20.1 C
Sidlaghatta
Tuesday, October 28, 2025

ಕಾಂಗ್ರೆಸ್‌ ಪಕ್ಷದಿಂದ 'ನಮ್ಮ ವಾರ್ಡ್‌ ನಮ್ಮ ಜವಾಬ್ದಾರಿ' ಕಾರ್ಯಕ್ರಮಕ್ಕೆ ಚಾಲನೆ

- Advertisement -
- Advertisement -

ಶಿಡ್ಲಘಟ್ಟ ನಗರದ 20ನೇ ವಾರ್ಡಿನಲ್ಲಿ ‘ನಮ್ಮ ವಾರ್ಡ್‌ ನಮ್ಮ ಜವಾಬ್ದಾರಿ’ ಎಂಬ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಕಾಂಗ್ರೆಸ್‌ ಕಾರ್ಯಕರ್ತರು ತಮ್ಮ ವಾರ್ಡ್‌ಗಳಲ್ಲಿನ ಜನರಿಗೆ ಸರ್ಕಾರದ ಜನಪರ ಯೋಜನೆಗಳ ಬಗ್ಗೆ ಮಾಹಿತಿ ನೀಡಬೇಕು ಎಂದು ಚಿಲಕಲನೇರ್ಪು ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಎಂ.ಶಶಿಧರ್‌ ಕಾರ್ಯಕರ್ತರಿಗೆ ತಿಳಿಸಿದರು.
ಪ್ರತಿಯೊಬ್ಬರೂ ಮತ ಚಲಾಯಿಸಬೇಕು ಎಂಬ ಅರಿವನ್ನು ಮೂಡಿಸುತ್ತಾ ಜನರಲ್ಲಿ ಕಾಂಗ್ರೆಸ್‌ ಸರ್ಕಾರದ ಕಾರ್ಯ ಯೋಜನೆಗಳ ಬಗ್ಗೆ ಅರಿವು ಮೂಡಿಸಬೇಕು. ನಮ್ಮ ಕ್ಷೇತ್ರಕಕೆ, ಅವರವರ ವಾರ್ಡ್‌ಗಳಿಗೆ ಅಗತ್ಯತೆಗಳನ್ನು ಪೂರೈಸಲು ಕಾಂಗ್ರೆಸ್‌ ಸರ್ಕಾರ ಬದ್ಧವಾಗಿರುವ ಸಂಗತಿಯನ್ನು ಮನವರಿಕೆ ಮಾಡಿಕೊಡಬೇಕು. ಜನರ ಬಳಿ ಹೋಗಿ ಕಾರ್ಯಕರ್ತರು ಮಾತನಾಡಿದಾಗ ಮಾತ್ರ ವಿಶ್ವಾಸ ಮೂಡುತ್ತದೆ. ನಗರದ ಕಾಂಗ್ರೆಸ್‌ ಕಾರ್ಯಕರ್ತರು ಅವರವರ ವಾರ್ಡ್‌ಗಳಲ್ಲಿ ‘ನಮ್ಮ ವಾರ್ಡ್‌ ನಮ್ಮ ಜವಾಬ್ದಾರಿ’ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಹೇಳಿದರು.
ಮಹಿಳಾ ಬ್ಲಾಕ್‌ ಕಾಂಗ್ರೆಸ್‌ ಸಮಿತಿ ಅಧ್ಯಕ್ಷೆ ಎಸ್‌.ಯಾಸ್ಮೀನ್‌ ತಾಜ್‌, ಮಹಬೂಬ್‌ ಪಾಷ, ಅಮ್ಜದ್‌ನವಾಜ್‌, ಹಫೀಜುಲ್ಲಾ, ಗುಡಿಹಳ್ಳಿ ಚಂದ್ರು, ರಾಜ್‌ಕುಮಾರ್‌, ಗಫೂರ್‌ ಹಾಜರಿದ್ದರು.

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!
error: Content is protected !!