19.1 C
Sidlaghatta
Saturday, December 27, 2025
Home Blog Page 46

ದರಕಾಸ್ತು ಸಮಿತಿ ರಚನೆಗೆ ದಲಿತ ಸಂಘರ್ಷ ಸಮಿತಿ ಒತ್ತಾಯ

0
Sidlaghatta DSS Press Meet

Sidlaghatta : ಹಲವು ವರ್ಷಗಳಿಂದಲೂ ಬಗರ್ ಹುಕುಂ ದರಕಾಸ್ತು ಸಮಿತಿ ರಚನೆಯಾಗದ ಕಾರಣ ಸಾವಿರಾರು ಮಂದಿ ರೈತರಿಗೆ ತೊಂದರೆ ಆಗುತ್ತಿದೆ. ಭೂಮಿ ವಂಚಿತರಾಗುವಂತಾಗಿದೆ ಎಂದು ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಎನ್.ಎ.ವೆಂಕಟೇಶ್ ದೂರಿದರು.

ನಗರದ ಪತ್ರಕರ್ತರ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಅನೇಕ ವರ್ಷಗಳಿಂದಲೂ ದರಕಾಸ್ತು ಸಮಿತಿ ರಚನೆ ಆಗಿಲ್ಲ. ಕೇಳಿದರೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇದೆ. ಇಲ್ಲಿ ಜೆ.ಡಿ.ಎಸ್‌ ನ ಶಾಸಕರು ಇದ್ದಾರೆ. ಹಾಗಾಗಿ ಸಮಿತಿ ರಚನೆ ಆಗಿಲ್ಲ ಎನ್ನುತ್ತಾರೆ.

ಜತೆಗೆ ಕಾಂಗ್ರೆಸ್‌ನಲ್ಲಿ ರಾಜೀವ್‌ ಗೌಡ, ಪುಟ್ಟು ಆಂಜಿನಪ್ಪ ಹಾಗೂ ಮಾಜಿ ಶಾಸಕ ವಿ.ಮುನಿಯಪ್ಪ ಅವರ ಬೆಂಬಲಿಗರ ಬಣಗಳಿದ್ದು ಈ ಮೂರು ಬಣಗಳ ನಡುವೆ ದರಕಾಸ್ತು ಸಮಿತಿಗೆ ನಾಮ ನಿರ್ದೇಶನಕ್ಕೆ ಹೆಸರುಗಳನ್ನು ಸೂಚಿಸುವಲ್ಲಿ ಒಮ್ಮತ ಮೂಡದ ಕಾರಣ ದರಕಾಸ್ತು ಸಮಿತಿಗೆ ನೇಮಕಾತಿ ಆಗಿಲ್ಲ ಎನ್ನುವ ಮಾತುಗಳು ಕೂಡ ಕೇಳಿ ಬರುತ್ತಿವೆ.

ಈ ಎರಡರಲ್ಲಿ ಯಾವುದೆ ಕಾರಣಕ್ಕಾಗಲಿ ದರಕಾಸ್ತು ಸಮಿತಿ ರಚನೆ ಆಗದಿದ್ದರೂ ತೊಂದರೆ ಮಾತ್ರ ರೈತರಿಗೆ ಆಗುತ್ತಿದೆ. ಅನೇಕ ವರ್ಷಗಳಿಂದಲೂ ಬಗರ್ ಹುಕುಂ ಸಾಗುವಳಿ ಚೀಟಿಗಾಗಿ ಅರ್ಜಿ ಹಾಕಿಕೊಂಡು ತಾವು ಸ್ವಾಧೀನದಲ್ಲಿದ್ದು ಕೃಷಿ ನಡೆಸುತ್ತಿರುವವರು ಜಮೀನು ಮಂಜೂರಿಗಾಗಿ ಬಕ ಪಕ್ಷಿಗಳಂತೆ ಕಾದಿದ್ದಾರೆ ಎಂದರು.

ರಾಜಕೀಯ ಕಾರಣಕ್ಕೋ ಇಲ್ಲವೇ ರೈತರ ಬಗ್ಗೆ ನಿರ್ಲಕ್ಷ್ಯಕ್ಕೋ ದರಕಾಸ್ತು ಸಮಿತಿ ರಚನೆ ಆಗದೆ ರೈತರಿಗೆ ತೊಂದರೆ ಆಗುವುದಕ್ಕೆ ನಾವು ಬಿಡುವುದಿಲ್ಲ. ಕೂಡಲೆ ಸಮಿತಿ ರಚನೆ ಆಗಬೇಕು, ಭೂ ಮಂಜೂರಾತಿಗೆ ಕ್ರಮ ಕೈಗೊಳ್ಳಬೇಕು. ಒಂದೊಮ್ಮೆ ಸಮಿತಿ ಇಲ್ಲದಿರುವಾಗ ಜಿಲ್ಲಾಧಿಕಾರಿಗಳೆ ಸಭೆ ನಡೆಸಿ ನಿಯಮದಂತೆ ಭೂಮಿ ಮಂಜೂರು ಮಾಡಲು ಅವಕಾಶವಿದ್ದು ಆ ಕೆಲಸವಾದರೂ ಆಗಬೇಕೆಂದು ಒತ್ತಾಯಿಸಿದರು.

ಇನ್ನು ಕೆಐಎಡಿಬಿಯು, ಯಾರು ಜಮೀನನ್ನು ಬಿಟ್ಟುಕೊಡಲು ಸಿದ್ದರಿದ್ದಾರೋ ಅಂತಹ ರೈತರ ಜಮೀನನ್ನು ಮಾತ್ರವೇ ಸ್ವಾಧೀನ ಪಡಿಸಿಕೊಂಡು ಕೈಗಾರಿಕೆ ಪ್ರದೇಶ ಅಭಿವೃದ್ದಿ ಪಡಿಸಲು ನಮ್ಮ ಅಭ್ಯಂತರವಿಲ್ಲ. ಇನ್ನು ಯಾರು ಜಮೀನು ನೀಡುವುದಿಲ್ಲವೋ ಅವರ ಜಮೀನನ್ನು ಸ್ವಾಧೀನ ಪ್ರಕ್ರಿಯೆಯಿಂದ ಕೈಬಿಡಬೇಕೆಂದು ಮನವಿ ಮಾಡಿದರು.

ಈ ಬಗ್ಗೆ ಸರ್ಕಾರ, ಕೆಐಎಡಿಬಿಯು ಅಧಿಕೃತವಾಗಿ ಪ್ರಕಟಣೆ ಹೊರಡಿಸಿ ರೈತರಲ್ಲಿನ ಆತಂಕವನ್ನು ದೂರ ಮಾಡಬೇಕೆಂದು ಅವರು ಒತ್ತಾಯಿಸಿದರು.

ದಸಂಸ ತಾಲ್ಲೂಕು ಸಂಚಾಲಕ ದೊಡ್ಡ ತಿರುಮಲಯ್ಯ, ಸಂಘಟನಾ ಸಂಚಾಲಕರಾದ ನರೇಶ್, ರಾಜ್‌ಕುಮಾರ್, ಎನ್.ದ್ಯಾವಪ್ಪ, ಅರುಣ ಹಾಜರಿದ್ದರು.

Sidlaghatta WhatsApp Channel Group

For Daily Updates WhatsApp ‘HI’ to 7406303366

ಯಾದವ ಕಳಸ ಯಾತ್ರೆಗೆ ಅದ್ದೂರಿ ಸ್ವಾಗತ

0
Sidlaghatta Yadava Kalasa Yatre

Sidlaghatta : ಅಖಿಲ ಭಾರತ ಯಾದವ ಮಹಾಸಭಾ ನವದೆಹಲಿ ಹಾಗೂ ಕರ್ನಾಟಕ ರಾಜ್ಯ ಯಾದವ ಸಂಘದ ಸಂಯುಕ್ತಾಶ್ರಯದಲ್ಲಿ ನಡೆಯುತ್ತಿರುವ ಯಾದವ ಕಳಸ ಯಾತ್ರೆ ಬುಧವಾರ ಶಿಡ್ಲಘಟ್ಟವನ್ನು ಪ್ರವೇಶಿಸಿತು.

ನಗರಕ್ಕೆ ಆಗಮಿಸಿದ ಕಳಸಕ್ಕೆ ಯಾದವ ಸಮಾಜ ಹಾಗೂ ಇನ್ನಿತರೆ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಅದ್ದೂರಿ ಸ್ವಾಗತವನ್ನು ಕೋರಿದರು. ನಗರದ ಮಯೂರ ವೃತ್ತದಲ್ಲಿ ಕಳಸಗಳನ್ನು ಹೊತ್ತ ಮಹಿಳೆಯರು ಪೂರ್ಣಕುಂಭ ಸ್ವಾಗತವನ್ನು ಕೋರಿದರು.

ನಗರದ ಅಶೋಕ ರಸ್ತೆ ಮತ್ತು ಟಿ ಬಿ ರಸ್ತೆ ಮೂಲಕ ಸಾಗಿದ ಕಳಸ ಯಾತ್ರೆಗೆ ಪುಷ್ಪಾರ್ಚನೆ ಮಾಡಿ ಜನರು ಬರಮಾಡಿಕೊಂಡರು. ನಗರಸಭೆ ಕಾರ್ಯಾಲಯದ ಮುಂದೆ ಪೌರಾಯುಕ್ತೆ ಅಮೃತ ಮತ್ತು ನಗರಸಭಾ ಸದಸ್ಯರು ಕಳಸಕ್ಕೆ ಪೂಜೆ ಸಲ್ಲಿಸಿ, ಹೂವನ್ನು ಸಮರ್ಪಣೆ ಮಾಡುವ ಮೂಲಕ ಗೌರವ ಸಲ್ಲಿಸಿದರು. ಶ್ರೀ ಕೃಷ್ಣ ದೇವಾಲಯದಲ್ಲಿ ವಿಶೇಷವಾದ ಪೂಜೆ ಸಲ್ಲಿಸಿ ಆನಂತರ ಚಿಕ್ಕಬಳ್ಳಾಪುರಕ್ಕೆ ಬೀಳ್ಕೊಡಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಡಿ.ಟಿ. ಶ್ರೀನಿವಾಸ್, 1962ರಲ್ಲಿ ಭಾರತ ಮತ್ತು ಚೀನಾ ನಡುವಿನ ರಜಾಂಗ್ -ಲಾ- ಕದನದಲ್ಲಿ ವೀರ ಮರಣ ಹೊಂದಿದ 120ಕ್ಕೂ ಹೆಚ್ಚು ಯಾದವ ಸಮಾಜದ ಹುತಾತ್ಮರಿಗೆ ಗೌರವ ಸಮರ್ಪಣೆಗಾಗಿ ಹಾಗೂ ಭಾರತೀಯ ಸೈನ್ಯದಲ್ಲಿ ಪ್ರತ್ಯೇಕ ರೆಜಿಮೆಂಟ್ ಗಾಗಿ ಒತ್ತಾಯಿಸಲಾಗುತ್ತಿದೆ. ಸಾಮಾಜಿಕ, ಆರ್ಥಿಕ, ಶೈಕ್ಷಣಿಕ, ರಾಜಕೀಯ ಸ್ಥಿತಿಗತಿಗಳನ್ನು ಅಧ್ಯಯನ ಮಾಡಿ ಜಾತಿಗಣತಿ ಮಾಡಬೇಕು. ಕೇಂದ್ರ ಸರ್ಕಾರ ಮಂಡಿಸಿರುವ ಮಹಿಳಾ ಬಿಲ್ ನಲ್ಲಿ ಹಿಂದುಳಿದ ವರ್ಗದ ಮಹಿಳೆಯರಿಗೂ ಮೀಸಲಾತಿ ಸಿಗಬೇಕು. ಮುಂದಿನ ದಿನಗಳಲ್ಲಿ ಜಾತಿಗಣತಿ ಆದ ಮೇಲೆ ಸಂಸತ್ ನಲ್ಲಿ, ವಿಧಾನಸಭೆಯಲ್ಲಿ ಮತ್ತು ವಿಧಾನ ಪರಿಷತ್ ನಲ್ಲಿ ಹಿಂದುಳಿದ ವರ್ಗದವರಿಗೆ ಪ್ರತ್ಯೇಕ ಮೀಸಲಾತಿ ಕೊಡಬೇಕು ಎಂಬುದು ನಮ್ಮ ಸಂಘದ ನಾಲ್ಕು ನಿರ್ಣಯಗಳಾಗಿವೆ” ಎಂದು ಹೇಳಿದರು.

ಯಾದವ ಸಮಾಜದ ಮುಖಂಡರಾದ ಟಿ.ಕೆ. ನಟರಾಜ್, ದೊಗರನಾಯಕನಹಳ್ಳಿ ವೆಂಕಟೇಶ್, ಕೇಶವ ಮೂರ್ತಿ, ಚಂದ್ರಶೇಖರ್, ದೇವರಾಜ್, ನಗರಸಭೆಯ ಅಧ್ಯಕ್ಷ ವೆಂಕಟಸ್ವಾಮಿ, ಉಪಾಧ್ಯಕ್ಷೆ ರೂಪ ನವೀನ್, ನಗರಸಭಾ ಸದಸ್ಯರಾದ ನಾರಾಯಣಸ್ವಾಮಿ, ಲಕ್ಷ್ಮಣ, ವಕೀಲರ ಸಂಘದ ಅಧ್ಯಕ್ಷ ನಾರಾಯಣಸ್ವಾಮಿ, ವಕೀಲ ಯೋಗಾನಂದ, ಬಿಜೆಪಿ ಜಿಲ್ಲಾಧ್ಯಕ್ಷ ಸೀಕಲ್ ರಾಮಚಂದ್ರಗೌಡ, ಆನಂದಗೌಡ ಹಾಜರಿದ್ದರು.

Sidlaghatta WhatsApp Channel Group

For Daily Updates WhatsApp ‘HI’ to 7406303366

Sidlaghatta Silk Cocoon Market-06/08/2025

0
Sidlaghatta Silk Cocoon Market Price Rate ಶಿಡ್ಲಘಟ್ಟ ರೇಷ್ಮೆ ಗೂಡು ಮಾರುಕಟ್ಟೆ ಧಾರಣೆ

Sidlaghatta Govt Silk Cocoon Market

ಶಿಡ್ಲಘಟ್ಟ ರೇಷ್ಮೆ ಗೂಡು ಮಾರುಕಟ್ಟೆ ಧಾರಣೆ

Date: 06/08/2025

Cross-Breed Silk Cocoon – ಮಿಶ್ರತಳಿ ರೇಷ್ಮೆ ಗೂಡು

Lots: 308
Qty: 16014 Kg
Mx : ₹ 717
Mn: ₹ 421
Avg: ₹ 635

Bi-Voltine Silk Cocoon – ದ್ವಿತಳಿ ರೇಷ್ಮೆ ಗೂಡು

Lots: 08
Qty: 410 Kg
Mx : ₹ 765
Mn: ₹ 639
Avg: ₹ 728


For Daily Updates WhatsApp ‘HI’ to 7406303366

ಪಿಯು ಕಾಲೇಜು ವಿದ್ಯಾರ್ಥಿಗಳ ಕ್ರೀಡಾ ಕೂಟ

0
Sidlaghatta PU College Sports Championship

Sidlaghatta : ಜಾತಿ ಮತ ಧರ್ಮ ಭಾಷೆಯ ಗಡಿ ಮೀರಿ ಎಲ್ಲರನ್ನೂ ಒಟ್ಟುಗೂಡಿಸುವ ಶಕ್ತಿ ಕ್ರೀಡೆ, ಸಂಗೀತಕ್ಕೆ ಇದೆ. ಕ್ರೀಡೆಯನ್ನು ಸೋಲು ಗೆಲುವಿನ ಮೂಲಕ ಮಾತ್ರ ನೋಡದೆ ಸ್ಪರ್ಧಾತ್ಮಕ ಮನೋಭಾವದಿಂದ ನೋಡಬೇಕಿದೆ ಎಂದು ಸರ್ಕಾರಿ ನೌಕರರ ಸಂಘದ ರಾಜ್ಯ ಕಾರ್ಯದರ್ಶಿ ಕೆ.ಎನ್.ಸುಬ್ಬಾರೆಡ್ಡಿ ಕ್ರೀಡಾಪಟುಗಳಿಗೆ ತಿಳಿಸಿದರು.

ನಗರದ ನೆಹರೂ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ತಾಲ್ಲೂಕಿನ ಸರ್ಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಪಿಯು ಕಾಲೇಜು ವಿದ್ಯಾರ್ಥಿಗಳ 2025-26 ನೇ ಸಾಲಿನ ವಾರ್ಷಿಕ ಕ್ರೀಡಾ ಕೂಟ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ವಿದ್ಯಾರ್ಥಿಗಳು, ಯುವಜನರು ಸೇರಿದಂತೆ ಎಲ್ಲ ವಯೋಮಾನದವರು ಕೂಡ ಆರೋಗ್ಯದಿಂದ ಇರಬೇಕಾದರೆ ದೈಹಿಕ ಕಸರತ್ತು ಮುಖ್ಯ. ಅದು ವ್ಯಾಯಾಮ ಆಗಿರಬಹುದು ಅಥವಾ ದಿನ ನಿತ್ಯದ ಚಟುವಟಿಕೆ ಆಗಿರಬಹುದು. ಮಾನಸಿಕ ಮತ್ತು ದೈಹಿಕ ಆರೋಗ್ಯಕ್ಕೆ ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸಬೇಕೆಂದು ತಿಳಿಸಿದರು.

ಇತ್ತೀಚಿನ ವರ್ಷಗಳಲ್ಲಿ ಹೆಚ್ಚು ಅಂಕ, ರ್ಯಾಂಕ್ ಗಳಿಸುವ ಧಾವಂತದಲ್ಲಿ ಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳುವುದು ಕಡಿಮೆ ಆಗುತ್ತಿದೆ. ಇದರಿಂದ ವಿದ್ಯಾರ್ಥಿಗಳು ಮಾನಸಿಕ ಖಿನ್ನತೆಗೆ ಒಳಗಾಗುವ ಸಂಭವ ಹೆಚ್ಚು. ಈ ಬಗ್ಗೆ ಶಿಕ್ಷಕರು, ಇಲಾಖೆ ಹಾಗೂ ಪೋಷಕರು ಗಮನ ಹರಿಸಬೇಕೆಂದು ಮನವಿ ಮಾಡಿದರು.

ಈ ಕ್ರೀಡಾ ಕೂಟದಲ್ಲಿ ಸೋಲು ಗೆಲುವಿನ ದೃಷ್ಟಿಯಲ್ಲಿ ಮಾತ್ರ ಕ್ರೀಡೆಗಳಲ್ಲಿ ಭಾಗವಹಿಸದೆ ಸ್ಪರ್ಧಾತ್ಮಕ ಭಾವನೆಯಿಂದ ಸೋಲು ಗೆಲುವು ಎರಡನ್ನೂ ಸಮಾನವಾಗಿ ಸ್ವೀಕರಿಸುವ ಮನೋಭಾವದಿಂದ ಆಟ ಆಡಿ ಎಂದು ಕೋರಿದರು.

ಓಟ, ಉದ್ದ ಜಿಗಿತ, ಎತ್ತರ ಜಿಗಿತ, ಭರ್ಜಿ ಎಸೆತ, ಗುಂಡು ಎಸೆತ, ಟ್ರಿಪಲ್ ಜಂಪ್ ಸೇರಿ ವಿವಿಧ ರೀತಿಯ 22 ಕ್ರೀಡೆಗಳು ನಡೆದವು. 17 ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಿನ್ಸಿಪಾಲ್ ವೆಂಕಟಶಿವಾರೆಡ್ಡಿ, ತಾಲ್ಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ದೇವೇಂದ್ರಪ್ಪ, ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಪ್ರಕಾಶ್ ಬಾಬು, ಮಂಜುನಾಥ್, ಪ್ರಕಾಶ್, ಸಂಪತ್, ಪ್ರಸನ್ನ ಹಾಜರಿದ್ದರು.

Sidlaghatta WhatsApp Channel Group

For Daily Updates WhatsApp ‘HI’ to 7406303366

Sidlaghatta Silk Cocoon Market-05/08/2025

0
Sidlaghatta Silk Cocoon Market Price Rate ಶಿಡ್ಲಘಟ್ಟ ರೇಷ್ಮೆ ಗೂಡು ಮಾರುಕಟ್ಟೆ ಧಾರಣೆ

Sidlaghatta Govt Silk Cocoon Market

ಶಿಡ್ಲಘಟ್ಟ ರೇಷ್ಮೆ ಗೂಡು ಮಾರುಕಟ್ಟೆ ಧಾರಣೆ

Date: 05/08/2025

Cross-Breed Silk Cocoon – ಮಿಶ್ರತಳಿ ರೇಷ್ಮೆ ಗೂಡು

Lots: 382
Qty: 20700 Kg
Mx : ₹ 690
Mn: ₹ 358
Avg: ₹ 589

Bi-Voltine Silk Cocoon – ದ್ವಿತಳಿ ರೇಷ್ಮೆ ಗೂಡು

Lots: 17
Qty: 1085 Kg
Mx : ₹ 740
Mn: ₹ 500
Avg: ₹ 672


For Daily Updates WhatsApp ‘HI’ to 7406303366

ಕಚೇರಿಯಲ್ಲಿ ಕಾರ್ಯನಿರ್ವಹಿಸುವಾಗಲೆ ನಿತ್ರಾಣಗೊಂಡ ಪೌರಾಯುಕ್ತೆ

0
Sidlaghatta Municipal commissioner medical Emergency

Sidlaghatta : ನಗರಸಭೆ ಪೌರಾಯುಕ್ತೆ ಜಿ.ಅಮೃತ ಅವರು ಅತಿಯಾದ ಕಾರ್ಯದೊತ್ತಡದಿಂದಾಗಿ ಕಚೇರಿಯಲ್ಲಿ ಕಾರ್ಯನಿರ್ವಹಿಸುವಾಗಲೆ ಅಸ್ವಸ್ಥಗೊಂಡು ಕೆಲ ಕಾಲ ಆತಂಕದ ವಾತಾವರಣ ನಿರ್ಮಾಣವಾಯಿತು.

ನಗರಸಭೆಯ ತಮ್ಮ ಕಚೇರಿಯಲ್ಲಿ ಇ ಖಾತೆಯ ಕಡತಗಳ ವಿಲೇವಾರಿ ಮಾಡುತ್ತಿದ್ದ ಜಿ.ಅಮೃತ ಅವರು ಏಕಾ ಏಕಿ ನಿತ್ರಾಣಗೊಂಡು ಅಸ್ವಸ್ಥಗೊಂಡಿದ್ದಾರೆ. ಕೂಡಲೆ ಅವರನ್ನು ಅಲ್ಲಿದ್ದ ಸಿಬ್ಬಂದಿ ಮತ್ತು ನಗರಸಭೆಯ ಕೆಲ ಸದಸ್ಯರು ಆರೈಕೆ ಮಾಡಿದ್ದಾರೆ.

ನಗರಸಭೆ ಕಚೇರಿಯ ಎದುರು ಇರುವ ಖಾಸಗಿ ಆಸ್ಪತ್ರೆಯ ಡಾ.ಸತ್ಯನಾರಾಯಣರಾವ್ ಅವರನ್ನು ಕಚೇರಿಗೆ ಕರೆಸಿ ಪ್ರಥಮ ಚಿಕಿತ್ಸೆ ಕೊಡಿಸಿ ನಂತರ ಆಂಬ್ಯುಲೆನ್ಸ್‌ನಲ್ಲಿ ಸಾರ್ವಜನಿಕ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಮುಂದುವರೆಸಿದ್ದು ಚೇತರಿಸಿಕೊಂಡಿದ್ದಾರೆ.

ವಿಷಯ ತಿಳಿಯುತ್ತಿದ್ದಂತೆ ನಗರಸಭೆ ಕಚೇರಿ ಮುಂದೆ ಜನ ಜಂಗುಳಿಯೆ ನೆರೆದಿತ್ತು. ಜಿಲ್ಲಾ ಯೋಜನಾಕಾರಿ ಸೇರಿದಂತೆ ಹಲವು ಅಕಾರಿಗಳು, ನಗರಸಭೆ ಸದಸ್ಯರು, ಪ್ರಮುಖರು ಆಸ್ಪತ್ರೆಗೆ ಭೇಟಿ ನೀಡಿ ಪೌರಾಯುಕ್ತರ ಕ್ಷೇಮ ವಿಚಾರಿಸಿದರು.

ಇತ್ತೀಚೆಗೆ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಇ ಖಾತೆಗಳ ವಿಲೇವಾರಿ ಕುರಿತು ಹಿರಿಯ ಅಧಿಕಾರಿಗಳು ಮಾಹಿತಿ ಕೇಳಿದ್ದು ವಿಲೇವಾರಿ ಕುಂಠಿತಗೊಂಡ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದರು ಎನ್ನಲಾಗಿದೆ. ಇತ್ತೀಷೆಗಷ್ಟೆ ಪೌರಾಯುಕ್ತರಾಗಿ ಅಧಿಕಾರವಹಿಸಿಕೊಂಡಿದ್ದ ಅಮೃತ ಅವರು ಕಳೆದ ಎರಡು ಮೂರು ದಿನಗಳಿಂದ ಬಿಡುವಿಲ್ಲದೆ ಕಡತಗಳ ವಿಲೇವಾರಿಯಲ್ಲಿ ತೊಡಗಿದ್ದು ಅದು ನಿತ್ರಾಣಕ್ಕೆ ಕಾರಣ ಎನ್ನಲಾಗಿದೆ.

Sidlaghatta WhatsApp Channel Group

For Daily Updates WhatsApp ‘HI’ to 7406303366

ಸ್ಮಶಾನದಲ್ಲಿ ಬೆಳೆದಿರುವ ಕಳೆಗಿಡಗಳನ್ನು ಸ್ವಚ್ಚಗೊಳಿಸುವಂತೆ ಒತ್ತಾಯ

0
Silaghatta Jangamakote People Grievance

Jangamakote, sidlahgatta : ಶಿಡ್ಲಘಟ್ಟ ತಾಲ್ಲೂಕಿನ ಜಂಗಮಕೋಟೆ ಗ್ರಾಮದ ಸ್ಮಶಾನದಲ್ಲಿ ದಟ್ಟವಾಗಿ ಬೆಳೆದು ನಿಂತಿರುವ ಕಳೆಗಿಡಗಳನ್ನು ಸ್ವಚ್ಚಗೊಳಿಸುವಂತೆ ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದ್ದರೂ ಇದುವರೆಗೂ ಸ್ವಚ್ಚಗೊಳಿಸಿಲ್ಲವೆಂದು ಸ್ಥಳೀಯರು ದೂರಿದ್ದಾರೆ.

ಜಂಗಮಕೋಟೆ ಗ್ರಾಮದಲ್ಲಿ ಯಾರಾದರೂ ಮೃತಪಟ್ಟರೆ, ಇದೇ ಸ್ಮಶಾನದಲ್ಲೆ ಅಂತ್ಯ ಸಂಸ್ಕಾರ ಮಾಡಲಾಗುತ್ತದೆ. ಶವವನ್ನು ಹೊತ್ತುಕೊಂಡು ಒಳಗೆ ಹೋಗುವುದಕ್ಕೂ ಜಾಗವಿಲ್ಲ. ಪಾರ್ಥೆನಿಯಂ ಗಿಡಗಳು, ಮುಳ್ಳುಗಿಡಗಳು ದಟ್ಟವಾಗಿ ಬೆಳೆದು ನಿಂತಿವೆ.

ವಿದ್ಯುತ್ ದೀಪದ ವ್ಯವಸ್ಥೆಯಿಲ್ಲ, ರಾತ್ರಿಯ ವೇಳೆ ಅಂತ್ಯ ಸಂಸ್ಕಾರ ಮಾಡಬೇಕಾದಂತಹ ಪರಿಸ್ಥಿತಿ ಎದುರಾದರೆ, ಮೊಬೈಲ್ ಟಾರ್ಚರ್ ಗಳನ್ನು ಹಿಡಿದುಕೊಂಡು ಅಂತ್ಯ ಸಂಸ್ಕಾರ ಮಾಡಬೇಕಿದೆ. ಅಂತ್ಯ ಸಂಸ್ಕಾರ ಮಾಡಿಕೊಂಡು ಮನೆಗಳಿಗೆ ವಾಪಸ್ಸು ಹೋಗುವಾಗ ಕಾಲುಗಳು ತೊಳೆದುಕೊಂಡು ಹೋಗುವುದು ಮೊದಲಿನಿಂದಲೂ ಸಂಪ್ರದಾಯವಿದೆ. ಮೊದಲೆಲ್ಲಾ ಕುಂಟೆಗಳಲ್ಲಿ ನೀರು ಇರುತ್ತಿತ್ತು. ಅಲ್ಲೆ ಕೈ ಕಾಲುಗಳು ತೊಳೆದುಕೊಂಡು ಮನೆಗಳಿಗೆ ಹೋಗುತ್ತಿದ್ದರು. ಈಗ ಕುಂಟೆಗಳು ಬತ್ತಿಹೋಗಿವೆ. ಸ್ಮಶಾನದಲ್ಲೆ ಒಂದು ಸಿಸ್ಟನ್ ಅಳವಡಿಕೆ ಮಾಡಿ, ಅದಕ್ಕೆ ನೀರು ಪೂರೈಕೆ ಮಾಡಿದರೆ, ತುಂಬಾ ಅನುಕೂಲವಾಗುತ್ತದೆ.

ಯಾರಾದರೂ ಮೃತಪಟ್ಟರೆ, ಅವರ ಸಂಬಂಧಿಕರು ಬಂದು ಎಲ್ಲಿ ಅಂತ್ಯಸಂಸ್ಕಾರ ಮಾಡಲಾಗುತ್ತದೆಯೋ ಅಲ್ಲಿ ಮಾತ್ರ ಗಿಡಗಂಟಿಗಳನ್ನು ಸ್ವಚ್ಚ ಮಾಡಿಕೊಂಡು, ಮಾಡುತ್ತಿದ್ದಾರೆ. ಹಳ್ಳಿಗಳ ಸ್ವಚ್ಚತೆಗೆ ಆಧ್ಯತೆ ಕೊಡುವ ಪ್ರಕಾರ, ಸ್ಮಶಾನಗಳಲ್ಲೂ ಸ್ವಚ್ಚತೆಗೆ ಆಧ್ಯತೆ ಕೊಡಬೇಕು ಎಂದು ಗ್ರಾಮದ ಮನೋಜ್ ಮತ್ತು ಮುನಿಯಪ್ಪ ಒತ್ತಾಯಿಸಿದರು.

ಸ್ಮಶಾನದಲ್ಲಿ ಓಡಾಡುವುದಕ್ಕೆ ರಸ್ತೆ ಮಾಡಬೇಕು, ಸುತ್ತಲೂ ವಿದ್ಯುತ್ ದೀಪಗಳನ್ನು ಅಳವಡಿಕೆ ಮಾಡಬೇಕು, ನೀರಿನ ವ್ಯವಸ್ಥೆ ಮಾಡಬೇಕು, ಶವಗಳನ್ನು ತೆಗೆದುಕೊಂಡು ಬಂದಾಗ ಪೂಜಾ ವಿಧಿವಿಧಾನಗಳನ್ನು ನೆರವೇರಿಸಲು ಕಟ್ಟಡವನ್ನು ನಿರ್ಮಾಣ ಮಾಡಬೇಕು. ಈ ಬಗ್ಗೆ ಗ್ರಾಂ ಪಂಚಾಯಿತಿಯವರು ವಿಶೇಷ ಗಮನಹರಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

Sidlaghatta WhatsApp Channel Group

For Daily Updates WhatsApp ‘HI’ to 7406303366

Sidlaghatta Silk Cocoon Market-04/08/2025

0
Sidlaghatta Silk Cocoon Market Price Rate ಶಿಡ್ಲಘಟ್ಟ ರೇಷ್ಮೆ ಗೂಡು ಮಾರುಕಟ್ಟೆ ಧಾರಣೆ

Sidlaghatta Govt Silk Cocoon Market

ಶಿಡ್ಲಘಟ್ಟ ರೇಷ್ಮೆ ಗೂಡು ಮಾರುಕಟ್ಟೆ ಧಾರಣೆ

Date: 04/08/2025

Cross-Breed Silk Cocoon – ಮಿಶ್ರತಳಿ ರೇಷ್ಮೆ ಗೂಡು

Lots: 312
Qty: 17124 Kg
Mx : ₹ 647
Mn: ₹ 288
Avg: ₹ 593

Bi-Voltine Silk Cocoon – ದ್ವಿತಳಿ ರೇಷ್ಮೆ ಗೂಡು

Lots: 07
Qty: 455 Kg
Mx : ₹ 722
Mn: ₹ 612
Avg: ₹ 682


For Daily Updates WhatsApp ‘HI’ to 7406303366

ದೇವಾಲಯ ದೋಚಿದ ಕಳ್ಳರ ಬಂಧನ: ₹1.79 ಲಕ್ಷ ಮೌಲ್ಯದ ಚಿನ್ನ, ಬೆಳ್ಳಿ, ವಜ್ರಾಭರಣ ವಶ

0
Sidlaghatta Temple Thieves Arrested

Dibburahalli, Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಸಾದಲಿ ಹೋಬಳಿಯ ಹಿರಿಯಲಚೇನಹಳ್ಳಿ ಗ್ರಾಮದ ಪ್ರಸಿದ್ಧ ಚೌಡೇಶ್ವರಿ ದೇವಾಲಯದಲ್ಲಿ ಜುಲೈ 23 ರಂದು ನಡೆದ ಆಭರಣ ದೋಚು ಪ್ರಕರಣವನ್ನು ದಿಟ್ಟೂರಹಳ್ಳಿ ಪೊಲೀಸ್ ಠಾಣೆಯ ಅಧಿಕಾರಿಗಳು ಯಶಸ್ವಿಯಾಗಿ ಬಗೆಹರಿಸಿದ್ದಾರೆ. ದೇವಾಲಯದ ಪೂಜಾರಿ ಚಿಕ್ಕಮಲ್ಲಪ್ಪ ಅವರು ಪೊಲೀಸ್ ಠಾಣೆಗೆ ದೂರು ನೀಡಿದಂತೆ, ಮೂವರು ಅಪರಿಚಿತರು ದೇವಾಲಯದ ಒಳಗಿನ ದೇವರಿಗೆ ಅಲಂಕರಿಸಲಾದ ಚಿನ್ನ, ಬೆಳ್ಳಿ ಮತ್ತು ವಜ್ರಾಭರಣಗಳನ್ನು ಕಳ್ಳತನ ಮಾಡಿ ಪರಾರಿಯಾಗಿದ್ದರು.

ಕಳ್ಳತನಗೊಂಡಿರುವ ಒಡವೆಗಳಲ್ಲಿ 3.1 ಕೆ.ಜಿ ಬೆಳ್ಳಿಯ ದೇವರ ಮುಖವಾಡಗಳು, ₹7,000 ಮೌಲ್ಯದ ವಜ್ರದ ಮೂಗುತಿ, 1.5 ಕೆ.ಜಿ ಬೆಳ್ಳಿಯ ಛತ್ರಿಗಳು, 6 ಬಂಗಾರದ ತಾಳಿಯ ಬೊಟ್ಟುಗಳು, 50 ಗ್ರಾಂ ತೂಕದ ಬೆಳ್ಳಿಯ ಕಾಲು ಗೆಜ್ಜೆಗಳು ಸೇರಿದ್ದು, ಒಟ್ಟು ಮೌಲ್ಯವನ್ನು ₹1,79,400 ಎಂದು ಅಂದಾಜಿಸಲಾಗಿದೆ.

ಈ ಪ್ರಕರಣದ ತನಿಖೆಯನ್ನು ಜಿಲ್ಲೆ ಪೊಲೀಸ್ ವರಿಷ್ಠಾಧಿಕಾರಿ ಕುಶಾಲ್ ಚೌಕ್ಷೆ ಅವರ ಮಾರ್ಗದರ್ಶನದಲ್ಲಿ ನಡೆಸಲಾಯಿತು. ಶಿಡ್ಲಘಟ್ಟ ವೃತ್ತದ ಸಿಪಿಐ ಎಂ. ಶ್ರೀನಿವಾಸ್, ಪಿಎಸ್‌ಐ ಶಾಮಲಾ ಮತ್ತು ವೆಂಕಟರಮಣ ಅವರ ನೇತೃತ್ವದಲ್ಲಿ ವಿಶೇಷ ತಂಡವನ್ನು ರಚಿಸಿ, ಮೂರು ಆರೋಪಿಗಳನ್ನು ಬಂಧಿಸಲು ಕಾರ್ಯಾಚರಣೆ ನಡೆಯಿತು.

ಬಂಧಿತರು:

ಎ1: ನವೀನ್ ಕುಮಾರ್ (ಕೇಶವಾರ ಗ್ರಾಮ)

ಎ2: ಲತಾ (ಪುರ ಗ್ರಾಮ, ವಿಜಯಪುರ ಹೋಬಳಿ)

ಎ3: ಚಿಕ್ಕಮಲ್ಲೇಶಪ್ಪ (ದೇವಾಲಯದ ಸಮೀಪದ ನಿವಾಸಿ)

ಅವರಿಂದ ಕಳವಾದ ಎಲ್ಲಾ ಆಭರಣಗಳನ್ನು ಮತ್ತು ಕೃತ್ಯಕ್ಕೆ ಬಳಸಿದ ಕಾ.ಸಂ: KA 40 N 5292 ನ್ನು ಹೊಂದಿರುವ FRONX SIGMA ಕಾರನ್ನು ವಶಪಡಿಸಿಕೊಳ್ಳಲಾಗಿದೆ.

ಈ ಕಾರ್ಯಾಚರಣೆಯಲ್ಲಿ ಪೊಲೀಸ್ ಸಿಬ್ಬಂದಿ ನರಸಿಂಹಯ್ಯ, ಶ್ರೀನಿವಾಸ್, ಕೃಷ್ಣಪ್ಪ, ಶಶಿಕುಮಾರ್, ಶ್ರೀನಾಥ್, ಕಿರಣ್ ಕುಮಾರ್, ದಿಲೀಪ್ ಕುಮಾರ್, ಸುಮಾ, ಜ್ಯೋತಿ ಲಕ್ಷ್ಮಿ ಮತ್ತು ಇನ್ನಿತರರು ಪ್ರಮುಖ ಪಾತ್ರವಹಿಸಿದ್ದಾರೆ. ತ್ವರಿತ ಕ್ರಮದಿಂದ ಪ್ರಕರಣ ಬಗೆಹರಿಸಿದEntire ತಂಡವನ್ನು ಎಸ್.ಪಿ. ಕುಶಾಲ್ ಚೋಕ್ಸ್ ಶ್ಲಾಘಿಸಿದರು.

Sidlaghatta WhatsApp Channel Group

For Daily Updates WhatsApp ‘HI’ to 7406303366

ಸೈಬರ್ ಅಪರಾಧಗಳಿಗೆ ಯುವಜನರೆ ಹೆಚ್ಚು ಬಲಿಯಾಗುತ್ತಿದ್ದಾರೆ

0
Sidlaghatta H Cross Sri Sai Vidyanidhi College Event

H Cross, Sidlaghatta : ಇತ್ತೀಚಿನ ವರ್ಷಗಳಲ್ಲಿ ಹೆಚ್ಚುತ್ತಿರುವ ಸೈಬರ್ ಅಪರಾಧಗಳಿಗೆ ವಿದ್ಯಾರ್ಥಿಗಳು ಸೇರಿದಂತೆ ಯುವ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಬಲಿಯಾಗುತ್ತಿದ್ದಾರೆ ಮತ್ತು ಸೈಬರ್ ಅಪರಾಧಗಳಿಂದ ಎದುರಾಗುವ ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ ಎಂದು ಸರ್ಕಲ್ ಇನ್ಸ್‌ಪೆಕ್ಟರ್ ಎಂ.ಶ್ರೀನಿವಾಸ್ ಆತಂಕ ವ್ಯಕ್ತಪಡಿಸಿದರು.

ತಾಲ್ಲೂಕಿನ ಎಚ್.ಕ್ರಾಸ್‌ ನ ಶ್ರೀಸಾಯಿ ವಿದ್ಯಾ ನಿಧಿ ನ್ಯಾಷನಲ್ ಪಿಯು ಹಾಗೂ ಪದವಿ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ನೂತನವಾಗಿ ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು.

ವಿದ್ಯಾರ್ಥಿಗಳಿಗೆ ವಿನಾಕಾರಣ ಮೊಬೈಲ್ ಕೊಡುವುದನ್ನು ಪೋಷಕರೆ ನಿಲ್ಲಿಸಬೇಕು. ಸೈಬರ್ ಅಪರಾಧಗಳು ಹೆಚ್ಚಲು ವಿದ್ಯಾರ್ಥಿಗಳ ಮೊಬೈಲ್ ಗೀಳು ಕಾರಣವಾಗುತ್ತಿದೆ. ಅತಿಯಾದ ಮೊಬೈಲ್ ಬಳಕೆ ಗೀಳು ಪ್ರಾಣಕ್ಕೆ ಕುತ್ತು ತರುವಷ್ಟು ಹೆಚ್ಚಿರುವುದು ಆತಂಕ ತಂದಿದೆ ಎಂದರು.

ವಿದ್ಯಾರ್ಥಿ ಜೀವನವೇ ಭವಿಷ್ಯದ ಭದ್ರ ಬುನಾದಿ ಎಂಬ ಅಂಶವನ್ನು ವಿದ್ಯಾರ್ಥಿಗಳು ಹಾಗೂ ಪೋಷಕರು ಮನಗಾಣಬೇಕು. ಈ ಹಂತದಲ್ಲಿ ಓದುವುದು, ಜ್ಞಾನ ಬೆಳೆಸಿಕೊಳ್ಳುವುದು, ಶಿಸ್ತು, ನೈತಿಕತೆ, ಸಂಸ್ಕಾರವನ್ನು ಮೈಗೂಡಿಸಿಕೊಳ್ಳುವುದಷ್ಟೆ ವಿದ್ಯಾರ್ಥಿಗಳು ಗುರಿ ಆಗಿರಬೇಕು ಎಂದು ಬಯಸಿದರು.

ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ರಾಜಶೇಖರ ಗೌಡ ಮಾತನಾಡಿ, ವಿದ್ಯಾರ್ಥಿಗಳು ಶಿಸ್ತು, ಶ್ರದ್ದೆಯಿಂದ ಓದಿ ಗುರಿ ಮುಟ್ಟುವಂತಾಗಬೇಕು. ಶಿಕ್ಷಣಕ್ಕೆ ನಮ್ಮೆಲ್ಲರ ಜೀವನವನ್ನು ರೂಪಿಸುವ ಶಕ್ತಿ ಇದೆ, ವಿದ್ಯಾರ್ಥಿಗಳು ಸಮಾಜದಲ್ಲಿ ಸಜ್ಜನ ನಾಗರಿಕರಾಗಿ ಬೆಳೆವ ಹಾದಿಯಲ್ಲಿ ತಮ್ಮ ಜವಾಬ್ದಾರಿಗಳನ್ನು ಅರಿತು ನಡೆದುಕೊಳ್ಳಬೇಕು ಎಂದು ತಿಳಿಸಿದರು.

2024-25 ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶಿಡ್ಲಘಟ್ಟ ತಾಲ್ಲೂಕು ಮಟ್ಟದಲ್ಲಿ ಉನ್ನತ ಅಂಕ ಗಳಿಸಿದ ಹಂಸವೇಣಿ ಹಾಗೂ ಮಾನಸ ರವರಿಗೆ ಕಾರ್ಯಕ್ರಮದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.

ವಿದ್ಯಾರ್ಥಿಗಳಿಂದ ನೃತ್ಯ, ನಾಟಕ, ಗಾಯನದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ಪ್ರಿನ್ಸಿಪಾಲ್ ಪುನೀತ್ ಕುಮಾರ್, ಶಿಡ್ಲಘಟ್ಟ ಸರ್ಕಾರಿ ಪಿಯು ಕಾಲೇಜಿನ ಪ್ರಿನ್ಸಿಪಾಲ್ ಸಿ.ವೆಂಕಟರೆಡ್ಡಿ, ವಿದ್ಯಾ ಸಂಸ್ಥೆಯ ಅಧ್ಯಕ್ಷ ಡಾ.ಬಿ.ಎನ್.ಮೂರ್ತಿ, ಉಪಾಧ್ಯಕ್ಷ ಡಾ.ಶಿವರಾಮರೆಡ್ಡಿ, ಕಾರ್ಯದರ್ಶಿ ಸಿ.ಎಂ.ನಾರಾಯಣಸ್ವಾಮಿ, ಖಜಾಂಚಿ ಪೂರ್ಣಚಂದ್ರ, ಉಪನ್ಯಾಸಕ ಇಮ್ರಾನ್, ವಿಜಯ್ ಕುಮಾರ್, ರಮೇಶ್, ಮಂಜುನಾಥ್, ವಿದ್ಯಾರ್ಥಿಗಳು, ಪೋಷಕರು ಹಾಜರಿದ್ದರು.

Sidlaghatta WhatsApp Channel Group

For Daily Updates WhatsApp ‘HI’ to 7406303366

error: Content is protected !!