ಗಡಿಯಲ್ಲಿನ ಸೈನಿಕರು ದೇಶದ ರಕ್ಷಣೆಗಾಗಿ ಹೋರಾಟ ಮಾಡಿದರೆ, ದೇಶದೊಳಗಿನ ಪ್ರಜೆಗಳು ಇಲ್ಲಿನ ಸಮಸ್ಯೆಗಳ ನಿವಾರಣೆಗಾಗಿ ಸೈನಿಕರಂತೆ ಹೋರಾಟ ಮಾಡುವುದು ಅನಿವಾರ್ಯವಾಗಿದೆ ಎಂದು ಸರ್ವೋದಯ ಸೇವಾ ಸಂಸ್ಥೆಯ ಅಧ್ಯಕ್ಷ ನರೇಶ್ ಹೇಳಿದರು.
ನಗರದ ಶಾರದಾ ಕಾನ್ವೆಂಟ್ ಶಾಲೆಯಲ್ಲಿ ಸರ್ವೋದಯ ಸ್ವಯಂ ಸೇವಾ ಸಂಸ್ಥೆ ಹಾಗೂ ಸ್ವಾಮಿ ವಿವೇಕಾನಂದ ಯುವಜನ ಸಂಘದ ಸಂಯುಕ್ತಾಶ್ರಯದಲ್ಲಿ ಗುರುವಾರ ನಡೆದ ೧೯ ನೇ ವರ್ಷದ ಕಾರ್ಗಿಲ್ ವಿಜಯೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ದೇಶದ ಮೇಲೆ ನಡೆಯುತ್ತಿರುವ ಶತ್ರುರಾಷ್ಟ್ರಗಳ ಉಪಟಳಗಳನ್ನು ನಿಯಂತ್ರಣ ಮಾಡುವಲ್ಲಿ ಸೈನಿಕರು ಮಾಡುತ್ತಿರುವ ಹೋರಾಟ ಶ್ಲಾಘನೀಯ. ಸೈನಿಕರಿಗೆ ಆತ್ಮಸ್ಥೈರ್ಯವನ್ನು ತುಂಬಿಸಬೇಕಾಗಿರುವ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ. ದೇಶದಲ್ಲಿನ ಪ್ರತಿಯೊಬ್ಬ ನಾಗರಿಕರು ತಮ್ಮ ಮಕ್ಕಳು, ವೈದ್ಯರಾಗಲಿ, ಎಂಜಿನಿಯರ್ ಆಗಲಿ ಎನ್ನುವ ಬಯಕೆಯಿಂದ ಶಿಕ್ಷಣ ಕೊಡಿಸುತ್ತಿದ್ದಾರೆ. ಸೈನಿಕರನ್ನಾಗಿ ಮಾಡಬೇಕು ಎನ್ನುವ ಪರಿಕಲ್ಪನೆ ಮೂಡಲಿ ಎಂದರು.
ಬಿಜೆಪಿ ಮಹಿಳಾ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಂಜುಳಮ್ಮ ಮಾತನಾಡಿ, ರಾಷ್ಟ್ರದಲ್ಲಿ ಭ್ರಷ್ಟಾಚಾರ ನಿರ್ಮೂಲವಾಗಬೇಕು. ಆಂತರಿಕ ಸಮಸ್ಯೆಗಳಿಂದ ದೇಶ ಮುಕ್ತವಾಗಬೇಕಾದರೆ ಪ್ರತಿಯೊಬ್ಬ ಭಾರತೀಯರು ಸೈನಿಕರಂತೆ ಭ್ರಷ್ಟಾಚಾರದ ವಿರುದ್ಧ ಹೋರಾಡಬೇಕು. ಯೋಧರು ದೇಶಕ್ಕಾಗಿ ಹೋರಾಟ ಮಾಡುವ ಬಗೆ, ದೇಶವು ಎದುರಿಸುತ್ತಿರುವ ಆಂತರಿಕ ಸಮಸ್ಯೆಗಳ ಕುರಿತು ಪ್ರತಿಯೊಬ್ಬ ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಕೊಟ್ಟು ಅವರಲ್ಲಿ ರಾಷ್ಟ್ರಪ್ರೇಮ ಮೂಡಿಸಬೇಕಾಗಿದೆ ಎಂದರು.
ಈ ಸಂದರ್ಭದಲ್ಲಿ ಮೇಣಬತ್ತಿಗಳನ್ನು ಬೆಳಗುವ ಮೂಲಕ ಯೋಧರಿಗೆ ಗೌರವ ಸಲ್ಲಿಸಿದರು.
ಕಾರ್ಮಿಕ ನಿರೀಕ್ಷಕ ವಿಶ್ವನಾಥ್, ಮಾನವ ಹಕ್ಕುಗಳ ಜಾಗೃತಿ ಕಾರ್ಮಿಕ ಅಧ್ಯಕ್ಷ ಪ್ರದೀಪ್, ಶಾರದಾ ಶಾಲೆಯ ಮುಖ್ಯಸ್ಥ ಶ್ರೀಕಾಂತ್, ಮಂಜುನಾಥ್, ರಾಘವೇಂದ್ರ, ಶಾಲಾ ಸಿಬ್ಬಂದಿ ಹಾಜರಿದ್ದರು.
ಶಾರದಾ ಕಾನ್ವೆಂಟ್ ಶಾಲೆಯಲ್ಲಿ ಕಾರ್ಗಿಲ್ ವಿಜಯೋತ್ಸವ ಕಾರ್ಯಕ್ರಮ
ಮಳ್ಳೂರಿನ ಸಾಯಿನಾಥ ಜ್ಞಾನ ಮಂದಿರದಲ್ಲಿ ಗುರುಪೂರ್ಣಿಮೆ
ಗುರುಪೂರ್ಣಿಮೆ ಅಂಗವಾಗಿ ತಾಲೂಕಿನ ಮಳ್ಳೂರು ಗ್ರಾಮದ ಬಳಿಯ ಶ್ರಿಸಾಯಿನಾಥ ಜ್ಞಾನ ಮಂದಿರದಲ್ಲಿ ಗುರುವಾರ ಗುರುಪೂರ್ಣಿಮೆಯ ವಿಶೇಷ ಪೂಜಾ, ಪುನಸ್ಕಾರ, ಹೋಮ ಹವನ ಹಾಗೂ ಗುರುವನ್ನು ಸ್ಮರಿಸುವ ಭಜನೆ ಕಾರ್ಯಕ್ರಮ ನಡೆಯಿತು.
ಪವಿತ್ರ ಆಚರಣೆ ಗುರುಪೂರ್ಣಿಮೆ ಅಂಗವಾಗಿ ಸಾಯಿಬಾಬಾ ಮೂರ್ತಿಯನ್ನು ವಿವಿದ ರೀತಿಯ ಒಂಭತ್ತು ರೀತಿಯ ಹೂಗಳಿಂದ ಅಲಂಕರಿಸಲಾಗಿತ್ತು.
ಬೆಳಿಗ್ಗೆ ಕಾಕಡ ಆರತಿ ಬೆಳಗಿ ಪೂಜೆ ಸಲ್ಲಿಸುವ ಮೂಲಕ ಗುರುಪೂರ್ಣಿಮೆಯನ್ನು ಆರಂಭಿಸಿ, ನಂತರ ಅಗ್ನಿಹೋತ್ರ ಹೋಮ, ಧನ್ವಂತ್ರಿ ಹಾಗೂ ಸಾಯಿ ಹೋಮ, ಪೂರ್ಣಾಹುತಿ, ಶ್ರೀಸತ್ಯನಾರಾಯಣಸ್ವಾಮಿ ಪೂಜೆ ನಡೆಸಿ, ಮಹಾಮಂಗಳಾರತಿ ಮಾಡಿ, ತೀರ್ಥ ಪ್ರಸಾದವನ್ನು ವಿನಿಯೋಗಿಸಲಾಯಿತು.
ಲೋಕ ಕಲ್ಯಾಣಾರ್ಥವಾಗಿ ಕಳೆದ ೧೩ ದಿನಗಳಿಂದಲೂ ತಾಲ್ಲೂಕಿನ ವಿವಿದೆಡೆ ಆಗಮಿಸಿ ನಿರಂತರವಾಗಿ ನಡೆಸುತ್ತಿದ್ದ ಶ್ರೀರಾಮಕೋಟಿ ಅಖಂಡ ಭಜನೆಯ ತಂಡದವರು ಗುರುವಿಗೆ ನಮಿಸಿ ಭಜನೆ ಮಾಡುವ ಮೂಲಕ ಸಮಾಪ್ತಿ ಹಾಡಿದರು.
ಸಂಜೆ ೫ ಗಂಟೆಗೆ ಪದ್ಮಶ್ರೀ ಘಂಟಸಾಲ ಗಾನಕಲಾ ವೃಂದದವರಿಂದ ಭಕ್ತಿಗೀತೆಗಳು ಹಾಗೂ ಭಾವಗೀತೆಗಳ ಗಾಯನ ಕಾರ್ಯಕ್ರಮ ಸಭಿಕರನ್ನು ಭಕ್ತಿಸಾಗರದಲ್ಲಿ ಮಿಂದೇಳುವಂತೆ ಮಾಡಿತು.
ಭಕ್ತರಿಂದ ದಾನವಾಗಿ ಬಂದಿದ್ದ ಅಕ್ಕಿ ಬೇಳೆ ದವಸ ದಾನ್ಯ ತರಕಾರಿಗಳಿಂದ ತ್ರಿವಿಧ ಅಡುಗೆ ತಯಾರಿಸಿ ಎಲ್ಲ ಭಕ್ತರಿಗೂ ಅನ್ನಸಂತರ್ಪಣೆಯನ್ನು ನೆರವೇರಿಸಲಾಯಿತು.
ದೇವಾಲಯದ ಸೇವಾ ಕರ್ತರಾದ ಎಂ.ನಾರಾಯಣಸ್ವಾಮಿ, ರೂಪಸಿ ರಮೇಶ್, ಮಳ್ಳೂರು ಗೋಪಾಲಪ್ಪ, ಡಿಶ್ ಮಂಜುನಾಥ್, ಪ್ರಮೀಳಮ್ಮ, ರತ್ನಮ್ಮ, ವೀಣಮ್ಮ, ಗೋಪಾಲಮ್ಮ, ಅರ್ಚಕ ಲಕ್ಷ್ಮೀಪತಿ ಹಾಜರಿದ್ದರು.
ಅಂಬೇಡ್ಕರ್ ಸೇವಾ ಸಮಿತಿ ತಾಲ್ಲೂಕು ಶಾಖೆ ಉದ್ಘಾಟನೆ
ಕಳೆದ ಎಂಟು ವರ್ಷಗಳಿಂದ ಕೋಲಾರ ಲೋಕಸಭೆ ಕ್ಷೇತ್ರದ ವ್ಯಾಪ್ತಿಯಲ್ಲಿ ದಲಿತರ ಹಾಗೂ ಹಿಂದುಳಿದವರ ಧ್ವನಿಯಾಗಿ ಅಂಬೇಡ್ಕರ್ ಸೇವಾ ಸಮಿತಿ ಮೂಲಕ ಹೋರಾಟಗಳನ್ನು ನಡೆಸುತ್ತಾ ಬಂದಿದ್ದೇವೆ. ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಕೋಲಾರ ಲೋಕಸಭೆ ಕ್ಷೇತ್ರದಿಂದ ಚುನಾವಣೆ ಕಣಕ್ಕೆ ಇಳಿಯಲಿದ್ದೇವೆ ಎಂದು ಸಂಸ್ಥಾಪಕ ಅಧ್ಯಕ್ಷ ಕೆ.ಎಂ.ಸಂದೇಶ್ ಹೇಳಿದರು.
ನಗರದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಅಂಬೇಡ್ಕರ್ ಸೇವಾ ಸಮಿತಿಯ ನೂತನ ತಾಲ್ಲೂಕು ಶಾಖೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕಳೆದ ಏಳು ಬಾರಿ ಸಂಸದರಾಗಿರುವ ಕೆ.ಎಚ್.ಮುನಿಯಪ್ಪ ಕ್ಷೇತ್ರದ ಯಾವುದೇ ದಲಿತರ ಹಾಗೂ ಹಿಂದುಳಿದವರ ಏಳಿಗೆಗೆ ಶ್ರಮಿಸಿಲ್ಲ. ಹಾಗಾಗಿ ಮುಂಬರುವ ಚುನಾವಣೆಯಲ್ಲಿ ಅಂಬೇಡ್ಕರ್ ಸೇವಾ ಸಮಿತಿ ವತಿಯಿಂದ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸಂಸದ ಕೆ.ಎಚ್.ಮುನಿಯಪ್ಪರನ್ನು ಸೋಲಿಸುವ ಪಣ ತೊಡಲಾಗಿದೆ ಎಂದರು.
ಈ ನಿಟ್ಟಿನಲ್ಲಿ ಮುಂದಿನ ಅಗಸ್ಟ್ ೧೭ ರಂದು ಶಿಡ್ಲಘಟ್ಟದಲ್ಲಿ ಕೆ.ಎಚ್.ಮುನಿಯಪ್ಪ ಹಟಾವೋ ಕಾರ್ಯಕ್ರಮ ರೂಪಿಸಿದ್ದು ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯ ಯುವಕರು ಮತ್ತು ಮಹಿಳೆಯರು ಪಾಲ್ಗೊಳ್ಳಲಿದ್ದಾರೆ ಎಂದರು.
ಅಂಬೇಡ್ಕರ್ ಸೇವಾ ಸಮಿತಿಯ ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಶ್ರೀನಿವಾಸ್, ತಾಲ್ಲೂಕು ಘಟಕದ ಅಧ್ಯಕ್ಷ ಮಹೇಶ್, ಪದಾಧಿಕಾರಿಗಳಾದ ಮನು, ಶಶಿ ಹಾಜರಿದ್ದರು.
ಸಾಯಿನಾಥ ಜ್ಞಾನ ಮಂದಿರದಲ್ಲಿ ಶ್ರೀ ರಾಮಸಪ್ತಾಹದ ಅಖಂಡ ಭಜನೆ
ತಾಲ್ಲೂಕಿನ ಮಳ್ಳೂರು ಹೊರವಲಯದ ಸಾಯಿನಾಥ ಜ್ಞಾನ ಮಂದಿರದಲ್ಲಿ ಮಂಗಳವಾರ ಮೂರು ದಿನಗಳ ಶ್ರೀ ರಾಮಸಪ್ತಾಹದ ಅಖಂಡ ಭಜನೆ ಪ್ರಾರಂಭವಾಯಿತು.
ಶ್ರೀ ಸಾಯಿನಾಥ ಭಕ್ತ ಮಂಡಲಿಯ ಭಜನಾ ತಂಡದವರಿಂದ ಬೆಳಿಗ್ಗೆ ರಾಮಭಜನೆಗೆ ಚಾಲನೆ ನೀಡಲಾಯಿತು. ನಂತರ ಮಧ್ಯಾಹ್ನ ತಾಲ್ಲೂಕಿನ ಅಪ್ಪೇಗೌಡನಹಳ್ಳಿಯ ಶ್ರೀರಾಮ ಭಕ್ತ ಮಂಡಲಿ ಹಾಗೂ ಯಲೆಯೂರು ಭಜನಾ ತಂಡದವರಿಂದ ರಾಮಭಜನೆ ನಡೆಯಿತು.
‘ಶ್ರೀ ರಾಮಸಪ್ತಾಹದ ಅಖಂಡ ಭಜನೆ ಮೂರು ದಿನಗಳ ಕಾಲ ನಿರಂತರವಾಗಿ ನಡೆಯಲಿದೆ. ರಾಮ ಜಪದಿಂದ ಕಷ್ಟಗಳು ಹಾಗು ನಕಾರಾತ್ಮಕ ಶಕ್ತಿಗಳಿಂದ ಮುಕ್ತಿ ಹೊಂದಬಹುದು. ಶ್ರೀರಾಮ ನಾಮ ಜಪದಿಂದ ಸಾಕಷ್ಟು ಪುಣ್ಯ ಫಲ ಒದಗಿ ಬರುತ್ತದೆ. ತಾಲ್ಲೂಕಿನ ಚೌಡಸಂದ್ರ, ತಿಪ್ಪೇನಹಳ್ಳಿ, ಬೆಳ್ಳೂಟಿ, ಬಳುವನಹಳ್ಳಿ, ಬೋದಗೂರು, ಕೊಮ್ಮಸಂದ್ರ, ಕಾಕಚೊಕ್ಕಂಡಹಳ್ಳಿ, ಮೇಲೂರು, ಭಕ್ತರಹಳ್ಳಿ ಮೊದಲಾದ ಗ್ರಾಮೀಣ ತಂಡಗಳಿಂದ ಭಜನೆ ನಡೆಯಲಿದೆ. ಜನರು ತಮ್ಮ ನಿತ್ಯ ಜಂಜಡಗಳಿಂದ ಮುಕ್ತರಾಗಿ ಕೆಲ ಕಾಲ ರಾಮ ಭಜನೆ ಮಾಡುವ ಮೂಲಕ ಮನಸ್ಸಿಗೆ ಶಾಂತಿ, ನೆಮ್ಮದಿಯನ್ನು ಪಡೆಯಬಹುದು. ಗುರುವಾರ ಮಧ್ಯಾಹ್ನ ರಾಮಕೋಟಿ ಮುಕ್ತಾಯದ ಸಮಯದಲ್ಲಿ ಮಹಾಮಂಗಳಾರತಿ ಮತ್ತು ಪ್ರಸಾದ ವಿನಿಯೋಗ ನಡೆಯಲಿದೆ’ ಎಂದು ದೇವಾಲಯದ ಧರ್ಮದರ್ಶಿ ನಾರಾಯಣಸ್ವಾಮಿ ತಿಳಿಸಿದರು.
ಆರ್‌ಟಿಇ ಸಮನ್ವಯಾಧಿಕಾರಿಗೆ ಸನ್ಮಾನ ಕಾರ್ಯಕ್ರಮ
ತಾಲ್ಲೂಕಿನ ಶೈಕ್ಷಣಿಕ ಗುಣಮಟ್ಟ ಕಾಪಾಡುವಲ್ಲಿ ಶಿಕ್ಷಕರು ಮತ್ತು ಇಲಾಖೆಯ ಅಧಿಕಾರಿಗಳು ಪ್ರಾಮಾಣಿಕವಾಗಿ ಸೇವೆ ಸಲ್ಲಿಸಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎ.ಚಂದ್ರಶೇಖರಬಾಬು ತಿಳಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಸೋಮವಾರ ಖಾಸಗಿ ವಿದ್ಯಾ ಸಂಸ್ಥೆಗಳ ಆಡಳಿತ ಮಂಡಳಿಯಿಂದ ಕಳೆದ ಎರಡೂವರೆ ವರ್ಷ ಸಾರ್ವಜನಿಕ ಶಿಕ್ಷಣ ಇಲಾಖೆಯ ಆರ್‌ಟಿಇ ಸಮನ್ವಯಾಧಿಕಾರಿಯಾಗಿ ಸೇವೆ ಸಲ್ಲಿಸಿ ವರ್ಗಾವಣೆಯಾಗಿರುವ ಪ್ರಸನ್ನಕುಮಾರ್‌ರಿಗೆ ಏರ್ಪಡಿಸಲಾಗಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸರ್ಕಾರಿ ಸೇವೆಯನ್ನು ನಿಸ್ವಾರ್ಥವಾಗಿ ನಿಭಾಯಿಸಿದರೆ ಸಮಾಜದಲ್ಲಿ ಉತ್ತಮ ಗೌರವ ಸಿಗುತ್ತದೆ ಎನ್ನುವುದಕ್ಕೆ ಇಂದಿನ ಕಾರ್ಯಕ್ರಮ ಉದಾಹರಣೆಯಾಗಿದೆ. ಖಾಸಗಿ ಶಾಲೆಗಳ ಆಡಳಿತ ಮಂಡಳಿಯ ಮನಸ್ಸು ಗೆಲ್ಲುವುದು ತುಂಬಾ ಕಷ್ಟ. ಅಂತಹುದರಲ್ಲಿ ತಮ್ಮ ಎರಡೂವರೆ ವರ್ಷದ ಸೇವಾವಧಿಯಲ್ಲಿ ತಾಲ್ಲೂಕಿನ ಬಹುತೇಕ ಎಲ್ಲಾ ಖಾಸಗಿ, ಅನುದಾನಿತ ಶಾಲೆಗಳ ಆಡಳಿತ ಮಂಡಳಿಯವರ ಮೆಚ್ಚುಗೆಗೆ ಪಾತ್ರರಾಗಿರುವ ಪ್ರಸನ್ನಕುಮಾರ್ ಅಭಿನಂದನಾರ್ಹರು ಎಂದರು.
ಸನ್ಮಾನ ಸ್ವೀಕರಿಸಿದ ಪ್ರಸನ್ನಕುಮಾರ್ ಮಾತನಾಡಿ, ಶಿಡ್ಲಘಟ್ಟದಲ್ಲಿ ಕಳೆದ ೧೬ ವರ್ಷಗಳಿಂದ ಶಿಕ್ಷಕನಾಗಿ ಸೇವೆ ಸಲ್ಲಿಸಿರುವೆ. ಕಳೆದ ಎರಡೂವರೆ ವರ್ಷ ಅವಧಿ ಆರ್‌ಟಿಇ ಸಮನ್ವಯಾಧಿಕಾರಿಯಾಗಿ ಸೇವೆ ಸಲ್ಲಿಸುವ ಸಂದರ್ಭದಲ್ಲಿ ಇಲಾಖೆಯ ಅಧಿಕಾರಿಗಳು ಹಾಗೂ ಖಾಸಗಿ ವಿದ್ಯಾಸಂಸ್ಥೆಯ ಆಡಳಿತ ಮಂಡಳಿ ನೀಡಿದ ಸಹಕಾರದಿಂದ ಜಿಲ್ಲೆಯಲ್ಲಿ ಶಿಡ್ಲಘಟ್ಟ ಆರ್‌ಟಿಇ ಯೋಜನೆಯಲ್ಲಿ ಮೊದಲ ಸ್ಥಾನದಲ್ಲಿದೆ ಎಂದರು.
ತಮ್ಮ ಸೇವಾವಧಿಯಲ್ಲಿ ತಮಗೆ ಬೆನ್ನೆಲುಬಾಗಿ ನಿಂತಿದ್ದ ಇಲಾಖೆಯ ಅಧಿಕಾರಿಗಳು, ಶಿಕ್ಷಕರು ಮತ್ತು ಖಾಸಗಿ ವಿದ್ಯಾ ಸಂಸ್ಥೆಗಳ ಆಡಳಿತ ಮಂಡಳಿಗಳ ಸಹಕಾರ ಮುಂದಿನ ದಿನಗಳಲ್ಲಿಯೂ ಹೀಗೆ ಮುಂದುವರೆಯಲಿ ಎಂದು ಆಶಿಸಿದರು.
ಈ ಸಂದರ್ಭದಲ್ಲಿ ಕಾಸಗಿ ವಿದ್ಯಾ ಸಂಸ್ಥೆಗಳ ಆಡಳಿತ ಮಂಡಳಿಯ ಕೆಲವರು ಮಾತಾಡಿ ಅವಕಾಶವಿದ್ದಲ್ಲಿ ಆರ್‌ಟಿಇ ಸಮನ್ವಯಾಧಿಕಾರಿಯಾಗಿ ಪ್ರಸನ್ನಕುಮಾರ್ ಅವರನ್ನೇ ಮುಂದುವರೆಸುವಂತೆ ಕ್ಷೇತ್ರ ಶಿಕ್ಷಣಾಧಿಕಾರಿಗಳಲ್ಲಿ ಮನವಿ ಮಾಡಿದರು.
ಬಿಆರ್‌ಸಿ ರವೀಂದ್ರ, ವಿಸ್ಡಂ ಶಾಲೆಯ ನಾಗರಾಜ್, ಡಾಲ್ಫಿನ್ ವಿದ್ಯಾಸಂಸ್ಥೆಯ ಅಶೋಕ್, ಬಿಜಿಎಸ್ ವಿದ್ಯಾಸಂಸ್ಥೆಯ ಲೋಕೇಶ್ ಹಾಜರಿದ್ದರು.
ಹಿಪ್ಪುನೇರಳೆ ಸೊಪ್ಪಿಗೆ ‘ತುಕ್ರಾ’ ರೋಗ
ಶಿಡ್ಲಘಟ್ಟ ತಾಲ್ಲೂಕಿನಾದ್ಯಂತ ಹಿಪ್ಪುನೇರಳೆ ಸೊಪ್ಪಿಗೆ ‘ತುಕ್ರಾ’ ರೋಗ ಕಂಡುಬಂದಿದೆ. ಅದನ್ನು ಅಲಕ್ಷಿಸಬೇಡಿ ಎಂದು ಜಿಕೆವಿಕೆ ಕೃಷಿ ವಿಸ್ತರಣ ಪ್ರಾಧ್ಯಾಪಕ ಡಾ. ವೈ.ಎನ್. ಶಿವಲಿಂಗಯ್ಯ ತಿಳಿಸಿದರು.
ತಾಲ್ಲೂಕಿನ ಭಕ್ತರಹಳ್ಳಿಯಲ್ಲಿ ಸೋಮವಾರ ಕೋಟೆ ಚನ್ನೇಗೌಡ ಅವರ ಹಿಪ್ಪುನೇರಳೆ ತೋಟದಲ್ಲಿ ಕೃಷಿ ಮಹಾವಿಶ್ವವಿದ್ಯಾನಿಲಯ ಜಿ.ಕೆ.ವಿ.ಕೆ ಯಿಂದ ಗ್ರಾಮೀಣ ಜಾಗೃತಿ ಕಾರ್ಯನುಭವಕ್ಕೆಆಗಮಿಸಿರುವ ಅಂತಿಮ ವರ್ಷದ ಕೃಷಿ ವಿದ್ಯಾರ್ಥಿಗಳಿಗೆ ಮತ್ತು ರೈತರಿಗೆ ಅವರು ರೋಗದ ನಿಯಂತ್ರಣದ ಬಗ್ಗೆ ವಿವರಿಸಿದರು.
ತುಕ್ರಾ ರೋಗಕ್ಕೆ ಕಾರಣ ಹಿಟ್ಟುತಿಗಣೆ. ಅದರ ನಿವಾರಣೆಗೆ ರೋಗ ಬಂದ ಗಿಡಗಳನ್ನು ಬುಡ ಸಮೀಪ ಕಟಾವು ಮಾಡಿ. ನುವಾನ್ ಔಷಧಿ ಸಹ ಬಳಸುವಂತೆ ಸಲಹೆ ನೀಡಿದರು.
ಕೃಷಿ ವಿಶ್ವ ವಿದ್ಯಾನಿಲಯ ಜಿ.ಕೆ.ವಿ.ಕೆ ಕೀಟ ಶಾಸ್ತ್ರ ಪ್ರಾಧ್ಯಾಪಕಿ ಡಾ. ಸುಮಿತ್ರಮ್ಮ ಮಾತನಾಡಿ, ಪರತಂತ್ರ ಜೀವಿಗಳನ್ನು ಬಿಟ್ಟು ಈ ರೋಗವನ್ನು ನಿಯಂತ್ರಿಸಬಹುದು. ಗುಲಗಂಜಿ ಹುಣ ಎನ್ನುವ ಪರತಂತ್ರ ಜೀವಿಯಿಂದ ತುಕ್ರಾ ರೋಗಕ್ಕೆ ಕಾರಣವಾದ ಹಿಟ್ಟುತಿಗಣೆಯನ್ನು ನಿಯಂತ್ರಿಸಬಹುದು ಎಂದು ಹೇಳಿದರು.
ಗ್ರಾಮೀಣ ಜಾಗೃತಿ ಕಾರ್ಯನುಭವಕ್ಕೆಆಗಮಿಸಿರುವ ಅಂತಿಮ ವರ್ಷದ ಕೃಷಿ ವಿದ್ಯಾರ್ಥಿಗಳಾದ ಅಜಿತ್, ಬಾಲಗಂಗಾಧರ ತಿಲಕ್, ಅನಿಲ್, ಅಕ್ಷಯ್ ಹೊಸಮನಿ, ಅರ್ಚನ, ಅಶ್ವಿನಿ, ಅರ್ಜುನ್ ಹಾಜರಿದ್ದರು.
ದಿಬ್ಬೂರಹಳ್ಳಿಯ ಶ್ರೀ ಚೌಡೇಶ್ವರಿ ದೇವಿಯ ದೇವಸ್ಥಾನದ ಜೀರ್ಣೋದ್ಧಾರ
ತಾಲ್ಲೂಕಿನ ದಿಬ್ಬೂರಹಳ್ಳಿಯಲ್ಲಿ ಈಚೆಗೆ ಶ್ರೀ ಚೌಡೇಶ್ವರಿ ದೇವಿಯ ದೇವಸ್ಥಾನದ ಜೀರ್ಣೋದ್ಧಾರ, ನೂತನ ಗೋಪುರ ಕುಂಭಾಭಿಷೇಕ ಹಾಗೂ ನೂತನ ಧ್ವಜಸ್ತಂಭ ಸ್ಥಾಪನೆಯನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.
ಮೂರು ದಿನಗಳ ಕಾಲ ವಿಶೇಷ ಪೂಜೆ, ಹೋಮ, ಅನ್ನಸಂತರ್ಪಣೆ, ಹರಿಕಥೆ, ತೀರ್ಥಪ್ರಸಾದ ವಿನಿಯೋಗ ನಡೆಯಿತು. ಸುತ್ತಮುತ್ತಲ ಗ್ರಾಮಗಳಿಂದ ಜನರು ಆಗಮಿಸಿ ಪೂಜಾಕೈಂಕರ್ಯದಲ್ಲಿ ಭಾಗಿಯಾಗಿದ್ದರು.
ಮಾಜಿ ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷ ಡಿ.ಎಸ್.ಎನ್.ರಾಜು, ಆಂಜನೇಯರೆಡ್ಡಿ, ಗ್ರಾಮ ಪಂಚಾಯಿತಿ ಅಧ್ಯಕ್ಷ ಸುಬ್ಬಣ್ಣ, ಉಪಾಧ್ಯಕ್ಷ ಶ್ರೀರಂಗಪ್ಪ, ಸದಸ್ಯ ಡಿ.ಎ.ಪ್ರಸನ್ನ, ಡಿ.ಎಂ.ಶ್ರೀಧರ್, ಬಾಬಾಜಾನ್, ಗೊರ್ಲಪ್ಪ, ಚಿಕ್ಕನರಸಿಂಹಪ್ಪ ಹಾಜರಿದ್ದರು.
ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹದ ಅಂಗವಾಗಿ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮ
ವಾಹನ ಚಾಲನೆಯಲ್ಲಿ ಯಾವುದೇ ರೀತಿಯ ಸಾಹಸಗಳನ್ನು ಮಾಡಲು ಮುಂದಾಗಬಾರದು. ತಮ್ಮ ಪ್ರಾಣದ ಜತೆಗೆ ರಸ್ತೆ ಬಳಸುವ ಪ್ರತಿಯೊಬ್ಬರ ಸುರಕ್ಷತೆಗೆ ಗಮನದಲ್ಲಿಟ್ಟುಕೊಂಡು ವಾಹನ ಚಲಾಯಿಸಬೇಕು ಎಂದು ದಿಬ್ಬೂರಹಳ್ಳಿ ಠಾಣೆಯ ಸಬ್ ಇನ್ಸ್ ಪೆಕ್ಟರ್ ವಿಜಯರೆಡ್ಡಿ ತಿಳಿಸಿದರು.
ತಾಲ್ಲೂಕಿನ ದಿಬ್ಬೂರಹಳ್ಳಿಯಲ್ಲಿ ಶನಿವಾರ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹದ ಅಂಗವಾಗಿ ಸಾರ್ವಜನಿಕರಲ್ಲಿ ಅರಿವು ಮೂಡಿಸಿ ಅವರು ಮಾತ್ನಾಡಿದರು.
ವ್ಯಾಪಕ ವಾಹನಗಳ ಓಡಾಟದಿಂದ ಅಪಘಾತಗಳು ಹೆಚ್ಚುತ್ತಿವೆ. ವಿಪರ್ಯಾಸವೆಂದರೆ ಅಪಘಾತಗಳಲ್ಲಿ ಹೆಚ್ಚಾಗಿ ಸಾವಗೀಡಾಗುತ್ತಿರುವವರು ಯುವಜನರು. ವಾಹನ ಚಲಾಯಿಸುವ ಪ್ರತಿಯೊಬ್ಬರೂ ಪರವಾನಿಗೆಯನ್ನು ಪಡೆದಿರಬೇಕು. ಅಪಘಾತ ನಡೆದ ಸಂದರ್ಭದಲ್ಲಿ ಪರವಾನಿಗೆ ಹೊಂದಿದ್ದರೆ ಜೀವವಿಮೆ ಸಿಗುತ್ತದೆ. ವಾಹನ ಚಲಾಯಿಸುವ ಪ್ರತಿಯೊಬ್ಬರು ಪರವಾನಿಗೆಯನ್ನು ಹೊಂದುವುದು ಅವಶ್ಯಕ ಎಂದರು.
ಸುರಕ್ಷತೆಯಿಂದ ವಾಹನ ಚಲಾಯಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಕುಡಿದು ಹಾಗೂ ನಿರ್ಲಕ್ಷ್ಯತನದಿಂದ ವಾಹನ ಚಲಾಯಿಸುವುದು ಸುರಕ್ಷತೆ ದೃಷ್ಟಿಯಿಂದ ಮಾರಕವಾಗಿದೆ. ಮನೆಯಿಂದ ಹೊರಗೆ ಬಂದವರು ಅಷ್ಟೇ ಸುರಕ್ಷಿತವಾಗಿ ಮನೆ ಸೇರಬೇಕು ಎನ್ನುವ ಭಾವನೆ ಚಾಲಕರಲ್ಲಿರಬೇಕು. ನೀವು ಸಂಚಾರ ನಿಯಮ ಪಾಲನೆ ಮಾಡುವುದರ ಜತೆಗೆ ಇನ್ನೊಬ್ಬರನ್ನು ಸಂಚಾರಿ ನಿಯಮ ಪಾಲನೆಗೆ ಪ್ರೋತ್ಸಾಹಿಸಬೇಕು. ಆಗ ಮಾತ್ರ ಅಪಘಾತಗಳ ಸಂಖ್ಯೆಯನ್ನು ಕಡಿಮೆ ಮಾಡಲು ಸಾಧ್ಯ, ಅದಕ್ಕಾಗಿ ಸಾರ್ವಜನಿಕರು ಅಪಘಾತಗಳ ತಡೆಗೆ ಸಹಕರಿಸಬೇಕು ಎಂದು ಮನವಿ ಮಾಡಿದರು.
ಎಸ್. ಎಂ.ಇ ಶಾಲಾ ವಿದ್ಯಾರ್ಥಿಗಳೊಂದಿಗೆ ಜಾಥಾ ನಡೆಸಿದ ಪೊಲೀಸರು ದಿಬ್ಬೂರಹಳ್ಳಿ ವೃತ್ತದಲ್ಲಿ ವೃತ್ತಾಕಾರದಲ್ಲಿ ನಿಂತು ಸಾರ್ವಜನಿಕರಿಗೆ ಅರಿವು ಮೂಡಿಸಿದರು.
ಪೊಲೀಸರಾದ ಚಂದ್ರ, ಮುನಿರಾಜು, ಮಾರಪ್ಪ, ಗ್ರಾಮಸ್ಥರಾದ ಬಾಬಾಜಾನ್, ಸುಬಾನ್ ಸಾಬ್, ಚಿಕ್ಕನರಸಿಂಹಪ್ಪ, ಅಂಬೇಡ್ಕರ್ ಆಟೋ ಚಾಲಕ ಸಂಘದ ಸದಸ್ಯರು ಹಾಜರಿದ್ದರು.
ಸಾಮಾನ್ಯ ಸಭೆ ಬಹಿಷ್ಕರಿಸಿದ ನಗರಸಭೆ ಸದಸ್ಯರು
ಪೌರ ಕಾರ್ಮಿಕರ ವೇತನ ಸಮಸ್ಯೆ, ನಗರದ ಸ್ವಚ್ಚತೆ, ವಾರ್ಡುಗಳಲ್ಲಿರುವ ಕುಡಿಯುವ ನೀರು, ಬೀದಿ ದ್ವೀಪಗಳ ಸಮಸ್ಯೆ ಪರಿಹಾರವಾಗುವವರೆಗೂ ನಗರಸಭೆಯಲ್ಲಿ ಯಾವುದೇ ಸಭೆ ನಡೆಯಲು ಅವಕಾಶ ನೀಡುವುದಿಲ್ಲ ಎಂದು ನಗರಸಭೆ ಸದಸ್ಯರು ಸಾಮಾನ್ಯ ಸಭೆ ಬಹಿಷ್ಕರಿಸಿ ಶನಿವಾರ ನಡೆಯಿತು.
ನಗರಸಭೆ ಅಧ್ಯಕ್ಷ ಅಫ್ಸರ್‌ಪಾಷ ಅಧ್ಯಕ್ಷತೆಯಲ್ಲಿ ಶನಿವಾರ ಆಯೋಜಿಸಲಾಗಿದ್ದ ನಗರಸಭೆ ಸಾಮಾನ್ಯಸಭೆಯಲ್ಲಿ ಭಾಗವಹಿಸಿದ ಬಹುತೇಕ ನಗರಸಭೆ ಸದಸ್ಯರು ತಮ್ಮ ತಮ್ಮ ವಾರ್ಡುಗಳಲ್ಲಿರುವ ಸಮಸ್ಯೆಗಳ ಬಗ್ಗೆ ಮಾತಾಡಿ ಸಭೆ ಬಹಿಷ್ಕರಿಸಿ ಹೊರನಡೆದರು.
ಕಳೆದ ೧೧ ತಿಂಗಳಿಂದಲೂ ಪೌರ ಕಾರ್ಮಿಕರಿಗೆ ನಗರಸಭೆಯಿಂದ ಸಂಬಳ ನೀಡಿಲ್ಲ. ನಗರದಾದ್ಯಂತ ಒಳಚರಂಡಿ ತುಂಬಿ ಹೋಗಿದ್ದು ಅಲ್ಪ ಪ್ರಮಾಣದ ಮಳೆಯಾದರೂ ಯುಜಿಡಿ ನೀರು ರಸ್ತೆ ಹಾಗೂ ಮನೆಗಳಿಗೆ ನುಗ್ಗುತ್ತದೆ. ಈ ಬಗ್ಗೆ ಸಾಕಷ್ಟು ಭಾರಿ ಅಧಿಕಾರಿಗಳಿಗೆ ತಿಳಿಸಿದರೂ ನಮ್ಮಲ್ಲಿ ಯುಜಿಡಿ ವಾಹನ ಇಲ್ಲ ಬೇರೆಡೆಯಿಂದ ತರಿಸಬೇಕು ಎನ್ನುತ್ತಾರೆ. ನಮ್ಮನ್ನು ಆಯ್ಕೆ ಮಾಡಿ ಕಳುಹಿಸಿರುವ ಜನ ನಮ್ಮನ್ನು ಬಾಯಿಗೆ ಬಂದಂತೆ ಮಾತನಾಡುತ್ತಾರೆ. ಹೀಗಾದರೇ ಜನತೆಗೆ ನಾವು ಏನು ಉತ್ತರಿಸಬೇಕು ಎಂದು ಸದಸ್ಯ ಕೇಶವಮೂರ್ತಿ ಅಧಿಕಾರಿಗಳಿಗೆ ಹಾಗೂ ಅಧ್ಯಕ್ಷರನ್ನು ಪ್ರಶ್ನಿಸಿದರು.
ಸದಸ್ಯ ಎಸ್.ರಾಘವೇಂದ್ರ ಮಾತನಾಡಿ, ಅಧ್ಯಕ್ಷರು ಹಾಗೂ ಅಧಿಕಾರಿಗಳು ಶಾಮೀಲಾಗಿ ನಗರೋತ್ಥಾನ ೩ ಯೋಜನೆಯಡಿ ತಮಗೆ ಬೇಕಾದ ವಾರ್ಡುಗಳಲ್ಲಿ ಮಾತ್ರ ಕಾಮಗಾರಿ ಮಾಡಿಸುತ್ತಿದ್ದಾರೆ. ನಗರೋತ್ಥಾನ ೩ ಯೋಜನೆಯಡಿ ನಗರದಾದ್ಯಂತ ಮಾಡುವುದಾದರೆ ಮಾಡಿ ಇಲ್ಲವಾದಲ್ಲಿ ಎಲ್ಲಿಯೂ ಮಾಡಬೇಡಿ ಎಂದರು.
ಇನ್ನು ನಗರೋತ್ಥಾನ ೩ ಯೋಜನೆಯಡಿ ಕೈಗೊಂಡಿರುವ ಕಾಮಗಾರಿಗಳ ಅಂದಾಜುಪಟ್ಟಿ, ಗುತ್ತಿಗೆದಾರರ ವಿವರ, ಗುಣಮಟ್ಟ ಕಾಯ್ದಿರಿಸಿಕೊಳ್ಳಲು ವಿಧಿಸಿರುವ ನಿಬಂಧನೆ ಹಾಗು ಅಧಿಕಾರಿಗಳ ಜವಾಬ್ದಾರಿಯ ವಿವರಗಳನ್ನು ಎಲ್ಲಾ ಸದಸ್ಯರಿಗೆ ನೀಡಬೇಕು ಎಂದು ಒತ್ತಾಯಿಸಿ ಸುಮಾರು ೧೮ ಮಂದಿ ಸದಸ್ಯರು ಸಹಿ ಹಾಕಿರುವ ಮನವಿಯನ್ನು ಪೌರಾಯುಕ್ತರಿಗೆ ಸಲ್ಲಿಸಿದರು.
ವರ್ಷಕ್ಕೊಂದು ಕರೆಯುವ ಸಭೆಯಲ್ಲಾದರೂ ಅಧಿಕಾರಿಗಳು ಸದಸ್ಯರಿಗೆ ಸೂಕ್ತ ಮಾಹಿತಿ ನೀಡುತ್ತಾರೆ ಎಂದರೆ ಅದೂ ಇಲ್ಲದೇ ಸಭೆಯಲ್ಲಿ ಬೇಕಾ ಬಿಟ್ಟಿ ಉತ್ತರ ನೀಡುವುದು ಸರಿಯಲ್ಲ. ಹೀಗಾದರೆ ಸಭೆ ಮಾಡುವ ಜರೂರತ್ತಾದರೂ ಏನು ಎಂದು ಪ್ರಶ್ನಿಸಿದ ಸದಸ್ಯರು ಸಭೆ ಬಹಿಷ್ಕರಿಸಿ ಹೊರನಡೆದರು.
ಸಭೆ ಬಹಿಷ್ಕರಿಸಿದ ಸದಸ್ಯರ ಪೈಕಿ ೧೮ ಜನ ಸದಸ್ಯರು ನಗರಸಭೆ ಮುಂಭಾಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ನಗರಸಭೆ ಅಧ್ಯಕ್ಷ ಅಫ್ಸರ್‌ಪಾಷ ತಮ್ಮ ಅಧಿಕಾರಾವಧಿಯಲ್ಲಿ ಕೋಟ್ಯಾಂತರ ಅಕ್ರಮ ಕಾಮಗಾರಿಗಳ ಹೆಸರಿನಲ್ಲಿ ಹಣ ಲಪಟಾಯಿಸಿದ್ದಾರೆ. ಅಕ್ರಮ ಕಾಮಗಾರಿಗಳ ಬಿಲ್ ಸೃಷ್ಠಿಸಿ ಹಣ ಪಡೆದಿದ್ದಾರೆ. ಶಿಡ್ಲಘಟ್ಟ ಪುರಸಭೆಯ ಸ್ವತ್ತುಗಳನ್ನು ತಮ್ಮ ಹಿಂಬಾಲಕರಿಗೆ ಅಕ್ರಮವಾಗಿ ಖಾತೆ ಮಾಡಿಕೊಟ್ಟಿದ್ದಾರೆ. ನಗರಸಭೆಯ ಶೇ ೨೪.೧೦ ರ ಎಸ್‌ಸಿ ಎಸ್‌ಟಿ ಅನುದಾನದ ಹಣವನ್ನು ನಕಲಿ ದಾಖಲೆ ಸೃಷ್ಟಿ ಮಾಡಿರುವುದು ಹಾಗೂ ನಗರಸಭೆಗೆ ಕಾಯ್ದಿರಿಸಿರುವ ಎರಡು ಎಕರೆ ಹನ್ನೊಂದು ಗುಂಟೆ ಪ್ರದೇಶವನ್ನು ನಗರಸಭೆ ಸ್ವಾಧೀನಕ್ಕೆ ಪಡೆಯದೇ ಜಮೀನಿನ ಮಾಲೀಕರ ಜೊತೆ ಶಾಮೀಲಾಗಿ ಅಕ್ರಮ ಎಸಗಿರುವ ಬಗ್ಗೆ ಸಂಬಂದಪಟ್ಟ ಅಧಿಕಾರಿಗಳು ಕೂಡಲೇ ಪರಿಶೀಲನೆ ನಡೆಸಬೇಕು ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ನಗರಸಭೆ ಮುಂಬಾಗ ಧರಣಿ ಮಾಡುವುದಾಗಿ ಎಚ್ಚರಿಸಿದರು.
ನಗರಸಭೆ ಉಪಾಧ್ಯಕ್ಷೆ ಪ್ರಭಾವತಿ ಸುರೇಶ್, ಸದಸ್ಯರಾದ ಸುಗುಣ ಲಕ್ಮಿನಾರಾಯಣ, ಪಿ.ಕೆ.ಕಿಷನ್, ಎಸ್.ರಾಘವೇಂದ್ರ, ಶಬಾನ, ಸರಳಾ, ಲಕ್ಮಯ್ಯ, ಸಂದ್ಯಾ, ಎಂ.ವಿ.ವೆಂಕಟಸ್ವಾಮಿ, ಎಚ್.ಎಸ್.ನಯಾಜ್, ಸುಮಿತ್ರಾ, ಎಲ್.ಸುನಿತಾ, ವಹೀದಾಕೌಸರ್, ನಸ್ರೀನ್‌ತಾಜ್ ಹಾಜರಿದ್ದರು.
ರೈತರ ಹುತಾತ್ಮ ದಿನಾಚರಣೆ ಕಾರ್ಯಕ್ರಮ
ತಾಲ್ಲೂಕಿನ ಸಾದಲಿ ಹೋಬಳಿಯ ಟಿ.ವೆಂಕಟಾಪುರ ಗ್ರಾಮದಲ್ಲಿ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಆಯೋಜಿಸಿದ್ದ 38ನೇ ವರ್ಷದ ರೈತರ ಹುತಾತ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಅಜಿತ್‌ಕುಮಾರ್ ರೈ ಮಾತನಾಡಿದರು.
ಜನರ ಅನುಕೂಲಕ್ಕಾಗಿಯೇ ಸರ್ಕಾರ ಇರುವುದು ಹಾಗೂ ಆ ಉದ್ದೇಶದಿಂದಲೇ ಕಾರ್ಯ ಯೋಜನೆಯನ್ನು ರೂಪಿಸುತ್ತದೆ. ರೈತರ ಹೋರಾಟ ಎಂದಿಗೂ ಉತ್ತಮ ಉದ್ದೇಶದಿಂದ ಕೂಡಿದ್ದು ಫಲಪ್ರದವಾಗಿಯೇ ಇರುತ್ತದೆ ಎಂದು ಅವರು ತಿಳಿಸಿದರು.
ರೈತರು ಹಲವು ಹಕ್ಕೊತ್ತಾಯಗಳನ್ನು ಮಂಡಿಸಿದ್ದು ಅವನ್ನು ಸರ್ಕಾರದ ಗಮನಕ್ಕೆ ತರುವುದಾಗಿ ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಪಾಪಾಗ್ನಿ ನದಿಯಲ್ಲಿ ಬಿದ್ದು ನಿಧನರಾಗಿರುವ ವರ್ಲಪ್ಪನಹಳ್ಳಿಯ ರೈತ ತಿರುಮಳಪ್ಪ ಅವರ ಆತ್ಮಕ್ಕೆ ಶಾಂತಿ ಕೋರಿದರು. ಟಿ.ವೆಂಕಟಾಪುರದಿಂದ ದಾಸರಹಳ್ಳಿಯವರೆಗೂ ನೀರಿನಲ್ಲಿ ಜನರು ಕಷ್ಟಪಡುತ್ತಾ ಸಾಗಬೇಕಿದೆ. ಅದಕ್ಕಾಗಿ ಸುಮಾರು 500 ಅಡಿ ಸೇತುವೆ ನಿರ್ಮಾಣ ಮಾಡಬೇಕೆಂದು ರೈತ ಸಂಘದವರು ಹಾಗೂ ದಿಂಬಾರ್ಲಹಳ್ಳಿ, ದಾಸಾರ್ಲಹಳ್ಳಿ, ಬುಡವಾರಹಳ್ಳಿ, ವರ್ಲಪ್ಪನಹಳ್ಳಿ, ಗಾಜುಲವಾರಹಳ್ಳಿ, ರಾಯಪ್ಪನಹಳ್ಳಿ, ತಿಮ್ಮನಾಯಕನಹಳ್ಳಿ, ಅಲಗುರ್ಕಿ ಗ್ರಾಮಗಳ ರೈತರು ಒತ್ತಾಯಿಸಿದರು. ಜೊತೆಯಲ್ಲಿ ಹಲವು ಹಕ್ಕೊತ್ತಾಯಗಳಿರುವ ಮನವಿ ಪತ್ರವನ್ನು ತಹಶೀಲ್ದಾರ್ ಅಜಿತ್‌ಕುಮಾರ್ ರೈ ಅವರಿಗೆ ಸಲ್ಲಿಸಿದರು.
ರೈತ ಸಂಘದ ತಾಲ್ಲೂಕು ಅಧ್ಯಕ್ಷ ಟಿ.ಎನ್.ಮಂಜುನಾಥ್, ನಾರಾಯಣಸ್ವಾಮಿ, ಶಿವಣ್ಣ, ಹರೀಶ್, ನಾರಾಯಣಸ್ವಾಮಿ, ವೆಂಕಟರೆಡ್ಡಿ, ಲಕ್ಷ್ಮೀಕಾಂತರೆಡ್ಡಿ ಹಾಜರಿದ್ದರು.
ಅಂಗವಿಕಲ ಮಕ್ಕಳಿಗೆ ಸ್ಕೂಲ್ ಬ್ಯಾಗ್ ಮತ್ತು ಪುಸ್ತಕ ವಿತರಣಾ ಕಾರ್ಯಕ್ರಮ
ನಗರದ ವಾಸವಿ ಕಲ್ಯಾಣ ಮಂಟಪದಲ್ಲಿ ಶನಿವಾರ ಸಕ್ಷಮ ವಿಕಲಚೇತನರ ಸಬಲೀಕರಣಕ್ಕಾಗಿ ಸಮರ್ಪಿತ ರಾಷ್ರ್ಟೀಯ ಸಂಘಟನೆ ‘ಸಕ್ಷಮ’ ಹಾಗೂ ಬೆಂಗಳೂರಿನ ಟಿಕ್ಸಾಸ್ ಕಂಪನಿ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಇವರ ಸಹಯೋಗದೊಂದಿಗೆ ಅಂಗವಿಕಲ ಮಕ್ಕಳಿಗೆ ಸ್ಕೂಲ್ ಬ್ಯಾಗ್ ಮತ್ತು ಪುಸ್ತಕ ವಿತರಣಾ ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರಶೇಖರ್ ಬಾಬು ಮಾತನಾಡಿದರು.
ಅಂಗವಿಕಲ ಮಕ್ಕಳು ಸಮಾಜಕ್ಕೆ ಹೊರೆಯಲ್ಲ. ಅಂಗವಿಕಲ ಮಕ್ಕಳ ಮಾನಸಿಕ ಪರಿಸ್ಥಿತಿಯ ಬಗ್ಗೆ ಪಾಲಕರು ಯಾವುದೇ ಕಾರಣಕ್ಕೂ ಧೈರ್ಯಗೆಡಬಾರದು ಎಂದು ಅವರು ತಿಳಿಸಿದರು.
ಅಂಗವಿಕಲರು ಸಮಾಜದಲ್ಲಿ ಎಲ್ಲರಂತೆಯೇ ಸರಿ ಸಮಾನರು. ಆದರೆ ಸಮಾಜದಲ್ಲಿ ಅವರನ್ನು ತಾರತಮ್ಯದಿಂದ ಕಾಣುತ್ತಿರುವುದು ಸರಿಯಲ್ಲ. ವಿಶೇಷ ಅಗತ್ಯವುಳ್ಳ ಮಕ್ಕಳ ಆರೋಗ್ಯವನ್ನು ವೃದ್ಧಿಸುವ ನಿಟ್ಟಿನಲ್ಲಿ ಹಾಗೂ ಗುಣಮಟ್ಟದ ಶಿಕ್ಷಣ ಕಲ್ಪಿಸಿಕೊಡುವಲ್ಲಿ ಸರ್ಕಾರ ಹಲವು ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವುದರ ಜತೆಗೆ ಹಲವು ಸವಲತ್ತುಗಳನ್ನು ಮಕ್ಕಳಿಗೆ ನೀಡುತ್ತಿದೆ. ಆದುದರಿಂದ ಪಾಲಕರು ಈ ಬಗ್ಗೆ ಮನದಟ್ಟು ಮಾಡಿಕೊಂಡು ಮಕ್ಕಳ ಆರೋಗ್ಯದ ಕಡೆ ಕಾಳಜಿ ವಹಿಸುವುದರ ಜತೆಗೆ ಶಿಕ್ಷಣ ಕೊಡಿಸಿ ವಿದ್ಯಾವಂತರನ್ನಾಗಿ ಮಾಡಬೇಕು. ಆದರೆ ಆ ಮಕ್ಕಳ ಮನೋ ಪರಿಸ್ಥಿತಿ ಬಗ್ಗೆ ಯಾವುದೇ ಕಾರಣಕ್ಕೂ ಪಾಲಕರು ಧೃತಿಗೆಡಬಾರದು ಎಂದು ಹೇಳಿದರು.
ಅಂಗವಿಕಲ ಮಕ್ಕಳಿಗೆ ಸ್ಕೂಲ್ ಬ್ಯಾಗ್, ಪುಸ್ತಕ ಹಾಗೂ ಕಲಿಕಾ ಸಮಾಗ್ರಿಗಳನ್ನು ವಿತರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಸಕ್ಷಮ ಜಿಲ್ಲಾ ಘಟಕದ ಗಣೇಶ್, ಟಿಕ್ಸಾಸ್ ಕಂಪನಿಯ ಶಿಲ್ಪ, ನಿತೀಶ್, ರಾಜು, ಬಿ.ಆರ್.ಸಿ ಭಾಸ್ಕರ್, ಜಗದೀಶ್ ಕುಮಾರ್, ಸುಬ್ರಮಣಿ ಹಾಜರಿದ್ದರು.
ಪ್ರತಿಭಾ ಪುರಸ್ಕಾರ ಕಾರ್ಯಕ್ರಮ
ಕನ್ನಡ ಭಾಷೆಯಲ್ಲಿ ಶೇಕಡಾ ನೂರರಷ್ಟು ಅಂಕಗಳನ್ನು ಪಡೆದಿರುವ ಮಕ್ಕಳನ್ನು ಪುರಸ್ಕರಿಸುತ್ತಿರುವುದು ಶ್ಲಾಘನೀಯ. ತಾಲ್ಲೂಕಿಗೆ ಹೆಮ್ಮೆಯಾದ ಈ ಮಕ್ಕಳಿಗೆ ಮುಂದಿನ ಮಾರ್ಗಸೂಚಿಗಳನ್ನು ತಿಳಿಸಿಕೊಡುವ ಕಾರ್ಯಕ್ರಮವಾಗಿ ಇದು ಪರಿವರ್ತನೆಗೊಳ್ಳಬೇಕು ಎಂದು ಶಾಸಕ ವಿ.ಮುನಿಯಪ್ಪ ತಿಳಿಸಿದರು.
ತಾಲ್ಲೂಕಿನ ಕದಿರಿನಾಯಕನಹಳ್ಳಿ(ವೈ.ಹುಣಸೇನಹಳ್ಳಿ ಸ್ಟೇಷನ್)ನ ಎಸ್.ಆರ್.ಇ.ಟಿ ಶಾಲೆಯಲ್ಲಿ ತಾಲ್ಲೂಕು ಕ.ಸಾ.ಪ ವತಿಯಿಂದ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 125 ಅಂಕಗಳಿಗೆ 125 ಅಂಕಗಳನ್ನು ಪಡೆದಿರುವ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮಕ್ಕಳ ಪ್ರತಿಭೆಯನ್ನು ಹೊರಹೊಮ್ಮಿಸುವ ಪ್ರೋತ್ಸಾಹದಾಯಕ ಕಾರ್ಯಕ್ರಮಗಳನ್ನು ಕಸಾಪದಿಂದ ತಾಲ್ಲೂಕಿನೆಲ್ಲೆಡೆ ಹಮ್ಮಿಕೊಳ್ಳುವಂತಾಗಲಿ. ಪ್ರತಿಭಾವಂತ ಮಕ್ಕಳು ಮುಂದೆ ಸಮಾಜಕ್ಕೆ ಕೊಡುಗೆ ಕೊಡುವಂತಹ ಸಾಧಕರಾಗುತ್ತಾರೆ ಎಂದು ಹೇಳಿದರು.
ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಕೈವಾರ ಶ್ರೀನಿವಾಸ್ ಮಾತನಾಡಿ, ಇಡೀ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಒಟ್ಟು 374 ವಿದ್ಯಾರ್ಥಿಗಳು ಈ ಬಾರಿ ಕನ್ನಡ ಭಾಷೆಯಲ್ಲಿ ಶೇಕಡಾ ನೂರರಷ್ಟು ಅಂಕಗಳನ್ನು ಪಡೆದಿದ್ದಾರೆ. ಇದು ನಿಜಕ್ಕೂ ಹೆಮ್ಮೆ ಪಡುವ ಸಂಗತಿ. ಈ ಮಕ್ಕಳಿಗೆ ಪಾಠ ಹೇಳಿಕೊಟ್ಟ ಶಿಕ್ಷರನ್ನೂ ಅಭಿನಂದಿಸಬೇಕು. ಕಸಾಪ ಜಿಲ್ಲಾ ಘಟಕದಿಂದ ಈ ಎಲ್ಲಾ ವಿದ್ಯಾರ್ಥಿಗಳನ್ನೂ ಪುರಸ್ಕರಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು. ಕನ್ನಡದಲ್ಲಿ 125 ಅಂಕಗಳನ್ನು ಪಡೆಯುವುದು ಸುಲಭವಲ್ಲ. ಈ ಸಾಧನೆ ಮಾಡಿ ಜಿಲ್ಲೆಗೆ ಕೀರ್ತಿ ತಂದ ಮಕ್ಕಳು, ಅವರ ಶಿಕ್ಷಕರು ಹಾಗೂ ಪೋಷಕರು ಅಭಿನಂದನಾರ್ಹರು ಎಂದರು.
ಈ ಸಂದರ್ಭದಲ್ಲಿ ಎಸ್.ಆರ್.ಇ.ಟಿ ಶಾಲೆಯ ವಿದ್ಯಾರ್ಥಿಗಳು ಸಾಂಸ್ಕೃತಿಕ ನೃತ್ಯವನ್ನು ಪ್ರದರ್ಶಿಸಿದರು. ಕಸಾಪ ವತಿಯಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 125 ಅಂಕಗಳಿಗೆ 125 ಅಂಕಗಳನ್ನು ಪಡೆದಿರುವ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ, ಪುಸ್ತಕ ಮತ್ತು ನೆನಪಿನ ಕಾಣಿಕೆ ನೀಡಲಾಯಿತು.
ಮಾಜಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಸುಬ್ರಮಣಿ, ತಾಲ್ಲೂಕು ಪಂಚಾಯಿತಿ ಸದಸ್ಯೆ ಪಂಕಜಾ ನಿರಂಜನ್, ಎಸ್.ಆರ್.ಇ.ಟಿ ಶಾಲೆಯ ರಾಮಚಂದ್ರರೆಡ್ಡಿ, ಶಂಕರ್, ನಾಗರಾಜರಾವ್, ಸುಂದರಾಚಾರಿ, ನರಸಿಂಹಪ್ಪ, ವೆಂಕಟೇಶಪ್ಪ ಹಾಜರಿದ್ದರು.
ಉಚಿತ ಬಸ್ ಪಾಸ್ ನೀಡಲು ಒತ್ತಾಯಿಸಿ ವಿದ್ಯಾರ್ಥಿಗಳ ಪ್ರತಿಭಟನೆ
ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ನೀಡಲು ಒತ್ತಾಯಿಸಿ ಎನ್‌ಎಸ್‌ಯುಐ ನೇತೃತ್ವದಲ್ಲಿ ವಿದ್ಯಾರ್ಥಿಗಳು ಶುಕ್ರವಾರ ಬಸ್ ನಿಲ್ದಾಣದಲ್ಲಿ ಪ್ರತಿಭಟಿಸಿ ಘಟಕ ನಿಯಂತ್ರಣಾಧಿಕಾರಿ ವಲಿಪಾಷ ಅವರಿಗೆ ಮನವಿ ಸಲ್ಲಿಸಿದರು.
ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಹಿಂದಿನ ಸರ್ಕಾರ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ನೀಡುತ್ತೇವೆಂದು ವಿಧಾನಸಭೆಯಲ್ಲಿ ಘೋಷಿಸಿದ್ದರು. ಆದರೆ ಈಗಿನ ಸಮ್ಮಿಶ್ರ ಸರ್ಕಾರ ಬಸ್ ಪಾಸ್ ನೀಡದೇ ಮೀನಮೇಷ ಎಣಿಸುತ್ತಿರುವುದು ಖಂಡನೀಯವಾಗಿದೆ. ಶಾಲಾ ಕಾಲೇಜಿಗೆ ಗ್ರಾಮೀಣ ಭಾಗದಿಂದ ಹೋಗಿ ಬರುವ ವಿದ್ಯಾರ್ಥಿಗಳು ಬಡ ಕೃಷಿ ಕಾರ್ಮಿಕರ ಮಕ್ಕಳಾಗಿದ್ದು ಅವರು ಜೀವನೋಪಾಯ ನಡೆಸುವುದೇ ಕಷ್ಟಕರವಾಗಿದೆ. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ರಾಜ್ಯದ ಎಲ್ಲಾ ವರ್ಗದ ವಿದ್ಯಾರ್ಥಿಗಳಿಗೂ ಉಚಿತ ಬಸ್ ಪಾಸ್ ನೀಡಬೇಕು ಮತ್ತು ಈಗಾಗಲೇ ಬಸ್ ಪಾಸ್ ಹಣ ನೀಡಿ ಪಡೆದಿರುವ ವಿದ್ಯಾರ್ಥಿಗಳಿಗೆ ಹಣವನ್ನು ಮರುಪಾವತಿ ಮಾಡಬೇಕು. ಈ ಬೇಡಿಕೆಯನ್ನು ಈಡೇರಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ರಾಜ್ಯದಾದ್ಯಂತ ಉಗ್ರವಾದ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.
ಎನ್‌ಎಸ್‌ಯುಐ ರಾಜ್ಯ ಸಂಚಾಲಕ ಕುಂದಲಗುರ್ಕಿ ಮುನೀಂದ್ರ, ಅಫ್ರದ್, ಅಭಿಲಾಶ್, ನವೀನ್, ಮಂಜುಳ, ಅರುಣ, ನಿರಂಜನ, ಮಂಜುನಾಥ, ವೆಂಕಟೇಶ್ ಹಾಜರಿದ್ದರು.
ಸಿಟಿಜನ್ಸ್ ಸಿಲ್ಕ್ ರೀಲರ್ಸ್ ಕೈಗಾರಿಕಾ ಸಹಕಾರ ಸಂಘ ಉದ್ಘಾಟನೆ
ಸಹಕಾರ ಸಂಘವನ್ನು ಶಕ್ತಗೊಳಿಸುವ ಮೂಲಕ ರೇಷ್ಮೆಯನ್ನೇ ನಂಬಿ ಬದುಕುವವರಿಗೆ ಆರ್ಥಿಕ ಸುಭದ್ರತೆಯನ್ನು ಒದಗಿಸುವ ಕೆಲಸ ಮಾಡಬೇಕು ಎಂದು ಶಾಸಕ ವಿ.ಮುನಿಯಪ್ಪ ತಿಳಿಸಿದರು.
ನಗರದ ನಗರೇಶ್ವರ ಕಲ್ಯಾಣ ಮಂಟಪದಲ್ಲಿ ಗುರುವಾರ ಸಿಟಿಜನ್ಸ್ ಸಿಲ್ಕ್ ರೀಲರ್ಸ್ ಕೈಗಾರಿಕಾ ಸಹಕಾರ ಸಂಘವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನಾವೆಲ್ಲಾ ಬೆಳೆದದ್ದು ಸಹಕಾರ ಸಂಘಗಳಿಂದಲೇ. ಸಹಕಾರ ಸಂಘಗಳ ನೀತಿ, ನಿಯಮ, ಧ್ಯೇಯೋದ್ದೇಶಗಳನ್ನು ಕಡ್ಡಾಯವಾಗಿ ಅಳವಡಿಸಿಕೊಂಡು ಪ್ರಾಮಾಣಿಕವಾಗಿ ಬೆಳೆಸಿದಲ್ಲಿ ಸಾವಿರಾರು ಕುಟುಂಬಗಳಿಗೆ ನೆರವಾಗಬಹುದು. ಸಾಲ ಕೊಡುವ ಶಕ್ತಿ ಬರುವುದರ ಜೊತೆಗೆ ಹಲವಾರು ಅಭಿವೃದ್ಧಿ ಕಾರ್ಯಕ್ರಮಗಳನ್ನು ರೂಪಿಸಬಹುದು. ವೈದ್ಯನಾಥನ್ ಸಮಿತಿಯ ಶಿಫಾರಸುಗಳನ್ನು ಅನುಷ್ಠಾನಕ್ಕೆ ತಂದ ನಂತರ ಸಹಕಾರ ಸಂಸ್ಥೆಗಳು ಮರುಜೀವ ಪಡೆದಿವೆ. ಸಹಕಾರ ಸಂಘಕ್ಕೆ ಶೇರುದಾರರು ಹೆಚ್ಚಾಗಲಿ. ರೇಷ್ಮೆ ಉದ್ದಿಮೆ ಇದರಿಂದ ಶಕ್ತಿ ಪಡೆಯಲಿ ಮತ್ತು ರೈತರು, ರೀಲರುಗಳು ಹಾಗೂ ರೇಷ್ಮೆ ನಂಬಿ ಬದುಕುವವರಿಗೆ ಸಹಾಯವಾಗಲಿ ಎಂದು ಹೇಳಿದರು.
ಪ್ರಾರಂಭದ ಉತ್ಸಾಹ ಕಡೆಯವರೆಗೂ ಇರಲಿ. ತಕ್ಷಣ ಸಾಲ ಸಿಗುವ ಅವಕಾಶ ಕಷ್ಟದಲ್ಲಿರುವವರಿಗೆ ಸಿಗಲಿ. ಸಾಲವನ್ನು ಪ್ರಾಮಾಣಿಕವಾಗಿ ಹಿಂದಿರುಗಿಸಿದಲ್ಲಿ, ಇನ್ನಷ್ಟು ಜನರಿಗೆ ಸಾಲ ಸಿಗುವಂತಾಗುತ್ತದೆ. ಹಲವಾರು ಸಹಕಾರ ಸಂಘಗಳು ರೋಗಗ್ರಸ್ಥವಾಗಿವೆ, ಮುಚ್ಚಿವೆ. ಅವು ನಿಮಗೆ ಎಚ್ಚರಿಕೆಯಾಗಲಿ. ಇತರರಿಗೆ ಮಾದರಿಯಾಗುವಂತೆ ಸಂಘವನ್ನು ರೂಪಿಸಿ. ನಮ್ಮ ಶಿಡ್ಲಘಟ್ಟ ಹೆಸರಾಗಿರುವುದು ರೇಷ್ಮೆಯಿಂದ. ಲಕ್ಷಾಂತರ ಮಂದಿ ಇದನ್ನು ನಂಬಿ ಬದುಕುತ್ತಿದ್ದಾರೆ. ಅವರ ಬದುಕಿಗೆ ಆಸರೆಯಾಗುವ, ಉತ್ತೇಜಿಸುವ ಕಾರ್ಯಕ್ರಮಗಳನ್ನು ರೂಪಿಸಿ ಎಂದು ಸಲಹೆ ನೀಡಿದರು.
ರೇಷ್ಮೆ ಗೂಡಿನ ಮಾರುಕಟ್ಟೆಯ ಉಪನಿರ್ದೇಶಕ ಸುಭಾಷ್ ಬಿ ಸಾತೇನಹಳ್ಳಿ ಮಾತನಾಡಿ, ರೀಲರುಗಳಿಗೆ ಮೂರು ಲಕ್ಷದವರೆಗೂ ಬಡ್ಡಿ ರಹಿತ ಸಾಲವನ್ನು ನೀಡುವ ಅವಕಾಶ ಸಹಕಾರ ಸಂಘಕ್ಕಿದೆ. ಸಹಕಾರ ಸಂಘವನ್ನು ಸಶಕ್ತಗೊಳಿಸಿದರೆ ಮಾತ್ರ ರೀಲರುಗಳಿಗೆ ಅನುಕೂಲವಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ರೇಷ್ಮೆ ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಅಧಿಕಾರಿಗಳಾದ ಎನ್.ಕೆ.ಗುರುರಾಜರಾವ್, ರತ್ನಯ್ಯಶೆಟ್ಟಿ, ಜನಾರ್ಧನಮೂರ್ತಿ, ಫಿದಾಹುಸೇನ್, ವಾಜಿದ್, ಕೃಷ್ಣಮೂರ್ತಿ ಅವರನ್ನು ಗೌರವಿಸಲಾಯಿತು.
ಸಹಕಾರ ಅಭಿವೃದ್ಧಿ ಅಧಿಕಾರಿ ಎಂ.ಬಿ.ವೆಂಕಟೇಶಮೂರ್ತಿ, ನಗರಸಭಾ ಸದಸ್ಯ ಬಾಲಕೃಷ್ಣ, ಸಿಟಿಜನ್ಸ್ ಸಿಲ್ಕ್ ರೀಲರ್ಸ್ ಕೈಗಾರಿಕಾ ಸಹಕಾರ ಸಂಘದ ಅಧ್ಯಕ್ಷ ಮಹಮ್ಮದ್ ಮುರ್ತುಜ, ಕಾರ್ಯದರ್ಶಿ ಟಿ.ಶ್ರೀನಿವಾಸ್, ನರಸಿಂಹಮೂರ್ತಿ, ಫಕ್ರುದ್ದೀನ್ ಹಾಜರಿದ್ದರು.
‘ಗೋಡಂಬಿ ಅಂಬಿಗ’ ಕಾರ್ಯಕ್ರಮ
ಗೋಡಂಬಿ ಗಿಡಕ್ಕೆ ಸಕಾಲದಲ್ಲಿ ಪೋಷಣೆ, ಔಷಧಿ ಸಿಂಪಡನೆ, ಪ್ರೂನಿಂಗ್ ಮತ್ತು ಪುನರುಜ್ಜೀವನ ಕಾರ್ಯವನ್ನು ಮಾಡಿದಲ್ಲಿ ಅಧಿಕ ಇಳುವರಿಯನ್ನು ಹೊಂದಬಹುದು ಎಂದು ತೋಟಗಾರಿಕಾ ತಜ್ಞ ಡಾ.ಶ್ರೀನಿವಾಸಪ್ಪ ಅಭಿಪ್ರಾಯಪಟ್ಟರು.
ಗಾಂಧಿ ಕೃಷಿ ವಿಜ್ಞಾನ ಕೇಂದ್ರ ಕೃಷಿ ಮಹಾವಿದ್ಯಾಲಯದ ವಿದ್ಯಾರ್ಥಿಗಳ ಗ್ರಾಮೀಣ ಜಾಗೃತಿ ಕಾರ್ಯಾನುಭವ ಕಾರ್ಯಕ್ರಮದ ಅಂಗವಾಗಿ ಶೆಟ್ಟಿಹಳ್ಳಿ ಮತ್ತು ಮಲ್ಲಹಳ್ಳಿಯಲ್ಲಿ ಗೋಡಂಬಿ ತೋಟದಲ್ಲಿ ರೈತರು ಮತ್ತು ವಿದ್ಯಾರ್ಥಿಗಳಿಗೆ ತಿಳುವಳಿಕೆ ನೀಡುವ ‘ಗೋಡಂಬಿ ಅಂಬಿಗ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕೂಲಿ ಕಾರ್ಮಿಕರ ಕೊರತೆ ಎದುರಿಸುತ್ತಿರುವ ಕೃಷಿಕರಿಗೆ ಕಡಿಮೆ ಕೆಲಸದಲ್ಲಿ ಉಪ ಆದಾಯ ಪಡೆಯಲು ಗೇರು ಬೆಳೆ ಅನುಕೂಲವಾಗಿದೆ. ಅತ್ಯಲ್ಪ ನೀರು ಹಾಗೂ ಕಡಿಮೆ ನಿರ್ವಹಣೆ ವೆಚ್ಚದಲ್ಲಿ ಗೇರು ಬೆಳೆಯಬಹುದು. ಬೂದಿರೋಗ ಕಾಣಿಸುಕೊಂಡಾಗ ಹೆಚ್ಚಾಗಿರೋ ರೆಂಬೆ-ಕೊಂಬೆ ಪ್ರೂನಿಂಗ್ ಮಾಡಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಕಾಂಡಕೊರಕ, ಕಜ್ಜೀ ಹುಳುಗಳನಿಯಂತ್ರಣ, ಅಂತರ ಬೇಸಾಯ ಮುಂತಾದ ವಿಷಯಗಳ ಬಗ್ಗೆ ವಿವರಿಸಿ, ರೈತರ ಸಮಸ್ಯೆಗಳಿಗೆ ಪರಿಹಾರ ಸೂಚಿಸಿದರು.
ಕೃಷಿ ವಿಸ್ತರಣಾ ವಿಭಾಗದ ಪ್ರಾಧ್ಯಾಪಕ ಡಾ.ವೈ.ಎನ್.ಶಿವಲಿಂಗಯ್ಯ, ಕೃಷಿ ಮಾರುಕಟ್ಟೆಯ ಪ್ರಾಧ್ಯಾಪಕ ಕಿರಣ್, ರೈತರಾದ ಗಜೇಂದ್ರ, ಮಂಜುನಾಥ್, ಅಶೋಕ್, ನಾರಾಯಣರೆಡ್ಡಿ ಹಾಗೂ ಕೃಷಿ ವಿದ್ಯಾರ್ಥಿಗಳು ಹಾಜರಿದ್ದರು.
ದೊಗರನಾಯಕನಹಳ್ಳಿ ಊರ ದೇವತೆ ಶ್ರೀಗಂಗಮ್ಮ ಜಾತ್ರೆ
ತಾಲ್ಲೂಕಿನ ಪಲಿಚೇರ್ಲು ಗ್ರಾಮ ಪಂಚಾಯಿತಿಯ ದೊಗರನಾಯಕನಹಳ್ಳಿಯಲ್ಲಿ ಊರ ದೇವತೆ ಶ್ರೀಗಂಗಮ್ಮ ಸೇರಿದಂತೆ ಊರ ದೇವರುಗಳ ಜಾತ್ರಾ ಮಹೋತ್ಸವ ಮಂಗಳವಾರ ಸಡಗರ ಸಂಭ್ರಮದಿಂದ ಆಚರಿಸಲಾಯಿತು.
ಜಾತ್ರೆಯ ಅಂಗವಾಗಿ ಊರಲ್ಲಿನ ಶ್ರೀಗಂಗಮ್ಮ ದೇವಿಯ ದೇವಾಲಯವನ್ನು ಬಣ್ಣದಿಂದ ಸಿಂಗಾರಗೊಳಿಸಿ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ಮಾವು ಬೇವು ಬಾಳೆ ದಿಂಡಿನ ತಳಿರು ತೋರಣಗಳಿಂದ ದೇವಾಲಯಗಳು ಕಂಗೊಳಿಸುತ್ತಿತ್ತು.
ಸೋಮವಾರ ದೇವಾಲಯದಲ್ಲಿ ಗಂಗಾ ಪೂಜೆಯೊಂದಿಗೆ ಜಾತ್ರಾ ಮಹೋತ್ಸವದ ಪೂಜೆಯನ್ನು ಆರಂಭಿಸಿದ್ದು ನಾನಾ ಹೋಮ ಹವನ ಹಾಗೂ ವಿದವಿಧದ ಪೂಜೆಗಳನ್ನು ನೆರವೇರಿದ್ದು ಮಂಗಳವಾರ ದೀಪೋತ್ಸವ ನೆರವೇರಿಸಲಾಯಿತು.
ಗ್ರಾಮದ ಎಲ್ಲ ಮನೆಗಳನ್ನೂ ಸುಣ್ಣ ಬಣ್ಣದಿಂದ ಅಲಂಕರಿಸಿ ಬೀದಿ ಬೀದಿಗಳಲ್ಲೂ ವಿದ್ಯುತ್ ದೀಪಗಳನ್ನು ಇಳಿ ಬಿಡಲಾಗಿತ್ತು. ಜಾತ್ರೆಯ ವೈಭವವನ್ನು ಸಾರುವ ದೇವರುಗಳ ಕೀರ್ತನೆ, ಜನಪದ ಸಂಗೀತ, ಜಾತ್ರೆಗೆ ಕಳೆಗಟ್ಟುವ ಹಾಡುಗಳು ಝೇಂಕರಿಸುತ್ತಿದ್ದವು. ಗ್ರಾಮದ ಹೆಂಗೆಳೆಯರು, ಮುತ್ತೈದೆಯರು ಅಲಂಕೃತರಾಗಿ ಅಂದ ಚೆಂದದ ಹೂವುಗಳಿಂದ ಅಲಂಕರಿಸಿದ ತಂಬಿಟ್ಟಿನ ದೀಪಗಳನ್ನು ತಲೆ ಮೇಲೆ ಹೊತ್ತು ಊರ ಸುತ್ತಲೂ ಪ್ರದಕ್ಷಿಣೆ ಹಾಕಿ ದೇವರಿಗೆ ಆರತಿ ಬೆಳಗಿದರು.
ತಮ್ಮ ಇಷ್ಟಾರ್ಥಗಳು ಈಡೇರಲಿ, ಕಾಲ ಕಾಲಕ್ಕೆ ಮಳೆಯಾಗಿ ಮಳೆಯಿಂದ ಬೆಳೆಯಾಗಿ ಎಲ್ಲರ ಮನೆ ಮನೆಗಳಲ್ಲೂ ದವಸ ದಾನ್ಯ ತುಂಬಲಿ. ಸುಖ ಶಾಂತಿ ನೆಮ್ಮದಿ ನೆಲಸಲಿ ಎಂದು ಭಗವಂತನಲ್ಲಿ ಕೈ ಮುಗಿದು ಪ್ರಾರ್ಥಿಸಿದರು. ಗಂಗಮ್ಮ ದೇವಿಗೆ ವಿಶೇಷ ಪೂಜೆ ಸಲ್ಲಿಸಿ ಮಹಾ ಮಂಗಳಾರತಿ ಮಾಡಿ ನೈವೇದ್ಯ ಅರ್ಪಿಸಿ ಎಲ್ಲ ಭಕ್ತರಿಗೂ ತೀರ್ಥ ಪ್ರಸಾದವನ್ನು ವಿತರಿಸಲಾಯಿತು.
ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸಲು ಆಗಮಿಸಿದ ಸಂಸದ ಕೆ.ಎಚ್.ಮುನಿಯಪ್ಪ ಅವರನ್ನು ಗ್ರಾಮಸ್ಥರು ಊರ ಹೆಬ್ಬಾಗಿಲಿನಲ್ಲಿ ಹೂ ಹಾರ ಹಾಕಿ ಬರ ಮಾಡಿಕೊಂಡು ತಮಟೆ ಇನ್ನಿತರೆ ಜನಪದ ಕಲಾ ತಂಡಗಳೊಂದಿಗೆ ಊರಲ್ಲಿ ಮೆರವಣಿಗೆ ನಡೆಸಿದರು. ಅವರು ಗ್ರಾಮದ ಹಲವರ ಮನೆಗಳಿಗೆ ಭೇಟಿ ನೀಡಿ ಜಾತ್ರೆಯ ಶುಭಾಶಯವನ್ನು ಕೋರಿದರು.
ಸಂಸದ ಕೆ.ಎಚ್.ಮುನಿಯಪ್ಪ, ಎಪಿಎಂಸಿ ನಿರ್ದೆಶಕ ಡಿ.ವಿ.ವೆಂಕಟೇಶ್, ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ನಂದಮುನಿಕೃಷ್ಣಪ್ಪ, ಕೆಪಿಸಿಸಿ ಕಾರ್ಯದರ್ಶಿ ಕಂಬದಹಳ್ಳಿ ಸತೀಶ್, ಕೆಪಿಸಿಸಿ ಸದಸ್ಯ ಗುಡಿಹಳ್ಳಿ ನಾರಾಯಣಸ್ವಾಮಿ, ಮಳ್ಳೂರು ಶ್ರೀನಿವಾಸರೆಡ್ಡಿ, ಪಿಎಲ್‌ಡಿ ಬ್ಯಾಂಕ್ ನಿರ್ದೆಶಕ ರಾಯಪ್ಪನಹಳ್ಳಿ ಅಶ್ವತ್ಥನಾರಾಯಣರೆಡ್ಡಿ, ಕೊತ್ತನೂರು ಜ್ಞಾನೇಶ್ ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸಿದ್ದರು.
Business booming for giant cargo planes
Lorem ipsum dolor sit amet,sed diam nonumy eirmod tempor invidunt ut labore et dolore magna aliquyam erat, At vero eos et accusam et justo duo dolores et ea rebum. Lorem ipsum dolor sit amet, no sea takimata sanctus est Lorem ipsum dolor sit amet. Stet clita kasd gubergren, no sea takimata sanctus est Lorem ipsum dolor sit amet. no sea takimata sanctus est Lorem ipsum dolor sit amet. no sea takimata sanctus est Lorem ipsum dolor sit amet. sed diam voluptua. Lorem ipsum dolor sit amet,sed diam nonumy eirmod tempor invidunt ut labore et dolore magna aliquyam erat, At vero eos et accusam et justo duo dolores et ea rebum. Lorem ipsum dolor sit amet, no sea takimata sanctus est Lorem ipsum dolor sit amet. Stet clita kasd gubergren, no sea takimata sanctus est Lorem ipsum dolor sit amet. no sea takimata sanctus est Lorem ipsum dolor sit amet. no sea takimata sanctus est Lorem ipsum dolor sit amet. sed diam voluptua.
Lorem ipsum dolor sit amet,sed diam nonumy eirmod tempor invidunt ut labore et dolore magna aliquyam erat, At vero eos et accusam et justo duo dolores et ea rebum. Lorem ipsum dolor sit amet, no sea takimata sanctus est Lorem ipsum dolor sit amet. Stet clita kasd gubergren, no sea takimata sanctus est Lorem ipsum dolor sit amet. no sea takimata sanctus est Lorem ipsum dolor sit amet. no sea takimata sanctus est Lorem ipsum dolor sit amet. sed diam voluptua.
Trump-Putin: Your toolkit to help understand the story
Lorem ipsum dolor sit amet,sed diam nonumy eirmod tempor invidunt ut labore et dolore magna aliquyam erat, At vero eos et accusam et justo duo dolores et ea rebum. Lorem ipsum dolor sit amet, no sea takimata sanctus est Lorem ipsum dolor sit amet. Stet clita kasd gubergren, no sea takimata sanctus est Lorem ipsum dolor sit amet. no sea takimata sanctus est Lorem ipsum dolor sit amet. no sea takimata sanctus est Lorem ipsum dolor sit amet. sed diam voluptua. Lorem ipsum dolor sit amet,sed diam nonumy eirmod tempor invidunt ut labore et dolore magna aliquyam erat, At vero eos et accusam et justo duo dolores et ea rebum. Lorem ipsum dolor sit amet, no sea takimata sanctus est Lorem ipsum dolor sit amet. Stet clita kasd gubergren, no sea takimata sanctus est Lorem ipsum dolor sit amet. no sea takimata sanctus est Lorem ipsum dolor sit amet. no sea takimata sanctus est Lorem ipsum dolor sit amet. sed diam voluptua. Lorem ipsum dolor sit amet,sed diam nonumy eirmod tempor invidunt ut labore et dolore magna aliquyam erat, At vero eos et accusam et justo duo dolores et ea rebum. Lorem ipsum dolor sit amet, no sea takimata sanctus est Lorem ipsum dolor sit amet. Stet clita kasd gubergren, no sea takimata sanctus est Lorem ipsum dolor sit amet. no sea takimata sanctus est Lorem ipsum dolor sit amet. no sea takimata sanctus est Lorem ipsum dolor sit amet. sed diam voluptua.
Lorem ipsum dolor sit amet,sed diam nonumy eirmod tempor invidunt ut labore et dolore magna aliquyam erat, At vero eos et accusam et justo duo dolores et ea rebum. Lorem ipsum dolor sit amet, no sea takimata sanctus est Lorem ipsum dolor sit amet. Stet clita kasd gubergren, no sea takimata sanctus est Lorem ipsum dolor sit amet. no sea takimata sanctus est Lorem ipsum dolor sit amet. no sea takimata sanctus est Lorem ipsum dolor sit amet. sed diam voluptua.
‘Somebody threatened to burn the school down’
Lorem ipsum dolor sit amet,sed diam nonumy eirmod tempor invidunt ut labore et dolore magna aliquyam erat, At vero eos et accusam et justo duo dolores et ea rebum. Lorem ipsum dolor sit amet, no sea takimata sanctus est Lorem ipsum dolor sit amet. Stet clita kasd gubergren, no sea takimata sanctus est Lorem ipsum dolor sit amet. no sea takimata sanctus est Lorem ipsum dolor sit amet. no sea takimata sanctus est Lorem ipsum dolor sit amet. sed diam voluptua.
Lorem ipsum dolor sit amet,sed diam nonumy eirmod tempor invidunt ut labore et dolore magna aliquyam erat, At vero eos et accusam et justo duo dolores et ea rebum. Lorem ipsum dolor sit amet, no sea takimata sanctus est Lorem ipsum dolor sit amet. Stet clita kasd gubergren, no sea takimata sanctus est Lorem ipsum dolor sit amet. no sea takimata sanctus est Lorem ipsum dolor sit amet. no sea takimata sanctus est Lorem ipsum dolor sit amet. sed diam voluptua.
Lorem ipsum dolor sit amet,sed diam nonumy eirmod tempor invidunt ut labore et dolore magna aliquyam erat, At vero eos et accusam et justo duo dolores et ea rebum. Lorem ipsum dolor sit amet, no sea takimata sanctus est Lorem ipsum dolor sit amet. Stet clita kasd gubergren, no sea takimata sanctus est Lorem ipsum dolor sit amet. no sea takimata sanctus est Lorem ipsum dolor sit amet. no sea takimata sanctus est Lorem ipsum dolor sit amet. sed diam voluptua.



