ನಮ್ಮ ತಾಲ್ಲೂಕು, ಜಿಲ್ಲೆ ಹಾಗೂ ರಾಜ್ಯದಿಂದ ಮುಂದಿನ ದಿನಗಳಲ್ಲಿ ಒಲಂಪಿಕ್ ಕ್ರೀಡೆಯಲ್ಲಿ ಭಾಗವಹಿಸುವ ಕ್ರೀಡಾಳುಗಳು ಹೊರಹೊಮ್ಮಲಿ. ಒಲಂಪಿಕ್ ಕ್ರೀಡಾಕೂಟ ನಡೆಯುತ್ತಿರುವ ಈ ಸಂದರ್ಭದಲ್ಲಿ ಹಳೆಯ ಒಲಂಪಿಕ್ ಕ್ರೀಡೆಗಳ ಮೆಲುಕು ಹಾಕುವ ಮೂಲಕ ಕ್ರೀಡಾ ವಾತಾವರಣವನ್ನು ಪ್ರತಿಯೊಂದು ಶಾಲೆಯಲ್ಲೂ ಸೃಷ್ಟಿಸಬೇಕು ಎಂದು ಸರ್ಕಾರಿ ಉರ್ದು ಪ್ರೌಢಶಾಲೆಯ ಪ್ರಭಾರಿ ಮುಖ್ಯ ಶಿಕ್ಷಕ ರಂಗನಾಥ್ ತಿಳಿಸಿದರು.
ತಾಲ್ಲೂಕಿನ ಚೀಮಂಗಲ ಸರ್ಕಾರಿ ಪ್ರೌಢಶಾಲೆಯಲ್ಲಿ ಗುರುವಾರ ಒಲಂಪಿಕ್ ಹಬ್ಬವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಭಾರತದಿಂದ ಭಾಗವಹಿಸುತ್ತಿರುವ ಎಲ್ಲಾ ಕ್ರೀಡಾಪಟುಗಳಿಗೂ ಶುಭಾಷಯವನ್ನು ಕೋರೋಣ. ಕ್ರೀಡೆಯನ್ನು ಗ್ರಹಿಸುವ, ಕಲಿಯುವ, ಉತ್ಸಾಹ ಮೂಡಿಸುವ ಮತ್ತು ಆಸಕ್ತಿ ಹುಟ್ಟಿಸುವ ಕ್ರೀಡಾಜ್ಯೋತಿ ಎಲ್ಲಡೆ ಬೆಳಗಲಿ ಎಂದು ಹಾರೈಸಿದರು.
ಒಲಂಪಿಕ್‌ಗೆ ಸಂಬಂಧಪಟ್ಟ ಭಿತ್ತಿಚಿತ್ರಗಳ ಪ್ರದರ್ಶವನ್ನು ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿತ್ತು.
ಮುಖ್ಯ ಶಿಕ್ಷಕ ಶಿವಶಂಕರ್, ಶಿಕ್ಷಕರಾದ ವಿಠ್ಠಲ್, ಶಿವಕುಮಾರ್, ನವೀನ್ ಕುಮಾರ್,ದೊಡ್ಡ ನಾಯ್ಕ, ಭವ್ಯ, ಸವಿತ . ಶಿವಶಂಕರ್, ಸೈಯದ್ ಷರ್ಫುದ್ದೀನ್, ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕ ಮುನಿರಾಜು, ಗ್ರಾಮದ ಮೋಹನ್, ಪೋತಲ ರೆಡ್ಡಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
- Advertisement -
- Advertisement -
For Daily Updates
WhatsApp 'HI' to 7406303366
- Advertisement -
- Advertisement -







