35.1 C
Sidlaghatta
Friday, March 29, 2024

ಆರನೇ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನ

- Advertisement -
- Advertisement -

ನಗರದ ಶ್ರೀ ವಾಸವಿ ಕಲ್ಯಾಣ ಮಂಟಪದಲ್ಲಿ ಮಾರ್ಚ್‌ 10ರಂದು ಆರನೇ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನವನ್ನು ಆಯೋಜಿಸಲಾಗಿದೆ.
ಬೆಳಿಗ್ಗೆ 8 ಗಂಟೆಗೆ ಧ್ವಜಾರೋಹಣ ಕಾರ್ಯಕ್ರಮವಿದ್ದು, ರಾಷ್ಟ್ರಧ್ವಜವನ್ನು ತಹಶೀಲ್ದಾರ್‌ ಎಸ್‌.ಅಜಿತ್‌ಕುಮಾರ್‌ ರೈ, ನಾಡಧ್ವಜವನ್ನು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಣಾಧಿಕಾರಿ ಎಂ.ವೆಂಕಟೇಶ್‌, ಪರಿಷತ್ತಿನ ಧ್ವಜವನ್ನು ಕಸಾಪ ತಾಲ್ಲೂಕು ಅಧ್ಯಕ್ಷ ಬಿ.ಆರ್‌.ಅನಂತಕೃಷ್ಣ ಆರೋಹಣ ಮಾಡಲಿದ್ದಾರೆ. ನಾಡಗೀತೆಯನ್ನು ಆಶಾಕಿರಣ ಅಂಧ ಮಕ್ಕಳ ಶಾಲೆ ವಿದ್ಯಾರ್ಥಿಗಳು ನಡೆಸಿಕೊಡುವರು.
ತಾಯಿ ಭುವನೇಶ್ವರಿ ಹಾಗೂ ಸಮ್ಮೇಳನಾಧ್ಯಕ್ಷರ ಮೆರವಣಿಗೆಯನ್ನು ಬೆಳಿಗ್ಗೆ 9.30 ಗಂಟೆಗೆ ನಗರದ ಬಸ್‌ ನಿಲ್ದಾಣದಿಂದ ಆಯೋಜಿಸಲಾಗಿದೆ. ಮೆರವಣಿಗೆಯ ಚಾಲನೆಯನ್ನು ಸರ್ಕಲ್‌ ಇನ್ಸ್‌ಪೆಕ್ಟರ್‌ ಟಿ.ಸಿ.ವೆಂಕಟೇಶ್‌ ನೀಡಲಿದ್ದಾರೆ.
ಉದ್ಘಾಟನಾ ಸಮಾರಂಭವನ್ನು ಬೆಳಿಗ್ಗೆ 11 ಗಂಟೆಗೆ ವಾಸವಿ ಕಲ್ಯಾಣ ಮಂಟಪದಲ್ಲಿ ‘ನೇಗಿಲ ಯೋಗಿ ಅನ್ನದಾತ ವೇದಿಕೆ’ಯಲ್ಲಿ ಆಯೋಜಿಸಲಾಗಿದೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕ ಎಂ.ರಾಜಣ್ಣ ವಹಿಸಲಿದ್ದಾರೆ. ಸಮ್ಮೇಳನಕ್ಕೆ ಚಾಲನೆಯನ್ನು ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಪಿ.ಎನ್‌.ಕೇಶವರೆಡ್ಡಿ ನೀಡಲಿದ್ದಾರೆ. ಸಾಂಸ್ಕೃತಿಕ ಕಾರ್ಯಕ್ರಮದ ಉದ್ಘಾಟನೆಯನ್ನು ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ನಿರ್ಮಲ ಮುನಿರಾಜು ಮಾಡುವರು. ಭುವನೇಶ್ವರಿ ಭಾವಚಿತ್ರ ಅನಾವರಣವನ್ನು ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಕೆ.ಲಕ್ಷ್ಮೀನಾರಾಯಣ, ಪುಸ್ತಕ ಮಳಿಗೆಯ ಉದ್ಘಾಟನೆಯನ್ನು ಕಸಾಪ ಜಿಲ್ಲಾಧ್ಯಕ್ಷ ಕೈವಾರ ಎನ್‌.ಶ್ರೀನಿವಾಸ್‌ ನೆರವೇರಿಸುವರು.
ಡಿ.ಜಿ.ಮಲ್ಲಿಕಾರ್ಜುನ ಅವರ ‘ನಮ್ಮ ಶಿಡ್ಲಘಟ್ಟ’ ಪುಸ್ತಕ ಬಿಡುಗಡೆಯಾಗಲಿದ್ದು, ಪುಸ್ತಕ ಕಿರು ಪರಿಚಯ ಮತ್ತು ಸಮ್ಮೇಳನಾಧ್ಯಕ್ಷರ ಪರಿಚಯವನ್ನು ಸಾಹಿತಿ ಸ.ರಘುನಾಥ ಮಾಡುವರು.
ನಿಕಟಪೂರ್ವ ಅಧ್ಯಕ್ಷ ಎನ್‌.ಶಿವಣ್ಣ ಅವರಿಂದ ಪರಿಷತ್ತಿನ ಧ್ವಜ ಹಸ್ತಾಂತರಿಸಲಾಗುವುದು. ನಂತರ ಸಮ್ಮೇಳನಾಧ್ಯಕ್ಷರ ಭಾಷಣ ಇರುತ್ತದೆ.
ಮಧ್ಯಾಹ್ನ 2 ಗಂಟೆಗೆ ವಿದ್ಯಾರ್ಥಿ ಕವಿಗೋಷ್ಠಿ ನಡೆಯಲಿದೆ. ಕವಿಗೋಷ್ಠಿಯ ಅಧ್ಯಕ್ಷತೆಯನ್ನು ಶಿಕ್ಷಕಿ ಎಂ.ಎಸ್‌.ವಿದ್ಯಾ ವಹಿಸಲಿದ್ದಾರೆ. ತಾಲ್ಲೂಕಿನ ವಿವಿಧ ಶಾಲೆಗಳ 13 ಮಂದಿ ವಿದ್ಯಾರ್ಥಿ ಕವಿಗಳು ಕವನ ವಾಚಿಸುವರು.
ಮಧ್ಯಾಹ್ನ 3 ಗಂಟೆಗೆ ಕಲಿಯುವ ಕೈಗೆ ಓದುವ ಪುಸ್ತಕ ‘ನನ್ನ ಮೆಚ್ಚಿನ ಪುಸ್ತಕ’ ಕಾರ್ಯಕ್ರಮವಿದ್ದು, ಕಸಾಪ ಮಾಜಿ ಜಿಲ್ಲಾಧ್ಯಕ್ಷ ಎಸ್‌.ವಿ.ನಾಗರಾಜರಾವ್‌ ಅಧ್ಯಕ್ಷತೆಯನ್ನು ವಹಿಸುವರು. ಆರು ಮಂದಿ ವಿದ್ಯಾರ್ಥಿಗಳು ತಾವು ಮೆಚ್ಚಿ ಓದಿದ ಪುಸ್ತಕದ ಬಗ್ಗೆ ಮಾತನಾಡುವರು.
ಮಧ್ಯಾಹ್ನ 3.30 ಗಂಟೆಗೆ ಗೋಷ್ಠಿ ನಡೆಯಲಿದ್ದು, ‘ಮಹಿಳಾ ಸಬಲೀಕರಣ’ದ ಬಗ್ಗೆ ರಾಜ್ಯ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯ ಸಹಾಯಕ ಆಯುಕ್ತೆ ಪಿ.ವಿ.ಪೂರ್ಣಿಮಾ ವಿಷಯ ಮಂಡಿಸುವರು. ಗೋಷ್ಠಿಯ ಅಧ್ಯಕ್ಷತೆಯನ್ನು ಸಹಾಯಕ ಶಿಶು ಅಭಿವೃದ್ಧಿ ಅಧಿಕಾರಿ ಲಕ್ಷ್ಮೀದೇವಮ್ಮ ವಹಿಸುವರು.
ಮಧ್ಯಾಹ್ನ 4 ಗಂಟೆಗೆ ಗೋಷ್ಠಿ ನಡೆಯಲಿದ್ದು, ‘ನೀರಿಗಾಗಿ ಪರಿತಪಿಸುತ್ತಿರುವ ಬಯಲು ಸೀಮೆಯ ಜನ’ ಎಂಬ ವಿಷಯವಾಗಿ ನೀರಾವರಿ ಹೋರಾಟಗಾರ ಮಳ್ಳೂರು ಹರೀಶ್‌ ವಿಷಯ ಮಂಡಿಸುವರು. ಗೋಷ್ಠಿಯ ಅಧ್ಯಕ್ಷತೆಯನ್ನು ಬಿ.ಜಿ.ಎಸ್‌ ವಿದ್ಯಾಸಂಸ್ಥೆಯ ಪ್ರಾಂಶುಪಾಲ ಕೆ.ಮಹದೇವ್‌ ವಹಿಸುವರು.
ಸಂಜೆ 4.45 ಗಂಟೆಗೆ ಸನ್ಮಾನ ಕಾರ್ಯಕ್ರಮವಿದ್ದು, ಅಧ್ಯಕ್ಷತೆಯನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಎಸ್‌.ರಘುನಾಥರೆಡ್ಡಿ ವಹಿಸುವರು. ತಾಲ್ಲೂಕು ಕಸಾಪ ಮಾಜಿ ಅಧ್ಯಕ್ಷರಾದ ರೂಪಸಿ ರಮೇಶ್‌ ಮತ್ತು ಕೆ.ಎಂ.ವಿನಾಯಕ ಅವರೊಂದಿಗೆ ಶ್ರೀನಿವಾಸರಾವ್‌(ವಿಜ್ಞಾನಿ), ಡಾ.ರಮೇಶ್‌(ವೈದ್ಯಕೀಯ), ಎನ್‌.ಕೃಷ್ಣಮೂರ್ತಿ(ಶಿಕ್ಷಣ ಸಂಸ್ಥೆ), ಎನ್‌.ಮುನಿನಾರಾಯಣಪ್ಪ(ನಾದಸ್ವರ), ಮೇಲೂರು ಎಂ.ಆರ್‌.ಪ್ರಭಾಕರ್‌(ಅಂಚೆಚೀಟಿ ಸಂಗ್ರಹಣೆ), ದೇವರಮಳ್ಳೂರು ಯಶೋದಮ್ಮ(ರಂಗಭೂಮಿ), ಲತಾ ಮಂಜುನಾಥ್‌(ಕುಶಲಕಲೆ), ಎಂ.ದೇವರಾಜ್‌(ಶಿಕ್ಷಣ), ಅಶ್ವತ್ಥಗೌಡ(ಪೊಲೀಸ್‌ಇಲಾಖೆ), ಜಗನ್ನಾಥ್‌(ಶಿಕ್ಷಣ), ಚಾಂದಿನಿ(ವಕೀಲೆ), ಡಿ.ಎಂ.ಮಹೇಶ್‌ಕುಮಾರ್‌(ಜಾನಪದ), ಬೋದಗೂರು ವೆಂಕಟಸ್ವಾಮಿರೆಡ್ಡಿ(ಸಾವಯವ ಕೃಷಿ), ಕನ್ನಮಂಗಲ ವಸಂತವಲ್ಲಭಕುಮಾರ್‌(ಸಮಾಜಸೇವೆ), ಎಂ.ಮುನಿಕೃಷ್ಣ(ಕ್ರೀಡೆ), ಟಿ.ಎನ್‌.ಹೇಮಂತ್‌(ಕ್ರೀಡೆ), ಅಜಿತ್‌ ಕೌಂಡಿನ್ಯ(ಪುಟ ವಿನ್ಯಾಸಕರು), ಸಿ.ವಿಜಯ(ವೈದ್ಯಕೀಯ ಸೇವೆ), ಎಸ್‌.ಕೆ.ಡಿ.ಆರ್‌.ಡಿ.ಪಿ ಮಹಿಳಾ ಒಕ್ಕೂಟ, ಅಪ್ಪು(ಆಟೋ), ಎಲ್ಲಮ್ಮ(ಸ್ವಚ್ಛತೆ) ಅವರುಗಳನ್ನು ಸನ್ಮಾನಿಸಲಾಗುವುದು.
ಕಸಾಪ ತಾಲ್ಲೂಕು ಘಟಕದ ವತಿಯಿಂದ ನಡೆದ ಶಾಲಾ ಕಾಲೇಜು ಕಾರ್ಯಕ್ರಮಗಳಲ್ಲಿ ಸಹಕಾರ ನೀಡಿರುವ ಆಂಜಿನಪ್ಪ, ಭಾಸ್ಕರರೆಡ್ಡಿ, ಕೆ.ಉದಯರವಿ, ಅನಿಲ್‌ ಪದ್ಮಶಾಲಿ, ಕಾಗತಿ ವೆಂಕಟರತ್ನಂ, ಬಿ.ಸಿ.ನಂದೀಶ್‌, ಬುಡ್ಡೂಸಾಬಿ, ಚಂದ್ರಶೇಖರ ಹಡಪದ್‌ ಅವರಿಗೆ ಹಾಗೂ ಜಿಲ್ಲೆಯ ಎಲ್ಲಾ ತಾಲ್ಲೂಕುಗಳ ಕಸಾಪ ಅಧ್ಯಕ್ಷರುಗಳಿಗೆ ಗೌರವ ಸಮರ್ಪಣೆ ಕಾರ್ಯಕ್ರಮವಿದೆ.
ಸಂಜೆ 5.30 ಗಂಟೆಗೆ ಆರನೇ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ನಿರ್ಣಯಗಳ ಮಂಡನೆಯಿದೆ.
ಸಮಾರೋಪ ಸಮಾರಂಭವನ್ನು ಸಂಜೆ 5.45 ಗಂಟೆಗೆ ‘ಹುತಾತ್ಮ ವೀರ ಯೋಧರ ವೇದಿಕೆ’ಯಲ್ಲಿ ಹಮ್ಮಿಕೊಳ್ಳಲಾಗಿದೆ. ಮುಖ್ಯ ಅತಿಥಿಗಳಾಗಿ ಕೆ.ಪಿ.ಸಿ.ಸಿ ಉಪಾಧ್ಯಕ್ಷ ವಿ.ಮುನಿಯಪ್ಪ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಅಧ್ಯಕ್ಷರು ಭಾಗವಹಿಸಲಿದ್ದಾರೆ.
ರಾತ್ರಿ 6.45 ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಅಪ್ಪೇಗೌಡನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಂದ ‘ಬಿಲ್ವ ವಿದ್ಯೆ ಪರೀಕ್ಷೆ’ ಪೌರಾಣಿಕ ಕಿರು ನಾಟಕವಿದೆ. ಕನ್ನಡ ಗೀತೆಗಳನ್ನು ರವಿ ಕುಮಾರ್‌, ಡಿ.ಎಂ.ಮಹೇಶ್‌ಕುಮಾರ್‌ ಮತ್ತು ತಂಡದವರು ನಡೆಸಿಕೊಡುವರು.

Subscribe to ನಮ್ಮ ಶಿಡ್ಲಘಟ್ಟ Newspaper

Launching Soon! Register for your Free Newspaper Copy Today.

- Advertisement -

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.
Captcha verification failed!
CAPTCHA user score failed. Please contact us!
error: Content is protected !!