ತಾಲ್ಲೂಕಿನ ದೇವರಮಳ್ಳೂರು ಗ್ರಾಮದಲ್ಲಿ ಸೋಮವಾರ ರಾತ್ರಿ ಗ್ರಾಮ ದೇವತೆಯಾದ ಶ್ರೀ ಮಳ್ಳೂರಾಂಭ ದೇವಾಲಯದಲ್ಲಿ ಬೀಗ ಮುರಿದಿರುವ ಕಿಡಿಗೇಡಿಗಳು ದೇವಾಲಯದಲ್ಲಿದ್ದ ಹುಂಡಿ ಹಣವನ್ನು ದೋಚಿದ್ದಾರೆ.
ಕಳೆದ ಅಕ್ಟೋಬರ್ ೧೦ ರಂದು ನಗರದ ಹೊರವಲಯದ ಚಿಂತಾಮಣಿ ರಸ್ತೆಯಲ್ಲಿರುವ ಶ್ರೀ ವೀರಾಂಜನೇಯಸ್ವಾಮಿ ದೇವಾಲಯ, ವೀರಾಪುರದ ಶ್ರೀ ವರಸಿದ್ದಿ ವಿನಾಯಕ ಸ್ವಾಮಿ ದೇವಾಯದಲ್ಲಿ ಕಳ್ಳತನವಾಗಿತ್ತು. ನಂತರ ದ್ಯಾವಪ್ಪನಗುಡಿ ದೇವಾಲಯ ಸೇರಿದಂತೆ ಅಕ್ಟೋಬರ್ ೧೫ ರ ಭಾನುವಾರ ರಾತ್ರಿ ತಾಲ್ಲೂಕಿನ ಕುತ್ತಾಂಡಹಳ್ಳಿ ಗ್ರಾಮದ ದೇವಾಲಯವೊಂದರಲ್ಲಿ ಕಳ್ಳತನವಾಗಿತ್ತು.
ಇತ್ತೀಚೆಗೆ ನಡೆದ ಎಲ್ಲಾ ದೇವಾಲಯ ಕಳವು ಪ್ರಕರಣಗಳಲ್ಲಿ ದೇವಾಲಯದ ಹುಂಡಿಯಲ್ಲಿರುವ ಹಣವನ್ನು ಅದರಲ್ಲಿಯೂ ಚಿಲ್ಲರೆ ಕಾಸನ್ನು ಬಿಟ್ಟು ಉಳಿದ ನೋಟುಗಳನ್ನು ಮಾತ್ರ ಕದಿಯುತ್ತಿರುವುದು ವಿಶೇಷವಾಗಿದೆ. ಕಳೆದ ಒಂದು ವಾರದಲ್ಲಿ ತಾಲ್ಲೂಕಿನ ಸುಮಾರು ಐದು ದೇವಾಲಯಗಳಲ್ಲಿ ಕಳ್ಳತನ ಪ್ರಕರಣಗಳು ನಡೆದಿರುವುದು ತಾಲ್ಲೂಕಿನ ಜನತೆಯಲ್ಲಿ ಆತಂಕ ಮೂಡಿಸಿದೆ.
ಸ್ಥಳಕ್ಕೆ ಶಿಡ್ಲಘಟ್ಟ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
- Advertisement -
- Advertisement -
- Advertisement -