ಯರಮರೆಡ್ಡಹಳ್ಳಿ ತಂಡಕ್ಕೆ ಟೆನ್ನಿಸ್‌ ಬಾಲ್‌ ಕ್ರಿಕೆಟ್‌ ಪಂದ್ಯಾವಳಿ ಟ್ರೋಫಿ

- Advertisement -
- Advertisement -

ತಾಲ್ಲೂಕಿನ ಬಯ್ಯಪ್ಪನಹಳ್ಳಿಯ ಸ್ವಾಮಿ ವಿವೇಕಾನಂದ ಕ್ರಿಕೆಟ್‌ ಕ್ಲಬ್‌ ವತಿಯಿಂದ ದಿ.ಡಾ.ಎಂ.ಶ್ರೀಧರ್‌ ಸ್ಮರಣಾರ್ಥ ನಡೆದ ಟೆನ್ನಿಸ್‌ ಬಾಲ್‌ ಕ್ರಿಕೆಟ್‌ ಪಂದ್ಯಾವಳಿಯಲ್ಲಿ ಚಿಲಕಲನೇರ್ಪು ಹೋಬಳಿ ಯರಮರೆಡ್ಡಹಳ್ಳಿ ತಂಡ ಟ್ರೋಫಿಯನ್ನು ತನ್ನದಾಗಿಸಿಕೊಂಡಿದೆ.
ದಿಬ್ಬೂರಹಳ್ಳಿ ರಸ್ತೆಯ ಸೀತಹಳ್ಳಿ ಗೇಟ್‌ ಬಳಿ ಎರಡು ದಿನಗಳು ನಡೆದ ಟೆನ್ನಿಸ್‌ ಬಾಲ್‌ ಕ್ರಿಕೆಟ್‌ ಪಂದ್ಯಾವಳಿಯಲ್ಲಿ ಪ್ರಥಮ ಬಹುಮಾನ 30 ಸಾವಿರ ರೂ, ದ್ವಿತೀಯ ಬಹುಮಾನ 15 ಸಾವಿರ ರೂ ಹಾಗೂ ತೃತೀಯ ಬಹುಮಾನ 5 ಸಾವಿರ ರೂಗಳನ್ನು ನೀಡಲಾಯಿತು.
ಪ್ರಥಮ ಬಹುಮಾನವನ್ನು ಚಿಲಕಲನೇರ್ಪು ಹೋಬಳಿ ಯರಮರೆಡ್ಡಹಳ್ಳಿ ತಂಡ ಪಡೆದರೆ, ದ್ವಿತೀಯ ಬಹುಮಾನವನ್ನು ಬಯ್ಯಪ್ಪನಹಳ್ಳಿ ತಂಡ ಹಾಗೂ ಮೂರನೇ ಬಹುಮಾನವನ್ನು ದಿಬ್ಬೂರಹಳ್ಳಿ ತಂಡಗಳು ತಮ್ಮದಾಗಿಸಿಕೊಂಡವು.
ಬಹುಮಾನಗಳ ವಿತರಣೆಯನ್ನು ಕಾಂಗ್ರೆಸ್‌ ಮುಖಂಡ ವಿ.ಮುನಿಯಪ್ಪ ಮಾಡಿದರು. ಮುಖಂಡರಾದ ಕೆ.ಗುಡಿಯಪ್ಪ, ಬಿ.ವಿ.ಮುನೇಗೌಡ, ಸತೀಶ್‌, ಶ್ರೀನಿವಾಸ್‌, ಡಿ.ಎಸ್‌.ಎನ್‌.ರಾಜು, ಸಾದಲಿ ಗೋವಿಂದಪ್ಪ, ಅಶ್ವತ್ಥರೆಡ್ಡಿ ಹಾಜರಿದ್ದರು.

Sidlaghatta News Desk
Sidlaghatta News Deskhttp://www.sidlaghatta.com
The editorial desk of Sidlaghatta.com (Namma Shidlaghatta), covering civic affairs, agriculture, silk trade, and local government news for Sidlaghatta taluk, Karnataka.

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!