ಹಣದ ವಹಿವಾಟಿನ ಸಮಸ್ಯೆಗಳ ಬಗ್ಗೆ ರೀಲರುಗಳು ದೂರಿದ್ದು ಚುನಾವಣೆಯ ನಂತರ ಸರಿಹೋಗಲಿದೆ ಎಂದು ರಾಜ್ಯ ರೇಷ್ಮೆ ಅಭಿವೃದ್ಧಿ ಆಯುಕ್ತ ಮಂಜುನಾಥ್ ತಿಳಿಸಿದರು.
ನಗರದ ರೇಷ್ಮೆ ಗೂಡಿನ ಮಾರುಕಟ್ಟೆಗೆ ಶನಿವಾರ ಭೇಟಿ ನೀಡಿ ಮಾರುಕಟ್ಟೆಯ ಕುಂದುಕೊರತೆಗಳನ್ನು ಪರಿಶೀಲಿಸಿ, ರೀಲರುಗಳು ಹಾಗೂ ರೈತರ ಸಮಸ್ಯೆಗಳನ್ನು ಕೇಳಿ ಅವರು ಮಾತನಾಡಿದರು.
ರೇಷ್ಮೆ ಗೂಡಿನ ಮಾರುಕಟ್ಟೆಯಲ್ಲಿ ಬ್ಯಾಂಕ್ ಅಗತ್ಯತೆಯನ್ನು ತಿಳಿಸಿದ್ದಾರೆ. ಈಗಾಗಲೇ ತಾಂತ್ರಿಕತೆಯನ್ನು ಬಳಸಿಕೊಂಡು ಇ ಹರಾಜು ಪದ್ಧತಿಯನ್ನು ಜಾರಿಗೊಳಿಸಿದ್ದೇವೆ. ಹೊಸ ಪದ್ಧತಿಗೆ ಹೊಂದಿಕೊಳ್ಳಲು ಕಷ್ಟವಾದರೂ ಪಾರದರ್ಶಕ ಹಾಗೂ ಹಣ ಪೋಲಾಗದಂತೆ ಕಾರ್ಯ ನಿರ್ವಹಿಸಲು ಇ ಹರಾಜು ಅವಶ್ಯವಾಗಿದೆ. ಮುಂದೆ ನಗದು ರಹಿತ ವಹಿವಾಟನ್ನು ಮಾಡುವ ಅವಶ್ಯಕತೆಯಿದೆ. ಆಗ ಹಣ ನೇರವಾಗಿ ರೈತರ ಖಾತೆಗೆ ಜಮೆಯಾಗುತ್ತದೆ. ಮಾರುಕಟ್ಟೆಯಲ್ಲಿ ಸಿಬ್ಬಂದಿಯ ಕೊರತೆಯನ್ನು ತಿಳಿಸಿದ್ದಾರೆ. ಶೌಚಾಲಯದ ಸಮಸ್ಯೆಯಿದೆ. ಎಲ್ಲಾ ಸಮಸ್ಯೆಗಳ ಬಗ್ಗೆಯೂ ಚರ್ಚಿಸಿದ್ದು ಹಂತಹಂತವಾಗಿ ಎಲ್ಲಾ ಅವಶ್ಯಕತೆಗಳನ್ನೂ ಪೂರೈಸಲಾಗುವುದು ಎಂದು ಹೇಳಿದರು.
ರೇಷ್ಮೆ ಇಲಾಖೆಯ ಜಂಟಿ ನಿರ್ದೇಶಕ ಎಸ್.ವಿ.ಕುಮಾರ್, ಉಪ ನಿರ್ದೇಶಕ ಸುಭಾಷ್ ಸಂತೇನಹಳ್ಳಿ, ಸಹಾಯಕ ನಿರ್ದೇಶಕ ಬೋಜಣ್ಣ, ರೀಲರುಗಳಾದ ನಾಗನರಸಿಂಹ, ನರಸಿಂಹಮೂರ್ತಿ, ಮಂಜುನಾಥ್, ಅನ್ಸರ್, ರಾಮಕೃಷ್ಣಪ್ಪ, ಸಾಧಿಕ್, ರೆಹಮಾನ್, ರವಿಕುಮಾರ್ ಹಾಜರಿದ್ದರು.
- Advertisement -
- Advertisement -
For Daily Updates
WhatsApp 'HI' to 7406303366
- Advertisement -
- Advertisement -







