ಮಕ್ಕಳು ತಮ್ಮ ಭಾವವನ್ನು ಪದಗಳ ಮೂಲಕ ಬರೆಯುವ ವಾತಾವರಣವನ್ನು ಸೃಷ್ಠಿಸಿದಾಗ ಅವರಲ್ಲಿ ಬರೆಯುವ ಆತ್ಮವಿಶ್ವಾಸ ಮೂಡುತ್ತದೆ ಎಂದು ಮುಖ್ಯ ಶಿಕ್ಷಕಿ ಸರಸ್ಪತಮ್ಮ ತಿಳಿಸಿದರು.
ತಾಲ್ಲೂಕಿನ ತಾತಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಈಚೆಗೆ ಚುಟುಕು ಸಾಹಿತ್ಯ ಪರಿಷತ್ ವತಿಯಿಂದ ಹಮ್ಮಿಕೊಂಡಿದ್ದ ಮಕ್ಕಳ ಕವಿಗದ್ದಿಗೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮಕ್ಕಳು ರಚಿಸಿದ ಕವನಗಳು ಬಾಲ್ಯದ ಭಾವನೆಗಳನ್ನು ತೆರೆದಿಡುತ್ತದೆ. ಕಲಿಯುವ ಮಕ್ಕಳು ಪಠ್ಯದ ಚಟುವಟಿಕೆಗಳಿಗಷ್ಟೇ ಸೀಮಿತವಾಗದೇ ಬಾಲ ಕವಿಗದ್ದಿಗೆಯಂಥಹ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದರಿಂದ ರಚನೆಯ ಬಗ್ಗೆ ಹೊಳಹುಗಳು ಸಿಗುತ್ತದೆ. ಹೊಸ ಆಲೋಚನೆಗಳು ಮೂಡುತ್ತವೆ. ಅರ್ಥ ಪೂರ್ಣವಾದ ಸಾಹಿತ್ಯ ಮಕ್ಕಳ ಕವನಗಳ ಮೂಲಕ ಹೊರ ಹೊಮ್ಮಲು ಸಹ ಸಾದ್ಯವಾಗುತ್ತದೆ ಎಂದು ತಿಳಿಸಿದರು.
ಚುಟುಕು ಸಾಹಿತ್ಯ ಪರಿಷತ್ ಉಪಾದ್ಯಕ್ಷ ದೇವರಮಳ್ಳೂರು ಚನ್ನಕೃಷ್ಣ ಮಾತನಾಡಿ, ಪ್ರತಿಯೊಬ್ಬರು ಸುಸಂಸ್ಕೃತ ವ್ಯಕ್ತಿಗಳಾಗಲು ಸಾಹಿತ್ಯದ ಪಾತ್ರ ಬಹು ದೊಡ್ಡದು. ಹಿರಿಯ ಸಾಹಿತಿಗಳ ರಚನೆಗಳನ್ನು ಓದುವ ಅಭ್ಯಾಸ ರೂಢಿಸಿಕೊಳ್ಳಬೇಕು. ಸಮಾಜ ಸುಧಾರಣೆಯ ಕನಸುಗಳನ್ನು ಸಾಹಿತ್ಯದ ಮೂಲಕ ಮಾಡಬಹುದೆಂದು ತಿಳಿಸಿದರು.
ಕವಿಗದ್ದಿಗೆಯಲ್ಲಿ ಬಾಲ ಕವಿಗಳಾದ ಅನುಷಾ, ಪವಿತ್ರ, ಪುಷ್ಪ, ರಘು, ಹರೀಶ್, ಮಲ್ಲಕಾ, ವರಲಕ್ಷ್ಮಿ, ರಮ್ಯ, ದೀಪ, ಅಕ್ಷಯ ನಮ್ರತ, ದೇವರಾಜು, ನಾಗರತ್ನ, ಪ್ರದೀಪ, ಪುರುಷೋತ್ತಮ, ವೇಣು, ಲಕ್ಷ್ಮಿ, ಮುನಿರಾಜು, ಮಧು ಸ್ವರಚಿತ ಕವನಗಳನ್ನು ವಾಚಿಸಿದರು.
ಚುಟುಕು ಸಾಹಿತ್ಯ ಪರಿಷತ್ ತಾಲ್ಲೂಕು ಅಧ್ಯಕ್ಷ ಈಧರೆ ತಿರುಮಲಪ್ರಕಾಶ್, ಶಾಲೆಯ ಸಹ ಶಿಕ್ಷಕರಾದ ಎಂ.ದೇವರಾಜ್, ಡಿ.ಎಸ್ ಶ್ರೀಕಾಂತ್, ಎಚ್.ಆರ್ ಮಂಜುನಾಥ್, ಶಿಕ್ಷಕಿ ತ್ರಿವೇಣಿ ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.
- Advertisement -
- Advertisement -
- Advertisement -