News

ಹಣ್ಣಿನ ಗಿಡಗಳನ್ನು ನೆಡುವ ಕಾರ್ಯಕ್ರಮ

Appegowdanahalli Government School Tree Planting

ಶಿಡ್ಲಘಟ್ಟ ತಾಲ್ಲೂಕಿನ ಅಪ್ಪೇಗೌಡನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಬೆಂಗಳೂರಿನ ಹ್ಯಾಪಿ ವರ್ಲ್ಡ್ ಫೌಂಡೇಶನ್ ವತಿಯಿಂದ 58 ಹಣ್ಣಿನ ಗಿಡಗಳನ್ನು ನೆಡುವ ಕಾರ್ಯಕ್ರಮದಲ್ಲಿ ಹ್ಯಾಪಿ ವರ್ಲ್ಡ್ ಫೌಂಡೇಶನ್ ನ ಎಸ್.ಎಸ್.ಪಿ ಪ್ರಾಜೆಕ್ಟ್ ಮುಖ್ಯಸ್ಥ ಮಂಜುನಾಥ್ ಮಾತನಾಡಿದರು.

ಗಿಡ, ಮರ, ಪಶು, ಪಕ್ಷಿ, ಕ್ರಿಮಿ, ಕೀಟ ಎಲ್ಲವುಗಳೊಡನೆ ಮನುಷ್ಯನೂ ಒಂದು ಭಾಗ. ಇವುಗಳಲ್ಲಿ ಯಾವುದಕ್ಕೆ ತೊಂದರೆಯಾದರೂ ಮಾನವ ಕುಲಕ್ಕೇ ಅಪಾಯ ಎಂಬುದನ್ನು ತಿಳಿಯಬೇಕು ಎಂದು ಅವರು ತಿಳಿಸಿದರು.

 ನಾಗರಿಕತೆಯ ಹೆಸರಿನಲ್ಲಿ ಮನುಷ್ಯ ಸ್ವಾರ್ಥಕ್ಕಾಗಿ ಪ್ರಕೃತಿಯನ್ನು ದುರ್ಬಳಕೆ ಮಾಡಿಕೊಳ್ಳುವುದನ್ನು ನಿಲ್ಲಿಸಬೇಕು. ಪರಿಸರದಲ್ಲಿನ ಸೂಕ್ಷ್ಮ ಹಾಗೂ ಸಕಲ ಜೀವಿಗಳಿಗೂ ಅವಕಾಶ ಮಾಡಿಕೊಡಬೇಕು. ಇರುವುದೊಂದು ಭೂಮಿಯನ್ನು ಸಂರಕ್ಷಿಸಬೇಕು. ಮನುಷ್ಯನಿಗಿಂತ ಅತಿ ಕ್ರೂರ ಪ್ರಾಣಿ ಮತ್ತೊಂದಿಲ್ಲ. ತನ್ನ ಸ್ವಾರ್ಥಕ್ಕೆ ಪ್ರಕೃತಿಯನ್ನು ನಾಶ ಮಾಡುತ್ತಿದ್ದಾನೆ. ಆಧುನಿಕತೆಯ ಹೆಸರಿನಲ್ಲಿ ಮರಗಳನ್ನು ಕಡಿಯುತ್ತಿದ್ದಾನೆ. ಇದರಿಂದ ವಾತಾವರಣ ಏರುಪೇರಾಗುತ್ತಿದೆ. ಕಾಡನ್ನು ನಾಡು ಮಾಡಲು ಹೊರಟರೆ ಬಿಸಿಲ ಹಾಗೂ ಜಾಗತಿಕ ತಾಪಮಾನ ಹೆಚ್ಚುತ್ತದೆ. ಒಜೋನ್‌ ಪದರ ನಾಶವಾಗುತ್ತದೆ. ಹಸಿರು ಪರಿಸರ ಉಳಿಸಿಕೊಳ್ಳಲು ಕಷ್ಟವಾಗುತ್ತದೆ ಎಂದರು.

 ಮಕ್ಕಳಿಗೆ ತಮ್ಮ ಗುರಿ ಸಾಧಿಸುವ ಬಗ್ಗೆ, ಪೌಷ್ಟಿಕ ಆಹಾರದ ಬಗ್ಗೆ ಮತ್ತು ಗಿಡಗಳನ್ನು ಯಾಕೆ ಬೆಳಸಬೇಕು ಮತ್ತು ಹೇಗೆ ಬೆಳಸಬೇಕು ಅನ್ನುವುದನ್ನು ತಿಳಿಸಿಕೊಟ್ಟು 5,6,7 ನೇ ತರಗತಿ ಮಕ್ಕಳಿಗೆ ಎರಡೆರಡು ಹಣ್ಣಿನ ಗಿಡಗಳನ್ನು ವಿತರಿಸಿ, ಶಾಲಾ ಆವರಣದಲ್ಲಿ ಗಿಡ ನೆಡಲಾಯಿತು.

ಮುಖ್ಯ ಶಿಕ್ಷಕಿ ವೆಂಕಟರತ್ನಮ್ಮ, ಶಿಕ್ಷಕರಾದ ಚಾಂದ್ ಪಾಷ, ಸುಜಾತ, ಭಾರತಿ, ಕರ್ನಾಟಕ ಜಾನಪದ ಪರಿಷತ್ ಅಧ್ಯಕ್ಷ ಎ.ಎಂ.ತ್ಯಾಗರಾಜ್, ಮುನೀಂದ್ರಾ ಹಾಜರಿದ್ದರು.

Be a reporter

ಊರಿನ ಸುದ್ದಿ, ಫೋಟೋ ಕಳುಹಿಸಿ.

Report an error in this story

ಇದನ್ನೂ ಓದಿ

Sidlaghatta Appegowdanahalli Save heritage Programme

Culture

ಐತಿಹಾಸಿಕ ಪರಂಪರೆ ಉಳಿಸಿ ಕಾರ್ಯಕ್ರಮ

Appegowdanahalli, Sidlaghatta : ಕರ್ನಾಟಕ ಇತಿಹಾಸ ಅಕಾಡೆಮಿಯು ಕರ್ನಾಟಕದ ಐತಿಹಾಸಿಕ ಪರಂಪರೆಯನ್ನು ಉಳಿಸಲು, ಸಂರಕ್ಷಿಸಲು ಮತ್ತು ಜನರಲ್ಲಿ ಜಾಗೃತಿ ಮೂಡಿಸಲು ಶ್ರಮಿಸುತ್ತಿದೆ. ವಿವಿಧ ಕಾರ್ಯಕ್ರಮಗಳಾದ…

Share
Sidlaghatta Farmer White Mustard Farming

News

ಶಿಡ್ಲಘಟ್ಟ ರೈತರಿಂದ ಬಿಳಿ ಸಾಸಿವೆ ಬೆಳೆ ಯಶಸ್ವಿ – ಅಪರೂಪದ ಕೃಷಿಗೆ ಪ್ರಶಂಸೆ

https://youtu.be/h3DpOhX5O4Y Appegowdanahalli, Sidlaghatta, chikkaballapur : ಪಂಜಾಬ್, ಹರಿಯಾಣಾ, ಉತ್ತರ ಪ್ರದೇಶ ಮತ್ತು ರಾಜಸ್ಥಾನದಲ್ಲಿ ಸಾಮಾನ್ಯವಾಗಿ ಬೆಳೆಯುವ ಬಿಳಿ ಸಾಸಿವೆ (White Mustard) ಈಗ…

Share
Sidlaghatta Super food Colour Maize Growing Farmer

News

ಶಿಡ್ಲಘಟ್ಟದ ರೈತನ ಹೊಲದಲ್ಲಿ ಅಮೆರಿಕದ ‘ಸೂಪರ್ ಫುಡ್’ ಬಣ್ಣದ ಜೋಳ

Appegowdanahalli, Sidlaghatta : ತಾಲ್ಲೂಕಿನ ಅಪ್ಪೇಗೌಡನಹಳ್ಳಿಯ ರೈತ ಎ.ಎಂ. ತ್ಯಾಗರಾಜ್ ತಮ್ಮ ಹೊಲದಲ್ಲಿ ಕೆಂಪು, ನೀಲಿ, ನೇರಳೆ ಮತ್ತು ಕಪ್ಪು ಬಣ್ಣದ ಮೆಕ್ಕೆಜೋಳವನ್ನು ಯಶಸ್ವಿಯಾಗಿ…

Share

Be a reporter

ಊರಿನ ಸುದ್ದಿ, ಫೋಟೋ ಕಳುಹಿಸಿ.

Sidlaghatta Appegowdanahalli Sports Championship Inauguration

News

2025-26 ನೇ ಸಾಲಿನ ಅಂತರ್ ಸದನ ಕ್ರೀಡಾಕೂಟಗಳಿಗೆ ಚಾಲನೆ

Appegowdanahalli, sidlaghatta : ಶಿಡ್ಲಘಟ್ಟ ತಾಲ್ಲೂಕಿನ ಅಪ್ಪೇಗೌಡನಹಳ್ಳಿಯ ಇಂದಿರಾಗಾಂಧಿ ವಸತಿ ಶಾಲೆಯ ಆವರಣದಲ್ಲಿ 2025-26 ನೇ ಸಾಲಿನ ಅಂತರ್ ಸದನ ಕ್ರೀಡಾಕೂಟಗಳನ್ನು ಆಯೋಜನೆ ಮಾಡಲಾಗಿತ್ತು.…

Share