ಸಾರ್ವಜನಿಕರ ಅನುಕೂಲಕ್ಕೆ ತಾಲ್ಲೂಕು ಕಚೇರಿ ಆವರಣದಲ್ಲಿ ಮತದಾರರ ಸಹಾಯ ಕೇಂದ್ರ

- Advertisement -
- Advertisement -

ಮೇ ೧೨ ರಂದು ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಮೊದಲಬಾರಿಗೆ ಮತಚಲಾವಣೆ ಮಾಡಲಿರುವ ಯುವಕರು ಮತ್ತು ಇರತ ನಾಗರಿಕರಿಗೆ ಅನುಕೂಲವಾಗಲಿ ಎನ್ನುವ ಉದ್ದೇಶದಿಂದ ಮಾಹಿತಿ ನೀಡಲು ಮತದಾರರ ಸಹಾಯ ಕೇಂದ್ರವನ್ನು ನಗರದ ತಾಲ್ಲೂಕು ಕಚೇರಿ ಆವರಣದಲ್ಲಿ ತೆರೆಯಲಾಗಿದೆ.
೧೮ ವರ್ಷ ತುಂಬಿರುವ ಪ್ರತಿಯೊಬ್ಬ ನಾಗರಿಕರು ಖಡ್ಡಾಯವಾಗಿ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರನ್ನು ನಮೂದಿಸಿಕೊಳ್ಳಬೇಕು. ಮತದಾನ ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದ್ದು ಯಾವುದೇ ಆಸೆ ಆಮಿಷಗಳಿಗೆ ಬಲಿಯಾಗದೆ ನಿರ್ಭಯವಾಗಿ ಮತದಾನ ಮಾಡಲು ಅವಶ್ಯವಾಗಿರುವ ಮಾಹಿತಿಯನ್ನು ಮತದಾರರ ಸಹಾಯ ಕೇಂದ್ರದಲ್ಲಿ ಪಡೆದುಕೊಳ್ಳಬಹುದು ಎಂದು ಸಹಾಯ ಕೇಂದ್ರದ ನಿಯೋಜಿತ ಅಧಿಕಾರಿ ಮಹಮದ್‌ಹಸನ್‌. ಕೆ. ಮುಲ್ಲಾ ತಿಳಿಸಿದ್ದಾರೆ.
ತಾಲ್ಲೂಕಿನ ವಿವಿದೆಡೆಯಿಂದ ನಗರದ ತಾಲ್ಲೂಕು ಕಚೇರಿಗೆ ಬರುವಂತಹ ನಾಗರಿಕರು, ಮತದಾರರ ಸಹಾಯ ಕೇಂದ್ರದಲ್ಲಿ ಅವರಿಗೆ ಅಗತ್ಯವಿರುವ ಮತದಾರರ ಪಟ್ಟಿಯ ಸಂಖ್ಯೆ, ಮತದಾರರ ಪಟ್ಟಿಯಲ್ಲಿ ಹೊಸದಾಗಿ ಸೇರ್ಪಡೆ ಮಾಡುವುದು, ಮೃತ ಪಟ್ಟರುವ ಮತದಾರರ ಹೆಸರನ್ನು ಪಟ್ಟಿಯಂದ ತೆಗೆಯುವುದು ಹಾಗೂ ಲೋಪದೋಷಗಳಿದ್ದಲ್ಲಿ ತಿದ್ದುಪಡಿ ಮಾಡಲು ಸಹಾಯ ಕೇಂದ್ರದ ನಿಯೋಜಿತ ಅಧಿಕಾರಿಯಿಂದ ಮಾಹಿತಿ ಪಡೆದುಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ ಸಹಾಯ ಕೇಂದ್ರದ ದೂರವಾಣಿ ಸಂಖ್ಯೆಗೆ ೦೮೧೫೮-೨೫೬೭೬೩ ಕರೆಮಾಡಿ ಸಂಪರ್ಕಿಸಲು ಕೋರಿದ್ದಾರೆ.

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!