19.1 C
Sidlaghatta
Tuesday, December 10, 2024

ಚಟುವಟಿಕೆಗಳಿರಲಿ ಚುರುಕುತನಕ್ಕೆ!

- Advertisement -
- Advertisement -

ಚುರುಕುತನ ಎಂದರೇನು? : ಯಾವ ವಿಷಯವೇ ಆಗಲಿ ನಮ್ಮ ಪ್ರತಿಕ್ರಿಯೆಯು ನಿರೀಕ್ಷಣೆ ಮಟ್ಟಕ್ಕೆ ಇದ್ದು ಅದರಿಂದ ಇಡೀ ಘಟನೆಗೆ ಉಪಯುಕ್ತವೆನಿಸಿದರೆ ಅದನ್ನು ಚುರುಕುತನ ಎನ್ನಬಹುದು. ಉದಾಹರಣೆಗೆ ರಾಮಾಯಣದ ಹನುಮಂತನಿಗೆ ಶ್ರೀರಾಮನು ಯಾವುದೇ ಜವಾಬ್ದಾರಿಯನ್ನು ವಹಿಸಿದಾಗ ವಿಷಯವನ್ನು ಸಮಗ್ರವಾಗಿ ಅರಿತು ಜವಾಬ್ದಾರಿಯನ್ನು ಯಾವುದೇ ಚ್ಯುತಿ ಇಲ್ಲದೆ ನಿರ್ವಹಿಸುತ್ತಿದ್ದನಂತೆ. ಇವನಂತೆ ನಾವು ಚುರುಕಾಗಿರಬೇಕು.
1. ಸದಾ ಯಾವುದಾದರೂ ಚಟುವಟಿಕೆಗಳಲ್ಲಿನಿಮ್ಮನ್ನು ತೊಡಗಿಸಿಕೊಳ್ಳಿರಿ.
2. ಆಟ-ಪಾಠಗಳ ಹೊರತಾಗಿ ನಿಮಗೆ ಆಸಕ್ತಿಯಿರುವ ಯಾವುದಾದರೂ ಕಲೆ, ಲಲಿತಕಲೆಗಳಲ್ಲಿನಿಮ್ಮನ್ನುತೊಡಗಿಸಿಕೊಳ್ಳಿರಿ.
3. ಮನೆಯ ಅಥವಾ ಶಾಲೆಯ ಸುತ್ತಮುತ್ತಲಿನ ಕೈತೋಟದ ಕೆಲಸಗಳನ್ನು ನಿರ್ವಹಿಸಿ. ಇದರಿಂದ ನಿಮಗೆ ತರಕಾರಿ, ಹೂವು, ಸೊಪ್ಪು, ಸಸ್ಯಗಳ ಬಗ್ಗೆ ಜ್ಞಾನವು ದೊರೆಯುತ್ತದೆ.
4. ಸಂಗೀತ, ನೃತ್ಯ, ಚಿತ್ರಕಲೆ, ಸಂಗೀತವಾದ್ಯ, ಶಿಲ್ಪಕಲೆ ಹೀಗೆ ಯಾವುದಾದರೂ ಒಂದು ನಿಮಗಿಷ್ಟವಾದ ಕಲೆಯನ್ನು ರೂಡಿಸಿಕೊಳ್ಳುವುದು ಒಳ್ಳೆಯದು.
5. ಬಾಲಕಿಯರಾದರೆ ಹೊಲಿಗೆ, ಕಸೂತಿ, ರಂಗೋಲಿ-ಮೊದಲಾದ ಕಲೆಗಳನ್ನು ಕಲೆಯಬಹುದು.
6. ಅಂಚೆ ಚೀಟಿಗಳು, ನಾಣ್ಯಗಳು, ಬೆಂಕಿಪಟ್ಟಣಗಳು, ಅಪರೂಪದ ವ್ಯಕ್ತಿಗಳ ಅಥವಾ ಪ್ರಕೃತಿಯ ದೃಶ್ಯಗಳು ಮೊದಲಾದುವುಗಳನ್ನು ಸಂಗ್ರಹಿಸುವ ಅಭ್ಯಾಸವು ನಿಮ್ಮ ಸಾಮಾನ್ಯಜ್ಞಾನವನ್ನು ಹೆಚ್ಚಿಸುತ್ತದೆ. ನಿಮ್ಮ ಬೌದ್ಧಿಕ ಬೆಳವಣಿಗೆಗೆ ಪೂರಕವಾಗುತ್ತದೆ.
7. ಪಕ್ಷಿ ವೀಕ್ಷಣೆ, ಪ್ರಕೃತಿ ವೀಕ್ಷಣೆ, ಉದ್ಯಾನವನದಲ್ಲಿ ನಡಿಗೆ, ಓದುವುದು ಮೊದಲಾದ ಅಭ್ಯಾಸಗಳು ನಿಮಗೆ ಸಂತೋಷವನ್ನು ತಂದುಕೊಡುತ್ತದೆ.
8. ಹೊಸ ಭಾಷೆಯನ್ನು ಕಲಿಯುವುದು, ಅನುಕರಣೀಯ ಸ್ವಭಾವದ ಹೊಸ ಹೊಸ ಗೆಳೆಯರನ್ನು ಪರಿಚಯ ಮಾಡಿಕೊಳ್ಳುವುದು ಇವೆಲ್ಲಾ ನಮ್ಮ ವ್ಯಕ್ತಿತ್ವವನ್ನು ಧನಾತ್ಮಕವಾಗಿ ಮಾರ್ಪಾಡಿಸುವ ಅಭ್ಯಾಸಗಳು.
9. ಪ್ರತಿದಿನ ಒಂದು ಕನ್ನಡ ಪತ್ರಿಕೆ ಮತ್ತು ಆಂಗ್ಲ ಪತ್ರಿಕೆಯನ್ನು ಅವಲೋಕಿಸುವುದು ಒಳ್ಳೆಯದು. ಅದರಲ್ಲೂ ಸಂಪಾದಕೀಯ, ದೀರ್ಘಲೇಖನ, ಪದಬಂಧ ಮುಂತಾದ ವಿಭಾಗಗಳಿಗೆ ಲಕ್ಷ್ಯವನ್ನು ಕೊಟ್ಟರೆ ನಿಮ್ಮ ಜ್ಞಾನದ ಮಟ್ಟ ಹೆಚ್ಚುವುದರಲ್ಲಿ ಸಂದೇಹವೇ ಇಲ್ಲ.
10. ಅನುಕರಣೀಯ ಮತ್ತು ಉತ್ತಮ ಸಾಧನೆಗಳನ್ನು ಮಾಡಿದ ಮಹಾಪುರುಷರ ಜೀವನಚರಿತ್ರೆಗಳನ್ನು ಅಭ್ಯಸಿಸುವುದರಿಂದ ನಮ್ಮ ಜೀವನಕ್ಕೆ ಒಂದು ನಿರ್ದಿಷ್ಟ ಗುರಿ ದೊರೆಯುತ್ತದೆ. ರಾಮಕೃಷ್ಣ ಪರಮಹಂಸರು, ಶಾರದಾದೇವಿ, ಸ್ವಾಮಿ ವಿವೇಕಾನಂದರು, ಸಹೋದರಿ ನಿವೇದಿತಾ, ಸರ್.ಸಿ.ವಿ. ರಾಮನ್, ಮೇಡಂ ಕ್ಯೂರಿ, ಸರ್.ಐಸ್ಯಾಕ್ ನ್ಯೂಟನ್, ಆಲ್ಬರ್ಟ್ ಐನ್‍ಸ್ಟೈನ್ ಮೊದಲಾದ ಮಹಾವ್ಯಕ್ತಿಗಳ ಜೀವನಚರಿತ್ರೆಯನ್ನು ಸಂಗ್ರಹಿಸಿ ಗಮನವಿಟ್ಟು ಓದಿರಿ. ನಿಮಗೆ ಅದರಲ್ಲಿ ಕಂಡು ಬಂದ ಒಳ್ಳೆಯ ಗುಣಗಳನ್ನು ಅಥವಾ ಅಭ್ಯಾಸಗಳನ್ನು ನೀವೂ ಅನುಕರಿಸಲು ಪ್ರಯತ್ನಿಸಿರಿ.
11. ಪ್ರತಿ ದಿನ ಇಂಗ್ಲಿಷ್, ಕನ್ನಡ, ಸಂಸ್ಕøತ, ಹಿಂದಿ ಮೊದಲಾದ ಭಾಷೆಗಳ ಒಂದು ಹೊಸ ಪದ ಕಲೆಯಲು, ಕಲೆತ ಹೊಸ ಶಬ್ದವನ್ನು ಬಳಸಲು ಪ್ರಯತ್ನಿಸಿ. ನಿಮ್ಮ ಭಾಷೆಯು ಉತ್ತಮಗೊಳ್ಳುತ್ತದೆ. ನಿಮ್ಮ ಶಬ್ದಭಂಡಾರ ಶ್ರೀಮಂತವಾಗುತ್ತದೆ. ನೀವು ಉತ್ತಮ ವಾಗ್ಮಿಗಳಾಗುತ್ತೀರಿ.
12. ಶಾಲೆಯಲ್ಲಿ ನಡೆಯುವ ಇಲ್ಲ ರೀತಿಯ ಕ್ರೀಡಾ-ಸಾಂಸ್ಕøತಿಕ-ಸಾಹಿತ್ಯ ಸ್ಪರ್ಧೆಗಳಲ್ಲಿ ಉತ್ಸಾಹದಿಂದ ಭಾಗವಹಿಸಿರಿ. ಆದರೆ ಬಹುಮಾನದ ನಿರೀಕ್ಷೆಯಿಂದ ಭಾಗವಹಿಸಬೇಡಿರಿ.
13. ವರ್ಷಕ್ಕೊಮ್ಮೆ ಪ್ರೇಕ್ಷಣೀಯ ಸ್ಥಳಗಳಿಗೆ ಭೇಟಿಕೊಡಲು ಸಾಧ್ಯವಾದರೆ ಒಳ್ಳೆಯದು ಹಾಗೂ ಆ ಸ್ಥಳದ ಸಂಪೂರ್ಣ ಮಾಹಿತಿಯನ್ನು ಬರೆದುಕೊಂಡು ಸಂಗ್ರಹಿಸಿರಿ.
ಡಾ. ಶ್ರೀವತ್ಸ

Subscribe to ನಮ್ಮ ಶಿಡ್ಲಘಟ್ಟ Newspaper

Launching Soon! Register for your Free Newspaper Copy Today.

- Advertisement -

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.
Captcha verification failed!
CAPTCHA user score failed. Please contact us!
error: Content is protected !!