ಮಹಿಳೆಯರು ಸ್ವಾವಲಂಬನೆಯ ಜೀವನ ನಡೆಸುವುದರ ಕಡೆಗೆ ಹೆಚ್ಚು ಗಮನಹರಿಸಬೇಕು. ತಮ್ಮ ದೈನಂದಿನ ಕಸುಬುಗಳ ಜೊತೆಗೆ ಉಪಕಸುಬುಗಳನ್ನು ರೂಢಿಸಿಕೊಂಡಾಗ ಆರ್ಥಿಕವಾಗಿ ಸಬಲತೆ ಕಾಣಲು ಸಾಧ್ಯವಾಗುತ್ತದೆ ಎಂದು ಎಸ್.ಎನ್. ಕ್ರಿಯಾ ಟ್ರಸ್ಟ್‍ನ ಅಧ್ಯಕ್ಷ ಆಂಜಿನಪ್ಪ ಹೇಳಿದರು.
ತಾಲೂಕಿನ ಗುಡಿಹಳ್ಳಿ ಗ್ರಾಮದ ಚರ್ಚ್‍ನಲ್ಲಿ ಮಹಿಳೆಯರಿಗಾಗಿ ನಡೆಸುತ್ತಿರುವ ಟೈಲರಿಂಗ್ ತರಬೇತಿ ಕಾರ್ಯಾಗಾರಕ್ಕೆ ಅಗತ್ಯವಿರುವ ಎರಡು ಹೊಲಿಗೆ ಯಂತ್ರಗಳನ್ನು ಉಚಿತವಾಗಿ ವಿತರಣೆ ಮಾಡಿ ಅವರು ಮಾತನಾಡಿದರು.
ಬದಲಾಗುತ್ತಿರುವ ಸಮಾಜದಲ್ಲಿ ಆರ್ಥಿಕವಾಗಿ ಸದೃಢರಾಗದಿದ್ದರೆ ಮುಂದಿನ ಭವಿಷ್ಯದಲ್ಲಿ ಸಂಕಷ್ಟದ ದಿನಗಳಲ್ಲಿ ಎದುರಿಸಬೇಕಾಗುತ್ತದೆ. ಈಗಾಗಲೇ ತೀವ್ರವಾದ ಬರಗಾಲಕ್ಕೆ ತುತ್ತಾಗಿರುವ ಜಿಲ್ಲೆಯಲ್ಲಿ ಕೃಷಿ, ತೋಟಗಾರಿಕೆ, ಮತ್ತು ಹೈನುಗಾರಿಕೆಯ ಕಸುಬುಗಳು ತೆರೆಮರೆಗೆ ಸರಿಯುತ್ತಿದ್ದು, ಜೀವನೋಪಾಯಕ್ಕಾಗಿ ನಂಬಿಕೊಂಡಿರುವ ಕಸುಬುಗಳನ್ನು ನಂಬಿಕೊಳ್ಳದೇ ಉಪಕಸುಬುಗಳಂತೆ ಟೈಲರಿಂಗ್, ಎಂಬ್ರಾಯಿಡರಿ, ಮೇಣದ ಬತ್ತಿ ತಯಾರಿಕೆ, ಸಾಂಬಾರು ಪದಾರ್ಥಗಳ ತಯಾರಿಕೆಯಂತಹ ಕಸುಬುಗಳನ್ನು ಈ ಭಾಗದ ಮಹಿಳೆಯರು ರೂಡಿಸಿಕೊಳ್ಳಬೇಕು ಇದರಿಂದ ಆರ್ಥಿಕವಾಗಿ ಸಬಲತೆ ಕಾಣಲು ಸಾಧ್ಯವಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಟ್ರಸ್ಟ್‍ನ ವಿಶ್ವನಾಥ, ಚಲಪತಿ, ಮಲ್ಲಿಕಾರ್ಜುನ್, ನರಸಿಂಹಮೂರ್ತಿ, ಮಂಜುನಾಥ್, ಧನರಾಜ್, ಚರ್ಚ್‍ನ ಪಾಸ್ಟರ್ ವೆಂಕಟೇಶ್ ಮತ್ತಿತರರು ಹಾಜರಿದ್ದರು.
- Advertisement -
- Advertisement -
- Advertisement -