21.1 C
Sidlaghatta
Sunday, December 1, 2024

ಶ್ರೀ ಪೂಜಮ್ಮದೇವಿ ಹೂವಿನ ಕರಗ ಮಹೋತ್ಸವ

Celebrating the Karagamahotsava of the revered goddess Pujamma

- Advertisement -
- Advertisement -

Sidlaghatta : ಅನಾದಿ ಕಾಲದಿಂದಲೂ ನೆರವೇರಿಸಿಕೊಂಡು ಬಂದಂತಹ ನಗರದ ಪೂಜಮ್ಮ ದೇವಿಯ ಕರಗಮಹೋತ್ಸವವನ್ನು ಸೋಮವಾರ ರಾತ್ರಿ ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು. ಸಂಪ್ರದಾಯ ಆಚಾರಗಳಂತೆ ದೇವಾಲಯದಲ್ಲಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿ ಮಹಾಮಂಗಳಾರತಿ ಮಾಡಿ ನಂತರ ಹೂವಿನ ಕರಗವನ್ನು ಹೊರಲಾಯಿತು.

ನಗರದ ಶ್ರೀ ಪೂಜಮ್ಮ ದೇವಿಯ ಕರಗವನ್ನು ಮುಳಬಾಗಿಲಿನ ವಿಜಯ್‌ಕುಮಾರ್ ರವರು ಹೊತ್ತಿದ್ದರು. ಶಿರದ ಮೇಲೆ ಕಳಶ ಹೊತ್ತು ಕುಣಿಯುವ ಕಲೆಯಾಗಿದ ಕರಗದಾಚರಣೆ ಎಂದರೆ ಆದಿಶಕ್ತಿಯ ಆಚರಣೆ ಎಂದು ನಂಬಲಾಗಿದೆ. ದೇವಸ್ಥಾನಕ್ಕೆ ಮೂರು ಸುತ್ತು ಪ್ರದರ್ಶನ ಮಾಡಿ ನಂತರ ಮಾರಮ್ಮ ವೃತ್ತದಲ್ಲಿ ಮತ್ತು ಕೋಟೆ ವೃತ್ತದಲ್ಲಿ ಆಯೋಜನೆ ಮಾಡಲಾಗಿದ್ದ ವಾದ್ಯಗೋಷ್ಠಿಯ ವೇದಿಕೆಯಲ್ಲಿ ಕರಗ ಹೊತ್ತ ವಿಜಯ್‌ಕುಮಾರ್ ತಮಟೆಯ ಶಬ್ದಕ್ಕೆ ಹೆಜ್ಜೆ ಹಾಕಿ ಕುಣಿದಾಡಿದರು. ಅಲ್ಲಿದ್ದ ಸಾರ್ವಜನಿಕರು ಕರಗವನ್ನು ನೋಡಿ ಮನಸೋತಿದ್ದಲ್ಲದೇ ವಾದ್ಯಗೋಷ್ಠಿಯ ತಂಡದವರ ಸಂಗೀತಕ್ಕೆ ತಕ್ಕಂತೆ ಕುಣಿದರು.

ದೇವಿಯ ಕರಗ ವೀಕ್ಷಿಸಲು ಬರೀ ನಗರವಲ್ಲದೇ ತಾಲ್ಲೂಕಿನಾದ್ಯಂತ ಜನರು ಆಗಮಿಸಿದ್ದರು. ವಾದ್ಯಗೋಷ್ಠಿಯಲ್ಲಿ ಹಿಂದಿ, ಕನ್ನಡ, ತೆಲುಗು, ತಮಿಳು ಹಾಡುಗಳನ್ನು ವಾದ್ಯಗೋಷ್ಠಿ ತಂಡದವರು ಹಾಡಿ ನೃತ್ಯಗಳನ್ನು ಮಾಡಿದ್ದನ್ನು ನೋಡಿ ಕಣ್ತುಂಬಿಸಿಕೊಂಡರು


Celebrating the Karagamahotsava of the revered goddess Pujamma

Sidlaghatta : Sidlaghatta’s age-old tradition of celebrating the Karagamahotsava of the revered goddess Pujamma was observed with great fervor and devotion on Monday night. The festivities kicked off with the performance of the traditional Mahamangalarati ritual, followed by a special pooja offered to the goddess at the temple. The flower karaga was then carried out in accordance with the customary rituals.

The responsibility of carrying the Karaga of Sri Poojamma Devi was taken up by Vijayakumar of Mulabagilu town. The art of Karagadantanya, which involves dancing with a pot on the head, is believed to be a celebration of Adisakti. Vijaykumar performed three laps around the temple before stepping onto the stage of a musical concert held at Maramma Circle and Kote Circle, where he danced to the beats of the tamate. The audience was captivated not only by his performance but also joined in the celebration by dancing to the music of the orchestra.

People from all across the taluk, not just the Sidlaghatta Town, had gathered to witness the melting of the goddess. The musical concert featured a wide range of Hindi, Kannada, Telugu, and Tamil songs, which were sung and danced to by the ensemble. The public was enthralled by the vibrant cultural display.

The Karagamahotsava is a time-honored tradition that holds great significance in the hearts of the people. Its celebration with such devotion and enthusiasm is a testament to the deep-rooted cultural heritage of the region.

Subscribe to ನಮ್ಮ ಶಿಡ್ಲಘಟ್ಟ Newspaper

Launching Soon! Register for your Free Newspaper Copy Today.

- Advertisement -

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.
Captcha verification failed!
CAPTCHA user score failed. Please contact us!
error: Content is protected !!