Home Blog Page 527

ಅನುದಾನದ ಹಣದಲ್ಲಿ ಕುಡಿಯುವ ನೀರಿನ ಪೂರೈಕೆಗೆ ಅಗತ್ಯ ಕ್ರಮ ವಹಿಸಲು ನಗರಸಭೆ ತೀರ್ಮಾನ

0

2014-15 ನೇ ಸಾಲಿನ 13 ನೇ ಹಣಕಾಸು ಆಯೋಗದ ಸಾಮಾನ್ಯ ಮೂಲ ಅನುದಾನದಡಿ ಬಿಡುಗಡೆಯಾಗಿರುವ ಹಣವನ್ನು ನಗರದ ಹೊರವಲಯದಲ್ಲಿ ಕೊಳವೆಬಾವಿಗಳನ್ನು ಕೊರೆಸುವುದು ಸೇರಿದಂತೆ ನೀರು ಸರಬರಾಜು ಕಾಮಗಾರಿಗಳಿಗೆ ಹಾಗೂ ಜನತೆಗೆ ಕುಡಿಯುವ ನೀರಿನ ಪೂರೈಕೆ ಮಾಡಲು ಅಗತ್ಯ ಕ್ರಮ ವಹಿಸಲು ತೀರ್ಮಾನಿಸಲಾಯಿತು.
4feb2aನಗರಸಭೆ ಅಧ್ಯಕ್ಷೆ ಮುಷ್ಠರಿತನ್ವೀರ್ ಅಧ್ಯಕ್ಷತೆಯಲ್ಲಿ ಬುದವಾರ ಏರ್ಪಡಿಸಲಾಗಿದ್ದ ನಗರಸಭೆ ವಿಶೇಷಸಭೆಯಲ್ಲಿ ಎಲ್ಲಾ ಸದಸ್ಯರೊಂದಿಗೆ ಚರ್ಚಿಸಿ ಅವರ ಒಪ್ಪಿಗೆಯಂತೆ ಈ ತೀರ್ಮಾನ ಕೈಗೊಳ್ಳಲಾಯಿತು.
2014-15 ನೇ ಸಾಲಿನ 13 ನೇ ಹಣಕಾಸು ಆಯೋಗದ ಸಾಮಾನ್ಯ ಮೂಲ ಅನುದಾನದಡಿ ಬಿಡುಗಡೆಯಾಗಿರುವ 93.19 ಲಕ್ಷ ರೂಗಳಲ್ಲಿ 23.30 ಲಕ್ಷ ರೂ ಹಣವನ್ನು ಘನತ್ಯಾಜ್ಯ ವಸ್ತುಗಳ ವಿಲೇವಾರಿಗಾಗಿ ಹಾಗು 10.5 ಲಕ್ಷ ರೂಗಳನ್ನು ಎಸ್‍ಟಿಪಿ ಯೋಜನೆಗೆ ಬಳಸಿಕೊಂಡು ಉಳಿದ 59.39 ಲಕ್ಷ ರೂಗಳಲ್ಲಿ ನಗರದ ಹೊರವಲಯದಲ್ಲಿ ಕೊಳವೆಬಾವಿಗಳನ್ನು ಕೊರೆಸಿ ನಗರದ ಜನತೆಗೆ ಕುಡಿಯುವ ನೀರಿನ ಪೂರೈಕೆ ಮಾಡಲು ಅಗತ್ಯ ಕ್ರಮ ವಹಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.
ನಗರದ ಜನಸಂದಣಿ ಇರುವ ರಸ್ತೆಗಳಲ್ಲಿ ಸಾರ್ವಜನಿಕ ಶೌಚಾಲಯ ನಿರ್ಮಿಸಬೇಕು ಎಂದು 10 ನೇ ವಾರ್ಡಿನ ಸದಸ್ಯ ಜೆ.ಎಂ.ಬಾಲಕೃಷ್ಣ ಅವರ ಪ್ರಸ್ತಾಪಕ್ಕೆ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಕೇಶವಮೂರ್ತಿ ಮಾತನಾಡಿ ನಗರದ ಕೋಟೆ ವೃತ್ತದಲ್ಲಿರುವ ಸರಕಾರಿ ಶಾಲೆಯ ಆವರಣದಲ್ಲಿ ನಿರ್ಮಿಸಲು ಸ್ಥಳಾವಕಾಶಕ್ಕಾಗಿ ಸಂಬಂದಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ ನಿರ್ಮಿಸಲಾಗುವುದು ಎಂದರು.
ಪುರಸಭೆ ಉಪಾಧ್ಯಕ್ಷೆ ಸುಮಿತ್ರಮ್ಮರಮೇಶ್, ಸ್ಥಾಯಿ ಸಮಿತಿ ಅಧ್ಯಕ್ಷ ಕೇಶವಮೂರ್ತಿ, ಪುರಸಭೆ ಮುಖ್ಯಾಧಿಕಾರಿ ಎಸ್.ಎ.ರಾಮ್‍ಪ್ರಕಾಶ್, ಪುರಸಭೆ ಸದಸ್ಯರು ಹಾಗು ಸಿಬ್ಬಂದಿ ಸಭೆಯಲ್ಲಿ ಹಾಜರಿದ್ದರು.
ಆಯವ್ಯವಾದ ಪೂರ್ಣ ಮಾಹಿತಿಯನ್ನು ತಿಳಿಯಲು http://www.shidlaghattatown.gov.in/node/42 ವೀಕ್ಷಿಸಿ

ದುಬಾರಿ ಹಣ ವಸೂಲಿ – ನಗರದ ಶ್ರೀ ವೆಂಕಟೇಶ್ವರ ಇಂಡೇನ್ ಗ್ಯಾಸ್ ಏಜೆನ್ಸಿಗೆ ಮುತ್ತಿಗೆ

0

ಗ್ಯಾಸ್ ವಿತರಕರು ಗ್ರಾಹಕರಿಂದ ದುಬಾರಿ ಹಣವನ್ನು ವಸೂಲಿ ಮಾಡುತ್ತಿರುವುದರ ಜೊತೆಗೆ ಗ್ರಾಹಕರೊಂದಿಗೆ ದೌರ್ಜನ್ಯವಾಗಿ ವರ್ತಿಸುತ್ತಿದ್ದರೆಂದು ಆರೋಪಿಸಿ ನಗರದ ಶ್ರೀ ವೆಂಕಟೇಶ್ವರ ಇಂಡೇನ್ ಗ್ಯಾಸ್ ಏಜೆನ್ಸಿಯ ಕಚೇರಿಗೆ ಮುತ್ತಿಗೆ ಹಾಕಿದ ಪ್ರಸಂಗ ನಗರದಲ್ಲಿ ನಡೆಯಿತು.
12feb1aನಗರದ ಅಂಚೆ ಕಚೇರಿಯ ಬಳಿರುವ ಶ್ರೀ ವೆಂಕಟೇಶ್ವರ ಇಂಡೇನ್ ಗ್ಯಾಸ್ ಏಜೆನ್ಸಿಯ ಕಚೇರಿಗೆ ಬಂದ ಸಿಧ್ಧಾರ್ಥನಗರದ ನಿವಾಸಿಗಳು ಸಿಲಿಂಡರ್‍ನ ರೇಗ್ಯೂಲೇಟರ್ ಖರೀದಿ ಮಾಡಲು ಹೋದಾಗ 150 ರೂಪಾಯಿಗಳ ಬೆಲೆಯ ರೇಗ್ಯೂಲೇಟರ್‍ಗೆ 495 ರೂಪಾಯಿಗಳನ್ನು ಪಡೆದುಕೊಂಡು ರಸೀದಿಯನ್ನು ನೀಡದೆ, ವಂಚನೆ ಮಾಡಿರುತ್ತಾರೆ, ಸರ್ಕಾರದ ಆದೇಶದಂತೆ 150 ರೂಪಾಯಿಗಳನ್ನು ಮಾತ್ರ ಪಡೆಯಬೇಕು 495 ರೂಪಾಯಿಗಳನ್ನು ಯಾಕೆ ಪಡೆಯುತ್ತೀರಿ ಹಾಗಿದ್ದರೆ 495 ರೂಪಾಯಿಗಳಿಗೆ ನಮಗೆ ರಸೀದಿಯನ್ನು ನೀಡುವಂತೆ ಗ್ರಾಹಕರು ಕೇಳಿದಾಗ, ನಾವು ಪಡೆಯುವುದು ಅಷ್ಟೆ ಹಣ, ನಿಮಗಿಷ್ಟವಿದ್ದರೆ ತೆಗೆದುಕೊಳ್ಳಿ ಇಲ್ಲವಾದರೆ ಬೇರೆ ಎಲ್ಲಿಯಾದರೂ ತೆಗೆದುಕೊಳ್ಳಿ, ಬಿಲ್ ಕೊಡಬೇಕಾದರೆ ಮಧ್ಯಾಹ್ನ 03 ಘಂಟೆಗೆ ಬನ್ನಿ ಎಂದು ಏಜೆನ್ಸಿಯ ಮಾಲೀಕ ನಾಗರಾಜು, ಬೇಜಾವಾಬ್ದಾರಿಯಿಂದ ಉತ್ತರಿಸುತ್ತಾರೆ, ನೂತನವಾಗಿ ಅನಿಲ ಸಂಪರ್ಕವನ್ನು ಪಡೆಯಬೇಕಾದರೆ 5 ಸಾವಿರದಿಂದ 6 ಸಾವಿರ ರೂಪಾಯಿಗಳವರೆಗೂ ಹಣವನ್ನು ಪಡೆದುಕೊಳ್ಳುತ್ತಾರೆ, ಆನ್‍ಲೈನ್‍ನಲ್ಲಿ ಸಿಲಿಂಡರ್ ಬುಕ್ ಮಾಡಿದ ನಂತರ ಮೊಬೈಲ್‍ಗಳಲ್ಲಿ ಮೆಸೆಜ್ ಬಂದರೂ ಕೂಡಾ ಸರಿಯಾದ ಸಮಯಕ್ಕೆ ಸಿಲಿಂಡರ್‍ಗಳನ್ನು ವಿತರಣೆ ಮಾಡದೆ ಗ್ರಾಹಕರನ್ನು ವಂಚಿಸಲಾಗುತ್ತಿದೆ ಎಂದು ಗ್ರಾಹಕರು ಆರೋಪಿಸಿದ್ದಾರೆ.
ಈ ಬಗ್ಗೆ ಏಜೆನ್ಸಿಯ ಮಾಲೀಕ ನಾಗರಾಜು ಅವರನ್ನು ಪ್ರಶ್ನಿಸಿದಾಗ ನಾವು ರೇಗ್ಯೂಲೇಟರ್‍ಗೆ ಪಡೆಯುತ್ತಿರುವುದು, 150 ರೂಪಾಯಿಗಳು ಮಾತ್ರ, ಅವರು ರೇಗ್ಯೂಲೇಟರ್ ತೆಗೆದುಕೊಂಡು 500 ರೂಪಾಯಿಗಳನ್ನು ಕೊಟ್ಟಿದ್ದಾರೆ, ಅವರಿಗಿನ್ನು ಚಿಲ್ಲರೆ ಕೊಟ್ಟಿಲ್ಲ, ಅಷ್ಟರಲ್ಲಿ ಈ ರೀತಿಯಾಗಿ ಗಲಾಟೆ ಮಾಡುತ್ತಿದ್ದಾರೆ, ಕಳೆದ ಕೆಲವು ದಿನಗಳ ಹಿಂದೆ ಮದುವೆಗೆ ಗ್ಯಾಸ್ ಸಿಲಿಂಡರ್ ನೀಡುವಂತೆ ಕೇಳಿದ್ದರು, ಸಿಲಿಂಡರ್ ನೀಡಲಿಲ್ಲವೆಂಬ ಕಾರಣಕ್ಕೆ ಈ ರೀತಿ ಗಲಾಟೆ ಮಾಡುತ್ತಿದ್ದಾರೆ ಎಂದು ಉತ್ತರಿಸಿದರು.

ಆಟೋಗ್ರಾಫ್ ಎಂಬ ನೆನಪಿನ ವಿಮಾನವೇರಿ..

0

ಚಂದದ ಗೊಂಬೆಯಂಗಡಿ ಎದುರು ನಿಂತ ಮಗುವೊಂದು ತನ್ನ ಖುಷಿಯನ್ನು ವ್ಯಕ್ತ ಪಡಿಸಲಾಗದೇ ಬೆರಗುಗಣ್ಣಿನಿಂದ ಕಣ್ಣು ಮಿಟುಕಿಸದೆ ನೋಡುವ ಹಾಗೆ, ಅಂದು ನನ್ನ ಪುಟ್ಟ ಪುಸ್ತಕವೊಂದನ್ನ ನೋಡುತ್ತಾ ನಿಂತೆ. ಎಷ್ಟು ದಿನವಾಗಿತ್ತು ಅದನ್ನು ಮುಟ್ಟಿನೋಡದೇ! ಹಿಂದೊಮ್ಮೆ ಶಾಲೆ ಬದಲಿಸುವಾಗ, ಕಾಲೇಜು ಬಿಡುವಾಗ, ಚಿಕ್ಕ ಪುಸ್ತಕದಲ್ಲಿ ಗೆಳೆಯರಿಂದ ಆಟೋಗ್ರಾಫ್ ಬರೆಸಿಟ್ಟುಕೊಂಡ ಪುಸ್ತಕವದು. ನನ್ನ ಜೀವನದ ಹಾದಿಯಲ್ಲಿ ಕೆಲಕಾಲ ಹೆಜ್ಜೆಯಿಟ್ಟು ಜೊತೆಯಾದವರ ನೆನೆದ ಮನಸ್ಸು ಅಂದು ಹುಡುಕಿಕೊಟ್ಟದ್ದು ಇದೇ ಪುಸ್ತಕವನ್ನು. ಭದ್ರವಾಗಿ ಬೀಗ ಹಾಕಿಟ್ಟಿದ್ದ ಪುಸ್ತಕವದು! ಬಹುಶ: ಆ ಪುಟ್ಟ ಪುಟ್ಟ ಸಾಲುಗಳು ಎಲ್ಲಿ ಹಾರಿ ಹೋದಾವು ಎಂಬ ಭ್ರಮೆ ಇದ್ದಿರಬೇಕು ನನಗೆ!
ಪುಸ್ತಕ ತೆರೆಯುತ್ತಿದ್ದಂತೆ ನನಗೇ ತಿಳಿಯದೇ ಮುಗುಳು ನಗೆಯೊಂದು ಮೂಡಿತ್ತು. 20 ವರ್ಷಗಳ ಜೀವನ ಒಂದು ಪುಟ್ಟ ಸಿನಿಮಾದಂತೆ ಕಣ್ಣೆದುರಿಗೆ ಹಾದು ಹೋಗಿತ್ತು. ಅದರಲ್ಲಿ ಅದೆಷ್ಟು ಜನ ಕಣ್ಣೆದುರಿಗೆ ಬಂದು ಹೋದವರು! ಅದರಲ್ಲಿ ಕೆಲವರು ಪ್ರೀತಿಯಿಂದ, ಹಲವರು ತುಂಟತನದಿಂದ, ಇನ್ನೂ ಕೆಲವರು ಹಠದಿಂದ ಏನೇನೆಲ್ಲಾ ಬರೆದ ದೊಡ್ಡ ಹಾಗೂ ದಡ್ಡ ಸಾಲುಗಳನ್ನು ಓದಿದರೆ ಈಗ ತಮಾಷೆಯೆನಿಸುತ್ತದೆ.
“ಡೇಟೆಡ್ ಫಾರೆವರ್” ಎಂದು ಒಬ್ಬ ಹೇಳಿದರೆ, “ಸಮಯ ಸರಿಯಬಹುದು, ಜಗತ್ತಿನಲ್ಲಿ ಎಲ್ಲವೂ ಬದಲಾಗಬಹುದು, ಆದರೆ ನಮ್ಮ ಸ್ನೇಹ ಶಾಶ್ವತ ” ಎನ್ನುತ್ತಾಳೆ ಇನ್ನೊಬ್ಬಳು!” ನಮ್ಮ ಗೆಳೆತನ ನಮ್ಮಿಬ್ಬರ ಕೊನೆಯುಸಿರು ಇರುವವರೆಗೆ” ಎಂದ ಗೆಳತಿ ಎಲ್ಲಿದ್ದಾಳೋ, ಹೇಗಿದ್ದಾಳೋ ಈಗ ನೋಡುವ ಅಸೆಯಾಗುತ್ತದೆ. ನನ್ನ ಹೆಸರಿನ ಒಂದೊಂದು ಅಕ್ಷರಕ್ಕೂ ಒಂದೊಂದು ಅರ್ಥ ಕೊಟ್ಟು ಹೊಸ ಅರ್ಥ ಸೃಷ್ಟಿಸಿದ ಬುಧ್ಧಿವಂತರಿದ್ದಾರೆ. ಹೀಗೆ ಮನಸ್ಸಿಗೆ ಅನ್ನಿಸಿದ್ದನ್ನು ನೇರವಾಗಿ, ವ್ಯಂಗವಾಗಿ, ತಮಾಷೆಯಾಗಿ ಬರೆದುಕೊಟ್ಟ ಎಷ್ಟೋ ಜನ ಒಮ್ಮೆ ನೆನಪಾದರು. ಬಹುಶ: ಆಗ ಇದನ್ನೆಲ್ಲ ಓದಿ ಖುಷಿ ಪಟ್ಟವಳು ನಾನು, ಆದರೆ ಈಗ ಓದಿದರೆ ನಗು ಬರುವುದುಂಟು.
ಎಷ್ಟೊ ಬಾರಿ ನಾನು ಚಿಕ್ಕವಳಿದ್ದಾಗ, ಈ ಆಟೋಗ್ರಾಫ್ ಬರೆದುಕೊಡುವುದಕ್ಕೆ, ಬೇರೆಯವರಿಂದ ಬರೆಸಿಕೊಳ್ಳುವುದಕ್ಕೆ ಹಿಂದೇಟು ಹಾಕುತ್ತಿದ್ದೆ. ಪ್ರತೀ ಬಾರಿಯೂ ಅನಿಸುತ್ತಿದ್ದುದು, ಈ ನಮ್ಮ ಸ್ನೇಹ ನಿಜವಾಗಿದ್ದರೆ, ಅವರು ನಮ್ಮುಳಗೆ ಅಚ್ಚೊತ್ತಿದ್ದರೆ, ಅದು ಶಾಶ್ವತ. ಎಂದೆಂದಿಗೂ ಯಾರೂ ಅಳಿಸಲಾಗದು. ಇದಕ್ಕೆ ಈ ಪುಸ್ತಕದ ನೆರವು ಬೇಕಾ? ಎಂದು. ಈ ಸ್ನೇಹವೆಂಬುದು ಒಂದು ಸಮುದ್ರವಿದ್ದಂತೆ. ಇಲ್ಲೆ ಹಳೇ ನೀರು ಹೊಸ ನೀರು ಸೇರಿಯೇ ಹೊಸ ಅಲೆಯಾಗಬೇಕು. ಹಾಗಿದ್ದರೆ ಈ ಹಳೆಯ ಸ್ನೇಹವನ್ನು ನಾ ಮರೆಯುದುಂಟಾ? ನಮ್ಮ ಗೆಳೆತನಕ್ಕೆ ಈ ಪುಸ್ತಕದ ಹಂಗು ಬೇಕಾ? ನನ್ನ ಮನಸ್ಸು ಸಾಲದಾ? ಎಂದು ಪ್ರತೀ ಬಾರಿಯೂ ಪುಸ್ತಕವನ್ನು ಕೈಗೆತ್ತಿಕೊಂಡಾಗ ಅನ್ನಿಸುತ್ತಿದ್ದುದು ನಿಜ.
ಆದರೆ….ಕೆಲವೊಮ್ಮೆ ದೇವರು ಇಲ್ಲ ಎಂದು ವಾದ ಮಾಡುವವನೊಬ್ಬ, ಸುತ್ತಲಿನ ಜನರೆಲ್ಲರೂ ಜಾತ್ರೆಯಲ್ಲಿ ದೇವರಿಗೆ ಕೈ ಮುಗಿಯುವುದನ್ನು ನೋಡಿ ಭಯದಿಂದಲೋ, ತನಗೇನಾದರಾದೀತು ಎಂಬ ಕಾರಣದಂದಲೋ ತನ್ನ ಕೈಗಳನ್ನೂ ಜೋಡಿಸಿದಂತೆ, ನಾನೂ ಕೂಡ ಎಲ್ಲರ ಹಾಗೆ, ಈ ಆಟೋಗ್ರಾಫ್ ಪುಸ್ತಕದ ಹಾಳೆಗಳನ್ನು ತುಂಬಿಸಿಟ್ಟಿದ್ದೆ. ಇದರ ಅಸ್ತಿತ್ವದ ಅನುಭವ ನನಗೆ ಈಚೆಗೆ ತಿಳಿದದ್ದು, ಅರಿವಾದದ್ದು.
ಈ ಡಿಜಿಟಲ್ ಜಗತ್ತಿನಲ್ಲಿ, ಕೈ ಬೆರಳುಗಳ ತುದಿಯಲ್ಲೇ ಎಲ್ಲವೂ ಸಿಗುವ ಹೊತ್ತಲ್ಲಿ, ಫೇಸ್ ಬುಕ್, ಟ್ವಿಟರ್, ವಾಟ್ಸ್ ಆಪ್ ನಡುವೆ ಈ ಪುಟ್ಟ ಪುಸ್ತಕದ ಉಪಯೋಗ ನಮಗಾರಿಗೂ ಇಲ್ಲ. ಸಾವಿರಕ್ಕೂ ಹೆಚ್ಚು ಗೆಳೆಯರ ಗೆಳೆತನ ಹೊಂದಿದ ಫೇಸ್ ಬುಕ್ ಅಕೌಂಟಿನಲ್ಲಿ, ಯಾರು ಬೇಕಾದರೂ ಎಷ್ಟು ಹೊತ್ತಿಗೂ ಸಿಗುತ್ತಾರೆ. ಸಮಯವಿದ್ದರೆ ಹರಟುತ್ತಾರೆ. ಹಾಗಾಗಿ ಇಂದಿನ ದಿನಗಳಲ್ಲಿ, ಶಾಲಾ ಕಾಲೇಜು ಬಿಡುವಾಗ. “ಏ ಯಾಕ್ರೋ ಅಳ್ತಿರಾ? ಫೇಸ್ ಬುಕ್ ಅಲ್ಲಿ ಮೀಟ್ ಮಾಡೋಣ ಬಿಡಿ” ಅಂದವರೇ ಹೆಚ್ಚು. ನಿಜ ಈ ಜಾಲತಾಣಗಳು ನಾವು ದೂರದಲ್ಲಿದ್ದರೂ ಹತ್ತಿರದಲ್ಲಿದ್ದೇವೆ ಎಂಬ ಭಾವನೆಯನ್ನು ಮೂಡಿಸಿ ಮುದ ನೀಡುತ್ತದೆ. ಗೆಳೆತನದ ಭರವಸೆಗೆ ಇದು ಸಹಕಾರಿ ಕೂಡ. ಆದರೆ, ಈ ಪುಟ್ಟ ಪುಸ್ತಕವನ್ನು ಮುಂದೊಂದು ದಿನ ಓದಿದಾಗ ಸಿಗುವ ಆನಂದವನ್ನು, ಇದಕ್ಕೆ ಹೋಲಿಸಲಾಗದು. ಇದು ನಮ್ಮ ಗೆಳೆಯರು ಸದ್ಯದಲ್ಲ್ಲಿ ದೂರವಿದ್ದಾರೆ ಹಾಗು ನಾವು ಜೀವನದಲ್ಲಿ ಬಹುದೂರ ಸಾಗಿದ್ದೇವೆ ಎಂಬುದನ್ನು ಪ್ರತಿಬಿಂಬಿಸುತ್ತದೆ. ಪ್ರತೀ ಬಾರಿ ಓದಿದಾಗಲೂ ಪದಗಳು ಅದೇ ಆದರೂ ಅದರ ಅರ್ಥ ಅನುಭವ ಬೇರೆಯಾಗುತ್ತಾ ಹೋಗುತ್ತದೆ. ಕೆಲವು ಬಾರಿ ನಮಗೇ ಅರಿಯದೆ ಎಲ್ಲೋ ಕಳೆದುಹೋದ ನಮ್ಮ ಅಂತರಂಗದ ಶಕ್ತಿಯನ್ನು ಮರು ಭರಿಸುತ್ತದೆ.
ನಮ್ಮ ಜೀವನದಲ್ಲಿ ಎಷ್ಟೋ ಮಂದಿ ಬಂದು ಹೋಗುತ್ತಾರೆ. ಆದರೆ ಚಿಕ್ಕ ವಯಸ್ಸಿನಲ್ಲಿ ಬಂದ ಆ ಪುಟಾಣಿಗಳು, ನಮ್ಮ ಬಾಲ್ಯವನ್ನ್ನು ಮತ್ತೆ ನೆನಪಿಸುತ್ತಾರೆ. ಹತ್ತಿರವಿದ್ದೂ ದೂರವಿರುವ, ದೂರವಿದ್ದೂ ಹತ್ತಿರವಿದ್ದಂತೆ ತೋರುವ ಈ ಜೀವನದ ವೈರುಧ್ಯ, ನನಗೆ ಅರ್ಥವಾದದ್ದು ಮೊನ್ನೆ ಈ ಬಾಲ್ಯದ ಸ್ನೇಹಿತರನ್ನು ಒಡಿಲಿನಲ್ಲಿ ಹಿಡಿದಿಟ್ಟುಕೊಂಡ ಈ ಪುಟ್ಟ ಪುಸ್ತಕದಿಂದ.
ನೀವು ಕೂಡ ಇದನ್ನು ಜೋಪಾನವಾಗಿಟ್ಟಿದ್ದರೆ, ಒಮ್ಮೆ ಅದರ ಪುಟಗಳನ್ನು ತಿರುವಿಹಾಕಿ. ಆ ಚೊಕ್ಕ ಮನಸ್ಸಿನ ಚಿಕ್ಕ ಚಿಕ್ಕ ಭಾವನೆಗಳು ನಿಮ್ಮ ಮನಸ್ಸಿಗೆ ಮತ್ತೆ ಖುಷಿಯ ರೆಕ್ಕೆಯನ್ನು ಹಚ್ಚುತ್ತದೆ. ಏನಂತೀರ?
ಸ್ಫೂರ್ತಿ ವಾನಳ್ಳಿ

ಪಿ.ಎಲ್.ಡಿ ಬ್ಯಾಂಕಿನ ಚುನಾವಣೆ

0

ತಾಲ್ಲೂಕಿನ ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕಿನ ಆಡಳಿತ ಮಂಡಳಿಯ ನಿರ್ದೇಶಕರ ಸ್ಥಾನಗಳಿಗೆ ಫೆಬ್ರವರಿ ೧೫ ರಂದು ನಡೆಯಲಿರುವ ಚುನಾವಣೆಯಲ್ಲಿ ಸ್ಪರ್ಧಿಸಲು ಹಲವರು ನಾಮಪತ್ರಗಳನ್ನು ಸಲ್ಲಿಸಿದ್ದರು. ಮಂಗಳವಾರ ನಾಮಪತ್ರವನ್ನು ಹಿಂಪಡೆಯಲು ಕಡೆಯದಿನವಾಗಿತ್ತು.
ಕಣದಲ್ಲಿ ಉಳಿದಿರುವವರು:

  • ಶಿಡ್ಲಘಟ್ಟ ಟೌನ್ ಹಿಂದುಳಿದ ವರ್ಗ ಮೀಸಲು ಕ್ಷೇತ್ರ: ಸಿ.ಅಶ್ವತ್ಥನಾರಾಯಣ, ಎ.ರಾಮಚಂದ್ರ
  • ಅಬ್ಲೂಡು ಸಾಮಾನ್ಯ ಕ್ಷೇತ್ರ: ಸಿ.ಎಂ.ಗೋಪಾಲ, ಜೆ.ವಿ.ಮುನಿವೆಂಕಟಸ್ವಾಮಿ
  • ಸಾಲಗಾರರಲ್ಲದ ಕ್ಷೇತ್ರ: ದೇವರಾಜ್, ಎಂ.ದೇವರಾಜ್, ಬಿ.ಎ.ನಾರಾಯಣಸ್ವಾಮಿ, ಎಚ್.ಶಂಕರ್
  • ವೈ.ಹುಣಸೇನಹಳ್ಳಿ ಮಹಿಳಾ ಮೀಸಲು ಸ್ಥಾನ: ರತ್ನಮ್ಮ, ಎಂ.ಎನ್.ರಮಾದೇವಿ
  • ದಿಬ್ಬೂರಹಳ್ಳಿ ಸಾಮಾನ್ಯ ಕ್ಷೇತ್ರ: ಅಶ್ವತ್ಥನಾರಾಯಣರೆಡ್ಡಿ, ಜಿ.ಎಂ.ವೆಂಕಟರೆಡ್ಡಿ
  • ಮೇಲೂರು ಸಾಮಾನ್ಯ ಕ್ಷೇತ್ರ: ಆರ್.ಬಿ.ಜಯದೇವ್, ಎಚ್.ಎಂ.ನಾರಾಯಣಸ್ವಾಮಿ
  • ದೊಡ್ಡತೇಕಹಳ್ಳಿ ಸಾಮಾನ್ಯ ಕ್ಷೇತ್ರ: ಸಿ.ನಾರಾಯಣಸ್ವಾಮಿ, ಎಲ್.ಎನ್.ಶಿವಾರೆಡ್ಡಿ
  • ಜಂಗಮಕೋಟೆ ಸಾಮಾನ್ಯ ಕ್ಷೇತ್ರ: ಕೆ.ಎಂ.ಭೀಮೇಶ್, ಡಿ.ಸಂಗಪ್ಪ
  • ಗಂಜಿಗುಂಟೆ ಸಾಮಾನ್ಯ ಕ್ಷೇತ್ರ: ಡಿ.ವಿ.ಚಂದ್ರಶೇಖರ್ ರೆಡ್ಡಿ, ಎಂ.ಪಿ.ರವಿ
  • ಚೀಮಂಗಲ ಹಿಂದುಳಿದ ವರ್ಗ ಮೀಸಲು ಕ್ಷೇತ್ರ: ವೆಂಕಟೇಶಪ್ಪ, ಸಿದ್ದಪ್ಪ
  • ಆನೂರು ಪರಿಶಿಷ್ಠ ಜಾತಿ ಮತ್ತು ಪರಿಶಿಷ್ಠ ಪಂಗಡ ಮೀಸಲು ಕ್ಷೇತ್ರ: ನರಸಿಂಹಪ್ಪ, ಮುನಿಯಪ್ಪ
  • ಸಾದಲಿ ಮಹಿಳಾ ಮೀಸಲು ಸ್ಥಾನ: ಚೌಡಮ್ಮ, ಭಾಗ್ಯಮ್ಮ

ಮಳಮಾಚನಹಳ್ಳಿ ಬಳಿ ರಸ್ತೆ ತಡೆ ನಡೆಸಿ ಪ್ರತಿಭಟನೆ

0

ಸಮರ್ಪಕ ಸಾರಿಗೆ ವ್ಯವಸ್ಥೆಯಿಲ್ಲದೆ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ ಎಂದು ಮಂಗಳವಾರ ಕರ್ನಾಟಕ ರಕ್ಷಣಾ ವೇದಿಕೆಯ ಮಳಮಾಚನಹಳ್ಳಿ ಶಾಖೆಯ ಸದಸ್ಯರು ರಸ್ತೆ ತಡೆ ನಡೆಸಿ ಪ್ರತಿಭಟಿಸಿದರು.
ಶಿಡ್ಲಘಟ್ಟದಿಂದ ಜಂಗಮಕೋಟೆ ಕ್ರಾಸ್ ನಡುವೆ ಮಳಮಾಚನಹಳ್ಳಿ, ತಾದೂರು, ಬಸವಾಪಟ್ಟಣ ಮುಂತಾದ ಗ್ರಾಮಗಳಿಂದ ಸುಮಾರು 200 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪ್ರಯಾಣಿಸುತ್ತಾರೆ. ಆದರೆ ದಿನಕ್ಕೆ ಒಂದು ಬಾರಿ ಮಾತ್ರ ಸರ್ಕಾರಿ ಬಸ್ಸು ಈ ಮಾರ್ಗದಲ್ಲಿ ಸಂಚರಿಸುತ್ತದೆ. ಸಾರಿಗೆ ಅಧಿಕಾರಿಗಳು ಖಾಸಗಿಯವರೊಂದಿಗೆ ಶಾಮೀಲಾಗಿ ಈ ಮಾರ್ಗದಲ್ಲಿ ಬಸ್ಸುಗಳನ್ನು ಬಿಡುತ್ತಿಲ್ಲ. ಇತ್ತ ಪಾಸ್ ಮಾಡಿಸಿರುವ ವಿದ್ಯಾರ್ಥಿಗಳು ಪಾಸ್ ಇದ್ದರೂ ಹೆಚ್ಚು ಹಣವನ್ನು ತೆತ್ತು ಖಾಸಗಿ ಬಸ್ಸು ಹಾಗೂ ಆಟೋಗಳನ್ನು ಅವಲಂಬಿಸಬೇಕಾಗಿದೆ. ಶಾಲಾ ಕಾಲೇಜುಗಳಿಗೆ ಸಮಯಕ್ಕೆ ಸರಿಯಾಗಿ ವಿದ್ಯಾರ್ಥಿಗಳು ಹೋಗಲಾಗದೇ ತೊಂದರೆಯಾಗುತ್ತಿದೆ. ಹಲವಾರು ಬಾರಿ ಸಾರಿಗೆ ಅಧಿಕಾರಿಗಳಿಗೆ ದೂರು ನೀಡಿದರೂ ಈ ಬಗ್ಗೆ ಕ್ರಮ ಕೈಗೊಂಡಿಲ್ಲ. ಇದು ಮುಂದುವರಿದಲ್ಲಿ ಮುಂದೆ ಶಿಡ್ಲಘಟ್ಟದ ವೃತ್ತದಲ್ಲಿ ಪ್ರತಿಭಟಿಸಲಾಗುವುದು ಎಂದು ಎಚ್ಚರಿಸಿದರು.
ಸುಮಾರು ಎರಡು ಗಂಟೆಗಳ ಕಾಲ ಮಳಮಾಚನಹಳ್ಳಿ ಬಳಿ ಕರ್ನಾಟಕ ರಕ್ಷಣಾ ವೇದಿಕೆಯವರು ಮತ್ತು ವಿದ್ಯಾರ್ಥಿಗಳು ರಸ್ತೆಯಲ್ಲಿ ಕುಳಿತು ರಸ್ತೆ ತಡೆ ನಡೆಸಿ ಪ್ರತಿಭಟಿಸಿದರು.

ನಿಯಂತ್ರಣವಿರಲಿ ನಾಲಿಗೆಗೆ

0

ಮಾತು, ಆಹಾರಸೇವನೆ ಈ ಎರಡು ಕಾರ್ಯಗಳಲ್ಲಿ ನಾಲಿಗೆಯು ಪ್ರಧಾನ ಪಾತ್ರವನ್ನು ವಹಿಸುತ್ತದೆ. ಎರಡೂ ಕೆಲಸಗಳು ಹಿತಮಿತವಾಗಿದ್ದರೆ ಮಾತ್ರ ಚೆನ್ನ. ಮಾತಿನ ಬಗ್ಗೆ “ಸದ್ವತ್ತವಿರಲಿ ಸನ್ಮತಿಗೆ” ಎಂಬ ಭಾಗದಲ್ಲಿ ವಿವರಣೆ ನೀಡಲಾಗಿದೆ. ಆಹಾರಕ್ಕೆ ಸಂಬಂಧಿಸಿದ ವಿಶೇಷ ಅಂಶಗಳನ್ನು ಇಲ್ಲಿ ವಿವರಿಸಲಾಗಿದೆ.
1. ಹೆಚ್ಚಿನ ಪ್ರಮಾಣದಲ್ಲಿ ಅತಿಗಟ್ಟಿಯಾದ ಅಥವಾ ಕೇವಲ ಮೆತ್ತಗಿರುವ ಆಹಾರ ಸೇವನೆ ಮಾಡುವುದರಿಂದ ಹಲ್ಲಿನ ಆರೋಗ್ಯದಲ್ಲಿ ಏರುಪೇರಾಗುತ್ತದೆ.
2. ಏಕಕಾಲದಲ್ಲಿ ಅತಿ ಬಿಸಿಯಾದ ಹಾಗೂ ಅತಿ ಸಣ್ಣಗಿನ ಆಹಾರ ಸೇವನೆಯಿಂದ ಹಲ್ಲು ಹಾಗೂ ನಾಲಿಗೆಗೆ ತೊಂದರೆಯಾಗುತ್ತದೆ. (ಉದಾ: ಐಸ್ ಕ್ರೀಂ ಸೇವನೆ ನಂತರ ಬಿಸಿ ಸೂಪ್ ಸೇವಿಸುವುದು ಹಿತವಲ್ಲ)
3. ಹುಳಿ ಅಂಶವಿರುವ ಹಣ್ಣುಗಳಾದ ಕಿತ್ತಳೆ, ದ್ರಾಕ್ಷಿ, ಮೂಸಂಬಿ, ದಾಳಿಂಬೆ ಮೊದಲಾದುವುಗಳ ಜೊತೆ ಹಾಲನ್ನು ಸೇವಿಸಬಾರದು.
4. ಅತಿ ಉಪ್ಪು-ಹುಳಿ-ಖಾರ-ಕಹಿ-ಒಗರು: ಈ ರುಚಿಗಳ ಸೇವನೆ ಹಿತವಲ್ಲ.
5. ಬೇಸಗೆ ಕಾಲದಲ್ಲಿ ಅತಿ ಉಪ್ಪು-ಹುಳಿ-ಖಾರದ ಸೇವನೆ ಹಾಗೆಯೇ ಉಷ್ಣಪ್ರದೇಶದಲ್ಲಿ ಅತಿಯಾಗಿ ಉಪ್ಪು-ಹುಳಿಖಾರವಿರುವ ಆಹಾರ ಪದಾರ್ಥಗಳ ಸೇವನೆ ಒಳ್ಳೆಯದಲ್ಲ.
6. ಶೀತಕಾಲದಲ್ಲಿ ಅತಿ ಶೀತವಿರುವ ಆಹಾರ; ಉಷ್ಣಕಾಲದಲ್ಲಿ ಅತಿ ಬಿಸಿಯಾಗಿರುವ ಆಹಾರವನ್ನು ಸೇವಿಸಬಾರದು.
7. ಕೇವಲ ಮನಸ್ಸಿಗೆ ಹಿತವಾಗಿರುವ ಆಹಾರವನ್ನು ಸೇವಿಸಬಾರದು. ಶರೀರಕ್ಕೆ ಒಗ್ಗುತ್ತದೆಯೇ ಎಂಬುದನ್ನು ಗಮನಿಸಿ ಅದಕ್ಕೆ ತಕ್ಕಂತಹ ಆಹಾರವನ್ನು ಸೇವಿಸಬೇಕು.
8. ಮೊಳಕೆ ಕಾಳು, ಎಣ್ಣೆ ಪದಾರ್ಥಗಳು ಹಾಗೂ ಸಿಹಿತಿಂಡಿಗಳನ್ನು ಏಕಕಾಲದಲ್ಲಿ ಸೇವಿಸುವುದು ಹಿತವಲ್ಲ ಮತ್ತು ಆರೋಗ್ಯಕರವಲ್ಲ.
9. ಜೇನುತುಪ್ಪವನ್ನು ಬಿಸಿ ಮಾಡಿ ಆಗಲೀ, ಬಿಸಿ ಆಹಾರದ ಜೊತೆಗಾಗಲೀ ಸೇವಿಸಬಾರದು.
10. ಜೀರ್ಣಿಸಿಕೊಳ್ಳಲು ಆಗುವಷ್ಟು ಪ್ರಮಾಣದಲ್ಲಿ ಆಹಾರವನ್ನು ಸೇವಿಸಬೇಕು.
11. ಊಟಕ್ಕೆ ಮೊದಲು ಅಥವಾ ಊಟವಾದ ನಂತರ ಒಮ್ಮೆಲೇ ನೀರನ್ನು ಸೇವಿಸುವುದು ಹಿತವಲ್ಲ. ಊಟದ ಮಧ್ಯೆ ಸ್ವಲ್ಪ ಸ್ವಲ್ಪವಾಗಿ ನೀರನ್ನು ಸೇವಿಸುವುದು ಒಳ್ಳೆಯದು.
12. ಒಮ್ಮೆ ಸೇವಿಸಿದ ಆಹಾರವು ಜೀರ್ಣವಾದ ನಂತರವೇ ಪುನ: ಆಹಾರವನ್ನು ಸೇವಿಸಬೇಕು.
13. ಆಗಾಗ್ಗೆ ಬೆಚ್ಚಗಿನ ನೀರು ಸೇವನೆಯಿಂದ ಜೀರ್ಣಶಕ್ತಿ ಹೆಚ್ಚುತ್ತದೆ.
14. ಬೇಯಿಸಿದ ಆಹಾರ, ಹಸಿಯಾದ ಆಹಾರ, ಹುರಿದು ತಯಾರಿಸಿದ ಆಹಾರ, ಕರಿದು ತಯಾರಿಸಿದ ಆಹಾರ ಹೀಗೆ ನಾಲ್ಕು ರೀತಿಯಲ್ಲಿ ತಯಾರಿಸಿದ ಆಹಾರವನ್ನು ಹದವರಿತು ಸೇವಿಸಬೇಕು.
15. ನಮ್ಮ ದೇಹಕ್ಕೆ ಕೆಲವು ಆಹಾರ ಪದಾರ್ಥಗಳು ಒಗ್ಗದೇ ಇದ್ದ ಪಕ್ಷದಲ್ಲಿ ಅವುಗಳ ಸೇವನೆ ಹಿತವಲ್ಲ.
16. ಆಹಾರದಲ್ಲಿ ಇರಬೇಕಾದ ಘಟಕಗಳಾದ ಏಕದಳ ಧಾನ್ಯಗಳು (ಅಕ್ಕಿ, ರಾಗಿ, ಜೋಳ, ಗೋಧಿ, ನವಣೆ, ಸಜ್ಜೆ ಇತ್ಯಾದಿ) ದ್ವಿದಳ ಧಾನ್ಯಗಳು (ಹೆಸರು, ಕಡಲೆ, ಹುರುಳಿ, ಉದ್ದುಇತ್ಯಾದಿ) ಆಕಳ ಹಾಲು, ಆಕಳ ತುಪ್ಪ ಕಾಲಾನುಸಾರವಾಗಿ ಸಿಗುವ ಹಣ್ಣು-ಸೊಪ್ಪು-ತರಕಾರಿಗಳು, ನೀರು-ಎಲ್ಲವನ್ನೂ ಸರಿಯಾದ ರೀತಿಯಲ್ಲಿ ಸಂಸ್ಕರಿಸಿಕೊಂಡು ಸೇವಿಸಬೇಕು.
17. ನಿಗದಿತ ಸಮಯದಲ್ಲಿ ಮನಸ್ಸಿಗೆ ಅನುಕೂಲಕರವಾದ ವಾತಾವರಣದಲ್ಲಿ ಮನೆಯವರೊಡಗೂಡಿ ಆಹಾರವನ್ನು ಸೇವಿಸಬೇಕು.
18. ಸುಲಭವಾಗಿ ಜೀರ್ಣಿಸುವ ಆಹಾರ ಪದಾರ್ಥಗಳು (ಹಣ್ಣು, ಬೇಯಿಸಿದ ಆಹಾರ) ಹಾಗೂ ಜೀರ್ಣಿಸಲು ಹೆಚ್ಚು ಸಮಯವನ್ನು ತೆಗೆದುಕೊಳ್ಳುವ ಆಹಾರ ಪದಾರ್ಥಗಳು (ಜಿಡ್ಡಿನ ತಿನಿಸುಗಳು, ಸಿಹಿ ತಿನಿಸುಗಳು) ಎರಡನ್ನೂ ಸೇರಿಸಿ ಸೇವಿಸುವುದು ಒಳ್ಳೆಯದಲ್ಲ.
ಡಾ. ಶ್ರೀವತ್ಸ

ಕೋಟೆ ಶ್ರೀರಾಮ ದೇವಾಲಯದಲ್ಲಿ ಸುಗಮ ಸಂಗೀತ ಕಾರ್ಯಕ್ರಮ

0

ಸಂಗೀತವು ಮನಸ್ಸನ್ನು ಸುಸಂಸ್ಕೃತಗೊಳಿಸುವ ಗುಣವುಳ್ಳದ್ದು. ಮನಸ್ಸನ್ನು ಹಿಡಿದಿಡುವ ಹಾಗೂ ಏಕಾಗ್ರತೆಯಡೆಗೆ ಸಾಗಿಸುವ ಸಾಧನವಾಗಿದೆ ಸಂಗೀತ ಎಂದು ಡಾ.ಡಿ.ಟಿ.ಸತ್ಯನಾರಾಯಣರಾವ್ ತಿಳಿಸಿದರು.
ನಗರದ ಕೋಟೆ ಶ್ರೀರಾಮ ದೇವಾಲಯದಲ್ಲಿ ಸೋಮವಾರ ಸಂಜೆ ರೂರಲ್ ಯೂತ್ ಡೆಸ್ಟಿಟ್ಯೂಟ್ ಡೆವಲಪ್ಮೆಂಟ್ ಸೊಸೈಟಿ, ಉನ್ನತಿ ಮಾನವ ಹಕ್ಕುಗಳ ರಕ್ಷಣಾ ಸಂಘ ಮತ್ತು ಕನ್ನಡ ಸಂಸ್ಕೃತಿ ಇಲಾಖೆ ಸಂಯುಕ್ತಾಶ್ರಯದಲ್ಲಿ ನಡೆದ ಸುಗಮ ಸಂಗೀತ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಂಗೀತವು ಎಲ್ಲರ ಮನಸ್ಸನ್ನು ಅರಳಿಸುವ ಮಾದ್ಯಮ. ಹಾಗಾಗಿ ಸಂಗೀತಗಾರರು, ಕಲಾಕಾರರಿಗೆ ಪ್ರೇಕ್ಷಕನ ಆಶೀರ್ವಾದವೇ ಆಸ್ತಿ. ಕಲಾವಿದರನ್ನು ಚಪ್ಪಾಳೆ ತಟ್ಟಿ ಹುರಿದುಂಬಿಸುವ ಕಾರ್ಯವನ್ನು ಮಾಡುವ ಮೂಲಕ ಕಲಾಪೋಷಣೆ ಮಾಡಬೇಕು. ಅದರ ಮೂಲಕ ಸಾಂಸ್ಕೃತಿಕ ಪರಿಸರವನ್ನು ವಿಸ್ತರಿಸಬೇಕು ಎಂದು ಹೇಳಿದರು.
ಚಿಕ್ಕಬಳ್ಳಾಪುರ ಸುಗಮ ಸಂಗೀತ ಕಲಾವಿದ ಜ್ಞಾನಕುಮಾರ್ ಮತ್ತು ತಂಡ, ಗುಡಿಬಂಡೆ ಅಮರನಾರಾಯಣ ಅವರ ತಂಡ, ನ್ಯಾಮಗೊಂಡ್ಲು ಲಕ್ಷ್ಮಯ್ಯ ವೆಂಕಟೇಶಮೂರ್ತಿ ಸುಗಮ ಸಂಗೀತ ಕಾರ್ಯಕ್ರಮವನ್ನು ನಡೆಸಿಕೊಟ್ಟರು.
ಈ ಸಂದರ್ಭದಲ್ಲಿ ಅಂಧ ಕಲಾವಿದ ಸಂಗೀತ ಸ್ನಾತಕೋತ್ತರ ಪದವೀಧರರಾದ ಗುಡಿಬಂಡೆ ಅಮರನಾರಾಯಣ ಅವರನ್ನು ಸನ್ಮಾನಿಸಲಾಯಿತು.
ಶಾರದಾ ವಿದ್ಯಾಸಂಸ್ಥೆಯ ಅಧ್ಯಕ್ಷ ಎ.ಆರ್.ಮುನಿರತ್ನಂ, ಪತಂಜಲಿ ಯೋಗ ಕೇಂದ್ರದ ಕಾರ್ಯದರ್ಶಿ ಶ್ರೀಕಾಂತ್, ಪುರಸಭಾ ಸದಸ್ಯ ಪಿ.ಕೆ.ಕಿಶನ್, ರೂರಲ್ ಯೂತ್ ಡೆಸ್ಟಿಟ್ಯೂಟ್ ಡೆವಲಪ್ಮೆಂಟ್ ಸೊಸೈಟಿ ಅಧ್ಯಕ್ಷ ಬಿ.ಎಸ್.ರಘು, ವಕೀಲ ಜಿ.ವಿ.ವಿಶ್ವನಾಥ್, ಚನ್ನಕೃಷ್ಣಪ್ಪ, ವೆಂಕಟೇಶ್ ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.

ಸಮಾಜ ಕಲ್ಯಾಣ ಇಲಾಖೆಯ ವಿದ್ಯಾರ್ಥಿನಿಲಯದಲ್ಲಿ ಅವ್ಯವಹಾರ

0

ತಾಲ್ಲೂಕಿನ ಬಶೆಟ್ಟಹಳ್ಳಿ ಗ್ರಾಮದಲ್ಲಿನ ಸಮಾಜ ಕಲ್ಯಾಣ ಇಲಾಖೆಯವರು ನಡೆಸುವ ಬಾಲಕರ ವಿದ್ಯಾರ್ಥಿನಿಲಯಕ್ಕೆ ಶನಿವಾರ ಮತ್ತು ಭಾನುವಾರ ಬೀಗ ಜಡಿದು ಹಾಜರಾತಿ ಹಾಕುವ ಮೂಲಕ ಅವ್ಯವಹಾರ ನಡೆಸಲಾಗುತ್ತಿದೆ ಎಂದು ಡಿ.ವೈ.ಎಫ್.ಐ ರಾಜ್ಯ ಮುಖಂಡ ಕುಂದಲಗುರ್ಕಿ ಮುನೀಂದ್ರ ಆರೋಪಿಸಿದ್ದಾರೆ.
ತಾಲ್ಲೂಕು ಕೇಂದ್ರದಿಂದ ದೂರವಿರುವ ಬಶೆಟ್ಟಹಳ್ಳಿ ಗ್ರಾಮಕ್ಕೆ ಅಧಿಕಾರಿಗಳು ಭೇಟಿ ನೀಡದ ಹಿನ್ನೆಲೆಯಲ್ಲಿ ಶನಿವಾರ ಮತ್ತು ಭಾನುವಾರ ವಿದ್ಯಾರ್ಥಿಗಳನ್ನು ಊರುಗಳಿಗೆ ಕಳಿಸಿ ಬೀಗ ಹಾಕುತ್ತಿದ್ದಾರೆ ಎಂಬ ದೂರುಗಳು ಬರುತ್ತಿದ್ದವು. ಅಲ್ಲಿಗೆ ಭೇಟಿ ನೀಡಿದಾಗ ಬೀಗ ಹಾಕಿರುವುದು ಪ್ರತ್ಯಕ್ಷವಾಗಿ ನೋಡುವಂತಾಯಿತು. ಈ ಬಗ್ಗೆ ವಾರ್ಡನ್ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿದಾಗ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಈ ಬಗ್ಗೆ ಮುಂದಿನ ದಿನಗಳಲ್ಲಿ ವಿದ್ಯಾರ್ಥಿ ಸಂಘಟನೆಯ ಮೂಲಕ ಪ್ರತಿಭಟಿಸಲಾಗುವುದು ಎಂದು ಅವರು ತಿಳಿಸಿದರು.
ವಿದ್ಯಾರ್ಥಿನಿಲಯದಲ್ಲಿ ಅಳವಡಿಸಲಾದ ನಾಮಫಲಕದಲ್ಲಿ ಹಿಂದೆ ಇದ್ದ ಸಮಾಜ ಕಲ್ಯಾಣ ಸಚಿವರಾದ ಎ.ನಾರಾಯಣಸ್ವಾಮಿ ಅವರ ಹೆಸರಿದೆ. ಹಾಗೇಯೇ ಶಾಸಕರ ಹಾಗೂ ಅಧಿಕಾರಿಗಳ ಹೆಸರುಗಳನ್ನು ತಪ್ಪಾಗಿ ಮುದ್ರಿಸಲಾಗಿದೆ. ಎರಡು ವರ್ಷಗಳ ಹಿಂದಿನ ಅಧಿಕಾರಿಗಳ ಮತ್ತು ಜನಪ್ರತಿನಿಧಿಗಳ ಹೆಸರನ್ನೇ ಇನ್ನೂ ಉಳಿಸಿಕೊಂಡು ವಿದ್ಯಾರ್ಥಿಗಳನ್ನು ದಾರಿ ತಪ್ಪಿಸುವಂತಿದೆ ಎಂದು ಆರೋಪಿಸಿದರು.
ಲಕ್ಷಾಂತರ ರೂಪಾಯಿಗಳ ಅನುದಾನ ಬಂದಿದ್ದರೂ ಸಹ ಅಧಿಕಾರಿಗಳ ಬೇಜವಾಬ್ದಾರಿತನದಿಂದಾಗಿ ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತಿದೆ. ಮೂಲಭೂತ ಸೌಕರ್ಯಗಳು ಅವರಿಗೆ ದೊರಕದಂತಾಗಿದೆ. ಕನಿಷ್ಠ ಪಕ್ಷ ವಿದ್ಯಾರ್ಥಿನಿಲಯದ ನಾಮಫಲಕದ ಬರಹವೂ ಬದಲಾಗದಿರುವುದು ಅವರ ಕಾರ್ಯವೈಖರಿಗೆ ಹಿಡಿದ ಕೈಗನ್ನಡಿಯಾಗಿದೆ ಎಂದು ತಿಳಿಸಿದರು.

ಬಳಸಿ ಮತ್ತು ಬಿಸಾಕಿ – ಆದರೆ ಎಲ್ಲಿ ಮತ್ತು ಎಲ್ಲಿಯವರೆಗೆ?

0

ಕಳೆದ ಕೆಲವಾರು ದಿನಗಳಿಂದ ಬೆಂಗಳೂರು ನಗರದ ಕಸ ವಿಲೇವಾರಿ ದೊಡ್ಡ ಸುದ್ದಿಯಲ್ಲಿದೆ. ವರ್ತಮಾನ ಪತ್ರಿಕೆಗಳ ಮುಖಪುಟದಿಂದ ಹಿಡಿದು ಇಂಗ್ಲೀಷ್ ಮತ್ತು ಹಿಂದಿಯ ರಾಷ್ಟ್ರೀಯ ಸುದ್ದಿವಾಹಿನಿಗಳಲ್ಲಿ ಕೂಡ ಪದೇ ಪದೇ ಕಾಣಿಸಿಕೊಂಡ ಹೆಮ್ಮೆಗೆ ಇದು ಪಾತ್ರವಾಯಿತು! ರಾಜ್ಯದ ಉಚ್ಛನ್ಯಾಯಾಲಯಲ್ಲಿ ಇದಕ್ಕೆ ಸಂಬಂಧಿಸಿದ ಮೊಕದ್ದಮೆಯ ವಿಚಾರಣೆ ನಡೆಯಿತು.
ಇದೆಲ್ಲದರ ಜೊತೆಗೆ ರಾಜಕೀಯವಾಗಿ ಅವರಿವರನ್ನು ದೂಷಿಸುವ ಮಾಮೂಲಿನ ಕಸರತ್ತುಗಳೂ ನಡೆಯಿತು. ಈ ಕಸದ ರಾಮಾಯಣಕ್ಕೆ ರಾಜ್ಯ ಸರ್ಕಾರ ಎಷ್ಟು ಹೊಣೆ ಮತ್ತು ಬೆಂಗಳೂರು ಕಾರ್ಪೋರೇಶನ್ ಎಷ್ಟು ಕಾರಣ ಎನ್ನುವ ಚರ್ಚೆಯೂ ಆಯಿತು. ಯಾವುದೇ ದೂರಗಾಮೀ ಯೋಜನೆಯಿಲ್ಲದೆ ಎಲ್ಲಾ ಕಡೆ ದೋಚುವ ಹುನ್ನಾರುಗಳನ್ನಿಟ್ಟುಕೊಂಡೇ ಕೆಲಸ ಮಾಡುವ ನಮ್ಮ ರಾಜ್ಯವಾಳುವ ದೊರೆಗಳು ಮತ್ತು ಅವರ ಕೈಗೊಂಬೆಗಳಂತೆ ವರ್ತಿಸುತ್ತಾ ದೋಚಿದ್ದರಲ್ಲಿ ತಮ್ಮ ಪಾಲನ್ನು ಬಾಚಿಕೊಳ್ಳುತ್ತಾ ಇರುವ ಅಧಿಕಾರಿ ವರ್ಗ-ಇವರಿಬ್ಬರೂ ಇದಕ್ಕೆ ಒಂದು ಖಾಯಮ್ಮಾದ ಪರಿಹಾರ ಕಂಡುಹಿಡಿಯುವರೆಂಬ ಭ್ರಮೆಯಲ್ಲಿ ಬೆಂಗಳೂರಿಗರು ದಿನ ನೂಕುತ್ತಿದ್ದಾರೆ.
ಹೀಗೆ ಹುಡುಕಬಹುದಾದ ಖಾಯಮ್ಮಾದ ಪರಿಹಾರವಾದರೂ ಎಂತಹದಿರಬಹುದು-ಕಸದ ವಿಂಗಡಣೆ, ಮರು ಬಳಕೆ ಅಥವಾ ಸೂಕ್ತ ವಿಲೇವಾರಿ-ಇವಿಷ್ಟೇ ಅಲ್ಲವೇ? ದಿನಕ್ಕೆ 5000 ಟನ್ ಕಸವನ್ನು ಉತ್ಪಾದಿಸುವ ಬೆಂಗಳೂರಿನ ಪ್ರಜ್ಞಾವಂತರೆಂದು ಹೆಸರು ಮಾಡಿರುವ ನಾಗರಿಕರಿಗೆ ಈ ಪ್ರಕ್ರಿಯೆಯಲ್ಲಿ ಏನೂ ಜವಾಬ್ದಾರಿ ಇಲ್ಲವೇ ಇಲ್ಲ. ಈ ಮಟ್ಟದ ಕಸವನ್ನು ಉತ್ಪಾದಿಸುತ್ತಾ ಹೋದರೆ ಎಂತಹ ಸಶಕ್ತ ವಿಲೇವಾರೀ ವ್ಯವಸ್ಥೆಯಾದರೂ ಎಲ್ಲಿಯವರೆಗೆ ತಡೆದುಕೊಳ್ಳಲು ಸಾಧ್ಯ ಎಂದು ಬೆಂಗಳೂರಿನ ಪ್ರಬುದ್ಧ ಜನತೆ ಯೋಚಿಸಿದ್ದಾರೆಯೇ? ಪಾಶ್ಚಿಮಾತ್ಯ ಬಹುರಾಷ್ಟ್ರೀಯ ಕಂಪನಿಗಳ ಒತ್ತಾಸೆಗಳಿಗೆ ಮಣಿದು ನಾವೆಲ್ಲಾ ರೂಡಿಸಿಕೊಂಡಿರುವ “ಬಳಸಿ ಮತ್ತು ಬಿಸಾಕಿ” ಸಂಸ್ಕøತಿಯ ಕೇವಲ ಒಂದು ಅಡ್ಡಪರಿಣಾಮ ಇದು. (ಇತರ ದುಷ್ಪರಿಣಾಮಗಳ ಚರ್ಚೆ ಇಲ್ಲಿ ಪ್ರಸ್ತುತವಲ್ಲ.) ಇಷ್ಟು ಭಾರೀ ಪ್ರಮಾಣದಲ್ಲಿ ಕಸವನ್ನು ಹೊರಹಾಕುವುದನ್ನು ತಡೆಯುವ ಬಗೆಗೆ ಯಾರೂ ಯೋಚಿಸಿದಂತೆಯೇ ಕಾಣುವುದಿಲ್ಲ. ಪ್ರಕೃತಿಯಲ್ಲಿ ಸುಲುಭವಾಗಿ ಲೀನವಾಗದ ಕಸ ಎಂತಹ ಭಾರೀ ಸಮಸ್ಯೆಗಳಿಗೆ ಕಾರಣವಾಗಬಹುದು ಎಂಬ ಬಗೆಗೆ ನಾವೆಲ್ಲಾ ತಕ್ಷಣ ಗಮನಹರಿಸದಿದ್ದರೆ ಅಪಾಯವನ್ನು ಮುಂದೂಡಬಹುದೇ ವಿನಹ ತಪ್ಪಿಸುವುದು ಅಸಾಧ್ಯ.
ಹೀಗೆಂದ ತಕ್ಷಣ ನಮ್ಮ ಬುದ್ಧಿಜೀವಿಗಳೆಲ್ಲಾ ಮುಗಿಬಿದ್ದು ನ್ಯೂಯಾರ್ಕ್ ಸಿಂಗಾಪೂರ್‍ಗಳ ಉದಾಹರಣೆಗಳನ್ನು ಕೊಡತೊಡಗುತ್ತಾರೆ. ಅಲ್ಲಿರುವ ಜನಸಂಖ್ಯೆಗೆ, ಅವರ ಜೀವನ ಶೈಲಿಗೆ, ಅವರ ಬಳಿ ಇರಬಹುದಾದ ಸಂಪನ್ಮೂಲಗಳಿಗೆ, ಅವರು ಅನುಸರಿಸುತ್ತಿರುವ ಮಾದರಿಗಳು ಸೂಕ್ತವಿರಬಹದು. ಭಾರೀ ಮಟ್ಟದಲ್ಲಿ ಕಸ ಹೊರಹಾಕುತ್ತಿದ್ದರೆ ಅವರ ವ್ಯವಸ್ಥೆಯೂ ಕೂಡ ಕುಸಿದು ಬೀಳುವ ದಿನಗಳು ದೂರವಿರಲಾರದು ಎಂದು ಅಲ್ಲಿನ ಸಾಮಾಜಿಕ ಚಿಂತಕರು ಪದೇ ಪದೇ ಎಚ್ಚರಿಸುತ್ತಿದ್ದಾರೆ. ಇದೆಲ್ಲವನ್ನೂ ಕಡೆಗಣಿಸಿ, ನಮ್ಮ ಮಿತಿಗಳನ್ನೂ ಕಂಡುಕೊಳ್ಳದೇ ಅಭಿವೃದ್ಧಿ ಹೊಂದುವ ಹಪಹಪಿಕೆಯಲ್ಲಿ ನಾವು ಅವರ ಜೀವನ ಶೈಲಿಯನ್ನು, ಅವರ ಮಾದರಿಗಳನ್ನು ಕಣ್ಣುಮುಚ್ಚಿ ಅನುಸರಿಸುತ್ತಿದ್ದೇವೆ. ಶ್ರೀಮಂತ ದೇಶಗಳಿಗೆ ಹೊಂದುವ ಪರಿಹಾರಗಳೇ ಬಡ ಮತ್ತು ಅಭಿವೃದ್ಧಿ ಹೊಂದುತ್ತಿರುವ ದೇಶಗಳಿಗೂ ಅನ್ವಯವಾಗುತ್ತದೆ ಎನ್ನವ ಅಮೇರಿಕಾ ಮತ್ತದರ ಮಿತ್ರ ದೇಶಗಳ ನಿಲುವನ್ನು ಇ ಎಫ್ ಶ್ಯೂಮ್ಯಾಕರ್ ಎನ್ನವ ಪಾಷ್ಚಿಮಾತ್ಯ ಅರ್ಥಶಾಸ್ತ್ರಜ್ಞ ತನ್ನ ಪುಸ್ತಕ “ಸ್ಮಾಲ್ ಈಸ್ ಬ್ಯೂಟಿಫುಲ್” ಎನ್ನುವ ಪ್ರಸಿದ್ಧ ಪುಸ್ತಕದಲ್ಲಿ ಪದೇ ಪದೇ ಪ್ರಶ್ನಿಸುತ್ತಾನೆ. ನಮ್ಮ ಕಸ ಉತ್ಪಾದನೆಯ ವಿಷಯದಲ್ಲೂ ಇದರ ಬಗೆಗೆ ನಾವೆಲ್ಲ ತುರ್ತಾಗಿ ಯೋಚಿಸಬೇಕಾಗಿದೆ.
ಸಧ್ಯಕ್ಕೆ ಬಿಬಿಎಂಪಿ ಕಸ ವಿಲೇವಾರಿಯ ಸಮರ್ಥ ವ್ಯವಸ್ಥೆ ಮಾಡಬಹುದು. ಆದರೆ ಅದು ಮತ್ತೆ ಕುಸಿದು ಬೀಳುವ ದಿನ ದೂರವಿರುವುದಿಲ್ಲ. ಹಾಗಾಗಿ ಬೆಂಗಳೂರಿಗರು ತಮ್ಮ ನಿರಂತರ ಸ್ವರ್ಗದ ಭ್ರಮೆಗಳಿಂದ ಹೊರಬಂದು ತಕ್ಷಣ ತಮ್ಮ ಕಸದ ಉತ್ಪಾದನೆಯ ಮಟ್ಟವನ್ನು ತೀವ್ರವಾಗಿ ಕಡಿಮೆ ಮಾಡುವ ಬಗೆಗೆ ಯೋಚಿಸಬೇಕು. ನಾಗರಿಕ ಸಂಘಟನೆಗಳು, ಧಾರ್ಮಿಕ ಮುಖಂಡರು ಮುಂತಾದವರೆಲ್ಲಾ ಇದರಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳದೇ ಎಲ್ಲವನ್ನೂ ಸರ್ಕಾರ ತಲೆಗೆ ಕಟ್ಟಿದರೆ ಯಾವ ಬದಲಾವಣೆಯೂ ಸಾಧ್ಯವಿಲ್ಲ. ಬರಿಯ ಭಾಷಣ, ಉಪದೇಶ, ಪ್ರವಚನಗಳಿಂದ ಸಾರ್ಥಕತೆಯನ್ನು ಕಂಡುಕೊಳ್ಳದೆ, ಇದಕ್ಕೆ ಒಂದು ನಿರ್ದಿಷ್ಟ ಕಾರ್ಯಸೂಚಿ ಇಟ್ಟುಕೊಳ್ಳಬೇಕಾಗುತ್ತದೆ. ಉದಾಹರಣೆಗೆ ಮುಂದಿನ 5 ವರ್ಷಗಳಲ್ಲಿ ಕಸದ ಮಟ್ಟವನ್ನು ಈಗಿರುವ ಅರ್ಧದಷ್ಟಕ್ಕೆ ಇಳಿಸಬೇಕು ಮತ್ತು ಅದಕ್ಕಾಗಿ ಯಾವಯಾವ ಕ್ಷೇತ್ರದಲ್ಲಿ ಎಂತಹ ಕ್ರಮ ಕೈಕೊಳ್ಳಬೇಕು ಎಂಬಂತಹ ಸ್ಪಷ್ಟ ಯೋಜನೆ ಹಾಕಿಕೊಳ್ಳಬೇಕು. ಜೊತೆಗೆ ನಾಗರಿಕರನ್ನು ಇದರಲ್ಲಿ ಸಕ್ರಿಯವಾಗಿ ಒಳಗೊಳ್ಳುವಂತೆ ಮಾಡಬೇಕು. ಇಲ್ಲದಿದ್ದರೆ ಅವರು ನಿಷ್ಕ್ರಿಯ ಟೀಕಾಕಾರರಾಗಿಯೇ ಉಳಿದುಬಿಡುತ್ತಾರೆ.
ಇವತ್ತಿನ ಬೆಂಗಳೂರಿನ ಸಮಸ್ಯೆ ನಾಳೆ ನಾಡಿದ್ದರಲ್ಲಿ ಜಿಲ್ಲಾ ಕೇಂದ್ರಗಳಿಗೆ, ಕೆಲವೇ ವರ್ಷಗಳಲ್ಲಿ ತಾಲ್ಲೂಕ್ ಕೇಂದ್ರ ಮತ್ತು ಹಳ್ಳಿಗಳಿಗೂ ಹರಡಬಹುದು. ಹಾಗಾಗಿ ನಾವೆಲ್ಲಾ ಈಗಲೇ ಎಚ್ಚೆತ್ತುಕೊಳ್ಳುವುದು ನಮ್ಮ ಮಕ್ಕಳ ಭವಿಷ್ಯದ ದೃಷ್ಟಿಯಿಂದ ಆರೋಗ್ಯಕರ. ಪ್ರಕೃತಿಯಲ್ಲಿ ತಕ್ಷಣ ಲೀನವಾಗದ ಕಸದ ಉತ್ಪಾದನೆಯನ್ನು ಅತಿ ಕಡಿಮೆ ಮಟ್ಟದಲ್ಲಿಡುವುದು ಎಲ್ಲಾ ಯೋಜನೆಗಳ ಮೊದಲ ಹಂತವಾಗಬೇಕು. ಉಳಿದಂತೆ ಉತ್ಪಾದನೆಯಾಗುವ ಕಸವನ್ನು ಇಡೀ ನಗರದ ಮಟ್ಟದಲ್ಲಿ ಒಟ್ಟುಗೂಡಿಸಿ ವಿಲೇವಾರಿ ಮಾಡುವ ಕೇದ್ರೀಕೃತ ವೈವಸ್ಥೆಯ ಬದಲಾಗಿ ಅದನ್ನು ಆಯಾಯ ಮನೆ ಅಥವಾ ಬಡಾವಣೆಯ ಮಟ್ಟದಲ್ಲಿ ಮರುಬಳಕೆ ಮಾಡುವ ಯೋಜನೆ ರೂಪಿಸಬೇಕು. ಹೆಚ್ಚಿನ ಕಸ ಉತ್ಪಾದನೆ ಮಾಡುವ ನಾಗರಿಕರಿಗೆ, ವ್ಯಾಪಾರಿಗಳಿಗೆ, ಉದ್ಯಮಿಗಳಿಗೆ ನಿರ್ದಾಕ್ಷಿಣ್ಯವಾಗಿ ದಂಡ ವಿಧಿಸಬೇಕು.
ಭಗವಂತನ ಈ ದಿವ್ಯ ಸೃಷ್ಟಿಯಾದ ಭೂಮಿಯನ್ನು ಶುಚಿಯಾಗಿಡುವುದಕ್ಕಿಂತ ಹೆಚ್ಚಿನ ಪುಣ್ಯಕಾರ್ಯ ಇನ್ನೇನಿರಲು ಸಾಧ್ಯ? ಹಾಗಾಗಿ ನಮ್ಮ ಧಾರ್ಮಿಕ ಮುಖಂಡರುಗಳು ಇದರಲ್ಲಿ ಮುಂದಾಳತ್ವ ವಹಿಸದರೆ ಬಹಳ ಶೀಘ್ರ ಪರಿಣಾಮಗಳನ್ನು ಆಶಿಸಬಹದು.
ವಸಂತ್ ನಡಹಳ್ಳಿ

ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ (ಪುಟ್ಟಣ್ಣಯ್ಯ ಬಣ) ವತಿಯಿಂದ ಪ್ರತಿಭಟನೆ

0

ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ(ಪುಟ್ಟಣ್ಣಯ್ಯ ಬಣ) ಸೋಮವಾರ ನಗರದಲ್ಲಿ ಶಾಖಾ ಕಚೇರಿಯ ಉದ್ಘಾಟನೆ ಮತ್ತು ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಪ್ರತಿಭಟನಾ ಮೆರವಣಿಗೆಯನ್ನು ನಡೆಸಿದರು.
ಬಯಲುಸೀಮೆ ಜಿಲ್ಲೆಗಳಾದ ಚಿಕ್ಕಬಳ್ಳಾಪುರ ಮತ್ತು ಕೋಲಾರಕ್ಕೆ ಪರಮಶಿವಯ್ಯ ವರದಿಯ ಶಾಶ್ವತ ನೀರಾವರಿ ಯೋಜನೆ ಜಾರಿಗೊಳಿಸಬೇಕು. ರೇಷ್ಮೆ ಬೆಳೆಯುವ ರೈತರಿಗೆ ಒಂದು ಕೆಜಿ ಗೂಡಿಗೆ ಕನಿಷ್ಠ 400 ರೂಗಳು ನಿಗದಿಪಡಿಸಬೇಕು. ಹಿಪ್ಪುನೇರಳೆ ತೋಟಕ್ಕೆ ಹನಿನೀರಾವರಿಗೆ ಮತ್ತು ಸಲಕರಣೆಗಳಿಗೆ ನಿಲ್ಲಿಸಿರುವ ಸಹಾಯಧನವನ್ನು ತಕ್ಷಣ ಬಿಡುಗಡೆ ಮಾಡಬೇಕು. ರೈತರಿಗೆ ಒಂದು ಲೀಟರ್ ಹಾಲಿಗೆ 40 ರೂಗಳಷ್ಟನ್ನು ಸರ್ಕಾರ ನಿಗದಿಗೊಳಿಸಬೇಕು. ರೈತರ ಪಂಪ್ಸೆಟ್ಗಳಿಗೆ ಮೀಟರ್ ಅಳವಡಿಸುವುದನ್ನು ಸರ್ಕಾರ ಕೈಬಿಟ್ಟು, 3 ಫೇಸ್ ವಿದ್ಯುತ್ ಕನಿಷ್ಠ 10 ಗಂಟೆ ಕೊಡಬೇಕು. ರೈತರು ಬೆಳೆಯುವ ತರಕಾರಿಗಳು ಮತ್ತು ಹೂಗಳಿಗೆ ಎ.ಪಿ.ಎಂ.ಸಿ ಮಾರುಕಟ್ಟೆ ಮಳಿಗೆಗಳಲ್ಲಿ ಪಡೆಯುವ ಶೇಕಡಾ 10 ರಷ್ಟು ಲಮಿಷನ್ ಹಾಗೂ ಬಿಳಿ ಚೀಟಿ ಕೊಡುವುದನ್ನು ನಿಲ್ಲಿಸಬೇಕು. ರಸೀದಿ ಕೊಡುವುದನ್ನು ಜಾರಿಗೊಳಿಸಬೇಕು ಮುಂತಾದ ಬೇಡಿಕೆಗಳನ್ನು ಮುಂದಿಟ್ಟುಕೊಂಡು ನಗರದಲ್ಲಿ ಪ್ರತಿಭಟನಾ ಮೆರವಣಿಗೆಯನ್ನು ನಡೆಸಿ ತಾಲ್ಲೂಕು ಕಚೇರಿಯ ಮುಂದೆ ಧರಣಿ ನಡೆಸಿದರು.
ಎಲ್ಲಾ ಬ್ಯಾಂಕುಗಳು ಗಣಕೀಕೃತಗೊಂಡಿವೆ. ಯಾರು ಎಲ್ಲಿ ಸಾಲ ಪಡೆದಿದ್ದಾರೆಂಬುದು ತಿಳಿದುಕೊಳ್ಳಬಹುದಾಗಿದ್ದರೂ ಎಲ್ಲಾ ಬ್ಯಾಂಕುಗಳಲ್ಲಿ ಎನ್.ಒ.ಸಿ ನೆಪದಲ್ಲಿ ರೈತರ ಶೋಷಣೆಯಾಗುತ್ತಿದೆ. ರೈತರ ಹಣ, ಸಮಯಕ್ಕೆ ಬೆಲೆಯಿಲ್ಲದಂತಾಗಿದೆ ಎಂದು ಈ ಸಂದರ್ಭದಲ್ಲಿ ಆರೋಪಿಸಿದರು. ಸರ್ಕಾರದ ವಿವಿಧ ಭಾಗ್ಯಗಳ ಭಿಕ್ಷೆ ಬೇಕಿಲ್ಲ. ನೀರು ಕೊಟ್ಟರೆ ಸಾಕು. ನಾಡು ಸುಭಿಕ್ಷ ವಾಗುತ್ತದೆ ಎಂದರು.
ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ(ಪುಟ್ಟಣ್ಣಯ್ಯ ಬಣ) ಜಿಲ್ಲಾ ಸಮಿತಿಯ ಬಿ.ಕೆ.ಮುನಿಕೆಂಪಣ್ಣ, ಎಂ.ಆರ್.ಲಕ್ಷ್ಮೀನಾರಾಯಣ್, ನಾರಾಯಣಸ್ವಾಮಿ, ಶಂಕರರೆಡ್ಡಿ, ಅನಸೂಯಮ್ಮ, ಪಾರ್ವತಮ್ಮ, ತಾಲ್ಲೂಕು ಸಮಿತಿಯ ಪದಾಧಿಕಾರಿಗಳಾದ ಶಂಕರಪ್ಪ, ಎಸ್.ಎಂ.ರವಿಪ್ರಕಾಶ್, ನಾಗರಾಜ್, ಬಾಲಮುರಳಿಕೃಷ್ಣ, ಡಿ.ವಿ.ನಾರಾಯಣಸ್ವಾಮಿ, ರಾಮಮೂರ್ತಿ, ಸುರೇಶ್, ಬೈರಪ್ಪ, ನಾಗರಾಜು, ಕೃಷ್ಣಮೂರ್ತಿ, ಮುನೇಗೌಡ, ಪ್ರತೀಶ್, ನಾಗೇಶ್, ಮಲ್ಲೆಪ್ಪ, ಮುನಿಶಾಮಿಗೌಡ, ಚನ್ನೇಗೌಡ, ಕೇಶವ, ಚಂದ್ರಬಾಬು, ರಮೇಶ್, ಮುರಳಿ, ಮಂಜುನಾಥ್, ಬಚ್ಚರೆಡ್ಡಿ, ಸತೀಶ್ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಛಲವಾದಿ ಸಂಘಟನೆಯಿಂದ ರಕ್ತದಾನ ಶಿಬಿರ

0

ಆರೋಗ್ಯ ಸಂಬಂಧಿ ಜಾಗೃತಿ ಪ್ರತಿಯೊಬ್ಬರಲ್ಲೂ ಮೂಡಬೇಕು ಎಂದು ಬೆಂಗಳೂರು ಅಸಿಸ್ಟೆಂಟ್ ಕಮೀಷನರ್ ಆಫ್ ಪೊಲೀಸ್ ಸಿದ್ದರಾಜು ತಿಳಿಸಿದರು.
ನಗರದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಭಾನುವಾರ ಛಲವಾದಿ ಸಂಘಟನೆ ಮತ್ತು ರೆಡ್ಕ್ರಾಸ್ ಸಂಸ್ಥೆಯ ಸಂಯುಕ್ತಾಶ್ರಯದಲ್ಲಿ ನಡೆದ ರಕ್ತದಾನ ಶಿಬಿರದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಪ್ರತಿಯೊಂದು ಸಂಘಟನೆಗಳೂ ಸಮಾಜದಿಂದಲೇ ಬಂದಿರುವುದರಿಂದ ಸಮಾಜಕ್ಕೆ ಸೇವೆ ಸಲ್ಲಿಸುವ ಕರ್ತವ್ಯವೂ ಅವರದ್ದಾಗಿರುತ್ತದೆ. ಈ ರೀತಿಯ ರಕ್ತದಾನ ಶಿಬಿರಗಳು ಎಲ್ಲರಿಗೂ ಮಾದರಿಯಾದ್ದು, ಸಾಮರಸ್ಯ, ಮಾನವೀಯತೆಗೆ ಇದು ಕಾರಣವಾಗುತ್ತದೆ. ರಕ್ತಕ್ಕೆ ಜಾತಿ ಬೇಧವಿಲ್ಲ. ಆರೋಗ್ಯವಂತ ಯುವಕರು ಹೆಚ್ಚಾಗಿ ರಕ್ತದಾನ ಮಾಡುವ ಮೂಲಕ ಪರೋಪಕಾರಿಗಳಾಗಬೇಕು ಎಂದು ಹೇಳಿದರು.
ರಕ್ತದಾನ ಶಿಬಿರದಲ್ಲಿ 40 ಯೂನಿಟ್ ರಕ್ತವನ್ನು ಸಂಗ್ರಹಿಸಲಾಯಿತು.
ಛಲವಾದಿ ಸಂಘದ ಜಿಲ್ಲಾ ಅಧ್ಯಕ್ಷ ತ್ಯಾಗರಾಜು, ಡಾ.ವೆಂಕಟೇಶಮೂರ್ತಿ, ನಾಗರಾಜು, ಡಿ.ಸಿ.ಸಿ.ಬ್ಯಾಂಕ್ ವ್ಯವಸ್ಥಾಪಕ ಲಿಂಗರಾಜು, ಟಿ.ಟಿ.ನರಸಿಂಹಪ್ಪ, ಕೃಷ್ಣಪ್ಪ, ರೆಡ್ಕ್ರಾಸ್ ಸಂಸ್ಥೆಯ ತಾಲ್ಲೂಕು ಕಾರ್ಯದರ್ಶಿ ಗುರುರಾಜರಾವ್, ಶ್ರೀರಾಮ್, ರಾಜಶೇಖರ್, ಡಾ.ಸುಧಾಕರ್, ಸಮೀವುಲ್ಲಾ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

ಗಗನದಲ್ಲಿ ವಿಜ್ಞಾನಿಗಳ ಹೊಸ ಕಣ್ಣಾಗಿ ಜೇಮ್ಸ್ ವೆಬ್ ದೂರದರ್ಶಕ

0

ಅದರ ಗಾತ್ರ, ಆಕಾರ, ತೂಕಗಳೂ ಭಿನ್ನ, ಹಾಗೆಯೇ ಅದರ ಕಾರ್ಯವ್ಯಾಪ್ತಿಯೂ ಉಳಿದವುಗಳಿಗಿಂತ ಭಿನ್ನವೇ. ಅದೇ ‘ನವಯುಗದ ದೂರದರ್ಶಕಗಳು’ ಯೋಜನೆಯಡಿ ನಿರ್ಮಾಣಗೊಳ್ಳುತ್ತಿರುವ ‘ಜೇಮ್ಸ್‍ವೆಬ್’ ದೂರದರ್ಶಕ.
ದೂರದರ್ಶಕಗಳಿಂದಾಗಿ ಮಾನವನಿಗೆ ಬ್ರಹ್ಮಾಂಡದ ಅಗಾಧತೆಯನ್ನು ಗ್ರಹಿಸಲು ಸಾಧ್ಯವಾಗಿದೆ. ನಾಲ್ಕುನೂರು ವರ್ಷಗಳ ಹಿಂದೆ ಒರಟು ಒರಟಾಗಿದ್ದ ದೂರದರ್ಶಕಗಳು ಅಗತ್ಯಕ್ಕೆ ತಕ್ಕಂತೆ ತಂತ್ರಜ್ಞಾನದ ಮೂಸೆಯಲ್ಲಿ ರೂಪಾಂತರ ಹೊಂದುತ್ತ ಬಂದಿವೆ. ಬಾಹ್ಯಾಕಾಶದ ವಿವಿಧ ಪ್ರದೇಶಗಳನ್ನು ಅಧ್ಯಯನ ಮಾಡಲು ಇಂದು ಅನೇಕ ರೀತಿಯ ದೂರದರ್ಶಕಗಳು ಕೆಲಸ ಮಾಡುತ್ತಿವೆ. ಬಾಹ್ಯ ಆಕಾಶದಲ್ಲಿನ ವಸ್ತುಗಳು ಸೂಸುವ ವಿದ್ಯುತ್ಕಾಂತೀಯ ಕಿರಣಗಳನ್ನು ಸೆರೆ ಹಿಡಿಯುವ ಕೆಲಸ ಈ ದರ್ಶಕಗಳದ್ದು. ವಿದ್ಯುತ್ಕಾಂತೀಯ ರೋಹಿತಪಟ್ಟಿ ರೇಡಿಯೋ, ಮೈಕ್ರೋ, ಅವಗೆಂಪು, ದೃಗ್ಗೋಚರ, ಅತಿನೇರಳೆ, ಎಕ್ಸ್ ರೇ, ಹಾಗೂ ಗಾಮಾ ಕಿರಣಗಳನ್ನು ಒಳಗೊಂಡಿರುತ್ತದೆಯಷ್ಟೆ? ಅವಶ್ಯಕತೆಗೆ ಅನುಗುಣವಾಗಿ ಪ್ರತ್ಯೇಕ ಕಿರಣಗಳನ್ನು ಗುರುತಿಸುವಂತೆ ಬೇರೆ ಬೇರೆ ದೂರದರ್ಶಕಗಳು ನಿರ್ಮಾಣಗೊಂಡಿವೆÉ. ಆ ಕಿರಣಗಳ ಮೂಲವನ್ನು ಪತ್ತೆ ಹಚ್ಚಿ ಅವು ಎಷ್ಟು ದೂರದಲ್ಲಿವೆ, ನಕ್ಷತ್ರವೇ, ಗೆಲಾಕ್ಸಿಯೇ ಇತ್ಯಾದಿ ವಿವರಗಳನ್ನು ಮುಂದಿನ ಸಂಶೋಧನೆಗಳು ತಿಳಿಸುತ್ತವೆ.
ಈಗಿರುವ ಹಲವಾರು ದೂರದರ್ಶಕಗಳಲ್ಲಿ ಭೂಮಿಯ ಮೇಲೆ ಎತ್ತರದ ಪ್ರದೇಶಗಳಲ್ಲಿ ಆಗಸಕ್ಕೆ ಮುಖ ಮಾಡಿರುವಂಥವು ಕೆಲವಾದರೆ, ಭೂಮಿಯೊಡನೆಯೇ ಸೂರ್ಯನ ಸುತ್ತ ಭೂಸಮೀಪದ ಕಕ್ಷೆಯಲ್ಲಿ ಹಾರಾಡುತ್ತಿರುವಂಥವು ಕೆಲವು. ಹಬಲ್ ಅಂತರಿಕ್ಷ ದೂರದರ್ಶಕ 1990 ರಲ್ಲಿ ಉಡಾವಣೆಗೊಂಡಿತ್ತು. ಭೂ ಸಮೀಪ ಕಕ್ಷೆಯಲ್ಲಿ ಹಾರಾಡುತ್ತಿರುವ ಹಬಲ್, ಸಾವಿರಾರು ಚಿತ್ರಗಳ ಮೂಲಕ ನಮ್ಮ ಅಂತರಿಕ್ಷ ಅರಿವನ್ನು ಹೆಚ್ಚಿಸಿ, ಬಾಹ್ಯಾಕಾಶ ಉತ್ಸಾಹಿಗಳ ಕಣ್ಮಣಿಯಾಗಿದೆ. ಆದರೆ ಹಬಲ್ ದಿನೇ ದಿನೇ ಕ್ಷೀಣಿಸುತ್ತಿದೆ. ಅದರ ಯಂತ್ರಭಾಗಗಳು ಹಳೆಯದಾಗುತ್ತಿವೆ. ಐದು ಬಾರಿ ರಿಪೇರಿಗೊಳಗಾಗಿ ಇದೀಗ ತನ್ನ ಆಯಸ್ಸಿನ ಕೊನೆಯ ಹಂತದಲ್ಲಿದ್ದ ಹಬ್ಬಲ್ ದರ್ಶಕಕ್ಕೆ ಉತ್ತರಾಧಿಕಾರಿಯಾಗಿ ಜೇಮ್ಸ್‍ವೆಬ್ ನ್ನು ಹಾರಿಬಿಡಬೇಕು ಎಂದು 1993 ರಲ್ಲೇ ಪ್ರಸ್ತಾವಗೊಂಡು ನಿರ್ಮಾಣ ಆರಂಭಗೊಂಡಿದೆ. ಹಲವಾರು ಏಳುಬೀಳುಗಳ ನಡುವೆ ಕುಂಟುತ್ತ ಸಾಗಿದ ಜೇಮ್ಸ್‍ವೆಬ್ ನಿರ್ಮಾಣ ಈ ವರ್ಷ ಸಂಪೂರ್ಣವಾಗಬೇಕಿತ್ತು, ಆದರೆ 2018ಕ್ಕೆ ಅದು ಹಾರಾಟವನ್ನು ಆರಂಭಿಸಲಿದೆಯಂತೆ.
ಹಬಲ್ ಮತ್ತು ಜೇಮ್ಸ್‍ವೆಬ್ ನಡುವಿನ ಮುಖ್ಯ ವ್ಯತ್ಯಾಸವೆಂದರೆ ಹಬಲ್ ಮಾನವ ಗೋಚರ ಬೆಳಕು ಮತ್ತು ಅವಗೆಂಪಿನ ಕೆಲವು ಕಡಿಮೆ ತರಂಗಾಂತರಗಳನ್ನು ಸಂಗ್ರಹಿಸಿ (ಸಮೀಪದ ಗೆಲಾಕ್ಸಿ ಮತ್ತಿತರ) ಆಕಾಶಕಾಯಗಳ ಕುರುಹುಗಳನ್ನು ನೀಡಿದರೆ, ಜೇಮ್ಸ್‍ವೆಬ್ ಅವಗೆಂಪು ಅಥವಾ ಇನ್‍ಫ್ರಾರೆಡ್ ಕಿರಣಗಳ ಅಧ್ಯಯನ ನಡೆಸಲಿದೆ.
ಇನ್ಫ್ರಾರೆಡ್ ತರಂಗಗಳೇ ಏಕೆ?
13 ಬಿಲಿಯನ್ ವರ್ಷಗಳ ಹಿಂದೆ ಆದಿ ಬಿಂದುವೊಂದರ ಮಹಾ ಆಸ್ಫೋಟದಿಂದ ವಿಶ್ವ ಆರಂಭಗೊಂಡಿತು ಎಂಬ ಬಿಗ್ ಬ್ಯಾಂಗ್ ವಾದ ಅಂದಿನಿಂದ ಇಂದಿಗೂ ವಿಶ್ವವು ವಿಸ್ತರಿಸುತ್ತಿದೆ ಎಂದೆನ್ನುತ್ತಿದೆ. (ಬಲೂನೊಂದರ ಮೇಲೆ ಇಡೀ ಬಾಹ್ಯಾಕಾಶ ಹರಡಿದೆ ಎಂದುಕೊಳ್ಳಿ. ಈಗ ಬಲೂನನ್ನು ಊದತೊಡಗಿದಂತೆ ಗೆಲಾಕ್ಸಿ, ನಕ್ಷತ್ರಗಳ ನಡುವಿನ ಸ್ಥಳ ಹಿಗ್ಗುವುದಷ್ಟ್ಟೆ? ವಿಶ್ವದ ವಿಸ್ತಾರವನ್ನು ಹೀಗೆ ಊಹಿಸಿಕೊಳ್ಳಬಹುದು.) ವಿಶ್ವದ ಉಗಮದ ಕೆಲವು ಲಕ್ಷ ವರ್ಷಗಳ ನಂತರ ರೂಪುಗೊಂಡ ಗೆಲಾಕ್ಸಿಗಳು ಹೊರಸೂಸಿದ ಕಿರಣಗಳು ಈ ಅಗಲೀಕರಣ ಕ್ರಿಯೆಯಿಂದಾಗಿ ಅವಗೆಂಪು ಕಿರಣಗಳಾಗಿ (ಇದೇ ರೆಡ್‍ಶಿಫ್ಟ್ ಅಥವಾ ಕೆಂಪುಪಲ್ಲಟ) ಪಸರಿಸುತ್ತಿವೆ. ಆ ಅವಗೆಂಪು ಅಥವಾ ಇನ್‍ಫ್ರಾರೆಡ್ ಕಿರಣಗಳನ್ನು ಜೇಮ್ಸ್ ವೆಬ್ ಗುರುತಿಸಲು ಸಾಧ್ಯವಾದರೆ, ವಿಶ್ವದ ಅಪರಿಚಿತ ಭಾಗಗಳನ್ನು ಪತ್ತೆ ಹಚ್ಚಲು ಸಾಧ್ಯವಾದೀತು.
ಗ್ರಹಗಳು ಹಾಗೂ ಕಂದು ಕುಬ್ಜಗಳಂಥಹ ಕ್ಷೀಣ ಕಾಂತಿಯುಳ್ಳ ಹಾಗೂ ಅತಿ ಶೈತ್ಯದಲ್ಲಿರುವ ಆಕಾಶ ಕಾಯಗಳು ಇನ್ಫ್ರಾರೆಡ್ ಬೆಳಕನ್ನು ಹೊರಹಾಕುತ್ತಿರುತ್ತವೆ. ಅವುಗಳನ್ನು ಗುರುತಿಸಲು ಅವೇ ತರಂಗಾಂತರದ ದೂರದರ್ಶಕಗಳು ಬೇಕು. ಈ ಕಾರ್ಯ ಜೇಮ್ಸ್‍ವೆಬ್‍ನಿಂದ ಸಾಧ್ಯವಾಗಲಿದೆ.
ಅಲ್ಲದೆ ಸಾದಾ ಬೆಳಕಿಗಿಂತ ಹೆಚ್ಚು ತರಂಗಾಂತರವಿರುವ ಅವಗೆಂಪು ಕಿರಣಗಳು ಅಂತರಿಕ್ಷದ ದೂಳು, ಗಾಳಿಗಳ ಮೂಲಕವೂ ಚದುರದೆ, ಸೂಸಿ ಬರುವುದರಿಂದ ಅವುಗಳ ಅಧ್ಯಯನ ದೂರದೂರದ ಅತಿ ಹಳೆಯ ಗೆಲಾಕ್ಸಿಗಳ ಬಗ್ಗೆ, ನೂರಾರು ನಕ್ಷತ್ರಗಳ ಮತ್ತು ಗ್ರಹಗಳ ಉಗಮದ ಬಗ್ಗೆ ನಮಗೆ ವಿವರ ನೀಡಲಿವೆ. ಹಬಲ್ ಗುರುತಿಸಿರುವ ಕಾಯಗಳಿಗಿಂತ ಸುಮಾರು 280 ದಶಲಕ್ಷ ವರ್ಷದಷ್ಟು ಹಳೆಯದಾದ ಕಾಯಗಳನ್ನು ಜೇಮ್ಸ್‍ವೆಬ್ ಕಂಡುಹಿಡಿಯುವ ನಿರೀಕ್ಷೆಯಿದೆ.
ಇಂಥ ಅದ್ವಿತೀಯ ಉಪಕರಣದ ನಿರ್ಮಾತೃ ಅಮೆರಿಕದ ನಾಸಾ ಸಂಸ್ಥೆ ಹಾಗೂ ಯುರೋಪು ಮತ್ತು ಕೆನಡಾದ ಅಂತರಿಕ್ಷ ಸಂಸ್ಥೆಗಳು. ಆಧುನಿಕ ತಂತ್ರಜ್ಞಾನದ ಸಾಮಥ್ರ್ಯಕ್ಕೇ ಸವಾಲಾಗಿರುವ ಜೇಮ್ಸ್‍ವೆಬ್‍ನ ತಾಂತ್ರಿಕ ರಚನೆಗೆ ಒಂದು ಸಾವಿರಕ್ಕೂ ಅಧಿಕ ಇಂಜಿನಿಯರುಗಳು ಕೈ ಹಾಕಿದ್ದಾರೆ.
ಜೇಮ್ಸ್‍ವೆಬ್ ಹಾರಾಟ
ಜೇಮ್ಸ್‍ವೆಬ್‍ನ ಕಕ್ಷೆ ಭೂಮಿಯಿಂದ 15ಲಕ್ಷ ಕಿಮೀ ದೂರದ ‘ಲಾಗ್ರೇಂಜ್ ಬಿಂದು ಐ2’ ವಿನ ಬಳಿ ಸಾಗಲಿದೆ. ಈ ಕಕ್ಷೆಯ ವಿಶೇಷತೆಯೆಂದರೆ ಇಲ್ಲಿ ಹಾರಾಡುವ ವಸ್ತು ಭೂಮಿ ಮತ್ತು ಸೂರ್ಯ ಇವೆರಡರ ಗುರುತ್ವಕ್ಕೊಳಗಾಗುತ್ತದೆ. ಎರಡೂ ಕಡೆಯಿಂದ ಜಗ್ಗುವ ಬಲದಡಿಯಲ್ಲಿ, ದೀರ್ಘ ವೃತ್ತಾಕಾರದ ಕಕ್ಷೆಯಲ್ಲಿ ಚಲಿಸುತ್ತ ಭೂಮಿಯಷ್ಟೇ ವೇಗವಾಗಿ ಅದು ಸೂರ್ಯನನ್ನು ಸುತ್ತು ಹಾಕಲಿದೆ. ಸೂರ್ಯನ ತಾಪ, ಭೂಮಿಯಿಂದ ಪ್ರತಿಫಲನಗೊಂಡ ಕಿರಣಗಳು ಹಾಗೂ ದರ್ಶಕದ ಉಪಕರಣಗಳು ಉಂಟುಮಾಡುವ ವಿಕಿರಣಗಳಿಂದ ರಕ್ಷಣೆ ಪಡೆಯಲು ಟೆನಿಸ್ ಕೋರ್ಟ್‍ನಳತೆಯ ಗಾಳಿಪಟದಂತಿರುವ ‘ತಂಪುಗುರಾಣಿ’(ಸನ್‍ಶೀಲ್ಡ್)ಯೊಂದನ್ನು ಬಳಸಲಾಗುವುದು. ಸೂರ್ಯನ ಬಿಸಿಯನ್ನು ಅಂತರಿಕ್ಷಕ್ಕೆ ಮರಳಿ ಕಳಿಸುವಂತೆ ಆಲ್ಯುಮಿನಿಯಂ ಮತ್ತು ಸಿಲಿಕಾನ್ ಮಿಶ್ರಣದಿಂದ ಮಾಡಿದ ಕೆಪ್ಟಾನ್ ಎಂಬ ವಸ್ತುವಿನ ಐದು ಮಡಿಕೆಗಳ ಗುರಾಣಿ ಇದು. ಇದು ಸೂರ್ಯಕಿರಣಗಳ ಜೊತೆಗೆ ವೇಗವಾಗಿ ಹಾರಾಡುತ್ತಿರುವ ಚಿಕ್ಕ ಪುಟ್ಟ ಬಾಹ್ಯಾಕಾಶ ಕಸಗಳಿಂದಲೂ ರಕ್ಷಣೆ ಪಡೆಯುವ ಸಾಧನವಾಗಲಿದೆ. ಗುರಾಣಿಯ ಒಂದು ಬದಿಗೆ ದರ್ಶಕದ ವೈಜ್ಞಾನಿಕ ಉಪಕರಣಗಳಿದ್ದರೆ, ಇನ್ನೊಂದು ಪಕ್ಕದಲ್ಲಿ ಸಂಪರ್ಕ ಸಾಧನಗಳು ಹಾಗೂ ಸೌರಫಲಕಗಳು ಜೋಡಣೆಗೊಳ್ಳಲಿವೆ. ಹಾರಾಟಕ್ಕೆ ಮುನ್ನ ದರ್ಶಕದ ಈ ಅಂಗವನ್ನು ಪುಟ್ಟದಾಗಿ ಮಡಿಕೆ ಮಾಡಿ ದರ್ಶಕದ ಉಳಿದ ಭಾಗದೊಂದಿಗೆ ಜೋಡಿಸಿಡಲಾಗುವುದು.
ದೂರದರ್ಶಕದ ಮೂಲ ಉದ್ದೇಶವೆಂದರೆ, ದೂರದಿಂದ ಹಾದು ಬರುವ ಬೆಳಕಿನ ಕಿರಣಗಳನ್ನು (ಅಂದರೆ ಚಿತ್ರವನ್ನು) ಸಂಗ್ರಹಿಸಿ, ಅದನ್ನು ದೊಡ್ಡದಾಗಿಸಿ ನಮ್ಮ ಕಣ್ಣಿಗೆ ದಾಟಿಸುವುದು. ನಮಗೆ ಗೋಚರವಾಗುವ ಬೆಳಕನ್ನು ಈ ರೀತಿಯಾಗಿ ಪಡೆಯಬಹುದು ಆದರೆ ವಿದ್ಯುತ್ಕಾಂತೀಯ ರೋಹಿತ ಪಟ್ಟಿಯ ಉಳಿದ ಅಲೆಗಳನ್ನು (ಉದಾಹರಣೆಗೆ, ಇನ್‍ಫ್ರಾರೆಡ್ ಅಥವಾ ಅವಗೆಂಪು ಅಲೆಗಳು) ಪಡೆಯಲು ಸ್ವಲ್ಪ ಬೇರೆಯದೇ ವಿಧಾನವನ್ನು ಬಳಸಲಾಗುತ್ತದೆ. ಅವಗೆಂಪು ಕಿರಣಗಳು ಮೂಲತಃ ಉಷ್ಣಕಿರಣಗಳಾಗಿದ್ದರಿಂದ ಅವುಗಳನ್ನು ದರ್ಪಣಗಳ ಮೂಲಕ ಸಂಗ್ರಹಿಸಿ ಪತ್ತೆಕಾರಿ (ಡಿಟೆಕ್ಟರ್-ವಿಶೇಷವಾದ ಡಿಜಿಟಲ್ ಉಪಕರಣ) ಯ ಮೇಲೆ ಕೇಂದ್ರೀಕರಿಸಿ, ಮುಂದೆ ಕಂಪ್ಯೂಟರ್ ಸಹಾಯದಿಂದ ವಿಶ್ಲೇಷಿಸಲಾಗುತ್ತದೆ. ಈ ಪತ್ತೆಕಾರಿಗಳು ಬೆಳಕಿನ ಸೂಕ್ಷ್ಮಗ್ರಾಹಿಗಳು. ಸುತ್ತಲ ಬೆಳಕು ಪ್ರಭಾವ ಬೀರದಿರಲೆಂದು ಡಿಟೆಕ್ಟರ್‍ಗಳನ್ನು ಅತಿಶೈತ್ಯ ಪರಿಸರದಲ್ಲಿ ಇಡಲಾಗುತ್ತದೆ. ಇದಕ್ಕಾಗಿ ಬಳಸುವ ವಸ್ತು ಸಾರಜನಕ. ಸಾರಜನಕ ಸಾಮಾನ್ಯ ಉಷ್ಣತೆಯಲ್ಲಿ ಅನಿಲ ರೂಪ, ಆದರೆ ಶೀತಲೀಕರಿಸಿದಾಗ ದ್ರವವಾಗುತ್ತದೆ. ಆದ್ದರಿಂದ ದರ್ಪಣಗಳ ಮೂಲಕ ದೂರದರ್ಶಕದ ಒಳನುಗ್ಗುವ ಅವಗೆಂಪು ಕಿರಣಗಳನ್ನು ಹೀರಿಕೊಳ್ಳಲು ಅನುಕೂಲವಾಗುವಂತೆ ಪತ್ತೆಕಾರಿಗಳನ್ನು ಶೈತ್ಯಗೊಳಿಸಿದ (-224ಡಿಗ್ರಿ ಸೆಂಟಿಗ್ರೇಡ್) ಸಾರಜನಕ ದ್ರವದಲ್ಲಿ ಅದ್ದಿಡಲಾಗುತ್ತದೆ.
ದರ್ಪಣ ದೊಡ್ಡದಾದಷ್ಟೂ ಹೆಚ್ಚು ಬೆಳಕನ್ನು ಸಂಗ್ರಹಿಸಲು ಸಾಧ್ಯವಿದೆ. ಆದ್ದರಿಂದಲೇ ಜೇಮ್ಸ್‍ವೆಬ್‍ನ ದರ್ಪಣ ಹಬಲ್ ಗಿಂತ ಐದು ಪಟ್ಟು ದೊಡ್ಡದಿದ್ದು, ಆರು ಮೀಟರ್ ವ್ಯಾಸದ ಫಲಕವಾಗಿ ವಿನ್ಯಾಸಗೊಂಡಿದೆ. ಅಷ್ಟೊಂದು ಅಗಲದ ಮೇಲ್ಮೈನ ಕನ್ನಡಿಯನ್ನು ಈಗಿರುವ ಯಾವ ರಾಕೆಟ್ಟೂ ಉಡಾವಣೆ ಮಾಡುವ ಸಾಮಥ್ರ್ಯ ಹೊಂದಿಲ್ಲ. ಅದಕ್ಕಾಗಿ ಮುಖ್ಯ ದರ್ಪಣವನ್ನು ಷಡ್ಭುಜಾಕೃತಿಯ ಹದಿನೆಂಟು ಬಿಡಿ ಬಿಡಿ ಸರಳ ಕನ್ನಡಿಗಳಾಗಿ ನಿರ್ಮಿಸಲಾಗುವುದು. ದೂರದರ್ಶಕ ಉಪಗ್ರಹ ತನ್ನ ಸ್ಥಾನ ಸೇರಿದ ನಂತರ ಅವೆಲ್ಲವೂ ಬಿಚ್ಚಿಕೊಂಡು ಒಂದಾಗಿ ಮುಂದೆ ಕಾರ್ಯನಿರ್ವಹಿಸಬೇಕು. ಈ ಬಿಡಿ ಕನ್ನಡಿಗಳ ನಕ್ಷೆ, ನಿರ್ಮಾಣ, ಉಡಾವಣೆ ಪ್ರತಿಯೊಂದೂ ಕಾರ್ಯ ಅತ್ಯುತ್ತಮ ತಂತ್ರಜ್ಞಾನ ಕೌಶಲವನ್ನು ಬೇಡುತ್ತಿವೆ. ಇತ್ತೀಚೆಗೆ ತಾನೇ ಮುಗಿದ ಬೆರಿಲಿಯಂ ಲೋಹದ ಕನ್ನಡಿಗಳಿಗೆ ಚಿನ್ನದ ಪಾಲಿಶ್ ಕೆಲಸವೊಂದಕ್ಕೇ ಒಂದು ವರ್ಷ ಕಾಲ ಹಿಡಿದಿದೆ.
ಜೇಮ್ಸ್‍ವೆಬ್ ಕಕ್ಷೆಯನ್ನು ಸೇರಿದ ಮೇಲೆ ಒಂದಾದ ಮೇಲೊಂದರಂತೆ ದರ್ಪಣಗಳು, ತಂಪುಗುರಾಣಿ ಹಾಗೂ ಸೌರಫಲಕಗಳು ಬಿಚ್ಚಿಕೊಳ್ಳಲಿವೆ. ಎಲ್ಲ ಉಪಕರಣಗಳು ಮತ್ತೆ ಮತ್ತೆ ಪರೀಕ್ಷೆಗೊಳಗಾಗುತ್ತಿವೆ. ಒಮ್ಮೆ ಸಿದ್ಧಗೊಂಡಿತೆಂದರೆ ಈ ದೂರದರ್ಶಕವನ್ನು ಏರಿಯನ್ ರಾಕೆಟ್ ಬಾಹ್ಯಾಕಾಶಕ್ಕೆ ಹೊತ್ತೊಯ್ಯಲಿದೆ.
ಭೂಸಮೀಪದ ಕಕ್ಷೆಯಲ್ಲಿ ಹಾರಾಟ ನಡೆಸುತ್ತಿರುವ ಹಬಲ್‍ಗೆ ಅಂತರಿಕ್ಷ ನೌಕೆಯ ಮೂಲಕ ಐದು ಬಾರಿ ತಂತ್ರಜ್ಞರು ಭೇಟಿ ನೀಡಿ ಯಂತ್ರೋಪಕರಣಗಳ ಉಸ್ತುವಾರಿ ನಡೆಸಿದ್ದಾರೆ. ಜೇಮ್ಸ್‍ವೆಬ್ ದುರಸ್ತಿಗೊಳಗಾಯಿತೆಂದರೆ, 15 ಲಕ್ಷ ಕಿಮೀ ದೂರ ಹೋಗಿ ಅದನ್ನು ರಿಪೇರಿ ನಡೆಸುವುದು ಕಷ್ಟ. ಆದ್ದರಿಂದ ಆ ಸೌಲಭ್ಯವನ್ನು ಜೇಮ್ಸ್‍ವೆಬ್‍ಗೆ ಒದಗಿಸಲಾಗಿಲ್ಲ.
ಹಣಕಾಸಿನ ಮುಗ್ಗಟ್ಟನ್ನು ಮುಂದಿಟ್ಟು ಜೇಮ್ಸ್‍ವೆಬ್‍ನ ನಿರ್ಮಾಣವನ್ನು ಒಮ್ಮೆ ಸ್ಥಗಿತಗೊಳಿಸಲಾಗಿತ್ತು. ಆದರೆ ಮುಕ್ಕಾಲು ಪಾಲು ಯಂತ್ರ ನಿರ್ಮಾಣ ಮುಗಿದಿದ್ದ ಜೇಮ್ಸ್‍ವೆಬ್ ಯೋಜನೆ ಮತ್ತೊಮ್ಮೆ ಜೀವದಾನ ಪಡೆದಿದೆ.
ಎಲ್ಲವೂ ನಿರೀಕ್ಷೆಯಂತೆ ನಡೆದರೆ, 680 ಕೋಟಿ ಡಾಲರ್ ವೆಚ್ಚ(!)ದಲ್ಲಿ ನಿರ್ಮಾಣ ಸಂಪೂರ್ಣಗೊಂಡು ಗಗನಕ್ಕೇರಿ ಬಾಹ್ಯ ಆಕಾಶವನ್ನು ನಿಟ್ಟಿಸುವ ಅತ್ಯದ್ಭುತ ಕಲಾಕೃತಿಯಾಗಿ ಜೇಮ್ಸ್ ವೆಬ್ ಹಾರಾಟ ಆರಂಭಿಸಲಿದೆ. ಆದರೆ, 2018 ರವರೆಗೆ ಅದಕ್ಕಾಗಿ ಕಾಯಬೇಕಾಗಿದೆ.
ಸರೋಜ ಪ್ರಕಾಶ್

ಪೌಷ್ಠಿಕ ಮತ್ತು ಸಮತೋಲನ ಆಹಾರ ಮಕ್ಕಳಿಗೆ ಸಿಗಬೇಕು

0

ಪೌಷ್ಠಿಕ ಮತ್ತು ಸಮತೋಲನ ಆಹಾರ ಮಕ್ಕಳಿಗೆ ನೀಡುವಲ್ಲಿ ಶಿಕ್ಷಕರ ಮತ್ತು ಪೋಷಕರ ಪಾತ್ರ ಮಹತ್ವದ್ದು ಎಂದು ವೈದ್ಯರಾದ ಡಾ.ಡಿ.ಕೆ.ರಮೇಶ್ ಅಭಿಪ್ರಾಯಪಟ್ಟರು.
ತಾಲ್ಲೂಕಿನ ಹೊಸಪೇಟೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ಸಂಜೆ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಮಕ್ಕಳ ಮೇಲೆ ಒತ್ತಡ ಹೇರದಂತೆ ಅವರ ಸೃಜನಶೀಲತೆ ಅರಳುವಂತಹ ವಾತಾವರಣವನ್ನು ಶಾಲಾ ಪರಿಸರದಲ್ಲಿ ನಿರ್ಮಾಣ ಮಾಡಬೇಕು. ಉತ್ತಮ ಆರೋಗ್ಯಪೂರ್ಣವಾದ ದೇಹದಲ್ಲಿ ಒಳ್ಳೆಯ ಆಲೋಚನೆಗಳು ತುಂಬಬೇಕು. ದೇಹದ ಆರೋಗ್ಯಕ್ಕೆ ಸಮತೋಲನ ಆಹಾರ, ಮಾನಸಿಕ ಆರೋಗ್ಯಕ್ಕೆ ಒಳ್ಳೆಯ ಮಾರ್ಗದರ್ಶನ ಅಗತ್ಯವಿದೆ. ಗ್ರಾಮೀಣ ಪರಿಸರದಿಂದ ಆತ್ಮಸ್ಥೈರ್ಯವುಳ್ಳ ಪ್ರತಿಭೆಗಳು ಹೊರಹೊಮ್ಮಬೇಕು ಎಂದು ತಿಳಿಸಿದರು.
ರೈತ ಸಂಘದ ಜಿಲ್ಲಾ ಅಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ ಮಾತನಾಡಿ, ನೀರಿನ ಕೊರತೆಯಿಂದ, ಅಂತರ್ಜಲದ ಕುಸಿತದಿಂದ ಆಗುತ್ತಿರುವ ತೊಂದರೆಗಳ ಬಗ್ಗೆ ಆತಂಕ ವ್ಯಕ್ತಪಡಿಸಿ, ಶಾಶ್ವತ ನೀರಾವರಿಗಾಗಿ ಎಲ್ಲರ ಸಹಕಾರವನ್ನು ಕೋರಿದರು.
ಶಾಲಾ ವಿದ್ಯಾರ್ಥಿಗಳು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು. ನಿವೃತ್ತ ಶಿಕ್ಷಕ ನಂದೀಶ್ ಅವರನ್ನು ಸನ್ಮಾನಿಸಿದರು. ನಂದಿನಿ ವಿವಿದೋದ್ದೇಶ ಸಹಕಾರ ಸಂಘದ ಅಧ್ಯಕ್ಷ ಗುಡಿಯಪ್ಪ, ಜಂಗಮಕೋಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಎಂ.ಮುನಿಯಪ್ಪ, ಮಂಜುನಾಥ್, ಜಯಣ್ಣ, ಮುನೇಗೌಡ, ರಮೇಶ್, ಉಮಾ ರವಿಕುಮಾರ್ ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.

ಶ್ರೀ ಸರಸ್ವತಿ ಕಾನ್ವೆಂಟ್ ಶಾಲೆಯ ಕ್ರೀಡಾಪಟುಗಳಿಗೆ ನಗದು ಬಹುಮಾನ

0

ಜಿಲ್ಲೆ ಹಾಗು ವಿಭಾಗ ಮಟ್ಟದ ಕ್ರೀಡೆಗಳಲ್ಲಿ ವಿಜೇತರಾಗಿ ರಾಜ್ಯಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಿದ ನಗರದ ಶ್ರೀ ಸರಸ್ವತಿ ಕಾನ್ವೆಂಟ್ ಶಾಲೆಯ ಕ್ರೀಡಾಪಟುಗಳಿಗೆ ಕ್ಷೇತ್ರಶಿಕ್ಷಣಾಧಿಕಾರಿ ಎಸ್. ರಘುನಾಥರೆಡ್ಡಿ ಇಲಾಖೆಯ ಪರವಾಗಿ ನಗದು ಬಹುಮಾನಗಳನ್ನು ಈಚೆಗೆ ವಿತರಿಸಿದರು.

ಜಂಗಮಕೋಟೆಯ ಮದರ್ ಇಂಡಿಯಾ ಕರಾಟೆ ಕ್ಲಬ್ನ ಕರಾಟೆ ಪಟುಗಳಿಗೆ ಪದಕಗಳು

0

ಶಿಡ್ಲಘಟ್ಟ ತಾಲ್ಲೂಕಿನ ಜಂಗಮಕೋಟೆಯ ಮದರ್ ಇಂಡಿಯಾ ಕರಾಟೆ ಕ್ಲಬ್ನ ಕರಾಟೆ ಪಟುಗಳು ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಆಲ್ ಇಂಡಿಯಾ ಕರಾಟೆ ಡೋ ಫೆಡರೇಷನ್ನ 2ನೇ ರಾಷ್ಟ್ರೀಯ ಮಟ್ಟದ ಕರಾಟೆ ಚಾಂಪಿಯನ್ಷಿಪ್ನಲ್ಲಿ ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಶಿಕ್ಷಕರಾದ ಎಸ್.ಮೊಹಮ್ಮದ್ ಇಲಾಯತ್ತುಲ್ಲಾ ಮತ್ತು ಎಸ್.ನೂರುಲ್ಲಾ ಉಪಸ್ಥಿತರಿದ್ದರು.

ಪಿ.ಎಲ್.ಡಿ.ಬ್ಯಾಂಕಿನ ನಿರ್ದೇಶಕರ ಸ್ಥಾನಗಳಿಗೆ ಉಮೇದುವಾರಿಕೆ ಸಲ್ಲಿಕೆ

0

ತಾಲ್ಲೂಕಿನ ಪ್ರಾಥಮಿಕ ವ್ಯವಸಾಯ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕಿನ ಆಡಳಿತ ಮಂಡಳಿಯ ನಿರ್ದೇಶಕರ ಸ್ಥಾನಗಳಿಗೆ ಫೆಬ್ರವರಿ ೧೫ ರಂದು ನಡೆಯಲಿರುವ ಚುನಾವಣೆಯಲ್ಲಿ ಸ್ಪರ್ಧಿಸಲು ಕಾಂಗ್ರೆಸ್ ಹಾಗೂ ಜೆ.ಡಿ.ಎಸ್ ಬೆಂಬಲಿತ ೨೦ ಮಂದಿ ಅಭ್ಯರ್ಥಿಗಳು ಗುರುವಾರ ನಾಮಪತ್ರಗಳನ್ನು ಸಲ್ಲಿಸಿದ್ದಾರೆ.
ನಗರದ ರೇಷ್ಮೆ ಗೂಡು ಮಾರುಕಟ್ಟೆಯ ರಸ್ತೆಯಲ್ಲಿರುವ ಪಿ.ಎಲ್.ಡಿ.ಬ್ಯಾಂಕಿನ ಕಚೇರಿಯಲ್ಲಿ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ತಹಶೀಲ್ದಾರ್ ಜಿ.ಎ.ನಾರಾಯಣಸ್ವಾಮಿ ಅವರಿಗೆ ಬೆಳಗಿನಿಂದಲೇ ಕಾಂಗ್ರೆಸ್ ಹಾಗೂ ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳು ನಾಮಪತ್ರಗಳನ್ನು ಸಲ್ಲಿಸಿದರು.
ಶಿಡ್ಲಘಟ್ಟ ಟೌನ್ (ಬಿ.ಸಿ.ಎಂ.ಎ) ಅಶ್ವಥ್ಥನಾರಾಯಣ ಟಿ. ೦೧. ಆನೂರು ಕ್ಷೇತ್ರ ಪ.ಜಾ/ಪ.ಪಂ ಬಂಕ್ಮುನಿಯಪ್ಪ ೦೧. ಮೇಲೂರು ಸಾಮಾನ್ಯ ಕ್ಷೇತ್ರ ಎಚ್.ಎಂ.ನಾರಾಯಣಸ್ವಾಮಿ, ೦೧. ಜಂಗಮಕೋಟೆ ಸಾಮಾನ್ಯ ಕ್ಷೇತ್ರ ಕೆ.ಸಿದ್ದಲಿಂಗಪ್ಪ, ಎಂ.ಕೆ. ಬೀಮೇಶ್, ೦೨, ದಿಬ್ಬೂರಹಳ್ಳಿ ಸಾಮಾನ್ಯ ಕ್ಷೇತ್ರ ಅಶ್ವಥ್ಥನಾರಾಯಣರೆಡ್ಡಿ, ಅಶ್ವಥ್ಥನಾರಾಯಣರೆಡ್ಡಿ, ೦೨, ದೊಡ್ಡತೇಕಹಳ್ಳಿ ಸಾಮಾನ್ಯ ಕ್ಷೇತ್ರ ರಾಮಸ್ವಾಮಿ, ಶಿವಾರೆಡ್ಡಿ, ವೆಂಕಟರೆಡ್ಡಿ, ನಾರಾಯಣಸ್ವಾಮಿ, ಶಿವಾರೆಡ್ಡಿ, ೦೫, ಚೀಮಂಗಲ ಕ್ಷೇತ್ರ ಬಿ.ಸಿ.ಎಂ.ಎ ಸಿದ್ದಪ್ಪ, ಬಿ.ವೆಂಕಟೇಶಪ್ಪ ೦೨, ಗಂಜಿಗುಂಟೆ ಸಾಮಾನ್ಯ ಕ್ಷೇತ್ರ ಚಂದ್ರಶೇಖರೆಡ್ಡಿ. ೦೧, ವೈ.ಹುಣಸೇನಹಳ್ಳಿ ಮಹಿಳಾ ಮೀಸಲು ಕ್ಷೇತ್ರ ರತ್ನಮ್ಮ, ೦೧, ಸಾಲಗಾರರಲ್ಲದ ಕ್ಷೇತ್ರ ಪ್ರಭಾಕರರೆಡ್ಡಿ, ಎಂ.ದೇವರಾಜು, ಲೋಕೇಶ್, ನಾರಾಯಣಸ್ವಾಮಿ, ೦೪, ಒಟ್ಟು ೨೦ ನಾಮಪತ್ರಗಳು ಸಲ್ಲಿಕೆಯಾಗಿವೆ.
ಕಳೆದ ಮೂರು ಬಾರಿ ಪಿ.ಎಲ್.ಡಿ. ಬ್ಯಾಂಕಿನ ನಿರ್ದೇಶಕರ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಸ್ಪರ್ಧೆ ನಡೆಸಿ ಸತತವಾಗಿ ಜಯಗಳಿಸಿದ್ದ ಮಾಜಿ ಪಿ.ಎಲ್.ಡಿ.ಬ್ಯಾಂಕ್ ಅಧ್ಯಕ್ಷ ಬಂಕ್ಮುನಿಯಪ್ಪ, ಮಾಜಿ ನಿರ್ದೇಶಕ ರಾಯಪ್ಪಲ್ಲಿ ಅಶ್ವಥ್ಥರೆಡ್ಡಿ ಕೂಡಾ ಈ ಬಾರಿಯೂ ಸ್ಪರ್ಧೆಯಲ್ಲಿದ್ದಾರೆ. ಮುಂಬರುವ ಗ್ರಾಮ ಪಂಚಾಯತಿ ಚುನಾವಣೆಗಳ ಹಿನ್ನೆಲೆಯಲ್ಲಿ ಮಹತ್ವ ಪಡೆದುಕೊಂಡಿರುವ ಈ ಚುನಾವಣೆಯಲ್ಲಿ ಜಯಗಳಿಸಲು ಅಭ್ಯರ್ಥಿಗಳು ಇನ್ನಿಲ್ಲದ ಕಸರತ್ತು ನಡೆಸಲಿದ್ದಾರೆ ಎನ್ನುವ ಮಾತುಗಳು ಎಲ್ಲೆಡೆ ಕೇಳಿಬರುತ್ತಿವೆ.

ಕಣವಾದ ಕಾಂಗ್ರೆಸ್ ಭವನದ ರಸ್ತೆ

0

ತಾಲ್ಲೂಕಿನ ಗ್ರಾಮಗಳಲ್ಲಿ ಎಲ್ಲಾ ಬೆಳೆಗಳ ಕಟಾವು ಮುಗಿದಿದ್ದು ರೈತರು ಕಣ ಸುಗ್ಗಿ ಮಾಡುವಲ್ಲಿ ನಿರತರಾಗಿದ್ದಾರೆ. ತಾಲ್ಲೂಕಿನ ಬಹುತೇಕ ರೈತರಿಗೆ ವಾಹನಗಳು ಸಂಚರಿಸುವ ಟಾರು ರಸ್ತೆಗಳೇ ಕಣಗಳಾಗಿವೆ.
ಅದು ಮುಖ್ಯ ರಸ್ತೆ ಆಗಿರಲಿ, ಸಂಪರ್ಕ ರಸ್ತೆ ಆಗಿರಲಿ, ಗ್ರಾಮಾಂತರ ಪ್ರದೇಶಗಳ ಟಾರ್ ರಸ್ತೆಗಳಾಗಿರಲಿ, ಒಟ್ಟಾರೆ ಅತಿ ಹೆಚ್ಚು ವಾಹನಗಳು ಸಂಚರಿಸುವ ರಸ್ತೆಗಳಾಗಿದ್ದರೆ ಸಾಕು. ಅದೇ ರೈತರಿಗೆ ಕಣ.
ನಗರದ ಕಾಂಗ್ರೆಸ್ ಭವನದ ಮುಂದಿನ ಹೆಚ್ಚು ಸಂಚಾರದ ರಸ್ತೆಯು ಕೂಡ ಕಣವಾಗಿ ಪರಿಣಮಿಸಿದ್ದು ದ್ವಿಚಕ್ರ ವಾಹನ ಚಾಲಕರಿಗೆ ಕಂಟಕವಾಗಿದೆ. ರಸ್ತೆಗಳೇ ಕಣಗಳಾಗಿರುವುದರಿಂದ ರಸ್ತೆಯ ಮೇಲೆ ವಾಹನ ಚಲಿಸುವುದರಿಂದ ಡಿಸೇಲ್, ಪೆಟ್ರೋಲ್ ಮತ್ತು ವಾಹನಗಳ ಹೊಗೆಗಳಿಂದ ಹಾಗೂ ವಾಹನಗಳ ಟೈರುಗಳಿಗೆ ಅಂಟಿದ ಹೊಲಸು ತ್ಯಾಜ್ಯದಿಂದ ಆಹಾರ ಧಾನ್ಯಗಳು ಕಲುಷಿತ ಗೊಳ್ಳುತ್ತಿವೆ. ರಸ್ತೆಯ ಮೇಲೆ ಶಾಲಾ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಸಂಚರಿಸುತ್ತಿದ್ದು, ಕಣಗಳ ಧೂಳಿನಿಂದಾಗಿ ತೊಂದರೆಯಾಗುತ್ತಿದೆ.
ನಗರದ ಪೊಲೀಸ್ ಠಾಣೆಯ ಸಮೀಪವೇ, ಕಾಂಗ್ರೆಸ್ ಭವನದ ಮುಂದೆಯೇ ರಸ್ತೆಯ ಮೇಲೆ ಕಣಗಳನ್ನು ಮಾಡುತ್ತಿರುವುದರಿಂದ ರಸ್ತೆಯಲ್ಲಿ ಸಂಚರಿಸುವ ವಾಹನಗಳು ಆಯಾ ತಪ್ಪಿ ಬೀಳುತ್ತಾ, ಅಪಘಾತಗಳಾಗುತ್ತಿವೆ. ಈ ಬಗ್ಗೆ ಯಾರು ಆಕ್ಷೇಪಣೆ ಮಾಡುತ್ತಿಲ್ಲ. ವಾಹನಗಳು ಸಂಚರಿಸುವ ರಸ್ತೆಗಳಲ್ಲಿ ಯಾವುದೇ ಅಡಚಣೆಗಳಾಗದಂತೆ ರಸ್ತೆ ನಿಯಮಗಳಿರಬೇಕು. ಆದರೆ ಖಣಗಳನ್ನು ಮಾಡುತ್ತಿರುವ ರಸ್ತೆಗಳ ಮೇಲೆಯೇ ಅಧಿಕಾರಿಗಳ ಮತ್ತು ಜನಪ್ರತಿನಿಧಿಗಳ ವಾಹನಗಳು ಸಂಚರಿಸುತ್ತಿದ್ದರೂ ಸಹಾ ಈ ಬಗ್ಗೆ ಯಾರು ಆಕ್ಷೇಪಣೆ ವ್ಯಕ್ತಪಡಿಸುತ್ತಿಲ್ಲ, ರಸ್ತೆ ನಿಯಮಗಳೆಲ್ಲ ಉಲ್ಲಂಘನೆಯಾಗುತ್ತಾ, ಅಮಾಯಕ ವಾಹನ ಸವಾರರು ಏಳುತ್ತಾ, ಬೀಳುತ್ತ ಸಂಚರಿಸುತ್ತಿದ್ದಾರೆ.
ಹಿಂದೆ ಖಣ ಸುಗ್ಗಿ ಎಂದರೆ ಹಗಲು, ರಾತ್ರಿಗಳೆನ್ನದೆ, ದುಂಡಾಗಿರುವ ರೋಣಗಲ್ಲಿಗೆ ಜೋಡೆತ್ತುಗಳನ್ನು ಕಟ್ಟಿಕೊಂಡು ಕಟಾವು ಮಾಡಿದ ಬೆಳೆಗಳನ್ನು ತಂದು ವಿಶಾಲವಾದ ಖಣದಲ್ಲಿ ದುಂಡಾಗಿ ಹರಡಿ ಬೆಳೆಗಳನ್ನು ತುಳಿಸುತ್ತಾ ತಿಂಗಳಾನುಗಟ್ಟಲೆ ಖಣಸುಗ್ಗಿಯನ್ನು ಮಾಡುತ್ತಿದ್ದ ಆ ಕಾಲದಲ್ಲಿ ಬೆಳೆಗಳನ್ನು ತುಳಿಸುವ ಖಣಗಳನ್ನು ಪೂಜ್ಯ ಭಾವನೆಗಳಿಂದ ರೈತರು ಕಾಣುತ್ತಿದ್ದರು. ಈಗ ಅಂತಹ ಕಣಗಳೆಲ್ಲ ಮರೆಯಾಗಿವೆ.
‘ಹಳ್ಳಿಗಳಲ್ಲಿ ಗ್ರಾಮ ಪಂಚಾಯಿತಿಗೆ ಸೇರಿದ ಜಾಗದಲ್ಲಿ ದೀರ್ಘ ಬಾಳಿಕೆಯ ಸರ್ವಋತು ಕಣಗಳನ್ನು ನಿರ್ಮಿಸಬಹುದು. ಇದರಿಂದ ರಸ್ತೆಕಣಗಳಿಂದ ಆಗುವ ಪ್ರಾಣಾಪಾಯಗಳನ್ನು ತಪ್ಪಿಸಬಹುದು. ಈಗ ಡೀಸಲ್ ಚಾಲಿತ ಬೀಜ ಮಾಡುವ ಯಂತ್ರಗಳೂ ಬಂದಿವೆ. ಕೆಲ ಸಂಸ್ಥೆಗಳು ರೈತರಿಗೆ ಉಪಯುಕ್ತ ಯಂತ್ರಗಳನ್ನು ಬಾಡಿಗೆಗೂ ನೀಡುತ್ತಿದ್ದಾರೆ. ಅವನ್ನು ಬಳಸಿಕೊಳ್ಳಬೇಕು. ರಸ್ತೆಯಲ್ಲಿ ಕಣ ಮಾಡುವುದು ಅವೈಜ್ಞಾನಿಕ’ ಎಂದು ರೈತ ಸಂಘದ ಜಿಲ್ಲಾ ಅಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ ಪರ್ಯಾಯ ವ್ಯವಸ್ಥೆಯ ಬಗ್ಗೆ ತಿಳಿಸಿದರು.

ನಿಷೇಧಿತ ಗುಟ್ಕಾ ವಶಪಡಿಸಿಕೊಂಡ ಪೊಲೀಸರು

0

ಆಂಧ್ರದಿಂದ ನಗರಕ್ಕೆ ಸಾಗಾಣಿಕೆ ಮಾಡುತ್ತಿದ್ದ ಸುಮಾರು 80 ಸಾವಿರ ರೂಗಳ ಬೆಲೆಯ ಐದು ಮೂಟೆಯಷ್ಟು ನಿಷೇಧಿತ ಗುಟ್ಕಾ ಕಲೇಜವನ್ನು ಬುಧವಾರ ಪುರ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಮಹಬೂಬ್ ನಗರದ ರೋಷನ್ ಮತ್ತು ಅಕ್ಬರ್ ಪಾಷ ಎಂಬುವರನ್ನು ಬಂಧಿಸಿರುವ ಪೊಲೀಸರು, ಅವರು ಗುಟ್ಕಾ ಸಾಗಿಸುತ್ತಿದ್ದ ವ್ಯಾನ್ ಮತ್ತು ಗುಟ್ಕಾ ಮೂಟೆಗಳನ್ನು ಅಮಾನತ್ತುಪಡಿಸಿಕೊಂಡಿದ್ದಾರೆ.
ತಿರುಪತಿಯಿಂದ ಚಿಕ್ಕಬಳ್ಳಾಪುರಕ್ಕೆ ಬರುವ ಖಾಸಗಿ ಬಸ್ಸಿನಲ್ಲಿ ನಿಷೇಧಿತ ಗುಟ್ಕಾವನ್ನು ಸಾಗಿಸಿ, ನಗರದ ಹೊರವಲಯದ ಬೂದಾಳ ಗೇಟ್ ಬಳಿ ಇಳಿಸಿಕೊಂಡು, ಅಲ್ಲಿಂದ ಮಾರುತಿ ವ್ಯಾನ್ಗೆ ತುಂಬಿ ತರುವಾಗ ಪೊಲೀಸರು ಧಾಳಿ ನಡೆಸಿದ್ದಾರೆ.
5feb2ಧಾಳಿಯಲ್ಲಿ ಸರ್ಕಲ್ ಇನ್ಸ್ಪೆಕ್ಟರ್ ಶ್ರೀನಿವಾಸಮೂರ್ತಿ, ಸಬ್ ಇನ್ಸ್ಪೆಕ್ಟರ್ ಪುರುಷೋತ್ತಮ್ ಮತ್ತು ಸಿಬ್ಬಂದಿ ಭಾಗವಹಿಸಿದ್ದರು. ಜಿಲ್ಲಾ ಅಂಕಿತ ಅಧಿಕಾರಿ ಮಹದೇವಶೆಟ್ಟಿ ಭೇಟಿ ನೀಡಿದ್ದರು.
ತಂಬಾಕು ಮತ್ತು ನಿಕೋಟಿನ್ ಘಟಕಾಂಶಗಳನ್ನೊಳಗೊಂಡ ಗುಟ್ಕಾ ಮತ್ತು ಪಾನ್ ಮಸಾಲ ಆಹಾರ ಪದಾರ್ಥಗಳ ಸೇವನೆಯಿಂದ ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತಿದೆ. ಕರುಳು, ಶ್ವಾಸಕೋಶ, ಹೃದಯಕ್ಕೆ ಸಂಬಂಧಿಸಿದಂತೆ ಹಾಗೂ ಕ್ಯಾನ್ಸರ್ ರೋಗಗಳಿಗೆ ಸಾರ್ವಜನಿಕರು ಬಲಿಯಾಗುತ್ತಿದ್ದಾರೆ. ಇದು ಸಾಮಾಜಿಕ ಮತ್ತು ಆರ್ಥಿಕ ವ್ಯವಸ್ಥೆಯ ಮೇಲೆ ದುಷ್ಪರಿಣಾಮ ಬೀರುವುದನ್ನು ಗಮನಿಸಿ ಸರ್ಕಾರ ನಿಷೇಧವನ್ನು ಜಾರಿಗೊಳಿಸಿದೆ. ರಾಜ್ಯದಲ್ಲಿ ಗುಟ್ಕಾ ನಿಷೇಧಿಸಿ ಎರಡು ವರ್ಷ ಕಳೆದಿದ್ದರೂ ತಾಲ್ಲೂಕಿನಾದ್ಯಂತ ಖಲೇಜಾ ಎಂಬ ಹೆಸರಿನಲ್ಲಿ ಗುಟ್ಕಾ ಮಾರಾಟ ನಿರಂತರವಾಗಿ ನಡೆಯುತ್ತಿತ್ತು. ಕಟ್ಟುನಿಟ್ಟಿನ ಕ್ರಮ ಕೈಗೊಂಡು ಈ ರೀತಿಯ ಧಾಳಿಗಳನ್ನು ಮೊದಲೇ ಪೊಲೀಸರು ನಡೆಸಬೇಕಿತ್ತು ಎಂಬ ಮಾತು ಸಾರ್ವಜನಿಕರಲ್ಲಿ ಕೇಳಿ ಬಂದಿತು.

ಹೊಸಪೇಟೆ ಗ್ರಾಮ ಪಂಚಾಯತಿಯ ಅಧ್ಯಕ್ಷರಾಗಿ ಉಮಾ ರವಿಕುಮಾರ್ ಆಯ್ಕೆ

0

ಶಿಡ್ಲಘಟ್ಟ ತಾಲ್ಲೂಕಿನ ಹೊಸಪೇಟೆ ಗ್ರಾಮ ಪಂಚಾಯತಿಯ ಅಧ್ಯಕ್ಷ ಸ್ಥಾನಕ್ಕೆ ಮಂಗಳವಾರ ಚುನಾವಣೆ ನಡೆದು, ಉಮಾ ರವಿಕುಮಾರ್ ನೂತನ ಅಧ್ಯಕ್ಷೆಯಾಗಿ ಆಯ್ಕೆಯಾಗಿದ್ದಾರೆ.

ಕೊತ್ತನೂರು ಭೂನೀಳಾ ಸಮೇತ ಚನ್ನಕೇಶವಸ್ವಾಮಿ ದೇವಾಲಯದಲ್ಲಿ ತಿರುಕಲ್ಯಾಣ ಮಹೋತ್ಸವ

0

ತಾಲ್ಲೂಕಿನ ಕೊತ್ತನೂರು ಗ್ರಾಮದ ಭೂನೀಳಾ ಸಮೇತ ಚನ್ನಕೇಶವಸ್ವಾಮಿ ದೇವಾಲಯದಲ್ಲಿ ಈಚೆಗೆ ಮಹಾ ಸುದರ್ಶನ ಹೋಮ ಹಾಗೂ ತಿರುಕಲ್ಯಾಣ ಮಹೋತ್ಸವ ಕಾರ್ಯಕ್ರಮವನ್ನು ಬಹಳ ವಿಜೃಂಭಣೆಯಿಂದ ನಡೆಸಲಾಯಿತು.
ತಾಲ್ಲೂಕಿನ ಕೊತ್ತನೂರು ಗ್ರಾಮದಲ್ಲಿನ ದೇವಾಲಯದಲ್ಲಿ ಎರಡು ದಿನಗಳ ಕಾಲ ನಾನಾ ವಿದವಾದ ಪೂಜಾ ಕಾರ್ಯಗಳನ್ನು ಕೈಗೊಂಡಿದ್ದು ಮಹಾ ಸುದರ್ಶನ ಹೋಮ ಹಾಗೂ ತಿರುಕಲ್ಯಾಣ ಮಹೋತ್ಸವವನ್ನು ನಡೆಸಲಾಯಿತು. ಸುತ್ತಮುತ್ತಲಿನ ಗ್ರಾಮಗಳಿಂದ ನೂರಾರು ಮಂದಿ ಭಕ್ತರು ಪೂಜಾ ಕಾರ್ಯದಲ್ಲಿ ಪಾಲ್ಗೊಂಡಿದ್ದರು.
ದೇವಾಲಯದ ಪ್ರಧಾನ ಅರ್ಚಕ ಚನ್ನಕೇಶವಾಚಾರ್ ಹಾಗೂ ತಂಡದವರಿಂದ ಮುಂಜಾನೆ ಸೂರ್ಯೋದಯಕ್ಕೂ ಮುನ್ನವೇ ಸ್ವಸ್ತಿವಾಚನ, ಅನುಜ್ಞೆ, ವಿಶ್ವಕ್ಷೇನ ಪೂಜೆ, ಭಗವತ್ ವಾಸುದೇವ ಪುಣ್ಯಾಹವಾಚನ, ರಕ್ಷಾ ಬಂಧನ, ಕಳಶಾರಾಧನೆ ಮಾಡಿ ನಂತರ ಶ್ರೀ ಮಹಾ ಸುದರ್ಶನ ಹೋಮವನ್ನು ನಡೆಸಿದರು. ಆ ನಂತರ ಸುಪ್ರಭಾತ ಸೇವೆ, ವೇದ ಪಾರಾಯಣ, ವಿಶೇಷ ಫಲಪಂಚಾಮೃತಾಭಿಷೇಕ, ಅಲಂಕಾರ ಸೇವೆಯನ್ನು ಮಾಡಿ ಭೂನೀಳಾ ಸಮೇತ ಚನ್ನಕೇಶವ ಸ್ವಾಮಿಗೆ ತಿರು ಕಲ್ಯಾಣ ಮಹೋತ್ಸವವನ್ನು ನೆರವೇರಿಸಲಾಯಿತು.