ತಾಲ್ಲೂಕಿನ ಶಿಲೇಮಾಕನಹಳ್ಳಿ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಬುಧವಾರ ಕಸಾಪ ವತಿಯಿಂದ “ವಿಶ್ವ ಆಹಾರ ದಿನ”ದ ಅಂಗವಾಗಿ ಗ್ರಾಮದ ಮಹಿಳೆಯರಿಗೆ ಪೌಷ್ಠಿಕ ಆಹಾರ, ಸ್ವಚ್ಛತೆ, ನೀರಿನ ಸದ್ಭಳಕೆ ಹಾಗೂ ಸಾವಯವ ಆಹಾರ ಪದ್ಧತಿಯ ಬಗ್ಗೆ ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಎ.ಎಂ.ತ್ಯಾಗರಾಜ್ ಮಾಹಿತಿ ನೀಡಿದರು.
ಮಹಿಳೆಯರು ಆದಷ್ಟು ಗೃಹೋಪಯೋಗಿ ತರಕಾರಿ ಹಾಗೂ ಸೊಪ್ಪುಗಳನ್ನು ಮನೆಯ ಬಳಿಯೇ ಬೆಳೆಯಿರಿ. ರಾಸಾಯನಿಕ ಮುಕ್ತ ಆಹಾರ ನಮ್ಮದಾಗಲಿ. ಸ್ವಚ್ಛತೆಗೆ ಆಧ್ಯತೆ ನೀಡಿ ಎಂದು ಅವರು ತಿಳಿಸಿದರು.
ಅಕ್ಟೋಬರ್ 16 ಹಸಿವಿನ ವಿರುದ್ಧ ಹೋರಾಡಲು ಇರುವ ದಿನ. 1945 ರಲ್ಲಿ ವಿಶ್ವಸಂಸ್ಥೆಯು ಈ ದಿನವನ್ನು ಕೃಷಿ ಸಂಸ್ಥೆಯ ಸ್ಥಾಪನೆಯ ದಿನಾಂಕದ ಗೌರವಾರ್ಥವಾಗಿ ಆಹಾರ ದಿನವನ್ನಾಗಿ ಆಚರಿಸಲು ನಿರ್ಧರಿಸಿತು. ಮಕ್ಕಳಿಗೆ ಆಹಾರ ವ್ಯರ್ಥ ಮಾಡಬಾರದು ಎಂಬುದನ್ನು ಹಿರಿಯರು ಆಚರಿಸಿ ತೋರಿಸಿಕೊಡಬೇಕು. ಮನೆಯ ಆಹಾರ ತ್ಯಾಜ್ಯಗಳು, ಪಾತ್ರೆ ತೊಳೆದ ನೀರನ್ನು ಗಿಡಗಳಿಗೆ ಹಾಯಿಸಿ. ಮನೆಯ ಬಳಿ ತರಕಾರಿ, ಸೊಪ್ಪು ಬೆಳೆಯಿರಿ. ಸ್ವಚ್ಛತೆಗೆ ಪ್ರಾಮುಖ್ಯತೆ ನೀಡಬೇಕು.
ವಿಜ್ಞಾನದ ಪ್ರಕಾರ, ದೇಹದಲ್ಲಿ ಪೌಷ್ಠಿಕಾಂಶದ ಕೊರತೆ ಮತ್ತು ಮನಸ್ಸಿನ ನಡುವೆ ಬಲವಾದ ಸಂಬಂಧ ಇದೆ. ಅದಕ್ಕಾಗಿ ನಾವು ಈ ಪೌಷ್ಟಿಕಾಂಶಗಳು ಇರುವ ಆಹಾರವನ್ನು ಸೇವಿಸಬೇಕು. ನಾವು ಪ್ರತಿನಿತ್ಯ ತಿನ್ನುವ ಕೆಲವು ಆಹಾರಗಳು ನಮಗೆ ಒಳ್ಳೆಯ ಆರೋಗ್ಯ ನೀಡುವುದಲ್ಲದೇ ನಮ್ಮ ದೈಹಿಕ ಶಕ್ತಿ ಹೆಚ್ಚಿಸುವ ಮತ್ತು ರೋಗಗಳನ್ನು ತಡೆಗಟ್ಟು ಗುಣ ಕೂಡ ಹೊಂದಿರುತ್ತದೆ. ಇಂತಹ ಆಹಾರಗಳನ್ನು ಹೆಚ್ಚಾಗಿ ಸೇವಿಸುವುದು ಆರೋಗ್ಯಕ್ಕೆ ಹೆಚ್ಚು ಉಪಯುಕ್ತ ಎಂದು ವಿವರಿಸಿದರು.
ಅಂಗನವಾಡಿ ಶಿಕ್ಷಕಿ ಎಚ್.ಅಂಬುಜಾಕ್ಷಿ, ಸಹಾಯಕಿ ಅನಸೂಯಮ್ಮ, ಗ್ರಾಮದ ವೆಂಕಟೇಶಪ್ಪ, ರತ್ನಮ್ಮ, ಗಂಗರತ್ನ, ಭಾರತಿ, ಮಂಜುಳ, ಲಕ್ಷ್ಮಮ್ಮ, ಶ್ವೇತ, ಲಕ್ಷ್ಮಮ್ಮ, ಗೌತಮಿ, ರಾಧ, ಮೇಘನ, ಉಮಾ, ಅಂಜಲಿ, ಭಾವನ, ವಂದಿತಾ, ಶ್ರಾವಣಿ, ನಯನ, ಅನುಶ್ರೀ, ಅನೂಷ ಹಾಜರಿದ್ದರು.
- Advertisement -
- Advertisement -
- Advertisement -