15.1 C
Sidlaghatta
Sunday, December 28, 2025
Home Blog Page 51

ರಾಜೀವ್‌ ಗೌಡ ಕ್ರಿಕೆಟ್ ಟೂರ್ನಿಮೆಂಟ್‌

0
Kundalagurki rajeev gowda Cricket Tournament

Kundalagurki, sidlaghatta : ಈ ಜಗತ್ತಿನಲ್ಲಿ ಜಾತಿ ಧರ್ಮ ಭಾಷೆ ಗಡಿಯ ತಾರತಮ್ಯ ಇಲ್ಲದೆ ಎಲ್ಲರನ್ನೂ ಒಗ್ಗೂಡಿಸುವ ಶಕ್ತಿ ಕ್ರೀಡೆಗೆ ಮಾತ್ರ ಇದೆ. ಕ್ರೀಡೆಗಳು ನಮ್ಮೆಲ್ಲರ ದೈಹಿಕ ಹಾಗೂ ಮಾನಸಿಕ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ ಎಂದು ಕೆಪಿಸಿಸಿ ಸಂಯೋಜಕ ಬಿ.ವಿ.ರಾಜೀವ್‌ಗೌಡ ತಿಳಿಸಿದರು.

ತಾಲ್ಲೂಕಿನ ಕುಂದಲಗುರ್ಕಿ ಗ್ರಾಮದಲ್ಲಿ ಎಬಿಡಿ ಟ್ರಸ್ಟ್ ಹಾಗೂ ಕುಂದಲಗುರ್ಕಿ ಕ್ರಿಕೆಟ್ ಬಾಯ್ಸ್‌ ನ ಆಶ್ರಯದಲ್ಲಿ ಹಮ್ಮಿಕೊಂಡಿದ್ದ “ರಾಜೀವ್‌ಗೌಡ ಟೆನ್ನೀಸ್ ಬಾಲ್ ಕ್ರಿಕೆಟ್ ಟೂರ್ನಿಮೆಂಟ್” ತಾಲ್ಲೂಕು ಮಟ್ಟದ ಪಂದ್ಯಾವಳಿಯಲ್ಲಿ ವಿಜೇತ ತಂಡಗಳಿಗೆ ಬಹುಮಾನ ವಿತರಿಸಿ ಅವರು ಮಾತನಾಡಿದರು.

ಯಾವುದೇ ಕ್ಷೇತ್ರದಲ್ಲಾಗಲಿ ಯಶಸ್ಸು ಎಂಬುದು ಯಾರಿಗೂ ಕೂಡ ಸುಲಭವಾಗಿ ಸಿಗುವುದಿಲ್ಲ. ಸತತ ಪರಿಶ್ರಮ, ಗುರಿ ಮುಟ್ಟುವ ಛಲ, ಚಂಚಲತೆಯ ಮನಸ್ಸನ್ನು ಹತೋಟಿಯಲ್ಲಿ ಇಟ್ಟುಕೊಳ್ಳುವ ಶಕ್ತಿ ಇದ್ದಾಗ ಮಾತ್ರ ಬದುಕಿನಲ್ಲಿ ಅಂದುಕೊಂಡಿದ್ದೆಲ್ಲವನ್ನೂ ಸಾಧಿಸಬಹುದು.

ಯುವಜನತೆಯು ತಮಗಿಷ್ಟವಾದ ಕ್ಷೇತ್ರದಲ್ಲಿ ಸಾಧನೆ ಮಾಡಲು, ಸಮಾಜ ಮುಖಿ ಬದುಕು ನಡೆಸಲು ಸಾಕಷ್ಟು ಅವಕಾಶಗಳು ಇವೆ. ಸರ್ಕಾರ ಅನೇಕ ಯೋಜನೆಗಳನ್ನು ಜಾರಿ ಮಾಡಿದ್ದು ಅವುಗಳನ್ನು ಸದುಪಯೋಗಪಡಿಸಿಕೊಂಡು ಬದುಕಿನ ಗುರಿ ಮುಟ್ಟಿ ಎಂದು ಹೇಳಿದರು.

ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಸಾಮಾನ್ಯವಾಗಿ ಇಂಗ್ಲೀಷ್, ಗಣಿತ ಮತ್ತು ವಿಜ್ಞಾನ ವಿಷಯದಲ್ಲಿ ಸ್ವಲ್ಪ ಹಿಂದೆ ಬಿದ್ದಿದ್ದು ಅವರಲ್ಲಿ ಹಿಂಜರಿಕೆಯ ಸ್ವಭಾವವು ಅವರು ಅವಕಾಶಗಳನ್ನು ಕೈ ಬಿಡುವಂತಾಗುತ್ತಿವೆ. ಇದನ್ನು ಅರಿತು ನಮ್ಮ ಎಬಿಡಿ ಟ್ರಸ್ಟ್‌ ನಿಂದಲೂ ಐಎಎಸ್, ಕೆಎಎಸ್, ಬ್ಯಾಂಕಿಂಗ್ ಸೇರಿದಂತೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಉಚಿತವಾಗಿ ಹಮ್ಮಿಕೊಂಡಿದೆ. ಈ ಉಚಿತ ಕೋಚಿಂಗ್ ಕೇಂದ್ರದಲ್ಲಿ ನೂರಾರು ವಿದ್ಯಾರ್ಥಿಗಳು ಉಚಿತ ಸ್ಪರ್ಧಾತ್ಮಕ ತರಬೇತಿ ಪಡೆಯುತ್ತಿರುವುದು ನನಗೆ ಖುಷಿ ತಂದಿದೆ. ಅದರಲ್ಲಿ ಒಂದಿಬ್ಬರಾದರೂ ಉನ್ನತ ಸ್ಥಾನ ಗಳಿಸಿದರೂ ನಮ್ಮೆಲ್ಲ ಪ್ರಯತ್ನ ಸಾರ್ಥಕವಾಗಲಿದೆ ಎಂದು ಆಶಿಸಿದರು.

ವಿವಿಧ ಕಡೆಯಿಂದ ಆಗಮಿಸಿದ್ದ 30ಕ್ಕೂ ಹೆಚ್ಚು ತಂಡಗಳು ಕ್ರೀಡಾಕೂಟದಲ್ಲಿ ಭಾಗವಹಿಸಿದ್ದವು. ಪ್ರಥಮ ಸ್ಥಾನ ಪಡೆದ ಉಲಪನಹಳ್ಳಿ ತಂಡಕ್ಕೆ 40 ಸಾವಿರ ರೂ.ನಗದು, ಟ್ರೋಫಿ, ದ್ವಿತೀಯ ಸ್ಥಾನ ಪಡೆದ ಕುಂದಲಗುರ್ಕಿ ಕ್ರಿಕೆಟ್ ತಂಡಕ್ಕೆ 30 ಸಾವಿರ ರೂ.ನಗದು, ಟ್ರೋಫಿ ಹಾಗೂ ತೃತೀಯ ಸ್ಥಾನ ಪಡೆದ ಆದಿಗೆರೆ ತಂಡಕ್ಕೆ 10 ಸಾವಿರ ನಗದು ಮತ್ತು ಟ್ರೋಫಿಯನ್ನು ನೀಡಲಾಯಿತು.

ಗ್ರಾಮದ ಹಿರಿಯ ಮುಖಂಡರಾದ ಕೆ.ಎಂ.ವೆಂಕಟೇಶಪ್ಪ, ಕುಂದಲಗುರ್ಕಿ ಮುನಿಂದ್ರ, ವೆಂಕಟೇಶ್, ಕೃಷ್ಣಾರೆಡ್ಡಿ ಸೇರಿದಂತೆ ಸ್ಥಳೀಯ ಪಂಚಾಯಿತಿ ಸದಸ್ಯರು, ಕ್ರಿಕೆಟ್ ಪ್ರೇಮಿಗಳು ಹಾಗೂ ಗ್ರಾಮಸ್ಥರು ಹಾಜರಿದ್ದರು.

Sidlaghatta WhatsApp Channel Group

For Daily Updates WhatsApp ‘HI’ to 7406303366

Sidlaghatta Silk Cocoon Market-22/07/2025

0
Sidlaghatta Silk Cocoon Market Price Rate ಶಿಡ್ಲಘಟ್ಟ ರೇಷ್ಮೆ ಗೂಡು ಮಾರುಕಟ್ಟೆ ಧಾರಣೆ

Sidlaghatta Govt Silk Cocoon Market

ಶಿಡ್ಲಘಟ್ಟ ರೇಷ್ಮೆ ಗೂಡು ಮಾರುಕಟ್ಟೆ ಧಾರಣೆ

Date: 22/07/2025

Cross-Breed Silk Cocoon – ಮಿಶ್ರತಳಿ ರೇಷ್ಮೆ ಗೂಡು

Lots: 437
Qty: 23829 Kg
Mx : ₹ 613
Mn: ₹ 205
Avg: ₹ 501

Bi-Voltine Silk Cocoon – ದ್ವಿತಳಿ ರೇಷ್ಮೆ ಗೂಡು

Lots: 11
Qty: 836 Kg
Mx : ₹ 645
Mn: ₹ 515
Avg: ₹ 614


For Daily Updates WhatsApp ‘HI’ to 7406303366

ಸಿದ್ದಾರ್ಥನಗರದಲ್ಲಿ ಊರ ಜಾತ್ರೆ

0
Sidlaghatta Siddarthanagara Jathre

Sidlaghatta : ಶಿಡ್ಲಘಟ್ಟ ನಗರದ ಸಿದ್ದಾರ್ಥನಗರದಲ್ಲಿ ಊರ ಜಾತ್ರೆ ನಡೆಯಿತು. ತಲೆ ಮೇಲೆ ತಂಬಿಟ್ಟು ದೀಪ ಹೊತ್ತು ಊರ ಪ್ರದಕ್ಷಿಣೆ ನಡೆಸಿ ಕೊನೆಗೆ ಗ್ರಾಮ ದೇವತೆ ಶ್ರೀಪೂಜಮ್ಮ ದೇವಿ, ಶ್ರೀನಾಗಲಮುದ್ದಮ್ಮ ದೇವಿ ಹಾಗೂ ಕೋಟೆ ಶ್ರೀಸೋಮೇಶ್ವರ ಸ್ವಾಮಿಗೆ ತಂಬಿಟ್ಟು ದೀಪದಾರತಿ ಬೆಳಗಿದರು.

ಊರ ಜಾತ್ರೆಗಾಗಿ ಇಡೀ ಸಿದ್ದಾರ್ಥ ನಗರವು ಸಿಂಗಾರಗೊಂಡಿತು. ಜಾತ್ರೆಯ ಕಳೆ ಕಟ್ಟಿತ್ತು. ಊರ ದೇವತೆಗಳಾದ ಶ್ರೀಗಂಗಮ್ಮ ಮತ್ತು ಶ್ರೀಪೂಜಮ್ಮ ದೇವಿಗೆ ಪೂಜೆ ಸಲ್ಲಿಸಿ ನಂತರ ತಲೆ ಮೇಲೆ ತಂಬಿಟ್ಟು ದೀಪಗಳನ್ನೊತ್ತ ಮಹಿಳೆಯರು, ಹೆಣ್ಣು ಮಕ್ಕಳು ಊರ ಪ್ರಮುಖ ಬೀದಿಗಳಲ್ಲಿ ಪ್ರದಕ್ಷಿಣೆ ಹಾಕಿದರು.

ಡೋಲು ತಮಟೆ ಜನಪದ ಕಲಾ ತಂಡಗಳೊಂದಿಗೆ ಮೆರವಣಿಗೆ ಮೂಲಕ ಕೋಟೆ ವೃತ್ತಕ್ಕೆ ತೆರಳಿ ಅಲ್ಲಿ ಕೋಟೆ ಶ್ರೀಸೋಮೇಶ್ವರ ದೇವಾಲಯದಲ್ಲಿ ತಂಬಿಟ್ಟಿನ ದೀಪದ ಆರತಿ ಬೆಳಗಲಾಯಿತು.

Sidlaghatta WhatsApp Channel Group

For Daily Updates WhatsApp ‘HI’ to 7406303366

Sidlaghatta Silk Cocoon Market-21/07/2025

0
Sidlaghatta Silk Cocoon Market Price Rate ಶಿಡ್ಲಘಟ್ಟ ರೇಷ್ಮೆ ಗೂಡು ಮಾರುಕಟ್ಟೆ ಧಾರಣೆ

Sidlaghatta Govt Silk Cocoon Market

ಶಿಡ್ಲಘಟ್ಟ ರೇಷ್ಮೆ ಗೂಡು ಮಾರುಕಟ್ಟೆ ಧಾರಣೆ

Date: 21/07/2025

Cross-Breed Silk Cocoon – ಮಿಶ್ರತಳಿ ರೇಷ್ಮೆ ಗೂಡು

Lots: 438
Qty: 25080 Kg
Mx : ₹ 605
Mn: ₹ 288
Avg: ₹ 518

Bi-Voltine Silk Cocoon – ದ್ವಿತಳಿ ರೇಷ್ಮೆ ಗೂಡು

Lots: 19
Qty: 1278 Kg
Mx : ₹ 635
Mn: ₹ 316
Avg: ₹ 497


For Daily Updates WhatsApp ‘HI’ to 7406303366

ಕಸಾಪ ವತಿಯಿಂದ SSLC ಮತ್ತು PUC ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ

0
Sidlaghatta KaSaPa SSLC PUC Toppers felicitation

Sidlaghatta : ಶಿಡ್ಲಘಟ್ಟ : ನಗರದ ಶ್ರೀ ನಗರೇಶ್ವರ ಕಲ್ಯಾಣ ಮಂಟಪದಲ್ಲಿ ಭಾನುವಾರ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ 2024-25 ನೇ ಸಾಲಿನಲ್ಲಿ ಕನ್ನಡ ಭಾಷೆಯಲ್ಲಿ ಶೇಕಡ ನೂರು ಅಂಕಗಳು ಪಡೆದ ಪ್ರತಿಭಾನ್ವಿತ SSLC ಮತ್ತು PUC ಯ ಒಟ್ಟು 73 ವಿದ್ಯಾರ್ಥಿಗಳಿಗೆ ಪ್ರಶಂಸಾ ಪತ್ರ, ನೆನಪಿನ ಕಾಣಿಕೆ, ಕನ್ನಡ ನಿಘಂಟು ನೀಡಿ ಪುರಸ್ಕರಿಸಲಾಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಕಸಾಪ ಜಿಲ್ಲಾಧ್ಯಕ್ಷ ಡಾ. ಕೋಡಿ ರಂಗಪ್ಪ ಮಾತನಾಡಿ, ಗಡಿ ಭಾಗದಲ್ಲಿ ಪರಭಾಷೆಗಳ ಜೊತೆಗೆ ಆಂಗ್ಲ ಭಾಷೆಯ ವ್ಯಾಮೋಹಕ್ಕೆ ಜೋತುಬಿತ್ತಿರುವ ಸಮಾಜದಲ್ಲಿಂದು ಮಾತೃಭಾಷೆಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ಅಂಕಗಳು ಗಳಿಸಿದ ವಿದ್ಯಾರ್ಥಿಗಳು ಮುಂದಿನ ದಿನಗಳಲ್ಲಿ ಕನ್ನಡ ನುಡಿ ಮತ್ತು ಭಾಷೆಯನ್ನು ಉಳಿಸುವಂತ ಕಾಯಕಕ್ಕೆ ಸನ್ನದ್ದರಾಗಬೇಕಿದೆ. ತಮ್ಮ ಗುರಿಯನ್ನು ಸಾರ್ಥಕಪಡಿಸಿಕೊಳ್ಳಲು ಕಲಿಕೆಯ ಜ್ಞಾನವನ್ನು ಕೈಬಿಡಬಾರದು. ಅದು ನಿಮ್ಮ ಶ್ರೇಯಸ್ಸಿಗೆ ದಾರಿ ದೀಪವಾಗಲಿದೆ ಎಂದು ಹೇಳಿದರು.

ಕರ್ನಾಟಕ ವಚನ ಸಾಹಿತ್ಯ ಪರಿಷತ್ತು ಸಂಸ್ಥಾಪಕ ಎಂ.ವಿ. ತ್ಯಾಗರಾಜ್ ಅವರು ಮಾತನಾಡಿ, ಅನೇಕ ಸಾಧಕರು ಸರ್ಕಾರಿ ಶಾಲೆಗಳಲ್ಲಿ ವಿದ್ಯಾಭ್ಯಾಸ ಮಾಡಿ ಸಮಾಜಮುಖಿಯ ವ್ಯಕ್ತಿಗಳಾಗಿದ್ದಾರೆ. ವಿದ್ಯಾರ್ಥಿಗಳು ಮೌಡ್ಯತೆಗಳಿಗೆ ಬಲಿಯಾಗದೆ ಜ್ಞಾನದ ಅರಿವನ್ನು ಪಡೆದುಕೊಳ್ಳಬೇಕು. ಆಗ ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾಗಿ ಬೆಳೆಯಲು ಸಾಧ್ಯವಾಗುತ್ತದೆ ಎಂದರು.

ಕಸಾಪ ತಾಲ್ಲೂಕು ಅಧ್ಯಕ್ಷ ನಾರಾಯಣಸ್ವಾಮಿ, ರೂಪಸಿ ರಮೇಶ್, ವಿ. ಕೃಷ್ಣ, ಬೆಳ್ಳೂಟಿ ಮುನಿಕೆಂಪಣ್ಣ, ಮುನೇಗೌಡ, ನಗರ್ತ ಮಂಡಳಿ ಅಧ್ಯಕ್ಷ ಕೆ.ಆರ್. ಶಿವಶಂಕರ್, ಮುನಿನಾರಾಯಣಪ್ಪ, ಎಸ್. ಸತೀಶ್, ಈ ಧರೆ ಪ್ರಕಾಶ್, ಟಿ.ಟಿ ನರಸಿಂಹಪ್ಪ, ಎಂ.ದೇವರಾಜ್, ರಾಮಾಂಜಿನಪ್ಪ, ಶಿವಕುಮಾರ್ ಕೆ.ಬಿ, ಮಂಜುನಾಥ್, ಸತ್ಯನಾರಾಯಣರಾವ್. ಡಿ.ಎಸ್, ಎನ್. ಸುಂದರ್ ಹಾಜರಿದ್ದರು.

Sidlaghatta WhatsApp Channel Group

For Daily Updates WhatsApp ‘HI’ to 7406303366

2025-26 ನೇ ಸಾಲಿನ ಅಂತರ್ ಸದನ ಕ್ರೀಡಾಕೂಟಗಳಿಗೆ ಚಾಲನೆ

0
Sidlaghatta Appegowdanahalli Sports Championship Inauguration

Appegowdanahalli, sidlaghatta : ಶಿಡ್ಲಘಟ್ಟ ತಾಲ್ಲೂಕಿನ ಅಪ್ಪೇಗೌಡನಹಳ್ಳಿಯ ಇಂದಿರಾಗಾಂಧಿ ವಸತಿ ಶಾಲೆಯ ಆವರಣದಲ್ಲಿ 2025-26 ನೇ ಸಾಲಿನ ಅಂತರ್ ಸದನ ಕ್ರೀಡಾಕೂಟಗಳನ್ನು ಆಯೋಜನೆ ಮಾಡಲಾಗಿತ್ತು.

ಕ್ರೀಡಾಕೂಟದಲ್ಲಿ ವಿದ್ಯಾರ್ಥಿಗಳಿಗೆ, ಕಬ್ಬಡ್ಡಿ, ಖೊ-ಖೊ, ವಾಲಿಬಾಲ್, ಥ್ರೋಬಾಲ್, ಭರ್ಜಿ ಎಸೆತ, ಜಾವೆಲಿನ್ ಎಸೆತ, ಓಟದ ಸ್ಪರ್ಧೆ, ಸೇರಿದಂತೆ ವಿವಿಧ ಕ್ರೀಡೆಗಳನ್ನು ಆಯೋಜನೆ ಮಾಡಲಾಗಿತ್ತು. ಶಾಲೆಯ ವಿದ್ಯಾರ್ಥಿಗಳು, ಕ್ರೀಡಾಕೂಟದಲ್ಲಿ ಉತ್ಸಾಹದಿಂದ ಪಾಲ್ಗೊಂಡಿದ್ದರು. ಕಾವೇರಿ, ತುಂಗಾ, ಭದ್ರಾ, ಶರಾವತಿ, ಹೆಸರಿನಲ್ಲಿ ತಂಡಗಳನ್ನು ರಚನೆ ಮಾಡಿಕೊಂಡಿದ್ದರು.

ಈ ವೇಳೆ ಪ್ರಾಂಶುಪಾಲೆ ವಿಜಯಶ್ರೀ ಮಾತನಾಡಿ, ಕ್ರೀಡೆಗಳು, ವಿದ್ಯಾರ್ಥಿಗಳ ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ ಪೂರಕವಾಗಿರುವುದಲ್ಲದೆ, ನಾಯಕತ್ವದ ಗುಣಗಳನ್ನು ಬೆಳೆಸಿಕೊಳ್ಳುವುದಕ್ಕೆ ಸಹಕಾರಿಯಾಗುತ್ತದೆ. ಒತ್ತಡದ ಸಮಯವನ್ನು ಹೇಗೆ ನಿಭಾಯಿಸಬೇಕು ಎನ್ನುವುದನ್ನು ಕ್ರೀಡೆಗಳಿಂದ ಕಲಿತುಕೊಳ್ಳಬಹುದು. ಕ್ರೀಡೆಗಳಲ್ಲಿ ಸೋಲು-ಗೆಲುವು ಮುಖ್ಯವಾಗುವುದಿಲ್ಲ. ಭಾಗವಹಿಸುವಿಕೆ ಬಹಳ ಮುಖ್ಯವಾಗುತ್ತದೆ. ಪ್ರತಿಯೊಬ್ಬ ವಿದ್ಯಾರ್ಥಿ ಶಾಲಾ ಹಂತದಿಂದಲೇ ಕ್ರೀಡಾಸ್ಫೂರ್ತಿಯನ್ನು ಬೆಳೆಸಿಕೊಳ್ಳಬೇಕು. ಎದುರಾಳಿಗಳು ಎಷ್ಟು ಬಲಿಷ್ಟರಾಗಿದ್ದಾರೆ ಎನ್ನುವುದಕ್ಕಿಂತ ಎದುರಾಳಿ ಆಟಗಾರರನ್ನು ಸೋಲಿಸುವುದಕ್ಕಾಗಿ ನಿಮ್ಮಲ್ಲಿ ಯಾವ ರೀತಿಯಾದ ತಂತ್ರಗಳನ್ನು ಎಣೆಯುತ್ತೀರಿ ಎನ್ನುವುದು ಮುಖ್ಯವಾಗುತ್ತದೆ. ಮೆದುಳು ಚುರುಕಾಗಿ ಕೆಲಸ ಮಾಡುತ್ತದೆ. ಆದ್ದರಿಂದ ವಿದ್ಯಾರ್ಥಿಗಳು ಕ್ರೀಡೆಗಳಲ್ಲಿ ಹೆಚ್ಚು ತೊಡಗಿಸಿಕೊಳ್ಳಬೇಕು ಎಂದರು.

ಶಿಕ್ಷಕ ಎಸ್.ಎ.ಪ್ರಸಾದ್ ಮಾತನಾಡಿ, ಕ್ರೀಡೆಗಳು ಪಠ್ಯಚಟುವಟಿಕೆಗಳ ಒಂದು ಭಾಗವಾಗಿದೆ. ಬಹಳಷ್ಟು ಮಂದಿ, ಶೈಕ್ಷಣಿಕವಾಗಿ ಹಿಂದುಳಿದರೂ ಕ್ರೀಡಾ ಕ್ಷೇತ್ರಗಳಲ್ಲಿ ಬಹಳಷ್ಟು ಸಾಧನೆ ಮಾಡಿದ್ದಾರೆ. ಉದ್ಯೋಗಕ್ಕೆ ಹೋಗುವಾಗಲೂ ಕ್ರೀಡಾಪಟುಗಳಾಗಿದ್ದರೆ, ಹೆಚ್ಚು ಅವಕಾಶಗಳು, ವಿನಾಯಿತಿ ಸಿಗುತ್ತದೆ. ಕ್ರೀಡೆಯನ್ನು ಬದ್ಧತೆ, ಗೌರವದಿಂದ ಆಡಬೇಕು. ದ್ವೇಷ, ಅಸೂಯೆ, ಇಟ್ಟುಕೊಂಡು ಕ್ರೀಡೆ ಆಡಬಾರದು. ಸಮರ್ಪಣಾ ಮನೋಭಾವನೆ ಇರಬೇಕು. ಪ್ರತಿಯೊಬ್ಬ ವಿದ್ಯಾರ್ಥಿ, ಒಬ್ಬ ಕ್ರೀಡಾಪಟುವಾಗಿ ಆಡುವುದನ್ನುಅಭ್ಯಾಸ ಮಾಡಿಕೊಳ್ಳಬೇಕು. ತೀರ್ಪುಗಾರರು ನೀಡುವ ತೀರ್ಪುಗಳನ್ನು ಸ್ವಾಗತಿಸಬೇಕು. ಒಂದು ಬಾರಿ ಸೋತರೂ, ಅನೇಕ ಗೆಲುವುಗಳಿಗೆ ಅದು ನಾಂದಿಯಾಗುತ್ತದೆ ಎಂದರು.

ಶಿಕ್ಷಕರಾದ ಶಶಿದೀಪಿಕಾ, ದೀವಾಕರರೆಡ್ಡಿ.ಸಿ.ಜಿ, ರಾಮಪ್ಪಸಿದ್ದಪ್ಪ, ಯಲ್ಲಪ್ಪ, ಲಕ್ಷ್ಮೀನಾರಾಯಣ, ತ್ರಿವೇಣಿ, ಸಂದ್ಯಾ, ಸಿದ್ಧು ಹಾಜರಿದ್ದರು.

Sidlaghatta WhatsApp Channel Group

For Daily Updates WhatsApp ‘HI’ to 7406303366

Sidlaghatta Silk Cocoon Market-20/07/2025

0
Sidlaghatta Silk Cocoon Market Price Rate ಶಿಡ್ಲಘಟ್ಟ ರೇಷ್ಮೆ ಗೂಡು ಮಾರುಕಟ್ಟೆ ಧಾರಣೆ

Sidlaghatta Govt Silk Cocoon Market

ಶಿಡ್ಲಘಟ್ಟ ರೇಷ್ಮೆ ಗೂಡು ಮಾರುಕಟ್ಟೆ ಧಾರಣೆ

Date: 20/07/2025

Cross-Breed Silk Cocoon – ಮಿಶ್ರತಳಿ ರೇಷ್ಮೆ ಗೂಡು

Lots: 380
Qty: 20541 Kg
Mx : ₹ 600
Mn: ₹ 320
Avg: ₹ 521

Bi-Voltine Silk Cocoon – ದ್ವಿತಳಿ ರೇಷ್ಮೆ ಗೂಡು

Lots: 09
Qty: 641 Kg
Mx : ₹ 667
Mn: ₹ 478
Avg: ₹ 619


For Daily Updates WhatsApp ‘HI’ to 7406303366

2025 ನೇ ಸಾಲಿನ ಲಿಂಕ್ ಡಾಕ್ಯೂಮೆಂಟ್ ಸಾಕ್ಷರತಾ ಪರೀಕ್ಷೆ

0
Link document Literacy test

Ganganahalli, Sidlaghatta : ಜನರು ಸಾಕ್ಷರರಾದರೆ, ಸ್ವಾವಲಂಬನೆಯ ಜೀವನ ನಡೆಸಲು ಸಾಧ್ಯವಾಗುವುದರ ಜೊತೆಗೆ, ಆರೋಗ್ಯವಂತ ಸಮಾಜವನ್ನು ನಿರ್ಮಾಣ ಮಾಡಲು ಸಹಕಾರಿಯಾಗುತ್ತದೆ ಎಂದು ಶಿಕ್ಷಣ ಇಲಾಖೆಯ ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಶೀಲಾ ಹೇಳಿದರು.

ತಾಲ್ಲೂಕಿನ ಗಂಗನಹಳ್ಳಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ, ಆಯೋಜಿಸಿದ್ದ 2025 ನೇ ಸಾಲಿನ ಲಿಂಕ್ ಡಾಕ್ಯೂಮೆಂಟ್ ಸಾಕ್ಷರತಾ ಪರೀಕ್ಷೆ ಪರಿಶೀಲನೆ ನಡೆಸಿ ಅವರು ಮಾತನಾಡಿದರು.

ಶಿಕ್ಷಣವೆಂಬ ಅಸ್ತ್ರವು ಎಲ್ಲಾ ಸಮಸ್ಯೆಗಳಿಗೆ ಆಯುಧವಾಗಿ ಕೆಲಸ ಮಾಡುತ್ತದೆ. ಸರ್ಕಾರದ ಎಲ್ಲಾ ಯೋಜನೆಗಳು, ನೇರವಾಗಿ ಬ್ಯಾಂಕುಗಳ ಮೂಲಕ ಅರ್ಹಫಲಾನುಭವಿಗಳಿಗೆ ಕೊಡಲಾಗುತ್ತಿದೆ. ಹಿರಿಯ ನಾಗರಿಕರಿಗೆ ಕೊಡುವ ಪಿಂಚಣಿಯೂ ಅವರವರ ಬ್ಯಾಂಕ್ ಖಾತೆಗಳಿಗೆ ಜಮೆ ಆಗುವುದರಿಂದ, ಬಹಳಷ್ಟು ಮಂದಿಗೆ ಸಹಿ ಮಾಡಲು ಬಾರದ ಕಾರಣ, ಬ್ಯಾಂಕುಗಳಲ್ಲಿ ಚೆಕ್ ಪುಸ್ತಕವೂ ಸಿಗುವುದಿಲ್ಲ. ಇದರಿಂದ ಬಹಳಷ್ಟು ಮಂದಿ ಹಿರಿಯ ನಾಗರಿಕರ ಪಿಂಚಣಿ ಹಣವೂ ದುರುಪಯೋಗವಾಗುವ ಸಾಧ್ಯತೆಗಳಿರುತ್ತವೆ. ಹೆಬ್ಬೆಟ್ಟನ್ನು ದುರುಪಯೋಗ ಮಾಡಿಕೊಳ್ಳುವವರ ಸಂಖ್ಯೆಯೂ ಜಾಸ್ತಿಯಾಗಿದ್ದು, ಸರ್ಕಾರದಿಂದ ಸಿಗುವಂತಹ ಇಂತಹ ಅವಕಾಶಗಳನ್ನು ಸದುಪಯೋಗ ಮಾಡಿಕೊಂಡು ಅಕ್ಷರ ಕಲಿತುಕೊಳ್ಳಬೇಕು. ಬ್ಯಾಂಕುಗಳಲ್ಲಿ ನೇರವಾಗಿ ವ್ಯವಹರಿಸುವಂತಹವರಾಗಬೇಕು ಎಂದರು.

ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕಿ ಗಾಯಿತ್ರಿ ಮಾತನಾಡಿ, ಹಿರಿಯರು, ಸಾಕ್ಷರತಾ ಕಾರ್ಯಕ್ರಮದ ಬೋಧಕರು ಹೇಳಿಕೊಡುವುದರ ಜೊತೆಗೆ, ತಮ್ಮ ಮನೆಗಳಲ್ಲಿರುವ ಮಕ್ಕಳಿಂದಲೂ ಅಕ್ಷರಾಭ್ಯಾಸ ಮಾಡಿಕೊಂಡರೆ, ಮತ್ತಷ್ಟು ವೇಗವಾಗಿ ಕಲಿಯುವುದಕ್ಕೆ ಅವಕಾಶವಾಗುತ್ತದೆ ಎಂದರು.

ಸಾಕ್ಷರತಾ ಬೋಧಕಿ ಸರೋಜ.ಎಸ್.ಎಂ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷೆ ಗಾಯಿತ್ರಿ, ಉಪಾಧ್ಯಕ್ಷ ಮುನಿರಾಜು, ನರೇಗಾ ಯೋಜನೆಯ ಕಾಯಕಮಿತ್ರ ಎಸ್.ರೇಣುಕಮ್ಮ, ಜಲಗಾರ ಜಿ.ಟಿ.ಶಿವಕುಮಾರ್, ಹಾಗೂ ಕಲಿಕಾರ್ಥಿಗಳು ಹಾಜರಿದ್ದರು.

Sidlaghatta WhatsApp Channel Group

For Daily Updates WhatsApp ‘HI’ to 7406303366

ಶಿಡ್ಲಘಟ್ಟ ನಗರಸಭೆಯ ವಿಶೇಷ ಸಾಮಾನ್ಯ ಸಭೆ

0
Sidlaghatta City Municipal council General Meeting

Sidlaghatta : ಶಿಡ್ಲಘಟ್ಟದ ನಗರಸಭೆಯ ಸಭಾಂಗಣದಲ್ಲಿ ಶನಿವಾರ ನಡೆದ ವಿಶೇಷ ಸಾಮಾನ್ಯ ಸಭೆಯಲ್ಲಿ 2025-26ನೇ ಸಾಲಿನ ಎಸ್‌.ಎಫ್‌.ಸಿ ಮುಕ್ತನಿಧಿ ಅನುಧಾನ ಮೊತ್ತ 31 ಲಕ್ಷ ಹಾಗು 15 ನೇ ಹಣಕಾಸು ಯೋಜನೆಯಡಿ 205 ಲಕ್ಷ ಅನುಧಾನದ ಕ್ರಿಯಾಯೋಜನೆ ಸಿದ್ದಪಡಿಸಲು ಅನುಮೋದನೆ ಪಡೆಯಲಾಯಿತು.

ನಗರಸಭೆ ಅಧ್ಯಕ್ಷ ಎಂ.ವೆಂಕಟಸ್ವಾಮಿ ಅಧ್ಯಕ್ಷತೆಯಲ್ಲಿ ನಡೆದ ವಿಶೇಷ ಸಾಮಾನ್ಯ ಸಭೆಯಲ್ಲಿ 15 ನೇ ಹಣಕಾಸು ಯೋಜನೆಯೆ ಅನುದಾನವನ್ನು ಅಮೃತ-2 ಯೋಜನೆಗಾಗಿ 61.5 ಲಕ್ಷ, ಒಳಚರಂಡಿ ಸ್ವಚ್ಚಗೊಳಿಸುವ ಸಕ್ಕಿಂಗ್ ವಾಹನ ಖರೀದಿಗೆ 61.5 ಲಕ್ಷ ಹಾಗು ನಗರಸಭೆ ಕಾರ್ಯಾಲಯದ ಅಭಿವೃದ್ದಿಗೆ ಸುಮಾರು 30 ಲಕ್ಷ, ಬೀದಿ ದೀಪಗಳ ರಿಪೇರಿಗಾಗಿ ಲ್ಯಾಡರ್ ಜೀಪ್ ಖರೀದಿಗೆ 15 ಲಕ್ಷ, ಸ್ಮಶಾನ ಅಭಿವೃದ್ದಿಗೆ 5 ಲಕ್ಷ ಹಾಗೂ ಉಳಿಕೆ ಹಣವನ್ನು ಅಗತ್ಯತೆಗೆ ತಕ್ಕಂತೆ ರಸ್ತೆ ಅಭಿವೃದ್ದಿಗೆ ಬಳಸುವುದು.

ಎಸ್‌ಎಫ್‌ಸಿ ಯೋಜನೆಯ ಅನುಧಾನವನ್ನು ಪೌರಕಾರ್ಮಿಕರ ಉಪಹಾರಕ್ಕಾಗಿ 1.2 ಲಕ್ಷ, ವಾರ್ಡ್ ಸಂಖ್ಯೆ 15 ರಲ್ಲಿನ ರಸ್ತೆ ಕಾಮಗಾರಿ 8.77 ಲಕ್ಷ, ವಾರ್ಡ್ ಸಂಖ್ಯೆ 22 ರಲ್ಲಿನ ಚರಂಡಿ ಅಭಿವೃದ್ದಿಗಾಗಿ 1.92 ಲಕ್ಷ ಸೇರಿದಂತೆ ಉಳಿಕೆ ಹಣವನ್ನು ಉಲ್ಲೂರುಪೇಟೆ ಶಾಲಾ ಆವರಣದಲ್ಲಿ ನಿರ್ಮಿಸಿರುವ ಸಂಪ್ ಗೆ ಮೋಟರ್, ಕೇಬಲ್ ಸ್ಟಾರ್ಟರ್ ಖರೀದಿಗೆ ಬಳಸಿಕೊಳ್ಳಲು ಅನುಮೋದನೆ ಪಡೆಯಲಾಯಿತು.

ನಗರಸಭೆ ಉಪಾಧ್ಯಕ್ಷೆ ರೂಪ ನವೀನ್, ಪೌರಾಯುಕ್ತೆ ಅಮೃತ, ಸೇರಿದಂತೆ ನಗರಸಭೆ ಸದಸ್ಯರು ಸಿಬ್ಬಂದಿ ಹಾಜರಿದ್ದರು.

Sidlaghatta WhatsApp Channel Group

For Daily Updates WhatsApp ‘HI’ to 7406303366

ವಚನಪಿತಾಮಹ ಫ.ಗು.ಹಳಕಟ್ಟಿ ಜಯಂತಿ ಅಂಗವಾಗಿ ಮಕ್ಕಳಿಗೆ ಲೇಖನಸಾಮಗ್ರಿ ವಿತರಣೆ

0
Sidlaghatta Sugaturu Govt school F G Halakatti Birth Anniversary

Sugaturu, sidlaghatta : ಜಗತ್ತಿನಲ್ಲಿ ಇನ್ನಾವುದೇ ಭಾಗದಲ್ಲಿ ನಡೆಯದ ಸಾಮಾಜಿಕ ಕ್ರಾಂತಿಯಾದದ್ದು ಕರ್ನಾಟಕದಲ್ಲಿ ಶಿವಶರಣರಿಂದ ಮಾತ್ರ. ಶಿವಶರಣರು ನೀಡಿದ ವಚನಸಾಹಿತ್ಯವು ಅಪರೂಪದ ಮೌಲ್ಯಗಳ ಆಗರವಾಗಿದೆ. ವಚನಗಳನ್ನು ಉಳಿಸುವಲ್ಲಿ ಫ.ಗು.ಹಳಕಟ್ಟಿ ಅವರ ಕೊಡುಗೆಯು ಅಪಾರವಾದುದು ಎಂದು ದೇವನಹಳ್ಳಿ ತಾಲ್ಲೂಕು ಶರಣಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮ.ಸುರೇಶ್‌ಬಾಬು ತಿಳಿಸಿದರು.

ತಾಲ್ಲೂಕಿನ ಸುಗಟೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ದೇವನಹಳ್ಳಿ ತಾಲ್ಲೂಕು ಶರಣಸಾಹಿತ್ಯ ಪರಿಷತ್ತು, ಸಾಕ್ಷಿಮುರುಗನ್ ಸೇವಾ ಟ್ರಸ್ಟ್, ಬಂಗಲೆಕುಟುಂಬ ಆಶ್ರಯದಲ್ಲಿ ವಚನಪಿತಾಮಹ ಫ.ಗು.ಹಳಕಟ್ಟಿ ಜಯಂತಿ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಉಚಿತ ನೋಟ್‌ಪುಸ್ತಕ, ಲೇಖನಸಾಮಗ್ರಿ ವಿತರಣಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಅಪರೂಪದ ಕಲ್ಲೊಂದರಲ್ಲಿನ ಅನಗತ್ಯ ಭಾಗಗಳನ್ನು ಶಿಲ್ಪಿಯು ಕೆತ್ತಿದರೆ ಅದೇ ಶಿಲೆಯು ದೇವರಾಗಬಲ್ಲದು. ಮಗುವಿನಲ್ಲಿರುವ ಅನಗತ್ಯ ಅಂಶಗಳು, ಕೆಟ್ಟ ಗುಣಗಳನ್ನು ಹೋಗಲಾಡಿಸಿ ಮಗುವಿನಲ್ಲಿ ದೈವತ್ವಗುಣವನ್ನು ಮನೆಮಾಡಿಸುವಲ್ಲಿ ಶಿಕ್ಷಕರ ಪಾತ್ರವು ಮಹತ್ವದ್ದು. ಎಳೆಯ ವಯಸ್ಸಿನಿಂದಲೇ ಮಕ್ಕಳು ಅಧ್ಯಯನ ಶೀಲತೆ ಗುಣವನ್ನು ಹೆಚ್ಚಿಸಿಕೊಳ್ಳಬೇಕು ಎಂದರು.

ತಾಲ್ಲೂಕು ಶರಣಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿ ಚಿದಾನಂದ ಬಿರಾದಾರ್ ಮಾತನಾಡಿ, ಕನ್ನಡ ಸಾಹಿತ್ಯ ಸಾರಸ್ವತ ಲೋಕದಲ್ಲಿ ವಚನಸಾಹಿತ್ಯ ಮತ್ತು ದಾಸಸಾಹಿತ್ಯಗಳೆರಡೂ ಅಪೂರ್ವವಾದುವು. ವಚನಗಳಲ್ಲಿ ಬದುಕಿನ ಮೌಲ್ಯಗಳಿದ್ದು, ಎಲ್ಲರೂ ವಚನಗಳನ್ನು ಓದಿ ಅರ್ಥೈಸಿಕೊಳ್ಳಬೇಕು. ಮಕ್ಕಳಲ್ಲಿ ಓದಿನಲ್ಲಿ ಆಸಕ್ತಿ ಹೆಚ್ಚಬೇಕಿದೆ ಎಂದರು.

ಮುಖ್ಯಶಿಕ್ಷಕ ಎಚ್.ಎಸ್.ರುದ್ರೇಶಮೂರ್ತಿ ಮಾತನಾಡಿ, ಹಳಕಟ್ಟಿ ಅವರು ವಚನಗಳನ್ನು ಸಂಗ್ರಹಿಸಿ ಸಂಶೋಧನೆ ಮತ್ತು ಮುದ್ರಣ ಕಾರ್ಯಕ್ಕೆ ಮುಂದಾಗದಿದ್ದರೆ ವಚನಸಾಹಿತ್ಯವು ಉಳಿಯುತ್ತಿರಲಿಲ್ಲ ಎಂದರು.

ಸಂಭ್ರಮ ಶನಿವಾರದ ಅಂಗವಾಗಿ ವಚನಗಾಯನ, ಭಾವಗೀತೆ ಗಾಯನ ಸ್ಪರ್ಧೆಗಳನ್ನು ನಡೆಸಿ ವಿಜೇತರಿಗೆ ಪುಸ್ತಕಗಳನ್ನು ಬಹುಮಾನವಾಗಿ ನೀಡಲಾಯಿತು. ಎಲ್ಲಾ ವಿದ್ಯಾರ್ಥಿಗಳಿಗೆ ನೋಟ್‌ಪುಸ್ತಕ, ಲೇಖನಸಾಮಗ್ರಿಗಳನ್ನು ವಿತರಿಸಲಾಯಿತು.

ಶಿಕ್ಷಕ ಟಿ.ಎಂ.ಮಧು, ಶಿಕ್ಷಕ ಎ.ಬಿ.ನಾಗರಾಜ, ಬಿ.ನಾಗರಾಜು, ಶಿಕ್ಷಕಿ ತಾಜೂನ್ ಹಾಜರಿದ್ದರು.

Sidlaghatta WhatsApp Channel Group

For Daily Updates WhatsApp ‘HI’ to 7406303366

error: Content is protected !!