Home Blog Page 359

ಪ್ರೌಢಶಾಲಾ ಶಿಕ್ಷಕರ ಹಿಂದಿ ಮತ್ತು ಸಮಾಜವಿಜ್ಞಾನ ವಿಷಯ ಕಾರ್ಯಾಗಾರ

0

ತಾಲ್ಲೂಕಿನ ಗಂಜಿಗುಂಟೆ ಬಳಿ ೧೧ ನೇ ಮೈಲಿಯಲ್ಲಿರುವ ಮೊರಾರ್ಜಿದೇಸಾಯಿ ವಸತಿಶಾಲೆಯಲ್ಲಿ ತಾಲ್ಲೂಕು ಪ್ರೌಢಶಾಲಾ ಶಿಕ್ಷಕರ ಸಂಘದ ಆಶ್ರಯದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಪ್ರೌಢಶಾಲಾ ಶಿಕ್ಷಕರ ಹಿಂದಿ ಮತ್ತು ಸಮಾಜವಿಜ್ಞಾನ ವಿಷಯ ಕಾರ್ಯಾಗಾರವನ್ನು ಉದ್ಘಾಟಿಸಿ ಕ್ಷೇತ್ರ ಶಿಕ್ಷಣಾಧಿಕಾರಿ ಎ.ಚಂದ್ರಶೇಖರಬಾಬು ಮಾತನಾಡಿದರು.
ಬದಲಾಗುತ್ತಿರುವ ಪಠ್ಯಕ್ರಮ, ಬೋಧನೆಯಲ್ಲಿ ತಂತ್ರಜ್ಞಾನ ಬಳಕೆಗೆ ಹೊಂದಿಕೊಳ್ಳಲು ಶಿಕ್ಷಕರು ನಿರಂತರ ಅಧ್ಯಯನಶೀಲರೂ, ಕ್ರಿಯಾಶೀಲರೂ ಆಗಬೇಕು. ಆ ಮೂಲಕ ವೃತ್ತಿಕೌಶಲವನ್ನು ವೃದ್ಧಿಸಿಕೊಳ್ಳಬೇಕು ಎಂದು ಅವರು ತಿಳಿಸಿದರು.
ಶಿಕ್ಷಕರು ಎಲ್ಲವನ್ನೂ ಚಿಂತನೆಗೊಳಪಡಿಸಬೇಕು. ಮಕ್ಕಳ ಕೇಂದ್ರಿತ ಕಲಿಕೆಗೆ ಪೂರಕವಾಗಿ ಕಲಿಕಾ ಬೋಧನಾ ವಿಧಾನಗಳನ್ನು ಅಳವಡಿಸಿಕೊಳ್ಳಬೇಕು. ಕಲಿಕೆಯಲ್ಲಿ ದೃಕ್‌ಶ್ರವಣೋಪಕರಣಗಳ ಬಳಕೆ, ಚಟುವಟಿಕೆ ಆದಾರಿತ ಕಲಿಕೆಗೆ ಹೆಚ್ಚು ಆದ್ಯತೆ ನೀಡಬೇಕು ಎಂದರು.
ಅಕ್ಷರದಾಸೋಹ ತಾಲ್ಲೂಕು ಸಹಾಯಕ ನಿರ್ದೇಶಕ ಆಂಜನೇಯ ಮಾತನಾಡಿ, ತಾಲ್ಲೂಕಿನಲ್ಲಿ ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳಿಗೆ ಕಲಿಕಾಸಕ್ತಿಯನ್ನುಹೆಚ್ಚಿಸುವ ನಿಟ್ಟಿನಲ್ಲಿ ಉತ್ತಮ ಪರಿಸರವನ್ನು ಕಲ್ಪಿಸಲಾಗುತ್ತಿದೆ. ಅದಕ್ಕಾಗಿ ಬೆಳಗ್ಗೆ ಮತ್ತು ಸಂಜೆ ವೇಳೆ ಪರಿಹಾರ ಬೋಧನೆ ಕೈಗೊಳ್ಳಲಾಗುತ್ತಿದೆ. ಕಲಿಕಾಹಿಂದುಳಿದ ಮಕ್ಕಳಿಗಾಗಿ ಉತ್ತೀರ್ಣ ಅಂಕಗಳನ್ನು ಗಳಿಸಲು ಪಾಸಿಂಗ್ ಪ್ಯಾಕೇಜ್ ಒದಗಿಸಲಾಗುತ್ತಿದೆ ಎಂದರು.
ತಾಲ್ಲೂಕು ಪ್ರೌಢಶಾಲಾ ಸಹಶಿಕ್ಷಕರ ಸಂಘದ ಅಧ್ಯಕ್ಷ ಬೈರಾರೆಡ್ಡಿ ಮಾತನಾಡಿ, ಎಸ್‌ಎಸ್‌ಎಲ್‌ಸಿ ಫಲಿತಾಂಶ ಉತ್ತಮಪಡಿಸಲು ಈಗಾಗಲೇ ಗಣಿತ ಮತ್ತು ವಿಜ್ಞಾನ ವಿಷಯಭೋಧಕರಿಗೆ ಪುನಶ್ಚೇತನ ಕಾರ್ಯಾಗಾರ ನಡೆಸಿದ್ದು, ಉಳಿದ ವಿಷಯಗಳ ಬೋಧಕರಿಗೂ ಕಾರ್ಯಾಗಾರಗಳನ್ನು ಯೋಜಿಸಲಾಗಿದೆ. ಶಿಕ್ಷಕರ ಸಮಸ್ಯೆಗಳ ಪರಿಹಾರಕ್ಕಾಗಿ ೨೪ ರವರೆಗೆ ತಾಲ್ಲೂಕು ಮಟ್ಟದ ಶಿಕ್ಷಣ ಅದಾಲತ್ ಇದ್ದು ಕ್ರಮಕೈಗೊಳ್ಳಲಾಗುವುದು ಎಂದರು.
ಈ ಸಂದರ್ಭದಲ್ಲಿ ಶಿಕ್ಷಣ ಸಂಯೋಜಕರಾಗಿ ಕಾರ್ಯನಿರ್ವಹಿಸಿ ವರ್ಗಾವಣೆಗೊಂಡ ಲಕ್ಷ್ಮಿನರಸಿಂಹಗೌಡ ಮತ್ತು ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕ ಎಂ.ಶಿವಕುಮಾರ್ ಅವರನ್ನು ಸನ್ಮಾನಿಸಲಾಯಿತು.
ಪ್ರೌಢಶಾಲಾ ಶಿಕ್ಷಕರ ಸಂಘದ ಜಿಲ್ಲಾ ಉಪಾಧ್ಯಕ್ಷ ಟಿ.ವಿ.ಚಂದ್ರಶೇಖರ್, ತಾಲ್ಲೂಕು ಖಾಸಗಿ ಪ್ರೌಢಶಾಲೆಗಳ ಶಿಕ್ಷಕರ ಸಂಘದ ಅಧ್ಯಕ್ಷ ಗೋಪಿನಾಥ್, ತಾಲ್ಲೂಕು ಪ್ರೌಢಶಾಲಾ ಶಿಕ್ಷಕರ ಸಂಘದ ಕಾರ್ಯದರ್ಶಿ ಎಲ್.ವೆಂಕಟರೆಡ್ಡಿ, ಸಹಕಾರ್ಯದರ್ಶಿ ಎಚ್.ಎಸ್.ರುದ್ರೇಶಮೂರ್ತಿ, ಮೊರಾರ್ಜಿದೇಸಾಯಿ ವಸತಿಶಾಲೆಯ ಮುಖ್ಯಶಿಕ್ಷಕಿ ಕುಬ್ರಾ, ತಾಲ್ಲೂಕಿನ ಪ್ರೌಢಶಾಲಾ ಶಿಕ್ಷಕರು ಹಾಜರಿದ್ದರು.

ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರ

0

ನಗರದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಗುರುವಾರ ಯೂನಿಟಿ ಸಿಲ್‌ಸಿಲಾ ಫೌಂಡೇಷನ್ ಹಾಗೂ ಭಾರತೀಯ ರೆಡ್‌ಕ್ರಾಸ್ ಸೊಸೈಟಿಯ ಸಹಯೋಗದಲ್ಲಿ ಆಯೋಜನೆ ಮಾಡಲಾಗಿದ್ದ ಐದನೇ ವರ್ಷದ ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ಉದ್ಘಾಟನೆ ಮಾಡಿ ಜಮಾತೆ ಇಸ್ಲಾಮಿ ಹಿಂದ್ ಸಲಹಾ ಸಮಿತಿ ಸದಸ್ಯ ಅಕ್ಬರ್ ಅಲಿ ಸಾಹಬ್ ಮಾತನಾಡಿದರು.
“ಹಿಂಸೆಯ ಬದಲಿಗೆ ಒಂದಾದರೂ ಜೀವವನ್ನು ಉಳಿಸಿದಲ್ಲಿ ಅದು ಮನುಕುಲದ ಬಹುದೊಡ್ಡ ಸೇವೆ” ಎಂದು ಖುರಾನ್ ನಲ್ಲಿ ಹೇಳಿದೆ. ಹಾಗಾಗಿ ರಕ್ತದಾನ ಶಿಬಿರವನ್ನು ಆಯೋಜಿಸುವ ಮೂಲಕ ಈದ್ ಮಿಲಾದ್ ಹಬ್ಬ ಅರ್ಥಪೂರ್ಣವಾಗಿದೆ ಎಂದು ಅವರು ತಿಳಿಸಿದರು.
ಜೀವವನ್ನು ಉಳಿಸುವ ರಕ್ತವನ್ನು ವೈದ್ಯಕೀಯ ವಿಜ್ಞಾನ ಗ್ರೂಪ್ ಗಳಾಗಿ ನೋಡುತ್ತದೆ ಜಾತಿ ಅಥವಾ ಧರ್ಮಗಳಿಂದಲ್ಲ. ಎಲ್ಲರ ದೇಹದಲ್ಲಿರುವುದೂ ಕೆಂಪು ಬಣ್ಣದ ರಕ್ತವೇ. ಸಾಮರಸ್ಯದ ಬದುಕು ಸಮಾಜವನ್ನು ಸ್ವಾಸ್ಥ್ಯವಾಗಿಡುತ್ತದೆ. ಹೃದಯ ವೈಶಾಲ್ಯದಿಂದ ಧರ್ಮ, ರಾಜಕೀಯ ಹಾಗೂ ಜಾತಿ ಬೇಧಗಳು ಒಡಕನ್ನು ತರದಂತೆ ವಿವೇಕದಿಂದ ನಾವು ಬದುಕಬೇಕು. ಸಮಾಜದ ಕುರಿತಾಗಿ ಕಳಕಳಿಯಿಂದ ಯುವಕರು ಒಗ್ಗೂಡಿ ರಕ್ತದಾನ ಶಿಬಿರವನ್ನು ಆಯೋಜಿಸುವ ಮೂಲಕ ಮಹಮ್ಮದ್ ಪೈಗಂಬರ್ ಜನ್ಮದಿನವನ್ನು ಸಾರ್ಥಕಗೊಳಿಸಿರುವಿರಿ ಎಂದು ಅಭಿನಂದಿಸಿದರು.
ಯೂನಿಟಿ ಸಿಲ್‌ಸಿಲಾ ಫೌಂಡೇಷನ್ ಗೌರವಾಧ್ಯಕ್ಷ ಮೊಹಮದ್ ಖಾಸಿಂ ಮಾತನಾಡಿ, ಜಾತಿ, ಮತ, ಧರ್ಮಗಳನ್ನು ಮೀರಿ ರಕ್ತದಾನ ಮಾಡುವುದರಿಂದ ಅನೇಕ ಮಂದಿಯನ್ನು ಪ್ರಾಣಾಪಾಯದಿಂದ ಪಾರು ಮಾಡಲು ಸಹಕಾರಿಯಾಗುತ್ತದೆ. ಪ್ರತಿ ಮೂರು ತಿಂಗಳಿಗೊಮ್ಮೆ ರಕ್ತದಾನ ಮಾಡುವುದರ ಮೆದುಳು, ಹೃದಯ, ಹಾಗೂ ಎಲ್ಲಾ ಅಂಗಾಂಗಗಳು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತವೆ. ಈ ಬಾರಿ ರಕ್ತದಾನ ಶಿಬಿರದೊಡನೆ ರಕ್ತದಾನದ ಕುರಿತು ಜನಜಾಗೃತಿಯನ್ನು ಮೂಡಿಸುವ ಕೆಲಸ ಮಾಡುತ್ತಿದ್ದೇವೆ ಎಂದರು.
ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ಕಾರ್ಯದರ್ಶಿ ಎನ್.ಕೆ. ಗುರುರಾಜರಾವ್, ನಗರಸಭೆ ಆಯುಕ್ತ ಚಲಪತಿ, ಯೂನಿಟಿ ಸಿಲ್‌ಸಿಲಾ ಫೌಂಡೇಶನ್‌ ಅಧ್ಯಕ್ಷ ಮೊಹಮ್ಮದ್‌ ಅಸದ್‌, ಕಾರ್ಯದರ್ಶಿ ಇಮ್ತಿಯಾಜ್‌ ಪಾಷ, ಅಕ್ರಂಪಾಷ, ಮುದಸಿರ್‌ಪಾಷ, ರಹಮತ್‌ಪಾಷ, ಜಬೀವುಲ್ಲ, ಅಮೀರ್‌ಪಾಷ, ಜಹೀರ್‌ಪಾಷ, ಮೊಹಮ್ಮದ್‌ಫಾರುಕ್‌, ಸಯ್ಯದ್‌ ತೌಫೀಕ್‌, ಶಬ್ಬೀರ್‌ಪಾಷ, ಶಂಷೀರ್‌ ಪಾಷ, ಗೌಸ್‌ಖಾನ್‌, ಟಿ.ಟಿ.ನರಸಿಂಹಪ್ಪ, ಸಮತಾ ಸೈನಿಕ ದಳದ ಶ್ರೀರಾಮ್ ಹಾಜರಿದ್ದರು.

ತಾಲ್ಲೂಕಿನಾದ್ಯಂತ ಈದ್-ಮಿಲಾದ್ ಹಬ್ಬದ ಆಚರಣೆ

0

ತಾಲ್ಲೂಕಿನಾದ್ಯಂತ ಈದ್-ಮಿಲಾದ್ ಹಬ್ಬವನ್ನು ಬುಧವಾರ ಶ್ರದ್ಧಾ ಭಕ್ತಿ ಹಾಗೂ ವಿಜೃಂಭಣೆಯಿಂದ ಆಚರಿಸಲಾಯಿತು. ಮಹಮ್ಮದ್ ಪೈಗಂಬರ್ ಜನ್ಮದಿನದಂದು ಸಂಭ್ರಮದಿಂದ ಆಚರಿಸಲಾಗುವ ಈ ಹಬ್ಬದ ಹಿನ್ನೆಲೆಯಲ್ಲಿ ನಗರದ ಪ್ರಮುಖ ಬೀದಿಗಳನ್ನು ಅಲಂಕರಿಸಲಾಗಿತ್ತು.
ಮಹಿಳೆಯರು ಸಿಹಿ ತಿಂಡಿಗಳನ್ನು ತಯಾರಿಸಿ ವಿತರಿಸಿದರು. ಕಿರಿಯರು ಮತ್ತು ಹಿರಿಯರು ಹೊಸ ಉಡುಪುಗಳನ್ನು ತೊಟ್ಟು ಸಂತಸಪಟ್ಟರು. ಮುಸ್ಲೀಮರು ಸಾಮೂಹಿಕ ಪ್ರಾರ್ಥನೆಯಲ್ಲಿ ಪಾಲ್ಗೊಂಡು ಪರಸ್ಪರ ಶುಭ ಹಾರೈಸಿದರು.
ವಿವಿಧ ಬಡಾವಣೆಗಳಲ್ಲಿರುವ ಮಸೀದಿಗಳಲ್ಲಿ ಗುಂಪುಗೂಡಿದ ಬಹುತೇಕ ಮಂದಿ ಮುಸ್ಲೀಮರು ನಂತರ ಪ್ರಮುಖ ಬೀದಿಗಳಲ್ಲಿ ಮೆರವಣಿಗೆಯಲ್ಲಿ ಸಾಗಿದರು. ಕಿರಿಯರು ಹೆಚ್ಚಿನ ಸಂಖ್ಯೆಯಲ್ಲಿ ಬಾವುಟಗಳನ್ನು ಹಿಡಿದುಕೊಂಡು ಮಹಮ್ಮದ್ ಪೈಗಂಬರ್ ಅವರನ್ನು ಸ್ಮರಿಸಿದರು. ವಿವಿಧ ರೀತಿಯ ಪ್ರಾರ್ಥನಾ ಮಂದಿರಗಳ ಪ್ರತಿಕೃತಿಗಳನ್ನು ಮಾಡಿ ಮೆರವಣಿಗೆಯಲ್ಲಿ ಕೊಂಡೊಯ್ದರು. ಪ್ರಾರ್ಥನೆ ಸಲ್ಲಿಸಿದ ಬಳಿಕ ಮನೆಗಳಲ್ಲಿ ತಯಾರಿಸಲಾಗಿದ್ದ ಸಿಹಿ ತಿಂಡಿ ವಿತರಿಸಿದರು.
ಸಂಜೆ ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ ನಡೆಸಲಾಯಿತು. ಧರ್ಮಗುರುಗಳು ಉಪದೇಶ ಬೋಧಿಸಿದರು. ಎಲ್ಲ ಮಸೀದಿಗಳ ಅಧ್ಯಕ್ಷರು, ಕಾರ್ಯದರ್ಶಿಗಳು, ಪದಾಧಿಕಾರಿಗಳು, ನಗರದ ಮುಸ್ಲಿಂ ಜನಾಂಗದ ಎಲ್ಲ ಹಿರಿಯರು ಪ್ರಾರ್ಥನೆಯಲ್ಲಿ ಪಾಲ್ಗೊಂಡಿದ್ದರು. ಹಬ್ಬದ ದಿನ ಶಾಂತಿ ಸುವ್ಯವಸ್ಥೆಗಾಗಿ ಸೂಕ್ತ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.

ತಾಲ್ಲೂಕು ಕಚೇರಿ ಸಿಬ್ಬಂದಿ ಬಡಜನರ ರಕ್ತ ಹೀರುತ್ತಿದ್ದಾರೆ – ಎಸ್.ಎಂ.ರವಿಪ್ರಕಾಶ್

0

ಪ್ರಭಾವಿಗಳ ಹಾಗೂ ರಿಯಲ್ ಎಸ್ಟೇಟ್ ಉದ್ಯಮಿಗಳ ಕೈಗೊಂಬೆಗಳಂತೆ ವರ್ತಿಸುತ್ತಿರುವ ನಗರದ ತಾಲ್ಲೂಕು ಕಚೇರಿ ಸಿಬ್ಬಂದಿ ಬಡಜನತೆ ಹಾಗೂ ರೈತರ ರಕ್ತ ಹೀರುತ್ತಿದ್ದಾರೆ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ತಾಲ್ಲೂಕು ಅಧ್ಯಕ್ಷ ಎಸ್.ಎಂ.ರವಿಪ್ರಕಾಶ್ ಆರೋಪಿಸಿದರು.
ತಾಲ್ಲೂಕು ಕಚೇರಿಯಲ್ಲಿರುವ ಉಪನೋಂದಣಾಧಿಕಾರಿ ಕಚೇರಿಯಲ್ಲಿ ದಾಖಲೆಗಳನ್ನು ಪಡೆಯಲು ರೈತರಿಂದ ದುಪ್ಪಟ್ಟು ಹಣ ಪಡೆಯುತ್ತಿರುವ ಸಿಬ್ಬಂದಿಯ ವಿರುದ್ದ ಕ್ರಮ ಜರುಗಿಸುವಂತೆ ಒತ್ತಾಯಿಸಿ ಅವರು ಮನವಿ ಸಲ್ಲಿಸಿ ಮಾತನಾಡಿದರು.
ನಗರದ ಮುದ್ದುರಾಜ್ ಎಂಬ ರೈತನಿಂದ ಇತ್ತೀಚೆಗೆ ಇಸಿ ಹಾಗೂ ಕ್ರಯಪತ್ರ ನೀಡಲು ದುಪ್ಪಟ್ಟು ಹಣ ಪಡೆದ ಸಿಬ್ಬಂದಿಯ ವಿರುದ್ದ ಅಗತ್ಯ ಕ್ರಮವಹಿಸಬೇಕು. ಇಲ್ಲವಾದಲ್ಲಿ ಸಂಘಟನೆಯಿಂದ ತಾಲ್ಲೂಕು ಕಚೇರಿ ಮುಂಭಾಗ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದರು.
ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜೆ.ಎಸ್.ವೆಂಕಟಸ್ವಾಮಿ ಮಾತನಾಡಿ, ತಾಲ್ಲೂಕು ಕಚೇರಿಯ ಅಧಿಕಾರಿಗಳು ಕೇವಲ ಮಧ್ಯವರ್ತಿಗಳ ಕೆಲಸ ಕಾರ್ಯಗಳನ್ನಷ್ಟೇ ಮಾಡುವ ಮೂಲಕ ಕಚೇರಿಯ ತುಂಬಾ ಮಧ್ಯವರ್ತಿಗಳನ್ನು ಪೋಷಿಸಿಕೊಂಡಿದ್ದಾರೆ. ಕೂಡಲೇ ತಾಲ್ಲೂಕು ಕಚೇರಿಯಲ್ಲಿ ಮಧ್ಯವರ್ತಿಗಳ ಹಾವಳಿ ತಪ್ಪಿಸುವುದೂ ಹಾಗೂ ಯಾವ ಯಾವ ದಾಖಲೆಗೆ ಎಷ್ಟು ಹಣ ಸರ್ಕಾರಕ್ಕೆ ಪಾವತಿಸಬೇಕು ಎಂಬ ಫಲಕ ಅಳವಡಿಸಬೇಕು. ಕಡ್ಡಾಯವಾಗಿ ರೈತರಿಂದ ಮತ್ತು ನಾಗರಿಕರಿಂದ ಪಡೆದ ಹಣಕ್ಕೆ ಸೂಕ್ತ ರಸೀದಿ ನೀಡುವ ವ್ಯವಸ್ಥೆ ಮಾಡಬೇಕು. ಎಲ್ಲಾ ಕೊಠಡಿಗಳಿಗೂ ಸಿಸಿ ಕ್ಯಾಮೆರಾ ಅಳವಡಿಸಲು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿ ಮನವಿ ಪತ್ರವನ್ನು ಉಪನೋಂದಣಾಧಿಕಾರಿ ಪ್ರಸಾದ್‌ಕುಮಾರ್‌ ಅವರಿಗೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ರೈತ ಸಂಘದ ತಾಲ್ಲೂಕು ಕಾರ್ಯದರ್ಶಿ ಪ್ರತೀಶ್, ರೈತ ಮುಖಂಡ ಮುದ್ದುರಾಜ್ ಹಾಜರಿದ್ದರು.

ಸರಸ್ವತಿ ಕಾನ್ವೆಂಟ್ ಶಾಲೆಯ ಅಂಗಳದಲ್ಲಿ ವಚನ ಸಾಹಿತ್ಯ ಸಿಂಚನ ಕಾರ್ಯಕ್ರಮ

0

ನಗರದ ಸರಸ್ವತಿ ಕಾನ್ವೆಂಟ್ ನಲ್ಲಿ ಸೋಮವಾರ ತಾಲ್ಲೂಕು ವಚನ ಸಾಹಿತ್ಯ ಪರಿಷತ್ತಿನಿಂದ ಹಮ್ಮಿಕೊಂಡಿದ್ದ ಶಾಲೆಯ ಅಂಗಳದಲ್ಲಿ ವಚನ ಸಾಹಿತ್ಯ ಸಿಂಚನ ಕಾರ್ಯಕ್ರಮದಲ್ಲಿ ಶಾಸಕ ವಿ.ಮುನಿಯಪ್ಪ ಮಾತನಾಡಿದರು.
ವಚನ ಸಾಹಿತ್ಯದಿಂದ ವ್ಯಕ್ತಿತ್ವ ವಿಕಸನ ಸಾಧ್ಯ. ದೇಶದ ಪ್ರಗತಿಗೆ ಪೂರಕವಾದ ಭ್ರಾತೃತ್ವ , ಸಹಕಾರ ಕಾಯಕ ದಾಸೋಹ ಜೀವನ ಮೌಲ್ಯಗಳನ್ನು ಸಾಹಿತ್ಯ ತಿಳಿಸುತ್ತದೆ ಎಂದು ಅವರು ತಿಳಿಸಿದರು.
ವಚನಗಳು ಸಮಾನತೆಯ ಮೂಲ ಮಂತ್ರವಾಗಿಸಿಕೊಂಡು ರಚನೆಯಾದವು. ಜಾತಿ, ಲಿಂಗ, ಧರ್ಮದ ಆಚರಣೆಗಳಿಗೆ ಹೊಸ ಅರ್ಥ ಹೊಸ ದಿಕ್ಕು ತೋರಿಸಿದ್ದು ವಚನಗಳು. ದಬ್ಬಾಳಿಕೆ, ಕಂದಾಚಾರಗಳಿಂದ ನಲುಗಿದ ಜನತೆಗೆ ಹೊಸ ಬದುಕನ್ನು ತೋರಿಸಿದ ಕಾರ್ಯ ವಚನಗಳು ಮಾಡಿವೆ ಎಂದರು.
ಶಾಲೆಯ ವಿದ್ಯಾರ್ಥಿಗಳು ವಚನಗಳನ್ನು ವಾಚಿಸಿದರು. ಸಾಂಸ್ಕೃತಿಕ ಕಾರ್ಯಕ್ರಮ, ಚಿತ್ರಕಲೆ ಹಾಗೂ ಪ್ರಬಂಧ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ವಿಜೇತರಿಗೆ ಬಹುಮಾನಗಳನ್ನು ನೀಡಲಾಯಿತು.
ವಿದ್ಯಾರ್ಥಿಗಳಾದ ಕಾವ್ಯ, ಕೃತಿಕಾ, ಚಿತ್ರ, ವರ್ಷಿನಿ, ಭಾವನಾ, ಲಿಖಿತ, ಗಂಗೋತ್ರಿ, ವರ್ಷ, ಮೋಹನ್, ಪುನೀತ್ ಕುಮಾರ್ ವಚನಗಳನ್ನು ವಾಚಿಸಿದರು.
ಪಶುಸಂಗೋಪನಾ ಸ್ನಾತಕೋತ್ತರ ಪದವಿಯಲ್ಲಿ ಚಿನ್ನದ ಪದಕ ವಿಜೇತೆ ಬೆಳ್ಳೂಟಿ ಬಿಂದುಜಾ, ೩೬ ವರ್ಷ ಸೇವೆ ಸಲ್ಲಿಸಿರುವ ಶಿಕ್ಷಕ ಸೋಮಶೇಖರ್, ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಜಿ.ಎನ್.ಶಿವಣ್ಣ, ಸ್ಕೌಟ್ ಮತ್ತು ಗೈಡ್ಸ್ ನ ಶೈಲಜಾ ಅವರನ್ನು ಸನ್ಮಾನಿಸಲಾಯಿತು.
ವಸಾಪ ರಾಜ್ಯ ಘಟಕದ ಅಧ್ಯಕ್ಷ ತ್ಯಾಗರಾಜ್, ತಾಲ್ಲೂಕು ಅಧ್ಯಕ್ಷ ಪಟೇಲ್ ನಾರಾಯಣಸ್ವಾಮಿ, ಸರಸ್ವತಿ ವಿದ್ಯಾಸಂಸ್ಥೆ ಅಧ್ಯಕ್ಷ ಎನ್.ಶ್ರೀಕಾಂತ್, ಕಾರ್ಯದರ್ಶಿ ನಾಗಲಕ್ಷ್ಮಿ, ಬಿ.ಟಿ.ಮುನಿಯಪ್ಪ, ವಿ.ಸುಬ್ರಮಣಿ, ಕೆ.ವಿ.ನವಮೋಹನ್, ದೇವರಾಜ್, ಬೆಳ್ಳೂಟಿ ಸಂತೋಷ್, ವಕೀಲ ಯೋಗಾನಂದ, ಬಿ.ನಾರಾಯಣಸ್ವಾಮಿ, ಸೋಮಶೇಖರ್, ಮುಖ್ಯಶಿಕ್ಷಕ ಅಗಜಾನನಮೂರ್ತಿ, ವಿ.ಕೃಷ್ಣ ಹಾಜರಿದ್ದರು.

ನವೆಂಬರ್ ೨೩ ರಿಂದ ೨೫ ರವರೆಗೂ ಮಿಂಚಿನ ನೋಂದಣಿ

0

ತಾಲ್ಲೂಕು ಕಚೇರಿಯಲ್ಲಿ ಸೋಮವಾರ ನಡೆದ ಮತದಾರರ ಸೇರ್ಪಡೆ ಕಾರ್ಯ ನಡೆಸುತ್ತಿರುವ ಮತದಾರರ ಸಮೀಕ್ಷೆದಾರರು ಹಾಗೂ ಮತಗಟ್ಟೆ ಅಧಿಕಾರಿಗಳ ಸಭೆಯಲ್ಲಿ ರಾಜ್ಯ ಚುನಾವಣೆ ಹಾಗೂ ಇ ಆಡಳಿತದ ಅಪರ ಮುಖ್ಯ ಕಾರ್ಯದರ್ಶಿ ರಾಜೀವ್ ಚಾವ್ಲಾ ಮಾತನಾಡಿದರು.
ಮತದಾರರ ಪಟ್ಟಿಗೆ ೧೮ ವರ್ಷ ತುಂಬಿದ ಯುವ ಮತದಾರರನ್ನು ಸೇರಿಸುವ “ಮಿಂಚಿನ ನೋಂದಣಿ ಅಭಿಯಾನ” ವನ್ನು ನವೆಂಬರ್ ೨೩ ರಿಂದ ೨೫ ರವರೆಗೂ ಹಮ್ಮಿಕೊಳ್ಳಲಾಗುವುದು ಎಂದು ಅವರು ತಿಳಿಸಿದರು.
ಹದಿನೆಂಟು ವರ್ಷ ತುಂಬಿದವರು, ಹೊಸದಾಗಿ ಮದುವೆಯಾಗಿ ತಾಲ್ಲೂಕಿಗೆ ಬಂದಿರುವವರು, ವಲಸೆ ಬಂದಿರುವವರು, ಎಲ್ಲ ವರ್ಗದವರನ್ನೂ ಸಮೀಕ್ಷೆ ಮಾಡಿ ಅರ್ಹರನ್ನು ಮತದಾರರ ಪಟ್ಟಿಗೆ ಸೇರಿಸಿ. ಈ ಬಗ್ಗೆ ಉಸ್ತುವಾರಿ ಅಧಿಕಾರಿಗಳು ಸರಿಯಾಗಿ ಮಾರ್ಗದರ್ಶನ ಮಾಡಿ ಎಂದರು.
ಮತದಾರರ ನೋಂದಣಿ ಕಾರ್ಯಕ್ಕೆ ನಿಯೋಜನೆಗೊಂಡ ಅಧಿಕಾರಿಗಳು ಕೊಟ್ಟ ಮಾಹಿತಿ, ಹೊಸ ಮತದಾರರನ್ನು ಗುರ್ತಿಸುವ ಅವರಿಂದ ಸಂಗ್ರಹಿಸಿದ ವಯಸ್ಸು, ವಿಳಾಸದ ದಾಖಲೆಗಳ ಸಂಗ್ರಹವನ್ನು ಪರಿಶೀಲಿಸಿದರು.
ಮೊಬೈಲ್ ನಂಬರ್, ಆಧಾರ್ ಸಂಖ್ಯೆ, ವಿಳಾಸವನ್ನು, ವಯಸ್ಸನ್ನು ದೃಡೀಕರಿಸುವ ದಾಖಲೆಗಳನ್ನು ಸಂಗ್ರಹಿಸಿದ್ದನ್ನು ಗಮನಿಸಿ, ಉತ್ತಮವಾಗಿ ಮತದಾರರ ನೋಂಧಣಿ ಕಾರ್ಯ ನಡೆಸುತ್ತಿದ್ದೀರಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಉಪ ವಿಭಾಗಾಧಿಕಾರಿ ಶಿವಸ್ವಾಮಿ, ತಹಶೀಲ್ದಾರ್ ಎಸ್.ಅಜಿತ್ ಕುಮಾರ್, ನಗರಸಭೆ ಪೌರಾಯುಕ್ತ ಜಿ.ಎನ್.ಚಲಪತಿ ಹಾಜರಿದ್ದರು.

“ಮಕ್ಕಳ ಗ್ರಾಮಸಭೆಯಲ್ಲಿ” ವಿದ್ಯಾರ್ಥಿಗಳಿಂದ ಸಮಸ್ಯೆಗಳ ಅನಾವರಣ

0

ತಾಲ್ಲೂಕಿನ ಮಳ್ಳೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ಗ್ರಾಮಾಂತರ ಟ್ರಸ್ಟ್, ಸಿ.ಎಂ.ಸಿ.ಎ ಸಂಸ್ಥೆ ಮತ್ತು ಗ್ರಾಮ ಪಂಚಾಯಿತಿ ಸಹಯೋಗದಲ್ಲಿ ನಡೆದ “ಮಕ್ಕಳ ಗ್ರಾಮಸಭೆಯಲ್ಲಿ” ವಿದ್ಯಾರ್ಥಿಗಳು ತಮ್ಮ ಶಾಲೆ ಹಾಗೂ ಗ್ರಾಮದ ಸಮಸ್ಯೆಗಳ ಬಗ್ಗೆ ವಿದ್ಯಾರ್ಥಿಗಳು ಮಾತನಾಡಿದರು.
ಶಾಲೆಗಳ ಬಳಿ ವಾಹನ ಸಂಚಾರ ಹೆಚ್ಚಿದ್ದು, ರಸ್ತೆ ಉಬ್ಬುಗಳನ್ನು ಮತ್ತು ಫಲಕವನ್ನು ಹಾಕಿಸಿ, ಶಾಲೆಗೆ ಗ್ರಂಥಾಲಯ ಬೇಕು, ಪತ್ರಿಕೆಗಳನ್ನು ತರಿಸಬೇಕು, ಕುಡಿಯುವ ನೀರಿನ ವ್ಯವಸ್ಥೆ ಮಾಡಿ, ಗ್ರಾಮದಲ್ಲಿ ಕಸ ಹಾಕಲು ಸಿಮೆಂಟ್ ತೊಟ್ಟಿಗಳನ್ನು ಇರಿಸಿ, ಶಾಲೆಯ ಶೌಚಾಲಯ ದುರಸ್ತಿ ಮಾಡಿಸಿ, ಶಾಲಾ ವಿದ್ಯಾರ್ಥಿಗಳು ದ್ವಿಚಕ್ರ ವಾಹನ ತರುವುದಕ್ಕೆ ಕಡಿವಾಣ ಹಾಕಿ ಮುಂತಾದ ಸಮಸ್ಯೆಗಳನ್ನು ವಿದ್ಯಾರ್ಥಿಗಳು ವಿವರಿಸಿದರು.
ಮಳ್ಳೂರಿನ ಸ್ವಾಮಿ ವಿವೇಕಾನಂದ ಪ್ರೌಡಶಾಲೆಯ ಸಿ.ನಿಖಿತಾ ಮಾತನಾಡಿ, “ನಮ್ಮ ಗ್ರಾಮದಲ್ಲಿ ಮನೆಗಳ ಪಕ್ಕದಲ್ಲಿ ತಿಪ್ಪೆಗಳನ್ನು ಹಾಕಿರುವುದುದರಿಂದ ಖಾಯಿಲೆಗಳು ಬರುತ್ತಿವೆ. ಚರಂಡಿ ವ್ಯವಸ್ಥೆಯಿಲ್ಲದೆ ಮನೆಗಳ ಬಳಿ ನೀರು ನಿಲ್ಲುತ್ತಿದೆ’ ಎಂದು ಸಮಸ್ಯೆಗಳನ್ನು ವಿವರಿಸಿದರೆ, ಕಾಚಹಳ್ಳಿಯ ಭೂಮಿಕಾ, “ನೀರಿನ ಮೂಲಕ ಹಲವು ಖಾಯಿಲೆಗಳು ಬರುತ್ತಿವೆ. ಹಾಗಾಗಿ ನಮ್ಮ ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಿಕೊಡಿ ಎಂದಳು. ಮಳ್ಳೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಅಮೃತ, ರಸ್ತೆ ಉಬ್ಬಿನ ಬಗ್ಗೆ ಪ್ರಸ್ತಾಪಿಸಿದರೆ, ಮುತ್ತೂರು ಶಾಲೆಯ ತೇಜಸ್ವಿನಿ ಓದಲು ಗ್ರಂಥಾಲಯದ ಅನುಕೂಲ ಮಾಡಿಕೊಡುವಂತೆ ವಿನಂತಿಸಿದಳು. ಮುತ್ತೂರಿನ ಋತ್ವಿಕಾ, ನಮಗೆ ಆಡಲು ಮೈದಾನವಿಲ್ಲ, ಗ್ರಾಮದಲ್ಲಿ ಕಸ ಹಾಕಲು ಸಿಮೆಂಟ್ ತೊಟ್ಟಿಗಳನ್ನು ಇಡಬೇಕೆಂದರೆ, ಮಳ್ಳೂರು ಶಾಲೆಯ ಅಕ್ಷಯ, ಶಾಲೆಯ ಆವರಣದಲ್ಲಿ ಜನರು ಕಸ ಹಾಕುತ್ತಾರೆಂದು ದೂರಿದರು.
ಮಕ್ಕಳ ಅಭಿವೃದ್ಧಿ ಅಧಿಕಾರಿ ಗೋಪಾಲ್ ಮಾತನಾಡಿ, “ಮಕ್ಕಳ ಮನಸ್ಸಿನಲ್ಲಿ ಕಲ್ಮಶವಿರುವುದಿಲ್ಲ. ಅವರು ತಮ್ಮ ಅನುಭವಕ್ಕೆ ಬಂದುದನ್ನೇ ವ್ಯಕ್ತಪಡಿಸುತ್ತಾರೆ. ಅವರ ಸಮಸ್ಯೆಗಳನ್ನು ಪರಿಹರಿಸಬೇಕಾದ್ದು ನಮ್ಮ ಕರ್ತವ್ಯ. ಮಕ್ಕಳು ತಿಳಿಸಿದ ಎಲ್ಲಾ ಸಮಸ್ಯೆಗಳಿಗೂ ಪರಿಹಾರವಿದೆ. ಸಾರ್ವಜನಿಕರು ಕೂಡ ಸಹಕರಿಸಬೇಕು. ಸ್ವಚ್ಛತೆಗೆ ಆದ್ಯತೆಯನ್ನು ನೀಡಬೇಕು. ನಮ್ಮ ಗ್ರಾಮ ಎಂಬ ಮನೋಭಾವ ಬಂದರೆ ಒಗ್ಗಟ್ಟಿನಿಂದ ಅಭಿವೃದ್ಧಿಯತ್ತ ಸಾಗಬಹುದು” ಎಂದರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ರಾಧಾ ಶಿವಕುಮಾರ್, ಉಪಾಧ್ಯಕ್ಷ ಗೋಪಾಲಪ್ಪ, ಅಭಿವೃದ್ಧಿ ಅಧಿಕಾರಿ ಎಂ.ಮಂಜುನಾಥ, ಟಿ.ಎಂ.ಬೈರೇಗೌಡ, ತ್ರಿವೇಣಿ, ಕೆ.ಶ್ರೀಧರ್, ಮುಖ್ಯಶಿಕ್ಷಕಿ ಶಕುಂತಲಮ್ಮ, ಎಂ.ರಘು, ನಾಗಮಣಿ, ಗ್ರಾಮಾಂತರ ಟ್ರಸ್ಟ್ ನ ಉಷಾಶೆಟ್ಟಿ, ಅನಂತಲಕ್ಷ್ಮಿ ಹಾಜರಿದ್ದರು.

ಗ್ರಾಮವನ್ನು ಸ್ವಚ್ಛವಾಗಿರಿಸಿಕೊಳ್ಳುವಂತೆ ವಿದ್ಯಾರ್ಥಿಗಳ ಜಾಥಾ

0

ಎಲ್ಲಾ ಕುಟುಂಬದವರೂ ಶೌಚಾಲಯವನ್ನು ಕಟ್ಟಿಕೊಂಡಿದ್ದರಿಂದ “ಬಯಲು ಶೌಚಾಲಯ ಮುಕ್ತ ಗ್ರಾಮ ಪಂಚಾಯಿತಿ” ಎಂದು ನಮ್ಮ ಗ್ರಾಮ ಪಂಚಾಯಿತಿ ಕರೆಸಿಕೊಳ್ಳಲು ಸಾಧ್ಯವಾಯಿತು. ಸರ್ಕಾರಿ ಯೋಜನೆ ಸಫಲವಾಗಬೇಕಾದರೆ ಸಾರ್ವಜನಿಕರ ಸಹಕಾರ ಅಗತ್ಯ ಎಂದು ಗ್ರಾಮ ಪಂಚಾಯಿತಿ ಸದಸ್ಯ ಎ.ಎಂ.ತ್ಯಾಗರಾಜ್ ತಿಳಿಸಿದರು.
ತಾಲ್ಲೂಕಿನ ಅಪ್ಪೇಗೌಡನಹಳ್ಳಿಯಲ್ಲಿ ಸೋಮವಾರ ಸ್ವಚ್ಛ ಭಾರತ್ ಮಿಷನ್ (ಗ್ರಾಮೀಣ) ಕಾರ್ಯಕ್ರಮದ ಅಡಿಯಲ್ಲಿ ವಿಶ್ವ ಶೌಚಾಲಯ ದಿನಾಚರಣೆ ಅಂಗವಾಗಿ ಶಾಲೆಯ ಮಕ್ಕಳ ಜಾಥಾಗೆ ಚಾಲನೆ ನೀಡಿ ಅವರು ಮಾತನಾಡಿದರು.
ಪ್ರತಿ ಕುಟುಂಬವೂ ಈಗ ಶೌಚಾಲಯವನ್ನು ಹೊಂದಿದೆ. ಅದನ್ನು ಸ್ವಚ್ಛವಾಗಿರಿಸಿಕೊಳ್ಳಬೇಕು, ಬಯಲಲ್ಲಿ ಯಾರೂ ಬಹಿರ್ದೆಸೆಗೆ ಹೋಗಬಾರದು. ಗ್ರಾಮ ನಮ್ಮದೇ ಕುಟುಂಬದ ಮುಂದುವರಿಕೆಯಷ್ಟೆ. ಹಾಗಾಗಿ ಗ್ರಾಮವನ್ನು ಸಹ ಸ್ವಚ್ಛವಾಗಿಟ್ಟುಕೊಳ್ಳಬೇಕು ಎಂದರು.
ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅಂಜನ್ ಕುಮಾರ್ ಮಾತನಾಡಿ, ಸ್ವಚ್ಛತಯಿಂದ ಜೀವನದಲ್ಲಿ ಆರೋಗ್ಯ ಮತ್ತು ಅಭಿವೃದ್ಧಿಯನ್ನು ಹೊಂದಬಹುದು. ಸ್ಬಚ್ಛ ಭಾರತ ಅಭಿಯಾನವು, ಜನಾಂದೋಲನವಾಗಬೇಕು. ನಮ್ಮ ಗ್ರಾಮ, ನಮ್ಮ ಊರನ್ನು ಸ್ವಚ್ಛಗೊಳಿಸುವುದು ಸಹ ದೇಶ ಸೇವೆ. ಸ್ವಚ್ಛತೆಯೇ ದೇವರನ್ನು ತಲುಪುವ ಮಾರ್ಗ ಎಂದರು.
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಸ್ವಚ್ಛತೆಯ ಕುರಿತಾಗಿ ಘೋಷಣೆಗಳನ್ನು ಕೂಗುತ್ತಾ ಗ್ರಾಮದಲ್ಲಿ ಜಾಥಾ ನಡೆಸಿದರು. ಶೌಚಾಲಯವನ್ನು ನಿರ್ಮಿಸಿಕೊಂಡ ಗ್ರಾಮಸ್ಥರಿಗೆ ವಿದ್ಯಾರ್ಥಿಗಳು ಗುಲಾಬಿ ಹೂ ನೀಡಿ ಗ್ರಾಮ ಪಂಚಾಯಿತಿಯ ಪರವಾಗಿ ಅಭಿನಂದನೆಗಳನ್ನು ತಿಳಿಸಿದರು.
ಗ್ರಾಮ ಪಂಚಾಯಿತಿ ಸದಸ್ಯರಾದ ಉಮಾ ಚನ್ನೇಗೌಡ, ನೇತ್ರಾವತಿ, ಕಾರ್ಯದರ್ಶಿ ಶ್ರೀನಿವಾಸ್, ಬಿಲ್ ಕಲೆಕ್ಟರ್ ಶ್ರೀನಿವಾಸ್, ಸಿಬ್ಬಂದಿ ಮೋಹನ್, ಎಂ.ಪಿ.ಸಿ.ಎಸ್ ಅಧ್ಯಕ್ಷ ರವಿಪ್ರಕಾಶ್, ಜಲಗಾರ ಮುನಿರಾಜು, ಮುಖ್ಯ ಶಿಕ್ಷಕಿ ಎಂ.ವಿ.ವೆಂಕಟರತ್ನಮ್ಮ, ಶಿಕ್ಷಕರಾದ ಚಾಂದ್ ಪಾಷ, ಅಶೋಕ್ ಹಾಜರಿದ್ದರು.

ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಹೊರಟ ಶಿಡ್ಲಘಟ್ಟ ರೈತರು

0

ಕೃಷಿಗೆ ಸಂಬಂಧಪಟ್ಟ ಮತ್ತು ಎಲ್ಲಾ ರೀತಿಯ ಸ್ತ್ರೀಶಕ್ತಿ ಸಾಲ ಸಂಪೂರ್ಣ ಮನ್ನಾ ಮಾಡಬೇಕು. ರೇಷ್ಮೆ ಗೂಡಿಗೆ ಒಂದು ಕೆಜಿಗೆ ೪೫೦ ರೂ ಬೆಂಬಲ ಬೆಲೆ ಘೋಷಿಸಬೇಕು ಹಾಗೂ ಡಾ.ಸ್ವಾಮಿನಾಥನ್ ವರದಿ ಜಾರಿಗೊಳಿಸಬೇಕೆಂದು ಒತ್ತಾಯಿಸಿ ವಿಧಾನಸೌಧ ಮುತ್ತಿಗೆ ಹಾಕಲು ರೈತ ಸಂಘ( ಕೆ.ಎಸ್.ಪುಟ್ಟಣ್ಣಯ್ಯ ಬಣ)ದ ಸದಸ್ಯರು ಸೋಮವಾರ ಬಸ್ ನಿಲ್ದಾಣದ ಬಳಿ ಸೇರಿ ಘೋಷಣೆಗಳನ್ನು ಕೂಗಿದರು.
ಬಸ್ ನಿಲ್ದಾಣದ ಬಳಿ ಮಾನವ ಸರಪಣಿಯನ್ನು ನಿರ್ಮಿಸಿ ಕೆಲ ಕಾಲ ರಸ್ತೆ ತಡೆ ನಡೆಸಿದರು. ಹಲವು ಬಸ್ಸುಗಳಲ್ಲಿ ಬೆಂಗಳೂರಿಗೆ ಹೊರಟ ರೈತರು, ಅನ್ನದಾತನ ಕೂಗು ವಿಧಾನಸೌಧಕ್ಕೆ ಮುಟ್ಟಿಸುತ್ತೇವೆ ಎಂದರು.
ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜೆ.ಎಸ್.ವೆಂಕಟಸ್ವಾಮಿ ಮಾತನಾಡಿ, ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಕೊಟ್ಟ ಮಾತಿನಂತೆ ರಾಜ್ಯದ ಎಲ್ಲಾ ರೈತರ ಸಾಲ ಮನ್ನಾ ಮಾಡಬೇಕು. ಬೆಳೆ ಸಾಲ ಪಡೆದ ಎಲ್ಲಾ ರೈತರ ಸಂಪೂರ್ಣ ಸಾಲ ಮನ್ನಾ ಮಾಡಬೇಕೆಂದು ವಿಧಾನಸೌಧ ಮುತ್ತಿಗೆ ಹಾಕುತ್ತಿದ್ದೇವೆ ಎಂದರು.
ರೈತ ಸಂಘ( ಕೆ.ಎಸ್.ಪುಟ್ಟಣ್ಣಯ್ಯ ಬಣ)ದ ತಾಲ್ಲೂಕು ಅಧ್ಯಕ್ಷ ರವಿಪ್ರಕಾಶ್ ,ಅರುಣ್ ಕುಮಾರ್, ಪ್ರತೀಶ್, ಮಾರುತಿ, ಗೋವಿಂದಪ್ಪ, ಶಂಕರ್, ನಾರಾಯಣ್, ದೇವರಾಜು, ವೆಂಕಟರೋಣಪ್ಪ, ಶಶಿಕುಮಾರ್ ಹಾಜರಿದ್ದರು.

ಉದ್ಯೋಗಾಕಾಂಕ್ಷಿಗಳಿಗೆ ತಿಳುವಳಿಕೆ ಕಾರ್ಯಕ್ರಮ

0

ನಗರದ ಪ್ರಥಮ ದರ್ಜೆ ಕಾಲೇಜಿನಲ್ಲಿ ಭಾನುವಾರ ಬೃಹತ್ ಉದ್ಯೋಗ ಮೇಳದಲ್ಲಿ ಭಾಗವಹಿಸಲಿರುವ ಯುವಕ ಯುವತಿಯರಿಗೆ ನಡೆಸಿದ ತಿಳುವಳಿಕೆ ಕಾರ್ಯಕ್ರಮದಲ್ಲಿ ಉದ್ಯೋಗ ಮೇಳದ ತಾಲ್ಲೂಕು ನೋಡಲ್ ಅಧಿಕಾರಿ ಶಿವಕುಮಾರ್ ಮಾತನಾಡಿದರು.
ವಿವಿಧ ಕಂಪೆನಿಗಳು ಉದ್ಯೋಗ ಮೇಳದಲ್ಲಿ ಅರ್ಹ ಅಭ್ಯರ್ಥಿಗಳಿಗೆ ಉದ್ಯೋಗ ನೀಡಲಿದ್ದು ಅದಕ್ಕೆ ತಕ್ಕಂತಹ ಪೂರ್ವ ತಯಾರಿಯನ್ನು ಉದ್ಯೋಗಾಕಾಂಕ್ಷಿಗಳು ಮಾಡಿಕೊಳ್ಳಬೇಕು ಎಂದು ಅವರು ತಿಳಿಸಿದರು.
ಈ ಉದ್ಯೋಗ ಮೇಳದಲ್ಲಿ ಭಾಗವಹಿಸುತ್ತಿರುವ ಕಂಪೆನಿಗಳ ಬಗ್ಗೆಯೂ ಮಾಹಿತಿಯನ್ನು ನೀಡಲಾಗುತ್ತಿದೆ. ಕಂಪೆನಿಗಳು ಬಯಸುವ ವಿವಿಧ ವಿದ್ಯಾರ್ಹತೆಯುಳ್ಳವರು ತಮಗೆ ಅನುಕೂಲವಾದ ಕಂಪೆನಿಗಳ ಸಂದರ್ಶನದಲ್ಲಿ ಭಾಗವಹಿಸಬಹುದು. ಪ್ರತಿಯೊಬ್ಬರೂ ದೃಢೀಕರಿಸಲದ ಅಂಕಪಟ್ಟಿಗಳು, ಹತ್ತು ಭಾವಚಿತ್ರಗಳು, ಮತದಾನದ ಗುರುತಿನ ಚೀಟಿ, ಮುಂತಾದ ದಾಖಲೆಗಳ ಪ್ರತಿಗಳನ್ನು ತರಬೇಕು. ಈಗಾಗಲೇ ಆನ್ ಲೈನ್ ನಲ್ಲಿ ನೋಂದಣಿ ಮಾಡಿಸದವರು ಮಾಡಿಸಿ ಎಂದರು.
ಈ ಸಂದರ್ಭದಲ್ಲಿ ಅಧಿಕಾರಿಗಳು ಉದ್ಯೋಗಾಕಾಂಕ್ಷಿಗಳ ದಾಖಲೆಗಳನ್ನು ಪರಿಶೀಲಿಸಿ, ಅವರ ಅನುಮಾನಗಳನ್ನು ಪರಿಹರಿಸಿ, ಮಾರ್ಗದರ್ಶನ ಮಾಡಿದರು.
ಅಧಿಕಾರಿಗಳಾದ ಮೊಹಮ್ಮದ್ ನಸೀರ್, ಮುದ್ದುಕೃಷ್ಣಶೆಟ್ಟಿ, ಸಂತೋಷ್, ಸತೀಶ್, ಲಲಿತಾ ಹಾಜರಿದ್ದರು.

ಸರ್ಕಾರಿ ಶಾಲೆಗೆ ಉಚಿತವಾಗಿ ಕನ್ನಡ ಕೀಲಿಮಣೆ

0

ನಾದ ಕೀಲಿಮಣೆ ಕನ್ನಡ -ಭಾಷೆಯನ್ನು ಶಾಲೆ ಹಾಗೂ ಮನೆಗಳಲ್ಲಿ ಗಣಕ ಯಂತ್ರದ ಸಹಾಯದಿಂದ ಕಲಿಸಲು ಹಾಗೂ ಕಲಿಯಲು ಅನುಕೂಲ ಮಾಡಿಕೊಡುವ ಒಂದು ವಿಶೇಷ ವಿನ್ಯಾಸದ ಕೀಲಿಮಣೆ ಎಂದು ತಂತ್ರಾಂಶ ತಜ್ಞ ಗುರುಪ್ರಸಾದ್ ತಿಳಿಸಿದರು.
ತಾಲ್ಲೂಕಿನ ಚೀಮಂಗಲ ಹಾಗೂ ವರದನಾಯಕನಹಳ್ಳಿಯ ಸರ್ಕಾರಿ ಶಾಲೆಯಲ್ಲಿ ಭಾನುವಾರ “ನಾದ” ಕೀಲಿಮಣೆಯನ್ನು ಶಾಲೆಗಳ ಕಂಪ್ಯೂಟರುಗಳಿಗೆ ಉಚಿತವಾಗಿ ಅಳವಡಿಸಿ, ವಿದ್ಯಾರ್ಥಿಗಳು ಹಾಗೂ ಶಿಕ್ಷಕರಿಗೆ ಬಳಸುವುದನ್ನು ವಿವರಿಸಿ ಅವರು ಮಾತನಾಡಿದರು.
ಕೀಲಿಮಣೆಯು ಕಂಪ್ಯೂಟರಿಗೆ ಭಾಷಾ ವರ್ಣಮಾಲೆಯನ್ನು ಕಳುಹಿಸಲು ಬಳಸುವ ಸಾಧನ. ಇತ್ತೀಚಿನ ನಾಲ್ಕು ದಶಕಗಳಲ್ಲಿ ಆಂಗ್ಲ ಭಾಷಿಕ ಕೀಲಿಮಣೆ (QWERTY) ಮೇಲಿನ ಶ್ರೇಣಿಯ ಕ್ರಮದಲ್ಲಿ ಇರುವ ಈ ಸಾಧನವು ವಿಶ್ವಾದ್ಯಂತ ಬಳಕೆಯಲ್ಲಿ ಇದೆ. ಭಾರತೀಯ ಬಾಷೆಗಳ ವರ್ಣಾಕ್ಷರಗಳನ್ನು ಕಂಪ್ಯೂಟರಿನಲ್ಲಿ ಟಂಕಿಸಲು ಇದೇ ಆಂಗ್ಲ ಭಾಷಿಕ ಕೀಲಿಮಣೆಯನ್ನೇ ಬಳಸಲಾಗುತ್ತಿ ದೆ. ತಂತ್ರಾಂಶ ಪರಿಷ್ಕಾರದ (software processing) ಮೂಲಕ ಆಂಗ್ಲಭಾಷಿಕ ಕೀಲೊತ್ತುಗಳ ಮೇಲೆ ಕನ್ನಡ ಅಕ್ಷರಗಳನ್ನು ಸಂಯೋಜನೆ ಮಾಡುವುದರಿಂದ ಕಂಪ್ಯೂಟರಿನ ದೃಶ್ಯ ಪರದೆಯ ಮೇಲೆ ಕನ್ನಡ ಅಕ್ಷರಗಳ ದೃಶ್ಯ ಮೂಡಿಬರುತ್ತದೆ. ಆಂಗ್ಲಭಾಷೆಯ ಆಧಾರದ ಮೇಲೆ ನೀಡಲಾಗುತ್ತಿರುವ ಮಾತೃಭಾಷಾ-ಕಂಪ್ಯೂಟರ್ ತರಬೇತಿ ಮೂಲ ಉದ್ದೇಶವನ್ನು ಸಫಲಗೊಳಿಸುವುದಿಲ್ಲ. ಅದಕ್ಕಾಗಿ ನಾದ ಎಂಬ -ಭಾರತೀಯ ಭಾಷಾ ಕಲಿಕೆಗೆ ಒಂದು ವಿಶೇಷ ಕೀಲಿಮಣೆ ರೂಪಿಸಿದ್ದೇವೆ ಎಂದರು.
ನಾದ ಕೀಲಿಮಣೆಯ ಅಕ್ಷರ ವಿನ್ಯಾಸವನ್ನು ಭಾರತೀಯ ಬ್ರಾಹ್ಮೀ ಭಾಷೆಗಳ ವರ್ಣಮಾಲೆಯ ಸ್ವರೂಪ – ಸ್ವಭಾವ, ಸಂಯೋಜನೆಗಳಿಗೆ ಅನುಸಾರವಾಗಿ ರೂಪಿಸಲಾಗಿದೆ. ಇಲ್ಲಿ ನಾವು ಪ್ರತಿಪಾದಿಸುತ್ತಿರುವ ಅಂಶ : ಕನ್ನಡದ ಅ-ಆ-ಇ-ಈ ಕಲಿಯಲು – ಕಲಿಸಲು A-B-C-D ಯ ಊರೆಗೋಲು ಬೇಕಿಲ್ಲ. ಈ ರೀತಿಯಾಗಿ ಕನ್ನಡವನ್ನು ಕನ್ನಡವಾಗಿ ಕಲಿಸಿ ಬೆಳೆಸಲು ಶಾಲಾ ಹಂತಗಳಲ್ಲಿ ಪ್ರಾಥಮಿಕ ದೇಶ -ಭಾಷೆ, ಮಾತೃ ಭಾಷೆ, ಸಂಸ್ಕೃತಿ -ಭಾಷೆಯಾಗಿ ಬೆಳೆಸುವ ಕಾರ್ಯದಲ್ಲಿ ನಾದ ಕೀಲಿಮಣೆ ತನ್ನ ಅಳಿಲು ಸೇವೆಯನ್ನು ಸಲ್ಲಿಸುತ್ತಿದೆ ಎಂದು ಹೇಳಿದರು.
ಅಮೆರಿಕೆಯ ಕೆಲ ದಾನಿಗಳ ಸಹಾಯದಿಂದ ಈ ಕೀಲಿಮಣೆಗಳನ್ನು ಗ್ರಾಮಾಂತರ ಭಾಗದ ಸರ್ಕಾರಿ ಶಾಲೆಗಳಲ್ಲಿ ಉಚಿತವಾಗಿ ಅಳವಡಿಸುತ್ತಿದ್ದು, ಎಳೆಯ ವಯಸ್ಸಿನಿಂದಲೇ ಕನ್ನಡವನ್ನು ಕಂಪ್ಯೂಟರಿನಲ್ಲಿ ಬಳಕೆ ಮಾಡುವಂತೆ ಮಾಡುವುದು ನಮ್ಮ ಉದ್ದೇಶ ಎಂದರು.
ಕೇದಗೆ ಸಂಸ್ಥೆಯ ಮುಖ್ಯಸ್ಥ ಕೆ.ಶಿವಪ್ರಸಾದ ರಾವ್, ಮುಖ್ಯ ಶಿಕ್ಷಕ ಶಿವಶಂಕರ್, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಮಂಜುನಾಥ್, ವರದನಾಯಕನಹಳ್ಳಿ ಶಾಲೆಯ ಶಿಕ್ಷಕರಾದ ನಾಗಭೂಷಣ್, ಎಂ.ಎ.ರಾಮಕೃಷ್ಣ ಹಾಜರಿದ್ದರು.

ಶಿಡ್ಲಘಟ್ಟ ಕಸಾಪ ವತಿಯಿಂದ “ಕರ್ನಾಟಕ ಏಕೀಕರಣ” ಕಾರ್ಯಕ್ರಮ

0

ತಾಲ್ಲೂಕಿನ ಆನೆಮಡಗು ಸರ್ಕಾರಿ ಶಾಲೆಯಲ್ಲಿ ಶುಕ್ರವಾರ ಕಸಾಪ ವತಿಯಿಂದ ನಡೆಸಿದ “ಕರ್ನಾಟಕ ಏಕೀಕರಣ ಇತಿಹಾಸ” ಕುರಿತಾದ ಕಾರ್ಯಕ್ರಮದಲ್ಲಿ
ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಎ.ಎಂ.ತ್ಯಾಗರಾಜ್ ಮಾತನಾಡಿದರು.
ಭಾಷೆ ಆಧಾರಿತ ಭಾರತದ ರಾಜ್ಯಗಳ ಸ್ಥಾಪನೆಯ ಕಾಲದಲ್ಲಿ ಕನ್ನಡ ಭಾಷೆ ಮಾತನಾಡುವವರು ಹೆಚ್ಚಾಗಿದ್ದ ನಾಲ್ಕು ಭಾಗಗಳನ್ನು ಮೈಸೂರು ಸಂಸ್ಥಾನದೊಂದಿಗೆ ವಿಲೀನಗೊಳಿಸಿದ ಪ್ರಕ್ರಿಯೆಯೆ ೧೯೫೬ ರಲ್ಲಿ ಆದ ಕರ್ನಾಟಕದ ಏಕೀಕರಣ ಎಂದು ಅವರು ತಿಳಿಸಿದರು.
ಕರ್ನಾಟಕ ಏಕೀಕರಣಕ್ಕೆ ದುಡಿದು, ಏಕೀಕರಣ ಆದದ್ದನ್ನು ನೋಡಿ ಸಂತೋಷಪಟ್ಟ ಹಿರಿಯರಾದ ಆಲೂರು ವೆಂಕಟರಾಯರನ್ನು ‘ಕನ್ನಡ ಕುಲಪುರೋಹಿತ’ ಎಂದೇ ಕರೆಯಲಾಗಿದೆ. ಕನ್ನಡ ಮತ್ತು ಕರ್ನಾಟಕದ ಬಗ್ಗೆ ಆಲೂರರಿಗೆ ಇದ್ದ ಗೌರವ, ಅಭಿಮಾನ ಮತ್ತು ಕಳಕಳಿಗಳನ್ನು ಅವರ ‘ಕರ್ನಾಟಕ ಗತ ವೈಭವ’ ಕೃತಿಯಲ್ಲಿ ಗುರುತಿಸಬಹುದು. ೧೯೫೬ರ ನವೆಂಬರ್ ಒಂದನೆಯ ತಾರೀಕು ಬೆಳಗ್ಗೆ ನಡೆದ ಸಮಾರಂಭದಲ್ಲಿ ‘ವಿಶಾಲ ಮೈಸೂರು’ ರಾಜ್ಯವನ್ನು ರಾಷ್ಟ್ರಪತಿ ಬಾಬೂ ರಾಜೇಂದ್ರ ಪ್ರಸಾದ್ ಉದ್ಘಾಟಿಸಿದರು. ಅಂದೇ ಹೊಸ ರಾಜ್ಯದ ರಾಜ್ಯಪಾಲರಾಗಿ ಜಯಚಾಮರಾಜ ಒಡೆಯರ್ ಮತ್ತು ಮುಖ್ಯಮಂತ್ರಿಯಾಗಿ ಎಸ್.ನಿಜಲಿಂಗಪ್ಪ ಅವರು ಅಧಿಕಾರ ಸ್ವೀಕರಿಸಿದರು. ಅದೇ ದಿನ ಹಂಪೆಯಲ್ಲಿ ವಿರೂಪಾಕ್ಷನ ಸನ್ನಿಧಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ, ಕರ್ನಾಟಕ ಕುಲ ಪುರೋಹಿತರೆನಿಸಿ ಖ್ಯಾತರಾದ ಆಲೂರು ವೆಂಕಟರಾಯರ ನೇತೃತ್ವದಲ್ಲಿ ರಾಜ್ಯೋತ್ಸವ ಕಾರ್ಯಕ್ರಮ ನಡೆಯಿತು. ‘ಕರ್ನಾಟಕ’ ವಾದ ‘ವಿಶಾಲ ಮೈಸೂರು’ ೧೯೭೩ರ ನವೆಂಬರ್ ಒಂದನೆಯ ತಾರೀಕು ರಾಜ್ಯದ ಹೆಸರು ‘ಕರ್ನಾಟಕ’ ಎಂದು ಬದಲಾಯಿತು ಎಂದು ವಿವರಿಸಿದರು.
ಶಿಕ್ಷಕ ಲಕ್ಷ್ಮೀಕಾಂತ್ ಮಾತನಾಡಿ, ನಾವು ಮಾತೃಭಾಷೆಯನ್ನು ಪ್ರೀತಿಸಬೇಕು, ಇತರ ಭಾಷೆಗಳನ್ನು ಗೌರವಿಸ ಬೇಕು. ಭಾಷೆ ಹಾಗೂ ದೇಶಾಭಿಮಾನ ವನ್ನು ಎಲ್ಲರೂ ಬೆಳೆಸಿಕೊಂಡು ಗಡಿನಾಡಿನಲ್ಲಿ ಕನ್ನಡ ಕಟ್ಟುವ ಕೆಲಸ ಮಾಡಬೇಕು. ಕನ್ನಡ ಸಾಹಿತ್ಯ ಪರಿಷತ್ತಿನಿಂದ ಗ್ರಾಮಾಂತರ ಪ್ರದೇಶದಲ್ಲಿ ಹಾಗೂ ಗಡಿ ಭಾಗಗಳಲ್ಲಿ ಹೆಚ್ಚೆಚ್ಚು ಕಾರ್ಯಕ್ರಮಗಳು ನಡೆಯಲಿ ಎಂದರು.
ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಾದ ಸಿ.ಎಂ.ಅಂಬಿಕ, ಚಂದ್ರಶೇಖರ, ಜ್ಯೋತಿ, ಗಂಗೋತ್ರಿ, ಅಭಿಲಾಷ್ ಅವರನ್ನು ಕಸಾಪ ವತಿಯಿಂದ ಪ್ರಮಾಣಪತ್ರ ಮತ್ತು ಪುಸ್ತಕಗಳನ್ನು ನೀಡಿ ಗೌರವಿಸಲಾಯಿತು.
ಮುಖ್ಯ ಶಿಕ್ಷಕ ಕೆ.ಆರ್.ಸುಧರ್ಮ, ಶಿಕ್ಷಕರಾದ ಇಮ್ರಾನ್, ಅಮರನಾಥ್, ನಾರಾಯಣಸ್ವಾಮಿ, ಹೇಮಲತಾ, ಸರೋಜ ಆರ್ ಜೋಗಳೇಕರ್, ರಾಮಮೂರ್ತಿ, ಲಕ್ಷ್ಮೀನಾರಾಯಣ್, ಪುಷ್ಪ, ಕೃಷ್ಣಮೂರ್ತಿ, ಪ್ರಕಾಶ್ ಬಾಬು, ಕಸಾಪ ತಾಲ್ಲೂಕು ಕಾರ್ಯದರ್ಶಿ ಸತೀಶ್, ಸಂಘಸಂಸ್ಥೆಗಳ ಪ್ರತಿನಿಧಿ ಶಂಕರ್, ಸದಸ್ಯ ಮೂರ್ತಿ, ಮಂಜುನಾಥ, ಹಳೇ ವಿದ್ಯಾರ್ಥಿಗಳ ಸಂಘದ ಸದಸ್ಯರು ಹಾಜರಿದ್ದರು.

ವಿದ್ಯಾರ್ಥಿಗಳಿಂದ “ಮಕ್ಕಳ ಗ್ರಾಮಸಭೆಯಲ್ಲಿ” ಸಮಸ್ಯೆಗಳ ಅನಾವರಣ

0

ಶಾಲೆಯಲ್ಲಿನ ಕುಡಿಯುವ ನೀರಿನ ತೊಂದರೆ, ಬೀದಿ ದೀಪಗಳಿಲ್ಲದಿರುವುದು, ಶಾಲೆಯ ಆವರಣವನ್ನು ಗಲೀಜು ಮಾಡುವ ಕುಡುಕರು, ಶಾಲೆಗೆ ಬರಲು ಬಸ್ ಸೌಲಭ್ಯವಿಲ್ಲದಿರುವುದು, ಗಣಿತ ಶಿಕ್ಷಕರಿಲ್ಲದಿರುವುದು ಮುಂತಾದ ಸಮಸ್ಯೆಗಳನ್ನು ವಿದ್ಯಾರ್ಥಿಗಳು ವಿವರಿಸಿದರು.
ತಾಲ್ಲೂಕಿನ ಮಳಮಾಚನಹಳ್ಳಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ಶುಕ್ರವಾರ ಗ್ರಾಮಾಂತರ ಟ್ರಸ್ಟ್, ಸಿ.ಎಂ.ಸಿ.ಎ ಸಂಸ್ಥೆ ಮತ್ತು ಗ್ರಾಮ ಪಂಚಾಯಿತಿ ಸಹಯೋಗದಲ್ಲಿ “ಮಕ್ಕಳ ಗ್ರಾಮಸಭೆಯಲ್ಲಿ” ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳು ತಮ್ಮ ಶಾಲೆ ಹಾಗೂ ಗ್ರಾಮದ ಸಮಸ್ಯೆಗಳ ಬಗ್ಗೆ ಮಾತನಾಡಿದರು.
ಮಳಮಾಚನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿ ಗಂಗೋತ್ರಿ, ಕುಡಿಯುವ ನೀರಿನ ಸಮಸ್ಯೆಯ ಬಗ್ಗೆ ತಿಳಿಸಿದರೆ, ಬಸವಾಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿ ತರುಣ್, ಶಾಲೆಯ ಆವರಣವನ್ನು ಗಲೀಜು ಮಾಡುವ ಕುಡುಕರು, ಶಾಲೆಗೆ ಬರಲು ಬಸ್ ಸೌಕರ್ಯವಿಲ್ಲದಿರುವುದು, ರಸ್ತೆ ಹಾಗೂ ಬೀದಿ ದೀಪದ ಸಮಸ್ಯೆಯ ಬಗ್ಗೆ ಬೆಳಕು ಚೆಲ್ಲಿದನು. ಬಿಸಿಯೂಟದ ಅಡುಗೆ ಸಿಬ್ಬಂದಿ ಅಂಗನವಾಡಿ ಕಟ್ಟಡಕ್ಕೆ ಕಾಂಪೌಂಡ್ ಇಲ್ಲದಿರುವುದರ ಬಗ್ಗೆ ಹೇಳಿದರು. ಚಿಕ್ಕದಾಸರಹಳ್ಳಿಯ ಸರ್ಕಾರಿ ಶಾಲೆಯ ವಿದ್ಯಾರ್ಥಿ ಪವನ್ ಶಾಲೆಯಲ್ಲಿ ಗಂಡು ಮಕ್ಕಳಿಗೆ ಶೌಚಾಲಯವಿಲ್ಲವೆಂದು ಸಮಸ್ಯೆ ಬಗೆಹರಿಸಲು ಕೋರಿದನು.
ಗ್ರಾಮಾಂತರ ಪೊಲೀಸ್ ಠಾಣೆ ಸಬ್ ಇನ್ಸ್ ಪೆಕ್ಟರ್ ವಿಜಯರೆಡ್ಡಿ ಮಾತನಾಡಿ, “ಶಾಲೆ ದೇವಸ್ಥಾನದಂತೆ, ಮಕ್ಕಳ ಭವಿಷ್ಯ ರೂಪುಗೊಳ್ಳುವ ಶಾಲೆಯನ್ನು ಚೆನ್ನಾಗಿರಿಸಲು ಗ್ರಾಮಸ್ಥರೂ ಸಹಕರಿಸಬೇಕು. ಶಾಲೆಯ ಆವರಣದಲ್ಲಿ ಇಸ್ಪೀಟು ಆಡುವುದು ಅಥವಾ ಕುಡುಕರನ್ನು ಕಂಡಲ್ಲಿ ನಮಗೆ ನೇರವಾಗಿ ದೂರವಾಣಿ ಕರೆ ಮಾಡಿ, ತಕ್ಷಣ ಕ್ರಮ ಕೈಗೊಳ್ಳುತ್ತೇನೆ” ಎಂದು ಹೇಳಿ ಮಕ್ಕಳಿಗೆ ತಮ್ಮ ಫೋನ್ ನಂಬರ್ ಹೇಳಿದರು.
ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪವಿತ್ರ ತಮ್ಮ ವ್ಯಾಪ್ತಿಗೆ ಬರುವ ಸಮಸ್ಯೆಗಳನ್ನು ಬಗೆಹರಿಸಿಕೊಡುವುದಾಗಿ ಭರವಸೆ ನೀಡಿದರು. ವೈದ್ಯಾಧಿಕಾರಿ ಡಾ.ರಮೇಶ್, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಜಿ.ಕೆ.ಲಕ್ಷ್ಮೀದೇವಮ್ಮ, ಮಕ್ಕಳ ಹಕ್ಕುಗಳ ಜಿಲ್ಲಾ ಘಟಕದ ಅಧಿಕಾರಿ ಗೋಪಾಲ್ ಮಾತನಾಡಿ ಸಮಸ್ಯೆಗಳ ಪರಿಹಾರಕ್ಕೆ ಸಲಹೆಗಳನ್ನು ನೀಡಿದರು.
ಗ್ರಾಮ ಪಂಚಾಯಿತಿ ಸದಸ್ಯ ರಾಮಾಂಜಿ, ಕಾರ್ಯದರ್ಶಿ ರಾಜಣ್ಣ, ಗ್ರಾಮಾಂತರ ಟ್ರಸ್ಟ್ ನ ಉಷಾಶೆಟ್ಟಿ, ಮುಖ್ಯ ಶಿಕ್ಷಕಿ ಎ.ಎಂ.ಸಾವಿತ್ರಿ ದೇವಿ, ಚೈಲ್ಡ್ ರೈಟ್ಸ್ ಟ್ರಸ್ಟ್ ನ ಸತೀಶ್, ನಾಗರಾಜ್, ಸಿ.ಡಬ್ಲೂ.ಸಿ ಮೇರಿ ಚೆಲ್ಲಾದೇವಿ ಹಾಜರಿದ್ದರು.

ಡಾಲ್ಫಿನ್ ವಿದ್ಯಾಸಂಸ್ಥೆಯಲ್ಲಿ ಮಕ್ಕಳ ದಿನಾಚರಣೆಯ ಪ್ರಯುಕ್ತ “ಡಾಲ್ಫಿನ್ ಹಬ್ಬ” ಆಚರಣೆ

0

ನಗರದ ಡಾಲ್ಫಿನ್ ವಿದ್ಯಾಸಂಸ್ಥೆಯಲ್ಲಿ ಗುರುವಾರ ಮಕ್ಕಳ ಕ್ರಿಯಾಶೀಲತೆಯನ್ನು ಪ್ರದರ್ಶಿಸುವ ಸಲುವಾಗಿ ಮಕ್ಕಳ ದಿನಾಚರಣೆಯನ್ನು ವಿನೂತನವಾಗಿ ಆಚರಿಸಿದರು. ಮಕ್ಕಳ ಸೃಜನಶೀಲತೆಯನ್ನು ಪ್ರದರ್ಶಿಸುವ “ಡಾಲ್ಫಿನ್ ಹಬ್ಬ”ವನ್ನು ಆಯೋಜಿಸಲಾಗಿತ್ತು.
ವಿಜ್ಞಾನದ ವಿವಿಧ ಶಾಖೆಗಳು, ಸಮಾಜ, ಕೃಷಿ, ಗಣಿತ, ಇತಿಹಾಸ ಮುಂತಾದ ವಿಷಯಗಳಲ್ಲಿ ಮಕ್ಕಳು ಬೇರೆ ಬೇರೆ ಅಂಶಗಳನ್ನು ಆರಿಸಿಕೊಂಡು ಅವುಗಳನ್ನು ಪ್ರಾತ್ಯಕ್ಷಿಕೆಯ ರೂಪದಲ್ಲಿ ಪ್ರದರ್ಶಿಸಿ ಆಗಮಿಸಿದ ಗಣ್ಯರಿಗೆ, ಪೋಷಕರಿಗೆ ಹಾಗೂ ಇತರ ವಿದ್ಯಾರ್ಥಿಗಳಿಗೆ ವಿವರಿಸಿದರು.
ಆಹಾರದ ಮೇಳವನ್ನೂ ವಿದ್ಯಾರ್ಥಿಗಳು ಏರ್ಪಡಿಸಿದ್ದರು. ವಿವಿಧ ತಿನಿಸುಗಳನ್ನು ತಾವೇ ತಯಾರಿಸಿ ನೀಡುತ್ತಿದ್ದರು. ಹಲವಾರು ಸಿಹಿ ಖಾದ್ಯಗಳನ್ನು ಸಹ ಇರಿಸಿ ಸಹಪಾಠಿಗಳಿಗೆ ಮಾರುವ ಮೂಲಕ ವ್ಯಾಪಾರಿ ಜ್ಞಾನವನ್ನು ಸಹ ಪ್ರದರ್ಶಿಸಿದರು. ವಿವಿಧ ಕಲಾಕೃತಿಗಳನ್ನು ಮಾರಾಟದ ಮಳಿಗೆಗಳನ್ನೂ ಸಹ ವಿದ್ಯಾರ್ಥಿಗಳು ತೆರೆದಿದ್ದರು.
ಸಾಂಸ್ಕೃತಿಕ ಕಲಾ ಪ್ರದರ್ಶನವನ್ನು ಸಹ ವಿದ್ಯಾರ್ಥಿಗಳು ನಡೆಸಿಕೊಟ್ಟರು. ವಿವಿಧ ವೇಷಭೂಷಣಗಳನ್ನು ಧರಿಸಿ ರಂಜಿಸಿದರು.
ಶಾಸಕ ವಿ.ಮುನಿಯಪ್ಪ, ಕೆನರಾ ಬ್ಯಾಂಕ್ ವ್ಯವಸ್ಥಾಪಕ ಸೋಮಶೇಖರರೆಡ್ಡಿ, ಡಾಲ್ಫಿನ್ ಶಾಲೆಯ ವ್ಯವಸ್ಥಾಪಕ ನಿರ್ದೇಶಕ ಅಶೋಕ್, ನಿರ್ದೇಶಕಿ ಚಂದನಾ ಅಶೋಕ್, ಪ್ರಾಂಶುಪಾಲ ಥಾಮಸ್ ಫಿಲಿಪ್ಸ್, ಶ್ರೀನಿವಾಸರೆಡ್ಡಿ, ಲೋಕೇಶ್, ಮುನಿಶಾಮಪ್ಪ ಹಾಜರಿದ್ದರು.

ಕಸ ಹಾಕುತ್ತಿರುವ ಜಾಗವನ್ನು ಸ್ಥಳಾಂತರಿಸುವಂತೆ ಕೋರಿ ಮನವಿ

0

ತಾಲ್ಲೂಕಿನ ಹಿತ್ತಲಹಳ್ಳಿ ಗ್ರಾಮಸ್ಥರು ನಗರಸಭೆಯಿಂದ ಕಸ ಹಾಕುತ್ತಿರುವ ಜಾಗವನ್ನು ಸ್ಥಳಾಂತರಿಸುವಂತೆ ಕೋರಿ ನಗರಸಭೆ ಆಯುಕ್ತ ಚಲಪತಿ ಅವರಿಗೆ ಗುರುವಾರ ಮನವಿಯನ್ನು ಸಲ್ಲಿಸಿದರು.
ನಗರದ ತ್ಯಾಜ್ಯವನ್ನೆಲ್ಲಾ ತಂದು ಹಿತ್ತಲಹಳ್ಳಿಯಲ್ಲಿ “ಕಸ ವಿಲೇವಾರಿ ಘಟಕ”ದಲ್ಲಿ ಸುರಿಯಲಾಗುತ್ತಿದೆ. ಅಲ್ಲಿ ತ್ಯಾಜ್ಯದ ವಿಲೇವಾರಿಯಾಗಲೀ, ಸಂಸ್ಕರಣೆಯಾಗಲೀ ನಡೆಯುತ್ತಿಲ್ಲ. ಅದರ ದುರ್ವಾಸನೆಯಿಂದ ಸುತ್ತಮುತ್ತಲಿನ ರೇಷ್ಮೆ ಬೆಳೆಗಾರರಿಗೆ ಬೆಳೆಯಾಗದೇ ನಷ್ಟವಾಗುತ್ತಿದೆ. ಈ ಸ್ಥಳವನ್ನು ವಿಶ್ರಾಂತಿ ತೋಟ ಮಾಡುತ್ತೇವೆಂದು ನಗರಸಭೆಯವರು ಮಂಜೂರಾತಿಯನ್ನು ಪಡೆದಿರುತ್ತಾರೆ. ಆದರೆ ಕಸವನ್ನು ತಂದು ಸುರಿಯಲಾಗುತ್ತಿದೆ. ಈ ತ್ಯಾಜ್ಯದಿಂದಾಗಿ ಸುಮಾರು ನೂರೈವತ್ತು ನಾಯಿಗಳಿಲ್ಲಿ ಬೀಡುಬಿಟ್ಟಿವೆ. ಅವುಗಳಿಂದ ರಸ್ತೆಯಲ್ಲಿ ಹೋಗುವ ಸಾರ್ವಜನಿಕರಿಗೂ ಉಪಟಳವಾಗುತ್ತಿದೆ. ಕೂಡಲೆ ಈ ಜಾಗದಲ್ಲಿ ಕಸ ಹಾಕುವುದನ್ನು ನಿಲ್ಲಿಸಿ ಬೇರೆಡೆಗೆ ವರ್ಗಾಯಿಸಬೇಕೆಂದು ಮನವಿ ಮಾಡಿದರು.
ನಗರಸಭೆ ಆಯುಕ್ತ ಚಲಪತಿ ಮಾತನಾಡಿ, ಇನ್ನು ಹದಿನೈದು ದಿನಗಳಲ್ಲಿ ಯಂತ್ರಗಳ ಮೂಲಕ ತ್ಯಾಜ್ಯವನ್ನು ಸಂಸ್ಕರಣೆ ಮಾಡಿಸಲಾಗುವುದು. ಬೇರೆಡೆ ಜಮೀನನ್ನು ಕೋರಿದ್ದೇವೆ. ಇನ್ನು ಎರಡು ತಿಂಗಳೊಳಗೆ ನಮಗೆ ತ್ಯಾಜ್ಯ ವಿಲೇವಾರಿ ಮಾಡಲು ದೂರದಲ್ಲಿ ಯಾರಿಗೂ ತೊಂದರೆ ಆಗದಂತೆ ಜಮೀನು ಸಿಗಲಿದೆ ಎಂದು ಹೇಳಿದರು.
ಹಿತ್ತಲಹಳ್ಳಿ ಎಚ್.ಜಿ.ಗೋಪಾಲಗೌಡ, ಸುರೇಶ್, ಜಿ.ಗೋಪಾಲಗೌಡ, ಜಿ.ನಂಜುಂಡಪ್ಪ, ಕೃಷ್ಣಪ್ಪ, ಎಚ್.ಆರ್.ವೆಂಕಟೇಶ್ ಹಾಜರಿದ್ದರು.

ಜಿಲ್ಲಾ ಮಟ್ಟದ ಮಕ್ಕಳ ಹಕ್ಕುಗಳ ಸಂಸತ್ ಕಾರ್ಯಕ್ರಮ

0

ಆರ್.ಟಿ.ಇ ಕಾರ್ಯಪಡೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಯ ಸಹಯೋಗದಲ್ಲಿ ನಗರದ ಸ್ತ್ರೀಶಕ್ತಿ ಭವನದಲ್ಲಿ ಗುರುವಾರ ಆಯೋಜಿಸಲಾಗಿದ್ದ ಜಿಲ್ಲಾ ಮಟ್ಟದ ಮಕ್ಕಳ ಹಕ್ಕುಗಳ ಸಂಸತ್ ಕಾರ್ಯಕ್ರಮದಲ್ಲಿ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಬಿ.ವಿ.ನಾರಾಯಣಸ್ವಾಮಿ ಮಾತನಾಡಿದರು.
ಚಿಕ್ಕ ವಯಸ್ಸಿನಲ್ಲಿಯೇ ಮಕ್ಕಳಿಗೆ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯ ಬಗ್ಗೆ ಅರಿವು ಮೂಡಿಸುವ ಕೆಲಸವನ್ನು ಶಾಲೆಗಳು ಮಾಡಬೇಕು ಎಂದು ಅವರು ಹೇಳಿದರು.
ಪ್ರಜಾಪ್ರಭುತ್ವ ವ್ಯವಸ್ಥೆ ಹಾಗೂ ಪಂಚಾಯತ್ ರಾಜ್ ಇಲಾಖೆಯ ಕಾರ್ಯವೈಖರಿಯ ಬಗ್ಗೆ ಮಕ್ಕಳಿಗೆ ಪರಿಚಯಿಸುವ ಕೆಲಸವಾಗಬೇಕು. ಪಂಚಾಯತ್ ರಾಜ್ ವಿಕೇಂದ್ರೀಕರಣದ ಫಲವಾಗಿ ಉದಯಿಸಿರುವ ಗ್ರಾಮ ಪಂಚಾಯಿತಿ ಪ್ರತಿಯೊಬ್ಬರ ಸಮಸ್ಯೆಗಳನ್ನು ಆಲಿಸುವ ಕೆಲಸ ಮಾಡಬೇಕು. ಇನ್ನು ಈಗಾಗಲೇ ಮಕ್ಕಳು ಹೇಳಿರುವ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸುವ ಜೊತೆಗೆ ಬಗೆಹರಿಸಲು ಪ್ರಾಮಾಣಿಕ ಯತ್ನ ನಡೆಸಲಾಗುವುದು ಎಂದರು.
ಮಕ್ಕಳ ಹಕ್ಕುಗಳ ಸಂಸತ್ ಕಾರ್ಯಕ್ರಮದಲ್ಲಿ ಜಿಲ್ಲೆಯ ವಿವಿಧ ಶಾಲೆಯ ಸುಮಾರು ೬೦ ಕ್ಕೂ ಹೆಚ್ಚು ಮಕ್ಕಳು ಪಾಲ್ಗೊಂಡು ಜಿಲ್ಲೆಯಾಧ್ಯಂತ ಮಕ್ಕಳಿಗೆ ಇರುವ ಸಮಸ್ಯೆ ಹಾಗು ಬೇಡಿಕೆಗಳ ಬಗ್ಗೆ ಸಭೆಯಲ್ಲಿ ಹಾಜರಿದ್ದ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಗಮನಕ್ಕೆ ತಂದರು.
ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ರಾಜೇಂದ್ರಪ್ರಸಾದ್, ಶಿಶು ಅಭಿವೃದ್ದಿ ಅಧಿಕಾರಿ ಲಕ್ಷ್ಮಿದೇವಮ್ಮ, ಸಿಆರ್‌ಟಿ ಜಿಲ್ಲಾ ಸಂಯೋಜಕ ಜೆ.ಸತೀಶ್ ಮಾತನಾಡಿದರು.
ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷ ಮುನಿಯಪ್ಪ, ಮಹಿಳಾ ಸಮಖ್ಯಾ ಸಂಸ್ಥೆಯ ಸುವರ್ಣ, ಎಡಿಡಿ ಸಂಸ್ಥೆಯ ಮುರಳೀಧರ ಸಿಆರ್‌ಟಿ ಸಂಸ್ಥೆಯ ರಾಮಕೃಷ್ಣಪ್ಪ, ಜಯಂತಿ, ಉಮಾ, ಅಶ್ವಿನಿ, ನಳಿನಿ, ಕಾಂತರಾಜು ಹಾಜರಿದ್ದರು.

ಸ್ಕೇಟಿಂಗ್‌ನಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆ

0

ನಗರದ ನೆಹರೂ ಕ್ರೀಡಾಂಗಣದಲ್ಲಿ ಸ್ಕೇಟಿಂಗ್‌ನಲ್ಲಿ ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ವಿಜೇತರಾಗಿ ರಾಜ್ಯ ಮಟ್ಟಕ್ಕೆ ಆಯ್ಕೆಯಾದ ಕ್ರೀಡಾಪಟುಗಳನ್ನು ಕರ್ನಾಟಕ ರೋಲರ್ ಸ್ಕೇಟಿಂಗ್ ಅಸೋಸಿಯೇಷನ್ ವತಿಯಿಂದ ಮಂಗಳವಾರ ಅಭಿನಂದಿಸಲಾಯಿತು.
ಕರ್ನಾಟಕ ರೋರಲ್ ಸ್ಕೇಟಿಂಗ್ ಅಸೋಸಿಯೇಷನ್ ವತಿಯಿಂದ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಸ್ಕೇಟಿಂಗ್ ಸ್ಫರ್ಧೆಯಲ್ಲಿ ಭಾಗವಹಿಸಿ ೮ ವರ್ಷದ ಒಳಗಿನ ವಿಜೇತರಾದ ಟಿ.ಎನ್.ಚೈತ್ರ, ಗೌರವ್ , ೮-೧೨ ವರ್ಷದ ಒಳಗಿನ ಮಕ್ಕಳಲ್ಲಿ ಮಹೇಕ್ , ಗೋಕುಲ್ , ಟಿ.ಎನ್.ಹೇಮಂತ್ ಅವರನ್ನು ಅಭಿನಂದಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ರೋರಲ್ ಸ್ಕೇಟಿಂಗ್ ಅಸೋಸಿಯೇಷನ್ ಜಿಲ್ಲಾ ಘಟಕದ ಅಧ್ಯಕ್ಷ ಜಬಿವುಲ್ಲಾ, ಶಿಡ್ಲಘಟ್ಟ ಕೋಚ್ ಟಿ.ಟಿ.ನರಸಿಂಹಪ್ಪ, ಸತೀಶ್‌ಬಾಬು, ಮಂಜುನಾಥ್ ಹಾಗೂ ಕ್ರೀಡಾಪಟುಗಳ ಪೋಷಕರು ಹಾಜರಿದ್ದರು.

ಯಣ್ಣಂಗೂರು ಶ್ರೀ ಭುವನೇಶ್ವರಿ ಕನ್ನಡ ಯುವಕರ ಸಂಘದ ವತಿಯಿಂದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ

0

ತಾಲ್ಲೂಕಿನ ಯಣ್ಣಂಗೂರು ಗ್ರಾಮದ ಶ್ರೀ ಭುವನೇಶ್ವರಿ ಕನ್ನಡ ಯುವಕರ ಸಂಘದ ವತಿಯಿಂದ ಭಾನುವಾರ ಆಯೋಜಿಸಲಾಗಿದ್ದ ೬೩ ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಕನ್ನಡ ಸಾಹಿತ್ಯ ಪರಿಷತ್ ಅದ್ಯಕ್ಷ ಎ.ಎಂ.ತ್ಯಾಗರಾಜ್ ಮಾತನಾಡಿದರು.
ರಾಜ್ಯದಲ್ಲಿ ಕನ್ನಡ ಭಾಷೆ ಇನ್ನೂ ಉಳಿದಿದೆಯೆಂದರೆ ಅದು ಕೇವಲ ಗ್ರಾಮೀಣ ಪ್ರದೇಶಗಳಿಂದ ಮಾತ್ರ ಎಂದು ಅವರು ತಿಳಿಸಿದರು.
ಇಂದು ಬದಲಾಗುತ್ತಿರುವ ಜನರ ಜೀವನಶೈಲಿಯಿಂದಾಗಿ ನಗರ ಪ್ರದೇಶಗಳಲ್ಲಿ ಕನ್ನಡ ಭಾಷೆಯನ್ನು ಹುಡುಕಾಡಬೇಕಾದಂತಹ ದುಸ್ಥಿತಿ ಒದಗಿ ಬಂದಿದೆ. ನವೆಂಬರ್ ತಿಂಗಳಲ್ಲಿ ಮಾತ್ರ ಕನ್ನಡ ಮಂತ್ರ ಜಪಿಸುವ ನಾವುಗಳು ನಮ್ಮ ಮಕ್ಕಳನ್ನು ಕನ್ನಡ ಭಾಷೆಯಿಂದ ದೂರವಿಡುವುದಷ್ಟೇ ಅಲ್ಲದೇ ಇಂಗ್ಲೀಷ್ ವ್ಯಾಮೋಹ ಬೆಳೆಸುತ್ತಿದ್ದೇವೆ ಎಂದರು.
ಚಲನಚಿತ್ರ ನಿರ್ದೇಶಕ ಕೃಷ್ಣ ಮಾತನಾಡಿ, ನಾವು ವರ್ಷಕ್ಕೊಮ್ಮೆ ರಾಜ್ಯೋತ್ಸವದ ಹೆಸರಿನಲ್ಲಿ ಹಬ್ಬ ಆಚರಿಸಿದ ಮಾತ್ರಕ್ಕೆ ಭಾಷೆ ಉಳಿಯುವುದಿಲ್ಲ ಬದಲಿಗೆ ಪ್ರತಿಯೊಬ್ಬರೂ ಕನ್ನಡ ಭಾಷೆಯನ್ನು ಮಾತನಾಡುವುದು ಸೇರಿದಂತೆ ಮಾತೃಭಾಷೆಯಲ್ಲಿ ವ್ಯವಹರಿಸಿದಾಗ ಮಾತ್ರ ಭಾಷೆ ಉಳಿಯುತ್ತದೆ. ಮಾತೃ ಭಾಷೆಯ ಬಗ್ಗೆ ಅಭಿಮಾನ ಶೂನ್ಯರಾಗಿ, ಅನ್ಯ ಭಾಷೆಗಳನ್ನು ಪ್ರೀತಿಸುವ ಧೋರಣೆಯನ್ನು ಬದಿಗಿರಿಸಿ. ಕನ್ನಡ ಭಾಷೆಗೆ ಗೌರವ ನೀಡುವುದನ್ನು ಪ್ರತಿಯೊಬ್ಬರೂ ರೂಢಿಸಿಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ರಂಗಭೂಮಿ ಕಲಾವಿದ ದೇವನಹಳ್ಳಿ ದೇವರಾಜ್, ಚಿತ್ರನಟಿ ಆರ್.ಬಿಂದು, ಜನಪದ ಗಾಯಕ ಮಹೇಶ್‌ಕುಮಾರ್, ಗ್ರಾಮ ಪಂಚಾಯಿತಿ ಸದಸ್ಯರಾದ ಕೆಂಪರೆಡ್ಡಿ, ಲಕ್ಮಣಮೂರ್ತಿ, ಈರಣ್ಣ, ಮುಖಂಡರಾದ ಚನ್ನೇಗೌಡ, ಗಣೆಶಪ್ಪ, ರಾಮಕೃಷ್ಣ ಹಾಜರಿದ್ದರು.

ಅಂಗವಿಕಲರಿಗೆ ಸವಲತ್ತುಗಳನ್ನು ಸಮರ್ಪಕವಾಗಿ ತಲುಪಿಸಿ – ತಹಶೀಲ್ದಾರ್ ಎಸ್.ಅಜಿತ್‌ಕುಮಾರ್ ರೈ

0

ನಗರದ ತಾಲ್ಲೂಕು ಕಚೇರಿಯಲ್ಲಿ ಮಂಗಳವಾರ ಏರ್ಪಡಿಸಲಾಗಿದ್ದ ಅಂಗವಿಕಲರ ಕುಂದುಕೊರತೆ ಸಭೆಯಲ್ಲಿ ಅಧಿಕಾರಿಗಳನ್ನುದ್ದೇಶಿಸಿ ತಹಶೀಲ್ದಾರ್ ಎಸ್.ಅಜಿತ್‌ಕುಮಾರ್ ರೈ ಮಾತನಾಡಿದರು.
ಅಂಗವಿಕಲರಿಗೆ ಸರ್ಕಾರದಿಂದ ಬರುವ ಸವಲತ್ತುಗಳನ್ನು ಸಮರ್ಪಕವಾಗಿ ತಲುಪಿಸಲು ಎಲ್ಲಾ ಇಲಾಖೆಯ ಅಧಿಕಾರಿಗಳು ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಬೇಕು ಎಂದು ಅವರು ಹೇಳಿದರು.
ಅಂಗವಿಕಲರು ಸಮಾಜದ ಮುಖ್ಯವಾಹಿನಿಗೆ ಬರಲಿ ಎಂಬ ಉದ್ದೇಶದಿಂದ ಸರ್ಕಾರ ವಿವಿಧ ಯೋಜನೆಗಳನ್ನು ರೂಪಿಸಿದೆಯಾದರೂ ಅರ್ಹರಿಗೆ ತಲುಪುತ್ತಿಲ್ಲ ಎಂಬ ಆರೋಪಗಳಿವೆ. ಹಾಗಾಗಿ ಅರ್ಹರನ್ನು ಗುರುತಿಸಿ ಸವಲತ್ತು ಕಲ್ಪಿಸಲು ಅಧಿಕಾರಿಗಳು ಜವಾಬ್ದಾರಿಯುತವಾಗಿ ಕರ್ತವ್ಯ ನಿರ್ವಹಿಸಬೇಕು ಎಂದರು.
ವಿಕಲಚೇತನ ರಕ್ಷಣಾ ವೇಧಿಕೆ ಜಿಲ್ಲಾಧ್ಯಕ್ಷ ಸಂತೋಷ್ ಮಾತನಾಡಿ, ನಗರದ ತಾಲ್ಲೂಕು ಕಚೇರಿಯಲ್ಲಿ ವಿವಿಧ ಯೋಜನೆಗಳ ಸಹಾಯಧನ ಪಡೆಯಲು ಅರ್ಜಿ ಸಲ್ಲಿಸಲು ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿದೆ. ವೃದ್ದರೂ ಸೇರಿದಂತೆ ವಿಕಲಚೇತನರಿಗಾಗಿ ಪ್ರತ್ಯೇಕ ಕೊಠಡಿ ನಿರ್ಮಿಸಿದಲ್ಲಿ ನೇರವಾಗಿ ಫಲಾನುಭವಿಯೇ ಬಂದು ಅರ್ಜಿ ಸಲ್ಲಿಸಲು ಸಹಕಾರಿಯಾಗುತ್ತದೆ. ವಿಕಲಚೇತನರ ಮಾಸಾಸನ ನೇರವಾಗಿ ಫಲಾನುಭವಿಯ ಬ್ಯಾಂಕ್ ಖಾತೆಗೆ ಹೋಗುವಂತೆ ಕ್ರಮ ಜರುಗಿಸಬೇಕು, ವಿಕಲಚೇತನರ ಹೆಸರಿನಲ್ಲಿ ನಕಲಿ ಚೇತನರ ಹಾವಳಿ ಹೆಚ್ಚಾಗಿದ್ದು ಕೂಲಂಕುಷವಾಗಿ ಪರಿಶೀಲನೆ ನಡೆಸಿ ಅರ್ಹರಿಗೆ ಸವಲತ್ತು ಸಿಗುವಂತೆ ಮಾಡಬೇಕು ಎಂದು ಒತ್ತಾಯಿಸಿ ಮನವಿ ಸಲ್ಲಿಸಿದರು.
ಮುಂಬರುವ ದಿನಗಳಲ್ಲಿ ತಿಂಗಳಿಗೊಮ್ಮೆ ಅಂಗವಿಕಲರ ಕುಂದುಕೊರತೆ ಸಭೆ ಕರೆದು ಚರ್ಚಿಸಲು ಅಗತ್ಯ ಕ್ರಮ ಜರುಗಿಸಲಾಗುವುದು ಎಂದು ತಹಸೀಲ್ದಾರ್ ಎಸ್.ಅಜಿತ್‌ಕುಮಾರ್ ರೈ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ನಗರಸಭೆ ಪೌರಾಯುಕ್ತ ಜಿ.ಎಸ್.ಚಲಪತಿ, ತಾಲ್ಲೂಕು ಪಂಚಾಯಿತಿ ವ್ಯವಸ್ಥಾಪಕ ಪ್ರಸಾದ್, ಸಾರ್ವಜನಿಕ ಆಸ್ಪತ್ರೆಯ ವೈದ್ಯ ಡಾ.ವಿಜಯ್, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ಅನಸೂಯಮ್ಮ, ಶಿಶು ಅಭಿವೃದ್ದಿ ಅಧಿಕಾರಿ ಲಕ್ಷ್ಮಿದೇವಮ್ಮ ಹಾಜರಿದ್ದರು.

ಜಲಗಾರರ ಹೋರಾಟ ಅಂತ್ಯ

0

ಜಲಗಾರರಿಗೆ ಬಾಕಿ ಇರುವ ಹದಿನೈದು ತಿಂಗಳ ವೇತನದಲ್ಲಿ ತಕ್ಷಣಕ್ಕೆ ನಾಲ್ಕು ತಿಂಗಳ ವೇತನ ಖಾತೆಗೆ ಹಾಕುವುದು ಹಾಗೂ ಮತ್ತೆರಡು ತಿಂಗಳ ವೇತನವನ್ನು ಶನಿವಾರದೊಳಗೆ ಪಾವತಿಸುತ್ತೇವೆ ಎಂದು ನಗರಸಭೆ ಪೌರಾಯುಕ್ತರು ನೀಡಿರುವ ಭರವಸೆಯ ಹಿನ್ನಲೆಯಲ್ಲಿ ಅನಿರ್ಧಿಷ್ಟ ಹೋರಾಟ ಕೈ ಬಿಡುತ್ತಿದ್ದೇವೆ ಎಂದು ಗ್ರಾಮ ಪಂಚಾಯಿತಿ ನೌಕರರ ಸಂಘದ ಗೌರವಾಧ್ಯಕ್ಷೆ ಮಧುಲತಾ ಹೇಳಿದರು.
ನಗರದ ನಗರಸಭೆ ಕಾರ್ಯಾಲಯದ ಮುಂಭಾಗದಲ್ಲಿ ಸಿಐಟಿಯು ನೇತೃತ್ವದಲ್ಲಿ ಜಲಗಾರರು ಹಮ್ಮಿಕೊಂಡಿದ್ದ ಅನಿರ್ಧಿಷ್ಠ ಹೋರಾಟದ ಹನ್ನೆರಡನೇ ದಿನವಾದ ಮಂಗಳವಾರ ಹೋರಾಟವನ್ನು ಕೈ ಬಿಟ್ಟ ನಂತರ ಅವರು ಮಾತನಾಡಿದರು.
ಜಲಗಾರರು ತಮ್ಮ ಹದಿನೈದು ತಿಂಗಳ ವೇತನ ಸೇರಿದಂತೆ ಸಮಾನ ಕೆಲಸ ಸಮಾನ ವೇತನಕ್ಕಾಗಿ ಆಗ್ರಹಿಸಿ ನವೆಂಬರ್ ೦೨ ರ ಶುಕ್ರವಾರದಿಂದ ಹಮ್ಮಿಕೊಂಡಿದ್ದ ಅನಿರ್ಧಿಷ್ಟ ಹೋರಾಟಕ್ಕೆ ವಿವಿಧ ಸಂಘಟನೆಗಳು ಸಹ ಬೆಂಬಲ ವ್ಯಕ್ತಪಡಿಸಿದ್ದವು. ಹೋರಾಟ ಅಂಗವಾಗಿ ಇಂದಿನಿಂದ ಉಪವಾಸ ಸತ್ಯಾಗ್ರಹ ಮಾಡಲು ಸಹ ನಿರ್ಧರಿಸಿದ್ದೆವು. ಆದರೆ ಸಿಐಟಿಯು ಜಿಲ್ಲಾ ಘಟಕದ ಕೆಲ ಹಿರಿಯರು ನಗರಸಭೆ ಪೌರಾಯುಕ್ತರೊಂದಿಗೆ ಮಾತುಕತೆ ನಡೆಸಿದಾಗ ತಕ್ಷಣಕ್ಕೆ ನಾಲ್ಕು ತಿಂಗಳ ವೇತನ ಅವರ ಖಾತೆಗೆ ಹಾಕುವುದೂ ಸೇರಿದಂತೆ ಶನಿವಾರದೊಳಗೆ ಮತ್ತೆರಡು ತಿಂಗಳ ವೇತನ ಪಾವತಿಸುವುದರ ಜೊತೆಗೆ ಇವರನ್ನು ಕೆಲಸದಲ್ಲಿ ಮುಂದುವರೆಸಲು ಕ್ರಮ ಜರುಗಿಸುವ ಭರವಸೆಯನ್ನು ನೀಡಿರುವ ಹಿನ್ನಲೆಯಲ್ಲಿ ಅನಿರ್ಧಿಷ್ಟ ಹೋರಾಟ ಕೈ ಬಿಡುತ್ತಿದ್ದೇವೆ ಎಂದರು.
ಬಿಸಿಯೂಟ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷೆ ಮುನಿಲಕ್ಷ್ಮಮ್ಮ, ಜಲಗಾರರಾದ ಟಿ.ಎನ್.ರವಿ, ರಮೇಶ್, ರಾಜೇಶ್, ಆನಂದ್, ಮಂಜುನಾಥ್, ಮುರಳಿ.ಆರ್, ಬಾಬು, ನವಾಜ್ ಪಾಷಾ, ನವೀನ್‌ಕುಮಾರ್, ಕೆ.ಶ್ರೀನಿವಾಸ್, ನರಸಿಂಹಪ್ಪ ಪ್ರತಿಭಟನೆಯಲ್ಲಿ