ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಸಂಘದ ವತಿಯಿಂದ ಸೋಮವಾರ ಜಂಗಮಕೋಟೆ ಎಸ್.ಎಫ್.ಸಿ.ಎಸ್ ನಿಂದ ಮಹಿಳಾ ಸಹಾಯ ಸಂಘಗಳಿಗೆ ಸಾಲ ವಿತರಣೆ ಮತ್ತು ರೈತರಿಗೆ ಕೆಸಿಸಿ ಸಾಲ ವಿತರಣಾ ಸಮಾರಂಭದಲ್ಲಿ ಶಾಸಕ ವಿ ಮುನಿಯಪ್ಪ ಮಾತನಾಡಿದರು.
ಗೃಹಿಣಿಯರು ಕೂಡ ಆರ್ಥಿಕವಾಗಿ ಸಾವಲಂಬಿಗಳಾಗಬೇಕು. ಮನೆಯ ಜವಾಬ್ದಾರಿಯನ್ನು ನಿಭಾಯಿಸುತ್ತಲೇ ಕುಟುಂಬದ ಅಭಿವೃದ್ಧಿಗೆ ಕೂಡ ನೆರವಾಗಬೇಕಾದುದು ಬಹಳ ಮುಖ್ಯವಾದದ್ದು ಎಂದು ಅವರು ತಿಳಿಸಿದರು.
ಮಹಿಳೆಯರಿಗೆ ಸಹಾಯ ಸಂಘಗಳಿಂದ ಸಾಲ ನೀಡುವುದರಿಂದ ಸರಿಯಾದ ಸಮಯಕ್ಕೆ ಸಾಲ ಮರುಪಾವತಿ ಆಗುತ್ತದೆ. ಈ ನಿಟ್ಟಿನಲ್ಲಿ 24 ಮಹಿಳಾ ಸ್ವಸಹಾಯ ಸಂಘಗಳಿಗೆ 62 ಲಕ್ಷ ರೂ ಹಾಗೂ ಕೆಸಿಸಿ ಸಾಲ ಯೋಜನೆಯಡಿಯಲ್ಲಿ 120 ಜನ ರೈತರಿಗೆ 1 ಕೋಟೆ 10 ಲಕ್ಷ ರೂಗಳನ್ನು ನೀಡಲಾಗುತ್ತಿದೆ ಎಂದರು.
ಡಿಸಿಸಿ ಬ್ಯಾಂಕ್ ಅಧ್ಯಕ್ಷ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದೇಗೌಡ ಮಾತನಾಡಿ, 20 ಕಂತುಗಳಲ್ಲಿ ಸುಲಭವಾಗಿ ಸಾಲ ಮರುಪಾವತಿ ಮಾಡುವ ನಿಟ್ಟಿನಲ್ಲಿ ಯೋಜನೆಯನ್ನು ರೂಪಿಸಿ ಮಹಿಳಾ ಸಂಘಗಳಿಗೆ ಸಾಲ ನೀಡಲಾಗುತ್ತಿದೆ. ಸಂಘಗಳಿಗೆ ನೀಡುತ್ತಿರುವ ಈ ಸಾಲಕ್ಕೆ ಯಾವುದೇ ರೀತಿಯ ಬಡ್ಡಿ ಇರುವುದಿಲ್ಲ. ಮುಂದಿನ ದಿನಗಳಲ್ಲಿ ಪ್ರತಿ ಗ್ರಾಮಕ್ಕೂ ತೆರಳಿ ಪ್ರತಿ ಸಂಘಕ್ಕೂ ಸಾಲ ವಿತರಿಸುವ ಯೋಜನೆ ನಮ್ಮದಾಗಿದೆ. ಒಂದು ಲಕ್ಷ ಹೆಣ್ಣುಮಕ್ಕಳಿಗೆ ಸ್ವಾವಲಂಬಿಯಾಗಿ ಜೀವನ ಸಾಗಿಸಲು ಸಾಲ ನೀಡಲಾಗುವುದು. ಒಟ್ಟು 50 ಕೋಟಿ ಸಾಲ ನೀಡುವ ವ್ಯವಸ್ಥೆ ಮಾಡಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ಜಂಗಮಕೋಟೆ ಎಸ್.ಎಫ್.ಸಿ.ಎಸ್ ಅಧ್ಯಕ್ಷ ಜೆ.ಎಂ.ಹನುಮಂತಪ್ಪ, ಡಿಸಿಸಿ ಬ್ಯಾಂಕ್ ಜಿಲ್ಲಾ ಉಪಾಧ್ಯಕ್ಷ ನಾಗರಾಜ್, ಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ಆನಂದ್, ಗುಡಿಯಪ್ಪ, ತಾಲ್ಲೂಕು ಪಂಚಾಯಿತಿ ಸದಸ್ಯ ನಾಗರಾಜ್, ಜೆ.ಎಮ್.ವೆಂಕಟೇಶ್ , ಮಂಜುಳಾ ಗುಂಡಪ್ಪ, ಮುನಿರತ್ನಮ್ಮ, ಶ್ರೀನಿವಾಸ್, ಮುನೇಗೌಡ, ಸಲೀಂ, ಕೃಷ್ಣಪ್ಪ, ಬಾಬು, ಪರಮೇಶ್ ಹಾಜರಿದ್ದರು.
- Advertisement -
- Advertisement -
- Advertisement -