ಹಿಂದೂಗಳನ್ನು ಸಂಘಟಿಸುವ ಮೂಲಕ ದೇಶ, ಸಮಾಜವನ್ನು, ಸಂಸ್ಕೃತಿಯನ್ನು ಸಂರಕ್ಷಿಸುವ ಕೆಲಸವನ್ನು ಹಿಂದೂ ಜಾಗರಣ ವೇದಿಕೆ ಮಾಡಿಕೊಂಡು ಬಂದಿದೆ. ದೇಶವನ್ನು ರಕ್ಷಿಸುವ ಜವಾಬ್ದಾರಿ ಪ್ರತಿಯೊಬ್ಬ ಹಿಂದೂವಿನ ಮೇಲಿದೆ ಎಂದು ಹಿಂದೂ ಜಾಗರಣ ವೇದಿಕೆಯ ಕ್ಷೇತ್ರೀಯ ಸಂಘಟನಾ ಕಾರ್ಯದರ್ಶಿ ದೋ.ಕೇಶವಮೂರ್ತಿ ಹೇಳಿದರು.
ತಾಲ್ಲೂಕು ಹಿಂದೂ ಜಾಗರಣ ವೇದಿಕೆ ವತಿಯಿಂದ ಭಾನುವಾರ ನಗರದ ವಾಸವಿ ವಿದ್ಯಾ ಸಂಸ್ಥೆಯ ಆವರಣದಲ್ಲಿ ಆಯೋಜಿಸಲಾಗಿದ್ದ ಬೃಹತ್ ಹಿಂದೂ ಸಮಾಜೋತ್ಸವ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಹಿಂದೂ ಸಮಾಜ ಜಾಗೃತಗೊಳ್ಳುವ ಮೂಲಕ ಸಂಘಟಿತರಾಗಬೇಕು ಎನ್ನುವ ದ್ಯೇಯದೊಂದಿಗೆ ಬೆಳೆದು ಬಂದ ಹಿಂದೂ ಜಾಗರಣ ವೇದಿಕೆ ರಾಜ್ಯದ ಎಲ್ಲಾ ಜಿಲ್ಲೆಗಳಿಗೂ ತಲುಪಿದ್ದು ಇದೀಗ ತಾಲ್ಲೂಕುಗಳಿಗೆ ದಾಪುಗಾಲು ಇಡುತ್ತಿದೆ ಎಂದರು.
ವಿಶ್ವದ ಯಾವುದೇ ಮೂಲೆಯಿಂದ ಬಂದ ವ್ಯಕ್ತಿಗಳನ್ನು ಎಲ್ಲರೂ ತಮ್ಮವರು ಎಂಬಂತೆ ಭಾವಿಸಿ ಅವರಿಗೆ ಸಮಾಜದಲ್ಲಿ ಸಮಾನವಾಗಿ ಬದುಕಲು ಅವಕಾಶ ನೀಡಿದ ಏಕೈಕ ದೇಶವೆಂದರೆ ಅದು ನಮ್ಮ ಭಾರತ ದೇಶ ಎಂಬ ಹೆಮ್ಮ ನಮ್ಮೆಲ್ಲರಿಗೂ ಇದೆ ಎಂದರು.

ದೇಶಾದ್ಯಂತ ೩೦೦ಕ್ಕೂ ಹೆಚ್ಚು ಜಾತಿಗಳನ್ನು ಹೊಂದಿರುವ ನಮ್ಮ ದೇಶದಲ್ಲಿ ಪ್ರಪಂಚದ ೩೩ ಸಾವಿರ ದೇವರನ್ನು ಪೂಜಿಸುತ್ತೇವೆ. ಭಯೋತ್ಪಾದನೆ ನಮ್ಮ ರಕ್ತದಲ್ಲಿಲ್ಲ. ಅಲ್ಪಸಂಖ್ಯಾತ ಹೆಸರಿನಲ್ಲಿ ದುಷ್ಟರನ್ನು ಬೆಳೆಸಿದ ಪರಿಣಾಮ ಇದೀಗ ದೇಶಾದ್ಯಂತ ಭಯೋತ್ಪಾದನೆ ರಾರಾಜಿಸುತ್ತಿದ್ದು ಇದನ್ನು ತಡೆಯಲು ಹಿಂದೂ ಜನಶಕ್ತಿಯೊಂದು ಎಚ್ಚರವಾಗಬೇಕು ಎಂದರು.
ಲವ್ ಜಿಹಾದಿ ಹೆಸರಲ್ಲಿ ಹಿಂದೂ ಹೆಣ್ಣು ಮಕ್ಕಳನ್ನು ಮುಸ್ಲಿಂ ಹುಡುಗರು ಅಪಹರಿಸಿ ಮಾನವ ಬಾಂಬ್ಗಳಾಗಿ ರೂಪಿಸುತ್ತಿರುವುದನ್ನು ತಡೆಗಟ್ಟಲು ಈ ದೇಶದ ಮಾತೆಯರು ಎಚ್ಚೆತ್ತುಕೊಳ್ಳಬೇಕು ಎಂದರು.
ಸ್ವಾತಂತ್ರ ಪೂರ್ವದಲ್ಲಿ ನಮ್ಮ ದೇಶದ ಹಿಂದೂ ಸಮಾಜದವರು ಮತಾಂತರಗೊಂಡಿದ್ದಕ್ಕಿಂತ ಸ್ವಾತಂತ್ರ್ಯ ಬಂದ ಮೇಲೆ ಮತಾಂತರವಾದವರ ಸಂಖ್ಯೆಯೇ ಹೆಚ್ಚು ಇದಕ್ಕೆ ನಮ್ಮದೇ ರಾಜಕಾರಣಿಗಳು ಕಾರಣ, ನಮ್ಮ ಧರ್ಮವೇ ಬೇರೆ ನಮ್ಮ ರೀತಿ ನೀತಿಗಳೇ ಬೇರೆ. ರಾಜಕೀಯ ಕಾರಣದಿಂದ ಮಾತ್ರ ಹಿಂದೂಗಳನ್ನು ಕೋಮುವಾದಿ ಎಂಬ ಹಣೆ ಪಟ್ಟಿ ಕಟ್ಟಲು ಮುಂದಾಗುವ ರಾಜರಾಣಿಗಳಿಗೆ ಮೊದಲು ನಾಚಿಕೆಯಾಗಬೇಕು ಎಂದರು.
ಹಿಂದೂಗಳ ತಾಯಿಯೆಂದು ಪೂಜಿಸುವ ೩೩ ಕೋಟಿ ದೇವತೆಗಳ ವಾಸಸ್ಥಾನವಾದ ಗೋಮಾತೆಯನ್ನು ಹತ್ಯೆ ಮಾಡಿ ಹಿಂದೂಗಳ ನಂಬಿಕೆಯನ್ನು ಧಮನ ಮಾಡುವ ವಿರುದ್ದ ಹಿಂದೂ ಜಾಗರಣ ವೇದಿಕೆ ಪದಾಧಿಕಾರಿಗಳು ಎಚ್ಚೆತ್ತುಕೊಳ್ಳಬೇಕು ಎಂದರು.
ಕಾರ್ಯಕ್ರಮಕ್ಕೂ ಮುನ್ನ ನಗರದಾದ್ಯಂತ ಬೃಹತ್ ಶೋಭಾಯಾತ್ರೆಯ ಮೂಲಕ ಸಾಗಿದ ಯುವಕರನ್ನು ಸ್ವಾಗತಿಸಲು ಹಿಂದೂ ಸಮಾದಾಯದ ಬಹುತೇಕ ಎಲ್ಲಾ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ, ಹಿಂದೂ ಸಮಾಜೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದುದು ವಿಶೇಷವಾಗಿತ್ತು.
ರಾಮಕೃಷ್ಣ ಆಶ್ರಮದ ಶ್ರೀ ಪೂರ್ಣಾನಂದ ಸ್ವಾಮೀಜಿ, ತುಮಕೂರು ವಿಭಾಗ ಸಂಚಾಲಕ ಜಿ.ಎಸ್.ಬಸವರಾಜ್ಜೀ. ಜಿಲ್ಲಾ ಸಂಚಾಲಕ ಸ್ವಾಗತ್, ಜಿಲ್ಲಾಧ್ಯಕ್ಷ ಎನ್.ಮಂಜುನಾಥ, ತಾಲ್ಲೂಕು ಅಧ್ಯಕ್ಷ ಎಂ.ಶ್ರೀನಿವಾಸ್, ತಾಲ್ಲೂಕು ಸಂಚಾಲಕ ಕೆ.ಸಿ.ಯೋಗಾನಂದ, ಉಪಾಧ್ಯಕ್ಷ ಚಲಪತಿ, ಕಾರ್ಯದರ್ಶಿ ಕೃಷ್ಣಮೂರ್ತಿ, ನಗರ ಘಟಕದ ಅಧ್ಯಕ್ಷ ಮಹೇಶ್, ಗಾಂಧಿನಗರ ಅಶ್ವತ್ಥ್ ಮತ್ತಿತರರು ಹಾಜರಿದ್ದರು.
- Advertisement -
- Advertisement -
For Daily Updates
WhatsApp 'HI' to 7406303366
- Advertisement -
- Advertisement -







