ನಗರದ ತಾಲ್ಲೂಕು ಕಛೇರಿಯ ಪಕ್ಕದಲ್ಲಿ ತಾತ್ಕಾಲಿಕವಾಗಿ ನಿರ್ಮಾಣ ಮಾಡಲಾಗಿರುವ ಅಗ್ನಿಶಾಮಕ ಠಾಣೆಯ ವಾಹನಗಳ ನಿಲುಗಡೆ ಜಾಗವು ಈಗ ಖಾಸಗಿ ವ್ಯಕ್ತಿಗಳ ಕಾರು ಪಾರ್ಕಿಂಗ್ ಜಾಗವಾಗಿ ಪರಿಣಮಿಸಿದೆ ಎಂದು ಸಾರ್ವಜನಿಕರು ಅಸಮಧಾನ ವ್ಯಕ್ತಪಡಿಸುತ್ತಿದ್ದಾರೆ.
ನಗರದ ತಾಲ್ಲೂಕು ಕಛೇರಿಯ ಪಕ್ಕದಲ್ಲೆ ಇರುವ ಹಳೆಯ ತಾಲ್ಲೂಕು ಕಚೇರಿಯ ಕಟ್ಟಡಲ್ಲಿ ಕೆಲ ಕಾಲ ನ್ಯಾಯಾಲಯವನ್ನಾಗಿ ಮಾಡಿಕೊಳ್ಳಲಾಗಿತ್ತು, ನಂತರ ನೂತನ ನ್ಯಾಯಾಲಯದ ಕಟ್ಟಡ ಉದ್ಘಾಟನೆಗೊಂಡ ನಂತರ, ಹಳೇಯ ಕಟ್ಟಡವನ್ನು ತಾತ್ಕಾಲಿಕವಾಗಿ ಅಗ್ನಿಶಾಮಕ ಠಾಣೆಗೆ ಬಳಕೆ ಮಾಡಿಕೊಳ್ಳಲು ತೀರ್ಮಾನ ಮಾಡಿಕೊಂಡು, ಮುಂಭಾಗದಲ್ಲಿದ್ದ ಬೃಹತ್ ಗಾತ್ರದ ಮರಗಳನ್ನು ಕಡಿದು ತೆರವುಗೊಳಿಸಿ, ಲಕ್ಷಾಂತರ ರೂಪಾಯಿಗಳ ವೆಚ್ಚದಲ್ಲಿ ಶೆಡ್ ನಿರ್ಮಾಣ ಮಾಡಲಾಗಿದೆ. ನೆಲಕ್ಕೆ ಕಾಂಕ್ರೀಟ್‌ನ್ನು ಹಾಕಲಾಗಿದೆ. ತಾಲ್ಲೂಕು ಕಚೇರಿ, ತೋಟಗಾರಿಕೆ ಇಲಾಖೆ, ತಾಲ್ಲೂಕು ಪಂಚಾಯತಿ, ಕೃಷಿ ಇಲಾಖೆ ಹಾಗೂ ಪೊಲೀಸ್ ಠಾಣೆಗಳಿಗೆ ಬರುವಂತಹ ಜನರ ಕಾರುಗಳ ನಿಲುಗಡೆಯ ಜಾಗವಾಗಿ ಮಾರ್ಪಟ್ಟಿದೆ. ಇದುವರೆಗೂ ಅಗ್ನಿಶಾಮಕ ವಾಹನಗಳು ಬರಲಿಲ್ಲವೆಂದು ಸ್ಥಳೀಯ ನಾಗರಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಂಬಂಧಪಟ್ಟ ಇಲಾಖಾಧಿಕಾರಿಗಳು, ಈ ಕಡೆಗೆ ಗಮನಹರಿಸಿ, ಶೆಡ್‌ನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಜನರ ಒತ್ತಾಯವಾಗಿದೆ.
- Advertisement -
- Advertisement -
- Advertisement -







