Sidlaghatta, chikkaballapur : ಪಶು ವೈದ್ಯಕೀಯ, ತೋಟಗಾರಿಕೆ ಪದವಿ, ಕೃಷಿ ಪದವಿ ಸೇರಿದಂತೆ ವಿವಿಧ ಪದವಿ ತರಗತಿಗಳಿಗೆ ಸೇರಬಯಸುವ ರೈತರ ಮಕ್ಕಳಿಗೆ ವಿಕಸಿತ್47 ಅಕಾಡೆಮಿಯು ತಾಲ್ಲೂಕಿನ ಕಾಚಹಳ್ಳಿ ಗೇಟ್ ನ ಸ್ವಾಮಿ ವಿವೇಕಾನಂದ ಕಾಲೇಜಿನಲ್ಲಿ ಮಾ.27ರ ಶುಕ್ರವಾರ ಒಂದು ದಿನದ ಉಚಿತ ತರಬೇತಿ ಕಾರ್ಯಾಗಾರವನ್ನು ಹಮ್ಮಿಕೊಂಡಿದೆ.
ಕೃಷಿಗೆ ಸಂಬಂಧಿಸಿದಂತೆ ವಿವಿಧ ಪದವಿಗಳಿಗೆ ರೈತರ ಮಕ್ಕಳಿಗೆ ಶೇ 50ರಷ್ಟು ಮೀಸಲು ಇದ್ದು ಪ್ರವೇಶ ಪಡೆಯಲು ಕೆಸಿಇಟಿ ಜತೆಗೆ ಆಯಾ ವಿಶ್ವ ವಿದ್ಯಾಲಯಗಳು ನಡೆಸುವ ಕೃಷಿ ಪ್ರಾಯೋಗಿಕ ಪರೀಕ್ಷೆಯನ್ನು ಎದುರಿಸಬೇಕಾಗುತ್ತದೆ. ಈ ನಿಟ್ಟಿನಲ್ಲಿ ಈ ತರಬೇತಿ ಕಾರ್ಯಾಗಾರವು ಅನುಕೂಲ ಆಗಲಿದೆ.
ಹಾಗಾಗಿ ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳು ಈ ಉಚಿತ ಕಾರ್ಯಾಗಾರದಲ್ಲಿ ಭಾಗವಹಿಸಿ ಅನುಕೂಲ ಪಡೆದುಕೊಳ್ಳಬೇಕೆಂದು ವಿಕಸಿತ್47 ಅಕಾಡೆಮಿ ಮುಖ್ಯಸ್ಥ ಎಚ್.ಎನ್.ತೇಜಸ್ ಮನವಿ ಮಾಡಿದ್ದಾರೆ.
ಹೆಚ್ಚಿನ ವಿವರಗಳಿಗೆ ಮತ್ತು ನೋಂದಾಯಿಸಿಕೊಳ್ಳಲು ತ್ಯಾಗರಾಜ್, ಮೊ.ಸಂಖ್ಯೆ 8217413646, 7019336530 ಸಂಪರ್ಕಿಸಲು ಕೋರಿದ್ದಾರೆ.








