ನಗರದ ದಿಬ್ಬೂರಹಳ್ಳಿ ರಸ್ತೆಯಲ್ಲಿ ರಸ್ತೆ ಡಾಂಬರೀಕರಣದ ಕಾಮಗಾರಿಗೆ ಸೋಮವಾರ ಚಾಲನೆ ನೀಡಿ ಶಾಸಕ ವಿ.ಮುನಿಯಪ್ಪ ಅವರು ಮಾತನಾಡಿದರು.
ನಗರದಲ್ಲಿ ರಸ್ತೆ ಅಭಿವೃದ್ಧಿಗಾಗಿ ಹನ್ನೊಂದು ಕೋಟಿ ಇಪ್ಪತ್ತೈದು ಲಕ್ಷ ರೂಗಳ ಹಣವನ್ನು ಮೀಸಲಿಟ್ಟು ಡಾಂಬರೀಕರಣ ಕಾರ್ಯವನ್ನು ಪ್ರಾರಂಭಿಸಲಾಗುತ್ತಿದೆ ಎಂದು ಅವರು ತಿಳಿಸಿದರು.
ನಗರಕ್ಕೆ ಸೇರಿಕೊಂಡಿರುವ ಒಟ್ಟು 5 ಕಿ.ಮೀ ರಸ್ತೆಯನ್ನು ಡಾಂಬರೀಕರಣ ಮಾಡಲಾಗುತ್ತಿದೆ. ನಗರೋತ್ತಾನದ ಹಣದೊಂದಿಗೆ ನಬಾರ್ಡ್ ನೆರವಿನ 2 ಕೋಟಿ ರೂಗಳನ್ನು ಸಹ ರಸ್ತೆ ಅಭಿವೃದ್ಧಿಗೆ ಬಳಸಲಾಗುತ್ತಿದೆ. ಗುಣಮಟ್ಟದಲ್ಲಿ ರಾಜಿ ಇಲ್ಲದೆ ಕಾಮಗಾರಿ ನಡೆಸುವಂತೆ ಸೂಚನೆಗಳನ್ನು ನೀಡಿದ್ದೇವೆ ಎಂದರು.
ಆಶ್ರಯ ಲೇಔಟ್‌ನಲ್ಲಿ ಕಾಂಕ್ರೀಟ್ ರಸ್ತೆ ಮತ್ತು ಚರಂಡಿಗೆ ಒಂದು ಕೋಟಿ ಮೀಸಲಿಡಲಾಗುವುದು. ಸುಮಾರು 35 ಕೊಳವೆ ಬಾವಿಗಳಿಗೆ ಟೆಂಡರ್ ಪ್ರಕ್ರಿಯೆ ನಡೆಸಿ ನಗರದ ಪ್ರತಿಯೊಂದು ವಾರ್ಡಿನಲ್ಲೂ ಕೊಳವೆ ಬಾವಿಗಳನ್ನು ಕೊರೆಸಲಾಗುವುದೆಂದರು.
ಈ ಸಂದರ್ಭದಲ್ಲಿ ನಗರದ ರೇಷ್ಮೆ ಕಚೇರಿಯ ಆವರಣದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಇಂದಿರಾ ಕ್ಯಾಂಟೀನ್‌ಗೆ ಕೊಳವೆ ಬಾವಿಯನ್ನು ಕೊರೆಸಲು ಪೂಜೆಯನ್ನು ನೆರವೇರಿಸಿ, ಚಿಕ್ಕಬಳ್ಳಾಪುರ ರಸ್ತೆಯಲ್ಲಿ ಕೆರೆಯ ಏರಿಯ ಮೇಲೆ ರಸ್ತೆ ನಡುವೆ ದೀಪಗಳನ್ನು ಅಳವಡಿಸಿರುವುದನ್ನು ವೀಕ್ಷಿಸಿದರು.
ನಗರಸಭೆ ಆಯುಕ್ತ ಜಿ.ಎನ್.ಚಲಪತಿ, ಅಧ್ಯಕ್ಷ ಅಫ್ಸರ್‌ಪಾಷ, ಎಂಜಿನಿಯರ್ ಗಂಗಾಧರನ್, ಸರ್ಕಲ್ ಇನ್ಸ್‌ಪೆಕ್ಟರ್ ಸಿದ್ದರಾಜು, ಯಾಸ್ಮೀನ್‌ತಾಜ್, ಟಿ.ಕೆ.ನಟರಾಜ್, ರಾಜ್‌ಕುಮಾರ್, ನಗರಸಭೆಯ ಸದಸ್ಯರು ಹಾಜರಿದ್ದರು.
- Advertisement -
- Advertisement -
For Daily Updates
WhatsApp 'HI' to 7406303366
- Advertisement -
- Advertisement -







