ಕೋಲಾರ ಲೋಕಸಭಾ ಕ್ಷೇತ್ರ, ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಮತಗಟ್ಟೆ ಅಧಿಕಾರಿಗಳು ಮತ್ತು ಸಹಾಯಕ ಮತಗಟ್ಟೆ ಅಧಿಕಾರಿಗಳಿಗೆ ಮೊದಲ ಹಂತದ ತರಬೇತಿಯನ್ನು ಹಮ್ಮಿಕೊಳ್ಳಲಾಗಿದೆ. ಚುನಾವಣೆಯನ್ನು ಆಂತಿಯುತ ಹಾಗೂ ನ್ಯಾಯಸಮ್ಮತವಾಗಿ ನಡೆಸಲು ಚುನಾವಣಾ ಸಿಬ್ಬಂದಿ ಪ್ರಾಮಾಣಿಕವಾಗಿ ಶ್ರಮಿಸಬೇಕು ಎಂದು ಚುನಾವಣಾದಿಕಾರಿ ಶಿವಕುಮಾರ್ ತಿಳಿಸಿದರು.
ನಗರದ ಪದವಿ ಪೂರ್ವ ಕಾಲೇಜಿನಲ್ಲಿ ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಗುರುವಾರ ಪಿಆರ್‌ಒ ಮತ್ತು ಎಪಿಆರ್‌ಒ ಗಳ ಮೊದಲ ಹಂತದ ತರಬೇತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ತರಬೇತಿಯಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡು, ಯಾವುದೇ ರೀತಿಯ ಸಂಶಯ ಬಂದಲ್ಲಿ ಬಗೆಹರಿಸಿಕೊಳ್ಳಿ. ಎಂದು ಹೇಳಿದರು.
ತಹಿಶೀಲ್ದಾರ್ ಅಜಿತ್ ಕುಮಾರ್ ರೈ ಮಾತನಾಡಿ, ಒಟ್ಟಾರೆ ಸುಮಾರು ೪೫೦ ಮಂದಿ ಪಿಆರ್‌ಒ ಮತ್ತು ಎಪಿಆರ್‌ಒ ಗಳಿಗೆ ತರಬೇತಿಯನ್ನು ನೀಡಲಾಗುವುದು. ಅವರಿಗೆ ಊಟ ಮತ್ತಿತರ ಸೌಲಭ್ಯಗಳನ್ನು ಒದಗಿಸಲಾಗಿದೆ ಪ್ರತಿಯೊಂದು ಕೊಠಡಿಗೂ ಒಬ್ಬ ತರಬೇತುದಾರರಿದ್ದು, ಪ್ರಾತ್ಯಕ್ಷಿಕವಾಗಿ ತರಬೇತಿ ನೀಡಲಿದ್ದಾರೆ. ತರಬೇತಿಗೆ ಗೈರುಹಾಜರಾದ ಸಿಬ್ಬಂದಿಯ ಪಟ್ಟಿಯನ್ನು ತಯಾರಿಸಿ ಜಿಲ್ಲಾದಿಕಾರಿಗಳಿಗೆ ನೀಡಲಾಗುವುದು ಎಂದು ಹೇಳಿದರು.
ಲೋಕಸಭಾ ಚುನಾವಣೆಗೆ ತರಬೇತಿಯಲ್ಲಿ ಅಣಕು ಮತದಾನ, ಪೋಲಿಂಗ್ ಏಜೆಂಟರ ನೇಮಕಾತಿ, ಅಧಿಕಾರಿಯ ಜನಾಬ್ದಾರಿಗಳು, ಆಕ್ಷೇಪಿತ/ಟೆಂಡರ್/ಇಡಿಸಿ/ಪಿಸಿ/ಪ್ರಾಕ್ಸಿ/ಟೆಸ್ಟ್ ಮತಗಳು, ಸಾಧನಾ ಪರೀಕ್ಷೆ, ವೀಡಿಯೋ ಪ್ರದರ್ಶನ ಮತ್ತು ಯಂತ್ರಗಳ ಪ್ರಯೋಗಿಕ ಚಟುವಟಿಕೆ, ಪ್ರಶ್ನಾವಳಿ/ಸಂಶಯ ನಿವಾರಣೆ, ಅವಧಿ ಹಾಗೂ ಇನ್ನೂ ಮುಂತಾದ ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕೋಲಾರ ಲೋಕಸಭಾ ಚುನಾವಣಾ ವೀಕ್ಷಕ ಇಕ್ಬಾಲ್ ಆಲಂ ಅನ್ಸಾರಿ, ಸರ್ಕಲ್ ಇನ್ಸ್ ಪೆಕ್ಟರ್ ಆನಂದ್, ಗ್ರೇಡ್ ೨ ತಹಿಸಿಲ್ದಾರ್ ಹನುಮಂತರಾವ್, ನಗರ ಸಭೆ ಆಯುಕ್ತ ಚಲಪತಿ ಶ್ರೀನಾಥ್‌ಗೌಡ ಹಾಜರಿದ್ದರು.
- Advertisement -
- Advertisement -
For Daily Updates
WhatsApp 'HI' to 7406303366
- Advertisement -
- Advertisement -







