ಎಲ್ಲಾ ಕುಟುಂಬದವರೂ ಶೌಚಾಲಯವನ್ನು ಕಟ್ಟಿಕೊಂಡಿದ್ದರಿಂದ “ಬಯಲು ಶೌಚಾಲಯ ಮುಕ್ತ ಗ್ರಾಮ ಪಂಚಾಯಿತಿ” ಎಂದು ನಮ್ಮ ಗ್ರಾಮ ಪಂಚಾಯಿತಿ ಕರೆಸಿಕೊಳ್ಳಲು ಸಾಧ್ಯವಾಯಿತು. ಸರ್ಕಾರಿ ಯೋಜನೆ ಸಫಲವಾಗಬೇಕಾದರೆ ಸಾರ್ವಜನಿಕರ ಸಹಕಾರ ಅಗತ್ಯ ಎಂದು ಗ್ರಾಮ ಪಂಚಾಯಿತಿ ಸದಸ್ಯ ಎ.ಎಂ.ತ್ಯಾಗರಾಜ್ ತಿಳಿಸಿದರು.
ತಾಲ್ಲೂಕಿನ ಅಪ್ಪೇಗೌಡನಹಳ್ಳಿಯಲ್ಲಿ ಸೋಮವಾರ ಸ್ವಚ್ಛ ಭಾರತ್ ಮಿಷನ್ (ಗ್ರಾಮೀಣ) ಕಾರ್ಯಕ್ರಮದ ಅಡಿಯಲ್ಲಿ ವಿಶ್ವ ಶೌಚಾಲಯ ದಿನಾಚರಣೆ ಅಂಗವಾಗಿ ಶಾಲೆಯ ಮಕ್ಕಳ ಜಾಥಾಗೆ ಚಾಲನೆ ನೀಡಿ ಅವರು ಮಾತನಾಡಿದರು.
ಪ್ರತಿ ಕುಟುಂಬವೂ ಈಗ ಶೌಚಾಲಯವನ್ನು ಹೊಂದಿದೆ. ಅದನ್ನು ಸ್ವಚ್ಛವಾಗಿರಿಸಿಕೊಳ್ಳಬೇಕು, ಬಯಲಲ್ಲಿ ಯಾರೂ ಬಹಿರ್ದೆಸೆಗೆ ಹೋಗಬಾರದು. ಗ್ರಾಮ ನಮ್ಮದೇ ಕುಟುಂಬದ ಮುಂದುವರಿಕೆಯಷ್ಟೆ. ಹಾಗಾಗಿ ಗ್ರಾಮವನ್ನು ಸಹ ಸ್ವಚ್ಛವಾಗಿಟ್ಟುಕೊಳ್ಳಬೇಕು ಎಂದರು.
ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅಂಜನ್ ಕುಮಾರ್ ಮಾತನಾಡಿ, ಸ್ವಚ್ಛತಯಿಂದ ಜೀವನದಲ್ಲಿ ಆರೋಗ್ಯ ಮತ್ತು ಅಭಿವೃದ್ಧಿಯನ್ನು ಹೊಂದಬಹುದು. ಸ್ಬಚ್ಛ ಭಾರತ ಅಭಿಯಾನವು, ಜನಾಂದೋಲನವಾಗಬೇಕು. ನಮ್ಮ ಗ್ರಾಮ, ನಮ್ಮ ಊರನ್ನು ಸ್ವಚ್ಛಗೊಳಿಸುವುದು ಸಹ ದೇಶ ಸೇವೆ. ಸ್ವಚ್ಛತೆಯೇ ದೇವರನ್ನು ತಲುಪುವ ಮಾರ್ಗ ಎಂದರು.
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಸ್ವಚ್ಛತೆಯ ಕುರಿತಾಗಿ ಘೋಷಣೆಗಳನ್ನು ಕೂಗುತ್ತಾ ಗ್ರಾಮದಲ್ಲಿ ಜಾಥಾ ನಡೆಸಿದರು. ಶೌಚಾಲಯವನ್ನು ನಿರ್ಮಿಸಿಕೊಂಡ ಗ್ರಾಮಸ್ಥರಿಗೆ ವಿದ್ಯಾರ್ಥಿಗಳು ಗುಲಾಬಿ ಹೂ ನೀಡಿ ಗ್ರಾಮ ಪಂಚಾಯಿತಿಯ ಪರವಾಗಿ ಅಭಿನಂದನೆಗಳನ್ನು ತಿಳಿಸಿದರು.
ಗ್ರಾಮ ಪಂಚಾಯಿತಿ ಸದಸ್ಯರಾದ ಉಮಾ ಚನ್ನೇಗೌಡ, ನೇತ್ರಾವತಿ, ಕಾರ್ಯದರ್ಶಿ ಶ್ರೀನಿವಾಸ್, ಬಿಲ್ ಕಲೆಕ್ಟರ್ ಶ್ರೀನಿವಾಸ್, ಸಿಬ್ಬಂದಿ ಮೋಹನ್, ಎಂ.ಪಿ.ಸಿ.ಎಸ್ ಅಧ್ಯಕ್ಷ ರವಿಪ್ರಕಾಶ್, ಜಲಗಾರ ಮುನಿರಾಜು, ಮುಖ್ಯ ಶಿಕ್ಷಕಿ ಎಂ.ವಿ.ವೆಂಕಟರತ್ನಮ್ಮ, ಶಿಕ್ಷಕರಾದ ಚಾಂದ್ ಪಾಷ, ಅಶೋಕ್ ಹಾಜರಿದ್ದರು.
- Advertisement -
- Advertisement -
- Advertisement -