಕ್ಕಿಂತ ಸೇವೆ ಅಮೂಲ್ಯವಾದದ್ದು ಹಾಗೂ ವಿದ್ಯಾರ್ಥಿಗಳಲ್ಲಿ ಎಳೆಯ ವಯಸ್ಸಿನಲ್ಲಿಯೇ ಸೇವಾ ಮನೋಭಾವವನ್ನು ಬೆಳೆಸುವ ಉದ್ದೇಶದಿಂದ ಕಳೆದ ನಾಲ್ಕು ವರ್ಷಗಳಿಂದ “ಮುಷ್ಠಿ ತುಂಬ ರಾಗಿ” ಯೋಜನೆಯನ್ನು ನಡೆಸಲಾಗುತ್ತಿದೆ ಎಂದು ಅವರು ತಿಳಿಸಿದರು.
ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಬದ್ಧತೆ ಮತ್ತು ಸೇವಾ ಮನೋಭಾವವನ್ನು ಬೆಳೆಸುವ ಉದ್ದೇಶದಿಂದ ಕಳೆದ ಐದು ವರ್ಷಗಳ ಹಿಂದೆ ಶಾಲೆಯಲ್ಲಿ ರೋಟರಿ ಇಂಟರಾಕ್ಟ್ ಕ್ಲಬ್ಬನ್ನು ಸ್ಥಾಪಿಸಲಾಯಿತು. ರೋಟರಿ ಚಟುವಟಿಕೆಗಳಲ್ಲಿ ಮಕ್ಕಳು ಸಣ್ಣ ವಯಸ್ಸಿನಿಂದಲೇ ಸಕ್ರಿಯವಾಗಿ ಪಾಲ್ಗೊಳ್ಳುವುದರಿಂದ ಸಾಮರ್ಥ್ಯ ವೃದ್ಧಿ ಹಾಗೂ ವ್ಯಕ್ತಿತ್ವ ವಿಕಸನ ಸಾಧ್ಯವಾಗುತ್ತದೆ. ರೋಟರಿ ಇಂಟರಾಕ್ಟ್ ಕ್ಲಬ್ ನ ಅಡಿಯಲ್ಲಿ ಮಕ್ಕಳು ಪಲ್ಸ್ ಪೋಲಿಯೋ, ಸ್ವಚ್ಛಗ್ರಾಮ, “ಮುಷ್ಠಿ ತುಂಬ ಅಕ್ಕಿ ಮತ್ತು ರಾಗಿ” ಯೋಜನೆ, ಕ್ಷಯ, ಕ್ಯಾನ್ಸರ್ ರೋಗಗಳ ಕುರಿತು ಅರಿವು ಮೂಡಿಸುವುದು ಮತ್ತು ವೃದ್ಧಾಶ್ರಮಗಳಿಗೆ ಬಟ್ಟೆ ಕೂಡ ನೀಡುತ್ತಿದ್ದಾರೆ ಎಂದರು.
ಶಿಕ್ಷಕರ ದಿನಾಚರಣೆಯ ಅಂಗವಾಗಿ ವಿದ್ಯಾರ್ಥಿಗಳು ಶಿಕ್ಷಕರಿಗೆ ಹೂ ಮತ್ತು ಸಿಹಿಯನ್ನು ನೀಡಿದರು. ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳನ್ನು ಗಳಿಸಿದ್ದ ಮೇಘಶ್ರೀ (92%), ಮೇಘನಾ (90%) ಅವರಿಗೆ ನಗದು ಬಹುಮಾನವನ್ನು ನೀಡಿ ಗೌರವಿಸಲಾಯಿತು. ರೊಟೇರಿಯನ್ ರಾಜೇಂದ್ರ ಮತ್ತು ನಂದಿನಿ ಅವರು ಎಂಟನೇ ತರಗತಿಯ ಇಬ್ಬರು ಬಡ ವಿದ್ಯಾರ್ಥಿಗಳ ಮೂರೂ ವರ್ಷಗಳ ಶಾಲೆಯ ಶುಲ್ಕವನ್ನು ನೀಡುವುದಾಗಿ ತಿಳಿಸಿದರು.
ಬಿ.ಎಂ.ವಿ ವಿದ್ಯಾಸಂಸ್ಥೆಯ ರೋಟರಿ ಇಂಟರಾಕ್ಟ್ ಕ್ಲಬ್ ನ 2020-21 ಅಧ್ಯಕ್ಷೆಯಾಗಿ ಒಂಬತ್ತನೇ ತರಗತಿಯ ಲೇಖನ ಮತ್ತು ಕಾರ್ಯದರ್ಶಿಯಾಗಿ ಬಿಂದು ಅವರನ್ನು ಆಯ್ಕೆ ಮಾಡಲಾಯಿತು.
ಬಿ.ಎಂ.ವಿ ವಿದ್ಯಾಸಂಸ್ಥೆಯ ಅಧ್ಯಕ್ಷ ಬಿ.ವಿ.ಮುನೇಗೌಡ, ಟ್ರಸ್ಟಿಗಳಾದ ಎಸ್.ನಾರಾಯಣಸ್ವಾಮಿ, ಎಂ.ವೆಂಕಟಮೂರ್ತಿ, ಬಿ.ವೈ.ಅಶ್ವತ್ಥಪ್ಪ, ರೋಟರಿ ಬೆಂಗಳೂರು ಸೆಂಟಿನಿಯಲ್ ಅಧ್ಯಕ್ಷ ಬಿ.ಜೆ.ರಾಜೇಂದ್ರನ್, ಎನ್.ಟಿ.ಸಾಗರ್, ಎಂ.ಎಸ್.ಮಂಜುನಾಥ್, ನಂದಿನಿ ಜಗನ್ನಾಥ್, ಪದ್ಮಿನಿ ರಾಮ್, ನಂದಕುಮಾರ್, ನಂದೀಶ್ ರೆಡ್ಡಿ, ಮೋಹನ್ ಪೂಜಾರ್, ಮುಖ್ಯಶಿಕ್ಷಕ ಪಂಚಮೂರ್ತಿ ಹಾಜರಿದ್ದರು.
Sidlaghatta Cocoon Market Watch – 06/09/2020
ಶಿಡ್ಲಘಟ್ಟ ರೇಷ್ಮೆ ಗೂಡು ಮಾರುಕಟ್ಟೆ ಧಾರಣೆ
Date: 06/09/2020
CB Lots: 539
Qty: 28220 Kgs
Max: 320
Min: 150
Avg: 219
BV Lots: 04
Qty: 301 Kgs
Max: 220
Min: 220
AVG: 220
ಶಿಡ್ಲಘಟ್ಟ ರೇಷ್ಮೆ ಗೂಡು ಮಾರುಕಟ್ಟೆ ಧಾರಣೆ (05/09/2020)
SUBSCRIBE, LIKE & SHARE ನಮ್ಮ ಶಿಡ್ಲಘಟ್ಟ
Facebook 👍🏻
http://www.facebook.com/sidlaghatta
Instagram 📷
http://www.instagram.com/sidlaghatta
Youtube ▶️
https://www.youtube.com/c/sidlaghatta
Website 🌐
http://www.sidlaghatta.com
📱 Join WhatsApp
https://wa.me/917406303366?text=Hi
ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಭಾನುವಾರ 16 ಕೊರೊನ ಪಾಸಿಟಿವ್ ಪ್ರಕರಣ ದಾಖಲು
ನಗರ ಸೇರಿದಂತೆ ತಾಲ್ಲೂಕಿನಲ್ಲಿ ಭಾನುವಾರ 16 ಮಂದಿಗೆ ಕೊರೊನಾ ಸೋಂಕು ತಗುಲಿದೆ.
- 1ನೇ ನಗರ್ತಪೇಟೆಯ 43 ವರ್ಷದ ಮಹಿಳೆ,
- ಮುತ್ತೂರು ಬೀದಿಯ 35 ವರ್ಷದ ಮಹಿಳೆ,
- ನಿಸಾರ್ ಪಾಳ್ಯದ 42 ವರ್ಷದ ಗಂಡಸು, 33 ವರ್ಷದ ಮಹಿಳೆ,
- ಪೈಲಹಳ್ಳಿಯ 25 ವರ್ಷದ ಗಂಡಸು,
- ಮಳ್ಳೂರಿನ 38 ವರ್ಷದ ಮಹಿಳೆ, 45 ವರ್ಷದ ಮಹಿಳೆ, 50 ವರ್ಷದ ಗಂಡಸು, 56 ವರ್ಷದ ಗಂಡಸು,
- ಬಶೆಟ್ಟಹಳ್ಳಿಯ 7 ವರ್ಷದ ಹುಡುಗಿ, 58 ವರ್ಷದ ಮಹಿಳೆ, 16 ವರ್ಷದ ಯುವತಿ, 73 ವರ್ಷದ ಗಂಡಸು, 14 ವರ್ಷದ ಯುವಕ,
- H ಕ್ರಾಸ್ ನ 60 ವರ್ಷದ ಗಂಡಸು,
- ಬಯಪ್ಪನಹಳ್ಳಿಯ 40 ವರ್ಷದ ಮಹಿಳೆಗೆ ಸೋಂಕು ತಗುಲಿದೆ.
SUBSCRIBE, LIKE & SHARE ನಮ್ಮ ಶಿಡ್ಲಘಟ್ಟ
Facebook 👍🏻
http://www.facebook.com/sidlaghatta
Instagram 📷
http://www.instagram.com/sidlaghatta
Youtube ▶️
https://www.youtube.com/c/sidlaghatta
Website 🌐
http://www.sidlaghatta.com
📱 Join WhatsApp
https://wa.me/917406303366?text=Hi
Daily Panchangam – ಪಂಚಾಂಗ 6 September 2020
Daily Panchangam – ಪಂಚಾಂಗ (6 September 2020, ಭಾನುವಾರ)
ಪಂಚಾಂಗ | |
| ಸಂವತ್ಸರ | ಶಾರ್ವರಿ |
| ಮಾಸ | ಭಾದ್ರಪದ |
| ಪಕ್ಷ | ಕೃಷ್ಣಪಕ್ಷ |
| ತಿಥಿ | ಚತುರ್ಥೀ – 07:06 PM ವರೆಗೆ |
| ನಕ್ಷತ್ರ | ಅಶ್ವಿನಿ – September 7, 05:24:06 AM ವರೆಗೆ |
| ಯೋಗ | ವೃದ್ಧಿ – 05:34:57 PM ವರೆಗೆ |
| ಕರಣ | ಬಾಲವ – 07:09:05 PM ವರೆಗೆ |
| ಋತು | ಶರದ್ |
ಸೂರ್ಯ – ಚಂದ್ರೋದಯ | |
| ಸೂರ್ಯೋದಯ | 6:08:03 AM |
| ಸೂರ್ಯಾಸ್ತ | 6:26:25 PM |
| ಚಂದ್ರೋದಯ | 9:17:00 PM |
| ಚಂದ್ರಾಸ್ತ | 9:09:59 AM |
| ಚಂದ್ರ ರಾಶಿ | ಮೇಷ |
ಕಾಲ | |
| ರಾಹು ಕಾಲ | 04:54:07 PM ರಿಂದ 06:26:25 PM |
| ಯಮಗಂಡ | 12:17:14 PM ರಿಂದ 1:49:32 PM |
| ಗುಳಿಕ ಕಾಲ | 3:21:49 PM ರಿಂದ 4:54:07 PM |
ಶಿಕ್ಷಕರ ಪ್ರಾಮಾಣಿಕ ಪ್ರಯತ್ನವೇ ಚಿಕ್ಕಬಳ್ಳಾಪುರ ಜಿಲ್ಲೆ ರಾಜ್ಯದಲ್ಲಿಯೇ ಪ್ರಥಮ ಸ್ಥಾನಕ್ಕೆ ಬರಲು ಕಾರಣವಾಗಿದೆ
ತಾಲ್ಲೂಕು ಆಡಳಿತ, ತಾಲ್ಲೂಕು ಪಂಚಾಯಿತಿ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಹನುಮಂತಪುರ ಗೇಟ್ ಬಳಿಯಿರುವ ಬಿ.ಜಿ.ಎಸ್ ವಿದ್ಯಾಸಂಸ್ಥೆಯಲ್ಲಿ ಶನಿವಾರ ನಡೆದ ಭಾರತರತ್ನ ಡಾ.ಎಸ್.ರಾಧಾಕೃಷ್ಣನ್ ರವರ ಜನ್ಮದಿನೋತ್ಸವ ಹಾಗೂ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಸ್.ಜಿ.ನಾಗೇಶ್ ಮಾತನಾಡಿದರು.
ಕೋವಿಡ್ 19 ರ ಸಂಕಷ್ಟದ ಕಾಲದಲ್ಲಿಯೂ ತಮ್ಮ ಪ್ರಾಣ ಮುಡಿಪಾಗಿಟ್ಟು ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಶ್ರಮಿಸಿದ ಎಲ್ಲಾ ಶಿಕ್ಷಕ ವರ್ಗದ ಪ್ರಾಮಾಣಿಕ ಪ್ರಯತ್ನವೇ ಕಳೆದ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆ ರಾಜ್ಯದಲ್ಲಿಯೇ ಪ್ರಥಮ ಸ್ಥಾನಕ್ಕೆ ಬರಲು ಕಾರಣವಾಗಿದೆ. ಇನ್ನು ಕೋವಿಡ್ ಸಂಕಷ್ಟದ ಕಾಲದಲ್ಲಿ ಮಕ್ಕಳ ಭವಿಷ್ಯ ರೂಪಿಸಲು ನಮ್ಮ ನಡೆ ನಿಮ್ಮ ಕಡೆಗೆ ಎಂಬ ದ್ಯೇಯ ವಾಖ್ಯದೊಂದಿಗೆ ಮಕ್ಕಳ ಬಳಿಗೆ ಶಿಕ್ಷಕರು ತೆರಳಿ ಪಾಠ ಹೇಳಿಕೊಡುವ ವ್ಯವಸ್ಥೆ ಮಾಡಲಾಗಿದೆ ಎಂದರು.
ಜಿಲ್ಲಾ ಪಂಚಾಯಿತಿ ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಬಂಕ್ ಮುನಿಯಪ್ಪ ಮಾತನಾಡಿ ಮಕ್ಕಳ ವ್ಯಕ್ತಿತ್ವವನ್ನು ರೂಪಿಸುತ್ತಾ ಮುಂದಿನ ಪೀಳಿಗೆಯನ್ನು ತಿದ್ದಿ ತೀಡಿ ಸಮಾಜದ ಪ್ರಗತಿಗೆ ಕಾರಣರಾಗುವ ಶಿಕ್ಷಕರಿಗೆ ಹೃದಯ ವೈಶಾಲ್ಯತೆ ಇರಬೇಕು. ಸಮಾಜದಲ್ಲಿ ಪ್ರಜ್ಞಾವಂತ ನಾಗರೀಕರಿದ್ದಾಗ ಮಾತ್ರ ಅಂತಹ ಸಮಾಜ ಆರೋಗ್ಯವಂತವಾಗಿ ಬೆಳೆಯಲು ಸಾಧ್ಯವಾಗುತ್ತದೆ. ಹಾಗಾಗಿ ಮಕ್ಕಳಿಗೆ ಸಿಗಬೇಕಾದಂತಹ ಮಾನವೀಯ ಮೌಲ್ಯಗಳುಳ್ಳ ಶಿಕ್ಷಣವನ್ನು ನೀಡಲು ಪ್ರತಿಯೊಬ್ಬ ಶಿಕ್ಷಕರು ಮುಂದಾಗಬೇಕು, ಮಕ್ಕಳ ಭವಿಷ್ಯವನ್ನು ರೂಪಿಸುವ ಗುರುತರ ಜವಾಬ್ದಾರಿ ಶಿಕ್ಷಕರ ಮೇಲಿದೆ ಎಂದು ಅವರು ತಿಳಿಸಿದರು.
ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರಾದ ಹಿರೇಬಲ್ಲ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಮನೋರ್‌ಮಣಿ.ಬಿ, ಮುತ್ತೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ದಾವೂದ್‌ಪಾಷ.ಎಸ್ ಮತ್ತು ತುಮ್ಮನಹಳ್ಳಿ ಸರ್ಕಾರಿ ಪ್ರೌಡಶಾಲೆಯ ಶಿಕ್ಷಕಿ ಮಾಲತಿ.ಎಸ್, ಸೇರಿದಂತೆ 22 ಮಂದಿ ನಿವೃತ್ತ ಶಿಕ್ಷಕರನ್ನು ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ತಾ.ಪಂ ಅಧ್ಯಕ್ಷ ಎಂ.ಕೆ.ರಾಜಶೇಖರ್, ತಾ.ಪಂ ಇಓ ಬಿ.ಶಿವಕುಮಾರ್ ತಹಸೀಲ್ದಾರ್ ಕೆ.ಅರುಂಧತಿ, ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀನಿವಾಸ್, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸುಬ್ಬಾರೆಡ್ಡಿ, ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷ ಮುನಿರಾಜು, ಮತ್ತಿತರರು ಹಾಜರಿದ್ದರು.
SUBSCRIBE, LIKE & SHARE ನಮ್ಮ ಶಿಡ್ಲಘಟ್ಟ
Facebook 👍🏻
http://www.facebook.com/sidlaghatta
Instagram 📷
http://www.instagram.com/sidlaghatta
Youtube ▶️
https://www.youtube.com/c/sidlaghatta
Website 🌐
http://www.sidlaghatta.com
📱 Join WhatsApp
https://wa.me/917406303366?text=Hi
ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಶನಿವಾರ 19 ಕೊರೊನ ಪಾಸಿಟಿವ್ ಪ್ರಕರಣ ದಾಖಲು
ನಗರ ಸೇರಿದಂತೆ ತಾಲ್ಲೂಕಿನಲ್ಲಿ ಶನಿವಾರ 19 ಮಂದಿಗೆ ಕೊರೊನಾ ಸೋಂಕು ತಗುಲಿದೆ.
- ಕೆ ಕೆ ಪೇಟೆಯ 2 ವರ್ಷದ ಹುಡುಗಿ,
- ತಾಲ್ಲೂಕು ಕಚೇರಿಯ 52 ವರ್ಷದ ಗಂಡಸು,
- ಶರಾಫ್ ರಸ್ತೆಯ 32 ವರ್ಷದ ಮಹಿಳೆ,
- ಅಂಜನಾದ್ರಿ ಕಾಲೋನಿಯ 42 ವರ್ಷದ ಗಂಡಸು,
- ಫಿಲೇಚರ್ ಕ್ವಾರ್ಟರ್ಸ್ ನ 22 ವರ್ಷದ ಗಂಡಸು,
- ಮಹಬೂಬ್ ನಗರದ 24 ವರ್ಷದ ಮಹಿಳೆ,
- ನಿಸಾರ್ ಪಾಳ್ಯದ 40 ವರ್ಷದ ಗಂಡಸು,
- ಅಬ್ಲೂಡಿನ 72 ವರ್ಷದ ಗಂಡಸು,
- ವಲಸೇನಹಳ್ಳಿಯ 50 ವರ್ಷದ ಗಂಡಸು,
- ಬಶೆಟ್ಟಹಳ್ಳಿಯ 62 ವರ್ಷದ ಗಂಡಸು, 51 ವರ್ಷದ ಗಂಡಸು,
- ಕಾಚಹಳ್ಳಿಯ 60 ವರ್ಷದ ಮಹಿಳೆ,
- ಮಳ್ಳೂರಿನ 21 ವರ್ಷದ ಗಂಡಸು, 30 ವರ್ಷದ ಗಂಡಸು,
- ಮೇಲೂರಿನ 51 ವರ್ಷದ ಗಂಡಸು,
- ಹೊಸಪೇಟೆಯ 15 ವರ್ಷದ ಯುವಕ, 37 ವರ್ಷದ ಮಹಿಳೆ,
- ಕನ್ನಪ್ಪನಹಳ್ಳಿಯ 17 ವರ್ಷದ ಯುವತಿ,
- ಬಯ್ಯಪ್ಪನಹಳ್ಳಿಯ 18 ವರ್ಷದ ಯುವಕನಿಗೆ ಸೋಂಕು ತಗುಲಿದೆ.
SUBSCRIBE, LIKE & SHARE ನಮ್ಮ ಶಿಡ್ಲಘಟ್ಟ
Facebook 👍🏻
http://www.facebook.com/sidlaghatta
Instagram 📷
http://www.instagram.com/sidlaghatta
Youtube ▶️
https://www.youtube.com/c/sidlaghatta
Website 🌐
http://www.sidlaghatta.com
📱 Join WhatsApp
https://wa.me/917406303366?text=Hi
Chintamani Agriculture Market Watch – 05/09/2020
ಚಿಂತಾಮಣಿ ಕೃಷಿ ಮಾರುಕಟ್ಟೆ ಧಾರಣೆ
Date: 05/09/2020
ಪ್ರಮಾಣ: ಕ್ವಿಂಟಲ್, ವರ್ಗ: ಸರಾಸರಿ
| ಉತ್ಪನ್ನಗಳು | ಆವಕ | ಕನಿಷ್ಠ | ಗರಿಷ್ಠ |
| ಅಕ್ಕಿ (ಸೋನ) | 2852 | 3800 | 5000 |
| ಅಕ್ಕಿ (ಹಂಸ) | 90 | 2000 | 2300 |
| ಧನಿಯಾ | 33 | 5000 | 7500 |
| ಹುಣಸೆಹಣ್ಣು | 30 | 7000 | 10000 |
| ಕ್ಯಾರಟ್ | 6 | 3000 | 4000 |
| ಬೆಂಡೆಕಾಯಿ | 8 | 2000 | 3000 |
| ಬದನೇಕಾಯಿ | 8 | 1000 | 1600 |
| ನವಿಲುಕೋಸು | 8 | 1500 | 2000 |
| ನುಗ್ಗೆಕಾಯಿ | 4 | 3000 | 4000 |
| ಗೋರಿಕಾಯಿ | 4 | 1000 | 1600 |
| ಹುರಳಿಕಾಯಿ | 10 | 2500 | 3500 |
| ಮೆಣಸಿನಕಾಯಿ | 8 | 2000 | 3000 |
| ಬಜ್ಜಿ ಮೆಣಸಿನಕಾಯಿ | 3 | 4000 | 4500 |
| ದೊಣ್ಣೆ ಮೆಣಸಿನಕಾಯಿ | 3 | 4000 | 4500 |
| ಮೂಲಂಗಿ | 10 | 1000 | 1800 |
| ಎಲೆ ಕೋಸು | 4 | 1800 | 2000 |
| ಹೂ ಕೋಸು | 5 | 1800 | 2000 |
| ಹಾಗಲಕಾಯಿ | 4 | 2000 | 2500 |
| ಹೀರೆಕಾಯಿ | 6 | 2500 | 3000 |
| ಸೌತೆಕಾಯಿ | 8 | 1000 | 1600 |
| ಆಲೂಗೆಡ್ಡೆ | 10 | 2500 | 3000 |
| ಈರುಳ್ಳಿ | 45 | 1000 | 1800 |
| ಬೆಳ್ಳುಳ್ಳಿ | 4 | 6000 | 9000 |
| ಶುಂಠಿ | 5 | 4000 | 5000 |
| ಸೀಬೆಹಣ್ಣು | 3 | 3500 | 4500 |
| ಬೀಟ್ರೂಟ್ | 6 | 1000 | 1600 |
| ಟೊಮ್ಯಾಟೋ | 6044 | 533 | 4000 |
SUBSCRIBE, LIKE & SHARE ನಮ್ಮ ಶಿಡ್ಲಘಟ್ಟ
Facebook 👍🏻
http://www.facebook.com/sidlaghatta
Instagram 📷
http://www.instagram.com/sidlaghatta
Youtube ▶️
https://www.youtube.com/c/sidlaghatta
Website 🌐
http://www.sidlaghatta.com
📱 Join WhatsApp
https://wa.me/917406303366?text=Hi
Sidlaghatta Cocoon Market Watch – 05/09/2020
ಶಿಡ್ಲಘಟ್ಟ ರೇಷ್ಮೆ ಗೂಡು ಮಾರುಕಟ್ಟೆ ಧಾರಣೆ
Date: 05/09/2020
CB Lots: 606
Qty: 33200 Kgs
Max: 340
Min: 166
Avg: 232
BV Lots: 02
Qty: 143 Kgs
Max: 268
Min: 266
AVG: 267
ಶಿಡ್ಲಘಟ್ಟ ರೇಷ್ಮೆ ಗೂಡು ಮಾರುಕಟ್ಟೆ ಧಾರಣೆ (04/09/2020)
SUBSCRIBE, LIKE & SHARE ನಮ್ಮ ಶಿಡ್ಲಘಟ್ಟ
Facebook 👍🏻
http://www.facebook.com/sidlaghatta
Instagram 📷
http://www.instagram.com/sidlaghatta
Youtube ▶️
https://www.youtube.com/c/sidlaghatta
Website 🌐
http://www.sidlaghatta.com
📱 Join WhatsApp
https://wa.me/917406303366?text=Hi
ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ತಾಲ್ಲೂಕಿನ ಮೂವರು ಶಿಕ್ಷಕರು ಭಾಜನ
2020-21 ನೇ ಸಾಲಿನ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ತಾಲ್ಲೂಕಿನ ಮೂವರು ಶಿಕ್ಷಕರು ಭಾಜನರಾಗಿದ್ದಾರೆ.
ಕಿರಿಯ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಹಿರೇಬಲ್ಲ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಮನೋರ್‌ಮಣಿ.ಬಿ, ಹಿರಿಯ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಮುತ್ತೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ದಾವೂದ್‌ಪಾಷ.ಎಸ್, ಮತ್ತು ಪ್ರೌಢಶಾಲೆಯ ವಿಭಾಗದಲ್ಲಿ ತುಮ್ಮನಹಳ್ಳಿ ಸರ್ಕಾರಿ ಪ್ರೌಡಶಾಲೆಯ ಶಿಕ್ಷಕಿ ಮಾಲತಿ.ಎಸ್, ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಯನ್ನು ಪಡೆಯುತ್ತಿದ್ದಾರೆ.
ಮನೋರ್‌ಮಣಿ.ಬಿ. ಶಿಕ್ಷಕಿ, ಹಿರೇಬಲ್ಲ.
ಕಳೆದ 22 ವರ್ಷಗಳಿಂದ ತಾಲೂಕಿನ ಕಾಳನಾಯಕನಹಳ್ಳಿ, ಜಂಗಮಕೋಟೆ ಸೇರಿದಂತೆ ಪ್ರಸ್ತುತ ಹಿರೇಬಲ್ಲ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಚಿತ್ರ ಕಲೆ ಇವರ ಹವ್ಯಾಸವಾಗಿದ್ದು 1 ರಿಂದ 3 ನೇ ತರಗತಿ ಮಕ್ಕಳಿಗೆ ಭೋದಿಸುತ್ತಾರೆ.
ದಾವೂದ್‌ಪಾಷ.ಎಸ್. ಶಿಕ್ಷಕ. ಮುತ್ತೂರು.
ತಾಲೂಕಿನ ಅಂಬಿಗಾನಹಳ್ಳಿ ಗ್ರಾಮದ ಶಾಲೆಯಲ್ಲಿ ೫ ವರ್ಷ ಸೇವೆ ಸಲ್ಲಿಸಿದ್ದು ಪ್ರಸಕ್ತ ಮುತ್ತೂರಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಳೆದ ಏಳು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ. ಆಂಗ್ಲಭಾಷೆ ಭೋದಿಸುತ್ತಾರೆ.
ಮಾಲತಿ.ಎಸ್. ಶಿಕ್ಷಕಿ. ತುಮ್ಮನಹಳ್ಳಿ.
ತಾಲೂಕಿನ ಅಬ್ಲೂಡು ಪ್ರಾಥಮಿಕ ಶಾಲೆಯಲ್ಲಿ 6 ವರ್ಷ, ಆವಲಗುರ್ಕಿಯಲ್ಲಿ 2 ವರ್ಷ ಸೇವೆ ಸಲ್ಲಿಸಿ ಕಳೆದ ಹತ್ತು ವರ್ಷಗಳಿಂದ ತುಮ್ಮನಹಳ್ಳಿ ಸರ್ಕಾರಿ ಪ್ರೌಡಶಾಲೆಯಲ್ಲಿ ಕನ್ನಡ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಪ್ರಾಥಮಿಕ ಶಾಲೆಯಲ್ಲಿ ಹಿಂದಿ ಭಾಷೆ ಭೋದನೆ ಮಾಡುತ್ತಿದ್ದ ಇವರು ಇದೀಗ ಪ್ರೌಡಶಾಲೆಯ ಮಕ್ಕಳಿಗೆ ಕನ್ನಡ ಭಾಷೆ ಭೋದಿಸುತ್ತಾರೆ.
ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಶುಕ್ರವಾರ 44 ಕೊರೊನ ಪಾಸಿಟಿವ್ ಪ್ರಕರಣ ದಾಖಲು
ನಗರ ಸೇರಿದಂತೆ ತಾಲ್ಲೂಕಿನಲ್ಲಿ ಶುಕ್ರವಾರ 44 ಮಂದಿಗೆ ಕೊರೊನಾ ಸೋಂಕು ತಗುಲಿದೆ.
- ನಗರದ 45 ವರ್ಷದ ಮಹಿಳೆ,
- ಸಿದ್ಧಾರ್ಥನಗರದ 40 ವರ್ಷದ ಮಹಿಳೆ, 19 ವರ್ಷದ ಯುವತಿ,
- ದೇಶದಪೇಟೆಯ 67 ವರ್ಷದ ಗಂಡಸು, 41 ವರ್ಷದ ಮಹಿಳೆ,
- ಮಯೂರ ವೃತ್ತದ 48 ವರ್ಷದ ಮಹಿಳೆ,
- ಆಜಾದ್ ನಗರದ 55 ವರ್ಷದ ಗಂಡಸು, 48 ವರ್ಷದ ಮಹಿಳೆ, 2 ವರ್ಷದ ಹುಡುಗ,
- VGT ರಸ್ತೆಯ 27 ವರ್ಷದ ಗಂಡಸು,
- ಕದರಿಪಾಳ್ಯದ 70 ವರ್ಷದ ಗಂಡಸು,
- ಕೆ ಕೆ ಪೇಟೆಯ 37 ವರ್ಷದ ಗಂಡಸು,
- ಉಲ್ಲೂರುಪೇಟೆಯ 35 ವರ್ಷದ ಗಂಡಸು,
- ಮಹಬೂಬ್ ನಗರದ 25 ವರ್ಷದ ಮಹಿಳೆ,
- ಹುಣಸೇನಹಳ್ಳಿಯ 59 ವರ್ಷದ ಮಹಿಳೆ,
- ಗಂಜಿಗುಂಟೆಯ 21 ವರ್ಷದ ಗಂಡಸು,
- ವಾರಹುಣಸೇನಹಳ್ಳಿಯ 60 ವರ್ಷದ ಗಂಡಸು,
- ಚಿಕ್ಕದಾಸನಹಳ್ಳಿಯ 13 ವರ್ಷದ ಯುವಕ, 62 ವರ್ಷದ ಮಹಿಳೆ,
- ಜಂಗಮಕೋಟೆಯ 85 ವರ್ಷದ ಮಹಿಳೆ,
- ಹಿರೇಬಲ – ಜಂಗಮಕೋಟೆಯ 15 ವರ್ಷದ ಯುವಕ,
- ಘಟಮಾರನಹಳ್ಳಿಯ 14 ವರ್ಷದ ಯುವತಿ,
- ಹೊಸಪೇಟೆಯ 13 ವರ್ಷದ ಯುವತಿ, 40 ವರ್ಷದ ಗಂಡಸು,
- ಚೌಡಸಂದ್ರದ 33 ವರ್ಷದ ಗಂಡಸು,
- ಕೇಶವಪುರ 55 ವರ್ಷದ ಗಂಡಸು,
- ಮಳ್ಳೂರಿನ 36 ವರ್ಷದ ಮಹಿಳೆ, 21 ವರ್ಷದ ಮಹಿಳೆ, 20 ವರ್ಷದ ಮಹಿಳೆ, 13 ವರ್ಷದ ಯುವತಿ, 9 ವರ್ಷದ ಹುಡುಗ, 32 ವರ್ಷದ ಗಂಡಸು, 42 ವರ್ಷದ ಮಹಿಳೆ,
- ಬಯ್ಯಪ್ಪನಹಳ್ಳಿಯ 22 ವರ್ಷದ ಮಹಿಳೆ, 78 ವರ್ಷದ ಗಂಡಸು, 65 ವರ್ಷದ ಮಹಿಳೆ, 18 ವರ್ಷದ ಯುವಕ, 45 ವರ್ಷದ ಗಂಡಸು, 39 ವರ್ಷದ ಮಹಿಳೆ, 55 ವರ್ಷದ ಮಹಿಳೆ, 34 ವರ್ಷದ ಗಂಡಸು, 42 ವರ್ಷದ ಗಂಡಸು, 60 ವರ್ಷದ ಗಂಡಸು, 48 ವರ್ಷದ ಗಂಡಸಿಗೆ ಸೋಂಕು ತಗುಲಿದೆ.

