ಜಿಲ್ಲಾ ಮಟ್ಟದ ಅಥ್ಲೆಟಿಕ್ಸ್‌ನಲ್ಲಿ ಪ್ರಥಮ ಸ್ಥಾನ: ರಾಜ್ಯಮಟ್ಟದ ಕ್ರೀಡಾಕೂಟಕ್ಕೆ ವಿದ್ಯಾರ್ಥಿಗಳ ಆಯ್ಕೆ

Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಜಂಗಮಕೋಟೆ ಕ್ರಾಸ್‌ನ ಜ್ಞಾನ ಜ್ಯೋತಿ ಶಾಲೆಯ ವಿದ್ಯಾರ್ಥಿಗಳು ಜಿಲ್ಲಾ ಮಟ್ಟದ 14 ವರ್ಷದೊಳಗಿನವರ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಪ್ರಥಮ ಹಾಗೂ ದ್ವಿತೀಯ ಸ್ಥಾನ ಗಳಿಸಿ, ರಾಜ್ಯಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ.
ಚಿಕ್ಕಬಳ್ಳಾಪುರದ ಸರ್ ಎಂ. ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಅ. 27ರಂದು ನಡೆದ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಶಾಲೆಯ ವಿದ್ಯಾರ್ಥಿಗಳು ವಿವಿಧ ಅಥ್ಲೆಟಿಕ್ಸ್ ಸ್ಪರ್ಧೆಗಳಲ್ಲಿ ಗಮನಾರ್ಹ ಪ್ರದರ್ಶನ ನೀಡಿದರು.
ಯಾವ ಸ್ಪರ್ಧೆಯಲ್ಲಿ ಯಾರಿಗೆ ಸ್ಥಾನ?
200 ಮೀಟರ್ ಓಟದಲ್ಲಿ ಸೋನಾಕ್ಷ್ ಎ. ಗೌಡ ಪ್ರಥಮ ಸ್ಥಾನ ಪಡೆದರು. 5,000 ಮೀಟರ್ ನಡಿಗೆಯಲ್ಲಿ ಸಾಗರ್ ಗೌಡ ಜಿ.ಎಂ. ಪ್ರಥಮ ಸ್ಥಾನ ಗಳಿಸಿದರು.
4×400 ಮೀಟರ್ ರಿಲೇ ಸ್ಪರ್ಧೆಯಲ್ಲಿ ಸಾಗರ್ ಪಿ., ಅಕ್ಷಯ್ ಡಿ.ಜೆ., ಸುದೀಪ್ ಹಾಗೂ ಲಿಖಿತ್ ರೆಡ್ಡಿ ಕೆ.ಎಂ. ಅವರ ತಂಡ ಪ್ರಥಮ ಸ್ಥಾನ ಪಡೆಯಿತು. 4×100 ಮೀಟರ್ ರಿಲೇ ಸ್ಪರ್ಧೆಯಲ್ಲಿ ಅಕುಲ್ ಗೌಡ ಎಚ್.ಎಸ್., ಧನುಷ್ ಎಸ್.ಎಂ., ಕಾರ್ತಿಕ್ ಎನ್.ವಿ. ಹಾಗೂ ಸೋನಾಕ್ಷ್ ಎ. ಗೌಡ ಅವರ ತಂಡ ಪ್ರಥಮ ಸ್ಥಾನ ಗಳಿಸಿತು. ಉದ್ದ ಜಿಗಿತ ಸ್ಪರ್ಧೆಯಲ್ಲಿ ಲಿಖಿತ್ ರೆಡ್ಡಿ ಕೆ.ಎಂ. ದ್ವಿತೀಯ ಸ್ಥಾನ ಪಡೆದರು.
ವಿದ್ಯಾರ್ಥಿಗಳ ಈ ಸಾಧನೆಗೆ ಗ್ರಾಮೀಣ ವಿದ್ಯಾಭಿವೃದ್ಧಿ ಸಂಸ್ಥೆಯ ಅಧ್ಯಕ್ಷ ಕೆ. ಗುಡಿಯಪ್ಪ, ಕಾರ್ಯದರ್ಶಿ ಬಿ.ಎಂ. ರಾಜೀವ್ ಕುಮಾರ್, ಪ್ರಾಂಶುಪಾಲೆ ಡಾ. ಪಿ. ಮನುಶ್ರೀ ಹಾಗೂ ಶಾಲೆಯ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಹರ್ಷ ವ್ಯಕ್ತಪಡಿಸಿ, ರಾಜ್ಯಮಟ್ಟದ ಸ್ಪರ್ಧೆಗಳಲ್ಲಿ ಮತ್ತಷ್ಟು ಯಶಸ್ಸು ಗಳಿಸುವಂತೆ ಶುಭ ಹಾರೈಸಿದ್ದಾರೆ.
ಇದಕ್ಕೂ ಮುನ್ನ ನೆಹರು ಕ್ರೀಡಾಂಗಣದಲ್ಲಿ ನಡೆದ ತಾಲ್ಲೂಕು ಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟದ ವರದಿ ಓದಿ. ಇನ್ನಷ್ಟು ಅಥ್ಲೆಟಿಕ್ಸ್ ಸುದ್ದಿಗಳು ಹಾಗೂ ಜ್ಞಾನ ಜ್ಯೋತಿ ಶಾಲೆಯ ಸುದ್ದಿಗಳು ಇಲ್ಲಿವೆ.

For Daily Updates WhatsApp ‘HI’ to 7406303366
Summary in English
Students of Gnana Jyothi School at Jangamakote Cross, Sidlaghatta taluk, did well at the under-14 district-level athletics meet held at Sir M. Visvesvaraya Stadium, Chikkaballapur, on October 27. Sonaksh A. Gowda won the 200 m run and Sagar Gowda G.M. won the 5,000 m walk; the school’s teams took first place in both the 4×400 m and 4×100 m relays, and Likhith Reddy K.M. was second in the long jump. The winners have been selected for the state-level meet.
Be a reporter
ಊರಿನ ಸುದ್ದಿ, ಫೋಟೋ ಕಳುಹಿಸಿ.
Send news


