Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಬಶೆಟ್ಟಿಹಳ್ಳಿ ಸರ್ಕಾರಿ ಪ್ರೌಢಶಾಲೆಯ 1999–2000ನೇ ಸಾಲಿನ ಎಸ್.ಎಸ್.ಎಲ್.ಸಿ ಹಿರಿಯ ವಿದ್ಯಾರ್ಥಿಗಳಿಂದ ನಲ್ಲರಾಳ್ಳಹಳ್ಳಿಯ ಶ್ರೀರಾಮಲಿಂಗೇಶ್ವರ ಸಮುದಾಯ ಭವನದಲ್ಲಿ ಗುರುವಂದನೆ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮ ನಡೆಯಿತು.
In English: Former SSLC students of the 1999-2000 batch of Bashettihalli Government High School organised a teacher-felicitation and reunion event at the Sriramalingeshwara community hall in Nallaralla Halli, honouring their former teachers and reconnecting after many years.
ಕಾರ್ಯಕ್ರಮಕ್ಕೆ ಆಗಮಿಸಿದ್ದ ತಮ್ಮ ಹಿಂದಿನ ಶಿಕ್ಷಕರನ್ನು ವಿದ್ಯಾರ್ಥಿಗಳು ಆರತಿ ಬೆಳಗಿ, ಗುಲಾಬಿ ಹೂ ನೀಡಿ ಆತ್ಮೀಯವಾಗಿ ಬರಮಾಡಿಕೊಂಡು ಸನ್ಮಾನಿಸಿದರು.
ಅನೇಕ ವರ್ಷಗಳ ಬಳಿಕ ಒಂದೆಡೆ ಸೇರಿದ ಹಳೆಯ ಸಹಪಾಠಿಗಳು ಪರಸ್ಪರ ಅಪ್ಪಿಕೊಂಡು, ಶಾಲಾ ದಿನಗಳ ನೆನಪುಗಳನ್ನು ಮೆಲುಕು ಹಾಕಿ ಸಂಭ್ರಮಿಸಿದರು. ಪುರುಷರು ಒಂದೇ ಬಣ್ಣದ ಪಂಚೆ–ಶರ್ಟ್ ಹಾಗೂ ಮಹಿಳೆಯರು ಸೀರೆ–ಕುಪ್ಪಸ ಧರಿಸಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು.
“ಇಂದು ಸಮಾಜದಲ್ಲಿ ನಾವು ಯಾವ ಸ್ಥಾನಮಾನ ಗಳಿಸಿದ್ದೇವೆಯೋ ಅದಕ್ಕೆ ಹೆತ್ತವರು ಮತ್ತು ಸಮಾಜದೊಂದಿಗೆ ನಮಗೆ ವಿದ್ಯೆ ಕಲಿಸಿದ ಶಿಕ್ಷಕರ ಮಾರ್ಗದರ್ಶನವೂ ಪ್ರಮುಖ ಕಾರಣವಾಗಿದೆ” ಎಂದು ಹಿರಿಯ ವಿದ್ಯಾರ್ಥಿಗಳು ತಮ್ಮ ಗುರುಗಳನ್ನು ಸ್ಮರಿಸಿದರು.
ಶಿಕ್ಷಕರಾದ ನಸೀಮಾ ಬಾನು, ಪುಟ್ಟನಾಯಕ, ನರಸಿಂಹಮೂರ್ತಿ, ಮಲ್ಲಿಕಾರ್ಜುನ, ಶಿವಮೂರ್ತಿ ಸೇರಿದಂತೆ ಹಲವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಹಿರಿಯ ವಿದ್ಯಾರ್ಥಿಗಳಾದ ಆನಂದ್, ಗಂಗರಾಜು, ಗಂಗಾಧರ, ಸುಗುಣ, ಸುನೀತಾ, ವನಿತಾ, ನಾಗೇಶ್, ವೆಂಕಟೇಶ, ಶಂಕರಾಚಾರಿ, ಆಸೀಪ್ ಪಾಷಾ, ವಿಜಯಲಕ್ಷ್ಮಿ, ಶಾಂತ, ಬೈರೇಶ್ ಸೇರಿದಂತೆ 1999–2000ನೇ ಸಾಲಿನ ಹಲವು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

