ರಾಜ್ಯದ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಜಾರಿಯಲ್ಲಿರುವ ಮಹತ್ವಾಕಾಂಕ್ಷೆಯ ಮಧ್ಯಾಹ್ನದ ಅಕ್ಷರದಾಸೋಹ ಬಿಸಿಯೂಟ ಯೋಜನೆಯ ಸಂಪೂರ್ಣ ಮಾಹಿತಿಯು ರಾಜ್ಯಮಟ್ಟದಲ್ಲಿ ಸ್ಯಾಟ್ಸ್ ಮೂಲಕ ಕ್ಷಣಾರ್ಧದಲ್ಲಿ ಲಭ್ಯವಾಗಲಿದೆ ಎಂದು ತಾಲ್ಲೂಕು ಅಕ್ಷರದಾಸೋಹ ಸಹಾಯಕ ನಿರ್ದೇಶಕ ಆಂಜನೇಯ ತಿಳಿಸಿದರು.
ನಗರದ ಡಾಲ್ಫಿನ್ ಶಾಲೆಯಲ್ಲಿ ತಾಲ್ಲೂಕು ಪಂಚಾಯಿತಿ, ಸಾರ್ವಜನಿಕ ಶಿಕ್ಷಣ ಇಲಾಖೆಯ ವತಿಯಿಂದ ಪ್ರಾಥಮಿಕ ಮತ್ತು ಪ್ರೌಢಶಾಲಾ ಮುಖ್ಯಶಿಕ್ಷಕರಿಗಾಗಿ ಹಮ್ಮಿಕೊಂಡಿದ್ದ ಸ್ಯಾಟ್ಸ್ ಎಂಡಿಎಂ ತಂತ್ರಾಂಶ ಕುರಿತ ತರಬೇತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ಎಸ್ಎಟಿಎಸ್ ಎಂಡಿಎಂ ತಂತ್ರಾಂಶವನ್ನು ಅಭಿವೃದ್ಧಿಪಡಿಸಲಾಗಿದ್ದು ಮುಖ್ಯಶಿಕ್ಷಕರು ಪ್ರತಿನಿತ್ಯವೂ ಮಕ್ಕಳ ಹಾಜರಾತಿ, ಅಡುಗೆ ಸಿಬ್ಬಂದಿ ಹಾಜರಾತಿ, ಬಿಸಿಯೂಟ ನಿರ್ವಹಣೆ, ಮಾಸಿಕ ದಿನಸಿ ಬೇಡಿಕೆ, ಶಾಲೆಯಲ್ಲಿ ಲಭ್ಯ ಮೂಲಸೌಕರ್ಯಗಳ ಕುರಿತು ಅಪ್ಲೋಡ್ ಮಾಡಬೇಕು. ರಾಜ್ಯಮಟ್ಟದಲ್ಲಿ ಕ್ಷಣಾರ್ಧದಲ್ಲಿ ಮಾಹಿತಿಯ ಸಂಗ್ರಹಣೆಯಾಗಲಿದೆ ಎಂದರು.
ಕಲಿಕೆಗೆ ಅವಕಾಶ: ಈಗಾಗಲೇ ತಾತ್ಕಾಲಿಕವಾಗಿ ತಂತ್ರಾಂಶದಲ್ಲಿ ಮಾಹಿತಿ, ನಮೂನೆಗಳನ್ನು ತುಂಬಲು ಅವಕಾಶ ನೀಡಲಾಗಿದ್ದು ಶೈಕ್ಷಣಿಕ ವರ್ಷಾರಂಭಕ್ಕೆ ಶಾಲೆಗಳು ಆರಂಭವಾಗುವಷ್ಟರಲ್ಲಿ ಮುಖ್ಯಶಿಕ್ಷಕರು ಸ್ಯಾಂಪಲ್ ಮಾಹಿತಿಗಳನ್ನು ತುಂಬಿ ಅಭ್ಯಾಸ ಮಾಡಿಕೊಳ್ಳಲು ಅವಕಾಶ ಕಲ್ಪಿಸಿದ್ದು ಬಳಕೆ ಮಾಡಿಕೊಳ್ಳಬಹುದಾಗಿದೆ ಎಂದರು.
ಕ್ಷೇತ್ರಶಿಕ್ಷಣಾಧಿಕಾರಿ ಆರ್.ಶ್ರೀನಿವಾಸ್ ಮಾತನಾಡಿ, ತಾಲ್ಲೂಕಿನ ಎಲ್ಲಾ ಶಾಲೆಗಳ ಮುಖ್ಯಶಿಕ್ಷಕರಿಗೆ ತರಬೇತಿ ನೀಡಲಾಗಿದೆ. ಮಹತ್ವಾಕಾಂಕ್ಷೆಯ ಬಿಸಿಯೂಟ ಯೋಜನೆಯಿಂದ ಮಕ್ಕಳಲ್ಲಿ ಸಪೌಷ್ಟಿಕತೆ ಹೆಚ್ಚುವುದರಿಂದ ಮಾನಸಿಕ, ದೈಹಿಕ ಸದೃಡತೆ ವೃದ್ಧಿಯಾಗುತ್ತಿದೆ. ಯೋಜನೆಯು ಶಾಲೆಗಳಲ್ಲಿ ಯಶಸ್ವಿಯಾಗಿ ಪ್ರಾಮಾನಿಕವಾಗಿ ಅನುಷ್ಟಾನಗೊಳಿಸುವಲ್ಲಿ ಬೋದಕವರ್ಗವು ಮುತುವರ್ಜಿ ವಹಿಸಬೇಕು ಎಂದರು.
ವಿನ್ಸ್ಟಾರ್ ಮಾಹಿತಿ ಸಂಗ್ರಹಣೆ: ಚಿಕ್ಕಬಳ್ಳಾಪುರ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಉಪನ್ಯಾಸಕಿ ಮಮತಾ ಮಾತನಾಡಿ, ಯೂನಿಸೆಫ್ ಮತ್ತು ಕೇಂದ್ರದ ಮಾನವಸಂಪನ್ಮೂಲ ಸಚಿವಾಲಯವು ಶಾಲೆಗಳಲ್ಲಿ ಲಭ್ಯವಿರುವ ಸ್ವಚ್ಚತೆ, ಕುಡಿಯುವನೀರು, ಕಷವಿಲೇವಾರಿ ಮತ್ತಿತರ ಮಾಹಿತಿಗಳನ್ನೊಳಗೊಂಡಂತೆ ವಿನ್ಸ್ಟಾರ್ ರ್ಯಾಂ ಕಿಂಗ್ ಟೂಲ್ ಮೂಲಕ ಮಾಹಿತಿ ಸಂಗ್ರಹಣೆ ಮಾಡುತ್ತಿದ್ದು ಜಿಲ್ಲೆಯ ಎಲ್ಲಾ ಶಾಲೆಗಳೂ ತಪ್ಪದೇ ಕೂಡಲೇ ಆಪ್ನ್ನು ಡೌನ್ಲೋಡ್ ಮಾಡಿಕೊಂಡು ಮಾಹಿತಿ ತುಂಬಬೇಕಿದೆ ಎಂದರು.
ಬಿಆರ್ಸಿಯ ಪ್ರಭಾರಿ ಕ್ಷೇತ್ರಸಂಪನ್ಮೂಲಾಧಿಕಾರಿ ತ್ಯಾಗರಾಜು, ಇಸಿಒ ಭಾಸ್ಕರಗೌಡ, ಪರಿಮಳಾ, ಸಂಪನ್ಮೂಲ ವ್ಯಕ್ತಿ ಎಲ್.ವೆಂಕಟರೆಡ್ಡಿ, ರಾಜು, ಚಂದ್ರಶೇಖರ್, ಪ್ರಭಾಕರ್, ಚಂದ್ರು, ತಾಲ್ಲೂಕಿನ ಎಲ್ಲಾ ಸರ್ಕಾರಿ ಮತ್ತು ಅನುದಾನಿತ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಮುಖ್ಯಶಿಕ್ಷಕರು ಹಾಜರಿದ್ದರು.
- Advertisement -
- Advertisement -
- Advertisement -







