19.1 C
Sidlaghatta
Saturday, December 27, 2025
Home Blog Page 45

ಶಾಲೆಗಳ ಅಭಿವೃದ್ಧಿಗೆ CSR ಅನುದಾನಕ್ಕೆ ಮನವಿ

0
Sidlaghatta MLA B N Ravikumar H D Kumaraswamy

Sidlaghatta : ಶಾಸಕ ಬಿ.ಎನ್.ರವಿಕುಮಾರ್ ಅವರು ಕೇಂದ್ರದ ಭಾರೀ ಕೈಗಾರಿಕೆಗಳ ಸಚಿವ ಎಚ್‌.ಡಿ.ಕುಮಾಸ್ವಾಮಿ ಅವರನ್ನು ಭೇಟಿ ಮಾಡಿ ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದ ಸರ್ಕಾರಿ ಶಾಲೆಗಳು ಮತ್ತು ಅಂಗನವಾಡಿ ಕೇಂದ್ರಗಳನ್ನು ಅಭಿವೃದ್ಧಿಪಡಿಸಲು ಸಿ.ಎಸ್.ಆರ್ ಅನುದಾನ ಕೊಡಿಸುವಂತೆ ಮನವಿ ಸಲ್ಲಿಸಿದರು.

ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದಲ್ಲಿ 151 ಅಂಗನವಾಡಿ ಕೇಂದ್ರಗಳಿಗೆ ಸ್ವಂತ ಕಟ್ಟಡವಿಲ್ಲ. ಸರ್ಕಾರಿ ಶಾಲೆಯಲ್ಲಿ, ಬಾಡಿಗೆ ಕಟ್ಟಡಗಳಲ್ಲಿ, ಸಮುದಾಯ ಭವನಗಳಲ್ಲಿ ಅವು ಕಾರ್ಯನಿರ್ವಹಿಸುತ್ತಿವೆ. ದುರಸ್ಥಿ ಮಾಡಬೇಕಾಗಿರುವ ಅಂಗನವಾಡಿ ಕೇಂದ್ರಗಳ ಸಂಖ್ಯೆ 83. ನೀರು, ವಿದ್ಯುತ್ ಸಂಪರ್ಕ, ಶೌಚಾಲಯ, ಕಟ್ಟಡದ ಮೇಲ್ಚಾವಣಿ, ಸಂಪು ಮುಂತಾದ ದುರಸ್ಥಿ ಕಾರ್ಯಗಳು ತುರ್ತಾಗಿ ಮಾಡಬೇಕಿದೆ.

ತಾಲ್ಲೂಕಿನ 17 ಸರ್ಕಾರಿ ಪ್ರೌಢಶಾಲೆಗಳಲ್ಲಿ ಕೊಠಡಿಗಳ ದುರಸ್ತಿ ಕಾರ್ಯ ನಡೆಯಬೇಕಿದ್ದು, ತುರ್ತಾಗಿ ಮಾಡಿಸಬೇಕಿರುವ ಕಾಮಗಾರಿಗಳ ಅಂದಾಜು ಮೊತ್ತ ಒಂದೂ ಕಾಲು ಕೋಟಿ ರೂಗಳೆಂದು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಮಾಹಿತಿ ನೀಡಿದೆ. ಹೆಚ್ಚಿನ ಸಿ.ಎಸ್.ಆರ್ ಅನುದಾನ ಸಿಕ್ಕರೆ, ಕ್ಷೇತ್ರದ ಸರ್ಕಾರಿ ಶಿಕ್ಷಣ ವ್ಯವಸ್ಥೆ ಉತ್ತಮಗೊಳ್ಳುತ್ತದೆ. ಆ ಮೂಲಕ ಹಿಂದುಳಿದಿರುವ ಜನರಿಗೆ ಉತ್ತಮ ಭವಿಷ್ಯ ನಿರ್ಮಾಣಕ್ಕೆ ಅಡಿಗಲ್ಲನ್ನು ಹಾಕಿದಂತೆ ಆಗುತ್ತದೆ ಎಂದು ಮನವಿ ಮಾಡಿದರು.

ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ನಾನು ನೀಡಿದ ಮನವಿಯ ಬಗ್ಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಆದಷ್ಟು ಬೇಗ ಸಿ.ಎಸ್.ಆರ್ ಅನುದಾನವನ್ನು ಕೊಡಿಸುವುದಾಗಿ ಭರವಸೆ ನೀಡಿದ್ದಾರೆ ಎಂದು ಎಚ್.ಡಿ.ಕೆ ಭೇಟಿಯ ಬಗ್ಗೆ ಶಾಸಕ ಬಿ.ಎನ್.ರವಿಕುಮಾರ್ ಮಾಹಿತಿ ನೀಡಿದರು.

Sidlaghatta WhatsApp Channel Group

For Daily Updates WhatsApp ‘HI’ to 7406303366

ಶಾಸಕ ಬಿ.ಎನ್.ರವಿಕುಮಾರ್ ಅವರ ಹುಟ್ಟು ಹಬ್ಬ ಆಚರಣೆ

0
Sidlaghatta MLA B N Ravikumar Birthday Celebration

Y Hunasenahalli, Sidlaghatta : ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇದ್ದರೂ ನಮ್ಮ ಕ್ಷೇತ್ರದ ಶಾಸಕ ಬಿ.ಎನ್.ರವಿಕುಮಾರ್ ಅವರು ಪಕ್ಷಾತೀತವಾಗಿ ಅಭಿವೃದ್ದಿ ಕಾರ್ಯಗಳನ್ನು ಕೈಗೊಂಡು ಕ್ಷೇತ್ರದ ಮತದಾರರ ಪ್ರೀತಿ ಪಾತ್ರರಾಗಿದ್ದಾರೆ ಎಂದು ವಕೀಲರ ಸಂಘದ ಅಧ್ಯಕ್ಷ ಎ.ನಾರಾಯಣಸ್ವಾಮಿ ತಿಳಿಸಿದರು..

ತಾಲ್ಲೂಕಿನ ವೈ.ಹುಣಸೇನಹಳ್ಳಿ ಗ್ರಾಮ ಪಂಚಾಯಿತಿ ಕೇಂದ್ರಸ್ಥಾನದ ವೃತ್ತದಲ್ಲಿ ಜೆಡಿಎಸ್ ಕಾರ್ಯಕರ್ತರು ಹಾಗೂ ನಾನಾ ಸಂಘ ಸಂಸ್ಥೆಗಳಿಂದ ಹಮ್ಮಿಕೊಂಡಿದ್ದ ಶಾಸಕ ಬಿ.ಎನ್.ರವಿಕುಮಾರ್ ಅವರ 57 ನೇ ವರ್ಷದ ಹುಟ್ಟು ಹಬ್ಬದ ಪ್ರಯುಕ್ತ ಹಮ್ಮಿಕೊಂಡಿದ್ದ ನಾನಾ ಸೇವಾ ಕಾರ್ಯಕ್ರಮಗಳನ್ನು ಉದ್ಘಾಟಿಸಿ ಮಾತನಾಡಿದರು.

ಶಿಡ್ಲಘಟ್ಟವು ಆಂಧ್ರದ ಗಡಿಗೆ ಅಂಟಿಕೊಂಡ ಅಭಿವೃದ್ದಿಯಲ್ಲಿ ಹಿಂದುಳಿದ ಕ್ಷೇತ್ರವಾಗಿದ್ದು ಇಲ್ಲಿನ ಜನರ ನಿರೀಕ್ಷೆಗಳು ಹೆಚ್ಚಿವೆ. ಆದರೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವಿದ್ದು ಸಾಕಷ್ಟು ಅನುದಾನ ಸಿಗುತ್ತಿಲ್ಲ. ಆದರೂ ನಮ್ಮ ಶಾಸಕರು ವಿವಿಧ ಮೂಲಗಳಿಂದ ಅನುದಾನ ಸಂಗ್ರಹಿಸಿ ಮೂಲ ಸೌಕರ್ಯಗಳನ್ನು ಕಲ್ಪಿಸಿ ಕ್ಷೇತ್ರದ ಅಭಿವೃದ್ದಿಗೆ ಪಣತೊಟ್ಟಿದ್ದಾರೆ ಎಂದರು.

ಈ ಕ್ಷೇತ್ರದ ಮತದಾರರು ಹಾಗೂ ಭಗವಂತನ ಆಶೀರ್ವಾದದಿಂದ ಶಾಸಕ ರವಿಕುಮಾರ್ ಅವರಿಗೆ ಇನ್ನಷ್ಟು ಆಯುಷ್ಯ, ಆರೋಗ್ಯ ಹೆಚ್ಚಿ ಈ ಕ್ಷೇತ್ರದ ಜನ ಸಾಮಾನ್ಯರ ಸೇವೆ ಮಾಡಲು ಇನ್ನಷ್ಟು ಶಕ್ತಿ ಸಾಮರ್ಥ್ಯ ನೀಡಲಿ ಎಂದು ಆಶಿಸಿದರು.

57 ಕೆಜಿ ತೂಕದ ಕೇಕ್ ಕತ್ತರಿಸಿ ಹಂಚಿದರು. ವಿವಿಧ ತಳಿಯ 57 ಸಸಿಗಳನ್ನು ನೆಟ್ಟರು. ವಕೀಲರ ಸಂಘದ ಅಧ್ಯಕ್ಷ ಎ.ನಾರಾಯಣಸ್ವಾಮಿ, ವಕೀಲ ವೆಂಕಟೇಶ್, ಮುಖಂಡರಾದ ಬೂಸ ನಾರಾಯಣಸ್ವಾಮಿ, ಕದಿರಿನಾಯಕನಹಳ್ಳಿ ರವಿಕುಮಾರ್, ಬೇಕ್ರಿ ನರಸಿಂಹ ಗೌಡ, ಶಿವು, ಗಜ್ಜಿಗಾನಹಳ್ಳಿ ರಮೇಶ್, ಬ್ಯಾಂಕ್ ಗೌಡ, ರಾಘವೇಂದ್ರ, ಗಂಗಾಧರ್, ಮುದ್ದುಕೃಷ್ಣ, , ಬೀರಪನಹಳ್ಳಿ ಎಂಪಿಸಿಎಸ್ ನರಸಿಂಮೂರ್ತಿ, ನಾರಾಯಣಸ್ವಾಮಿ, ಶಿವಕುಮಾರ್, ನಟರಾಜ್ ಹಾಜರಿದ್ದರು.

Sidlaghatta WhatsApp Channel Group

For Daily Updates WhatsApp ‘HI’ to 7406303366

ಪ್ರೌಢಶಾಲಾ ಮಕ್ಕಳಿಗೆ ರಸಪ್ರಶ್ನೆ ಕಾರ್ಯಕ್ರಮ

0
Sidlaghatta Quiz Programme for high school students

Sidlaghatta : ಶಿಡ್ಲಘಟ್ಟ ತಾಲ್ಲೂಕು ಶ್ರೀರಾಮ ಶೋಭಾಯಾತ್ರೆ ಆಚರಣಾ ಟ್ರಸ್ಟ್‌ ನಿಂದ ಶ್ರೀಕೃಷ್ಣ ಜನ್ಮಾಷ್ಟಮಿ ಹಾಗೂ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಶ್ರೀರಾಮಾಯಣ, ಮಹಾಭಾರತ ಹಾಗೂ ಸ್ವಾತಂತ್ರ್ಯ ಹೋರಾಟಗಾರರ ಕುರಿತು ರಸಪ್ರಶ್ನೆ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಟ್ರಸ್ಟ್‌ ನ ಅಧ್ಯಕ್ಷ ವೆಂಕಟೇಶ್ ತಿಳಿಸಿದರು.

ತಾಲ್ಲೂಕಿನ ಹಂಡಿಗನಾಳದ ಕೆ.ವಿ.ಭವನದಲ್ಲಿ ಶುಕ್ರವಾರ ನಡೆದ ಪೂರ್ವಭಾವಿ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಈ ತಿಂಗಳ 12 ನೇ ತಾರೀಕು ಮಂಗಳವಾರ ಹಂಡಿಗನಾಳದ ಕೆವಿ ಭವನದಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ರಸಪ್ರಶ್ನೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.

ಶಿಡ್ಲಘಟ್ಟ ತಾಲ್ಲೂಕಿನ ಎಲ್ಲ ಸರ್ಕರಿ, ಅನುದಾನಿತ ಹಾಗೂ ಖಾಸಗಿ ಪ್ರೌಢಶಾಲೆಗಳಿಂದಲೂ ತಲಾ ಇಬ್ಬರು ವಿದ್ಯಾರ್ಥಿಗಳು ಭಾಗವಹಿಸಲು ಅವಕಾಶವಿದ್ದು ಅಂತಿಮವಾಗಿ ಮೊದಲ ಸ್ಥಾನ ಪಡೆದವರಿಗೆ 50 ಸಾವಿರ ನಗದು, 2 ನೇ ಸ್ಥಾನ ಪಡೆದವರಿಗೆ 30 ಸಾವಿರ ಹಾಗೂ ತೃತೀಯ ಸ್ಥಾನ ಪಡೆದವರಿಗೆ 20 ಸಾವಿರ ರೂ ನಗದು ಬಹುಮಾನ ನೀಡಲಾಗುವುದು ಎಂದರು.

ಭಾಗವಹಿಸುವ ಎಲ್ಲ ವಿದ್ಯಾರ್ಥಿಗಳು, ಶಾಲೆಗಳಿಗೂ ಸಮಾಧಾನಕರ ಬಹುಮಾನವನ್ನು ನೀಡಲಾಗುವುದು. ನಮ್ಮ ಮಕ್ಕಳಲ್ಲಿ ನಮ್ಮ ಧರ್ಮ, ಸಂಸ್ಕೃತಿ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಅರಿವು ಮೂಡಿಸುವ ಕಾರಣಕ್ಕೆ ಈ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ ಎಂದು ಅವರು ವಿವರಿಸಿದರು.

ಶ್ರೀರಾಮ ಶೋಭಾಯಾತ್ರೆ ಆಚರಣಾ ಟ್ರಸ್ಟ್‌ ನ ಗೌರವಧ್ಯಕ್ಷ ಪ್ರಕಾಶ್, ಉಪಾಧ್ಯಕ್ಷ ಅಜಿತ್, ಪ್ರಧಾನ ಕಾರ್ಯದರ್ಶಿ ಅನಿಲ್ ಕುಮಾರ್, ರವಿಚಂದ್ರ, ನಾಗೇಶ್, ಕಿರಣ್, ರಾಮಾಂಜನೇಯ, ನಾಗೇಶ್, ಲಕ್ಷ್ಮೀಕಾಂತ್, ಅನಿಲ್ ಕುಮಾರ್, ಲಕ್ಷ್ಮೀಪತಿ ಹಾಜರಿದ್ದರು.

Sidlaghatta WhatsApp Channel Group

For Daily Updates WhatsApp ‘HI’ to 7406303366

Sidlaghatta Silk Cocoon Market-08/08/2025

0
Sidlaghatta Silk Cocoon Market Price Rate ಶಿಡ್ಲಘಟ್ಟ ರೇಷ್ಮೆ ಗೂಡು ಮಾರುಕಟ್ಟೆ ಧಾರಣೆ

Sidlaghatta Govt Silk Cocoon Market

ಶಿಡ್ಲಘಟ್ಟ ರೇಷ್ಮೆ ಗೂಡು ಮಾರುಕಟ್ಟೆ ಧಾರಣೆ

Date: 08/08/2025

Cross-Breed Silk Cocoon – ಮಿಶ್ರತಳಿ ರೇಷ್ಮೆ ಗೂಡು

Lots: 288
Qty: 15731 Kg
Mx : ₹ 720
Mn: ₹ 400
Avg: ₹ 600

Bi-Voltine Silk Cocoon – ದ್ವಿತಳಿ ರೇಷ್ಮೆ ಗೂಡು

Lots: 07
Qty: 289 Kg
Mx : ₹ 766
Mn: ₹ 511
Avg: ₹ 630


For Daily Updates WhatsApp ‘HI’ to 7406303366

ವಿದ್ಯಾರ್ಥಿಗಳಿಗೆ ಡೊಳ್ಳು ಕುಣಿತ ತರಬೇತಿ

0
Dollu Kunita training for students

Sundrahalli, Sidlaghatta : ವಿದ್ಯಾರ್ಥಿಗಳು ಪಾಠದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಹೆಚ್ಚಾಗಿ ಭಾಗವಹಿಸಬೇಕು. ವಿಶೇಷವಾಗಿ ನಮ್ಮ ಸಂಸ್ಕೃತಿಯ ಪರಂಪರೆಗಳ ಬಳುವಳಿಯನ್ನು ಸಾರುವಂತಹ ಜನಪದ ಕಲೆಗಳನ್ನು ಕಲಿಯುವ ಮೂಲಕ ಶಿಕ್ಷಣವನ್ನು ಪಡೆಯಬೇಕು ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿಯ ಚಕೋರ ಸಾಹಿತ್ಯ ವಿಚಾರ ವೇದಿಕೆಯ ಜಿಲ್ಲಾ ಸಂಚಾಲಕ ಪಾ.ಮು.ಚಲಪತಿಗೌಡ ತಿಳಿಸಿದರು.

ತಾಲ್ಲೂಕಿನ ಸುಂಡ್ರಹಳ್ಳಿ ಬಳಿಯಿರುವ ಶ್ರೀಮತಿ ಇಂದಿರಾಗಾಂಧಿ ವಸತಿ ಶಾಲೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ತಾಲ್ಲೂಕು ಸಮಾಜ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಗಿರಿಜನ ಉಪ ಯೋಜನೆ ಅಡಿಯಲ್ಲಿ ಹಮ್ಮಿಕೊಂಡಿದ್ದ ಆರು ತಿಂಗಳ ಕಾಲ ವಿದ್ಯಾರ್ಥಿಗಳಿಗೆ ಡೊಳ್ಳು ಕುಣಿತ ತರಬೇತಿ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.

ದೂರದರ್ಶನ ಹಾಗು ಮೊಬೈಲ್ ವೀಕ್ಷಣೆ ಮಕ್ಕಳನ್ನು ಮತ್ತಷ್ಟು ಒತ್ತಡಕ್ಕೆ ಸಿಲುಕಿಸುತ್ತಿದೆ. ಹಾಗಾಗಿ ಮಕ್ಕಳು ನಮ್ಮ ಸಂಸ್ಕೃತಿ, ಪರಂಪರೆ ಉಳಿಸುವ ಜನಪದ ಕಲೆಗಳನ್ನು ಹೆಚ್ಚು ಹೆಚ್ಚು ಕಲಿಯುವ ಮೂಲಕ ಮಕ್ಕಳು ಉತ್ತಮ ಜೀವನ ರೂಪಿಸಿಕೊಳ್ಳಬೇಕು ಎಂದರು.

ಈಧರೆ ಕಲೆ ಮತ್ತು ಸಾಂಸ್ಕೃತಿಕ ಕೇಂದ್ರದ ಅಧ್ಯಕ್ಷ, ಡೊಳ್ಳು ಕುಣಿತ ತರಬೇತುದಾರ ಈಧರೆ ಪ್ರಕಾಶ್ ಮಾತನಾಡಿ, ಮನೆ ಮತ್ತು ಗ್ರಾಮವನ್ನು ಬಿಟ್ಟು ಶಿಕ್ಷಣ ಪಡೆಯುವ ಸದುದ್ದೇಶಕ್ಕೆ ಪೋಷಕರಿಂದಲೂ ದೂರ ಇದ್ದುಕೊಂಡು ವಿದ್ಯಾಭ್ಯಾಸ ಪಡೆಯುತ್ತಿರುವ ವಸತಿ ಶಾಲೆಯ ವಿದ್ಯಾರ್ಥಿಗಳಿಗೆ ವಿವಿಧ ಇಲಾಖೆಗಳ ಸಹಕಾರದಿಂದ ಜನಪದ ಕಲೆಗಳ ತರಬೇತಿ ನೀಡುವ ಸದಾವಕಾಶ ಸಿಕ್ಕಿರುವುದು ನನ್ನ ಸೌಭಾಗ್ಯವಾಗಿದೆ. ಸುಮಾರು ಹದಿನೈದು ವರ್ಷಗಳಿಂದ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ತರಬೇತಿ ಸೇರಿದಂತೆ ಅನ್ಯ ರಾಜ್ಯಗಳಲ್ಲೂ ಕೂಡ ಪ್ರದರ್ಶನಗಳು ನೀಡಿರುವುದು ನಮ್ಮ ಈಧರೆ ತಂಡ ಹಿರಿಮೆಯಾಗಿದೆ ಎಂದರು.

ಇಂದಿರಾ ಗಾಂಧಿ ವಸತಿಶಾಲೆ ಪ್ರಾಂಶುಪಾಲ ಮೂರ್ತಪ್ಪ, ಹೊಸಪೇಟೆ ಗ್ರಾ.ಪಂ ಸದಸ್ಯ ಸುಂಡ್ರಹಳ್ಳಿ ರವಿ, ಈ ಧರೆ ಸಮತಾ ಸೇನೆ ತಾಲ್ಲೂಕು ಅಧ್ಯಕ್ಷ ವೆಂಕಟರಾಮಪ್ಪ, ಉಪಾಧ್ಯಕ್ಷ ವೆಂಕಟರಮಣಪ್ಪ ಸೇರಿದಂತೆ ಶಾಲೆಯ ಸಿಬ್ಬಂದಿ ಹಾಜರಿದ್ದರು.

Sidlaghatta WhatsApp Channel Group

For Daily Updates WhatsApp ‘HI’ to 7406303366

ಪ್ರತಿ ಮನೆಯ ಮೇಲೂ ತ್ರಿವರ್ಣಧ್ವಜ

0
Sidlaghatta BJP Har Ghar Tiranga

Sidlaghatta : ದೇಶದ ಆಜಾದಿ ಕಾ ಅಮೃತ್ ಮಹೋತ್ಸವ ಅಂಗವಾಗಿ ಮನೆ ಮನೆ ಮೇಲೂ ಭಾರತದ ತ್ರಿವರ್ಣ ಧ್ವಜ ಹಾರಾಡಬೇಕಿದ್ದು ಅದಕ್ಕಾಗಿ ಹರ್ ಘರ್ ತಿರಂಗ ಅಭಿಯಾನಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಕರೆ ನೀಡಿದ್ದಾರೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸೀಕಲ್ ರಾಮಚಂದ್ರಗೌಡ ತಿಳಿಸಿದರು.

ನಗರದ ಬಿಜೆಪಿ ಸೇವಾ ಸೌಧ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಹರ್ ಘರ್ ತಿರಂಗ ಅಭಿಯಾನದ ಪೂರ್ವ ಸಿದ್ದತೆಗಾಗಿ ಜಿಲ್ಲೆಯ ಎಲ್ಲಾ ತಾಲ್ಲೂಕುಗಳ ಮಂಡಲಗಳ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿ, ವಿವಿಧ ಮೋರ್ಚಾಗಳ ಅಧ್ಯಕ್ಷರುಗಳ ಸಭೆಯಲ್ಲಿ ಅವರು ಮಾತನಾಡಿದರು.

ಆಗಸ್ಟ್ 15 ರಂದು ದೇಶದ ಎಲ್ಲರ ಮನೆ ಮನೆ ಮೇಲೂ ರಾಷ್ಟ್ರ ಧ್ವಜ ಹಾರಾಡಬೇಕು, ದೇಶ ಪ್ರೇಮವನ್ನು ಮೆರೆಯಬೇಕೆಂಬ ಸದುದ್ದೇಶ, ದೇಶಪ್ರೇಮದ ಸಂದೇಶ ನೀಡುವ ಹರ್ ಘರ್ ತಿರಂಗ ಅಭಿಯಾನವನ್ನು ನಾವೆಲ್ಲರೂ ಸೇರಿ ಜಾತಿ ಧರ್ಮ ಭಾಷೆಯ ತಾರತಮ್ಯ ಬಿಟ್ಟು ಆಚರಿಸುವ ಮೂಲಕ ದೇಶಕ್ಕಾಗಿ ಎಲ್ಲರೂ ಒಗ್ಗೂಡಬೇಕೆಂದರು.

ಈ ಅಭಿಯಾನವು ದೇಶದ ನಾಗರಿಕರ ಮನದಲ್ಲಿ ದೇಶಭಕ್ತಿಯನ್ನು ಜಾಗೃತಗೊಳಿಸಲು ಮತ್ತು ರಾಷ್ಟ್ರೀಯ ಏಕತೆಯನ್ನು ಬಲಪಡಿಸಲು ಸಹಾಯ ಮಾಡುತ್ತದೆ. ಇದು ಸ್ವಾತಂತ್ರ್ಯ ಹೋರಾಟಗಾರರು ಮತ್ತು ಅವರ ತ್ಯಾಗವನ್ನು ಸ್ಮರಿಸಿಕೊಳ್ಳುವ ಅವಕಾಶವಾಗಿದೆ. ಈ ಅಭಿಯಾನವು ರಾಷ್ಟ್ರೀಯ ಧ್ವಜದ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಮತ್ತು ಅದನ್ನು ಗೌರವಿಸುವಂತೆ ಪ್ರೋತ್ಸಾಹಿಸಲು ಸಹಕಾರಿಯಾಗಿದೆ. ಈ ಅಭಿಯಾನವು ಸಮಾಜದ ಎಲ್ಲಾ ವರ್ಗದವರನ್ನು ಒಟ್ಟುಗೂಡಿಸಿ, ರಾಷ್ಟ್ರ ನಿರ್ಮಾಣದಲ್ಲಿ ಭಾಗವಹಿಸಲು ಪ್ರೇರೇಪಿಸುತ್ತದೆ ಎಂದು ಹೇಳಿದರು.

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಭಾರತದ ಇತಿಹಾಸದಲ್ಲಿಯೆ ಅತಿ ಹೆಚ್ಚು ಕಾಲ ಕೇಂದ್ರ ಗೃಹ ಸಚಿವರಾಗಿ ಕಾರ್ಯನಿರ್ವಹಿಸುತ್ತಾ ಹೊಸ ದಾಖಲೆಯನ್ನು ಸೃಷ್ಟಿಸಿದ್ದು ಅವರಿಗೆ ಸಭೆಯಲ್ಲಿ ಅಭಿನಂದನೆಗಳನ್ನು ಸಲ್ಲಿಸಲಾಯಿತು.

ಸಭೆಯಲ್ಲಿ ಜಿಲ್ಲೆಯಲ್ಲಿ ತಿರಂಗ ಅಭಿಯಾನದ ಯಶಸ್ಸಿಗೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸಲಹೆ ಸೂಚನೆಗಳನ್ನು ಸ್ವೀಕರಿಸಿ ಚರ್ಚಿಸಲಾಯಿತು.

ಹರ್ ಘರ್ ತಿರಂಗ ಯಾತ್ರೆಯನ್ನು ಯಶಸ್ವಿ ಮಾಡಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಬಿಜೆಪಿ ರಾಜ್ಯ ಕಾರ್ಯದರ್ಶಿ ಮುನಿರಾಜು ಅವರು ಸಭೆಯಲ್ಲಿ ಮಾಹಿತಿ ನೀಡಿದರು.

ಬಿಜೆಪಿ ನಿಕಟಪೂರ್ವ ಜಿಲ್ಲಾಧ್ಯಕ್ಷ ರಾಮಲಿಂಗಪ್ಪ, ಚಿಂತಾಮಣಿ ಕ್ಷೇತ್ರದ ಮುಖಂಡ ವೇಣುಗೋಪಾಲ್, ರಾಜ್ಯ ಮಹಿಳಾ ಮೋರ್ಚಾ ಕಾರ್ಯದರ್ಶಿ ನಿರ್ಮಲ, ಎಸ್.ಟಿ ಮೋರ್ಚ ರಾಜ್ಯ ಉಪಾಧ್ಯಕ್ಷ ಅರುಣ್‌ಬಾಬು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಚ್.ಎಸ್.ಮುರಳಿಧರ್, ಕೆ.ಬಿ.ಮುರಳಿ, ಜಿಲ್ಲಾ, ತಾಲ್ಲೂಕು ಎಲ್ಲ ಮೋರ್ಚಾಗಳ ಅಧ್ಯಕ್ಷರು ಹಾಜರಿದ್ದರು.

Sidlaghatta WhatsApp Channel Group

For Daily Updates WhatsApp ‘HI’ to 7406303366

ಬಾಲಕಾರ್ಮಿಕ ನಿರ್ಮೂಲನೆಗೆ ಕಾನೂನು ಜಾಗೃತಿ

0
Sidlaghatta Bashettahalli Child Labour Awareness

Bashettahalli, Sidlaghatta : ಶಿಡ್ಲಘಟ್ಟ: ತಾಲ್ಲೂಕಿನ ಬಶೆಟ್ಟಹಳ್ಳಿ ಗ್ರಾಮದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಬಾಲಕಾರ್ಮಿಕ ಪದ್ಧತಿಗೆ ಕಡಿವಾಣ ಹಾಕುವ ಉದ್ದೇಶದಿಂದ ಶಿಡ್ಲಘಟ್ಟ ತಾಲ್ಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ ಹಾಗೂ ಕಾರ್ಮಿಕ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಕಾನೂನು ಅರಿವು ಮತ್ತು ಜಾಗೃತಿ ಕಾರ್ಯಕ್ರಮ ನಡೆಯಿತು.

ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಎ. ನಾರಾಯಣಸ್ವಾಮಿ ಮಾತನಾಡಿ, ಬಾಲ್ಯವಯಸ್ಸು ಜೀವನದ ವಿಕಸನದ ಹಂತ. ಅಂತಹ ಸಮಯದಲ್ಲಿ ಮಕ್ಕಳನ್ನು ಶಾಲೆಯಿಂದ ಬೇರೆಡೆ ಕರೆದೊಯ್ದು ದುಡಿಮೆಗೆ ತೊಡಗಿಸುವುದು ಅವರ ಭವಿಷ್ಯವನ್ನು ಕತ್ತಲೆಗೆ ದೂಡಿದಂತೆ ಎಂದು ಹೇಳಿದರು.

ಅಭಿವೃದ್ಧಿಶೀಲ ಸಮಾಜದ ನಿರ್ಮಾಣಕ್ಕೆ ಶಿಕ್ಷಣ ಪ್ರಮುಖ ಅಸ್ತ್ರವಾಗಿದೆ. ಯಾವುದೇ ಮಕ್ಕಳನ್ನು ಶಾಲೆಯಿಂದ ದೂರವಿಡುವುದು ದೇಶದ ಉಜ್ವಲ ಭವಿಷ್ಯವನ್ನು ಹಿಂತೆಗೆಯುವಂತಾಗಿದೆ. ಈ ಸಮಸ್ಯೆ ಎದುರಿಸಲು ಕೇವಲ ಕಾನೂನು ಸಾಕಾಗದು, ಜನರು ಮಾನವೀಯ ಮೌಲ್ಯಗಳ ಆಧಾರದಲ್ಲಿ ಕಾರ್ಯನಿರ್ವಹಿಸಬೇಕು. ಪೋಷಕರು, ಶಿಕ್ಷಕರು ಮತ್ತು ಯುವಕರು ಈ ಜವಾಬ್ದಾರಿ ಹೊತ್ತುಕೊಳ್ಳಬೇಕು ಎಂದು ಹೇಳಿದರು.

ಕಾನೂನು ಪಾಲನೆಯೊಂದಿಗೆ ಸಾಮಾಜಿಕ ತಾಳ್ಮೆ, ಬದ್ಧತೆ ಅಗತ್ಯ. ಕಾನೂನು ನಮ್ಮ ಕೈಯಲ್ಲಿದೆ, ಆದರೆ ಅದನ್ನು ಕ್ರಿಯಾಶೀಲಗೊಳಿಸಲು ಜನರು ಉತ್ಸಾಹದಿಂದ ಬೆಂಬಲ ನೀಡಬೇಕು ಎಂದರು.

ಕಾರ್ಮಿಕ ಇಲಾಖೆಯ ನಿರೀಕ್ಷಕಿ ವಿಜಯಲಕ್ಷ್ಮಿ ಅವರು ಬಾಲಕಾರ್ಮಿಕ ನಿಷೇಧ ಕಾಯ್ದೆಗಳ ಕುರಿತು ಮಾಹಿತಿ ನೀಡುತ್ತಾ, ಮಕ್ಕಳನ್ನು ದುಡಿಮೆಗೆ ನೂಕುವುದು ಕೇವಲ ಶೋಷಣೆ ಅಲ್ಲ ಅದು ಮಕ್ಕಳ ಮಾನವೀಯ ಹಕ್ಕುಗಳಿಗೆ ಘಾತವಾಗಿದೆ. ನಾವು ಕಠಿಣ ಕ್ರಮ ಕೈಗೊಳ್ಳುತ್ತಿದ್ದೇವೆ ಎಂದು ಹೇಳಿದರು.

ಬಾಲಕರ ದುಡಿಮೆ ಕಂಡುಬಂದಲ್ಲಿ ತಕ್ಷಣ ಕಾರ್ಮಿಕ ಇಲಾಖೆ ಅಥವಾ ಹತ್ತಿರದ ಪೊಲೀಸ್ ಠಾಣೆಗೆ ದೂರು ನೀಡುವುದು ಪ್ರಜ್ಞಾವಂತರ ಜವಾಬ್ದಾರಿ ಎಂದರು.

ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಸರೋಜಮ್ಮ, ನವ ಕರ್ನಾಟಕ ಕಾರ್ಮಿಕರ ಮಹಾಸಭಾದ ಅಧ್ಯಕ್ಷ ದೇವಪ್ಪ, ಪಂಚಾಯತ್ ಸಿಬ್ಬಂದಿ ಗಂಗಪ್ಪ ಹಾಜರಿದ್ದರು.

Sidlaghatta WhatsApp Channel Group

For Daily Updates WhatsApp ‘HI’ to 7406303366

BJP ಪಕ್ಷದಿಂದ ಕೈಮಗ್ಗ ದಿನಾಚರಣೆ

0
Sidlaghatta BJP handloom weavers Day Celebration

Sidlaghatta : ರಾಷ್ಟ್ರೀಯ ಕೈಮಗ್ಗ ದಿನವನ್ನು ಆಗಸ್ಟ್ 7 ರಂದು ಆಚರಿಸಲಾಗುವ ಉದ್ದೇಶ ಕೈಮಗ್ಗ ಉದ್ಯಮವನ್ನು ಉತ್ತೇಜಿಸುವುದು ಮತ್ತು ನೇಕಾರ ಸಮುದಾಯದ ಕಾರ್ಯಕ್ಷಮತೆ ಹಾಗೂ ಕೊಡುಗೆಯನ್ನು ಗೌರವಿಸುವುದಾಗಿದೆ. ನಾವೆಲ್ಲರೂ ಕೈಮಗ್ಗದ ಉತ್ಪನ್ನಗಳನ್ನು ಕೊಂಡು ಬಳಸುವ ಮೂಲಕ ಕೈಮಗ್ಗ ನೇಕಾರಿಕೆಗೆ ಉತ್ತೇಜನ ನೀಡಬೇಕು ಎಂದು ಬಿಜೆಪಿ ತಾಲ್ಲೂಕು ಅಧ್ಯಕ್ಷ ಸೀಕಲ್ ಆನಂದಗೌಡ ತಿಳಿಸಿದರು.

ರಾಷ್ಟ್ರೀಯ ಕೈಮಗ್ಗ ದಿನದ ಅಂಗವಾಗಿ ನಗರದ ತಾಲ್ಲೂಕು ಪದ್ಮಶಾಲಿ ಸಂಘದ ಅಧ್ಯಕ್ಷ ಎಸ್.ಕೆ.ನಾಗರಾಜು ಮತ್ತು ರೇಷ್ಮೆ ಉದ್ದಿಮೆದಾರರಾದ ಲಕ್ಷ್ಮೀನಾರಾಯಣಪ್ಪ ಅವರಿಗೆ ಬಿಜೆಪಿ ಪಖ್ಶದ ವತಿಯಿಂದ ಗೌರವ ಸಲ್ಲಿಸಿ ಅವರು ಮಾತನಾಡಿದರು.

ಈ ದಿನವು 1905ರ ಸ್ವದೇಶಿ ಚಳುವಳಿ ಉದ್ಘಾಟನೆಯ ಸ್ಮರಣಾರ್ಥವಾಗಿದ್ದು, ಅದರಲ್ಲಿ ವಿದೇಶಿ ತಯಾರಿಕೆ ವಸ್ತುಗಳನ್ನು ಬಹಿಷ್ಕರಿಸಿ ಭಾರತೀಯ ಕೈಮಗ್ಗ ಮತ್ತು ಸ್ವದೇಶಿ ಉತ್ಪನ್ನಗಳನ್ನು ಉತ್ತೇಜಿಸುವುದು ಮುಖ್ಯ ಉದ್ದೇಶವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು 2015ರಲ್ಲಿ ಮೊದಲ ಬಾರಿ ಈ ದಿನವನ್ನು ಅಧಿಕೃತವಾಗಿ ಉದ್ಘಾಟಿಸಿದ್ದರು. ನಾವುಗಳೂ ಸ್ವದೇಶಿ ಉತ್ಪನ್ನಗಳಿಗೆ ಪ್ರಥಮ ಆದ್ಯತೆ ನೀಡೋಣ. ಸ್ವದೇಶಿ ಕುಶಲಕರ್ಮಿಗಳಿಗೆ ಉತ್ತೇಜನ ನೀಡೋಣ ಎಂದು ಹೇಳಿದರು.

ಈ ಸಂದರ್ಭದಲ್ಲಿ ಬಿಜೆಪಿ ಪಕ್ಷದ ನಿರ್ಮಲ, ಮಂಜುಳ, ನರ್ಮದಾ, ಪ್ರೇಮಲೀಲ, ರೂಪ, ನಂದಿನಿ ಹಾಜರಿದ್ದರು.

Sidlaghatta WhatsApp Channel Group

For Daily Updates WhatsApp ‘HI’ to 7406303366

ಪಠ್ಯದ ಜೊತೆ ಜೊತೆಗೆ ಕ್ರೀಡೆಗಳಿಗೂ ಹೆಚ್ಚಿನ ಮಹತ್ವ ನೀಡಬೇಕಿದೆ

0
Sidlaghatta Pre University Throwball championship

Sidlaghatta : ಕ್ರೀಡೆ, ದೇಹ ಮತ್ತು ಮನಸ್ಸುಗಳ ನಡುವೆ ಸಮನ್ವಯ ಸಾಧಿಸುವ ಅತ್ಯುತ್ತಮ ಸಾಧನ. ಯುವಜನತೆ ಮೊಬೈಲ್‌ ಗಳನ್ನು ಬಿಟ್ಟುಆಟದ ಮೈದಾನಕ್ಕೆ ಇಳಿಯಬೇಕು ಎಂದು ಡಾಲ್ಫಿನ್ಸ್ ಸಮೂಹ ವಿದ್ಯಾ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ ಎನ್.ಅಶೋಕ್‌ ತಿಳಿಸಿದರು.

ನಗರದ ಡಾಲ್ಫಿನ್ಸ್‌ ಪದವಿ ಪೂರ್ವ ಕಾಲೇಜಿನ ಆಟದ ಮೈದಾನದಲ್ಲಿ ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಮತ್ತು ಶಿಡ್ಲಘಟ್ಟ ತಾಲ್ಲೂಕು ಪದವಿ ಪೂರ್ವ ಕಾಲೇಜುಗಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ 2025-26 ನೇ ಸಾಲಿನ ಕ್ರೀಡಾ ಚಟುವಟಿಕೆಗಳ ಮೂರನೇ ದಿನದ ಗುಂಪು ಕ್ರೀಡೆಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಪಠ್ಯದ ಜೊತೆ ಜೊತೆಗೆ ಕ್ರೀಡೆಗಳಿಗೂ ಹೆಚ್ಚಿನ ಮಹತ್ವ ನೀಡಬೇಕಿದೆ. ನಮ್ಮ ತಾಲ್ಲೂಕಿನ ಕ್ರೀಡಾ ಪಟುಗಳು ರಾಷ್ಟ್ರ ಮಟ್ಟದಲ್ಲಿ ಹೆಸರು ಮಾಡಿರುವುದು ಈ ತಾಲೂಕಿನ ಹೆಮ್ಮೆ.ಕ್ರೀಡೆ ಮತ್ತು ಪಠ್ಯ ಚಟುವಟಿಕೆಗಳೆರಡಕ್ಕೂ ಡಾಲ್ಫಿನ್ಸ್ ಸಂಸ್ಥೆ ಯಾವತ್ತಗೂ ಪ್ರಾಮುಖ್ಯತೆ ನೀಡುತ್ತದೆ ಎಂದರು.

ಡಾಲ್ಪಿನ್ಸ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಎನ್.ಶ್ರೀನಿವಾಸಮೂರ್ತಿ ಮಾತನಾಡಿ, ವಿದ್ಯಾರ್ಥಿಗಳು ದೊಡ್ಡ ಮಟ್ಟದ ಕನಸುಗಳನ್ನು ಕಟ್ಟಿಕೊಂಡು ನಿತ್ಯ ತರಬೇತಿ ಪಡೆಯಬೇಕು. ಒಂದು ದಿನ ಅಥವಾ ಒಂದು ಆವರ್ತದ ಕ್ರೀಡೆಗಳಿಗೆ ಮಾತ್ರವೇ ಸೀಮಿತಗೊಳ್ಳದೆ ಇಷ್ಟದ ಕ್ರೀಡೆಗಳಲ್ಲಿ ಬದುಕು ರೂಪಿಸಿಕೊಳ್ಳುವ ಮಟ್ಟಿಗೆ ನಿರಂತರ ತರಬೇತಿ ಪಡೆಯಬೇಕು. ಒಮ್ಮೆ ಸೋತ ಮಾತ್ರಕ್ಕೆ ಅದು ವ್ಯಕ್ತಿಯ ಸೋಲಾಗಿರುವುದಿಲ್ಲ. ಕೇವಲ ಪ್ರದರ್ಶನ ನಿರೀಕ್ಷಿತ ಮಟ್ಟಕ್ಕೆಇರಲಿಲ್ಲ ಎಂದರ್ಥ. ಸೋಲನ್ನು ಮರೆತು ಗೆಲುವಿನೆಡೆಗಿನ ತುಡಿತವನ್ನು ಮತ್ತಷ್ಟು ಹೆಚ್ಚಿಸಿಕೊಂಡು ಅಭ್ಯಾಸಕ್ಕಿಳಿಯಬೇಕು. ಸೋಲು ಹೃದಯ ತಟ್ಟಲು ಬಿಡದಂತೆ ಹಾಗೂ ಗೆಲುವು ತಲೆಗೆ ಹತ್ತದಂತೆ ಕ್ರೀಡಾಪಟುಗಳು ನೋಡಿಕೊಳ್ಳಬೇಕು ಎಂದರು.

ಸರ್ಕಾರಿ ಪದವಿ ಪೂರ್ವಕಾಲೇಜಿನ ಪ್ರಾಂಶುಪಾಲ ಸಿ. ವೆಂಕಟ ಶಿವಾರೆಡ್ಡಿ ಮಾತನಾಡಿ, ಆಟಗಾರರು ದುರಭ್ಯಾಸಗಳನ್ನು ರೂಢಿಸಿಕೊಳ್ಳಬಾರದು. ಕೆಟ್ಟ ಚಟಗಳಿಗೆ ದಾಸರಾದರೆ ಆಟಗಾರ ಅಲ್ಲಿಗೆ ನಿಷ್ಕ್ರಿಯಗೊಂಡಂತೆಯೇ ಸರಿ. ಶಿಸ್ತು, ಸಮಯ ಪಾಲನೆ, ನಿರಂತರ ಅಭ್ಯಾಸ, ಅಹಂಕಾರ ರಹಿತ ಜೀವನ ವಿಧಾನ ಒಳ್ಳೆಯ ಆಟಗಾರನನ್ನು ರೂಪಿಸುತ್ತವೆಎಂದರು.

ಕ್ರೀಡಾಕೂಟದ ಅಂತಿಮ ದಿನದಂದು ಬಾಲಕ ಮತ್ತು ಬಾಲಕಿಯರಿಗೆ ವಾಲಿಬಾಲ್, ಹ್ಯಾಂಡ್ ಬಾಲ್ ಮತ್ತು ಶಟಲ್ ಬ್ಯಾಟ್‌ಮಿಂಟನ್ ಕ್ರೀಡೆಗಳನ್ನು ಆಯೋಜಿಸಲಾಗಿತ್ತು.ತಾಲ್ಲೂಕಿನ ಎಲ್ಲಾ ಪದವಿ ಪೂರ್ವ ಕಾಲೇಜುಗಳಿಂದ ಕ್ರೀಡಾರ್ಥಿಗಳು ಭಾಗವಹಿಸಿದ್ದರು.ವಿವಿಧ ಕಾಲೇಜುಗಳ ಪ್ರಾಂಶುಪಾಲರುಗಳು, ಕ್ರೀಡಾ ತಂಡಗಳ ನಿರ್ದೇಶಕರುಗಳು ಹಾಜರಿದ್ದರು.

Sidlaghatta WhatsApp Channel Group

For Daily Updates WhatsApp ‘HI’ to 7406303366

Sidlaghatta Silk Cocoon Market-07/08/2025

0
Sidlaghatta Silk Cocoon Market Price Rate ಶಿಡ್ಲಘಟ್ಟ ರೇಷ್ಮೆ ಗೂಡು ಮಾರುಕಟ್ಟೆ ಧಾರಣೆ

Sidlaghatta Govt Silk Cocoon Market

ಶಿಡ್ಲಘಟ್ಟ ರೇಷ್ಮೆ ಗೂಡು ಮಾರುಕಟ್ಟೆ ಧಾರಣೆ

Date: 07/08/2025

Cross-Breed Silk Cocoon – ಮಿಶ್ರತಳಿ ರೇಷ್ಮೆ ಗೂಡು

Lots: 267
Qty: 14682 Kg
Mx : ₹ 740
Mn: ₹ 462
Avg: ₹ 644

Bi-Voltine Silk Cocoon – ದ್ವಿತಳಿ ರೇಷ್ಮೆ ಗೂಡು

Lots: 08
Qty: 494 Kg
Mx : ₹ 777
Mn: ₹ 612
Avg: ₹ 686


For Daily Updates WhatsApp ‘HI’ to 7406303366

error: Content is protected !!