ಸಮಾಜ ಸೇವೆಗಾಗಿ ಚಿರಂಜೀವಿ ಚಾರಿಟಬಲ್ ಟ್ರಸ್ಟ್‌ನಿಂದ ಅಭಿಮಾನಿ ಸಂಘದ ಅಧ್ಯಕ್ಷರಿಗೆ ಸನ್ಮಾನ

- Advertisement -
- Advertisement -

Sidlaghatta : ಮೆಗಾಸ್ಟಾರ್ ಚಿರಂಜೀವಿ ಅವರ ಹುಟ್ಟುಹಬ್ಬದ ಅಂಗವಾಗಿ ಪ್ರತಿವರ್ಷ ರಕ್ತದಾನ ಶಿಬಿರ, ಆರೋಗ್ಯ ತಪಾಸಣಾ ಶಿಬಿರ, ಶಾಲೆಗಳಿಗೆ ಮೂಲಸೌಲಭ್ಯ ಕಲ್ಪಿಸುವುದು ಸೇರಿದಂತೆ ವಿವಿಧ ಸಮಾಜಮುಖಿ ಸೇವಾ ಕಾರ್ಯಗಳನ್ನು ನಡೆಸಿಕೊಂಡು ಬರುತ್ತಿರುವ ಚಿರಂಜೀವಿ ಅಭಿಮಾನಿ ಸಂಘದ ತಾಲ್ಲೂಕು ಅಧ್ಯಕ್ಷ ಕೆ. ನಾರಾಯಣಸ್ವಾಮಿ ಅವರನ್ನು ಚಿರಂಜೀವಿ ಚಾರಿಟಬಲ್ ಟ್ರಸ್ಟ್ ವತಿಯಿಂದ ಗೌರವಿಸಲಾಯಿತು.

ಹೈದರಾಬಾದ್‌ನ ಐಟಿಸಿ ಕೊಹಿನೂರ್ ಸೆವೆನ್ ಸ್ಟಾರ್ ಹೋಟೆಲ್‌ನಲ್ಲಿ ಇತ್ತೀಚೆಗೆ ನಡೆದ ಸಮಾರಂಭದಲ್ಲಿ ಮೆಗಾಸ್ಟಾರ್ ಚಿರಂಜೀವಿ ಅವರಿಂದ ಕೆ. ನಾರಾಯಣಸ್ವಾಮಿ ಅವರು ಪ್ರಶಂಸಾ ಪತ್ರ ಸ್ವೀಕರಿಸಿದರು.

ಚಿರಂಜೀವಿ ಚಾರಿಟಬಲ್ ಟ್ರಸ್ಟ್ ನೀಡಿರುವ “ಸಮಾಜ ಸೇವೆಯ ಗುರುತಿಸುವಿಕೆ”ಯ ಪ್ರಶಂಸಾ ಪತ್ರದಲ್ಲಿ, ಸಮಾಜಕ್ಕೆ ಸಲ್ಲಿಸಿರುವ ಸಮರ್ಪಿತ ಸೇವೆ ಹಾಗೂ ಅರ್ಥಪೂರ್ಣ ಕೊಡುಗೆಯನ್ನು ಗುರುತಿಸಿ ನಾರಾಯಣಸ್ವಾಮಿ ಅವರನ್ನು ಅಭಿನಂದಿಸಲಾಗಿದೆ. ಸಮಾಜದ ಕಲ್ಯಾಣದತ್ತ ಅವರ ಕರುಣೆ, ಬದ್ಧತೆ ಹಾಗೂ ಸೇವಾ ಪ್ರಯತ್ನಗಳನ್ನು ಪ್ರಶಂಸಿಸಿರುವ ಟ್ರಸ್ಟ್, ಸೇವಾ ಮನೋಭಾವ ಮತ್ತು ಸಮಾಜಕ್ಕೆ ಮರಳಿ ನೀಡುವ ಆಶಯವನ್ನು ಮುಂದುವರಿಸುವಂತೆ ಹಾರೈಸಿದೆ.

ಚಿರಂಜೀವಿ ಅವರ ಚಾರಿಟಿ, ರಕ್ತದಾನ, ನೇತ್ರದಾನ ಸೇರಿದಂತೆ ವಿವಿಧ ಸಮಾಜಮುಖಿ ಕಾರ್ಯಗಳಿಂದ ಪ್ರೇರಣೆ ಪಡೆದು ನಾರಾಯಣಸ್ವಾಮಿ ಅವರು ಅಭಿಮಾನಿ ಸಂಘದ ಮೂಲಕ ಹಲವು ವರ್ಷಗಳಿಂದ ಸೇವಾ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ. ಮೆಗಾಸ್ಟಾರ್ ಹುಟ್ಟುಹಬ್ಬದ ಸಂದರ್ಭದಲ್ಲಿ ರಕ್ತದಾನ ಮತ್ತು ಆರೋಗ್ಯ ಶಿಬಿರಗಳನ್ನು ಆಯೋಜಿಸುವುದರ ಜತೆಗೆ, ಶಾಲೆಗಳಿಗೆ ಅಗತ್ಯ ಮೂಲಸೌಲಭ್ಯ ಒದಗಿಸುವ ಕಾರ್ಯಗಳನ್ನೂ ಕೈಗೊಂಡಿದ್ದಾರೆ.

“ನಾವು ಕೈಗೊಂಡಿರುವ ಸಣ್ಣಪುಟ್ಟ ಸೇವಾ ಕಾರ್ಯಗಳನ್ನು ಗುರುತಿಸಿ, ಮೆಗಾಸ್ಟಾರ್ ಚಿರಂಜೀವಿ ಅವರ ಸಮ್ಮುಖದಲ್ಲಿ ಗೌರವಿಸಿರುವುದು ಜೀವನದ ಹೆಮ್ಮೆಯ ಕ್ಷಣ. ಇದು ನನಗೆ ದೊರೆತ ಪ್ರಶಸ್ತಿ ಮಾತ್ರವಲ್ಲ; ನಮ್ಮ ಸಂಘದ ಎಲ್ಲ ಸದಸ್ಯರ ಸೇವಾ ಕಾರ್ಯಗಳಿಗೆ ದೊರೆತ ಆಶೀರ್ವಾದ. ಮುಂದಿನ ದಿನಗಳಲ್ಲಿ ಇನ್ನಷ್ಟು ಸಮಾಜಮುಖಿ ಕಾರ್ಯಗಳನ್ನು ಕೈಗೊಳ್ಳಲು ಈ ಗೌರವ ಪ್ರೇರಣೆಯಾಗಿದೆ,” ಎಂದು ನಾರಾಯಣಸ್ವಾಮಿ ಹರ್ಷ ವ್ಯಕ್ತಪಡಿಸಿದರು.

ನಟ ಚಿರಂಜೀವಿ ಅವರು ಪ್ರಶಂಸಾ ಪತ್ರ ನೀಡುವ ಸಂದರ್ಭದಲ್ಲಿ ಚಿರಂಜೀವಿ ಚಾರಿಟಬಲ್ ಟ್ರಸ್ಟ್ ಉಪಾಧ್ಯಕ್ಷೆ ಸುಶ್ಮಿತಾ ಕೋಣಿದಲ ಹಾಜರಿದ್ದರು.

In English: K. Narayanaswamy, taluk president of the Chiranjeevi Fan Association in Sidlaghatta, was honoured by the Chiranjeevi Charitable Trust at a recent event at Hotel ITC Kohinoor, Hyderabad, receiving a citation from actor Chiranjeevi himself in recognition of years of social service — including annual blood donation and health check-up camps and providing school infrastructure — organised around the megastar’s birthday. Trust vice-president Sushmita Konidala was present at the ceremony.

ಜಿಲ್ಲೆಯಲ್ಲಿ ಇತ್ತೀಚೆಗೆ ನಡೆದಿದ್ದ ಇಂತಹುದೇ ಸೇವಾ ಕಾರ್ಯಕ್ರಮದ ಬಗ್ಗೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ರಕ್ತದಾನ ಶಿಬಿರ ಎಂಬ ವರದಿಯನ್ನೂ ಓದಿ.

Sidlaghatta WhatsApp Channel Group

For Daily Updates WhatsApp ‘HI’ to 7406303366

For Daily Updates

WhatsApp 'HI' to 7406303366

Subscribe to ನಮ್ಮ ಶಿಡ್ಲಘಟ್ಟ Newspaper

Launching Soon! Register for your Free Newspaper Copy Today.

- Advertisement -
Sidlaghatta News Desk
Sidlaghatta News Deskhttp://www.sidlaghatta.com
The editorial desk of Sidlaghatta.com (Namma Shidlaghatta), covering civic affairs, agriculture, silk trade, and local government news for Sidlaghatta taluk, Karnataka.

Just Published

Latest news

- Advertisement -

Silk

Related news

- Advertisement -