ಚಿಕಿತ್ಸೆಗಾಗಿ ನಾಗರಿಕರು ನಗರಕ್ಕೆ ಬರಬೇಕಾದ ಪರಿಸ್ಥಿತಿ ತಪ್ಪಿಸಿ ತಜ್ಞ ವೈದ್ಯರೇ ಹಳ್ಳಿಗೆ ಬಂದು ಜನರಿಗೆ ಆರೋಗ್ಯ ಸೇವೆ ಮಾಡುವ ಉದ್ದೇಶದಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದು ಬೆಂಗಳೂರಿನ ಆಧ್ಯತೆ ಟ್ರಸ್ಟ್ ನ ವ್ಯವಸ್ಥಾಪಕ ಟ್ರಸ್ಟಿ ದೀಪಕ್ ತಿಳಿಸಿದರು.
ತಾಲ್ಲೂಕಿನ ಮೇಲೂರು ಗ್ರಾಮದಲ್ಲಿ ಸರ್ಕಾರಿ ಆಸ್ಪತ್ರೆಯ ಆವರಣದಲ್ಲಿ ಭಾನುವಾರ ಬೆಂಗಳೂರಿನ ಆಧ್ಯತೆ ಟ್ರಸ್ಟ್, ಆಸ್ಟರ್ ಸಿ.ಎಂ.ಐ ಆಸ್ಪತ್ರೆ, ಮೇಲೂರಿನ ಡಾ.ರಾಜ್‌ಕುಮಾರ್ ಅಬಿಮಾನಿಗಳ ಸಂಘ, ಮೇಲೂರು ಕನ್ನಡ ರೈತ ಯುವಕ ಸಂಘದ ಸಂಯುಕ್ತಾಶ್ರಯದಲ್ಲಿ ನಡೆದ ಉಚಿತ ಆರೊಗ್ಯ ತಪಾಸಣಾ ಶಿಬಿರದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಗ್ರಾಮೀಣ ಭಾಗದ ಜನರು ಮಧ್ಯಮ ವರ್ಗಕ್ಕೆ ಸೇರಿದ್ದು, ಬೆಂಗಳೂರಿನಂತಹ ದೊಡ್ಡ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಬೇಕಾದರೆ ಲಕ್ಷಾಂತರ ರೂ ವೆಚ್ಚವಾಗುತ್ತಿದ್ದು, ಅವರಿಗೆ ಟ್ರಸ್ಟ್‌ನ ವತಿಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಂಡಿದ್ದು, ಆಸ್ಟರ್ ಸಿ.ಎಂ.ಐ ಆಸ್ಪತ್ರೆಯ ಕಣ್ಣಿನ ವೈದ್ಯರು, ಸ್ತ್ರೀ ತಜ್ಞ ವೈದ್ಯರು ಇನ್ನೂ ಹಲವಾರು ವೈದ್ಯರು ತಪಾಸಣಾ ಶಬಿರದಲ್ಲಿ ಇದ್ದು, ತಪಾಸಣೆ ಮಾಡಿ ಚಿಕಿತ್ಸೆ ನೀಡುವುದಾಗಿ ತಿಳಿಸಿದರು.
ಗ್ರಾಮದ ಮುಖಂಡರಾದ ಧರ್ಮೇಂದ್ರ, ಸುದರ್ಶನ್, ಆರ್.ಎ.ಉಮೇಶ್, ರಾಮಾಂಜಿನಪ್ಪ, ಲಕ್ಷಣ್, ಕೃಷ್ಣಮೂರ್ತಿ, ಆನಂದ್, ವೆಂಕಟೇಶ್, ಆಸ್ಟರ್ ಸಿ.ಎಂ.ಐ ಆಸ್ಪತ್ರೆಯ ವೈದ್ಯರಾದ ಡಾ.ಅರ್ಪಿತ್, ಡಾ.ವಿನುತ ಹಾಜರಿದ್ದರು.
- Advertisement -
- Advertisement -
For Daily Updates
WhatsApp 'HI' to 7406303366
- Advertisement -
- Advertisement -







