ತಾಲ್ಲೂಕಿನ ಮಳ್ಳೂರು ಹೊರವಲಯದ ಸಾಯಿನಾಥ ಜ್ಞಾನ ಮಂದಿರದಲ್ಲಿ ಮಂಗಳವಾರ ಮೂರು ದಿನಗಳ ಶ್ರೀ ರಾಮಸಪ್ತಾಹದ ಅಖಂಡ ಭಜನೆ ಪ್ರಾರಂಭವಾಯಿತು.
ಶ್ರೀ ಸಾಯಿನಾಥ ಭಕ್ತ ಮಂಡಲಿಯ ಭಜನಾ ತಂಡದವರಿಂದ ಬೆಳಿಗ್ಗೆ ರಾಮಭಜನೆಗೆ ಚಾಲನೆ ನೀಡಲಾಯಿತು. ನಂತರ ಮಧ್ಯಾಹ್ನ ತಾಲ್ಲೂಕಿನ ಅಪ್ಪೇಗೌಡನಹಳ್ಳಿಯ ಶ್ರೀರಾಮ ಭಕ್ತ ಮಂಡಲಿ ಹಾಗೂ ಯಲೆಯೂರು ಭಜನಾ ತಂಡದವರಿಂದ ರಾಮಭಜನೆ ನಡೆಯಿತು.
‘ಶ್ರೀ ರಾಮಸಪ್ತಾಹದ ಅಖಂಡ ಭಜನೆ ಮೂರು ದಿನಗಳ ಕಾಲ ನಿರಂತರವಾಗಿ ನಡೆಯಲಿದೆ. ರಾಮ ಜಪದಿಂದ ಕಷ್ಟಗಳು ಹಾಗು ನಕಾರಾತ್ಮಕ ಶಕ್ತಿಗಳಿಂದ ಮುಕ್ತಿ ಹೊಂದಬಹುದು. ಶ್ರೀರಾಮ ನಾಮ ಜಪದಿಂದ ಸಾಕಷ್ಟು ಪುಣ್ಯ ಫಲ ಒದಗಿ ಬರುತ್ತದೆ. ತಾಲ್ಲೂಕಿನ ಚೌಡಸಂದ್ರ, ತಿಪ್ಪೇನಹಳ್ಳಿ, ಬೆಳ್ಳೂಟಿ, ಬಳುವನಹಳ್ಳಿ, ಬೋದಗೂರು, ಕೊಮ್ಮಸಂದ್ರ, ಕಾಕಚೊಕ್ಕಂಡಹಳ್ಳಿ, ಮೇಲೂರು, ಭಕ್ತರಹಳ್ಳಿ ಮೊದಲಾದ ಗ್ರಾಮೀಣ ತಂಡಗಳಿಂದ ಭಜನೆ ನಡೆಯಲಿದೆ. ಜನರು ತಮ್ಮ ನಿತ್ಯ ಜಂಜಡಗಳಿಂದ ಮುಕ್ತರಾಗಿ ಕೆಲ ಕಾಲ ರಾಮ ಭಜನೆ ಮಾಡುವ ಮೂಲಕ ಮನಸ್ಸಿಗೆ ಶಾಂತಿ, ನೆಮ್ಮದಿಯನ್ನು ಪಡೆಯಬಹುದು. ಗುರುವಾರ ಮಧ್ಯಾಹ್ನ ರಾಮಕೋಟಿ ಮುಕ್ತಾಯದ ಸಮಯದಲ್ಲಿ ಮಹಾಮಂಗಳಾರತಿ ಮತ್ತು ಪ್ರಸಾದ ವಿನಿಯೋಗ ನಡೆಯಲಿದೆ’ ಎಂದು ದೇವಾಲಯದ ಧರ್ಮದರ್ಶಿ ನಾರಾಯಣಸ್ವಾಮಿ ತಿಳಿಸಿದರು.
- Advertisement -
- Advertisement -
- Advertisement -