19 C
Sidlaghatta
Sunday, October 12, 2025

ಗ್ರಾಮೀಣ ಮಕ್ಕಳು ಕೂಡ ಉನ್ನತ ಸಾಧನೆಗಳನ್ನು ಮಾಡಬಹುದು

- Advertisement -
- Advertisement -

ಗುಣಮಟ್ಟದ ಶಿಕ್ಷಣ ಸಿಕ್ಕಲ್ಲಿ ಗ್ರಾಮೀಣ ಮಕ್ಕಳು ಕೂಡ ಉನ್ನತ ಸಾಧನೆಗಳನ್ನು ಮಾಡಬಹುದು ಎಂದು ಖ್ಯಾತ ಸಮಾಜವಾದಿ ಚಿಂತಕ ಬಾಪು ಹೆದ್ದೂರ್‌ ಶೆಟ್ಟಿ ತಿಳಿಸಿದರು.
ತಾಲ್ಲೂಕಿನ ಭಕ್ತರಹಳ್ಳಿ ಗ್ರಾಮದ ಬಿಎಂವಿ ಎಜುಕೇಷನ್ ಟ್ರಸ್ಟ್ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ಶಾಲಾ ವಾರ್ಷಿಕೋತ್ಸವದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ನಗರ ಪ್ರದೇಶದಲ್ಲಿ ವ್ಯಾಸಂಗ ಮಾಡುವವರು ಮಾತ್ರ ಉನ್ನತ ಸ್ಥಾನಕ್ಕೆ ಏರಬಲ್ಲರು ಎಂಬ ಭ್ರಮೆ ಬೇಡ. ಉತ್ತಮ ಹವ್ಯಾಸ, ಗುರಿ, ಮಾರ್ಗದರ್ಶನ, ತಾಂತ್ರಿಕತೆ, ಸೂಕ್ತ ವಾತಾವರಣ ಕಲ್ಪಿಸಿದಲ್ಲಿ ಗ್ರಾಮೀಣ ಪ್ರತಿಭೆಗಳು ಅರಳಬಲ್ಲವು. ಚರಿತ್ರೆಯನ್ನು ಅವಲೋಕಿಸಿದಾಗ ಮಾತೃಭಾಷೆಯಲ್ಲಿ ವ್ಯಾಸಂಗ ಮಾಡಿ ಸಾಧನೆಗೈದ ಮಹಾನುಭಾವರ ಪಟ್ಟಿಯೇ ನಮಗೆ ಸಿಗುತ್ತದೆ. ಕನ್ನಡದಲ್ಲಿ ಕಲಿತರೆ ನಂತರ ಇತರ ಭಾಷೆಗಳನ್ನು ಸುಲಭವಾಗಿ ಕಲಿಯಬಹುದು. ನಮ್ಮ ಕನ್ನಡ ಭಾಷೆಯ ಬಗ್ಗೆ ಹೆಮ್ಮೆ, ಅಭಿಮಾನ, ಪ್ರಾಧಾನ್ಯತೆ ಮತ್ತು ಪ್ರೀತಿಯನ್ನು ಹೊಂದಬೇಕು. ಇಷ್ಟಪಟ್ಟು ಮಾಡುವ ಕೆಲಸ ಯಾವುದೂ ಕಷ್ಟವೆನಿಸದು ಎಂದು ಹೇಳಿದರು.
ಮಕ್ಕಳು ಸಮಾಜದಲ್ಲಿ ಬದಲಾವಣೆಯನ್ನು ತರುವ ನಿಟ್ಟಿನಲ್ಲಿ ಅವರಿಗೆ ಶಿಕ್ಷಕರು ಮಾರ್ಗದರ್ಶನ ಮಾಡಬೇಕು. ಮಕ್ಕಳು ಭಾಷೆಯನ್ನು ಪ್ರೀತಿಸುತ್ತಾ, ವಿಷಯವನ್ನು ಅರ್ಥ ಮಾಡಿಕೊಳ್ಳಬೇಕು. ಶಿಕ್ಷಣದ ಜೊತೆಗೆ ಸಮಾಜದ ಚಿಂತನೆಯನ್ನು ಮಾಡಬೇಕು ಎಂದು ಅವರು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಸಾಹಿತಿ ಹಾಗೂ ದೇವನಹಳ್ಳಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಎಲ್.ಎನ್. ಮುಕುಂದರಾಜ್‌ ಮಾತನಾಡಿ, ಪಠ್ಯೇತರ ಚಟುವಟಿಕೆಗಳು, ಕ್ರೀಡೆ ಮುಂತಾದವುಗಳು ಮಕ್ಕಳ ಮನೋಸ್ಥೈರ್ಯ, ಆತ್ಮವಿಶ್ವಾಸ ಹೆಚ್ಚಿಸುತ್ತವೆ. ಕೇವಲ ಪಾಠವೊಂದನ್ನೇ ಕಲಿತರೆ ಸಾಲದು, ಕನ್ನಡ ಸಾಹಿತ್ಯ, ವಿವಿಧ ಹವ್ಯಾಸ, ಚಾರಣ, ಪ್ರವಾಸ, ಕೃಷಿ ಮುಂತಾದ ವಿಷಗಳ ಬಗ್ಗೆಯೂ ಮಕ್ಕಳು ತೊಡಗಿಸಿಕೊಳ್ಳುವ ವಾತಾವರಣವನ್ನು ಸೃಷ್ಟಿಸಬೇಕು ಎಂದರು.
ಶಾಲಾ ಮಕ್ಕಳು ನಡೆಸಿಕೊಟ್ಟ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಪೋಷಕರ, ಗ್ರಾಮಸ್ಥರ ಮನಸೂರೆಗೊಂಡಿತು.
ಗ್ರಾಮದ ಹಿರಿಯರಾದ ಎಂ.ವೆಂಕಟಮೂರ್ತಿ, ಬಿಎಂವಿ ಎಜುಕೇಷನ್ ಟ್ರಸ್ಟ್ ಕಾರ್ಯದರ್ಶಿ ಎಲ್‌.ಕಾಳಪ್ಪ, ರೈತ ಸಂಘದ ಜಿಲ್ಲಾದ್ಯಕ್ಷ ಭಕ್ತರಹಳ್ಳಿ ಬೈರೇಗೌಡ, ತಾಲ್ಲೂಕು ಪಂಚಾಯಿತಿ ಸದಸ್ಯೆ ಚಂದ್ರಕಲಾ ಬೈರೇಗೌಡ, ಸ್ಮೈಲ್ ಪೌಂಡೇಶನ್‌ನ ಪ್ರದೀಪ್ ರಾಧಾಕೃಷ್ಣ, ಭಕ್ತರಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಗೋಪಾಲಗೌಡ, ಭಕ್ತರಹಳ್ಳಿ ಎಮ್‌ಪಿಸಿಎಸ್ ಅಧ್ಯಕ್ಷ ಚನ್ನೇಗೌಡ, ನಂಜೇಗೌಡ, ಪಿಡಿಓ ಯಮುನಾರಾಣಿ ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!
error: Content is protected !!