Home Blog Page 430

ಜಿಲ್ಲಾ ಮಟ್ಟದ ಯುವಸಮ್ಮೇಳನ ಕಾರ್ಯಾಗಾರದಲ್ಲಿ ಅವ್ಯವಹಾರ

0

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಮತ್ತು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ಯುವಕ ಯುವತಿಯರಿಗೆ ೨೦೧೬–೧೭ ನೇ ಸಾಲಿನ ಜಿಲ್ಲಾ ಮಟ್ಟದ ಯುವಸಮ್ಮೇಳನ ಕಾರ್ಯಾಗಾರ ತರಬೇತಿ ಕಾರ್ಯಕ್ರಮ ಕೇವಲ ಕಾಟಾಚಾರದ ಹಣ ಲಪಟಾಯಿಸುವ ಕಾರ್ಯಕ್ರಮವಾಗಿದೆ ಎಂದು ರಾಷ್ಟ್ರೀಯ ಮಟ್ಟದ ಕ್ರೀಡಾಪಟು ನಾರಾಯಣಸ್ವಾಮಿ ಆರೋಪ ಮಾಡಿದ್ದಾರೆ.
ಯುವಕರಿಗಾಗಿ ಏರ್ಪಡಿಸಿರುವ ಕಾರ್ಯಕ್ರಮದ ಬಗ್ಗೆ ತಾಲ್ಲೂಕಿನ ಯಾವುದೇ ಸಂಘ ಸಂಸ್ಥೆಗಳಿಗೆ ಮಾಹಿತಿ ನೀಡದೇ ಕೇವಲ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳನ್ನು ಬಳಸಿಕೊಂಡು ಕಾರ್ಯಕ್ರಮ ಆಯೋಜಿಸಿರುವ ಆಯೋಜಕರು ಅನುದಾನ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದಿದ್ದಾರೆ.
ಕಾರ್ಯಕ್ರಮ ಆಯೋಜಿಸಲು ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆಯಿಂದ ೧ ಲಕ್ಷ ಅನುಧಾನ ಬಿಡುಗಡೆಯಾಗಿದ್ದು ತರಬೇತಿ ಕಾರ್ಯಾಗಾರದಲ್ಲಿ ಪಾಲ್ಗೊಂಡ ಯುವಕರಿಗೆ ಟಿಎ. ಡಿಎ ನೀಡಬೇಕು. ಆದರೆ ಅಧಿಕಾರಿಗಳು ಹಣ ಲಪಟಾಯಿಸುವ ಉದ್ದೇಶದಿಂದ ತರಬೇತಿ ಕಾರ್ಯಾಗಾರದಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳಿಂದ ಖಾಲಿ ಪೇಪರ್ ಮೇಲೆ ಸಹಿ ಹಾಕಿಸಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.

ಸಮಾಜ ಕಲ್ಯಾಣ ಇಲಾಖೆಯ ಅನುದಾನ ದುರುಪಯೋಗದ ಬಗ್ಗೆ ತನಿಖೆಯಾಗಲಿ

0

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಕಾಲೋನಿಗಳಿಗೆ ಮೂಲ ಸೌಕರ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಸಮಾಜ ಕಲ್ಯಾಣ ಇಲಾಖೆಯ ಮೂಲಕ ಸರ್ಕಾರದಿಂದ ಬಿಡುಗಡೆಯಾಗುತ್ತಿರುವ ಕೋಟ್ಯಾಂತರ ರೂಪಾಯಿಗಳ ಅನುದಾನ ನಿಯಮಾನುಸಾರವಾಗಿ ಖರ್ಚು ಮಾಡುವುದರ ಬದಲಾಗಿ ನಿಯಮಗಳನ್ನು ಉಲ್ಲಂಘನೆ ಮಾಡಿ ಹಣವನ್ನು ದುರುಪಯೋಗ ಮಾಡಿರುವ ಬಗ್ಗೆ ಅನುಮಾನಗಳಿದ್ದು, ಅದನ್ನು ತನಿಖೆಯಾಗಬೇಕು ಎಂದು ಬಿಜೆಪಿ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ತರಬಹಳ್ಳಿ ಬಾಸ್ಕರರೆಡ್ಡಿ ಆರೋಪಿಸಿದ್ದಾರೆ.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರದಿಂದ ಕೋಟ್ಯಾಂತರ ರೂಪಾಯಿಗಳ ಅನುದಾನವನ್ನು ಸಮಾಜ ಕಲ್ಯಾಣ ಇಲಾಖೆಯ ಮೂಲಕ ಬಿಡುಗಡೆ ಮಾಡಿ, ಈ ಅನುದಾನವನ್ನು ಸಮರ್ಪಕವಾಗಿ ಖರ್ಚು ಮಾಡಲು ಲೋಕೋಪಯೋಗಿ ಇಲಾಖೆಗೆ ವಹಿಸಲಾಗಿದೆ. ಇಲ್ಲಿ ಇ ಟೆಂಡರ್ ಕರೆಯುವ ಮೂಲಕ ಕಾಮಗಾರಿಗಳನ್ನು ನಿಗದಿತ ಸಮಯದಲ್ಲಿ ಪೂರ್ಣಗೊಳಿಸಬೇಕು.
ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಈ ಎಲ್ಲಾ ನೀತಿ ನಿಯಮಗಳನ್ನು ಗಾಳಿಗೆ ತೂರಿ ಮ್ಯಾನುಯಲ್ ಟೆಂಡರ್ ಕರೆದು ಕಾಮಗಾರಿಗಳನ್ನು ಮಾಡಿದ್ದಾರೆ. ಅನೇಕ ಕಡೆಗಳಲ್ಲಿ ಕಾಮಗಾರಿಗಳನ್ನೆ ಮಾಡಿಲ್ಲ. ಅಧಿಕಾರಿಗಳು ಗುತ್ತಿಗೆದಾರರೊಂದಿಗೆ ಶಾಮೀಲಾಗಿ ಕಾಮಗಾರಿಗಳನ್ನು ಹಂಚಿಕೆ ಮಾಡಿಕೊಂಡಿದ್ದಾರೆ. ಇದರಿಂದ ಕೋಟ್ಯಾಂತರ ರೂಪಾಯಿಗಳ ಸರ್ಕಾರದ ಹಣ ದುರ್ಬಳಕೆಯಾಗಿರುವ ಅನುಮಾನಗಳಿದ್ದು ತನಿಖೆ ನಡೆಸುವಂತೆ ಇಲಾಖೆಯ ಕಾರ್ಯಪಾಲಕ ಅಭಿಯಂತರರಿಗೆ ದೂರು ನೀಡಿದ್ದೇವೆ. ಒಂದು ವೇಳೆ ಪಾರದರ್ಶಕವಾದ ತನಿಖೆಯಾಗದಿದ್ದಲ್ಲಿ ಲೋಕಾಯುಕ್ತ ನ್ಯಾಯಾಲಯದಲ್ಲಿ ದೂರು ಸಲ್ಲಿಸಿ ತನಿಖೆಗೆ ಮನವಿ ಮಾಡುತ್ತೇವೆ ಎಂದರು.
ಬಿಜೆಪಿ ತಾಲ್ಲೂಕು ಬಿಜೆಪಿ ಅಧ್ಯಕ್ಷ ಬಿ.ಸಿ.ನಂದೀಶ್ ಮುಖಂಡರಾದ ಮುನಿರಾಜು, ದಾಮೋದರ್, ಕೆಂಪರೆಡ್ಡಿ, ದೊಣ್ಣಹಳ್ಳಿ ರಾಮಣ್ಣ, ರಾಮಕೃಷ್ಣಪ್ಪ ಹಾಜರಿದ್ದರು.

ವಿದ್ಯಾವಂತ ಯುವಜನರು ಪಾಲ್ಗೊಳ್ಳುತ್ತಿರುವುದು ಆತಂಕದ ಸಂಗತಿ

0

ಸಮಾಜದಲ್ಲಿ ನಡೆಯುತ್ತಿರುವಂತಹ ಅಪರಾಧ ಪ್ರಕರಣಗಳಲ್ಲಿ ವಿದ್ಯಾವಂತ ಯುವಜನರು ಪಾಲ್ಗೊಳ್ಳುತ್ತಿರುವುದು ಆತಂಕದ ಸಂಗತಿಯಾಗಿದೆ ಎಂದು ತಹಶೀಲ್ದಾರ್ ಅಜಿತ್ ಕುಮಾರ್ ರೈ ಹೇಳಿದರು.
ನಗರದ ಪ್ರಥಮ ದರ್ಜೆ ಕಾಲೇಜಿನ ಸಭಾಂಗಣದಲ್ಲಿ ಗುರುವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ಯುವಕ ಯುವತಿಯರಿಗೆ ೨೦೧೬-೧೭ ನೇ ಸಾಲಿನ ಜಿಲ್ಲಾ ಮಟ್ಟದ ಯುವಸಮ್ಮೇಳನ ಕಾರ್ಯಾಗಾರ ತರಬೇತಿ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ಅವರು ಮಾತನಾಡಿದರು.
ಯುವಜನರು ಯಾವ ದೇಶದಲ್ಲಿ ಸದೃಢರಾಗುತ್ತಾರೊ ಅಂತಹ ದೇಶ ಅಭಿವೃದ್ಧಿಯತ್ತ ಸಾಗುತ್ತದೆ. ಸರ್ಕಾರದಿಂದ ಯುವಜನರ ಸಬಲೀಕರಣಕ್ಕಾಗಿ ಸಿಗುವಂತಹ ಎಲ್ಲಾ ಸೌಲಭ್ಯಗಳನ್ನು ಸದ್ಭಳಕೆ ಮಾಡಿಕೊಂಡು ಉತ್ತಮ ಜೀವನ ರೂಪಿಸಿಕೊಳ್ಳಬೇಕು. ಯುವಜನರು ಅಪರಾಧ ಪ್ರಕರಣಗಳಲ್ಲಿ ಭಾಗಿಗಳಾಗುವುದರಿಂದ ಅವರ ಮುಂದಿನ ಸಂಪೂರ್ಣವಾಗಿ ಕಮರಿಹೋಗುತ್ತದೆ.
ಸಮಾಜದಲ್ಲಿನ ಭ್ರಷ್ಠಾಚಾರವನ್ನು ತಡೆಗಟ್ಟಬೇಕಾದರೆ ಯುವಜನರ ಪಾತ್ರ ಎಷ್ಟಿದೆ ಎಂಬುದನ್ನು ಶಿಕ್ಷಣ ಸಂಸ್ಥೆಗಳು ಯುವಜನರಿಗೆ ಮನವರಿಕೆ ಮಾಡಿಕೊಡಬೇಕು. ಯುವಜನರು ದಾರಿ ತಪ್ಪದಂತೆ ನೋಡಿಕೊಳ್ಳಬೇಕಾದಂತಹ ದೊಡ್ಡಹೊಣೆಗಾರಿಕೆ ಪೋಷಕರದ್ದಾಗಿದೆ. ಉತ್ತಮವಾದ ವ್ಯಕ್ತಿಗಳಾಗಿ ರೂಪುಗೊಳ್ಳಬೇಕು. ವಿದ್ಯಾರ್ಥಿಯ ಜೀವನದಲ್ಲಿ ಶೈಕ್ಷಣಿಕ ಪ್ರಗತಿಗೆ ಹೆಚ್ಚು ಸಮಯವನ್ನು ಮೀಸಲಿಟ್ಟು ಸಮಾಜಕ್ಕೆ ಉಪಕಾರಿಗಳಾಗಬೇಕು. ಪ್ರತಿಯೊಬ್ಬ ಯುವಜನರು ಉತ್ತಮವಾದ ಭವಿಷ್ಯವನ್ನು ರೂಪಿಸಿಕೊಳ್ಳಬೇಕಾದರೆ ಉತ್ತಮ ವ್ಯಕ್ತಿತ್ವ ರೂಢಿಸಿಕೊಳ್ಳಬೇಕು ಎಂದರು.
ಪ್ರಾಂಶುಪಾಲ ಚಂದ್ರಾನಾಯಕ್ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಬದುಕು ಕಟ್ಟಿಕೊಳ್ಳಲು ಅಗತ್ಯವಾಗಿರುವ ಮೌಲ್ಯಾಧಾರಿತವಾದ ಶಿಕ್ಷಣ ನೀಡುವುದು ಅಗತ್ಯವಿದೆ. ಅವರನ್ನು ಉತ್ತಮ ಬದುಕಿನೆಡೆಗೆ ಕರೆದೊಯ್ಯಬೇಕಿದೆ. ಈ ಬಗ್ಗೆ ಚರ್ಚೆಗಳು ನಡೆಯಬೇಕು. ಸಭೆಗಳು ಆಯೋಜನೆ ಮಾಡಬೇಕು. ಇಂದಿನ ಶಿಕ್ಷಣ ವ್ಯವಸ್ಥೆಗಳಲ್ಲಿನ ಲೋಪದೋಷಗಳಿಂದಾಗಿ ಮಾನವೀಯ ಮೌಲ್ಯಗಳು ಕಣ್ಮರೆಯಾಗುತ್ತಿವೆ. ಭ್ರಷ್ಟಾಚಾರ ಮುಕ್ತ ರಾಷ್ಟ್ರನಿರ್ಮಾಣಕ್ಕೆ ಯುವಜನರು ಮುಂದಾಗಬೇಕು. ವಾಸ್ತವತೆಯ ನೆಲೆಗಟ್ಟಿನಲ್ಲಿ ದೇಶವನ್ನು ಕಟ್ಟುವಂತಹ ಪ್ರಾಮಾಣಿಕ ಪ್ರಯತ್ನ ಯುವಜನರಲ್ಲಿ ಹುಟ್ಟಬೇಕು ಎಂದರು.
ಯುವಜನರ ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ರುದ್ರಪ್ಪ, ಸಂಪನ್ಮೂಲ ವ್ಯಕ್ತಿ ಚನ್ನಕೃಷ್ಣಪ್ಪ, ತರಬೇತುದಾರ ಮುಸ್ತಾಕ್ ಅಹ್ಮದ್, ಸೋ.ಸು.ನಾಗೇಂದ್ರನಾಥ್‌, ಶ್ರೀನಿವಾಸ್ ಮತ್ತಿತರರು ಹಾಜರಿದ್ದರು.

ಮೇಲೂರು ಗ್ರಾಮದ ಬಾರ್‌ನಲ್ಲಿ ಹಲ್ಲೆ

0

ತಾಲ್ಲೂಕಿನ ಮೇಲೂರು ಗ್ರಾಮದ ಬಾರ್‌ವೊಂದರಲ್ಲಿ ಕುಡಿದು, ಬಿಲ್ ಕೇಳಿದ್ದಕ್ಕೆ ಕ್ಯಾಷಿಯರ್‌ನ್ನು ಅವಾಚ್ಯ ಶಬ್ಧಗಳಿಂದ ನಿಂಧಿಸಿ ಜಾತಿ ನಿಂದನೆ ಮಾಡಿ ಹಲ್ಲೆ ನಡೆಸಿದ ಘಟನೆ ಮಂಗಳವಾರ ರಾತ್ರಿ ನಡೆದಿದೆ.
ಮೇಲೂರು ಗ್ರಾಮದ ಬಾರ್‌ನಲ್ಲಿ ಕುಡಿದ ಅದೇ ಗ್ರಾಮದ ಅಂಬರೀಷ್, ರಕ್ಷಣಾ ವೇದಿಕೆಯ ಶ್ರೀಧರ್ ಹಾಗೂ ಚೌಡಸಂದ್ರದ ರಾಮಚಂದ್ರ ಎಂಬುವವರು ಬಿಲ್ ಕೇಳಿದ್ದಕ್ಕೆ ನನ್ನನ್ನು ಅವಾಚ್ಯ ಶಬ್ಧಗಳಿಂದ ನಿಂಧಿಸಿ ಜಾತಿ ನಿಂದನೆ ಮಾಡಿ ಹಲ್ಲೆ ನಡೆಸಿದರು ಎಂದು ಗ್ರಾಮಾಂತರ ಠಾಣೆಯಲ್ಲಿ ಬಾರ್ ಮಾಲೀಕ ಗಿರೀಶ್ ನಾಯಕ್ ದೂರು ದಾಖಲಿಸಿದ್ದಾರೆ.
ಗಾಯಾಳು ಗಿರೀಶ್ ನಾಯಕ್‌ನು ಗಾಯಗೊಂಡು ಆಸ್ಪತ್ರೆಗೆ ಬಂದು ದೂರು ನೀಡಿದರೂ ದೂರು ದಾಖಲಿಸಿಕೊಳ್ಳಲು ತಡ ಮಾಡಿದ್ದನ್ನು ವಿರೋಧಿಸಿ ಗಿರೀಶ್ ನಾಯಕ್‌ರ ಬೆಂಬಲಿಗರು ಆಸ್ಪತ್ರೆ ಆವರಣದಲ್ಲಿಯೆ ಪ್ರತಿಭಟನೆ ನಡೆಸಿದರು.
ನಂತರ ಸ್ಥಳಕ್ಕೆ ಬಂದ ಪೊಲೀಸರು ಕ್ರಮ ಜರುಗಿಸುವುದಾಗಿ ಭರವಸೆ ನೀಡಿದರೂ ಪ್ರತಿಭಟನೆ ಕೈ ಬಿಡಿದ ಪ್ರತಿಭಟನಾಕಾರರು ಆರೋಪಿಗಳಲ್ಲೊಬ್ಬರಾದ ಅಂಬರೀಷ್‌ನು ಪಾನಮತ್ತನಾಗಿ ಈ ಕೃತ್ಯ ಎಸಗಿದ್ದು ಕೂಡಲೆ ಆತನ ತಪಾಸಣೆ ನಡೆಸುವಂತೆ ಒತ್ತಾಯಿಸಿದರು.
ಕೊನೆಗೂ ಆರೋಪಿಯು ಮದ್ಯಪಾನ ಮಾಡಿರುವುದಾಗಿ ತಪಾಸಣೆ ಮೂಲಕ ಖಚಿತ ಪಡಿಸಿದ ಮೇಲಷ್ಟೆ ಪ್ರತಿಭಟನೆಯನ್ನು ಕೈ ಬಿಡಲಾಯಿತು.
ಇದಕ್ಕೆ ಪ್ರತಿಯಾಗಿ ಚೌಡಸಂದ್ರದ ರಾಮಚಂದ್ರಪ್ಪನು ಆಸ್ಪತ್ರೆ ಆವರಣದಲ್ಲಿ ಬಿಟ್ಟಿದ್ದ ತನ್ನ ಕಾರನ್ನು ಜಖಂಗೊಳಿಸಿದ್ದಾರೆ ಎಂದು ಗಿರೀಶ್ ಹಾಗೂ ಇತರರ ಮೇಲೆ ದೂರು ಸಹ ದಾಖಲಿಸಿದ್ದಾರೆ.

ಶಿಡ್ಲಘಟ್ಟದಲ್ಲಿ ಕ್ರಿಶ್ಚಿಯನ್‌ರ ಮತಪ್ರಚಾರ: ಹಿಂದೂ ಜಾಗರಣಾ ವೇದಿಕೆ ಕಾರ್ಯಕರ್ತರ ಅಡ್ಡಿ

0

ನಗರದ ವಿವಿದೆಡೆ ಕ್ರಿಶ್ಚಿಯನ್ ಧರ್ಮಕ್ಕೆ ಸಂಬಂಧಿಸಿದ ಕರ ಪತ್ರಗಳನ್ನು ಹಂಚುತ್ತಾ ಮತ ಪ್ರಚಾರ ನಡೆಸುತ್ತಿದ್ದ ಇಬ್ಬರು ಮಹಿಳೆಯರನ್ನು ಹಿಂದೂ ಜಾಗರಣಾ ವೇದಿಕೆಯ ಕಾರ್ಯಕರ್ತರು ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ಬುಧವಾರ ನಡೆದಿದೆ.
ನಗರದ ಮಯೂರ ವೃತ್ತ, ಕೋಟೆ ವೃತ್ತ, ಜೌಗುಪೇಟೆ, ಉಲ್ಲೂರು ಪೇಟೆ ಮುಂತಾದ ಕಡೆ ಕ್ರಿಶ್ಚಿಯನ್ ಧರ್ಮಕ್ಕೆ ಸಂಬಂಧಿಸಿದ ಕರ ಪತ್ರಗಳನ್ನು ಹಿಡಿದು ಮತಪ್ರಚಾರ ನಡೆಸುತ್ತಿದ್ದ ಇಬ್ಬರು ಮಹಿಳೆಯರನ್ನು ಹಿಂದೂ ಜಾಗರಣಾ ವೇದಿಕೆ ಕಾರ್ಯಕರ್ತರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಮನೆಯಲ್ಲಿ ಯಾರೊಬ್ಬರೂ ಗಂಡಸರು ಇಲ್ಲದ ಸಮಯದಲ್ಲಿ ಮಹಿಳೆಯರು ಮಾತ್ರವೇ ಇರುವಾಗ ಮನೆಯೊಳಗೆ ಪ್ರವೇಶಿಸಿ ಕ್ರಿಶ್ಚಿಯನ್ ಧರ್ಮಕ್ಕೆ ಸಂಬಂಧಿಸಿದ ಕರಪತ್ರಗಳನ್ನು ನೀಡಿ ಬೈಬಲ್‌ನ್ನು ಕಲಿಯುವಂತೆ, ಯೇಸುವನ್ನು ಪ್ರಾರ್ಥಿಸುವಂತೆ ಪ್ರೇರೇಪಿಸುತ್ತಿದ್ದರು ಎಂದು ಆರೋಪಿಸಲಾಗಿದೆ.
ಮತ ಪ್ರಚಾರ ಮಾಡುತ್ತಿದ್ದ ಮಹಿಳೆಯರ ಬಳಿ ಬೈಬಲ್‌ನ್ನು ಓದಿ, ಏಕೆ ಎಲ್ಲಿ ಓದಬೇಕು ಎಂಬ ವಿಷಯಗಳನ್ನು ಮುದ್ರಿಸಿರುವ ಕರಪತ್ರಗಳನ್ನು ವಶಪಡಿಸಿಕೊಂಡ ಹಿಂದೂ ಜಾಗರಣಾ ವೇದಿಕೆ ಕಾರ್ಯಕರ್ತರು ಅವರಿಬ್ಬರನ್ನು ನಗರದ ಪೊಲೀಸರಿಗೆ ಒಪ್ಪಿಸಿದರು.
ಮಹಿಳೆಯರಿಬ್ಬರಿಂದ ಮತ್ತೊಮ್ಮೆ ಈ ರೀತಿಯಾಗಿ ಮತ ಪ್ರಚಾರ ಮಾಡದಂತೆ ಮುಚ್ಚಳಿಕೆ ಬರೆಸಿಕೊಂಡು ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ.
ಹಿಂದೂ ಜಾಗರಣಾ ವೇದಿಕೆಯ ಜಿಲ್ಲಾಧ್ಯಕ್ಷ ಮಂಜುನಾಥ್, ಜೆಇ ಶ್ರೀನಿವಾಸ್, ಚಂದ್ರಪ್ಪ, ಮಹೇಶ್, ವೇಣು, ಅಶ್ವತ್ಥ್ ಮತ್ತಿತರರು ಹಾಜರಿದ್ದರು.

ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಅಧ್ಯಕ್ಷರ ಆಯ್ಕೆ

0

ಶಿಡ್ಲಘಟ್ಟ ತಾಲ್ಲೂಕಿನ ಎಸ್‌.ದೇವಗಾನಹಳ್ಳಿ ಪಂಚಾಯಿತಿಯ ಎಸ್‌.ಗುಂಡ್ಲಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಜೆಡಿಎಸ್‌ ಬೆಂಬಲಿತ ವೆಂಕಟರೆಡ್ಡಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಟಿ.ಎನ್‌.ವೆಂಕಟೇಶಪ್ಪ, ನಿರ್ದೇಶಕರಾಗಿ ಎಸ್‌.ವಿ.ಶ್ರೀರಾಮಪ್ಪ, ಜಿ.ವಿ.ವೇಣುಗೋಪಾಲ್‌, ರತ್ನಮ್ಮ, ಟಿ.ಯರ್ರಪ್ಪ, ನಾರಾಯಣಸ್ವಾಮಿ, ಮುನಿಲಕ್‌ಮಮ್ಮ ಆಯ್ಕೆಯಾಗಿದ್ದಾರೆ.

ಶಾಸಕ ಎಂ.ರಾಜಣ್ಣ ಮತಯಾಚನೆ

0

ಶಿಕ್ಷಕರ ಸಮಸ್ಯೆ ನಿವಾರಣೆ ಹಾಗೂ ಶಿಕ್ಷಣ ಕ್ಷೇತ್ರಕ್ಕೆ ಕೊಡುಗೆ ಸಿಗಲು ಜೆಡಿಎಸ್ ಪಕ್ಷವನ್ನು ಬೆಂಬಲಿಸುವಂತೆ ಶಾಸಕ ಎಂ.ರಾಜಣ್ಣ ಹೇಳಿದರು.
ಆಗ್ನೇಯ ಶಿಕ್ಷಕರ ಕ್ಷೇತ್ರದ ಉಪಚುನಾವಣೆಯ ಜೆಡಿಎಸ್ ಪಕ್ಷದ ಅಭ್ಯರ್ಥಿ ರಮೇಶ್‌ಬಾಬು ಪರ ನಗರದ ಸರ್ಕಾರಿ ಪ್ರೌಢಶಾಲೆ ಮತ್ತು ಶ್ರೀ ಸರಸ್ವತಿ ವಿದ್ಯಾಸಂಸ್ಥೆಯಲ್ಲಿ ಮತಯಾಚಿಸಿ ಅವರು ಮಾತನಾಡಿದರು.
ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಗಳಾಗಿದ್ದಾಗ ಶಿಕ್ಷಕರ ಕ್ಷೇತ್ರಕ್ಕೆ ನೀಡಿದ ಕೊಡುಗೆ ಹಾಗು ಸುಮಾರು ಏಳು ಭಾರಿ ಶಿಕ್ಷಕರ ಕ್ಷೇತ್ರದಿಂದ ಆಯ್ಕೆಯಾಗಿದ್ದಂತಹ ಬಸವರಾಜ ಹೊರಟ್ಟಿಯವರು ತಮ್ಮ ಕಷ್ಟ ಸುಖಗಳಿಗೆ ಸ್ಪಂದಿಸುವ ಮೂಲಕ ಅಪಾರ ಶಿಕ್ಷಕರ ಮನ ಗೆದ್ದಿದ್ದಾರೆ.
ಪಕ್ಷದ ಅಧಿಕೃತ ಅಭ್ಯರ್ಥಿ ರಮೇಶ್‌ಬಾಬು ಈಗಾಗಲೇ ಪಕ್ಷದ ವಕ್ತಾರರಾಗಿ ಉತ್ತಮ ಕಾರ್ಯ ನಿರ್ವಹಿಸುತ್ತಿದ್ದು ಈ ಭಾರಿಯ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದಿಂದ ಸ್ಪರ್ದಿಸಿದ್ದು ತಮ್ಮ ಅಮೂಲ್ಯವಾದ ಮತಗಳನ್ನು ಜೆಡಿಎಸ್ ಅಭ್ಯರ್ಥಿ ಪರ ಚಲಾಯಿಸುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯ ಬಂಕ್ ಮುನಿಯಪ್ಪ, ಮುಖಂಡರಾದ ಚಿಕ್ಕ ಮುನಿಯಪ್ಪ, ಶ್ರೀ ಸರಸ್ವತಿ ವಿದ್ಯಾಸಂಸ್ಥೆಯ ಶ್ರೀಕಾಂತ್ ಮತ್ತಿತರರು ಹಾಜರಿದ್ದರು.

ಹೈನುಗಾರಿಕೆ ಕ್ಷೇತ್ರವನ್ನು ಬಲಪಡಿಸಿ

0

ಅತ್ಯಂತ ಕಡಿಮೆ ಬೆಲೆಗೆ ಜನ ಸಾಮಾನ್ಯರ ಕೈಗೆಟಕುವಂತೆ ತಯಾರಿಸಿರುವ ನಂದಿನಿ ಹಾಲಿನ ಉತ್ಪನ್ನಗಳನ್ನು ಖರೀದಿಸುವುದರಿಂದ ಈ ಭಾಗದ ಹೈನುಗಾರಿಕೆ ಕ್ಷೇತ್ರ ಮತ್ತು ರೈತರನ್ನು ಸಹ ಪ್ರೋತ್ಸಾಹಿಸಿದಂತಾಗುತ್ತದೆ ಎಂದು ಶಾಸಕ ಎಂ.ರಾಜಣ್ಣ ಅಭಿಪ್ರಾಯಪಟ್ಟರು.
ನಗರದ ಸರ್ಕಾರಿ ರೇಷ್ಮೆ ಗೂಡು ಮಾರುಕಟ್ಟೆ ಆವರಣದಲ್ಲಿ ಬುಧವಾರ ನೂತನವಾಗಿ ನಿರ್ಮಿಸಲಾಗಿರುವ ನಂದಿನಿ ಹಾಲಿನ ಉತ್ಪನ್ನಗಳ ಮಾರಾಟ ಮಳಿಗೆಯ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಮಾರುಕಟ್ಟೆಯಲ್ಲಿ ನಾನಾ ಬಗೆಯ ಉತ್ಪನ್ನಗಳು ಬಣ್ಣ ಬಣ್ಣದ ಪ್ಯಾಕೇಟ್‌ಗಳಲ್ಲಿ ಲಭ್ಯ ಇವೆ. ಆದರೆ ಅವುಗಳನ್ನು ಲಾಭದ ದೃಷ್ಟಿಯಿಂದಷ್ಟೇ ಉತ್ಪಾದಿಸಿದ್ದು ಅವುಗಳನ್ನು ಖರೀದಿಸಿ ಸೇವಿಸುವುದರಿಂದ ತಾತ್ಕಾಲಿಕವಾಗಿ ನಾಲಿಗೆಗೆ ರುಚಿ ಸಿಗಬಹುದು. ಆದರೆ ಅವುಗಳು ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಕೋಲಾರ-ಚಿಕ್ಕಬಳ್ಳಾಪುರ ಹಾಲು ಒಕ್ಕೂಟ (ಕೋಚಿಮುಲ್) ದಿಂದ ನಂದಿನಿ ಹಾಲಿನ ಉತ್ಪನ್ನಗಳನ್ನು ಎಲ್ಲಾ ವಯೋಮಾನದ ಜನರ ಆರೋಗ್ಯವನ್ನು ದೃಷ್ಟಿಯಲ್ಲಿಟ್ಟುಕೊಂಡು ತಯಾರಿಸಲಾಗುತ್ತಿದೆಯೆ ಹೊರತು ಲಾಭದ ದೃಷ್ಟಿಯಿಂದಲ್ಲ ಎಂದರು. ನಂದಿನಿ ಹಾಲಿನ ಉತ್ಪನ್ನಗಳು ಅಂತರಾಷ್ಟ್ರೀಯ ಮಟ್ಟದ ಗುಣಮಟ್ಟ ಹೊಂದಿದ್ದು ರುಚಿ, ಶುಚಿಯಾಗಿಯೂ ಇರುತ್ತದೆಯಲ್ಲದೆ ಜನರ ಆರೋಗ್ಯದ ದೃಷ್ಟಿಯಿಂದ ನಂದಿನಿ ಉತ್ಪನ್ನಗಳ ಸೇವನೆ ಬಹಳ ಮುಖ್ಯ ಎಂದು ಹೇಳಿದರು.
ಕೋಚಿಮುಲ್ ನಿರ್ದೇಶಕ ಬಂಕ್ ಮುನಿಯಪ್ಪ ಮಾತನಾಡಿ, ನಂದಿನಿ ಹಾಲು, ಮಜ್ಜಿಗೆ, ಮೊಸರು, ಪೇಡ ಇನ್ನಿತರೆ ಉತ್ಪನ್ನಗಳು ಬಹಳ ಕಡಿಮೆ ಬೆಲೆಗೆ ಇಲ್ಲಿ ಸಿಗಲಿವೆ. ಇವುಗಳನ್ನು ಖರೀದಿಸುವುದರಿಂದ ನಾವು ಹೈನುಗಾರಿಕೆಯನ್ನು ಪ್ರೋತ್ಸಾಹಿಸಿದಂತಾಗುತ್ತದೆ. ಬೇರೆ ಬೇರೆ ಬ್ರಾಂಡ್‌ಗಳ ವಸ್ತುಗಳಿಗಿಂತಲೂ ನಂದಿನಿ ಬ್ರಾಂಡ್‌ನ ಉತ್ಪನ್ನಗಳು ಆರೋಗ್ಯ ಹಾಗೂ ಬೆಲೆ ದೃಷ್ಟಿಯಿಂದಲೂ ಉತ್ತಮವಾಗಿದ್ದು ನಂದಿನಿ ಉತ್ಪನ್ನಗಳನ್ನು ಖರೀದಿಸಿ ಸಹಕಾರ ಕ್ಷೇತ್ರ ಹಾಗು ಈ ಭಾಗದ ರೈತರ ಆರ್ಥಿಕ ಬೆಳವಣಿಗೆಗೆ ಎಲ್ಲರೂ ಸಹಕಾರ ನೀಡುವಂತೆ ಮನವಿ ಮಾಡಿದರು.
ಮಾರುಕಟ್ಟೆ ಉಪ ವ್ಯವಸ್ಥಾಪಕ ರತ್ನಯ್ಯಶೆಟ್ಟಿ, ಸ್ಥಳೀಯ ಶಿಬಿರ ಘಟಕದ ವ್ಯವಸ್ಥಾಪಕ ಹನುಮಂತರಾವ್, ನಂದಿನಿ ಮಾರಾಟ ಮಳಿಗೆಯ ಮಾಲೀಕ ಮುನಿರೆಡ್ಡಿ, ಕದಿರಿ ಯೂಸುಫ್ ಮತ್ತಿತರರು ಹಾಜರಿದ್ದರು.

ಕುಷ್ಠರೋಗ ನಿವಾರಣೆಗೆ ಜನಜಾಗೃತಿ ಜಾಥಾ

0

ರಾಷ್ಟ್ರೀಯ ಕುಷ್ಠರೋಗ ನಿರ್ಮೂಲನಾ ಕಾರ್ಯಕ್ರಮದ ಅಂಗವಾಗಿ ಸೋಮವಾರ ಸಾರ್ವಜನಿಕ ಆಸ್ಪತ್ರೆಯ ಸಿಬ್ಬಂದಿ ಡಾಲ್ಫಿನ್‌ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳು ಮತ್ತು ಶಿಕ್ಷಕರೊಂದಿಗೆ ಜಾಥಾ ನಡೆಸಿ ಕುಷ್ಠರೋಗ ನಿವಾರಣೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿದರು.
‘ಕೈ ಕೈ ಜೋಡಿಸಿ, ಕುಷ್ಠ ನಿವಾರಿಸಿ’ ಎಂದು ವಿದ್ಯಾರ್ಥಿಗಳು ಘೋಷಣೆಗಳನ್ನು ಕೂಗುತ್ತಾ, ಕುಷ್ಠ ರೋಗದ ಬಗ್ಗೆ ಮಾಹಿತಿಯಿರುವ ಕರಪತ್ರವನ್ನು ವಿತರಿಸುತ್ತಾ ಪ್ರಮುಖ ಬೀದಿಗಳಲ್ಲಿ ಜಾಥಾ ನಡೆಸಿದರು. ಕುಷ್ಠ ರೋಗವನ್ನು ಹೇಗೆ ಗುರುತಿಸಬಹುದು ಎಂಬ ವಿವರಣೆ, ಕುಷ್ಠ ರೋಗದ ನಿವಾರಣೆಗೆ ಬಹು ಔಷಧಿ ಚಿಕಿತ್ಸೆ ಮತ್ತು ಈ ಔಷಧಿಯನ್ನು ಸರ್ಕಾರಿ ಆಸ್ಪತ್ರೆಯಲ್ಲಿ ಉಚಿತವಾಗಿ ಪಡೆಯಬಹುದು ಎಂಬುದನ್ನು ವಿವರಿಸುತ್ತಾ ಸಾಗಿದರು.

ಮಹಿಳೆಯರು ಆರ್ಥಿಕವಾಗಿ ಸದೃಢರಾದರೆ ಇಡೀ ಕುಟುಂಬವೇ ಆರ್ಥಿಕ ಪ್ರಗತಿಯನ್ನು ಸಾಧಿಸಿದಂತೆ

0

ಮಹಿಳೆಯರು ಸುಶಿಕ್ಷಿತರಾದರೆ ಇಡೀ ಕುಟುಂಬವೇ ಸುಶಿಕ್ಷಿತರಾದಂತೆ ಎಂಬ ಮಾತಿನ ಮುಂದುವರಿಕೆಯಾಗಿ ಮಹಿಳೆಯರು ಆರ್ಥಿಕವಾಗಿ ಸದೃಢರಾದರೆ ಇಡೀ ಕುಟುಂಬವೇ ಆರ್ಥಿಕ ಪ್ರಗತಿಯನ್ನು ಸಾಧಿಸಿದಂತೆ ಎಂದು ಶಾಸಕ ಎಂ.ರಾಜಣ್ಣ ತಿಳಿಸಿದರು.
ನಗರದ ಕಾಳಿಕಾಂಭ ಕಮಠೇಶ್ವರಸ್ವಾಮಿ ದೇವಾಲಯದ ವೀರಬ್ರಹ್ಮೇಂದ್ರಸ್ವಾಮಿ ಸಭಾಂಗಣದಲ್ಲಿ ಸೋಮವಾರ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಸೋಲಾರ್‌ ದೀಪಗಳ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಮಹಿಳೆಯರು ಕೇವಲ ಅಡುಗೆ ಮನೆಗೆ ಮಾತ್ರ ಸೀಮಿತವಾಗಿರುತ್ತಿದ್ದ ದಿನಗಳು ಈಗ ದೂರವಾಗಿವೆ. ಅಡುಗೆಯ ಕೆಲಸದೊಂದಿಗೆ ತಮ್ಮ ಕೌಶಲ್ಯದಿಂದ ಆರ್ಥಿಕವಾಗಿ ಪ್ರಗತಿಯನ್ನು ಸಹ ಸಾಧಿಸಬಹುದಾಗಿದೆ. ಈಗಿನ ದಿನಮಾನದಲ್ಲಿ ಮನೆಯ ಓರ್ವ ಸದಸ್ಯ ದುಡಿದು ಕುಟುಂಬ ನಿರ್ವಹಣೆ ಮಾಡುವುದು ಕಷ್ಟಕರ. ಹಾಗಾಗಿ ಗೃಹಿಣಿಯೂ ಸ್ವಲ್ಪ ಆದಾಯ ಗಳಿಸಿದಲ್ಲಿ ಕುಟುಂಬದ ನಿರ್ವಹಣೆ ಸಲೀಸಾಗುತ್ತದೆ. ವಿವಿಧ ಸ್ವ ಉದ್ಯೋಗಗಳನ್ನು ತಮ್ಮ ಕೌಶಲ್ಯ ವೃದ್ಧಿಸಿಕೊಳ್ಳುವ ಮೂಲಕ ಮಹಿಳೆಯರು ಸ್ವಾವಲಂಭಿಗಳಾಗಬಹುದು ಎಂದು ಹೇಳಿದರು.
ಸೋಲಾರ್‌ ದೀಪಗಳನ್ನು ಅಳವಡಿಸಿಕೊಳ್ಳುವ ಮೂಲಕ ವಿದ್ಯುತ್‌ ಉಳಿತಾಯ ಸಾಧ್ಯವಿದೆ. ವಿದ್ಯುತ್‌ ಸಮಸ್ಯೆಯಿದ್ದರೂ ದೈನಂದಿನ ಕೆಲಸಕಾರ್ಯಗಳಿಗೆ ಮತ್ತು ಮಕ್ಕಳ ಓದಿಗೆ ತೊಂದರೆಯಾಗದು. ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಮೂಲಕ ಸಿಗುತ್ತಿರುವ ತರಬೇತಿ, ಸಾಲ ಮತ್ತು ಅನುಕೂಲಗಳನ್ನು ಪಡೆದು ಆರ್ಥಿಕವಾಗಿ ಬೆಳವಣಿಗೆ ಸಾಧಿಸಬೇಕು. ಇದರ ಮೂಲಕ ತಾಲ್ಲೂಕು ಕೂಡ ಪ್ರಗತಿಯತ್ತ ಸಾಗುತ್ತದೆ ಎಂದು ನುಡಿದರು.
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ಪಿ.ರಾಧಾಕೃಷ್ಣರಾವ್‌ ಮಾತನಾಡಿ, ವಿದ್ಯುತ್‌ ಸಮಸ್ಯೆಯ ಪರಿಹಾರಕ್ಕಾಗಿ ಈ ದಿನ 150 ಮಹಿಳೆಯರಿಗೆ ಸೋಲಾರ್‌ ದೀಪಗಳನ್ನು ನೀಡಲಾಗುತ್ತಿದೆ. ಹಣವನ್ನು ಉಳಿಸಿ ಮನೆಯನ್ನು ಬೆಳಗುವುದು ನಮ್ಮ ಉದ್ದೇಶ. ಈಗಾಗಲೇ ತಾಲ್ಲೂಕಿನಲ್ಲಿ 9,308 ಸ್ವಸಹಾಯ ಸಂಘಗಳನ್ನು ರಚಿಸಿದ್ದು, ಒಂದು ಲಕ್ಷಕ್ಕೂ ಮೇಲ್ಪಟ್ಟು ಮಹಿಳೆಯರು ಸದಸ್ಯರಾಗಿದ್ದಾರೆ. ರೈತರಿಗೆ ಕೃಷಿ ವಿಚಾರ ಸಂಕಿರಣ, ಮಹಿಳೆಯರಿಗೆ ಬ್ಯೂಟಿಷಿಯನ್‌, ಟೈಲರಿಂಗ್‌ ಮುಂತಾದ ತರಬೇತಿ, ಬ್ಯಾಂಕ್‌ ಖಾತೆ, ಶಾಲೆಗಳಿಗೆ ಬೆಂಚ್‌, ಡೆಸ್ಕ್‌, ವೃದ್ಧರಿಗೆ ಮಾಸಾಶನ ಮುಂತಾದ ಹಲವು ಕಾರ್ಯಕ್ರಮಗಳನ್ನು ನಡೆಸುತ್ತಿರುವುದಾಗಿ ವಿವರಿಸಿದರು.
ಈ ಸಂದರ್ಭದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಸ್ತ್ರೀಶಕ್ತಿ ಸಂಘಗಳ ಸದಸ್ಯರಿಗೆ ಸೋಲಾರ್‌ ದೀಪಗಳನ್ನು ವಿತರಿಸಲಾಯಿತು.
ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷ ಎಚ್‌.ನರಸಿಂಹಯ್ಯ, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ತಾಲ್ಲೂಕು ನಿಯೋಜಕ ಮೋಹನ್‌, ಜನಾರ್ಧನ್‌, ಸೆಲ್ಕೋ ಸಂಸ್ಥೆಯ ವಿನೋದ್‌ರಾಜ್‌, ಜಂಗಮಕೋಟೆ ಒಕ್ಕೂಟದ ಮಂಜುಳ, ನಾಗರತ್ನಮ್ಮ, ಸೇವಾ ಪ್ರತಿನಿಧಿ ಸುಜಾತ ಮತ್ತಿತರರು ಹಾಜರಿದ್ದರು.

ಪ್ಲೇಗ್ ಮಾರಮ್ಮ ದೇವಿ ವಿಗ್ರಹ ಪ್ರತಿಷ್ಠಾಪನಾ ಮಹೋತ್ಸವ

0

ತಾಲ್ಲೂಕಿನ ಹೊಸಪೇಟೆ ಪಂಚಾಯಿತಿಯ ಘಟ್ಟಮಾರನಹಳ್ಳಿ ಗ್ರಾಮದ ಇತಿಹಾಸ ಪ್ರಸಿದ್ದ ಶ್ರೀ ಪ್ಲೇಗ್ ಮಾರಮ್ಮ ದೇವಿ ದೇವಾಲಯದಲ್ಲಿ ದೇವಿಯ ವಿಗ್ರಹ ಪ್ರತಿಷ್ಠಾಪನ ಮಹೋತ್ಸವನ್ನು ಸೋಮವಾರ ಹಮ್ಮಿಕೊಳ್ಳಲಾಗಿತ್ತು. ಘಟ್ಟಮಾರನಹಳ್ಳಿ ಗ್ರಾಮಸ್ಥರು ಮತ್ತು ಸುತ್ತ ಮುತ್ತಲಿನ ಗ್ರಾಮಗಳ ಭಕ್ತಾಧಿಗಳು ಭಾಗವಹಿಸಿ ದೇವಿಯ ದರ್ಶನ ಪಡೆದರು.
ಈ ಕಾರ್ಯಕ್ರಮದ ಅಂಗವಾಗಿ ದೇವಾಲಯದಲ್ಲಿ ವಿಶೇಷ ಪೂಜೆ, ಹೋಮ ಹವನಗಳನ್ನು ನಡೆಸಲಾಯಿತು.
ದೇವಾಲಯದ ಮುಂಭಾಗದ ನೂತನ ಧ್ವಜ ಸ್ತಂಭಕ್ಕೆ ಪೂಜೆಯನ್ನು ನೆರವೇರಿಸಲಾಯಿತು.
ಬೆಳಿಗ್ಗೆ ಮಹಿಳೆಯರು ಕಳಸ ಹೊತ್ತು ವಿಗ್ರಹವನ್ನು ಹೊತ್ತು ತಂದು ವಿಶೇಷ ಪೂಜೆಯನ್ನು ಸಲ್ಲಿಸಿದರು.
ಸುತ್ತ ಮುತ್ತಲಿನಿಂದ ಆಗಮಿಸಿದ ಭಕ್ತರಿಗೆ ಪ್ರಸಾದ ವಿನಿಯೋಗ ಮಾಡಲಾಗಿತ್ತು.
ಗ್ರಾಮಸ್ಥರಾದ ಆಂಜಿನಪ್ಪ, ಕೆಂಪಣ್ಣ, ರಂಗಪ್ಪ, ಶಿವಣ್ಣ, ರಾಜಶೇಖರ್, ಬಸವರಾಜು, ಮುರಳಿ, ಪ್ರಕಾಶ್ ಮಹೇಶ್, ಕುಮಾರ್ ಮತ್ತಿತರರು ಹಾಜರಿದ್ದರು.

ದಲಿತ ಕೇರಿಗಳಲ್ಲಿ ನಡೆಯುತ್ತಿರುವ ಅಕ್ರಮ ಮದ್ಯಮಾರಾಟಕ್ಕೆ ಕಡಿವಾಣ ಹಾಕಲಾಗುವುದು

0

ತಾಲ್ಲೂಕಿನಾದ್ಯಂತ ಗ್ರಾಮೀಣ ಪ್ರದೇಶದ ದಲಿತ ಕೇರಿಗಳಲ್ಲಿ ನಡೆಯುತ್ತಿರುವ ಅಕ್ರಮ ಮದ್ಯಮಾರಾಟಕ್ಕೆ ಕಡಿವಾಣ ಸೇರಿದಂತೆ ಗ್ರಾಮಕ್ಕೊಂದು ಸ್ಮಶಾನ ಕಲ್ಪಿಸಿಕೊಡಲು ಮೊದಲ ಆಧ್ಯತೆ ನೀಡಲಾಗುವುದು ಎಂದು ತಹಸೀಲ್ದಾರ್ ಎಸ್.ಅಜಿತ್‌ಕುಮಾರ್ ರೈ ತಿಳಿಸಿದರು.
ನಗರದ ಗ್ರಾಮಾಂತರ ಪೋಲೀಸ್ ಠಾಣೆ ಆವರಣದಲ್ಲಿ ಮಂಗಳವಾರ ಪೋಲೀಸ್ ಇಲಾಖೆಯಿಂದ ಆಯೋಜಿಸಲಾಗಿದ್ದ ದಲಿತರ ಕುಂದುಕೊರತೆ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ತಾಲ್ಲೂಕಿನಾದ್ಯಂತ ಇರುವ ಗ್ರಾಮೀಣ ಪ್ರದೇಶಗಳಲ್ಲಿ ಈಗಾಗಲೇ ಇರುವ ಸ್ಮಶಾನಗಳ ಒತ್ತುವರಿ ತೆರವುಗೊಳಿಸುವುದು, ಅಗತ್ಯ ಮೂಲಭೂತ ಸವಲತ್ತುಗಳ ಬಗ್ಗೆ ಕ್ರಮ ಜರುಗಿಸಲಾಗುವುದು. ನಂತರ ಎಲ್ಲಿ ಸ್ಮಶಾನ ಇಲ್ಲವೋ ಅಂತಹದರ ಬಗ್ಗೆ ಕ್ರಮಕ್ಕೆ ಮುಂದಾಗುತ್ತೇವೆ ಎಂದರು.
ಪರಿಶಿಷ್ಠ ಜಾತಿ ಹಾಗೂ ಪಂಗಡದ ಜನಾಂಗದವರು ತಮಗೆ ಪ್ರತ್ಯೇಕ ಸ್ಮಶಾನ ಬೇಕು ಎನ್ನುವುದನ್ನು ಬಿಡಬೇಕು. ತಮ್ಮ ಮನಸ್ಸಿನಲ್ಲಿರುವ ಇಂತಹ ಕೀಳರಿಮೆಯನ್ನು ಬಿಟ್ಟು ಸರ್ಕಾರದ ನೀತಿ ನಿಯಮದಂತೆ ಗ್ರಾಮಕ್ಕೊಂದು ಸ್ಮಶಾನ ಇರುತ್ತದೆ, ಅದೇ ಸ್ಮಶಾನವನ್ನು ತಾವು ಬಳಸಲು ಮುಂದಾಗಬೇಕು. ಯಾರಾದರೂ ಅಡ್ಡಿ ಪಡಿಸಿದರೆ ನಮ್ಮ ಗಮನಕ್ಕೆ ತನ್ನಿ ಅದನ್ನು ನಾವು ಪರಿಹರಿಸಿಕೊಡುತ್ತೇವೆ. ಹಾಗಾಗಿ ದಲಿತರು ಎಂಬ ಭಾವನೆಯನ್ನು ತಮ್ಮ ಮನಸ್ಸುಗಳಿಂದ ಕಿತ್ತೊಗೆಯಿರಿ ಎಂದರು.
ಮರಳು ಮಾಫಿಯಾ ಬಗ್ಗೆ ಮಾತನಾಡಿದ ಅವರು ಈ ಹಿಂದೆ ತಾವು ಕೆಲಸ ಮಾಡಿದ ನೆರೆಯ ದೇವನಹಳ್ಳಿಯಲ್ಲಿ ಸುಮಾರು ೩೦೦ ಕ್ಕೂ ಹೆಚ್ಚು ಕ್ರಿಮಿನಲ್ ಕೇಸು ದಾಖಲಿಸುವ ಮೂಲಕ ಮರಳು ಹಾಗು ಕಲ್ಲು ದಂಧೆಕೋರರನ್ನು ಹೊರಗಟ್ಟಲಾಗಿತ್ತು. ಇದೀಗ ಅಂತಹವರೆಲ್ಲಾ ನೆರೆಯ ಚಿಕ್ಕಬಳ್ಳಾಪುರ ಪೆರೇಸಂದ್ರದ ಬಳಿ ಕಲ್ಲು ಕ್ವಾರಿ ನಡೆಸುತ್ತಿದ್ದಾರೆ. ತಾಲ್ಲೂಕಿನಲ್ಲಿ ನಡೆಯುತ್ತಿರುವ ಮರಳು ದಂಧೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಪ್ರಾಮಾಣಿಕ ಯತ್ನ ನಡೆಸಲಾಗುವುದು ಎಂದರು.
ಗ್ರಾಮಗಳಲ್ಲಿ ಅಕ್ರಮ ಮದ್ಯ ಮಾರಾಟವಾಗುತ್ತಿರುವ ಬಗ್ಗೆ ಮಾತನಾಡಿದ ಅವರು ಈ ವಿಚಾರದಲ್ಲಿ ಗ್ರಾಮ ಪಂಚಾಯಿತಿ ಕಾವಲು ಸಮಿತಿ ರಚಿಸಲು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಮುಂದಾಗಬೇಕು. ಮುಖ್ಯವಾಗಿ ಕಾವಲು ಸಮಿತಿ ರಚಿಸುವಾಗ ಒಳ್ಳೆಯ ವ್ಯಕ್ತಿಗಳನ್ನು ನೇಮಿಸಿದಲ್ಲಿ ಅನುಕೂಲವಾಗುತ್ತದೆ ಎಂದರು.
ಚಿಂತಾಮಣಿ ಉಪವಿಭಾಗದ ಡಿವೈಎಸ್‌ಪಿ ಕೃಷ್ಣಮೂರ್ತಿ ಮಾತನಾಡಿ, ದಲಿತರ ವ್ಯಾಜ್ಯಗಳನ್ನು ಬಗೆಹರಿಸಿ ಮತ್ತು ಅವರಿಗೆ ಸೂಕ್ತ ರಕ್ಷಣೆ ನೀಡುವ ಕೆಲಸವನ್ನು ಇಲಾಖೆಯ ಅಧಿಕಾರಿಗಳು ಪ್ರಾಮಾಣಿಕವಾಗಿ ಮಾಡಲಿದ್ದಾರೆ ಎಂದರು.
ಯಾರದೋ ಒತ್ತಡಗಳಿಗೆ ಮಣಿದು ಸುಳ್ಳು ದೂರು ನೀಡುವವರ ಮೇಲೆ ನಿಗಾವಹಿಸಲಾಗುವುದು ಹಾಗು ಅಕ್ರಮ ಮಧ್ಯಮಾರಾಟದ ಬಗ್ಗೆ ನಾವು ತೆಗೆದುಕೊಳ್ಳುವ ಕಠಿಣವಾದ ತೀರ್ಮಾನಗಳಿಗೆ ನಾಗರಿಕರೂ ಸೇರಿದಂತೆ ಜನಪ್ರತಿನಿಧಿಗಳು ಸಹಕರಿಸಬೇಕು ಎಂದರು.
ದಲಿತ ಮುಖಂಡರಾದ ಮೇಲೂರು ಮಂಜುನಾಥ್, ಮುನಯ್ಯ, ದ್ಯಾವಕೃಷ್ಣ, ಅರುಣ್‌ಕುಮಾರ್, ದಡಂಘಟ್ಟ ತಿರುಮಲೇಶ್, ಲಕ್ಷ್ಮಿನಾರಾಯಣ, ಕೃಷ್ಣಮೂರ್ತಿ ಮತ್ತಿತರರು ಸಭೆಯಲ್ಲಿ ಮಾತನಾಡಿ ಅಕ್ರಮ ಮದ್ಯ ಮಾರಾಟ, ಸ್ಮಶಾನ ಒತ್ತುವರಿ, ತಾಲ್ಲೂಕು ಕಚೇರಿಯಲ್ಲಿ ನಡೆಯುತ್ತಿರುವ ಲಂಚಾವತಾರ, ತಾಲ್ಲೂಕಿನಾದ್ಯಂತ ನಡೆಯುತ್ತಿರುವ ಕಳಪೆ ಕಾಮಗಾರಿಗಳ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ನೀಡಿದರು.
ನಗರ ಠಾಣೆ ಸಬ್‌ಇಸ್ಪೆಕ್ಟರ್ ನವೀನ್, ದಿಬ್ಬೂರಹಳ್ಳಿ ಠಾಣೆ ಸಬ್‌ಇನ್ಸ್‌ಪೆಕ್ಟರ್‌ ವಿಜಯ್‌ರೆಡ್ಡಿ, ಗ್ರಾಮಾಂತರ ಠಾಣೆ ಸಬ್‌ಇಸ್ಪೆಕ್ಟರ್ ಪ್ರದೀಪ್ ಪೂಜಾರಿ, ಅರಣ್ಯ ಇಲಾಖೆಯ ರಾಮಾಂಜನೇಯುಲು, ಆಹಾರ ಇಲಾಖೆ ನಿರೀಕ್ಷಕ ಪ್ರಕಾಶ್ ಮತ್ತಿತರರು ಹಾಜರಿದ್ದರು.

ಸ್ವಿಟ್ಜರ್ ಲ್ಯಾಂಡ್‌ ದೇಶದಲ್ಲಿ ಇಂಡೋ ಸ್ವಿಜ್‌ ರೇಷ್ಮೆ ಉತ್ಪಾದನೆ

0

ಸ್ವಿಟ್ಜರ್ ಲ್ಯಾಂಡ್‌ ದೇಶದಲ್ಲಿ ರೇಷ್ಮೆ ಬೆಳೆಯನ್ನು ಬೆಳೆಯಲು ಉದ್ದೇಶಿಸಿದ್ದು, ಅದರ ಸಂಬಂಧವಾಗಿ ಭಾರತದ ಕೇಂದ್ರೀಯ ರೇಷ್ಮೆ ಮಂಡಳಿಯ ಸಹಕಾರ ಪಡೆದು ರೇಷ್ಮೆಯ ವಿವಿಧ ಹಂತಗಳ ಅಧ್ಯಯನವನ್ನು ಕೈಗೊಂಡಿರುವುದಾಗಿ ಸ್ವಿಟ್ಜರ್ ಲ್ಯಾಂಡ್‌ನ ಜಾನುವಾರುಗಳ ಅಭಿವೃದ್ಧಿ ಸಂಸ್ಥೆಯ ಸಲಹೆಗಾರ ಫ್ರಿಟ್ಜ್‌ ಶ್ನೀಡರ್‌ ತಿಳಿಸಿದರು.
ತಾಲ್ಲೂಕಿನ ಹಿತ್ತಲಹಳ್ಳಿಯ ಪ್ರಗತಿಪರ ರೈತ ಎಚ್‌.ಕೆ.ಸುರೇಶ್‌ ಅವರ ಚಾಕಿ ಕೇಂದ್ರಕ್ಕೆ ಮಂಗಳವಾರ ತಮ್ಮ ತಂಡದೊಡನೆ ಭೇಟಿ ನೀಡಿದ್ದ ಅವರು ಮಾತನಾಡಿದರು.
ಜಿಕೆವಿಕೆಯ ಪ್ರೊ.ಚಂದ್ರಶೇಖರ್‌ ಗೌಡ ಅವರೊಂದಿಗೆ ಶಿಡ್ಲಘಟ್ಟ ಮತ್ತು ರಾಮನಗರ ತಾಲ್ಲೂಕಿನಲ್ಲಿ ರೇಷ್ಮೆಯ ಬೆಳೆಯುವ ಬಗ್ಗೆ ಕ್ಷೇತ್ರದರ್ಶನ ಮಾಡಿ ಮಾಹಿತಿಯನ್ನು ಪಡೆಯುತ್ತಿದ್ದೇವೆ. ಇಂಡೋ ಸ್ವಿಜ್‌ ಜಂಟಿಯಾಗಿ ರೇಷ್ಮೆ ಬೆಳೆಯುವ ಕೆಲಸವನ್ನು ಸ್ವಿಟ್ಜರ್ ಲ್ಯಾಂಡ್‌ ದೇಶದಲ್ಲಿ ಮುಂದಿನ ದಿನಗಳಲ್ಲಿ ಕೈಗೊಳ್ಳುವ ಉದ್ದೇಶವಿದೆ. ಸ್ವಿಟ್ಜರ್ ಲ್ಯಾಂಡ್‌ನಲ್ಲಿ –10 ರಿಂದ 30 ಡಿಗ್ರಿಯವರೆಗೆ ತಾಪಮಾನ ವೈಪರೀತ್ಯವಿದೆ. ಆ ದೃಷ್ಟಿಯಿಂದಲೂ ಅಧ್ಯಯನ ಮಾಡುತ್ತಿದ್ದೇವೆ. ಭಾರತದ ತಮಿಳುನಾಡು, ಕೇರಳ , ಆಂದ್ರಪ್ರದೇಶ ಮತ್ತು ಕರ್ನಾಟಕದಲ್ಲಿ ಕೇಂದ್ರೀಯ ರೇಷ್ಮೆ ಮಂಡಳಿಯ ಸಹಕಾರ ಪಡೆದು ಮಾಹಿತಿ ಸಂಗ್ರಹಿಸುತ್ತಿದ್ದೇವೆ ಎಂದು ವಿವರಿಸಿದರು.

ಚಾಕಿ ಕೇಂದ್ರದಲ್ಲಿ ಮೊಟ್ಟೆಯಿಂದ ಹೊರಬಂದ ರೇಷ್ಮೆ ಹುಳುಗಳ ಪಾಲನೆಯ ಬಗ್ಗೆ ಮಾಹಿತಿ ವಿನಿಮಯ
ಚಾಕಿ ಕೇಂದ್ರದಲ್ಲಿ ಮೊಟ್ಟೆಯಿಂದ ಹೊರಬಂದ ರೇಷ್ಮೆ ಹುಳುಗಳ ಪಾಲನೆಯ ಬಗ್ಗೆ ಮಾಹಿತಿ ವಿನಿಮಯ

ಸ್ವಿಟ್ಜರ್ ಲ್ಯಾಂಡ್‌ ದೇಶದಲ್ಲಿ ಈಗಾಗಲೇ ಸ್ವಲ್ಪಮಟ್ಟಿಗಿನ ರೇಷ್ಮೆ ಉತ್ಪಾದನೆಯಿದ್ದು, ಭಾರತದ ಸಹಕಾರದೊಂದಿಗೆ ಅದನ್ನು ಅಭಿವೃದ್ಧಿಗೊಳಿಸುವ ಯೋಜನೆಯಿದೆ ಎಂದು ಅವರು ಹೇಳಿದರು.
ಹಿತ್ತಲಹಳ್ಳಿಯ ಪ್ರಗತಿಪರ ರೈತ ಎಚ್‌.ಕೆ.ಸುರೇಶ್‌ ಅವರ ಚಾಕಿ ಕೇಂದ್ರ, ಹಿಪ್ಪುನೇರಳೆ ತೋಟ, ರೇಷ್ಮೆ ಹುಳು ಸಾಕಾಣಿಕಾ ಮನೆ, ಬೋದಗೂರು ಕೆ.ಆಂಜಿನಪ್ಪ ಅವರ ರೇಷ್ಮೆ ಬಿತ್ತನೆ ಕೋಠಿ, ನಗರದ ಬೈಪಾಸ್‌ ರಸ್ತೆಯಲ್ಲಿರುವ ನಾರಾಯಣಪ್ಪ ಅವರ ರೇಷ್ಮೆ ನೂಲು ಬಿಚ್ಚಾಣಿಕಾ ಕೇಂದ್ರ, ರೇಷ್ಮೆ ಗೂಡಿನ ಮಾರುಕಟ್ಟೆಯನ್ನು ವೀಕ್ಷಿಸಿ ವಿವರಗಳನ್ನು ಪಡೆದು ಚಿಂತಾಮಣಿಯ ರೇಷ್ಮೆ ಕಾಲೇಜಿನಲ್ಲಿ ನಡೆಯುವ ರೇಷ್ಮೆ ಉಪ ಉತ್ಪನ್ನಗಳ ತಯಾರಿಕೆಯ ವೀಕ್ಷಣೆಗೆ ತೆರಳಿದರು.
ಜಿಲ್ಲಾ ಪಂಚಾಯಿತಿ ರೇಷ್ಮೆ ಉಪನಿರ್ದೇಶಕ ಬಿ.ಆರ್‌.ನಾಗಭೂಷಣ್‌, ಸಹಾಯಕ ನಿರ್ದೇಶಕ ಎಂ.ಸಿ.ಚಂದ್ರಪ್ಪ, ವಿಸ್ತರಣಾಧಿಕಾರಿ ರಾಮ್‌ಕುಮಾರ್‌, ರೇಷ್ಮೆ ಗೂಡಿನ ಮಾರುಕಟ್ಟೆಯ ಉಪನಿರ್ದೇಶಕ ರತ್ನಯ್ಯಶೆಟ್ಟಿ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಆರ್‌.ಶ್ರೀನಿವಾಸ್‌, ಎಪಿಎಂಸಿ ಸದಸ್ಯ ಎಸ್‌.ವೆಂಕಟೇಶ್‌, ವಿಶ್ವನಾಥ್‌, ಗೋಪಾಲಗೌಡ, ಕ್ಯಾತಪ್ಪ ಮತ್ತಿತರರು ಹಾಜರಿದ್ದರು.

ರೈತರು ಹಾಗೂ ರೀಲರುಗಳ ಮುಗಿಯದ ಸಂಕಷ್ಟ

0

ಒಂದಡೆ ರೇಷ್ಮೆ ಗೂಡಿನ ಮಾರುಕಟ್ಟೆಗೆ ಬರುತ್ತಿರುವ ರೇಷ್ಮೆ ಗೂಡಿನ ಪ್ರಮಾಣದಲ್ಲಿ ಗಣನೀಯವಾಗಿ ಇಳಿಮುಖವಾಗುತ್ತಿದ್ದರೆ, ಮತ್ತೊಂದೆಡೆ ಆರ್ಥಿಕ ವ್ಯವಹಾರಕ್ಕೆ ಆಗುತ್ತಿರುವ ತೊಂದರೆಯಿಂದಾಗಿ ರೈತರು ಹಾಗೂ ರೀಲರುಗಳು ಸಂಕಷ್ಟ ಎದುರಿಸುವಂತಾಗಿದೆ. ರೇಷ್ಮೆಯನ್ನೇ ನಂಬಿ ಬದುಕುತ್ತಿರುವ ತಾಲ್ಲೂಕಿಗೆ ಬರಗಾಲದ ಪರಿಸ್ಥಿತಿ ಉಂಟಾಗಿದೆ.
ಶಿಡ್ಲಘಟ್ಟದ ರೇಷ್ಮೆಗೂಡು ಮಾರುಕಟ್ಟೆಗೆ ಬರುತ್ತಿದ್ದ ಸುಮಾರು ೧,೨೦೦ ಲಾಟುಗಳಷ್ಟು ಗೂಡಿಗೆ ಬದಲಾಗಿ ಕೇವಲ ೫೦೦ ರಿಂದ ೬೦೦ ಲಾಟುಗಳಷ್ಟೆ ಬರುತ್ತಿವೆ. ತೀವ್ರ ನೀರಿನ ಅಭಾವ ಹಾಗೂ ಉತ್ಪಾದನಾ ವೆಚ್ಚಗಳು ಏರಿಕೆಯಾಗುತ್ತಿರುವುದರಿಂದ ಬಹುತೇಕ ರೈತರು ರೇಷ್ಮೆಗೂಡು ಉತ್ಪಾದನೆಯಿಂದ ವಿಮುಖರಾಗುತ್ತಿದ್ದಾರೆ.
ಕೇಂದ್ರ ಸರ್ಕಾರ ಕಳೆದ ವರ್ಷ ನವೆಂಬರ್ ೮ ರಂದು ೫೦೦ ಮತ್ತು ೧೦೦೦ ಮುಖಬೆಲೆಯ ನೋಟುಗಳನ್ನು ರದ್ದುಗೊಳಿಸಿದ ನಂತರ ಉಂಟಾಗಿರುವ ಆರ್ಥಿಕ ಬಿಕ್ಕಟ್ಟಿನಿಂದಾಗಿ ರೈತರು ಮತ್ತು ರೀಲರುಗಳು ಹೊರಬರಲಾಗಿಲ್ಲ. ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ವಾರಕ್ಕೆ ಕೇವಲ ೨೪ ಸಾವಿರ ರೂಪಾಯಿಗಳ ಹಣವನ್ನಷ್ಟೆ ಡ್ರಾ ಮಾಡಿಕೊಳ್ಳಲು ನೀಡಿದ್ದ ಮಿತಿಯಿಂದಾಗಿ ಗೂಡು ಖರೀದಿಗಾಗಿ ಬರುವ ರೀಲರುಗಳು ಗೂಡಿನ ಪ್ರಮಾಣಕ್ಕೆ ಅನುಗುಣವಾಗಿ ಹಣವನ್ನು ಹೊಂದಿಸಲು ಸಾಧ್ಯವಾಗದೆ ಬಹಳಷ್ಟು ಮಂದಿ ಹರಾಜಿನಲ್ಲಿ ಭಾಗವಹಿಸುತ್ತಿಲ್ಲ.
ಕೆಲವು ರೀಲರುಗಳು ರೈತರಿಗೆ ನೇರವಾಗಿ ಹಣ ಪಾವತಿ ಮಾಡಲು ಸಾಧ್ಯವಾಗದೆ ಇರುವ ಕಾರಣ ರೈತರುಗಳಿಗೆ ಚೆಕ್ಕುಗಳ ಮೂಲಕ ಹಣ ಪಾವತಿ ಮಾಡುತ್ತಿದ್ದಾರೆ.
ರೀಲರುಗಳು ನೀಡುತ್ತಿರುವ ಚೆಕ್ಕುಗಳಲ್ಲಿ ಕಂಡು ಬರುತ್ತಿರುವ ಸಹಿಗಳು ತಾಳೆಯಾಗದೆ ಇರುವುದು, ಬ್ಯಾಂಕುಗಳ ಬದಲಾವಣೆ ಹಾಗು ಖಾತೆಗಳಲ್ಲಿ ಹಣ ಇಲ್ಲದೆ ಇರುವುದು ಸೇರಿದಂತೆ ಅನೇಕ ಸಮಸ್ಯೆಗಳನ್ನು ರೈತರು ಎದುರಿಸುವಂತಾಗಿದೆ.
ರೀಲರುಗಳು ಪ್ರತಿ ಕೆ.ಜಿ.ಗೂಡಿಗೆ ಶೇ.1 ರಷ್ಟು ಕಮಿಷನ್ ನೀಡಿ ಗೂಡು ಖರೀದಿ ಮಾಡಬೇಕಾಗಿದೆ. ರೈತರು ಕೂಡಾ ಒಂದು ಕೆ.ಜಿ.ಗೂಡಿಗೆ ಶೇ.1 ರಷ್ಟು ಕಮಿಷನ್ ನೀಡಿ ಗೂಡು ಮಾರಾಟ ಮಾಡಬೇಕಾಗಿದೆ. ಒಟ್ಟು ದಿನಕ್ಕೆ ಒಂದರಿಂದ ಒಂದೂವರೆ ಕೋಟಿ ರೂಪಾಯಿಗಳಷ್ಟು ಹಣದ ವಹಿವಾಟು ನಡೆಯುತ್ತಿದ್ದು ಇಲ್ಲೆ ಬ್ಯಾಂಕಿನ ಶಾಖೆಯನ್ನು ತೆರೆಯಬೇಕು ಎನ್ನುವ ಒತ್ತಾಯವು ಕೂಡ ಕೇಳಿಬರುತ್ತಿದೆ. ದಿನವೊಂದಕ್ಕೆ ೩ ಲಕ್ಷ ರೂಪಾಯಿಗಳು ತೆರಿಗೆ ರೂಪದಲ್ಲಿ ಸರ್ಕಾರಕ್ಕೆ ಸಂದಾಯವಾಗುತ್ತಿದ್ದು ರೈತರು ತೀವ್ರ ಸಂಕಷ್ಟದ ನಡುವೆ ಉತ್ಪಾದನೆ ಮಾಡುತ್ತಿರುವ ಗೂಡಿಗೆ ಪಡೆಯುತ್ತಿರುವ ಕಮಿಷನ್ ಹಣ ಹಾಗೂ ರೀಲರುಗಳು ನೀಡುತ್ತಿರುವ ಕಮಿಷನ್ ಹಣಕ್ಕೆ ಸಂಪೂರ್ಣ ವಿನಾಯಿತಿ ನೀಡಬೇಕು. ಇಲ್ಲವೆ ಅದನ್ನು ಶೇ.0.5 ಗೆ ಇಳಿಕೆ ಮಾಡಬೇಕು ಎನ್ನುವ ಬೇಡಿಕೆಯು ಸಹ ಕೇಳಿಬರುತ್ತಿದೆ.
‘ಮಾರುಕಟ್ಟೆಯಲ್ಲಿ ಸಂಪೂರ್ಣವಾಗಿ ಹಣದ ವ್ಯವಹಾರ ನಡೆಸಲು ಇದುವರೆಗೂ ಸಾಧ್ಯವಾಗುತ್ತಿಲ್ಲವಾದ್ದರಿಂದ ರೈತರು ಹಾಗೂ ರೀಲರುಗಳೊಂದಿಗೆ ಸಮಾಲೋಚನೆ ನಡೆಸಿದ ನಂತರ ಚೆಕ್ಕುಗಳ ಮೂಲಕ ಹಣವನ್ನು ಪಾವತಿ ಮಾಡುವ ವ್ಯವಸ್ಥೆ ಮಾಡಿದ್ದೇವೆ. ಕೆಲವು ತಾಂತ್ರಿಕ ದೋಷಗಳು ಹೊರತು ಪಡಿಸಿದರೆ ರೈತರಿಗೆ ಹಣ ಸಂದಾಯವಾಗದೆ ಚೆಕ್‌ಗಳು ಬೌನ್ಸ್ ಆಗುತ್ತಿರುವ ಪ್ರಕರಣಗಳು ಕಡಿಮೆ. ಈ ರೀತಿಯ ಸಮಸ್ಯೆಗಳ ಬಗ್ಗೆ ರಾಜ್ಯ ಸರ್ಕಾರದ ಹಣಕಾಸು ಇಲಾಖೆಗೂ ನಾವು ಮನವಿ ಸಲ್ಲಿಸಿದ್ದೇವೆ. ಕ್ಯಾಸ್‌ಲೆಸ್ ವಹಿವಾಟಿಗಾಗಿ ಅನುಕೂಲ ಮಾಡಿಕೊಡಬೇಕು ಎನ್ನುವ ಬೇಡಿಕೆಯನ್ನು ಇಟ್ಟಿದ್ದೇವೆ.
ರುಕಟ್ಟೆಗೆ ಬಂದು ವಹಿವಾಟು ನಡೆಸುತ್ತಿದ್ದ ರೈತರಿಗೆ ಸರ್ಕಾರದಿಂದ ಸಿಗುತ್ತಿದ್ದ ಪ್ರೋತ್ಸಾಹಧನವನ್ನು ನಿಲ್ಲಿಸಿರುವುದರಿಂದ ಕೆಲವು ರೈತರು ನೇರವಾಗಿ ರೀಲರುಗಳ ಮನೆ ಬಾಗಿಲಿಗೆ ತೆಗೆದುಕೊಂಡು ಹೋಗಿ ವಹಿವಾಟು ನಡೆಸಿಕೊಳ್ಳುತ್ತಿದ್ದಾರೆ. ಆದ್ದರಿಂದ ಮಾರುಕಟ್ಟೆಗೆ ಬರುತ್ತಿರುವ ಗೂಡಿನ ಪ್ರಮಾಣದಲ್ಲಿಯೂ ಇಳಿಮುಖವಾಗಿದೆ’ ಎಂದು ಮಾರುಕಟ್ಟೆ ಉಪನಿರ್ದೇಶಕ ರತ್ನಯ್ಯಶೆಟ್ಟಿ ತಿಳಿಸಿದ್ದಾರೆ.

ತಾತಹಳ್ಳಿ ಸರ್ಕಾರಿ ಶಾಲೆಯಲ್ಲಿ ಚಿಣ್ಣರ ಸಂಭ್ರಮ

0

ಗ್ರಾಮದ ಯುವಕರು ಶಾಲೆಯ ಬೆನ್ನೆಲುಬಾಗಿ ನಿಂತಿರುವುದು ಮಾದರಿಯಾಗಿದೆ. ಶಾಲೆಯು ದೇಗುಲದಂತೆ. ನಮ್ಮ ಮಕ್ಕಳ ಮಾನಸಿಕ ಬೆಳವಣಿಗೆಯ ತಾಣವಾದ ಶಾಲೆಯ ವ್ಯವಸ್ಥೆಯನ್ನು ಗಟ್ಟಿಗೊಳಿಸಲು ಸಮುದಾಯದ ಸಹಕಾರ ಅಗತ್ಯ ಎಂದು ಕಸಾಪ ತಾಲ್ಲೂಕು ಅಧ್ಯಕ್ಷ ಬಿ.ಆರ್‌.ಅನಂತಕೃಷ್ಣ ತಿಳಿಸಿದರು.
ತಾಲ್ಲೂಕಿನ ತಾತಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ಶಾಲೆ ಮತ್ತು ಜೈಭಾರತ್‌ ಯುವಕರ ಸಂಘದ ಸಹಭಾಗಿತ್ವದಲ್ಲಿ ನಡೆದ ಶಾಲಾ ಮಕ್ಕಳ ಸಾಂಸ್ಕೃತಿಕ ಪ್ರತಿಭೆಯನ್ನು ಪ್ರದರ್ಶಿಸುವ ಚಿಣ್ಣರ ಸಂಭ್ರಮ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪರಿಸರದಿಂದ ನಾವು ಸಾಕಷ್ಟು ಪಾಠ ಕಲಿಯಬಹುದಾಗಿದೆ. ಜೇನು ನೊಣ ಮತ್ತು ಇರುವೆಗಳ ಬದುಕಿನಿಂದ ಸಾಕಷ್ಟು ವಿಷಯಗಳನ್ನು ಕಲಿಯಬಹುದು. ಒಗ್ಗಟ್ಟಿದ್ದರೆ ಶಕ್ತಿಯಿರುತ್ತದೆ. ಆ ಶಕ್ತಿಯನ್ನು ಸಕಾರಾತ್ಮಕವಾಗಿ ಬಳಸುವ ಮೂಲಕ ಗ್ರಾಮದ ಜೈಭಾರತ್‌ ಯುವಕರ ಸಂಘದ ಸದಸ್ಯರು ಶಾಲೆಯ ಬೆಳವಣಿಗೆಗೆ ಕೈಜೋಡಿಸಿರುವುದು ಶ್ಲಾಘನೀಯ ಎಂದು ಹೇಳಿದರು.
ಅಕ್ಷರದಾಸೋಹ ಸಹಾಯಕ ನಿರ್ದೇಶಕ ಎನ್‌.ವೆಂಕಟೇಶಪ್ಪ ಮಾತನಾಡಿ, ಮಕ್ಕಳನ್ನು ಪಠ್ಯಪುಸ್ತಕಗಲಿಗೆ ಮಾತ್ರ ಸೀಮಿತಗೊಳಿಸದೆ ಪಠ್ಯೇತರ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಂತಹ ವೇದಿಕೆಗಳನ್ನು ಶಿಕ್ಷಕರು ಕಲದಪಿಸಿಕೊಡುವುದು ಸೂಕ್ತ. ಇಂಥಹ ವಾತಾವರಣ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಕಲ್ಪಿಸಿದಲ್ಲಿ ಸರ್ಕಾರಿ ಶಾಲೆಗಳು ಉಳಿಯುತ್ತವೆ ಎಂದರು.
ಕ್ಷೇತ್ರ ಸಮನ್ವಯಾಧಿಕಾರಿ ಎನ್‌.ಸುಮಾ ಮಾತನಾಡಿ, ಇಲಾಖೆ ಮಕ್ಕಳಿಗೆ ಹಲವಾರು ಪ್ರೋತ್ಸಾಹಕ ಕಾರ್ಯಕ್ರಮಗಳನ್ನು ಜಾರಿಗೊಳಿಸಿ ಅವರ ಕಲಿಕೆಗೆ ಪ್ರೋತ್ಸಾಹ ನೀಡುತ್ತಿದೆ. ಪೋಷಕರು ಖಾಸಗಿ ಶಾಲೆಗಳ ಬಗೆಗಿನ ವ್ಯಾಮೋಹವನ್ನು ಬಿಟ್ಟು ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ದಾಖಲಿಸುವಂತೆ ವಿನಂತಿಸಿದರು.
ಜೈಭಾರತ್‌ ಯುವಕರ ಸಂಘದ ಸದಸ್ಯರು ಶಿಕ್ಷಕರನ್ನು ಗೌರವಿಸುವ ಮೂಲಕ ಗುರುವಂದನಾ ಕಾರ್ಯಕ್ರಮವನ್ನು ನಡೆಸಿದರು. ಈ ಸಂದರ್ಭದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಮಕ್ಕಳಿಗೆ ತರಬೇತಿ ನೀಡಿದ ಗ್ರಾಮದ ಚೈತ್ರಾ ಮತ್ತು ಲಕ್ಷ್ಮಿ ಅವರನ್ನು ಸನ್ಮಾನಿಸಲಾಯಿತು. ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.
ಇಸಿಓ ಡಿ.ಎಸ್‌.ಲಕ್ಷ್ಮೀನರಸಿಂಹಗೌಡ, ಬೈರಾರೆಡ್ಡಿ, ಸಿ.ಆರ್‌.ಪಿ ಎಸ್‌.ಸುರೇಶ್‌ಬಾಬು, ಆರ್‌.ಟಿ.ಇ ಕಾರ್ಯದರ್ಶಿ ಸತೀಶ್‌, ಎಸ್‌ಡಿಎಂಸಿ ಅಧ್ಯಕ್ಷ ಕೃಷ್ಣಪ್ಪ, ಶಿಕ್ಷಕರಾದ ಜೆ.ಶ್ರೀನಿವಾಸ್‌, ಎಸ್‌.ಕಲಾಧರ್‌, ಮುಖ್ಯಶಿಕ್ಷಕಿ ಸರಸ್ವತಮ್ಮ, ಶಿಕ್ಷಕರಾದ ಎಂ.ದೇವರಾಜ್‌, ಡಿ.ಎಸ್‌.ಶ್ರೀಕಾಂತ್‌, ಎಚ್‌.ಆರ್‌.ಮಂಜುನಾಥ್‌, ಕೆ.ಶ್ರೀನಿವಾಸಯಾದವ್‌, ಎ.ತ್ರಿವೇಣಿ, ಕೆ.ಎ.ನಾಗರಾಜ್‌, ಅಂಗನವಾಡಿ ಶಿಕ್ಷಕಿ ನಾಗರತ್ನಮ್ಮ, ಜೈಭಾರತ್‌ ಯುವಕರ ಸಂಘದ ಸದಸ್ಯರು ಮತ್ತಿತರರು ಹಾಜರಿದ್ದರು.

ಗ್ರಾಮದ ಸಾಕ್ಷರತೆಗೆ ಕಾರಣವಾದ ಸರ್ಕಾರಿ ಪ್ರಾಥಮಿಕ ಶಾಲೆ

0

ನಿಲುವರಾತಹಳ್ಳಿ ಶಿಡ್ಲಘಟ್ಟ ತಾಲ್ಲೂಕಿನ ಸಾದಲಿ ಪಂಚಾಯಿತಿಯ ಪುಟ್ಟ ಗ್ರಾಮ. ಜನಸಂಖ್ಯೆ ಕೇವಲ 250. ಇಲ್ಲಿನ ವಿಶೇಷವೆಂದರೆ ಹೊಸ ತಲೆಮಾರಿನವರು ಶೇ.95 ರಷ್ಟು ಮಂದಿ ಪಿಯುಸಿ ಪಾಸಾಗಿದ್ದಾರೆ. ಶೇ.100 ರಷ್ಟು ಎಸ್‌ಎಸ್‌ಎಲ್‌ಸಿ ಪೂರೈಸಿದ್ದಾರೆ. ಇಬ್ಬರು ಎಂಜಿನಿಯರಿಂಗ್‌ ಓದುತ್ತಿದ್ದರೆ, ಇಬ್ಬರು ಸ್ನಾತಕೋತ್ತರ ಪದವಿಯಲ್ಲಿದ್ದಾರೆ, ಕೆ.ಐ.ಎಸ್‌.ಎಫ್‌ ನಲ್ಲಿ ಒಬ್ಬರು, ಸಿ.ಐ.ಎಸ್‌.ಎಫ್‌ ನಲ್ಲಿ ಇಬ್ಬರಿದ್ದಾರೆ. ವಕೀಲರು, ಶಿಕ್ಷಕರು ಒಂದಿಬ್ಬರಿದ್ದಾರೆ. ಇದಕ್ಕೆ ಕಾರಣವಾಗಿರುವುದು ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆ.
‘ಸುಮಾರು 1994 ರಲ್ಲಿ ಈ ಗ್ರಾಮದಲ್ಲಿ ಸರ್ಕಾರಿ ಶಾಲೆಯನ್ನು ಪ್ರಾರಂಭಿಸಲಾಯಿತು. ಒಂದರಿಂದ ನಾಲ್ಕನೇ ತರಗತಿಯವರೆಗೆ ಶಾಲೆ ಪ್ರಾರಂಭವಾಯಿತು. ಮೊದಲು ರೆಡ್ಡಪ್ಪರೆಡ್ಡಿ ಶಿಕ್ಷಕರಾಗಿದ್ದರು. ಆಗ ಶಾಲೆಯ ಮುಂದೆ ಚರಂಡಿ ನೀರು ಹರಿದು ಹೋಗುತ್ತಿತ್ತು. ಶಾಲೆಗೆ ಹೋಗಲಿ ಇದ್ದದ್ದೇ ಒಂದು ಕಾಲುದಾರಿ. ಆ ದಾರಿಯ ಅಕ್ಕಪಕ್ಕ ತಿಪ್ಪೆ ಗುಂಡಿಗಳು, ಕಳ್ಳಿ, ಪೊದೆಗಳು ಆವರಿಸಿದ್ದವು’ ಎಂದು ಹಿಂದೆ ಇದ್ದ ಪರಿಸ್ಥಿತಿಯನ್ನು ನೆನಪಿಸಿಕೊಳ್ಳುತ್ತಾರೆ ಶಿಕ್ಷಕ ಪ್ರಭಾಕರ್‌.
ಶಿಕ್ಷಕರಾದ ಛಲಪತಿಗೌಡ ಮತ್ತು ಪ್ರಭಾಕರ್‌ 2002 ರಲ್ಲಿ ನಿಲುವರಾತಹಳ್ಳಿ ಶಾಲೆಗೆ ಬಂದು ಸುಮಾರು ಹತ್ತು ವರ್ಷಗಳಲ್ಲಿ ಶಾಲೆಯ ಸ್ವರೂಪವನ್ನೇ ಬದಲಿಸಿದರು. ಶಾಲೆಯ ಮುಂದಿದ್ದ ಗ್ರಾಮಠಾಣೆಗೆ ಸೇರಿದ 2 ಎಕರೆ ಸ್ಥಳವನ್ನು ಗ್ರಾಮಸ್ಥರ ಮತ್ತು ಪಂಚಾಯಿತಿಯವರ ಮನವೊಲಿಸಿ ಶಾಲೆಯ ಹೆಸರಿಗೆ ಮಾಡಿಸಿದರು. ಹಿಂದೆ ಹಳೆಯ ಊರಿದ್ದ ಆ ಸ್ಥಳದಲ್ಲಿ ನೆಲವು ಬಲು ಗಟ್ಟಿಯಾಗಿ, ಕಲ್ಲುಗಳಿಂದ ಕೂಡಿತ್ತು. ಅದನ್ನೆಲ್ಲಾ ಸ್ವಚ್ಛಗೊಳಿಸಿ, ಪ್ರತಿ ಮನೆಯವರೂ ಹತ್ತು ಗುಂಡಿ ತೆಗೆದು ಹತ್ತು ಗಿಡಗಳನ್ನು ನೆಡಲು ಪ್ರೇರೇಪಿಸಿದರು. ಅರಣ್ಯ ಇಲಾಖೆಯವರ ಸಹಕಾರದಿಂದ ಗಿಡ ಪಡೆದರು. ನೀರಿನ ಪೈಪ್‌ಲೈನ್‌, ಟ್ಯಾಂಕನ್ನು ಮಾಡಿಸಿಕೊಂಡರು. ಮನೆ ಮನೆಗೂ ಹೋಗಿ ಶಾಲೆಗೆ ಮಕ್ಕಳನ್ನು ಕರೆತಂದರು. ಈಗ ಶಾಲೆಯಲ್ಲಿ ಓದಿದ ಮಕ್ಕಳು ವಿದ್ಯಾವಂತರಾಗಿದ್ದರೆ, ಶಾಲಾ ಆವರಣದ ಗಿಡಗಳು ಇಪ್ಪತ್ತು ಅಡಿಗೂ ಹೆಚ್ಚು ಎತ್ತರವಾಗಿ ಬೆಳೆದಿವೆ. ಇವರ ಶ್ರಮದ ಫಲವಾಗಿ ಶಿಕ್ಷಕ ಛಲಪತಿಗೌಡ ಅವರಿಗೆ ಶಿಕ್ಷಣ ಇಲಾಖೆ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ನೀಡಿ ಗೌರವಿಸಿದೆ.
ಶಾಲಾ ಆವರಣದಲ್ಲಿ ಸಿಲ್ವರ್‌, ಅಶೋಕ, ಮಹಾಗನಿ, ಬಸವನಪಾದ, ಹೊಂಗೆ, ನೇರಳೆ, ಹಲಸು, ಟಕೋಮ, ಬೇವು, ಜತ್ರೋಪ, ಬಿಲ್ವಪತ್ರೆ, ಶ್ರೀಗಂಧ ಮೊದಲಾದ ಮರಗಳಿವೆ. ವಿಶೇಷವೆಂದರೆ ಈ ಶಾಲೆಗೆ ಕಾಂಪೋಂಡ್‌ ಇಲ್ಲ. ಆದರೂ ವನರಾಶಿಯನ್ನು ಮತ್ತು ಶಾಲಾ ಆವರಣವನ್ನು ಯಾರೂ ಹಾಳು ಮಾಡುವುದಿಲ್ಲ. ಶಾಲಾ ಆವರಣದಲ್ಲಿ ಗಣೇಶನ ಗುಡಿ, ನೇತಾಜಿ ಚಿಣ್ಣರ ವೇದಿಕೆ ಮತ್ತು ಧ್ವಜಸ್ತಂಭವನ್ನು ನಿರ್ಮಿಸಿಕೊಂಡಿದ್ದಾರೆ. ಪ್ರತಿ ದಿನ ಶಾಲೆಗೆ ಕನ್ನಡ ದಿನಪತ್ರಿಕೆಯನ್ನು ತರಿಸುತ್ತಾರೆ. ಮಕ್ಕಳು ವಿಶೇಷ ವಿಷಯಗಳನ್ನು ಕತ್ತರಿಸಿ ಅಂಟಿಸಿಡುವ ರೂಢಿಯಿದೆ.
‘ರಾಯಚೂರಿನ ಲಿಂಗಸೂರು ತಾಲ್ಲೂಕಿನ ಗೌಡೂರು ಕಡೆಯಿಂದ ಕೆಲ ಕುಟುಂಬಗಳು ಇಲ್ಲೇ ಪಕ್ಕದ ಎಸ್ಟೇಟಿಗೆ ಕೆಲಸಕ್ಕೆಂದು ಬಂದಿದ್ದರು. ಅವರು ಯಾರೂ ಶಾಲೆಯ ಮುಖವನ್ನೇ ನೋಡಿದವರಲ್ಲ. ಅವರ ಮನವೊಲಿಸಿ ಅವರ ಮಕ್ಕಳನ್ನು ಶಾಲೆಗೆ ಸೇರಿಸಿಕೊಂಡೆವು. ಅವರಲ್ಲಿ ಈಗ ಒಬ್ಬ ಸೋಮೇನಹಳ್ಳಿಯಲ್ಲಿ ಎಸ್‌ಎಸ್‌ಎಲ್‌ಸಿ ಓದುತ್ತಿದ್ದರೆ, ಒಬ್ಬಳು ಒಂಭತ್ತನೇ ತರಗತಿಯಲ್ಲಿದ್ದಾಳೆ. ಇಬ್ಬರು ಎಂಟನೇ ತರಗತಿಯಲ್ಲಿದ್ದಾರೆ. ಈಗಲೂ ಒಂದು ಗಂಡು ಮತ್ತು ಒಂದು ಹೆಣ್ಣು ಮಕ್ಕಳು ಒಂದನೇ ತರಗತಿಯಲ್ಲಿದ್ದಾರೆ. 16 ಮಕ್ಕಳು ನಮ್ಮಲ್ಲಿ ಈಗ ಇದ್ದಾರೆ. ಶಾಲೆಯ ಅಭಿವೃದ್ಧಿಗೆ ಗ್ರಾಮಸ್ಥರು ಸದಾ ನೆರವು ನೀಡುತ್ತಾರೆ. ಗಿಡ ಮತ್ತು ಮಕ್ಕಳಲ್ಲಿ ನಮಗೆ ವ್ಯತ್ಯಾಸವಿಲ್ಲ. ನಮ್ಮ ಆರೈಕೆಯಿಂದ ಅವರು ಮುಂದೆ ಇತರರಿಗೆ ನೆರಳಾಗುತ್ತಾರೆ’ ಎನ್ನುತ್ತಾರೆ ಶಿಕ್ಷಕ ಪ್ರಭಾಕರ್‌.

ನಕ್ಷತ್ರದಾಮೆಗಳ ವಶ

0

ತಾಲ್ಲೂಕಿನ ದಿಬ್ಬೂರಹಳ್ಳಿ ಠಾಣಾ ವ್ಯಾಪ್ತಿಯ ಬಾಳೇಗೌಡನಹಳ್ಳಿಯಲ್ಲಿ ಅಕ್ರಮವಾಗಿ ನಕ್ಷತ್ರದ ಆಮೆಗಳನ್ನಿರಿಸಿಕೊಂಡಿದ್ದ ವಿಜಯ್‌(25) ಎಂಬುವನನ್ನು ಪೊಲೀಸರು ಮತ್ತು ಅರಣ್ಯ ಇಲಾಖೆಯ ಸಿಐಡಿ ತಂಡ ಭಾನುವಾರ ಬಂಧಿಸಿ, 280 ನಕ್ಷತ್ರದಾಮೆಗಳನ್ನು ವಶಪಡಿಸಿಕೊಂಡಿದ್ದಾರೆ.
ಆಂಧ್ರದ ಕಡೆಯಿಂದ ಆಮೆಗಳನ್ನು ತರಿಸಿ ದೆಹಲಿಗೆ ಸಾಗಿಸಲು ಪ್ರಯತ್ನಿಸುತ್ತಿದ್ದ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ. ಅರಣ್ಯ ಇಲಾಖೆಯ ಸಿಪಿಐ ಪುರುಷೋತ್ತಮ್‌, ದಿಬ್ಬೂರಹಳ್ಳಿ ಠಾಣೆಯ ಸಬ್‌ಇನ್ಸ್‌ಪೆಕ್ಟರ್‌ ವಿಜಯ್‌ರೆಡ್ಡಿ ಮತ್ತು ತಂಡ ಧಾಳಿಯಲ್ಲಿ ಭಾಗವಹಿಸಿದ್ದು, ಪ್ರಕರಣವನ್ನು ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಅಧ್ಯಕ್ಷರ ಆಯ್ಕೆ

0

ಶಿಡ್ಲಘಟ್ಟ ತಾಲ್ಲೂಕಿನ ಎಸ್‌.ದೇವಗಾನಹಳ್ಳಿ ಪಂಚಾಯಿತಿಯ ಎಸ್‌.ಗುಂಡ್ಲಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಜೆಡಿಎಸ್‌ ಬೆಂಬಲಿತ ವೆಂಕಟರೆಡ್ಡಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಟಿ.ಎನ್‌.ವೆಂಕಟೇಶಪ್ಪ, ನಿರ್ದೇಶಕರಾಗಿ ಎಸ್‌.ವಿ.ಶ್ರೀರಾಮಪ್ಪ, ಜಿ.ವಿ.ವೇಣುಗೋಪಾಲ್‌, ರತ್ನಮ್ಮ, ಟಿ.ಯರ್ರಪ್ಪ, ನಾರಾಯಣಸ್ವಾಮಿ, ಮುನಿಲಕ್‌ಮಮ್ಮ ಆಯ್ಕೆಯಾಗಿದ್ದಾರೆ.

ತಾಲ್ಲೂಕಿನ ಸರ್ಕಾರಿ ನೌಕರರು ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆ

0

ಶಿವಮೊಗ್ಗದಲ್ಲಿ ನಡೆದ ಸರ್ಕಾರಿ ನೌಕರರ ಕ್ರೀಡಾಕೂಟದ ರಾಜ್ಯಮಟ್ಟದ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ತಾಲ್ಲೂಕಿನ ಸರ್ಕಾರಿ ನೌಕರರು ಗೆಲುವು ಸಾಧಿಸಿ ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಕೇರಂ ಸಿಂಗಲ್ಸ್ ಸ್ಪರ್ಧೆಯಲ್ಲಿ ಜಂಗಮಕೋಟೆ ಸಿಆರ್‌ಪಿ ಆರ್.ಸುಂದರಾಚಾರಿ, ಹತ್ತು ಸಾವಿರ ಮೀಟರ್ ಓಟದ ಸ್ಪರ್ಧೆಯಲ್ಲಿ ಶಿಕ್ಷಕ ಗಂಗಾಧರ್ ಹಾಗೂ ಹಡಲ್ಸ್ ವಿಭಾಗದಲ್ಲಿ ಶಿಕ್ಷಕ ಅನಂತ ದ್ವಿತೀಯ ಬಹುಮಾನ ಪಡೆದು ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಿ ತಾಲ್ಲೂಕಿಗೆ ಕೀರ್ತಿ ತಂದಿದ್ದಾರೆ. ಜೊತೆಗೆ ಕೇರಂ ಡಬಲ್ಸ್‌ನಲ್ಲಿ ಟಿ.ಟಿ. ನರಸಿಂಹಪ್ಪ ಮತ್ತು ಸುಂದರಾಚಾರಿ ತೃತೀಯ ಸ್ಥಾನ ಪಡೆದಿದ್ದಾರೆ.
ಅತ್ಯುತ್ತಮವಾಗಿ ಸಾಧನೆ ಮಾಡಿದ ಸರ್ಕಾರಿ ನೌಕರರಿಗೆ ತಾಲೂಕು ಸರ್ಕಾರಿ ನೌಕರರ ಸಂಘದ ಅದ್ಯಕ್ಷ ಕೇಶವರೆಡ್ಡಿ, ಮಾಜಿ ಅಧ್ಯಕ್ಷ ಗುರುರಾಜ್‌ರಾವ್, ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ರಘುನಾಥ್‌ರೆಡ್ಡಿ, ಸಮನ್ವಯಾಧಿಕಾರಿ ಸುಮ ಹಾಗೂ ಸರ್ಕಾರಿ ನೌಕರರ ಸಂಘದ ರಾಜ್ಯ ಪರಿಷತ್ತಿನ ಸದಸ್ಯ ಸುಬ್ಬಾರೆಡ್ಡಿ ಮತ್ತು ಪದಾಧಿಕಾರಿಗಳು ಅಭಿನಂದಿಸಿದ್ದಾರೆ.

ಸರ್ಕಾರಿ ರೇಷ್ಮೆ ಗೂಡಿನ ಮಾರುಕಟ್ಟೆಯಲ್ಲಿ ‘ಕಾವೇರಿ ಗೋಲ್ಡ್’ ಹೊಸ ತಳಿ

0

ನಗರದ ಸರ್ಕಾರಿ ರೇಷ್ಮೆ ಗೂಡಿನ ಮಾರುಕಟ್ಟೆಯಲ್ಲಿ ‘ಕಾವೇರಿ ಗೋಲ್ಡ್’ ರೇಷ್ಮೆ ಗೂಡು ಆಗಮಿಸಿದ್ದು, ಹೊಸ ರೇಷ್ಮೆ ಗೂಡಿನ ತಳಿಯ ಬಗ್ಗೆ ರೈತರು ಮತ್ತು ರೀಲರುಗಳು ಕುತೂಹಲ ತಳೆದಿದ್ದಾರೆ.
ಚಿಂತಾಮಣಿ ತಾಲ್ಲೂಕಿನ ಕೈವಾರದ ಸುಬ್ಬರೆಡ್ಡಿ ಪ್ರಯೋಗಿಕವಾಗಿ ಬೆಳೆದಿರುವ ಹೊಸತಳಿ ‘ಕಾವೇರಿ ಗೋಲ್ಡ್’ ಒಂದು ಕೆ.ಜಿ ೫೦೦ ರೂಗಳಿಗೆ ಮಾರಾಟ ವಾಗುವ ಮೂಲಕ ದಾಖಲೆ ನಿರ್ಮಿಸಿದೆ.
ಮೈಸೂರಿನ ಕೇಂದ್ರೀಯ ರೇಷ್ಮೆ ಸಂಶೋಧನಾ ಮತ್ತು ತರಬೇತಿ ಸಂಸ್ಥೆಯ ವಿಜ್ಞಾನಿಯ ಡಾ.ಮೋರಿಸ್ ಮೂಲಕ ಚಿಂತಾಮಣಿ ತಾಲ್ಲೂಕಿನ ಕೈವಾರದ ಸಾವಿರ ಮೊಟ್ಟೆಗಳನ್ನು ಖರೀದಿ ಮಾಡಿ ಸುಮಾರು ೯೨೦-೯೩೦ ಕೆಜಿ ಗೂಡು ಉತ್ಪಾದನೆ ಮಾಡಿದ್ದು, ಮಾರುಕಟ್ಟೆಗೆ ತಂದಿದ್ದ ಸ್ಯಾಂಪಲ್ ಗೂಡು ಗರಿಷ್ಠ ೫೦೦ ರೂಗಳಿಗೆ ರೀಲರ್ ರೋಷನ್‌ಪಾಷ ಖರೀದಿ ಮಾಡಿದ್ದಾರೆ.
ಕೋಲಾರದ ಕ್ಯಾಲನೂರಿನ ಮಡಿವಾಳ ಕ್ರಾಸ್‌ನಲ್ಲಿ ಮೈಸೂರಿನ ಕೇಂದ್ರೀಯ ರೇಷ್ಮೆ ಸಂಶೋಧನಾ ಮತ್ತು ತರಬೇತಿ ಸಂಸ್ಥೆಯ ನಿರ್ದೇಶಕರಿಂದ ಸರಬರಾಜು ಮಾಡಿರುವ ‘ಕಾವೇರಿ ಸುವರ್ಣ ತಳಿ’ಯನ್ನು ಪ್ರಾಯೋಗಿಕವಾಗಿ ಪಡೆದು ವಿಜ್ಞಾನಿ ಮೋರಿಸ್ ಮಾರ್ಗದರ್ಶನದಲ್ಲಿ ಚಾಕಿ ಮಾಡಿ ಹುಳುಸಾಕಾಣಿಕೆ ಮನೆ ಮತ್ತು ಸೊಪ್ಪುಹಾಕಿ ಉಷ್ಠಾಂಶವನ್ನು ನಿರ್ವಹಣೆ ಮಾಡಿದ ಫಲದಿಂದಾಗಿ ಶಿಡ್ಲಘಟ್ಟ ಸರ್ಕಾರಿ ರೇಷ್ಮೆ ಗೂಡಿನ ಮಾರುಕಟ್ಟೆಯಲ್ಲಿ ಉತ್ತಮ ಬೆಲೆಗೆ ಮಾರಾಟವಾಗಿದೆ. ಸಾಮಾನ್ಯವಾಗಿ ನಾವು ಕೋಲಾರ ಗೋಲ್ಡ್ ತಳಿಯನ್ನು ಪಡೆದು ರೇಷ್ಮೆ ಗೂಡು ಉತ್ಪಾದನೆ ಮಾಡುತ್ತಿದ್ದೇವೆ ಆದರೆ ವಿಜ್ಞಾನಿ ಮೋರಿಸ್ ಅವರ ಮಾರ್ಗದರ್ಶನದಲ್ಲಿ ೧೫ ಸಾವಿರ ರೂಗಳನ್ನು ನೀಡಿ ಒಂದು ಸಾವಿರ ಮೊಟ್ಟೆ ಪಡೆದು ಸಾಕಾಣಿಕೆ ಮಾಡಿದ್ದರಿಂದ ಸುಮಾರು ೯೨೦–೯೩೦ ಕೆ.ಜಿ ಗೂಡು ಇಳುವರಿ ಬಂದಿದೆ. ಇಂದು ಸ್ಯಾಂಪಲ್ ಹಾಕಿದ್ದ ೫೦ ಕೆಜಿ ಗೂಡನ್ನು ೨೫ ಸಾವಿರ ರೂಗಳಿಗೆ ಮಾರಾಟ ಮಾಡಲಾಗಿದೆ’ ಎಂದು ರೈತ ಕೈವಾರದ ಸುಬ್ಬರೆಡ್ಡಿ ಅವರ ತಮ್ಮ ಮಂಜುನಾಥ್‌ರೆಡ್ಡಿ ತಿಳಿಸಿದ್ದಾರೆ.