ರಾಜ್ಯೋತ್ಸವಕ್ಕೆ ಹೂವಿನಿಂದ ಸಿಂಗಾರಗೊಂಡು ಕನ್ನಡ ಗೀತೆ ಹಾಡಿದ ಸರ್ಕಾರಿ ಬಸ್: ಚಾಲಕ, ನಿರ್ವಾಹಕರಿಗೆ ಸನ್ಮಾನ

Sidlaghatta : ಕನ್ನಡ ರಾಜ್ಯೋತ್ಸವದ ಸಂಭ್ರಮ ನಾಡಿನಾದ್ಯಂತ ಮನೆಮಾಡಿರುವ ಈ ಸಂದರ್ಭದಲ್ಲಿ, ಶಿಡ್ಲಘಟ್ಟ–ಬೆಂಗಳೂರು ಮಾರ್ಗದಲ್ಲಿ ಸಂಚರಿಸುವ ಸರ್ಕಾರಿ ಬಸ್ ಅನ್ನು ಹೂವುಗಳಿಂದ ಅಲಂಕರಿಸಿ, ಮೈಕ್ ಅಳವಡಿಸಿ ಕನ್ನಡ ಗೀತೆಗಳನ್ನು ಪ್ರಸಾರ ಮಾಡುವ ಮೂಲಕ ರಾಜ್ಯೋತ್ಸವ ಆಚರಿಸಿದ್ದು ಪ್ರಯಾಣಿಕರ ಮತ್ತು ಸಾರ್ವಜನಿಕರ ಗಮನ ಸೆಳೆಯಿತು.
ತಾಲ್ಲೂಕಿನ ಮೇಲೂರಿನ ಚೆಂಗಲರಾಯರೆಡ್ಡಿ ವೃತ್ತದಲ್ಲಿ ಬಸ್‌ನ ಚಾಲಕ ಕೋದಂಡ ಮತ್ತು ನಿರ್ವಾಹಕ ರಾಮಾಚಾರಿ ಅವರನ್ನು ಕನ್ನಡಾಭಿಮಾನಿಗಳು ಸೋಮವಾರ ಗೌರವಿಸಿದರು. ಶಾಲು ಹೊದಿಸಿ, ಸಿಹಿ ತಿನ್ನಿಸಿ ಸನ್ಮಾನಿಸಲಾಯಿತು.
ಕನ್ನಡದ ಮೇಲಿನ ಅಭಿಮಾನ ಇಂದಿಗೂ ಜನರಲ್ಲಿ ಜೀವಂತವಾಗಿದೆ ಎನ್ನಲು ಬಸ್‌ನಲ್ಲಿ ರಾಜ್ಯೋತ್ಸವ ಆಚರಿಸಿರುವುದೇ ಸಾಕ್ಷಿ ಎಂದು ಮೇಲೂರಿನ ಪಾರ್ಥಸಾರಥಿ ಮೆಚ್ಚುಗೆ ವ್ಯಕ್ತಪಡಿಸಿದರು. ವೃತ್ತದಲ್ಲಿ ಸೇರಿದ್ದ ಕನ್ನಡಾಭಿಮಾನಿಗಳು ಮತ್ತು ಹೂವು ಮಾರಾಟ ಮಾಡುವ ಮಹಿಳೆಯರು ಚಾಲಕ, ನಿರ್ವಾಹಕರಿಗೆ ಶುಭ ಹಾರೈಸಿದರು. ಈ ತಿಂಗಳ ಮೊದಲ ದಿನ ನಡೆದ ತಾಲ್ಲೂಕಿನ ರಾಜ್ಯೋತ್ಸವ ಆಚರಣೆ ಯ ವರದಿಯನ್ನೂ ಓದಬಹುದು.
ಮೇಲೂರು ಪಾರ್ಥಸಾರಥಿ, ಶ್ರೀನಿವಾಸ್, ಮುನಿಶಾಮಯ್ಯ, ಎಂ.ಎನ್. ಧರ್ಮೇಂದ್ರ ಕುಮಾರ್, ಕಂಬದಹಳ್ಳಿ ಶ್ರೀನಿವಾಸ್, ಹನುಮಂತು ಹಾಜರಿದ್ದರು.

For Daily Updates WhatsApp ‘HI’ to 7406303366
Summary in English
A KSRTC bus plying on the Sidlaghatta-Bengaluru route was decorated with flowers and played Kannada songs to mark Kannada Rajyotsava. At Chengalarayareddy Circle in Melur, Kannada lovers honoured driver Kodanda and conductor Ramachari with shawls and sweets on Monday, and Parthasarathi of Melur praised the gesture as proof that love for Kannada is alive.
Be a reporter
ಊರಿನ ಸುದ್ದಿ, ಫೋಟೋ ಕಳುಹಿಸಿ.
Send news



