20.8 C
Sidlaghatta
Saturday, October 11, 2025

ಕರಾಟೆಯು ವ್ಯಕ್ತಿತ್ವವನ್ನು ರೂಪಿಸುತ್ತದೆ – ವಿ.ಮುನಿಯಪ್ಪ

- Advertisement -
- Advertisement -

ಕರಾಟೆ ಕಲೆಯನ್ನು ಕಲಿಯುವ ಎಲ್ಲರಿಗೂ ಆರೋಗ್ಯ, ಧೈರ್ಯ, ಶಿಸ್ತನ್ನು ಮೈಗೂಡಿಸಿಕೊಳ್ಳಲು ಸಹಾಯವಾಗುತ್ತದೆ ಮತ್ತು ಒತ್ತಡದ ಜೀವನವನ್ನು ಎದುರಿಸಲು ಸಹಕಾರಿ ಎಂದು ಕೆ.ಪಿ.ಸಿ.ಸಿ ಉಪಾಧ್ಯಕ್ಷ ವಿ.ಮುನಿಯಪ್ಪ ತಿಳಿಸಿದರು.
ಪಟ್ಟಣದ ವಾಸವಿ ಕಲ್ಯಾಣಮಂಟಪದಲ್ಲಿ ಭಾನುವಾರ ದಿವ್ಯಭಾರತ್ ಕರಾಟೆ ಡೋ ಅಸೋಸಿಯೇಷನ್ ವತಿಯಿಂದ ನಡೆದ ಎರಡನೇ ವರ್ಷದ ಜಿಲ್ಲಾ ಮಟ್ಟದ ಕರಾಟೆ ಪಂದ್ಯಾವಳಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
12jan1ಕರಾಟೆ ಕಲೆಯು ಒಂದು ಆತ್ಮರಕ್ಷಣೆಯ ವಿಧಾನವಾಗಿದೆ. ವ್ಯಾಯಾಮ ಎಂಬುದು ಪ್ರತಿಯೊಬ್ಬರಿಗೂ ಅತ್ಯವಶ್ಯಕ. ಗರಡಿ ಮನೆಯಿಂದ ಕರಾಟೆ ವರೆಗೂ ಸಾಗಿರುವ ಈ ದೇಹ ದಂಡಿಸುವ ಕಲೆಗಳಿಂದ ವ್ಯಕ್ತಿತ್ವವೂ ಕೂಡ ರೂಪುಗೊಳ್ಳುತ್ತದೆ. ಮಕ್ಕಳು ಪ್ರದರ್ಶನ ನೀಡಿದ್ದನ್ನು ಕಂಡು ನಮ್ಮ ಊರಿನಲ್ಲೂ ಈ ಪ್ರತಿಭೆಗಳಿವೆಯೇ ಎಂದು ಹೆಮ್ಮೆ ಪಡುವಂತಾಗಿದೆ ಎಂದು ಹೇಳಿದರು.
ದಿವ್ಯಭಾರತ್ ಕರಾಟೆ ಡೋ ಅಸೋಸಿಯೇಷನ್ ವಿದ್ಯಾರ್ಥಿಗಳು ಕತಾ, ಪಿರಮಿಡ್ ಹಾಗೂ ವಿವಿಧ ಕಲಾಟೆಯ ಕೌಶಲ್ಯಗಳನ್ನು ಪ್ರದರ್ಶಿಸಿದರು.
ಗೋಜು ರಿಯೊ ಕರಾಟೆ ಡೊ ಸೇವಾ ಕಾಯ್ ಬಾಂಬೆ ಮುಖ್ಯಸ್ಥ ಶಿಹಾನ್ ಸಂದೀಪ್ ಸಾಲ್ವಿ, ಜಿಲ್ಲಾ ಮುಖ್ಯಸ್ಥ ಜಬೀವುಲ್ಲಾ, ದಿವ್ಯಭಾರತ್ ಕರಾಟೆ ಡೋ ಅಸೋಸಿಯೇಷನ್ ಮುಖ್ಯಸ್ಥ ಅರುಣ್ ಕುಮಾರ್, ಜಿಲ್ಲಾ ಪಂಚಾಯತಿ ಸದಸ್ಯ ಎಸ್.ಎಂ.ನಾರಾಯಣಸ್ವಾಮಿ, ಮಾಜಿ ಅಧ್ಯಕ್ಷ ಸುಬ್ರಮಣಿ, ಪುರಸಭಾ ಸದಸ್ಯ ಕೇಶವಮೂರ್ತಿ, ರಾಜ್ಕುಮಾರ್, ಛಲಪತಿ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!
error: Content is protected !!