Home News ‘ಅಪ್ಪ’ ಪುಸ್ತಕ ಬಿಡುಗಡೆ ಕಾರ್ಯಕ್ರಮ

‘ಅಪ್ಪ’ ಪುಸ್ತಕ ಬಿಡುಗಡೆ ಕಾರ್ಯಕ್ರಮ

0
Sidlaghatta Nadipinayakanahalli Kapilamma PU College Kannada Sahitya Parishat Appa Book Release Event

Nadipinayakanahalli, Sidlaghatta : ಶಿಡ್ಲಘಟ್ಟ ತಾಲ್ಲೂಕಿನ ನಡಿಪಿನಾಯಕನಹಳ್ಳಿಯ ಕಪಿಲಮ್ಮ ಪಿ.ಯು ಕಾಲೇಜಿನಲ್ಲಿ (Kapilamma PU College), ಕಸಾಪ (Kannada Sahitya Parishat) ವತಿಯಿಂದ ಆಯೋಜಿಸಿದ್ದ, ಲೇಖಕ ಪ್ರಶಾಂತ್ ರಾಮಸ್ವಾಮಿ ಅವರ ‘ಅಪ್ಪ’ (Appa) ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ (Book Release Event) ಕಸಾಪ ತಾಲ್ಲೂಕು ಅಧ್ಯಕ್ಷ ಬಿ.ಆರ್.ಅನಂತಕೃಷ್ಣ ಅವರು ಮಾತನಾಡಿದರು.

ಅಪ್ಪನ ಅಗೋಚರ ಪ್ರೀತಿ ಮತ್ತು ನಿಸ್ವಾರ್ಥ ವ್ಯಕ್ತಿತ್ವವನ್ನು ಪದಗಳನ್ನು ವರ್ಣಿಸುವುದು ಬಹಳ ಕಷ್ಟ. ಅಪ್ಪನೆಂದರೆ ಬದುಕು, ಅಪ್ಪನಿಂದಲೇ ಬೆಳಕು ಎಂಬುದನ್ನು ನಾವೆಲ್ಲರೂ ಮನಗಂಡಿದ್ದೇವೆ ಎಂದು ತಿಳಿಸಿದರು.

ಅಪ್ಪ ಪುಸ್ತಕದಲ್ಲಿ 23 ಲೇಖನಗಳಿವೆ. ಅಪ್ಪ ಮಗನ ಸಂಬಂಧಗಳ ಜೊತೆಗೆ ನಮ್ಮ ನಡುವೆ ನಡೆಯುವ ಹಲವು ವಿಚಾರಗಳನ್ನು ಲೇಖಕರು ಪ್ರಸ್ತುತ ಪಡಿಸಿದ್ದಾರೆ. ತಮ್ಮ ಮಕ್ಕಳ ಯಶಸ್ಸಿಗೆ ಸಹಕರಿಸುವ ಅಪ್ಪ ಪ್ರತಿದಿನವೂ ದಾರಿದೀಪವಾಗಿರುತ್ತಾರೆ. ಹೊಟ್ಟೆ ಕಟ್ಟಿ ದುಡಿದು ಹಾಕುವ, ಎಷ್ಟೇ ಪ್ರೀತಿಯಿದ್ದರು ಮಕ್ಕಳ ಮುಂದೆ ಅದನ್ನು ಅಪ್ಪ ತೋರ್ಪಡಿಸಿವುದಿಲ್ಲ. ಸಮುದ್ರದ ಎದುರಿಗೆ ನಿಂತು ಹೃದಯವೇ ನಡುಗಿಹೊಗುವಂತೆ ಬೀಸಿ ಬರುವ ಅಲೆಗಳಿಗೆ ಹೆದರದೆ ಕೈ ಹಿಡಿದು ನಾನಿದ್ದೇನೆ ಎಂದು ದೈರ್ಯ ತುಂಬಿ ಮುನ್ನಡೆಸುವ ಅಪ್ಪನಿಗಿಂತ ಅತಿದೊಡ್ಡ ಸ್ಫೂರ್ತಿ ಇನ್ನಾವುದಿದೆ ಎಂದರು.

ಕಪಿಲಮ್ಮ ಪಿಯು ಕಾಲೇಜಿನ ಸಂಸ್ಥಾಪಕ ಅಧ್ಯಕ್ಷ ಕೃಷ್ಣಮೂರ್ತಿ ಮಾತನಾಡಿ, ಇವತ್ತು ನಾವು ಬದುಕುತ್ತಿರುವ ಬದುಕು ಇನ್ನೂ ಅದೆಷ್ಟೋ ಜನರಿಗೆ ಕನಸಾಗಿಯೇ ಉಳಿದಿದೆ. ಜೀವನದಲ್ಲಿ ಒಬ್ಬರನ್ನೊಬ್ಬರು ಹೋಲಿಕೆ ಮಾಡಿಕೊಳ್ಳದೆ ಪ್ರತಿಯೊಬ್ಬರು ಸಂತೃಪ್ತ ಜೀವನ ನಡೆಸಬೇಕಿದೆ ಎಂದು ಹೇಳಿದರು.

ಅಪ್ಪ ಪುಸ್ತಕದ ಲೇಖಕ ಪ್ರಶಾಂತ್ ರಾಮಸ್ವಾಮಿ ಮಾತಾನಾಡಿ, ಪತ್ರಿಕೆ, ಪುಸ್ತಕ ಓದುವುದನ್ನು ಎಲ್ಲರೂ ರೂಢಿಸಿಕೊಳ್ಳಬೇಕು. ಪತ್ರಿಕೆಯ ಸುದ್ದಿಗಳು, ಲೇಖನಗಳು ನಮಗೆ ಹೊಸವಿಚಾರಗಳನ್ನು ತಿಳಿಸುತ್ತದೆ. ಕನ್ನಡದ ಹಲವಾರು ಲೇಖಕರ ಪುಸ್ತಕಗಳನ್ನು ಓದಬೇಕು, ಸಾಹಿತ್ಯದ ಹಲವಾರು ವಿಚಾರಗಳನ್ನು ಅರಿತುಕೊಳ್ಞಬೇಕು ‌ಎಂದರು.

ಹಲವಾರು ಸಾಹಿತ್ಯದ ಪುಸ್ತಕಗಳನ್ನು ಓದಿದ್ದರಿಂದ ನನಗೂ ಬರವಣಿಗೆಯಲ್ಲಿ ಆಸಕ್ತಿ ಮೂಡಿತು. ಈ ದಿನ ನನ್ನ ‌ಪುಸ್ತಕ ಅಪ್ಪ ಬಿಡುಗಡೆಯಾಗಿದ್ದು ನನಗೆ ತುಂಬಾ ಸಂತಸವಾಗಿದೆ. ಪುಸ್ತಕಗಳು ಒಳ್ಳೆಯ ಆತ್ಮೀಯ ಸ್ನೇಹಿತರಿದ್ದಂತೆ ಎಂದು ನುಡಿದರು.

ಕಾರ್ಯಕ್ರಮದಲ್ಲಿ ಕಸಾಪ ವತಿಯಿಂದ ಲೇಖಕ ಪ್ರಶಾಂತ್ ರಾಮಸ್ವಾಮಿ ರವರನ್ನು ಸನ್ಮಾನಿಸಲಾಯಿತು.

ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಅಮೃತಕುಮಾರ್ ಮಾತಾಡಿದರು. ಕಪಿಲಮ್ಮ ಪಿಯು ಕಾಲೇಜಿನ ಪ್ರಾಂಶುಪಾಲ ಮುನಿಯಪ್ಪ, ಉಪನ್ಯಾಸಕ ಸುದರ್ಶನ್, ಸಾಹಿತಿ ಚಂದ್ರಶೇಖರ ಹಡಪದ್, ಕಸಾಪ ಮಾಜಿ ಜಿಲ್ಲಾಧ್ಯಕ್ಷ ಎಸ್.ವಿ.ನಾಗರಾಜರಾವ್, ಕರ್ನಾಟಕ ಜಾನಪದ ಪರಿಷತ್ ಅಧ್ಯಕ್ಷ ಎ.ಎಂ.ತ್ಯಾಗರಾಜ್, ಭಾರತೀಯ ಸೇನೆಯ ಯೋಧ ರವಿಕುಮಾರ್, ಕಸಾಪ ಪದಾಧಿಕಾರಿ ಮುನಿರಾಜು, ಲೇಖಕರ ಕುಟುಂಬದವರು, ಕಾಲೇಜಿನ ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version