Home News ರಾಜಕಾಲುವೆ ಒತ್ತುವರಿ ತೆರವುಗೊಳಿಸಲು ಮನವಿ

ರಾಜಕಾಲುವೆ ಒತ್ತುವರಿ ತೆರವುಗೊಳಿಸಲು ಮನವಿ

0
Sidlaghatta Appegowdanahalli Drainage Rajakaluve Encroachment

ಶಿಡ್ಲಘಟ್ಟ ತಾಲ್ಲೂಕಿನ ಅಪ್ಪೇಗೌಡನಹಳ್ಳಿ ಗ್ರಾಮಸ್ಥರು ರಾಜಕಾಲುವೆ ಒತ್ತುವರಿ ತೆರವುಗೊಳಿಸಬೇಕೆಂದು ಕೋರಿ ಶಿರಸ್ತೆದಾರ್ ಮಂಜುನಾಥ್ ಅವರಿಗೆ ಮನವಿ ಸಲ್ಲಿಸಿದರು.

 ಈ ಸಂದರ್ಭದಲ್ಲಿ ಮಾತನಾಡಿದ ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಕೆ.ಲಕ್ಷ್ಮೀನಾರಾಯಣರೆಡ್ಡಿ, “ಚಿಕ್ಕಬಳ್ಳಾಪುರ ತಾಲ್ಲೂಕು ನಂದಿ ಹೋಬಳಿ ಕಡಿಶೀಗೇನಹಳ್ಳಿ ಗಡಿಯಿಂದ ಶಿಡ್ಲಘಟ್ಟ ತಾಲ್ಲೂಕು, ಕಸಬಾ ಹೋಬಳಿ, ಕಂಬದಹಳ್ಳಿ ಗ್ರಾಮದ ಗಡಿಯವರೆಗೆ ಇರುವ ರಾಜಕಾಲುವೆಯನ್ನು ಆಜು ಬಾಜುದಾರರು ಒತ್ತುವರಿ ಮಾಡಿದ್ದಾರೆ. ಇದರಿಂದಾಗಿ ಮೇಲಿನಿಂದ ಹರಿದು ಬಂದ ನೀರು ಮುಂದಕ್ಕೆ ಹೋಗಲಾಗದೆ ತೋಟ, ಹೊಲಗಳಿಗೆ ನೀರು ನುಗ್ಗಿ, ಸುಮಾರು ನೂರಾರು ಎಕರೆ ಜಮೀನಿನಲ್ಲಿ ಬೆಳೆದಿರುವ ಬೆಳೆಗಳಾದ ರಾಗಿ, ಹಿಪ್ಪುನೇರಳೆ, ಹೂವು, ದ್ರಾಕ್ಷಿ ತರಕಾರಿ ಬೆಳೆಗಳು ಮಾವು, ಗೋಡಂಬಿ ಮುಂತಾದ ಬೆಳೆಗಳು ಹಾಳಾಗಿವೆ. ಆದ್ದರಿಂದ ಅಧಿಕಾರಿಗಳು ದಯಮಾಡಿ ಈ ಕೂಡಲೇ ಸ್ಥಳ ಪರಿಶೀಲನೆ ಮಾಡಿ ಒತ್ತುವರಿ ಆಗಿರುವ ರಾಜಕಾಲುವೆಯನ್ನು ತೆರವುಗೊಳಿಸಬೇಕು” ಎಂದು ಮನವಿ ಮಾಡಿದರು.

 ಹಂಡಿಗನಾಳ ಗ್ರಾಮ ಪಂಚಾಯಿತಿ ಅಧ್ಯಕ್ಷ ಮುನಿರೆಡ್ಡಿ, ಸದಸ್ಯ ದ್ಯಾವಪ್ಪ, ಮುನೀಂದ್ರ, ಆಂಜಿ, ನಾರಾಯಣಸ್ವಾಮಿ, ಪ್ರತೀಪ್, ಸಂಪತ್ ಕುಮಾರ್, ಮುನಿವೆಂಕಟಸ್ವಾಮಿ, ಮುನಿಕೃಷ್ಣಪ್ಪ ಹಾಜರಿದ್ದರು.

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version