ತೀವ್ರ ಮದ್ಯ ಸೇವಿಸಿ ವ್ಯಕ್ತಿ ಮೃತ

0
395

ವ್ಯಕ್ತಿಯೊಬ್ಬ ತೀವ್ರ ಮದ್ಯ ಸೇವಿಸಿ ನಿತ್ರಾಣಗೊಂಡು ಮೃತಪಟ್ಟ ಘಟನೆ ಶಿಡ್ಲಘಟ್ಟ ನಗರದ ಹೊರವಲಯದ ಟೋಲ್‌ಗೇಟ್ ಬಳಿಯ ತೋಟದ ಮನೆಯೊಂದರ ಬಳಿ ನಡೆದಿದೆ.
ನಗರದ ಹೊರವಲಯದ ಚಿಂತಾಮಣಿ ರಸ್ತೆಯ ಟೋಲ್ ಗೇಟ್ ಬಳಿಯ ತೋಟದ ಮನೆಯಲ್ಲಿ ೨೭ ವರ್ಷದ ಕೃಷ್ಣಮೂರ್ತಿ ಎಂಬಾತ ವಿಪರೀತ ಮದ್ಯ ಸೇವಿಸಿ ಅನ್ನ ಆಹಾರ ಸೇವಿಸದೆ ವಿಪರೀತ ನಿತ್ರಾಣಗೊಂಡು ಮಲಗಿದ್ದಲ್ಲೆ ಮೃತಪಟ್ಟಿದ್ದಾನೆ.
ನಗರಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಮೃತರ ತಾಯಿ ಅಶ್ವತ್ಥಮ್ಮ ನೀಡಿದ ದೂರನ್ನು ದಾಖಲಿಸಿಕೊಂಡು ಮೃತನ ಶವಪರೀಕ್ಷೆ ನಡೆಸಿ ಶವವನ್ನು ಕುಟುಂಬದವರಿಗೆ ಹಸ್ತಾಂತರಿಸಿದರು.

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!